Vijayapura | ಬಳ್ಳೊಳ್ಳಿ ಗ್ರಾಮದಲ್ಲಿ ಸರಣಿ ಮನೆಗಳ್ಳತನ

ವಿಜಯಪುರ : ಚಡಚಣ ಸಮೀಪದ ಬಳ್ಳೊಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಗ್ರಾಮದ ಹಲವರು ಕಬ್ಬು ಕಟಾವು, ಇಟ್ಟಿಂಗಿ ಭಟ್ಟಿಗಳಿಗೆ ದುಡಿಯಲು ಹೋಗಿದ್ದ ವೇಳೆ ರಾತ್ರಿ ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವುದು ಗ್ರಾಮದಲ್ಲಿನ ಸಿಸಿ ಕ್ಯಾಮೆರಾವೂಂದರಲ್ಲಿ ಕಂಡುಬಂದಿದೆ.
ರಾತ್ರಿ 1.30 ರಿಂದ 2.30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಅಂದಾಜು 8 ಮನೆಗಳ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಕೈಯಲ್ಲಿ ಮಾರಾಕಾಸ್ತ್ರಗಳನ್ನು ಹಿಡಿದು ಓಡಾಡಿದ್ದು, ಮಿನಿ ವಾಹನದಲ್ಲಿ ಪಾರಾರಿಯಾಗಿದ್ದಾರೆ. ಈ ದೃಶ್ಯದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಶ್ವಾನ ದಳ ಭೇಟಿ ನೀಡಿ ಪರೀಶೀಲನೆ ನಡೆಸಿದೆ.
Next Story





