Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಿಶ್ರ ಕೃಷಿ ಪದ್ಧತಿ ಅಳವಡಿಸಿ ಮಾದರಿಯಾದ...

ಮಿಶ್ರ ಕೃಷಿ ಪದ್ಧತಿ ಅಳವಡಿಸಿ ಮಾದರಿಯಾದ ದಂಪತಿ

ಕೆ.ಎಂ. ಇಸ್ಮಾಯಿಲ್ ಕಂಡಕೆರೆಕೆ.ಎಂ. ಇಸ್ಮಾಯಿಲ್ ಕಂಡಕೆರೆ14 Nov 2023 12:23 PM IST
share
ಮಿಶ್ರ ಕೃಷಿ ಪದ್ಧತಿ ಅಳವಡಿಸಿ ಮಾದರಿಯಾದ ದಂಪತಿ

ಮಡಿಕೇರಿ, ನ.13: ಕೃಷಿ ನಂಬಿ ನಡೆದರೆ ನೌಕರಿಗಿಂತಲೂ ಹೆಚ್ಚು ಆದಾಯಗಳಿಸಲು ಸಾಧ್ಯವಿದೆ ಎಂಬುದಕ್ಕೆ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಚಮ್ಮಂಡ ಚಿಮ್ಮಿ ಹಾಗೂ ಕಾವೇರಮ್ಮ ದಂಪತಿ ಸಾಕ್ಷಿಯಾಗಿದ್ದಾರೆ.

ತಮ್ಮ ತೋಟದಲ್ಲಿ ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಮಾದರಿ ಕೃಷಿ ಬದುಕು ರೂಪಿಸಿಕೊಂಡಿದ್ದಾರೆ. ಪುತ್ರ ಪೂಣಚ್ಚ ಕೂಡ ಪದವಿ ನಂತರ ಪಾಲಕರ ಜತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಚಮ್ಮಂಡ ಚಿಮ್ಮಿ ಕಾಲೇಜು ಕಲಿಕೆಯ ನಂತರ ಪಿತ್ರಾರ್ಜಿತವಾಗಿ ಬಂದ ಮೂರೂವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕ, ವಿವಾಹದ ನಂತರ ಬಿಕಾಂ ಪದವಿಧರೆ ಪತ್ನಿ ಕಾವೇರಮ್ಮ ಅವರೂ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. 25 ವರ್ಷದಿಂದ ಕೃಷಿ ಕಾಯಕ ಮಾಡಿಕೊಂಡು ಬಂದಿದ್ದಾರೆ. ಜಮೀನಿನಲ್ಲಿ ಅರೆಬಿಕಾ, ರೋಬಸ್ಟಾ ಕಾಫಿ ಹಾಗೂ ಕಾಳು ಮೆಣಸು, ಅಡಿಕೆ, ತೆಂಗು, ಬಾಳೆ ಬೆಳೆಯಲಾಗಿದೆ. ಜೊತೆಗೆ ಜೇನು ಸಾಕಣೆಯನ್ನೂ ಮಾಡುತ್ತಿದ್ದಾರೆ.

ಹಸು-ಹಂದಿ ಸಾಕಣಿ: ಚಿಮ್ಮಿ ಹಾಗೂ ಕಾವೇರಮ್ಮ ದಂಪತಿ ಮನೆ ಸಮೀಪದ ಜಮೀನಿನಲ್ಲಿ ಜೆರ್ಸಿ, ಸಿಂದಿ ತಳಿಯ ಹಸುಗಳ ಸಾಕಣೆ ಮಾಡುತ್ತಿದ್ದಾರೆ. ಪ್ರತಿದಿನ 8-10 ಲೀಟರ್ ಹಾಲು ಕರೆಯುತ್ತಿದ್ದು, ಲೀಟರ್‌ಗೆ 36ರೂ.ರಂತೆ ಸಮೀಪದ ಹೋಟೆಲ್ ಮನೆಗಳಿಗೆ ವಿತರಿಸುತ್ತಿದ್ದಾರೆ. ಇವುಗಳಿಂದ ಉತ್ಪತ್ತಿಯಾಗುವ ಗೊಬ್ಬರ ಮಾರಾಟದಿಂದ ವಾರ್ಷಿಕ 40-50 ಸಾವಿರ ರೂ.ಆದಾಯಗಳಿಸುತ್ತಿದ್ದಾರೆ. ತೋಟದ ಸಮೀಪದಲ್ಲಿ ಹಂದಿ ಸಾಕಣೆಯನ್ನೂ ಮಾಡುತ್ತಿದ್ದು, ವಾರ್ಷಿಕ 30 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.

ಹೂವು, ತರಕಾರಿ ಬೆಳೆ: ತೋಟದ ಮಧ್ಯೆ ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. ಮೂರು ತೊಟ್ಟಿಗಳನ್ನು ನಿರ್ಮಿಸಿದ್ದು, ಒಂದು ತೊಟ್ಟಿಯಿಂದ ವಾರ್ಷಿಕ ಮೂರು ಬಾರಿ ಗೊಬ್ಬರ ತೆಗೆಯಲಾಗುತ್ತಿದೆ. ತಮ್ಮ ಜಮೀನಿನ ಬೆಳೆಗಳಿಗೆ ಬಳಸಿ ನಂತರ ಇತರರಿಗೆ ಮಾರಾಟವನ್ನು ಮಾಡುತ್ತಿದ್ದಾರೆ. ಎರೆ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯ ಜತೆಗೆ ಉತ್ತಮ ಇಳುವರಿಯೂ ಬರುತ್ತದೆ ಎನ್ನುತ್ತಾರೆ ಚಿಮ್ಮಿ ಹಾಗೂ ಕಾವೇರಮ್ಮ ದಂಪತಿ, 6 ಅಡಿ ಉದ್ದ ಹಾಗೂ 4 ಅಡಿ ಎತ್ತರದ ತೊಟ್ಟಿಗಳನ್ನು ನಿರ್ಮಿಸಿ ವಿವಿಧ ಹಂತಗಳಲ್ಲಿ ತ್ಯಾಜ್ಯ ತುಂಬಲಾಗುತ್ತದೆ. ಮೊದಲ ಹಂತದಲ್ಲಿ ಘನ ತ್ಯಾಜ್ಯ, ಎರಡನೇ ಹಂತದಲ್ಲಿ ಸಗಣಿ, ಮೂರನೇ ಹಂತದಲ್ಲಿ ಸಸ್ಯ ತ್ಯಾಜ್ಯಗಳನ್ನು ತೊಟ್ಟಿಗೆ ತುಂಬಿಸಲಾಗುತ್ತದೆ. ಪಿರಿಯಾಪಟ್ಟಣ ತಾಲೂಕಿನಿಂದ ಎರೆಹುಳುವನ್ನು ಕೆ.ಜಿ.ಗೆ 20 ರೂ.ಯಂತೆ ತಂದು ಬಿಡಲಾಗಿದೆ. ನಂತರ 60 ದಿನಗಳ ನಿರ್ವಹಣೆ ನಂತರ ಎರೆ ಗೊಬ್ಬರ ಬಳಕೆಗೆ ಲಭ್ಯವಾಗಿದೆ.

ಹೂವು, ತರಕಾರಿ ಬೆಳೆ: ಮನೆಯ ಸುತ್ತ ವಿವಿಧ ಜಾತಿಯ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ವಾಸ್ತು ಗಿಡ, ಅಂಥೋರಿಯಂ, ತಾವರೆ, ಚಟ್ಟಿ, ದಾಸವಾಳ, ಮಲ್ಲಿಗೆ, ಲಿಲ್ಲಿ, ಚೆಂಡು ಹೂ ಸೇರಿದಂತೆ ವಿವಿಧ ತಳಿಯ ಗಿಡಗಳನ್ನು ಬೆಳೆಸಲಾಗಿದೆ. ಅಗತ್ಯಕ್ಕೆ ಬೇಕಾಗುವಷ್ಟು ತರಕಾರಿಗಳನ್ನು ಮನೆಯಲ್ಲೇ ಬೆಳೆಯಲಾಗುತ್ತಿದೆ. ಬೀನ್ಸ್, ಎಲೆ ಕೋಸು, ಬೆಂಡೆ, ಟೊಮಾಟೊ, ಶುಂಠಿ, ಸೌತೆಕಾಯಿ, ಬದನೆ, ಮೆಣಸು, ಅರಿಶಿಣ, ಬೂದು ಕುಂಬಳ ಹಾಗೂ ಸೊಪ್ಪುಗಳನ್ನು ಮನೆ ಅಂಗಳದಲ್ಲೇ ಬೆಳೆಯಲಾಗುತ್ತಿದೆ.

ವಿವಿಧ ಬಗೆಯ ಹಣ್ಣು: ಮನೆಯ ಸುತ್ತ ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯಲಾಗಿದೆ. ಸ್ಟ್ರಾಬೆರಿ, ಮೂಸಂಬಿ, ಹೈಬ್ರಿಡ್ ನಿಂಬೆ, ಗೋವಾ ಸೀಬೆ, ಕಪ್ಪು, ಹಳದಿ, ಹಸಿರು, ಗ್ರೇ, ತಳೆಯ ಬಟರ್ ಫೂಟ್‌ಗಳನ್ನು ಬೆಳೆಯಲಾಗಿದೆ. ಹಲಸು, ಹೈಬ್ರಿಡ್ ಸಪೋಟಿ, ಪಪ್ಪಾಯ, ಚಕ್ಕೋಡಾ, ಕಿತ್ತಳೆ, ನೇರಳೆ, ನೆಲ್ಲಿಕಾಯಿ ಹಾಗೂ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗಿದ್ದು, ಇವುಗಳೆಂದಲೂ ಉತ್ತಮ ಆದಾಯ ಗಳಿಸಲಾಗುತ್ತಿದೆ.

25 ವರ್ಷದಿಂದ ನಾನು ಮತ್ತು ನನ್ನ ಪತಿ ಮಿಶ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಇದರಿಂದ ಉತ್ತಮ ಆದಾಯವನ್ನು ಕೂಡ ಪಡೆದಿದ್ದೇವೆ. ನಮ್ಮಲ್ಲೇ ಉತ್ಪತ್ತಿಯಾಗುವ ಎಲೆ ಹಾಗೂ ಸಗಣಿ ಗೊಬ್ಬರಗಳನ್ನು ಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. ಇದರಿಂದ ಮಣ್ಣಿನ ಫಲವತ್ತತೆ ಕೂಡ ಹೆಚ್ಚಾಗುವ ಮೂಲಕ ಉತ್ತಮ ಇಳುವರಿ ಲಭ್ಯವಾಗಿದೆ.

ಕಾವೇರಮ್ಮ ರೈತ ಮಹಿಳೆ

share
ಕೆ.ಎಂ. ಇಸ್ಮಾಯಿಲ್ ಕಂಡಕೆರೆ
ಕೆ.ಎಂ. ಇಸ್ಮಾಯಿಲ್ ಕಂಡಕೆರೆ
Next Story
X