Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 1,522 ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ

1,522 ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ

►ಸರಕಾರಿ ವೈದ್ಯನ ಹಣದಾಸೆಗೆ ಮಹಿಳೆಯರು ಬಲಿ ►ಮಾಜಿ ಸಿಎಂ ಬೊಮ್ಮಾಯಿ ತವರಲ್ಲೇ ಪ್ರಕರಣ

ಇಬ್ರಾಹಿಂ ಖಲೀಲ್ ಬನ್ನೂರುಇಬ್ರಾಹಿಂ ಖಲೀಲ್ ಬನ್ನೂರು28 Sept 2023 7:00 PM IST
share
1,522 ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ

ಇಬ್ರಾಹಿಂ ಖಲೀಲ್ ಬನ್ನೂರು

ಹಾವೇರಿ, ಸೆ.28: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ತವರು ಜಿಲ್ಲೆಯಾಗಿರುವ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸರಕಾರಿ ಆಸ್ಪತ್ರೆಯ ವೈದ್ಯನೊಬ್ಬ 3 ವರ್ಷದೊಳಗೆ ಸುಮಾರು 1,522 ಮಹಿಳೆಯರ ಗರ್ಭಕೋಶವನ್ನೇ ತೆಗೆದು ಹಾಕಿರುವ ಗಂಭೀರ ಘಟನೆಯೊಂದು ನಡೆದಿದ್ದು, ಸಂತ್ರಸ್ತ ಮಹಿಳೆಯರಿಗೆ ಇದುವರೆಗೂ ಯಾವುದೇ ನ್ಯಾಯ ದೊರಕಿಲ್ಲ ಎಂಬ ಆರೋಪ ಕೇಳಿಬಂದಿದೆ.

2011ರಿಂದ 2013ರವರೆಗೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ.ಶಾಂತ ಪಿ. ಎಂಬಾತ ಹಣದ ಆಸೆಗೆ 1,522 ಮಹಿಳೆಯರ ಗರ್ಭಕೋಶವನ್ನು ತೆಗೆದುಹಾಕಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆಯರು ವೈದ್ಯನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಲವು ಬಾರಿ ಧರಣಿಗಳನ್ನು ಕೈಗೊಂಡಿದ್ದಾರೆ.

► ಸಂತ್ರಸ್ತೆಯರ ಬದುಕು ಅಸ್ತವ್ಯಸ್ಥ: ಗರ್ಭಕೋಶ ತೆಗೆಸಿಕೊಂಡ ಮಹಿಳೆಯರು ಮಂಡಿನೋವು, ಸೊಂಟ ನೋವು, ಬೆನ್ನು ನೋವು, ವಿಪರೀತ ಆಯಾಸ, ದೃಷ್ಟಿ ಹೀನತೆ ಸೇರಿದಂತೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿ ನರಳುವಂತಾಗಿದ್ದು, ಕೃಷಿ ಚಟುವಟಿಕೆಗಳು ಹಾಗೂ ಕಾರ್ಖಾನೆಗಳಲ್ಲಿ ದುಡಿಮೆ ಮಾಡಲಾಗದೇ ಹಾಸಿಗೆಯನ್ನೇ ಅವಲಂಬಿಸಿದ್ದಾರೆ. ಗರ್ಭಕೋಶ ಚಿಕಿತ್ಸೆಗೆ ಒಳಗಾದ ಅನೇಕ ಮಹಿಳೆಯರು ವಿವಿಧ ದೈಹಿಕ ಕಾಯಿಲೆಗಳಿಂದ ಬಳಲಿ, ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದಿದ್ದಾಗ ತಮ್ಮಲ್ಲಿನ ಭೂಮಿ ಮತ್ತು ಚಿನ್ನವನ್ನು ಅಡಮಾನವಿಟ್ಟು ಸಾಲದ ಸುಳಿಯಲ್ಲಿ ಸಿಲುಕಿ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ರಾಣೇಬೆನ್ನೂರು ತಾಲೂಕು ಸಂತ್ರಸ್ತ ಮಹಿಳಾ ಸಂಘದ ಕಾರ್ಯದರ್ಶಿ ಶೈಲಾ ರಾ.ರಂಗರೆಡ್ಡಿ ಅಳಲು ತೋಡಿಕೊಂಡಿದ್ದಾರೆ.

► 15ರಿಂದ 35 ಸಾವಿರ ರೂ. ಹಣ ಪೀಕುವ ವೈದ್ಯ!: ಶಸ್ತ್ರಚಿಕಿತ್ಸೆಯನ್ನು ಮಾಡಲು ಇಲ್ಲಿನ ಸರಕಾರಿ ವೈದ್ಯ 15 ಸಾವಿರ ರೂ.ದಿಂದ 35 ಸಾವಿರ ರೂ.ಗಳಷ್ಟು ಹಣವನ್ನು ಶುಲ್ಕವಾಗಿ ಪಡೆಯುತ್ತಿದ್ದ, ಅನೇಕ ಅವಿವಾಹಿತ ಯುವತಿಯರ ಗರ್ಭಕೋಶವನ್ನೂ ಡಾ.ಶಾಂತ ಪಿ. ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಿದ್ದಾನೆ ಎಂದು ರಾಣೇಬೆನ್ನೂರು ತಾಲೂಕು ಸಂತ್ರಸ್ತ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಗಣೇಶಪ್ಪಲಮಾಣಿ ಆರೋಪಿಸಿದ್ದಾರೆ.

► ಸರಕಾರಗಳಿಂದ ಕೇವಲ ಭರವಸೆಗಳಷ್ಟೇ: ಈ ಕುರಿತು ಪರಿಹಾರಕ್ಕೆ ಒತ್ತಾಯಿಸಿ ಸಂತ್ರಸ್ತ ಮಹಿಳೆಯರು ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯ ಶಿಗ್ಗಾಂವಿ ನಿವಾಸಕ್ಕೆ ಪಾದಾಯಾತ್ರೆಯನ್ನು ಕೈಗೊಂಡಿದ್ದರು. ಈ ವೇಳೆ ಬೊಮ್ಮಾಯಿ ಅವರು ಆಣೆ ಇಟ್ಟು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಈವರೆಗೆ ಅದು ಈಡೇರಿಲ್ಲ. ಹಾಲಿ ಕಾಂಗ್ರೆಸ್ ಸರಕಾರಕ್ಕೂ ಸಂತ್ರಸ್ತ ಮಹಿಳೆಯರು ವಿಶೇಷ ನೆರವು ಅಥವಾ ಮಾಶಾಸನ ನೀಡುವಂತೆ ಒತ್ತಾಯಿಸಿದ್ದು, ಈ ಕುರಿತಂತೆ ಸೆ.25ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕೈಗೊಳ್ಳಲಾಗಿತ್ತು.

ದಲಿತ ಮಹಿಳೆಯರೇ ಟಾರ್ಗೆಟ್!

ರಾಣೇಬೆನ್ನೂರು ತಾಲೂಕಿನ ಆಸುಪಾಸಿನ ಹಳ್ಳಿಗಳಲ್ಲಿರುವ ಸುಮಾರು 800 ದಲಿತ ಸಮುದಾಯದ ಮಹಿಳೆಯರು ಈ ರೀತಿಯ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಗೆ ಬಂದಾಗ ಹಣದ ದುರಾಸೆಯಿಂದ ವೈದ್ಯ ಡಾ.ಶಾಂತ ಪಿ. ಮಹಿಳೆಯರಿಗೆ ಯಾವುದೇ ರೋಗ ಬಂದರೂ ಸಹ ‘ನೀವೂ ಸಾಯುತ್ತೀರಿ’ ಎಂದು ಸುಳ್ಳು ಹೇಳಿಕೊಂಡು ಶಸ್ತ್ರಚಿಕಿತ್ಸೆ ಮಾಡಿ ಗರ್ಭಕೋಶವನ್ನೇ ತೆಗೆಯುತ್ತಿದ್ದ ಎಂದು ತಾಲೂಕು ಸಂತ್ರಸ್ತ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಗಣೇಶಪ್ಪ ಲಮಾಣಿ ಆರೋಪಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇವೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವವರೆಗೂ ಪಟ್ಟು ಹಿಡಿದು ಹೋರಾಟ ಮುಂದುವರಿಸುತ್ತೇವೆ. 8 ವರ್ಷಗಳವರೆಗೂ ಈ ಪ್ರಕರಣಕ್ಕೆ ನ್ಯಾಯ ಸಿಗದಿರುವುದಕ್ಕೆ ವೈದ್ಯನ ಹಣದಾಸೆಯೂ ಅಥವಾ ಅಂದಿನ ಬಿಜೆಪಿ ಸರಕಾರದ ಕುಮ್ಮಕ್ಕು ಇದೆಯಾ? ಎಂಬಿತ್ಯಾದಿ ಕುರಿತು ಸೂಕ್ತ ತನಿಖೆಯಾಗಬೇಕು. ಹೀಗೆ ಹಲವು ಕಡೆಗಳಲ್ಲಿ ಅನಕ್ಷರಸ್ಥ ಮಹಿಳೆಯರು ಇಂತಹ ಪ್ರಕರಣ ಗುರಿಯಾಗಿರಬಹುದು, ಅವುಗಳೂ ಕೂಡ ತನಿಖೆಯಿಂದ ಬೆಳಕಿಗೆ ಬರಬೇಕು.

- ಬಿ.ಟಿ ಲಲಿತಾನಾಯಕ್ ಮಾಜಿ ಸಚಿವೆ, ಸಾಮಾಜಿಕ ಹೋರಾಟಗಾರ್ತಿ

share
ಇಬ್ರಾಹಿಂ ಖಲೀಲ್ ಬನ್ನೂರು
ಇಬ್ರಾಹಿಂ ಖಲೀಲ್ ಬನ್ನೂರು
Next Story
X