Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. IDFC First ಬ್ಯಾಂಕ್‌ನಲ್ಲಿ 645 ಕೋಟಿ...

IDFC First ಬ್ಯಾಂಕ್‌ನಲ್ಲಿ 645 ಕೋಟಿ ರೂ. ಹಗರಣ: ಇಷ್ಟೊಂದು ಮೊತ್ತದ ವಂಚನೆ ನಡೆದಿದ್ದು ಹೇಗೆ? ಸಿಬಿಐ ಹೇಳುವುದೇನು?

ಸುಶೀಲ್ ಮಾನವ್ - ThePrint. in ವರದಿ

ವಾರ್ತಾಭಾರತಿವಾರ್ತಾಭಾರತಿ8 Oct 2026 12:04 PM IST
share
IDFC First ಬ್ಯಾಂಕ್‌ನಲ್ಲಿ 645 ಕೋಟಿ ರೂ. ಹಗರಣ: ಇಷ್ಟೊಂದು ಮೊತ್ತದ ವಂಚನೆ ನಡೆದಿದ್ದು ಹೇಗೆ? ಸಿಬಿಐ ಹೇಳುವುದೇನು?

2025 ಅಕ್ಟೋಬರ್ 28ರಂದು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ (IDFC First Bank) ರಿಲೇಶನ್‌ಶಿಪ್ ಮ್ಯಾನೇಜರ್ ಒಬ್ಬರು ಪಂಚಕುಲದ ಹರಿಯಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಚೇರಿಗೆ ಬಂದರು. ಅವರು ಅಲ್ಲಿನ ಅಧಿಕಾರಿಗಳಿಗೆ ಹೇಳಿದ ಸಂಗತಿ ಆಘಾತಕಾರಿಯಾಗಿತ್ತು. ಆ ವ್ಯಕ್ತಿ, ಚಿರಾಗ್ ಗುಲಾಟಿ, ತಮ್ಮ ಬ್ಯಾಂಕ್‌ ನ ದಾಖಲೆಗಳನ್ನು ಪರಿಶೀಲಿಸಿದ್ದರು. ಮಂಡಳಿಯು ಬ್ಯಾಂಕ್‌ ನಲ್ಲಿ ಯಾವುದೇ ಫಿಕ್ಸೆಡ್ ಡೆಪಾಸಿಟ್ ಹೊಂದಿರಲಿಲ್ಲ. ಅದು ಕೇವಲ 7,619.24 ರೂ. ಬಾಕಿ ಇರುವ ಉಳಿತಾಯ ಖಾತೆಯನ್ನು ಮಾತ್ರ ಹೊಂದಿತ್ತು.

ಕಾರ್ಮಿಕರ ಹಣದಿಂದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ 50 ಕೋಟಿ ರೂ.ಗಳ ಡೆಪಾಸಿಟ್ ಮಾಡಲಾಗಿದೆ ಎಂದು ಮಂಡಳಿಯು ಭಾವಿಸಿತ್ತು.

ಮಂಡಳಿಯು ಇದುವರೆಗೆ ವ್ಯವಹಾರ ನಡೆಸುತ್ತಿದ್ದ ಅಭಯ್ ಕುಮಾರ್ ಎಂಬ ಬ್ಯಾಂಕರ್ ಈಗ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿಲ್ಲ ಎಂದೂ ಗುಲಾಟಿ ತಿಳಿಸಿದರು.

ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಉಪ ಕಾರ್ಮಿಕ ಆಯುಕ್ತೆ (ಕಲ್ಯಾಣ) ಸುರೀಂದರ್ ಕೌರ್ ಅವರು ಗುಲಾಟಿ ಹೇಳಿದುದನ್ನು ಆಲಿಸಿದರು. ಸಿಬಿಐನ ಪೂರಕ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿರುವ ಮೂವರು ಮಹಿಳಾ ಆರೋಪಿಗಳಲ್ಲಿ ಸುರೀಂದರ್ ಕೌರ್ ಈಗ ಒಬ್ಬರಾಗಿದ್ದಾರೆ.

ಸಿಬಿಐನ ಪೂರಕ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿರುವ ಮೂವರು ಮಹಿಳಾ ಆರೋಪಿಗಳಲ್ಲಿ ಸುರೀಂದರ್ ಕೌರ್ ಈಗ ಒಬ್ಬರಾಗಿದ್ದಾರೆ. ಚಂಡೀಘಢದ ಸೆಕ್ಟರ್-32ರಲ್ಲಿರುವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಶಾಖೆಯಲ್ಲಿ ನಡೆದ 645 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೌರ್ ಮತ್ತು ಇತರ ಇಬ್ಬರ ವಿರುದ್ಧ ಆರೋಪಿಸಲಾಗಿದೆ. ಹರಿಯಾಣ ಸರ್ಕಾರದ ಇಲಾಖೆಗಳು, ಪೌರ ಸಂಸ್ಥೆಗಳು, ಹರಿಯಾಣ ಮತ್ತು ಚಂಡೀಘಢ ಆಡಳಿತಕ್ಕೆ ಸೇರಿದ ಸಾರ್ವಜನಿಕ ಹಣವನ್ನು ಈ ಹಗರಣದಲ್ಲಿ ಲಪಟಾಯಿಸಲಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಫಿಕ್ಸೆಡ್ ಡೆಪಾಸಿಟ್ ಹಾಗೂ ಆ ಇಲಾಖೆಗಳು ಎಂದಿಗೂ ನೀಡದ ಚೆಕ್‌ಗಳು ಮತ್ತು ಡೆಬಿಟ್ ನೋಟ್‌ಗಳ ಮೂಲಕ ಈ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.

ಚಂಡೀಘಢದ ಸೆಕ್ಟರ್-32ರಲ್ಲಿರುವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮ್ಯಾನೇಜರ್ ಹಾಗೂ ಈ ಹಗರಣದ ಮುಖ್ಯ ಆರೋಪಿಯಾಗಿರುವ ರಿಭಾವ್ ರಿಷಿ ಮತ್ತು ಆತನ ಸಹಚರರ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ ಈ ಹಣ ಹೋಗಿದೆ ಎಂದು ಸಿಬಿಐ ಹೇಳಿದೆ. ಐಎಎಸ್ ಅಧಿಕಾರಿಗಳು, ಹಣಕಾಸು ಅಧಿಕಾರಿಗಳು, ಬ್ಯಾಂಕರ್‌ಗಳು ಹಾಗೂ ಖಾಸಗಿ ವ್ಯಕ್ತಿಗಳು ಸೇರಿದಂತೆ ಒಟ್ಟು 19 ಜನರ ವಿರುದ್ಧ ಪಂಚಕುಲದ ಸಿಬಿಐ ವಿಶೇಷ ನ್ಯಾಯಾಧೀಶರ ಮುಂದೆ ತನಿಖಾ ಸಂಸ್ಥೆಯು 2026ರ ಸೆಪ್ಟೆಂಬರ್ 2ರಂದು ಪೂರಕ ಆರೋಪಪಟ್ಟಿಯನ್ನು ಸಲ್ಲಿಸಿದೆ.

ಈ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿರುವ ಸರ್ಕಾರಿ ಅಧಿಕಾರಿಗಳಲ್ಲಿ ಮೂವರು ಮಹಿಳೆಯರಾಗಿದ್ದಾರೆ.

ಸುರೀಂದರ್ ಕೌರ್ ಹೊರತುಪಡಿಸಿ ಉಳಿದಿಬ್ಬರು ಮಹಿಳೆಯರೆಂದರೆ, ಹರಿಯಾಣ ಪವರ್ ಜನರೇಷನ್ ಕಾರ್ಪೊರೇಷನ್ ಲಿಮಿಟೆಡ್‌ನ (HPGCL) ಹಿರಿಯ ಹಣಕಾಸು ಅಧಿಕಾರಿಯಾಗಿರುವ ದೀಪ್ತಿ ಕೌಶಿಕ್ ಮತ್ತು ಚಂಡೀಘಢದ ಸೆಕ್ಟರ್-32ರಲ್ಲಿರುವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಶಾಖೆಯಲ್ಲಿ ಉಪ ಶಾಖಾ ವ್ಯವಸ್ಥಾಪಕರಾಗಿ ಹಾಗೂ ನಂತರ ಶಾಖಾ ವ್ಯವಸ್ಥಾಪಕರಾಗಿದ್ದ ಸುಧಾ ಗೋಯಲ್.

ಈ ಮೂವರಲ್ಲಿ ಯಾರೊಬ್ಬರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿಲ್ಲ. ಸೆಕ್ಟರ್-32 ಶಾಖೆಯನ್ನು ನಡೆಸುತ್ತಿದ್ದ ಬ್ಯಾಂಕರ್‌ಗಳಾದ ರಿಭಾವ್ ರಿಷಿ ಮತ್ತು ಅಭಯ್ ಕುಮಾರ್ ಆ ಕೃತ್ಯ ಎಸಗಿದ್ದಾರೆ ಎಂದು ಸಿಬಿಐ ಹೆಸರಿಸಿದೆ.

ಆದರೆ, ಈ ಮೂವರು ಮಹಿಳೆಯರು ಬೇರೆ ಬೇರೆ ಹಂತಗಳಲ್ಲಿ ಮತ್ತು ಬೇರೆ ಬೇರೆ ರೀತಿಯಲ್ಲಿ ಹಣದ ದುರುಪಯೋಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಅಥವಾ ಅದನ್ನು ಮುಚ್ಚಿಡಲು ಸಹಾಯ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.

ಈ ಮೂವರನ್ನು "ಬಂಧಿಸಿಲ್ಲ" ಎಂದು ಪಟ್ಟಿಯಲ್ಲಿ ನಮೂದಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 19ರ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮೋದನೆ ದೊರೆಯಬೇಕಿದೆ ಎಂದು ಆರೋಪಪಟ್ಟಿ ತಿಳಿಸುತ್ತದೆ.

ದೀಪ್ತಿ ಕೌಶಿಕ್

ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿರುವ 45 ವರ್ಷದ ದೀಪ್ತಿ ಕೌಶಿಕ್ ಅವರ ಪಾತ್ರವನ್ನು ಆರೋಪಪಟ್ಟಿಯಲ್ಲಿ ಪದೇ ಪದೇ ಒತ್ತಿ ಹೇಳಲಾಗಿದೆ.

ಈ ಪ್ರಕರಣದಲ್ಲಿ ಅವರ ಭಾಗಿಯಾಗುವಿಕೆ 2024 ಫೆಬ್ರವರಿ 19ರಂದು ಪ್ರಾರಂಭವಾಗುತ್ತದೆ. ಆ ದಿನ, ಆಗ ಸೆಕ್ಟರ್-32 ಶಾಖೆಯ ಮ್ಯಾನೇಜರ್ ಆಗಿದ್ದ ಮುಖ್ಯ ಆರೋಪಿ ರಿಭಾವ್ ರಿಷಿ ಅವರು ಹರಿಯಾಣ ಪವರ್ ಜನರೇಷನ್ ಕಾರ್ಪೊರೇಷನ್ ಲಿಮಿಟೆಡ್‌ನ (HPGCL) ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಹಾಗೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿರುವ ಮೊಹಮ್ಮದ್ ಶಯೀನ್ ಅವರಿಗೆ ಆಫರ್ ಲೆಟರ್ ಕಳುಹಿಸಿದ್ದರು.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸರ್ಕಾರಿ ಇಲಾಖೆಗಳೊಂದಿಗೆ ಅಧಿಕೃತ ಒಪ್ಪಂದ ಹೊಂದಿದೆ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು. ಆದರೆ ಅದು ಸುಳ್ಳು ಎಂದು ಸಿಬಿಐ ಹೇಳಿದೆ. ಹರಿಯಾಣ ಸರ್ಕಾರವು ಆ ಬ್ಯಾಂಕಿಗೆ ಅಧಿಕೃತ ಒಪ್ಪಂದ ನೀಡಿದ್ದು 2024ರ ಜುಲೈ 12ರಂದು ಮಾತ್ರ.

ಅದೇ ದಿನ (2024ರ ಫೆಬ್ರವರಿ 19), ಕೌಶಿಕ್ ಅವರು 'ಡ್ರೈ ಫ್ಲೈ ಆಶ್ ಫಂಡ್' (Dry Fly Ash Fund) ಹೆಸರಿನಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಹೊಸ ಉಳಿತಾಯ ಖಾತೆಯನ್ನು ತೆರೆಯುವ ಪ್ರಸ್ತಾವನೆ ಸಲ್ಲಿಸಿದರು. ಭವಿಷ್ಯದ ಅವಕಾಶಗಳನ್ನು ಬಳಸಿಕೊಳ್ಳಲು ಈ ಖಾತೆಯನ್ನು ಬಳಸಬಹುದು ಎಂದು ಆ ಟಿಪ್ಪಣಿಯಲ್ಲಿ ತಿಳಿಸಲಾಗಿತ್ತು. ನಿರ್ದೇಶಕ (ಹಣಕಾಸು) ಅಮಿತ್ ದಿವಾನ್ ಅವರು ಅದೇ ದಿನ ಇದಕ್ಕೆ ಒಪ್ಪಿಗೆ ಸೂಚಿಸಿದರು. ಶಯೀನ್ ಅವರು ಮರುದಿನ "ಖಾತೆ ತೆರೆಯಬಹುದು" ಎಂದು ಬರೆದರು.

ಪ್ರಸ್ತಾವನೆಯಿಂದ ಹಿಡಿದು ಅನುಮೋದನೆಯವರೆಗೆ ಕೇವಲ ಒಂದೇ ದಿನದಲ್ಲಿ ಫೈಲ್ ಚಲಿಸಿದೆ ಎಂದು ಸಿಬಿಐ ಹೇಳಿದೆ. ಅಲ್ಲದೆ, ಅಧಿಕೃತ ಒಪ್ಪಂದ ಹೊಂದಿರುವ ಬ್ಯಾಂಕ್‌ಗಳಲ್ಲಿ ಎಚ್‌ಪಿಜಿಸಿಎಲ್ (HPGCL) ಈಗಾಗಲೇ ಹತ್ತು ಉಳಿತಾಯ ಖಾತೆಗಳನ್ನು ಮತ್ತು ಹತ್ತು ಕ್ಯಾಶ್ ಕ್ರೆಡಿಟ್ ಮಿತಿಗಳನ್ನು ಹೊಂದಿತ್ತು ಎಂದೂ, ಮತ್ತೊಂದು ಖಾತೆಯ ಅಗತ್ಯವಿದೆ ಎಂದು ಎಲ್ಲೂ ದಾಖಲಾಗಿರಲಿಲ್ಲ ಎಂದೂ ಸಿಬಿಐ ತಿಳಿಸಿದೆ.

ಆ ಖಾತೆಯು ಸುಮಾರು ಎಂಟು ತಿಂಗಳುಗಳ ಕಾಲ ಯಾವುದೇ ಹಣವಿಲ್ಲದೆ ಖಾಲಿಯಾಗಿತ್ತು.

ಅಂದು 2024 ನವೆಂಬರ್ 6. ಆರೋಪಪಟ್ಟಿಯ ಪ್ರಕಾರ, ಶಯೀನ್ ಅವರು ಮುಖ್ಯ ಹಣಕಾಸು ಅಧಿಕಾರಿ ಬಹದ್ದೂರ್ ಸಿಂಗ್ ಗೋಸೈನ್ ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಂಡರು. ಆಗ ರಿಷಿ ಕೂಡ ಅಲ್ಲಿಯೇ ಇದ್ದರು. 'ಡ್ರೈ ಫ್ಲೈ ಆಶ್' ಖಾತೆಗೆ ಹಣ ಜಮೆ ಮಾಡುವಂತೆ ಗೋಸೈನ್ ಅವರಿಗೆ ಸೂಚಿಸಲಾಯಿತು.

ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿದ್ದ (IndusInd Bank) ಹಳೆಯ ಎಫ್‌ಡಿ ಮುಚ್ಚುವ ನಿರ್ಧಾರವನ್ನು ಶಯೀನ್, ದಿವಾನ್ ಮತ್ತು ಕೌಶಿಕ್ ಅವರು ಫೈಲ್‌ನಲ್ಲಿ ಯಾವುದೇ ಉಲ್ಲೇಖವಿಲ್ಲದೆ ಮತ್ತು ಯಾವುದೇ ಟಿಪ್ಪಣಿ ತಯಾರಿಸುವ ಮುಂಚೆಯೇ ತೆಗೆದುಕೊಂಡಿದ್ದರು ಎಂದು ಸಿಬಿಐ ಹೇಳಿದೆ.

ಸಿಬಿಐ ಹೇಳುವಂತೆ, ಕೌಶಿಕ್ ಅವರ ಕೆಲಸ ಕೇವಲ ಕಾಗದಪತ್ರಗಳನ್ನು ಸಿದ್ಧಪಡಿಸುವುದಾಗಿತ್ತು. ಠೇವಣಿಯನ್ನು ಮುಂಚಿತವಾಗಿ ಮುಚ್ಚುವುದರಿಂದ ಎಚ್‌ಪಿಜಿಸಿಎಲ್‌ಗೆ ಬಡ್ಡಿಯಲ್ಲಿ ಎಷ್ಟು ನಷ್ಟವಾಗುತ್ತದೆ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಭರವಸೆ ನೀಡಿದ ಶೇ. 14ರಷ್ಟು ಬಡ್ಡಿಯಿಂದ ಎಷ್ಟು ಲಾಭ ಸಿಗುತ್ತದೆ ಎಂಬುದರ ಲೆಕ್ಕಾಚಾರವನ್ನು ಅವರು ಸಿದ್ಧಪಡಿಸಿದರು. ಈ ಲೆಕ್ಕಾಚಾರದ ಪ್ರಕಾರ 1.65 ಕೋಟಿ ರೂ. ನಷ್ಟ, 2.70 ಕೋಟಿ ರೂ. ಲಾಭ ಹಾಗೂ ಒಟ್ಟು 1.04 ಕೋಟಿ ರೂ. ನಿವ್ವಳ ಲಾಭ ಬರುತ್ತದೆ ಎಂದು ತೋರಿಸಲಾಗಿತ್ತು.

ಆದರೆ ಈ ಲೆಕ್ಕಾಚಾರವು ನಿರ್ಧಾರಕ್ಕೆ ಆಧಾರವಾಗಿರಲಿಲ್ಲ ಎಂಬುದು ಸಿಬಿಐ ವಾದ. ಈಗಾಗಲೇ ತೆಗೆದುಕೊಂಡಿರುವ ನಿರ್ಧಾರಕ್ಕೆ ತಕ್ಕಂತೆ ಆ ಅಂಕಿ-ಅಂಶಗಳನ್ನು ಬರೆಯಲಾಗಿದೆ ಎಂದು ಅದು ಹೇಳಿದೆ. 50 ಕೋಟಿ ರೂ. ಮೊತ್ತ, ಅವಧಿ (2024ರ ನವೆಂಬರ್ 11ರಿಂದ 2025ರ ಮಾರ್ಚ್ 28ರವರೆಗೆ) ಮತ್ತು ಬಡ್ಡಿ ದರ (ಶೇ. 14) ಎಲ್ಲವನ್ನೂ ಮೊದಲೇ ನಿಗದಿಪಡಿಸಲಾಗಿತ್ತು ಎಂಬುದನ್ನು ಸಿಬಿಐ ಎತ್ತಿ ತೋರಿಸುತ್ತದೆ.

ಉಳಿತಾಯ ಖಾತೆಯ ಮೇಲೆ ಶೇ. 14ರಷ್ಟು ಬಡ್ಡಿ ನೀಡುವುದು ಬ್ಯಾಂಕಿಂಗ್ ನಿಯಮಗಳ ಪ್ರಕಾರ ಎಂದಿಗೂ ಸಾಧ್ಯವಿರುವ ಆಫರ್ ಅಲ್ಲ ಎಂದು ಆರೋಪಪಟ್ಟಿ ತಿಳಿಸುತ್ತದೆ. ಆ ಸಮಯದಲ್ಲಿ ರೆಪೊ ದರವು ಶೇ. 6.50 ಇತ್ತು. ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿದ್ದ ಎಚ್‌ಪಿಜಿಸಿಎಲ್‌ನ (HPGCL) 108.47 ಕೋಟಿ ರೂ. ಠೇವಣಿಯ ಒಂದು ಭಾಗವನ್ನು ಮುಂಚಿತವಾಗಿ ಹಿಂಪಡೆಯುವ ಮೂಲಕ, 2024 ನವೆಂಬರ್ 11ರಂದು 50 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿತ್ತು.

ಖಾಸಗಿ ಭರವಸೆಯ ಬೆನ್ನು ಹತ್ತಿ

ಬ್ಯಾಂಕ್ ನೀಡಬೇಕಿದ್ದ ಬಡ್ಡಿಯು ಸರಿಯಾದ ಸಮಯಕ್ಕೆ ಬಾರದೇ ಇದ್ದುದರಿಂದ, 2025 ಜನವರಿಯಲ್ಲಿ ಕೌಶಿಕ್ ಅವರು ಬ್ಯಾಂಕಿಗೆ ಪತ್ರ ಬರೆದಿದ್ದರು. ಅವರು 2025ರ ಜನವರಿ 7ರಂದು ರಿಷಿ ಮತ್ತು ಬ್ಯಾಂಕಿನ ಅಧಿಕೃತ ಅಧಿಕಾರಿಯಾದ ಸೀಮಾ ಧೀಮನ್ ಅವರಿಗೆ ಇಮೇಲ್ ಕಳುಹಿಸಿದ್ದು, ಜನವರಿ 21 ಮತ್ತು 24ರಂದು ರಿಮೈಂಡರ್ ಕಳುಹಿಸಿದ್ದರು. ಖಾತೆಗೆ ಹಣ ಜಮೆ ಆಗುವುದನ್ನು "ಕೆಲವು ಆಂತರಿಕ ಸಮಸ್ಯೆಗಳು" ತಡೆಹಿಡಿದಿವೆ ಮತ್ತು ಶೀಘ್ರದಲ್ಲೇ ಅದನ್ನು ಸರಿಪಡಿಸಲಾಗುವುದು ಎಂದು ಅಭಯ್ ಕುಮಾರ್ ಜನವರಿ 24ರಂದು ಉತ್ತರಿಸಿದ್ದರು.

ಆರೋಪಪಟ್ಟಿಯು ಇದನ್ನು ಒಂದು ಗಂಭೀರ ಆರೋಪವಾಗಿ ಬಿಂಬಿಸಿದೆ. ಬ್ಯಾಂಕಿನ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಜಮೆ ಮಾಡಬೇಕಾದ ಹಣಕ್ಕಾಗಿ ಯಾವುದೇ ಅಧಿಕಾರಿಯು ತಿಂಗಳುಗಟ್ಟಲೆ ನಿರ್ದಿಷ್ಟ ಬ್ಯಾಂಕರ್ ಹಿಂದೆ ಬೀಳುವುದಿಲ್ಲ ಎಂದು ಅದು ಹೇಳಿದೆ. ಅವರು ಯಾವುದೋ ಖಾಸಗಿ ಭರವಸೆಯ ಬೆನ್ನೇರಿದ್ದರು ಎಂದು ಸಿಬಿಐ ಆರೋಪಿಸಿದೆ.

ಬಡ್ಡಿ ಹಣವನ್ನು, ಆರೋಪಿಗಳ ನಿಯಂತ್ರಣದಲ್ಲಿರುವ ಸಂಸ್ಥೆಗಳ ಖಾತೆಗಳಿಂದ ಬಂದ ಹಣದಿಂದ ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ ಪಾವತಿಸಲಾಗಿದೆ ಎಂದು ಸಿಬಿಐ ಹೇಳಿದೆ. ಆ ಹಣ ಇಲಾಖೆಯ ಇತರ ಸರ್ಕಾರಿ ಸಂಸ್ಥೆಗಳಿಂದ ಲಪಟಾಯಿಸಿದ್ದಾಗಿತ್ತು. 2025 ಮಾರ್ಚ್ 29ರಂದು ಕೌಶಿಕ್ ಅವರು ಆ ಖಾತೆಯಿಂದ 51,55,59,059 ರೂ.ಗಳನ್ನು ಪಂಚಕುಲದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿರುವ ಎಚ್‌ಪಿಜಿಸಿಎಲ್ ಖಾತೆಗೆ ವರ್ಗಾಯಿಸಿದ್ದರು. ಯಾವುದೇ ಅನುಮೋದನೆ ಪಡೆಯದೆ ಮತ್ತು ಫೈಲ್‌ನಲ್ಲಿ ದಾಖಲಿಸದೆ ಅವರು ಈ ಕೆಲಸ ಮಾಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

2025 ಮಾರ್ಚ್ 27ರ ಟಿಪ್ಪಣಿ

ಮತ್ತೊಂದು 50 ಕೋಟಿ ರೂ.ಗಳನ್ನು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗೆ ವರ್ಗಾಯಿಸಬೇಕಿತ್ತು. ಈ ಬಾರಿ ಕೆನರಾ ಬ್ಯಾಂಕಿನಲ್ಲಿದ್ದ ಮೆಚೂರ್ ಆದ ಠೇವಣಿಯಿಂದ ಈ ಹಣವನ್ನು ವರ್ಗಾಯಿಸಬೇಕಿತ್ತು. ಇದನ್ನು "ಕಾನೂನು ದೃಷ್ಟಿಕೋನದಿಂದ" ಪರಿಶೀಲಿಸುವಂತೆ ದಿವಾನ್ ಅವರು ಕೌಶಿಕ್ ಅವರಿಗೆ ಸೂಚಿಸಿದ್ದರು. ಇದರಿಂದ "ಆದಾಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ" ಮತ್ತು ಇದು ಎಚ್‌ಪಿಜಿಸಿಎಲ್‌ನ ಹಣಕಾಸಿನ ಹಿತಾಸಕ್ತಿಗೆ ಅನುಕೂಲಕರವಾಗಿದೆ ಎಂದು ಅವರು ವರದಿ ನೀಡಿದ್ದರು.

ಆದರೆ ಆ ಟಿಪ್ಪಣಿಯಲ್ಲಿ ನಾಲ್ಕು ಪ್ರಮುಖ ಸಂಗತಿಗಳನ್ನು ಮುಚ್ಚಿಡಲಾಗಿತ್ತು ಎಂದು ಸಿಬಿಐ ಹೇಳಿದೆ. ಮೊದಲನೆಯದಾಗಿ, ಹಿಂದಿನ ಠೇವಣಿಗೆ ಬ್ಯಾಂಕ್ ಭರವಸೆ ನೀಡಿದ್ದ ಬಡ್ಡಿ ಹಣವನ್ನು ಪಾವತಿಸಿರಲಿಲ್ಲ. ಎರಡನೆಯದಾಗಿ, ಸುಮಾರು 87 ಲಕ್ಷ ರೂ.ಗಳು ಇನ್ನೂ ಬಾಕಿ ಇದ್ದವು. ಮೂರನೆಯದಾಗಿ, ಪ್ರತಿ ಬ್ಯಾಂಕಿಗೆ 50 ಕೋಟಿ ರೂ.ಗಳ ಮಿತಿಯನ್ನು ಈಗಾಗಲೇ ಬಳಸಿಕೊಳ್ಳಲಾಗಿತ್ತು. ನಾಲ್ಕನೆಯದಾಗಿ, ಕೌಶಿಕ್ ಅವರೇ ಸ್ವತಃ ಆ ಖಾತೆಯಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದರು.

2025 ಮೇ 5ರಂದು, ಎಚ್‌ಪಿಜಿಸಿಎಲ್ ಎಂದಿಗೂ ನೀಡದ ಚೆಕ್ ಮೂಲಕ 50 ಕೋಟಿ ರೂ.ಗಳನ್ನು ಡೆಬಿಟ್ ಮಾಡಿಕೊಳ್ಳಲಾಯಿತು. ಆ ಚೆಕ್ ಅನ್ನು ಈಗ ವಶಪಡಿಸಿಕೊಳ್ಳಲಾಗಿದೆ. ಚಂಡೀಘಢ ಮುನ್ಸಿಪಲ್ ಕಾರ್ಪೊರೇಷನ್ ಮತ್ತು 'ಕ್ರೆಸ್ಟ್' (CREST - Chandigarh Renewable Energy and Science & Technology Promotion Society) ಎಂಬ ಸಂಸ್ಥೆಗೆ ಒಂಬತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳ (DD) ಮೂಲಕ ಈ ಹಣ ಹೋಗಿದೆ.

ಡೆಬಿಟ್ ವೋಚರ್‌ನಲ್ಲಿ ಕೌಶಿಕ್ ಅವರ ನಕಲಿ ಸಹಿ ಇದೆ ಎಂದು ಸಿಬಿಐ ಹೇಳಿದೆ. ಅಲ್ಲದೆ, ಅದರಲ್ಲಿ ಒಂದು ಸ್ಟ್ಯಾಂಪ್ ಇದ್ದು, ಅವರ ನಂಬರ್‌ಗೆ ಖಚಿತಪಡಿಸಿಕೊಳ್ಳಲು ಫೋನ್ ಕರೆ ಮಾಡಲಾಗಿತ್ತು ಎಂದು ಹೇಳಿಕೊಳ್ಳಲಾಗಿದೆ. ಆದರೆ, ಹಣ ಹೋಗುವ ಮುಂಚೆ ಅಂತಹ ಯಾವುದೇ ಕರೆ ಮಾಡಿರಲಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ತಮ್ಮನ್ನು "ವಿಚಾರಣೆಗೆ ಒಳಪಡಿಸಿದಾಗ", ಮೇ 5ರಂದು ಸ್ಥಿರ ಠೇವಣಿ ರಶೀದಿಗೆ (FDR) ಸಂಬಂಧಿಸಿದಂತೆ ರಿಷಿ ತಮಗೆ ಐದಾರು ಬಾರಿ ಕರೆ ಮಾಡಿದ್ದರು ಎಂದು ಕೌಶಿಕ್ ತಿಳಿಸಿದರು. ಡೆಬಿಟ್ ಮಾಡಬೇಕಾದ ಮೊತ್ತವು ಎಫ್‌ಡಿಆರ್‌ಗೆ ಸಂಬಂಧಿಸಿದ್ದೇ ವಿನಃ ಬೇರೆ ಯಾವುದೇ ಉದ್ದೇಶಕ್ಕಾಗಿ ಅಲ್ಲ ಎಂದು ಅವರು ಹೇಳಿದ್ದರು.

ಕೌಶಿಕ್ ಎಚ್ಚರಿಕೆ ನೀಡಿದ್ದರೇ?

2025ರ ಜೂನ್ 6ರಂದು ಕೌಶಿಕ್ ಅವರು ಜೂನ್ ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಪಡೆದರು. ಎಚ್‌ಪಿಜಿಸಿಎಲ್ ಎಂದಿಗೂ ನೀಡದ ಮತ್ತು ಇಲಾಖೆಯ ಬಳಿಯೇ ಇದ್ದ ಚೆಕ್‌ಗಳ ಮೂಲಕ ಹಣ ಡೆಬಿಟ್ ಆಗಿರುವುದನ್ನು ಅದು ತೋರಿಸಿತ್ತು. ಅವರು ಜೂನ್ 6ರಂದು ರಿಷಿಗೆ ಇಮೇಲ್ ಮಾಡಿದರು. ಅಭಯ್ ಕುಮಾರ್ ಅವರ ಇಮೇಲ್ ನಿಷ್ಕ್ರಿಯಗೊಂಡಿದ್ದರಿಂದ, ಅವರಿಗೆ ಕಳುಹಿಸಿದ ಕಾಪಿ ಬೌನ್ಸ್ ಆಯಿತು. ಅವರು ಜೂನ್ 8ರಂದು ಇನ್ನೂ ಎರಡು ಮೇಲ್‌ಗಳನ್ನು ಕಳುಹಿಸಿದರು.

ಹಾಗಾದರೆ, ಅವರು ಎಚ್ಚರಿಕೆ ನೀಡಿದ್ದರೇ? ಅವರು ಅಲ್ಲಿಗೆ ತಡೆದರು ಎಂಬುದು ಸಿಬಿಐ ವಾದ.

ಬ್ಯಾಂಕ್‌ನಿಂದ ಜುಲೈ 28ರಂದು ಉತ್ತರ ಬಂದಿತು. ಅದಕ್ಕೆ ರಿಷಿ ಅವರ ಸ್ವಂತ ಸಿಗ್ನೇಚರ್ ಐಡಿಯಿಂದ ಸಹಿ ಮಾಡಲಾಗಿತ್ತು. ಅಂದರೆ ಯಾರ ವಿರುದ್ಧ ದೂರು ನೀಡಲಾಗಿತ್ತೋ ಅದೇ ವ್ಯಕ್ತಿಯು ಆ ದೂರಿಗೆ ಉತ್ತರಿಸಿದ್ದನು.

ಮೇಲ್ನೋಟಕ್ಕೆ ಮೂರು ಸಮಸ್ಯೆಗಳು ಗೋಚರಿಸಿದ್ದವು ಎಂದು ಸಿಬಿಐ ಹೇಳಿದೆ. ಮೊದಲನೆಯದಾಗಿ, ಮೇ 5ರಂದು ಸೃಷ್ಟಿಸಲಾಗಿದೆ ಎನ್ನಲಾದ ಠೇವಣಿಯು ಮಾರ್ಚ್ 28ರ ವ್ಯಾಲ್ಯೂ ಡೇಟ್ ಹೊಂದಿತ್ತು. ಎರಡನೆಯದಾಗಿ, ಯಾವುದೇ ಚೆಕ್‌ಗಳನ್ನು ಬರೆಯದೆಯೇ ನಡೆದ ಹಣದ ವರ್ಗಾವಣೆಗಳನ್ನು 'ತಪ್ಪಾದ ನಮೂದುಗಳು' (erroneous entries) ಎಂದು ಹೇಳಲಾಗಿತ್ತು. ಮೂರನೆಯದಾಗಿ, ಕೋಟ್ಯಂತರ ರೂಪಾಯಿಗಳ ಡೆಬಿಟ್‌ನ ವಿರುದ್ಧ ಕೇವಲ 1.48 ಕೋಟಿ ರೂ.ಗಳನ್ನು ಮಾತ್ರ ವಾಪಸ್ ಜಮೆ ಮಾಡಲಾಗಿತ್ತು.

ಅವರು ಆ ಉತ್ತರವನ್ನು ಕಡತದಲ್ಲಿ ದಾಖಲಿಸಿದರು ಎಂದು ಆರೋಪಪಟ್ಟಿ ತಿಳಿಸುತ್ತದೆ. ಅವರು ಬ್ಯಾಂಕಿನ ಕೋರ್ ಸಿಸ್ಟಮ್‌ನಿಂದ ಯಾವುದೇ ಠೇವಣಿ ಸಲಹೆಯನ್ನು ಕೋರಲಿಲ್ಲ ಮತ್ತು ಬ್ಯಾಂಕಿನ ಬೇರೆ ಯಾವುದೇ ಅಧಿಕಾರಿಯ ಮಾತನ್ನು ಕೇಳಲಿಲ್ಲ. ಅವರು ಆ ಫೈಲ್ ಅನ್ನು ಅಕೌಂಟ್ಸ್ ಆಫೀಸರ್ ಆಗಿದ್ದ ದಿವಂಗತ ಬಲವಂತ್ ಸಿಂಗ್ ಅವರಿಗೆ ರವಾನಿಸಿದರು. ಎಲ್ಲಾ ಡೆಬಿಟ್‌ಗಳನ್ನು ಮರುಪಾವತಿಸಲಾಗಿದೆ ಮತ್ತು 50 ಕೋಟಿ ರೂ.ಗಳ ಎಫ್‌ಡಿಆರ್ ಲಭ್ಯವಿದೆ ಎಂದು ಅವರ ಕಾಮೆಂಟ್‌ಗಳಲ್ಲಿ ಬರೆಯಲಾಗಿತ್ತು. ಈ ಎರಡೂ ಹೇಳಿಕೆಗಳು ಸುಳ್ಳಾಗಿದ್ದವು ಮತ್ತು ಆ ಫೈಲ್ ವ್ಯವಸ್ಥಾಪಕ ನಿರ್ದೇಶಕರ ಬಳಿಗೆ ಹೋಗಲೇ ಇಲ್ಲ ಎಂದು ಸಿಬಿಐ ಹೇಳಿದೆ.

ಸಿಬಿಐ ತಂಡದ ಮೊದಲ ಸುತ್ತಿನ ವಿಚಾರಣೆಯ ಮಾರನೇ ದಿನ, ಅಂದರೆ ಈ ವರ್ಷದ ಮೇ 4ರಂದು ಪಂಜಾಬ್ ಮತ್ತು ಹರಿಯಾಣ ಸಿವಿಲ್ ಸೆಕ್ರೆಟರಿಯೇಟ್‌ನ 8ನೇ ಮಹಡಿಯಿಂದ ಹಾರಿ ಬಲವಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಎಚ್‌ಪಿಜಿಸಿಎಲ್‌ನ 'ಡ್ರೈ ಫ್ಲೈ ಆಶ್' ಖಾತೆಯಿಂದ 59,46,00,892 ರೂ.ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಂದಾಜಿಸಿದೆ. ಮುಂಚಿತವಾಗಿ ಠೇವಣಿ ಮುಚ್ಚುವುದರಿಂದ ನಷ್ಟವಾದ 1,66,44,453 ರೂ.ಗಳನ್ನು ಇದಕ್ಕೆ ಸೇರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 316(5) ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ (PC Act) ಸೆಕ್ಷನ್ 12, 13(2) ಹಾಗೂ 13(1)(a) ಒಳಗೊಂಡಂತೆ ವಿವಿಧ ನಿಬಂಧನೆಗಳನ್ನು ಅನ್ವಯಿಸಲಾಗಿದೆ.

ಸುರೀಂದರ್ ಕೌರ್

57 ವರ್ಷದ ಕೌರ್ ಅವರು 2025ರ ಜೂನ್‌ನಲ್ಲಿ ಹೆಚ್ಚುವರಿ ಜವಾಬ್ದಾರಿಯಾಗಿ ಲೇಬರ್ ವೆಲ್ಫೇರ್ ಬೋರ್ಡ್‌ನ ಕಲ್ಯಾಣ ವಿಭಾಗದ ಉಸ್ತುವಾರಿ ವಹಿಸಿಕೊಂಡರು. ಅಷ್ಟರಲ್ಲಿ ಹಣವು ಬಹಳ ಹಿಂದೆಯೇ ಖಾಲಿಯಾಗಿತ್ತು.

ಅವರು ಬರುವುದಕ್ಕೂ ಮುಂಚೆ ಏನೆಲ್ಲಾ ನಡೆಯಿತು ಎಂಬುದನ್ನು ಆರೋಪಪಟ್ಟಿ ಹೀಗೆ ವಿವರಿಸುತ್ತದೆ: ಕಾರ್ಮಿಕರ ಮದುವೆ ನೆರವು ಮತ್ತು ವಿದ್ಯಾರ್ಥಿವೇತನದಂತಹ ಯೋಜನೆಗಳಿಗಾಗಿ ಉದ್ಯೋಗಿಗಳಿಂದ ಸಂಗ್ರಹಿಸಲಾದ ಸೆಸ್ ಹಣದಿಂದ ಮಂಡಳಿಯು ಸುಮಾರು 200 ಕೋಟಿ ರೂ.ಗಳ ಹೆಚ್ಚುವರಿ ಮೊತ್ತವನ್ನು ಹೊಂದಿತ್ತು. ಇದು ಬ್ಯಾಂಕ್‌ಗಳಿಂದ ಬಡ್ಡಿ ದರಗಳನ್ನು ಆಹ್ವಾನಿಸಿತು. 2025 ಮಾರ್ಚ್ 3ರಂದು, ವೆಲ್ಫೇರ್ ಕಮಿಷನರ್ ಅವರು ಐದು ಬ್ಯಾಂಕ್‌ಗಳ ಜೊತೆಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗೂ 50 ಕೋಟಿ ರೂ.ಗಳನ್ನು ಅನುಮೋದಿಸಿದರು.

ಉಳಿದ ನಾಲ್ಕು ಬ್ಯಾಂಕ್‌ಗಳಿಗೆ ನಿಯಮಾನುಸಾರ ಠೇವಣಿಗಳನ್ನು ನೀಡಲಾಯಿತು. ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನೊಂದಿಗೆ ಮಾತ್ರ 2025 ಮಾರ್ಚ್ 5ರಂದು ಉಳಿತಾಯ ಖಾತೆಯನ್ನು ತೆರೆಯಲಾಯಿತು. ಖಾತೆ ತೆರೆಯುವ ಫಾರ್ಮ್‌ಗೆ ಯಾವುದೇ ವಿವರಗಳಿಲ್ಲದೆ ಖಾಲಿಯಾಗಿ ಸಹಿ ಮಾಡಲಾಗಿತ್ತು ಮತ್ತು ಅಭಯ್ ಕುಮಾರ್ ನಂತರ ಅದರಲ್ಲಿ ವಿವರಗಳನ್ನು ತುಂಬಿದ್ದರು.

ಮಾರ್ಚ್ 6ರಂದು 50 ಕೋಟಿ ರೂ. ಬಂದಿತು. ಒಂಬತ್ತು ದಿನಗಳಲ್ಲಿ ಹನ್ನೆರಡು ವ್ಯವಹಾರಗಳ ಮೂಲಕ ಕ್ಯಾಪ್ಕೊ ಫಿಂಟೆಕ್ ಸರ್ವೀಸಸ್, SRR ಪ್ಲಾನಿಂಗ್ ಗುರೂಸ್ ಮತ್ತು ಸ್ವಾಸ್ತಿಕ್ ದೇಶ್ ಪ್ರಾಜೆಕ್ಟ್ಸ್ ಸಂಸ್ಥೆಗಳಿಗೆ ಆ ಹಣ ಹೋಯಿತು. ಮಾರ್ಚ್ 15ರ ವೇಳೆಗೆ ಖಾತೆಯ ಬಾಕಿ ಕೇವಲ 74,000 ರೂ. ಇತ್ತು.

ಹಣವನ್ನು ಕೊಂಡೊಯ್ಯುವಲ್ಲಿ ಕೌರ್ ಅವರ ಯಾವುದೇ ಪಾತ್ರವಿಲ್ಲ ಎಂದು ಆರೋಪಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅವರ ಪ್ರಕರಣವು ಅಕ್ಟೋಬರ್ 28ರಂದು ಗುಲಾಟಿ ಭೇಟಿ ನೀಡಿದ ನಂತರದ ಬೆಳವಣಿಗೆಗೆ ಸಂಬಂಧಿಸಿದೆ. ಸಿಬಿಐ ಪ್ರಕಾರ, ಅವರು ನವೆಂಬರ್ 6ರಿಂದ ಡಿಸೆಂಬರ್ 1ರವರೆಗೆ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ನವೆಂಬರ್ 14ರಂದು ಅವರು "ದಯವಿಟ್ಟು ಮಾತನಾಡಿ" (Please speak) ಎಂಬ ಎರಡು ಪದಗಳನ್ನು ಬರೆದು ಆ ಕಡತವನ್ನು ವಾಪಸ್ ರವಾನಿಸಿದರು. ಅವರು ನವೆಂಬರ್ 27ರಂದು ತಮ್ಮ ಆದೇಶವನ್ನು ದಾಖಲಿಸಿದರು. ಮಂಡಳಿಯ ಹಣ ಮಾಯವಾಗಿದೆ ಎಂದು ತಿಳಿದುಬಂದ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದ ನಂತರ, ಅಂದರೆ ಡಿಸೆಂಬರ್ 2ರಂದು ಮಾತ್ರ ಬ್ಯಾಂಕಿಗೆ ಪತ್ರ ಕಳುಹಿಸಲಾಯಿತು.

ಕಡತದ ಮೇಲೆ WC ಎಂದು ನಮೂದಿಸಲ್ಪಟ್ಟಿದ್ದರೂ ಸಹ, ಅವರು ಆ ಕಡತವನ್ನು ವೆಲ್ಫೇರ್ ಕಮಿಷನರ್ ಡಿ.ಕೆ. ಬೆಹರಾ ಅವರಿಗೆ ಕಳುಹಿಸಲಿಲ್ಲ ಎಂದು ಸಿಬಿಐ ಹೇಳಿದೆ. ಕಚೇರಿಯ ಮುಖ್ಯಸ್ಥರಿಗೆ ಈ ವಿಷಯವೇ ತಿಳಿಯಲಿಲ್ಲ ಎಂದು ಅದು ತಿಳಿಸಿದೆ.

ಡಿಸೆಂಬರ್ 4ರ ದಿನಾಂಕದ ಬ್ಯಾಂಕಿನ ಉತ್ತರವನ್ನು ಸ್ವತಃ ಅಭಯ್ ಕುಮಾರ್ ಅವರೇ ಕಚೇರಿಗೆ ತಂದುಕೊಟ್ಟಿದ್ದರು. ಅಷ್ಟೊತ್ತಿಗಾಗಲೇ ಅವರು ಬ್ಯಾಂಕ್ ಬಿಟ್ಟು ತಿಂಗಳುಗಳು ಕಳೆದಿದ್ದವು ಮತ್ತು ಅಭಯ್ ಕುಮಾರ್ ಬ್ಯಾಂಕಿನಲ್ಲಿಲ್ಲ ಎಂಬುದು ಕೌರ್ ಅವರಿಗೆ ತಿಳಿದಿತ್ತು. ಆ ಉತ್ತರದ ಕರಡನ್ನು ಅವರ ಫೋನ್‌ನಿಂದ ಮರುಪಡೆದುಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ. ಅಂದು ಮಧ್ಯಾಹ್ನ 2:01ಕ್ಕೆ ಕಂಪ್ಯೂಟರ್ ಪರದೆಯ ಮೇಲೆ ಅದನ್ನು ಟೈಪ್ ಮಾಡುತ್ತಿದ್ದಾಗ ತೆಗೆದ ಫೋಟೋ ಕೂಡ ಅದರಲ್ಲಿದೆ.

ನವೆಂಬರ್ 14ರಂದು, ತಮ್ಮ ಉಳಿತಾಯ ಖಾತೆಗಳ ಪಟ್ಟಿಯನ್ನು ನೀಡುವಂತೆ ಹಣಕಾಸು ಇಲಾಖೆಯು ಮಂಡಳಿಯನ್ನು ಕೇಳಿಕೊಂಡಿತ್ತು. ಸಿದ್ಧಪಡಿಸಿ ಕಳುಹಿಸಲಾದ ಆ ಪಟ್ಟಿಯಲ್ಲಿ ಐಡಿಬಿಐ ಬ್ಯಾಂಕಿನ (IDBI Bank) ಎರಡು ಖಾತೆಗಳು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕಿನ (HDFC Bank) ಒಂದು ಖಾತೆಯ ಹೆಸರಿದ್ದವು. ಆದರೆ ಐಡಿಎಫ್‌ಸಿ ಖಾತೆಯ ಹೆಸರು ಅದರಲ್ಲಿರಲಿಲ್ಲ. ಆ ಕಡತವು ಕೌರ್ ಅವರ ಬಳಿಗೆ ಬಂದಿತ್ತು. ಅಂದೇ ಕೆಳಹಂತದ ಅಧಿಕಾರಿಗೆ ಕಳುಹಿಸಲಾಗಿತ್ತು. ಅಮಿತ್ ಕುಮಾರ್ (ಗುತ್ತಿಗೆ ಆಧಾರದ ಕ್ಲರ್ಕ್), ಜುಗಲ್ ಕಿಶೋರ್ (ಲೇಬರ್ ವೆಲ್ಫೇರ್ ಬೋರ್ಡ್‌ನ ಅಕೌಂಟ್ಸ್ ಆಫೀಸರ್) ಮತ್ತು ಕೌರ್ ಅವರು ಉದ್ದೇಶಪೂರ್ವಕವಾಗಿ ಆ ಖಾತೆಯನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಅಮಿತ್ ಕುಮಾರ್ ಮತ್ತು ಜುಗಲ್ ಕಿಶೋರ್ ಅವರ ಹೆಸರು ಆರೋಪಪಟ್ಟಿಯಲ್ಲಿವೆ.

ನಂತರ ಫೋನ್ ದಾಖಲೆಗಳ ವಿಚಾರ ಬರುತ್ತದೆ. ಕೌರ್ ಮತ್ತು ಅಭಯ್ ಕುಮಾರ್ ನಡುವೆ ನಡೆದಿದ್ದ ವಾಟ್ಸಾಪ್ ಕರೆಗಳು ಹಾಗೂ ಸಂದೇಶಗಳನ್ನು ಅಳಿಸಿಹಾಕಲಾಗಿದೆ ಎಂದೂ, 2026 ಜನವರಿ 12ರಂದು ಅಭಯ್ ಕುಮಾರ್ ಅವರು ಬಾಲ್ಟಾನಾದಲ್ಲಿರುವ ಕೌರ್ ಅವರ ಮನೆಗೆ ಭೇಟಿ ನೀಡಿದ್ದರು ಎಂದೂ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಕೌರ್ ಅವರ ಫೋನ್‌ನಿಂದ ವಿಧಿವಿಜ್ಞಾನ ಪರೀಕ್ಷೆಯ ಮೂಲಕ ಪಡೆದ ಮಾಹಿತಿಯನ್ನು ಸಿಬಿಐ ಆಧರಿಸಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 316(5)ರೊಂದಿಗೆ ಸೆಕ್ಷನ್ 49 ಸೇರಿದಂತೆ, ಎಲೆಕ್ಟ್ರಾನಿಕ್ ದಾಖಲೆಗಳನ್ನು ನಾಶಪಡಿಸಿದ ಆರೋಪವನ್ನು ಇದರೊಂದಿಗೆ ಸೇರಿಸಲಾಗಿದೆ.

ಕೌರ್ ಅವರ ಪರವಾಗಿರುವ ವಾದವನ್ನೂ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ಆ ಸಮಯದಲ್ಲಿ ಅವರು ಮೂರು ಹುದ್ದೆಗಳ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ತಡವಾಗಿರುವುದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಸಿಬಿಐ ಈ ವಾದವನ್ನು ಒಪ್ಪುವುದಿಲ್ಲ. ಕಚೇರಿಯ ಮುಖ್ಯಸ್ಥರಿಗೆ ತಿಳಿಸದೆ, 50 ಕೋಟಿ ರೂ.ಗಳ ವಿಷಯದಲ್ಲಿ ಒಂದು ತಿಂಗಳು ಕಾಲ ವಿಳಂಬ ಮಾಡಿರುವುದನ್ನು ಕೆಲಸದ ಒತ್ತಡದಿಂದ ಸಮರ್ಥಿಸಿಕೊಳ್ಳಲಾಗದು ಎಂಬುದು ಸಿಬಿಐ ವಾದವಾಗಿದೆ.

ಸುಧಾ ಗೋಯಲ್

41 ವರ್ಷದ ಗೋಯಲ್ ಅವರು 2023 ಫೆಬ್ರವರಿಯಲ್ಲಿ ಮೊಹಾಲಿ ಫೇಸ್-10 ಶಾಖೆಯಲ್ಲಿ ಬ್ಯಾಂಕರ್ ಆಥರೈಸರ್ ಆಗಿ ಕೆಲಸಕ್ಕೆ ಸೇರಿದರು. 2025ರ ಆಗಸ್ಟ್ 13ರಂದು ಅವರನ್ನು ಚಂಡೀಘಢದ ಸೆಕ್ಟರ್-32 ಶಾಖೆಯ ಉಪ ಶಾಖಾ ವ್ಯವಸ್ಥಾಪಕರಾಗಿ ಬಡ್ತಿ ನೀಡಲಾಯಿತು. 2026ರ ಫೆಬ್ರವರಿವರೆಗೆ ಅವರು ಅಲ್ಲೇ ಮುಂದುವರಿದಿದ್ದರು ಮತ್ತು ಆರೋಪಪಟ್ಟಿಯಲ್ಲಿ ಅವರನ್ನು ಶಾಖಾ ವ್ಯವಸ್ಥಾಪಕಿ ಎಂದು ಉಲ್ಲೇಖಿಸಲಾಗಿದೆ.

ಈ ಸಮಯದ ಅಂತರವೇ ಸಿಬಿಐ ಪ್ರಕರಣದ ಪ್ರಮುಖ ಅಂಶವಾಗಿದೆ. ಅವರು ಅಲ್ಲಿಗೆ ಬಂದಾಗ ಆ ಶಾಖೆಯ ಸರ್ಕಾರಿ ಖಾತೆಗಳಲ್ಲಿ ನಡೆದಿದ್ದ ಹಗರಣವು ಈಗಾಗಲೇ ಹೊರಬಂದಿತ್ತು ಮತ್ತು ರಿಷಿ ಹಾಗೂ ಅಭಯ್ ಕುಮಾರ್ ಅವರನ್ನು ಬ್ಯಾಂಕ್ ಬಿಟ್ಟು ಹೋಗುವಂತೆ ಮಾಡಲಾಗಿತ್ತು. ಇಷ್ಟೆಲ್ಲಾ ವಿಷಯ ತಿಳಿದಿದ್ದರೂ ಅವರು ಅನುಮೋದನೆ ನೀಡುವುದನ್ನು ಮುಂದುವರಿಸಿದ್ದರು ಎಂದು ಸಿಬಿಐ ಹೇಳಿದೆ.

2025 ಸೆಪ್ಟೆಂಬರ್ 25ರಂದು, ಡೈರೆಕ್ಟರ್ ಪಂಚಾಯತ್‌ನ ಎಂಎಂಜಿಎವೈ 2.0 (MMGAY 2.0) ಖಾತೆ ತೆರೆಯುವ ನಮೂನೆಯ ಮೇಲೆ ಅವರು "ಮುಂದುವರಿಯಬಹುದು" (OK to proceed) ಎಂದು ಗುರುತು ಮಾಡಿದರು. ಆ ಫಾರ್ಮ್‌ನಲ್ಲಿ ಪ್ರಿನ್ಸ್ ಶರ್ಮಾ ಎಂಬ ಪಂಚಾಯತ್ ಇಲಾಖೆಯ ಸೂಪರಿಂಟೆಂಡೆಂಟ್ ಅವರ ಮೊಬೈಲ್ ನಂಬರ್ ಇತ್ತು (ಅವರ ಹೆಸರೂ ಆರೋಪಪಟ್ಟಿಯಲ್ಲಿದೆ) ಹಾಗೂ ಒಂದು ನಕಲಿ ಇಮೇಲ್ ಐಡಿ ಇತ್ತು. ಆ ನಂಬರ್ ಅಥವಾ ಇಮೇಲ್ ಇಲಾಖೆಗೆ ಅಥವಾ ಅಧಿಕೃತ ಸಹಿದಾರರಿಗೆ ಸೇರಿರಲಿಲ್ಲ.

ನಂತರ ಸಿಬಿಐ ಅವರು ನೀಡಿದ ಅನುಮೋದನೆಗಳ ಲೆಕ್ಕಾಚಾರ ನೀಡುತ್ತದೆ. ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಒಂದು ಖಾತೆಯಲ್ಲಿ 12 ಹಾಗೂ ಮತ್ತೊಂದು ಖಾತೆಯಲ್ಲಿ ಇನ್ನುಳಿದವು ಸೇರಿದಂತೆ ಒಟ್ಟು 75,55,65,392 ರೂ.ಗಳ ಮೌಲ್ಯದ ಅಕ್ರಮ ಹಣ ವರ್ಗಾವಣೆಗಳನ್ನು ಅವರು ಅನುಮೋದಿಸಿದ್ದಾರೆ ಎಂದು ಸಿಬಿಐ ಹೇಳಿದೆ. ಡೈರೆಕ್ಟರ್ ಪಂಚಾಯತ್ ಖಾತೆಯಲ್ಲಿ ಮತ್ತಷ್ಟು ಅಕ್ರಮ ವರ್ಗಾವಣೆ ಸೇರಿದಂತೆ ಒಟ್ಟು 75,26,52,302 ರೂ.ಗಳನ್ನು ಅವರು ಅನುಮೋದಿಸಿದ್ದಾರೆ. ಇವೆಲ್ಲವೂ ಡಿ.ಕೆ. ಬೆಹರಾ ಅವರ ನಕಲಿ ಸಹಿ ಎಂದು ಸಿಬಿಐ ಕರೆಯುವ ಚೆಕ್‌ಗಳು ಅಥವಾ ಡೆಬಿಟ್ ನೋಟ್‌ಗಳ ಮೂಲಕ ನಡೆದಿವೆ. ಅಲ್ಲದೆ, ಪಂಚಕುಲ ಮುನ್ಸಿಪಲ್ ಕಾರ್ಪೊರೇಷನ್ ಖಾತೆಯಿಂದ 10 ಕೋಟಿ ರೂ., 20 ಕೋಟಿ ರೂ. ಮತ್ತು 20 ಕೋಟಿ ರೂ.ಗಳ ಕನಿಷ್ಠ ಮೂರು ದೊಡ್ಡ ಮೊತ್ತದ ಡೆಬಿಟ್‌ಗಳನ್ನು ಅವರು ಅನುಮೋದಿಸಿದ್ದಾರೆ.

ಸಿಬಿಐ ಅವರದ್ದೇ ಆದ ಅಂಕಿಅಂಶಗಳ ಪ್ರಕಾರ, ಇದು 200 ಕೋಟಿ ರೂ.ಗಳಿಗೂ ಅಧಿಕ ಮೊತ್ತವಾಗಿದೆ. ಒಟ್ಟಾರೆಯಾಗಿ ಕನಿಷ್ಠ 27 ಡೆಬಿಟ್‌ಗಳನ್ನು ಅನುಮೋದಿಸಲಾಗಿದೆ.

ಅವುಗಳಲ್ಲಿ ಒಂದು, 2025 ನವೆಂಬರ್ 4ರಂದು 000011 ಸಂಖ್ಯೆಯ ಚೆಕ್ ಮೂಲಕ ನಡೆದ ಹಣ ವರ್ಗಾವಣೆಯಾಗಿದೆ. ಆ ಚೆಕ್‌ನಲ್ಲಿ ಸಂಖ್ಯೆಗಳಲ್ಲಿ 2,50,00,000 ರೂ. ಎಂದು ಬರೆಯಲಾಗಿತ್ತು, ಆದರೆ ಅಕ್ಷರಗಳಲ್ಲಿ "ಇಪ್ಪತ್ತೈದು ಕೋಟಿ" ಎಂದು ಬರೆಯಲಾಗಿತ್ತು ಎಂದು ಇಲಾಖೆಯ ತನಿಖಾ ಸಮಿತಿಯು ಗಮನಿಸಿತ್ತು. ಆದರೆ ಬ್ಯಾಂಕ್ ಅದನ್ನು 25 ಕೋಟಿ ರೂ. ಎಂದು ಪರಿಗಣಿಸಿ ಹಣ ಪಾವತಿಸಿತ್ತು. ಗೋಯಲ್ ಅವರು ಅನುಮೋದಿಸಿದ ಡೆಬಿಟ್‌ಗಳಲ್ಲಿ ಈ ಅಂಶವೂ ಸೇರಿದೆ ಎಂದು ಆರೋಪಪಟ್ಟಿ ತಿಳಿಸುತ್ತದೆ.

ಈ ಎಲ್ಲಾ ವ್ಯವಹಾರಗಳ ಮೇಲೆ ಗೋಯಲ್ ಅವರು ಸಿಕ್ಸ್-ಐ ವೆರಿಫಿಕೇಶನ್ ನಡೆಸಿದ್ದರು ಎಂದೂ ಸಿಬಿಐ ಹೇಳುತ್ತದೆ. "ಸಿಕ್ಸ್-ಐ ವೆರಿಫಿಕೇಶನ್" ಎನ್ನುವುದು ಒಂದು ನಿಯಂತ್ರಣ ವ್ಯವಸ್ಥೆಯಾಗಿದ್ದು, ಹಣ ವರ್ಗಾವಣೆಗೂ ಮುಂಚೆ ಒಬ್ಬರಲ್ಲ, ಮೂವರು ಅಧಿಕಾರಿಗಳು ಪ್ರತ್ಯೇಕವಾಗಿ ಆ ವ್ಯವಹಾರವನ್ನು ಪರಿಶೀಲಿಸಿ ಅನುಮೋದನೆ ನೀಡಬೇಕು. ದೊಡ್ಡ ಮೊತ್ತದ ಹಣಕಾಸು ವಹಿವಾಟಿನಲ್ಲಿ, ನಮೂದು ಮಾಡುವ ವ್ಯಕ್ತಿ ಮತ್ತು ಪರಿಶೀಲಿಸುವ ವ್ಯಕ್ತಿಯ ಹೊರತಾಗಿ ಮೂರನೇ ಸ್ವತಂತ್ರ ಅಧಿಕಾರಿಯೂ ಅದನ್ನು ಪರಿಶೀಲಿಸಲಿ ಎಂಬ ಉದ್ದೇಶದಿಂದ ಈ ನಿಯಂತ್ರಣವನ್ನು ಮಾಡಲಾಗಿದೆ. ಆದರೆ ಗೋಯಲ್ ಅವರ ಕೈಯಲ್ಲಿ ಇದು ಕೇವಲ ಒಂದು ಔಪಚಾರಿಕತೆಯಾಗಿ ಮಾತ್ರ ಉಳಿಯಿತು ಎಂದು ಸಿಬಿಐ ಹೇಳಿದೆ.

ಅವರ ಮತ್ತೊಂದು ನಿರ್ಣಾಯಕ ಸಂದರ್ಭವು 2025 ನವೆಂಬರ್ 6ರಂದು ನಡೆಯಿತು. ಲೇಬರ್ ವೆಲ್ಫೇರ್ ಬೋರ್ಡ್‌ನ ಜುಗಲ್ ಕಿಶೋರ್ ಅವರು ಮಂಡಳಿಯ ಸ್ಥಿರ ಠೇವಣಿ ಅಸ್ತಿತ್ವದಲ್ಲಿದೆಯೇ ಎಂದು ಪರಿಶೀಲಿಸಲು ಆ ಶಾಖೆಗೆ ಬಂದಿದ್ದರು. ಆ ದಿನ ಸರ್ವರ್ ತೊಂದರೆಯಿಂದಾಗಿ ಖಾತೆಯ ವಿವರಗಳನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಗೋಯಲ್ ತಮಗೆ ಹೇಳಿದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಕಿಶೋರ್ ಅವರಿಗೆ ತಮ್ಮ ನಂಬರ್ ನೀಡಿರುವುದಾಗಿಯೂ ಮತ್ತು ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದ್ದರೂ ಅವರು ಕರೆಗಳನ್ನು ಸ್ವೀಕರಿಸಲಿಲ್ಲ ಎಂದು ತಮಗೆ ತಿಳಿಸಿದ್ದಾಗಿ ಅವರು ಸಿಬಿಐಗೆ ಹೇಳಿಕೆ ನೀಡಿದ್ದಾರೆ. ಅವರ ಈ ಸ್ಪಷ್ಟನೆಯನ್ನು ಸಿಬಿಐ ಅವರ ಒಂದು ಕೃತ್ಯ ಎಂದೇ ಪರಿಗಣಿಸಿದೆ.

ಪಂಚಕುಲ ಮುನ್ಸಿಪಲ್ ಕಾರ್ಪೊರೇಷನ್ ಶಾಖೆಗೆ ಹಲವು ಬಾರಿ ಇಮೇಲ್ ಬರೆದು, ತಮ್ಮ ಖಾತೆಯ ಎಫ್‌ಡಿಆರ್ ಮತ್ತು ಸ್ಟೇಟ್‌ಮೆಂಟ್‌ಗಳನ್ನು ನೀಡುವಂತೆ ಕೋರಿತ್ತು ಹಾಗೂ ಆ ಮೇಲ್‌ಗಳ ಪ್ರತಿಯನ್ನು ಗೋಯಲ್ ಅವರಿಗೂ ಕಳುಹಿಸಿತ್ತು. ಆದರೆ ಆ ಇಮೇಲ್‌ಗಳಿಗೆ ಗೋಯಲ್ ಯಾವುದೇ ಉತ್ತರ ನೀಡಲಿಲ್ಲ ಎಂದು ಸಿಬಿಐ ಹೇಳಿದೆ. ತಾಂತ್ರಿಕ ತೊಂದರೆಯಿದೆ ಎಂಬ ಸುಳ್ಳು ಕಾರಣವನ್ನು ಸೀಮಾ ಧೀಮನ್ ಅವರು ಆ ಇಲಾಖೆಗೆ ನೀಡಿದ್ದರು.

ಬ್ಯಾಂಕ್ ತನ್ನದೇ ಆದ ಆಂತರಿಕ ತನಿಖೆಯ ನಂತರ ಗೋಯಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಸರ್ಕಾರಿ ಖಾತೆಗಳಲ್ಲಿ ನಡೆದಿದ್ದ ಹಗರಣವು ಈಗಾಗಲೇ ಆ ಶಾಖೆಯಲ್ಲಿ ಬೆಳಕಿಗೆ ಬಂದಿದ್ದರೂ ಸಹ, ಅವರು ಮುಂದಿನ ವಂಚನೆಗಳನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಸಿಬಿಐ ಹೇಳಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 316(5) ಮತ್ತು (PC Act) ಸೆಕ್ಷನ್ 13(2) ಹಾಗೂ 13(1)(a) ಒಳಗೊಂಡಂತೆ ವಿವಿಧ ನಿಬಂಧನೆಗಳನ್ನು ಅವರ ಮೇಲೆ ಅನ್ವಯಿಸಲಾಗಿದೆ.

ಸಾರ್ವಜನಿಕ ಸೇವಕರು, ಬ್ಯಾಂಕರ್‌ಗಳು, ವ್ಯಾಪಾರಿಗಳು ಅಥವಾ ಏಜೆಂಟ್‌ಗಳು ಎಸಗುವ ನಂಬಿಕೆದ್ರೋಹದ ಅಪರಾಧದ ಬಗ್ಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 316(5) ತಿಳಿಸುತ್ತದೆ. ಇದಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409ರ ಸ್ಥಾನವನ್ನು ಪಡೆದುಕೊಂಡಿದೆ. ಭ್ರಷ್ಟಾಚಾರ ತಡೆ ಕಾಯಿದೆಯ (1988) ಸೆಕ್ಷನ್ 13(1)(a) ಪ್ರಕಾರ, ಸಾರ್ವಜನಿಕ ಸೇವಕರು ತಮಗೆ ಒಪ್ಪಿಸಲಾದ ಆಸ್ತಿಯನ್ನು ಬೇಜವಾಬ್ದಾರಿಯಿಂದ ಅಥವಾ ವಂಚನೆಯಿಂದ ದುರುಪಯೋಗಪಡಿಸಿಕೊಳ್ಳುವುದು ಅಥವಾ ಬೇರೆಯವರಿಗೆ ಆ ರೀತಿ ಮಾಡಲು ಅವಕಾಶ ಮಾಡಿಕೊಡುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ಇದಕ್ಕೆ ಸೆಕ್ಷನ್ 13(2) ರಡಿ ಶಿಕ್ಷೆಯನ್ನು ವಿಧಿಸಲಾಗುತ್ತದೆ: ಅಂದರೆ 4 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಆರೋಪಪಟ್ಟಿಯಲ್ಲಿ ಗೋಯಲ್ ಅವರ ಪರವಾಗಿರುವ ಮತ್ತೊಂದು ಅಂಶವೂ ಇದೆ. 2026 ಫೆಬ್ರವರಿ 2ರ ವಾಟ್ಸಾಪ್ ಸಂಭಾಷಣೆಯಲ್ಲಿ, ಬ್ಯಾಂಕಿನ ಸರ್ಕಾರಿ ಬ್ಯಾಂಕಿಂಗ್ ಗುಂಪಿನ ಏರಿಯಾ ಹೆಡ್ ಶಮಿಮ್ ದಾರ್ ಅವರು, ಖಾತೆಯ ಸ್ಟೇಟ್‌ಮೆಂಟ್ ಕೋರಿ ಇಲಾಖೆಯು ಮಾಡಿರುವ ಮನವಿಯ ಬಗ್ಗೆ "ಸುಧಾಗೆ ತಿಳಿಸುವುದಾಗಿ" ಅಭಯ್ ಕುಮಾರ್‌ಗೆ ಹೇಳಿದ್ದಾರೆ. ಗೋಯಲ್ ಅವರೊಂದಿಗೆ ಯಾವುದೇ ನೇರ ಸಂವಹನ ನಡೆದಿರಲಿಲ್ಲ ಎಂಬುದನ್ನು ಸಿಬಿಐ ಕೂಡ ತನ್ನ ದಾಖಲೆಯಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಪ್ರಸ್ತುತ ಸ್ಥಿತಿಯೇನು?

ಐಎಎಸ್ ಅಧಿಕಾರಿಗಳು ಮತ್ತು ಹಣಕಾಸು ಅಧಿಕಾರಿಗಳೂ ಸೇರಿದಂತೆ ಒಟ್ಟು 19 ಆರೋಪಿಗಳಿರುವ ಈ ಪೂರಕ ಆರೋಪಪಟ್ಟಿಯಲ್ಲಿ ದೀಪ್ತಿ ಕೌಶಿಕ್, ಸುರೀಂದರ್ ಕೌರ್ ಮತ್ತು ಸುಧಾ ಗೋಯಲ್ ಕೂಡ ಸೇರಿದ್ದಾರೆ. ಇತರೆ ಸರ್ಕಾರಿ ನೌಕರರು, ಖಾಸಗಿ ವ್ಯಕ್ತಿಗಳು ಹಾಗೂ ಹಣದ ಹರಿವಿನ ಕುರಿತು ತನಿಖೆ ಮುಂದುವರಿದಿದೆ ಎಂದು ಸಿಬಿಐ ತಿಳಿಸಿದೆ.

ಸೌಜನ್ಯ: theprint.in

Tags

scamIDFC First BankCBI
share
ವಾರ್ತಾಭಾರತಿ
ವಾರ್ತಾಭಾರತಿ
Next Story
X