Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿದೇಶಿ ಹಕ್ಕಿಗಳ ತಾಣವಾದ ಚಿನ್ನದ ನಾಡು

ವಿದೇಶಿ ಹಕ್ಕಿಗಳ ತಾಣವಾದ ಚಿನ್ನದ ನಾಡು

ಸಿ.ವಿ.ನಾಗರಾಜ್, ಕೋಲಾರಸಿ.ವಿ.ನಾಗರಾಜ್, ಕೋಲಾರ3 Nov 2025 9:34 AM IST
share
ವಿದೇಶಿ ಹಕ್ಕಿಗಳ ತಾಣವಾದ ಚಿನ್ನದ ನಾಡು
ಕೆಜಿಎಫ್‌ನ ಅಜ್ಜಪ್ಪನ ಹಳ್ಳಿ ಸುತ್ತಮುತ್ತ ವ್ರೈನೆಕ್, ಕಳ್ಳಿಪೀರರ ಚಿಲಿಪಿಲಿ ಕಲರವ

ಕೋಲಾರ : ಪಕ್ಷಿ ಸಂಕುಲದ ಬದುಕೇ ಒಂದು ಪ್ರಾಕೃತಿಕ ವಿಸ್ಮಯ, ಪಕ್ಷಿಗಳ ಸಂಘಟನಾ ಪ್ರವೃತ್ತಿ, ಗೂಡುಕಟ್ಟುವಿಕೆ, ವಲಸೆ ಸಂತಾನೋತ್ಪತ್ತಿ, ಮನುಷ್ಯನಿಗೆ ಜೀವನ ಕೌಶಲ್ಯಗಳನ್ನು ಕಲಿಸುವ ಜೀವನಪಾಠಗಳೆಂದರೆ ತಪ್ಪಾಗಲಾರದು. ಪರಿಸರ ಸಮತೋಲನ ಮತ್ತು ಸಂರಕ್ಷಣೆಯಲ್ಲಿ ಪಕ್ಷಿಗಳದ್ದೇ ವಿಶಿಷ್ಟ ಕೊಡುಗೆ ಇದೆ. ನಮ್ಮ ಭಾರತೀಯ ಸಮಾಜದಲ್ಲಿ ಕೆಲವು ಪಕ್ಷಿಗಳ ಆಗಮನವು ಶುಭ ಎಂಬುವ ನಂಬಿಕೆಯೂ ಇದೆ. ಪಕ್ಷಿಗಳು ಪರಿಸರದ ಆರೋಗ್ಯ ನಿರ್ಧರಿಸುವ ಸೂಚಕಗಳು ಎಂದು ಹೇಳಲಾಗುತ್ತದೆ.

ಚಿನ್ನದ ನಾಡು ಎಂದು ಖ್ಯಾತಿ ಪಡೆದ ಕೆಜಿಎಫ್ ತನ್ನ ಗತವೈಭವವನ್ನು ಕಳೆದುಕೊಂಡ ನಂತರದಲ್ಲಿ ಹಾಳು ಕೊಂಪೆಯಾಗಿ ಕಾಣುತ್ತಿದ್ದ ಗಣಿ ಪ್ರದೇಶಕ್ಕೆ ಹೊಂದಿಕೊಂಡಿರುವ ಅಜ್ಜಪ್ಪನಹಳ್ಳಿ ಸುತ್ತಮುತ್ತಲಿನ ಪ್ರದೇಶಕ್ಕೆ ವಿದೇಶಿ ಹಕ್ಕಿಗಳು ಲಗ್ಗೆ ಇಟ್ಟಿರುವುದು ಪಕ್ಷಿ ಪ್ರಿಯರು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆೆ.

ಚಿನ್ನದ ಗಣಿ ಮುಚ್ಚಿದ ನಂತರ ಪ್ರವಾಸಿಗರು ಇಲ್ಲಿನ ಸೈನೈಡ್ ಗುಡ್ಡಗಳನ್ನು ನೋಡಲು ಆಗಮಿಸುತ್ತಿದ್ದರು, ಆದರೆ, ಈಗ ಅಜ್ಜ ಪ್ಪನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪರೂಪದ ವಿದೇಶಿ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿ ಪಕ್ಷಿ ಪ್ರಿಯರು ತಮ್ಮ ಕ್ಯಾಮರಾ ದೃಷ್ಟಿಯನ್ನು ಇತ್ತ ಹಾಯಿಸಿದ್ದಾರೆ.

ಯೂರೋಪ್ ಮೂಲದ ಬೀ ಈಟರ್ ಹಾಗೂ ಯುರೇಷಿಯನ್ ವ್ರೈನೆಕ್ ಪಕ್ಷಿಗಳು ಪ್ರತಿವರ್ಷ ಸೆಪ್ಟಂಬರ್ ತಿಂಗಳಲ್ಲಿ ಕೆಜಿಎಫ್‌ನ ಅಜ್ಜಪ್ಪನಹಳ್ಳಿ ಸುತ್ತಮುತ್ತಲಿನ ಪ್ರದೇಶಕ್ಕೆ ಅತಿಥಿಗಳಾಗಿ ಆಗಮಿಸುತ್ತವೆ. ನಂತರ ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಮರಳಿ ತೆರಳುತ್ತವೆ.

ಸುಮಾರು ಎರಡು ತಿಂಗಳು ಉಳಿಯಲು ಬರುವ ಈ ಬೀ ಈಟರ್ ಪಕ್ಷಿಯನ್ನು ನಮ್ಮಲ್ಲಿ ಕಳ್ಳಿಪೀರ ಮತ್ತು ಅದೇ ರೀತಿ ಯುರೇಷಿಯನ್ ವ್ರೈನೆಕ್ ಪಕ್ಷಿಗಳನ್ನು ಕೆಂಪುಕೊರಳಿನ ಪಕ್ಷಿ ಎಂದು ಕರೆಯಲಾಗುತ್ತದೆ.

ಈ ಪಕ್ಷಿಗಳು ನಿರ್ದಿಷ್ಟ ದಾರಿಯನ್ನು ಕರಾರುವಾಕ್ಕಾಗಿ ಅನುಸರಿಸಿ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ ಸೆಪ್ಟಂಬರ್ ತಿಂಗಳಲ್ಲಿ ಕೆಜಿಎಫ್ ತಲುಪುವುದು ಪ್ರಕೃತಿ ವಿಸ್ಮಯವೇ ಸರಿ. ಸುಮಾರು ಎರಡು ಮೂರು ತಿಂಗಳ ಕಾಲ ಇಲ್ಲೇ ಉಳಿದು ನಂತರ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮೂಲಕ ತಮ್ಮ ಮೂಲ ಸ್ಥಳಕ್ಕೆ ಹೋಗುತ್ತವೆ. ಹೀಗೆ ಪ್ರತಿ ವರ್ಷ ಇದೇ ಸಮಯಕ್ಕೆ ಸರಿಯಾಗಿ ಇದೇ ಸ್ಥಳಕ್ಕೆ ಕರಾರುವಾಕ್ಕಾಗಿ ಬರುತ್ತವೆ.

ಇತ್ತೀಚೆಗೆ ವಿರಳ ವಲಸೆಗೆ ಹೆಸರಾಗಿರುವ ಈ ಹಕ್ಕಿಗಳು ಯೂರೋಪ್‌ನಲ್ಲಿ ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಅವುಗಳಿಗೆ ಬೇಕಾದ ಆಹಾರ ಸಿಗುವುದಿಲ್ಲ ಮತ್ತು ತೀವ್ರ ಮಳೆ ಮತ್ತು ಚಳಿ ಇರುವುದರಿಂದ ತಡೆಯಲಾಗದೆ ಸೂಕ್ತ ವಾತಾವರಣ ಮತ್ತು ಆಹಾರ ಹುಡುಕಿಕೊಂಡು ವಲಸೆ ಹೊರಡುತ್ತವೆ.

ಬೀ ಈಟರ್ ವಿಶೇಷ :

ಬೀ ಈಟರ್ ಅಥವಾ ಕಳ್ಳಿಪೀರ’ ಅಥವಾ ಜೇನು ಹಿಡುಕ ಎಂದು ಕರೆಯಲಾಗುವ ಈ ಪಕ್ಷಿ ಸಾಮಾನ್ಯವಾಗಿ ಕುರುಚಲು ಪ್ರದೇಶದ ಬಯಲು ಅಥವಾ ತಪ್ಪುಗಳನ್ನು ಬಯಸುತ್ತದೆ.

ಇವು ಮೂಲತಃ ಯೂರೋಪ್ ಆಗಿದ್ದರು ಇದರ ಸಂತತಿ ಬ್ರಿಟನ್, ದಕ್ಷಿಣ ಆಫ್ರಿಕಾ, ಜರ್ಮನಿ, ಸ್ವಿಟ್ಜರ್ಲ್ಯಾಂಡ್, ದಕ್ಷಿಣ ಏಷ್ಯಾ ಖಂಡದಲ್ಲಿ ವಲಸೆ ಹೊರಡುತ್ತವೆ. ಈ ಕಳ್ಳಿಪೀರ ಪಕ್ಷಿಗಳಲ್ಲಿ ಒಂದು ವಿಶೇಷತೆಯೆಂದರೆ ಅವುಗಳಲ್ಲಿ ಗಂಡು, ಹೆಣ್ಣು ಮತ್ತು ಮರಿ ಎಲ್ಲವೂ ಬೇರೆ ಬೇರೆ ಬಣ್ಣಗಳಿಂದ ಕೂಡಿರುತ್ತದೆ, ಇದರ ಕೊಕ್ಕೆ, ಕಣ್ಣು ಮತ್ತು ರೆಕ್ಕೆಗಳು ಬಹಳ ಆಕರ್ಷಣೀಯವಾಗಿ ಇರುತ್ತವೆ. ಇವು ಸಾಮಾನ್ಯವಾಗಿ ಶಾಂತ ಪ್ರದೇಶದಲ್ಲಿ ವಾಸಿಸುತ್ತವೆ.

ಇವು ಸಾಮಾನ್ಯವಾಗಿ ಪ್ರಶಾಂತ ವಾತಾವರಣದಲ್ಲಿ ಇರುತ್ತವೆ. ಸೂರ್ಯಾಸ್ತದ ನಂತರ ಗಿಡ ಮರಗಳ ರೆಂಬೆ ಕೊಂಬೆಗಳನ್ನು ಆಶ್ರಯಿಸುತ್ತವೆ. ರಾತ್ರಿ ವೇಳೆ ಅಲ್ಲೇ ನಿದ್ರಿಸುತ್ತವೆ. ಅವು ಜೇನು ನೊಣಗಳು, ದುಂಬಿಗಳು, ಡ್ರ್ಯಾಗನ್ ಫ್ಲೈ, ಮಿಡತೆಗಳನ್ನು ಹಿಡಿದು ತಿನ್ನುತ್ತವೆ.

ಯುರೇಷಿಯನ್ ವ್ರೈನೆಕ್ ಪಕ್ಷಿ ವಿಶೇಷ :

ವ್ರೈನೆಕ್ ಪಕ್ಷಿ ಸಹ ಮೂಲತಃ ಯೂರೋಪ್ ರಾಷ್ಟ್ರದ್ದೇ ಆದರೂ ಅದು ಸ್ಪೇನ್, ದಕ್ಷಿಣ ಆಫ್ರಿಕಾ, ದಕ್ಷಿಣ ಏಷ್ಯಾ, ಪೋರ್ಚುಗಲ್, ಇಟಲಿ, ನಾರ್ವೆ ಹಾಗೂ ಚೀನಾದ ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ನೋಡಲು ಕೆಂಪು ಮಿಶ್ರಿತ ಕಲ್ಲಿನ ಬಣ್ಣ ಹೊಂದಿರುತ್ತವೆ. ತಲೆಯನ್ನು ಒರಗಿಸಿಕೊಳ್ಳುವ ಅಭ್ಯಾಸ ಹೊಂದಿದ್ದು , ಕತ್ತನ್ನು ತಿರುಚುತ್ತಲೇ ಇರುತ್ತದೆ. ಇವೂ ಕೂಡ ಚಳಿಗಾಲದಲ್ಲಿ ವಲಸೆ ಮಾತ್ರ ವಲಸೆ ಹೊರಡುತ್ತವೆ.

ಇವು ಕೀಟಗಳು, ದುಂಬಿಗಳು, ಮಿಡತೆಗಳು ಮುಂತಾದವುಗಳನ್ನು ತಿನ್ನುವುದು ಇವುಗಳ ಆಹಾರವಾಗಿದೆ. ಕೆಲವೊಮ್ಮೆ ಬೇಟೆಯಾಡಿದ ಕೀಟಗಳನ್ನು ಮರಗಳ ರೆಂಬೆ ಕೊಂಬೆ ಮತ್ತು ವಿದ್ಯುತ್ ತಂತಿಗಳ ಮೇಲೆ ಕುಳಿತು ತಿನ್ನುತ್ತವೆ.

ಬೀ ಈಟರ್ ಹಾಗೂ ವ್ರೈನೆಕ್ ಪಕ್ಷಿಗಳು ಅಜ್ಜಪ್ಪನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದಂತೆಯೇ ಪಕ್ಷಿ ಪ್ರಿಯರು ತಮ್ಮ ಕ್ಯಾಮರಾಗಳನ್ನು ಹೊತ್ತು ಧಾವಿಸುತ್ತಿದ್ದಾರೆ, ಇನ್ನೂ ಕೆಲವರು ತಮ್ಮ ಮಕ್ಕಳನ್ನು ಸಹ ಕರೆದುಕೊಂಡು ಬಂದು ಬೆಳಗ್ಗೆಯಿಂದ ಸಂಜೆಯವರೆಗೆ ಈ ಪಕ್ಷಿಗಳು ಅಲ್ಲಿನ ಸಣ್ಣ ಸಣ್ಣ ಕಲ್ಲಿನ ಗುಡ್ಡಗಳು, ಮರಗಳ ಕೊಂಬೆಗಳು, ರೈತರ ಜಮೀನುಗಳಲ್ಲಿರುವ ಫಸಲುಗಳು, ಹೊಲಗಳಲ್ಲಿ ಆಟವಾಡುತ್ತಾ ಕುಳಿತಿರುವ, ಕಣ್ಮುಚ್ಚಿ ವಿಶ್ರಾಂತಿ ಪಡೆಯುತ್ತಿರುವ, ಕೀಟಗಳನ್ನು ಹಿಡಿಯುವ, ಜೋಡಿಯಾಗಿ ಚೆಲ್ಲಾಟ ಆಡುತ್ತಾ, ವಿವಿಧ ಭಂಗಿಗಳಲ್ಲಿ ಆಟವಾಡುವುದನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿಯಲು ನಡೆಸುವ ಕಸರತ್ತು ಸಾಮಾನ್ಯವಾಗಿದೆ.

ಕಳೆದ 20 ವರ್ಷಗಳಿಂದ ಈ ಪ್ರದೇಶದಲ್ಲಿ ವಿದೇಶಿ ಹಕ್ಕಿಗಳು ಕಾಣಿಸಿಕೊಳ್ಳುತ್ತಿದ್ದು, ಸೆಪ್ಟಂಬರ್ ನಿಂದ ನವೆಂಬರ್ ಕೊನೆಯ ವರೆಗೂ ಪಕ್ಷಿ ಪ್ರಿಯರು, ತಜ್ಞರು, ಸಂಶೋಧಕರು ತಮ್ಮ ಸಂಶೋಧನೆಗಳನ್ನು ಕೈಗೊಳ್ಳಲು ಇದು ಸೂಕ್ತ ಪ್ರದೇಶವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಬೆಣಚು ಕಲ್ಲುಗಳ ಮಿಶ್ರಿತ ಕೆಂಪು ಮಣ್ಣಿನ ನೆಲ, ಸಣ್ಣ ಸಣ್ಣ ಕಲ್ಲಿನ ಗುಡ್ಡಗಳು, ನೀಲಗಿರಿ ತೋಪುಗಳು ಇದ್ದು, ದೇಶ-ವಿದೇಶಗಳ ಪಕ್ಷಿಗಳನ್ನು ಆಕರ್ಷಿಸುವ ಇನ್ನಷ್ಟು ಪೂರಕ ವಾತಾವರಣ ನಿರ್ಮಾಣವಾದರೆ ಇದೊಂದು ಪಕ್ಷಿ ಸಂಕುಲದ ದಾಮವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಇದರಿಂದ ಇದೊಂದು ಪ್ರವಾಸಿ ತಾಣ ಆಗುವ ಸಾಧ್ಯತೆ ಇದೆ.

ಕೆಜಿಎಫ್ ತಾಲೂಕಿನ ಪಾಲಾರ್ ಜಲಾಶಯ, ಜಿಂಕೆಗಳು ವಾಸಿಸುವ ಚಿನ್ನದ ಗಣಿ ಪ್ರದೇಶ, ಐಸಂದ್ರ ಮಿಟ್ಟೂರು ಸುತ್ತ ಮುತ್ತಲಿನ ಪರಿಸರದಲ್ಲಿ ಆಗಾಗ್ಗೆ ವಿದೇಶಿ ಹಕ್ಕಿಗಳು ಕಾಣಸಿಗುತ್ತವೆ. ಕೋಲಾರ ಜಿಲ್ಲೆಯಲ್ಲಿ ಸುಮಾರು 272 ಪಕ್ಷಿ ಪ್ರಭೇದಗಳು ಇಲ್ಲಿವೆ. ಅಜ್ಜಪ್ಪನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 2015 ರಿಂದ ಗಮನಿಸಿದ್ದೇನೆ. ಬೀ ಈಟರ್ ಹಾಗೂ ವ್ರೈನೆಕ್ ಪಕ್ಷಿಗಳು ಆಹಾರಕ್ಕಾಗಿ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧವಾಗಿರುತ್ತವೆ. ಇಲ್ಲಿಯ ತನಕ ನೂರಾರು ಪಕ್ಷಿಗಳ ಚಿತ್ರಗಳನ್ನು ಸೆರೆಹಿಡಿದ್ದೇನೆ. ಇದೇ ಗಣಿ ಗ್ರಾಮದ ಜಾಗವನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲು ಇಡಲಾಗಿದೆ. ಕೈಗಾರಿಕೆಗಳು ಬಂದರೆ ಹಕ್ಕಿಗಳ ವಲಸೆ ನಿಲ್ಲಬಹುದು ಎಂಬ ಆಂತಕವಿದೆ. ಹೇಗಾದರೂ ಮಾಡಿ ಈ ಜಾಗವನ್ನು ಸಂರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.

-ಶಂಕರ್, ಕೆಜಿಎಫ್ ಪೊಲೀಸ್ ಸಿಬ್ಬಂದಿ, ಹವ್ಯಾಸಿ ಛಾಯಾಗ್ರಾಹಕ

share
ಸಿ.ವಿ.ನಾಗರಾಜ್, ಕೋಲಾರ
ಸಿ.ವಿ.ನಾಗರಾಜ್, ಕೋಲಾರ
Next Story
X