Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರ್ನಾಟಕ ಸರಕಾರದ ಸಚಿವಾಲಯ, ಇಲಾಖೆಗಳಲ್ಲಿ...

ಕರ್ನಾಟಕ ಸರಕಾರದ ಸಚಿವಾಲಯ, ಇಲಾಖೆಗಳಲ್ಲಿ 5 ವರ್ಷಗಳಿಂದಲೂ 705 ಅಧಿಕಾರಿಗಳ ಠಿಕಾಣಿ

ವಾರ್ತಾಭಾರತಿವಾರ್ತಾಭಾರತಿ26 Aug 2025 8:54 AM IST
share
ಕರ್ನಾಟಕ ಸರಕಾರದ ಸಚಿವಾಲಯ, ಇಲಾಖೆಗಳಲ್ಲಿ 5 ವರ್ಷಗಳಿಂದಲೂ 705 ಅಧಿಕಾರಿಗಳ ಠಿಕಾಣಿ

ಬೆಂಗಳೂರು: ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರಕಾರದ ಸಚಿವಾಲಯ ಮತ್ತು ಇಲಾಖೆಗಳಲ್ಲಿ ಕಳೆದ 5 ವರ್ಷಗಳಿಂದಲೂ ಒಂದೇ ಇಲಾಖೆಯಲ್ಲಿ ಗ್ರೂಪ್ ಎ ಸೇರಿದಂತೆ ಇನ್ನಿತರ ವೃಂದದ 705 ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.

ನೀತಿ ನಿರ್ಣಯವನ್ನು ನಿರೂಪಿಸುವ ಮಾತೃ ಸಂಸ್ಥೆಯಾಗಿರುವ ಸಚಿವಾಲಯದಲ್ಲಿಯೇ ದೀರ್ಘಾವಧಿಯಿಂದ ಒಂದೇ ಇಲಾಖೆಯಲ್ಲಿ ಠಿಕಾಣಿ ಹೂಡಿದ್ದಾರೆ. ಇದರಿಂದಾಗಿ ಯಾವುದೇ ಶಿಫಾರಸು ಇಲ್ಲದೇ ಇನ್ನಿತರ ಪ್ರತಿಭಾವಂತ ನೌಕರರು ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ವಂಚಿತರಾಗುತ್ತಿದ್ದಾರೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಆಡಳಿತದಲ್ಲಿ ಏಕರೂಪತೆ ಅಳವಡಿಸಿಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ.

ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಅವರು ಒಂದೇ ಕಡೆ ಆಯಕಟ್ಟಿನ ಜಾಗದಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ನೌಕರರ ಪಟ್ಟಿಯನ್ನು ಒದಗಿಸಿದ್ದಾರೆ.

ಇದರಲ್ಲಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಆರ್ಥಿಕ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ಸೇರಿದೆ.

ಸಚಿವಾಲಯದ ಒಂದೇ ಇಲಾಖೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಅಧಿಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದರೂ ಅವರನ್ನು ವರ್ಗಾವಣೆ ಮಾಡಿಲ್ಲ. ಹಲವು ಅಧಿಕಾರಿ, ನೌಕರರು 2014ರಿಂದಲೂ ವಿಧಾನಸೌಧದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ್ಯಾರು ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಬಿಟ್ಟು ಕದಲಿಲ್ಲ ಅಥವಾ ಅವರನ್ನು ಯಾವ ಸರಕಾರವೂ ಕದಲಿಸುವ ಗೋಜಿಗೂ ಹೋಗಿಲ್ಲ ಎಂಬುದು ಪಟ್ಟಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.

ಬೆರಳಚ್ಚುಗಾರ, ಶೀಘ್ರಲಿಪಿಗಾರರಾಗಿ ನೇಮಕವಾಗಿದ್ದವರು ಸಚಿವಾಲಯದ ಒಂದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಸರಕಾರದ ಅಪರ ಕಾರ್ಯದರ್ಶಿ ಹುದ್ದೆಯ ತನಕವೂ ಮುಂಭಡ್ತಿ ಹೊಂದಿದ್ದಾರೆ. ಅದೇ ಇಲಾಖೆಯಲ್ಲಿ ಕೊಠಡಿಗಳನ್ನು ಬದಲಾಯಿಸುತ್ತ, ಸೌಲಭ್ಯಗಳನ್ನು ಪಡೆಯುತ್ತಿದ್ದಾರೆಯೇ ಬೇರೆ ಇಲಾಖೆಗಳಿಗೆ ವರ್ಗಾವಣೆಯನ್ನೇ ಮಾಡಿಲ್ಲ. ಈ ಪೈಕಿ ಹಲವು ಅತ್ಯಂತ ಪ್ರಭಾವಿ ಅಧಿಕಾರಿ ನೌಕರರಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಕೆಲವು ಅಧಿಕಾರಿ ನೌಕರರು ಸಚಿವಾಲಯದಲ್ಲಿ 2018ರಿಂದ ಒಂದು ಹುದ್ದೆಯಲ್ಲಿ ಹಾಗೂ ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಹುದ್ದೆಗೆ ಮುಂಭಡ್ತಿ ಹೊಂದಿದ ನಂತರವೂ ಅದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

5 ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳ ಪಟ್ಟಿ: ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಅನಂತ್ ಎನ್.ಕಾಸ್ಕರ್ 2019ರ ಸೆ.25ರಂದು ಸರಕಾರದ ಉಪ ಕಾರ್ಯದರ್ಶಿಯಾಗಿದ್ದರು. 2020ರ ಅಕ್ಟೋಬರ್ 29ರಿಂದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. 2023ರ ನವೆಂಬರ 23ರಿಂದ ಸರಕಾರದ ಅಪರ ಕಾರ್ಯದರ್ಶಿಯಾಗಿ ಸಚಿವಾಲಯದಲ್ಲಿಯೇ ಮುಂದುವರಿದಿದ್ದಾರೆ.

ಆರ್.ಚಂದ್ರಶೇಖರ 2021ರ ಜುಲೈ 29ರಂದು ಸರಕಾರದ ಜಂಟಿ ಕಾರ್ಯದರ್ಶಿಯಾಗಿದ್ದರು. 2021ರ ನವೆಂಬರ್ 5ರಿಂದ ಸರಕಾರದ ಅಪರ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಸದ್ಯ ಸಚಿವ ಸಂಪುಟ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಲಲಿತಾ 2018ರ ಎಪ್ರಿಲ್ 24ರಿಂದ ಸರಕಾರದ ಉಪ ಕಾರ್ಯದರ್ಶಿಯಾಗಿದ್ದಾರೆ. 2021ರ ಜುಲೈ 29ರಿಂದ ಸರಕಾರದ ಜಂಟಿ ಕಾರ್ಯದರ್ಶಿ, 2025ರ ಫೆ.14ರಿಂದಸರಕಾರದಾಪರ ಕಾರ್ಯದರ್ಶಿಯಾಗಿ ಸಚಿವಾಲಯದಲ್ಲಿಯೇ ಮುಂದುವರಿದಿದ್ದಾರೆ.

ಶೋಭಾ ಎಚ್.ಎ. 2014ರಿಂದಲೂ ಸಚಿವಾಲಯದ ಆರ್ಥಿಕ ಇಲಾಖೆಯಲ್ಲೇ ಠಿಕಾಣಿ ಹೂಡಿದ್ದಾರೆ. 2014 ಆಗಸ್ಟ್ 1ರಂದು ಸರಕಾರದ ಅಧೀನ ಕಾರ್ಯದರ್ಶಿ ವೃಂದಕ್ಕೆ ಮುಂಭಡ್ತಿ ಹೊಂದಿದ್ದರು. 2019ರ ಜೂನ್ 29ರಂದು ಸರಕಾರದ ಉಪ ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿದ್ದರು. 2022ರ ಆಗಸ್ಟ್ 22ರಂದು ಸರಕಾರದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉಮಾ ಕೆ. 2020ರ ಮೇ 7ರಂದು ಸರಕಾರದ ಉಪ ಕಾರ್ಯದರ್ಶಿಯಾಗಿದ್ದಾರೆ. 2023ರ ಆಗಸ್ಟ್ 1ರಿಂದ ಸರಕಾರದ ಜಂಟಿ ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿ ಆರ್ಥಿಕ ಇಲಾಖೆಯಲ್ಲಿ ಮುಂದುವರಿದಿದ್ದಾರೆ.

ವನಿತಾ ಎನ್ ಇವರು 2015ರಿಂದಲೂ ಸಚಿವಾಲಯ ಬಿಟ್ಟು ಕದಲಿಲ್ಲ. 2025 ಮಾರ್ಚ್ 9ರಂದು ಶಾಖಾಧಿಕಾರಿ ಹುದ್ದೆಗೆ ಮುಂಭಡ್ತಿ ಹೊಂದಿದ್ದರು. 2019ರ ಸೆ.13ರಂದು ಸರಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ, 2024ರ ಜೂನ್ 28ರಂದು ಸರಕಾರದ ಉಪ ಕಾರ್ಯದರ್ಶಿ ಹುದ್ದೆಗೆ ಮುಂಭಡ್ತಿ ಹೊಂದಿದ್ದಾರೆ.

ಸತೀಶ್ ಎನ್ ಅವರು 2016ರಿಂದಲೂ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರ ಆಗಸ್ಟ್ 17ರಂದು ಅಧೀನ ಕಾರ್ಯದರ್ಶಿಯಾಗಿದ್ದರು. 2021ರ ಮಾರ್ಚ್ 20ರಿಂದ ಸರಕಾರದ ಉಪ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಬಿ.ಎಸ್.ವಿರೂಪಾಕ್ಷ 2018ರಲ್ಲಿ ಲೋಕೋಪಯೋಗಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯಾಗಿದ್ದರು. 2022ರ ಆಗಸ್ಟ್ 12ರಂದು ಸರಕಾರದ ಉಪ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ.

ಗೋಪಿಚಂದ್ರ ಎಸ್. ಆರ್ಥಿಕ ಇಲಾಖೆಗೆ 1991ರ ಜೂನ್ 30ರಂದು ಬೆರಳಚ್ಚುಗಾರರಾಗಿ ನೇಮಕಗೊಂಡಿದ್ದರು. 1995ರ ಎಪ್ರಿಲ್ 24ರಂದು ಶೀಘ್ರಲಿಪಿಗಾರರಾಗಿ ಭಡ್ತಿ ಹೊಂದಿದ್ದರು. 2015ರ ಫೆ.20ರಂದು ಶಾಖಾಧಿಕಾರಿಯಾಗಿದ್ದರು. 2018ರ ಎಪ್ರಿಲ್ 24ರಂದು ಸರಕಾರದ ಅಧೀನ ಕಾರ್ಯದರ್ಶಿ ಹುದ್ದೆಗೇರಿದ್ದರು. 2023ರ ಮಾರ್ಚ್ 27ರಂದು ಸರಕಾರದ ಉಪ ಕಾರ್ಯದರ್ಶಿ ಹುದ್ದೆಗೆ ಮುಂಭಡ್ತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗಾಯತ್ರಿ ಕೆ. 2015ರ ಫೆ.23ರಂದು ಶಾಖಾಧಿಕಾರಿ ಹುದ್ದೆಗೆ ಮುಂಭಡ್ತಿ ಹೊಂದಿದ್ದರು. 2019ರ ಸೆ.13ರಂದು ಸರಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಭಡ್ತಿ ಹೊಂದಿದ್ದರು. 2023ರ ನವೆಂಬರ್ 23ರಂದು ಉಪ ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿ ಆರ್ಥಿಕ ಇಲಾಖೆಯಲ್ಲಿಯೇ ಮುಂದುವರಿದಿದ್ದಾರೆ.

ಮಂಜುಳಾ ನಟರಾಜ್ 2015ರ ಫೆ.20ರಂದು ಶಾಖಾಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದರು. 2019ರ ಸೆ.13ರಂದು ಸರಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಭಡ್ತಿ ಪಡೆದಿದ್ದರು. 2024ರ ಆಗಸ್ಟ್ 13ರಂದುಉಪ ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿದ್ದಾರೆ. ವಿಶೇಷವೆಂದರೇ ಮಂಜುಳಾ ನಟರಾಜ್ ಅವರು ಅಬಕಾರಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಖಾಸಗಿ ಕಂಪನಿಯೊಂದಕ್ಕೆ ಎಂ 2 ಲೈಸೆನ್ಸ್ ಇಲ್ಲದಿದ್ದರೂ ಸಾವಿರಾರು ಕೋಟಿ ರೂ. ಮೌಲ್ಯದ ಮೊಲಾಸಿಸ್ ರಫ್ತಿಗೆ ಅದೇಶ ಹೊರಡಿಸಿದ್ದರು. ಇವರ ವಿರುದ್ಧವೂ ತನಿಖೆ ನಡೆಸಬೇಕು ಎಂದು ನ್ಯಾಯಾಲಯವು ಆದೇಶ ಹೊರಡಿಸಿದೆ. ಇದಕ್ಕೆ ತಡೆಯಾಜ್ಞೆ ತಂದಿದ್ದಾರೆ.

ಲಕ್ಷ್ಮೀ ವಿ ಇವರು 2001ರಿಂದಲೂ ವಿಧಾನಸೌಧದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. 2001ರ ಜನವರಿ 15ರಂದು ಶೀಘ್ರಲಿಪಿಗಾರ್ತಿಯಾಗಿ ನೇಮಕವಾಗಿದ್ದರು. 2012ರಿಂದ ಹಿರಿಯ ಶೀಘ್ರಲಿಪಿಗಾರ್ತಿ 2014ರ ಆಗಸ್ಟ್ 11ರಿಂದ ಪತ್ರಾಂಕಿತ ಆಪ್ತ ಸಹಾಯಕರು, 2018ರ ಏಪ್ರಿಲ್ ಜಿ2ರಿಂದ ಆಪ್ತ ಕಾರ್ಯದರ್ಶಿ -2, 2021ರ ಮೇ 29ರಿಂದಾಪ್ತ ಕಾರ್ಯದರ್ಶಿ ಗ್ರೇಡ್ 1 ಆಗಿ ಕೆಲಸ ಮಾಡುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಶಶಿಕಲಾ ಜಿ ಇವರು 2007ರಿಂದಲೂ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2007ರ ಡಿಸೆಂಬರ್ 15ರಿಂದ ಶೀಘ್ರಲಿಪಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಇವರು 2013ರ ಮಾರ್ಚ್ 27ರಿಂದ ಹಿರಿಯ ಶೀಘ್ರಲಿಪಿಗಾರರಾಗಿದ್ದಾರೆ. 2016ರಲ್ಲಿ ಆರ್ಥಿಕ ಇಲಾಖೆಗೆ ಪತ್ರಾಂಕಿತ ಆಪ್ತ ಸಹಾಯಕರು, 2019ರ ಸೆ.12ರಿಂದ ಆಪ್ತ ಕಾರ್ಯದರ್ಶಿ (ಗ್ರೇಡ್ 2), 2022ರ ಡಿಸೆಂಬರ್ 15ರಿಂದ ಆಪ್ತ ಕಾರ್ಯದರ್ಶಿ (ಗ್ರೇಡ್ 1) ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಎ.ಎನ್.ವಿರೂಪಾಕ್ಷ ಸಿಬ್ಬಂದಿ ಸುಧಾರಣೆ ಆಡಳಿತ ಇಲಾಖೆಯಲ್ಲಿ 2016ರಿಂದ ಶಾಖಾಧಿಕಾರಿಯಾಗಿದ್ದರು. 2020ರಿಂದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2015ರಿಂದ ಶಾಖಾಧಿಕಾರಿಯಾಗಿದ್ದ ಜಿ ಆರ್ ಸಂದೇಶ ಅವರು 2020ರಿಂದ ಅಧೀನ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಎಸ್ ನಾಗರತ್ನ ಅವರು (2015) ತಿಪ್ಪೇಸ್ವಾಮಿ (2019), ನಾಗರತ್ನ ಸಿ (2016) ವೀರಭದ್ರ (2016), ನಾಗರತ್ನ ವಿ ಪಾಟೀಲ್ (2016) ಚಂದ್ರಕಲಾ ಎಸ್ ಎನ್ (2018) ಇವರು ವಿಧಾನಸೌಧದಲ್ಲೇ ಠಿಕಾಣಿ ಹೂಡಿದ್ದಾರೆ.

ಆರ್ಥಿಕ ಇಲಾಖೆ: ಕವಿತಾ ಎಲ್ (2016ರಿಂದ), ನೇತ್ರಪ್ರಭಾ ಎಂ.ದಯಾಪುಲೆ (2016ರಿಂದ), ಎಸ್.ಬಿ.ತೀಶ್ (2015) ಕಾಂತಮ್ಮ ಎನ್ ಎಂ (2018) ಎಂ ರಾಜಮ್ಮ (2020) ಹೆಚ್ ಅರ್ ಲಲಿತಾ (2016), ಎಸ್ ಹರೀಶ್ (2016) ಅಜಯ್ ಎಸ್ ಕೊರಡೆ (2019) ನಾಗರತ್ನ ಕೆ ಎಸ್ (2018) ಮಾಯಪ್ಪ ಎಚ್ ಸಂಗಣ್ಣವರ್ (2018) ಬಸವರಾಜ ಎಂ (2019) ಎಂಕಟೇಶ್ ಎಸ್ ಎನ್ (2018) ಅವರು ಒಂದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಕಂದಾಯ ಇಲಾಖೆಯ ವಿಮಲಮ್ಮ ಸಿ ಅವರು 2016ರಲ್ಲಿ ಶಾಖಾಧಿಕಾರಿಯಾಗಿದ್ದರು. 2021ರಿಂದ ಅಧೀನ ಕಾರ್ಯದರ್ಶಿಯಾಗಿದ್ದಾರೆ. ಶಾಲಿನಿ ಹೆಗಡೆ (ವಿದ್ಯುನ್ಮಾನ ಮಾಹಿತಿ, ತಂತ್ರಜ್ಞಾನ ಜೈವಿಕ ಇಲಾಯಲ್ಲಿ 2020ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಲಕ್ಷ್ಮೀ ಸಾಗರ 2019ರಿಂದ ನಿಯೋಜನೆ ಮೇರೆಗೆ ಸರಕಾರದ ಅಧೀನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗೊತ್ತಾಗಿದೆ.

2019 ರಿಂದ ವನಜಾ ಕೆ.ಎನ್. (ಒಳಾಡಳಿತ ಇಲಾಖೆ) 2016ರಿಂದ, ಶ್ಯಾಮ್ ಹೊಳ್ಳ ಜಿ (ಒಳಾಡಳಿತ ) 2015ರಿಂದ ಪಿ ಸತ್ಯಭಾಮ (ಕೃಷಿ) 2020ರಿಂದ ಹೇಮಾವತಿ (ವಸತಿ) 2020ರಿಂದ, ನರಸಿಂಹಮೂರ್ತಿ (ಸಮಾಜ ಕಲ್ಯಾಣ) 2020 ರಿಂದ, ಎಂ ಜೆಸಿಂತ (ವಾರ್ತಾ) 2020ರಿಂದ, ವೇದಾವತಿ (ಸಾರಿಗೆ) ಆಪ್ತ ಕಾರ್ಯದಶರ್ಶಿ ಗ್ರೇಡ್ 2 ಇವರು ಸಾರಿಗೆ ಇಲಾಖೆಯಲ್ಲಿಇ ಪತ್ರಾಂಕಿತ ಅಪ್ತ ಸಹಾಯಕರಾಗಿ ಕಾರ್ಯಿರ್ವಹಿಸಿದ್ದಾರೆ. ಆನಂತರ ಆಪ್ತ ಕಾರ್ಯದರ್ಶಿ (ಗ್ರೇಡ್ 2) ವೃಂದಕ್ಕೆ ಮುಂಭಡ್ತಿ ಹೊಂದಿದ ನಂತರ ಅದೇ ಇಲಾಖೆಯಲ್ಲಿ ಮುಂದುವರಿದಿದ್ದಾರೆ.

ಧರ್ಮಶೆಟ್ಟಿ ಆಪ್ತ ಕಾರ್ಯದರ್ಶಿ ಗ್ರೇಡ್ 2 (ಆರ್‌ಡಿಪಿಆರ್)ನಲ್ಲಿ ಪತ್ರಾಂಕಿತ ಆಪ್ತ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ನಂತರ ಆಪ್ತ ಕಾರ್ಯದರ್ಶಿ ಗ್ರೇಡ್ 2 ವೃಂದಕ್ಕೆ ಮುಂಡ್ತಿ ಹೊಂದಿದ ನಂತರ ಅದೇ ಇಲಾಖೆಯಲ್ಲಿ ಮುಂದುವರಿಯುತ್ತಿರುವುದು ಪಟ್ಟಿಯಿಂದ ಗೊತ್ತಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X