Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಣರಂಗದ ಹುಲಿ, ತಂತ್ರಜ್ಞಾನದ ಹರಿಕಾರ;...

ರಣರಂಗದ ಹುಲಿ, ತಂತ್ರಜ್ಞಾನದ ಹರಿಕಾರ; ಮೈಸೂರಿನ ಇತಿಹಾಸದಲ್ಲಿ ಅಚ್ಚಳಿಯದ ಟಿಪ್ಪು!

ಮೈಸೂರು ಮಣ್ಣಿನಲ್ಲಿ ರೂಪುಗೊಂಡ ರಾಕೆಟ್ ತಂತ್ರಜ್ಞಾನ ಬ್ರಿಟಿಷರಿಗೂ ಸವಾಲು; ರೇಷ್ಮೆ ಉದ್ಯಮ, ಕೈಗಾರಿಕೆ, ಕೃಷಿ ಕ್ಷೇತ್ರಗಳಲ್ಲೂ ದೂರದೃಷ್ಟಿಯ ಹೆಜ್ಜೆ

ವಾರ್ತಾಭಾರತಿವಾರ್ತಾಭಾರತಿ10 Nov 2026 7:59 PM IST
share
ರಣರಂಗದ ಹುಲಿ, ತಂತ್ರಜ್ಞಾನದ ಹರಿಕಾರ; ಮೈಸೂರಿನ ಇತಿಹಾಸದಲ್ಲಿ ಅಚ್ಚಳಿಯದ ಟಿಪ್ಪು!

ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಹೆಸರು ಕೇಳಿದಾಗ ನೆನಪಾಗುವುದು ಅವರ ಶೌರ್ಯ ಮತ್ತು ಹೋರಾಟ. ಆದರೆ, ಖಡ್ಗ ಹಿಡಿದು ಯುದ್ಧ ಮಾಡಿದಷ್ಟೇ ಉತ್ಸಾಹದಿಂದ ಅವರು ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ ಮತ್ತು ಆಡಳಿತದ ಅಭಿವೃದ್ಧಿಗೂ ಶ್ರಮಿಸಿದ್ದರು. 18ನೇ ಶತಮಾನದಲ್ಲೇ ಆಧುನಿಕ ತಂತ್ರಜ್ಞಾನದ ಮಹತ್ವವನ್ನು ಅರಿತುಕೊಂಡಿದ್ದ ಟಿಪ್ಪು ಅವರ ಹಲವು ಪ್ರಯೋಗಗಳು ಇಂದಿಗೂ ಜಗತ್ತಿನ ಗಮನ ಸೆಳೆಯುತ್ತವೆ.

ಕರ್ನಾಟಕದ ಸಮಕಾಲೀನ ಇತಿಹಾಸದಲ್ಲಿ ನವೆಂಬರ್ 10 ರಾಜಕೀಯ ಮತ್ತು ಧಾರ್ಮಿಕ ಚರ್ಚೆಗಳಿಗೆ ಕಾರಣವಾಗಿರುವ ದಿನ. ರಾಜ್ಯ ಸರ್ಕಾರ ಈ ದಿನವನ್ನು ಅಧಿಕೃತವಾಗಿ ‘ಟಿಪ್ಪು ಜಯಂತಿ’ ಎಂದು ಘೋಷಿಸಿದ ಬಳಿಕ ತೀವ್ರ ಪರ-ವಿರೋಧದ ಚರ್ಚೆಗಳು ನಡೆದಿವೆ. ರಾಜಕೀಯ ಸಂಘರ್ಷಗಳ ನಡುವೆ ಟಿಪ್ಪು ಅವರ ಐತಿಹಾಸಿಕ ಸಾಧನೆಗಳು ಚರ್ಚೆಯಿಂದ ಮರೆಯಾಗಿವೆ.

ಟಿಪ್ಪು ಅವರ ಜನ್ಮದಿನದ ದಿನಾಂಕದ ಬಗ್ಗೆಯೂ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವು ಅಧಿಕೃತ ದಾಖಲೆಗಳು ನವೆಂಬರ್ 10ನ್ನು ಉಲ್ಲೇಖಿಸಿದರೆ, ಪ್ರಮುಖ ಇತಿಹಾಸಕಾರರು ಅವರು 1750ರ ನವೆಂಬರ್ 20ರಂದು ಜನಿಸಿದ್ದಾಗಿ ದಾಖಲಿಸಿದ್ದಾರೆ. ಇನ್ನು ಕೆಲವು ಇತಿಹಾಸದ ದಾಖಲೆಗಳಲ್ಲಿ ಡಿಸೆಂಬರ್ 1 ಎಂಬ ದಿನಾಂಕವೂ ಉಲ್ಲೇಖವಾಗಿದೆ.

ಜನ್ಮದಿನದ ದಿನಾಂಕದ ವಿವಾದ ಮತ್ತು ಇಂದಿನ ರಾಜಕೀಯ ಜಟಾಪಟಿಗಳನ್ನು ಬದಿಗಿಟ್ಟು ನೋಡಿದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಟಿಪ್ಪು ಸುಲ್ತಾನ್ ಬಿಟ್ಟುಹೋದ ಹೆಜ್ಜೆಗುರುತುಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.

ಮೈಸೂರು ರಾಕೆಟ್‌ ಗಳು: ಬ್ರಿಟಿಷರಿಗೂ ಸವಾಲಾದ ತಂತ್ರಜ್ಞಾನ

ಟಿಪ್ಪು ಅವರ ತಾಂತ್ರಿಕ ದೂರದೃಷ್ಟಿಗೆ ಮೈಸೂರು ರಾಕೆಟ್‌ಗಳೇ ಪ್ರಮುಖ ಸಾಕ್ಷಿ. ಇಂದು ನಾಸಾ ಕೇಂದ್ರದ ವಾಲ್‌ಪೇಪರ್‌ ಗಳಲ್ಲೂ, ಲಂಡನ್‌ ನ ರಾಯಲ್ ಆರ್ಟಿಲರಿ ಮ್ಯೂಸಿಯಂನಲ್ಲೂ ಗುರುತಿಸಿಕೊಂಡಿರುವ ಕಬ್ಬಿಣದ ಕೊಳವೆಯ ರಾಕೆಟ್‌ ಗಳ ಮೂಲ ಮೈಸೂರು ನೆಲದಲ್ಲಿದೆ.

ಆ ಕಾಲದಲ್ಲಿ ಯುರೋಪ್‌ ನಲ್ಲಿ ಬಳಕೆಯಲ್ಲಿದ್ದ ರಾಕೆಟ್‌ ಗಳು ಕಾಗದ ಅಥವಾ ಬಿದಿರಿನ ಕವಚ ಹೊಂದಿದ್ದವು. ಆದರೆ, ಟಿಪ್ಪು ಮತ್ತು ಅವರ ತಂದೆ ಹೈದರಾಲಿ ಕಬ್ಬಿಣದ ಕೊಳವೆಯೊಳಗೆ ಮದ್ದುಗುಂಡುಗಳನ್ನು ತುಂಬಿ, ಅದಕ್ಕೆ ಬಿದಿರಿನ ಬಾಲವನ್ನು ಜೋಡಿಸಿ ರಾಕೆಟ್‌ ಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದರು. ಈ ರಾಕೆಟ್‌ಗಳು ಎರಡು ಕಿಲೋಮೀಟರ್‌ ಗೂ ಹೆಚ್ಚು ದೂರ ಚಲಿಸಿ ಗುರಿ ತಲುಪುವ ಸಾಮರ್ಥ್ಯ ಹೊಂದಿದ್ದವು.

ಬ್ರಿಟಿಷರ ವಿರುದ್ಧ ನಡೆದ ಎರಡನೇ ಮತ್ತು ಮೂರನೇ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಈ ರಾಕೆಟ್‌ ಗಳನ್ನು ಬಳಸಲಾಗಿತ್ತು. ಅವುಗಳ ದಾಳಿಯಿಂದ ಬ್ರಿಟಿಷ್ ಸೇನೆ ತೀವ್ರ ಸವಾಲು ಎದುರಿಸಿತ್ತು. 1799ರಲ್ಲಿ ಶ್ರೀರಂಗಪಟ್ಟಣ ಪತನಗೊಂಡ ಬಳಿಕ ಬ್ರಿಟಿಷ್ ಸೇನಾಧಿಕಾರಿ ವಿಲಿಯಂ ಕಾಂಗ್ರೀವ್ ಮೈಸೂರು ರಾಕೆಟ್‌ ನಮಸ್ಕಾರ ಗಳ ಬಿಡಿಭಾಗಗಳನ್ನು ಲಂಡನ್‌ ಗೆ ಕೊಂಡೊಯ್ದು ಅಧ್ಯಯನ ನಡೆಸಿದರು. ಬಳಿಕ ಇದೇ ತಂತ್ರಜ್ಞಾನವನ್ನು ಆಧರಿಸಿ ‘ಕಾಂಗ್ರೀವ್ ರಾಕೆಟ್’ಗಳನ್ನು ಅಭಿವೃದ್ಧಿಪಡಿಸಿದರು.

ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಖ್ಯಾತ ಕ್ಷಿಪಣಿ ತಜ್ಞ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ‘ವಿಂಗ್ಸ್ ಆಫ್ ಫೈರ್’ ಪುಸ್ತಕದಲ್ಲಿ ಟಿಪ್ಪು ಅವರನ್ನು ‘ವಿಶ್ವದ ಪ್ರಥಮ ಯುದ್ಧ ರಾಕೆಟ್‌ಗಳ ಪಿತಾಮಹ’ ಎಂದು ಗೌರವದಿಂದ ಉಲ್ಲೇಖಿಸಿದ್ದಾರೆ.

ರೇಷ್ಮೆ ಉದ್ಯಮದ ಬೆಳವಣಿಗೆಗೆ ಹೊಸ ದಾರಿ

ಟಿಪ್ಪು ಅವರ ದೂರದೃಷ್ಟಿ ಯುದ್ಧಭೂಮಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೂ ಅವರು ವಿಶೇಷ ಆದ್ಯತೆ ನೀಡಿದ್ದರು. ಇಂದು ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ‘ರೇಷ್ಮೆ ನಾಡು’ ಎಂದು ಗುರುತಿಸುವುದಕ್ಕೆ ಟಿಪ್ಪು ಹಾಕಿದ ಅಡಿಪಾಯವೂ ಪ್ರಮುಖ ಕಾರಣವಾಗಿದೆ.

ಚೀನಾ, ಪರ್ಷಿಯಾ ಮತ್ತು ಬಂಗಾಳದಿಂದ ಉತ್ತಮ ಗುಣಮಟ್ಟದ ರೇಷ್ಮೆ ಹುಳುಗಳು ಹಾಗೂ ಹಿಪ್ಪುನೇರಳೆ ಗಿಡಗಳನ್ನು ತರಿಸಿಕೊಂಡಿದ್ದರು. ರಾಜ್ಯದ 21ಕ್ಕೂ ಹೆಚ್ಚು ಕೇಂದ್ರಗಳಲ್ಲಿ ರೇಷ್ಮೆ ಕೃಷಿಯನ್ನು ವ್ಯವಸ್ಥಿತವಾಗಿ ವಿಸ್ತರಿಸಿದ್ದರು. ಫ್ರಾನ್ಸ್ ಮತ್ತು ಟರ್ಕಿಯಿಂದ ನುರಿತ ತಜ್ಞರನ್ನು ಕರೆಸಿ, ಮೈಸೂರಿನ ಹಳ್ಳಿಗಳಲ್ಲಿ ನೇಯ್ಗೆ ತಂತ್ರಜ್ಞಾನವನ್ನು ಪರಿಚಯಿಸಿದ್ದರು.

ಜಾಗತಿಕ ವ್ಯಾಪಾರದ ಮಹತ್ವವನ್ನು ಅರಿತಿದ್ದ ಟಿಪ್ಪು, ಮೈಸೂರಿನ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆ ಕಲ್ಪಿಸಲು ಪ್ರಯತ್ನಿಸಿದ್ದರು. ಒಮನ್, ಇರಾನ್, ತುರ್ಕಿಯೆ ಮತ್ತು ಫ್ರಾನ್ಸ್‌ ಗಳಲ್ಲಿ ಮೈಸೂರಿನ ರಾಯಭಾರ ಕಚೇರಿಗಳು ಹಾಗೂ ಅಧಿಕೃತ ವ್ಯಾಪಾರ ಮಳಿಗೆಗಳನ್ನು (ಟ್ರೇಡ್ ಎಂಬೆಸಿಗಳು) ಸ್ಥಾಪಿಸಿದ್ದರು.

ಮೈಸೂರಿನಲ್ಲೇ ವಿವಿಧ ವಸ್ತುಗಳನ್ನು ತಯಾರಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗುವ ಉದ್ದೇಶದಿಂದ ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಘಟಕಗಳು, ಗಡಿಯಾರ ತಯಾರಿಕಾ ಘಟಕಗಳು ಹಾಗೂ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿದ್ದರು.

ಲಾಲ್‌ ಬಾಗ್‌ ನಿಂದ ದರಿಯಾ ದೌಲತ್ ಬಾಗ್‌ ವರೆಗೆ ಕಲಾಪ್ರೇಮ

ಆಡಳಿತದಲ್ಲೂ ಟಿಪ್ಪು ಹಲವು ಬದಲಾವಣೆಗಳನ್ನು ತಂದಿದ್ದರು. ನಾಣ್ಯ ಪದ್ಧತಿ, ಭೂಮಾಪನ ವ್ಯವಸ್ಥೆ ಮತ್ತು ತೂಕ-ಅಳತೆಗಳಲ್ಲಿ ಏಕರೂಪತೆ ತರಲು ಹೊಸ ಕಾಲಗಣನೆ ಪದ್ಧತಿ ಹಾಗೂ ಸುಧಾರಿತ ಅಳತೆ ವಿಧಾನಗಳನ್ನು ರೂಪಿಸಿದ್ದರು.

ತೋಟಗಾರಿಕೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ತಂದೆ ಹೈದರಾಲಿ ಆರಂಭಿಸಿದ್ದ ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು. ವಿಶ್ವದ ವಿವಿಧ ಭಾಗಗಳಿಂದ ಅಪರೂಪದ ಗಿಡಮರಗಳನ್ನು ತರಿಸಿ ಉದ್ಯಾನವನ್ನು ಶ್ರೀಮಂತಗೊಳಿಸಿದರು.

ಶ್ರೀರಂಗಪಟ್ಟಣದ ‘ದರಿಯಾ ದೌಲತ್ ಬಾಗ್’ ಅರಮನೆಯಲ್ಲಿರುವ ಮೈಸೂರು ಶೈಲಿಯ ವರ್ಣಚಿತ್ರಗಳು ಮತ್ತು ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಅವರ ಕಲಾಭಿರುಚಿಗೆ ಇಂದಿಗೂ ಸಾಕ್ಷಿಯಾಗಿವೆ.

2,000ಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳ ಸಂಗ್ರಹ

ವಿಜ್ಞಾನ ಮತ್ತು ಜ್ಞಾನದ ಬಗ್ಗೆಯೂ ಟಿಪ್ಪು ಅವರಿಗೆ ವಿಶೇಷ ಆಸಕ್ತಿ ಇತ್ತು. ವೈದ್ಯಕೀಯ, ಖಗೋಳಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಿಸಿದ ಗ್ರಂಥಗಳು ಸೇರಿದಂತೆ ಸುಮಾರು 2,000ಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳನ್ನು ಹೊಂದಿದ್ದ ಬೃಹತ್ ಗ್ರಂಥಾಲಯ ಅವರ ಬಳಿಯಿತ್ತು.

1799ರಲ್ಲಿ ಶ್ರೀರಂಗಪಟ್ಟಣದ ಕೋಟೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಟಿಪ್ಪು ಸುಲ್ತಾನ್ ವೀರಮರಣವನ್ನಪ್ಪಿದರು. ಅವರ ಸಾವಿನ ಬಳಿಕ ಬ್ರಿಟಿಷರು ಲೂಟಿ ಮಾಡಿದ ವಸ್ತುಗಳಲ್ಲಿ ಅಮೂಲ್ಯ ಗ್ರಂಥಾಲಯದ ಪುಸ್ತಕಗಳು ಮತ್ತು ವೈಜ್ಞಾನಿಕ ಉಪಕರಣಗಳೂ ಸೇರಿದ್ದವು.

ವಿವಾದಗಳಾಚೆಗೂ ಚರ್ಚೆಯಾಗಬೇಕಾದ ಸಾಧನೆ

ಟಿಪ್ಪು ಸುಲ್ತಾನನ ಆಡಳಿತ ಮತ್ತು ವ್ಯಕ್ತಿತ್ವದ ಕುರಿತು ಇಂದಿಗೂ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಅವರ ಬಗ್ಗೆ ಪರ-ವಿರೋಧದ ಚರ್ಚೆಗಳು ಮುಂದುವರಿದಿವೆ. ಆದರೆ, ಈ ವಿವಾದಗಳ ಜತೆಗೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಕಲೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಅವರು ಮಾಡಿದ ಪ್ರಯತ್ನಗಳ ಬಗ್ಗೆಯೂ ಇತಿಹಾಸದ ಸಮಗ್ರ ದೃಷ್ಟಿಕೋನದಿಂದ ಚರ್ಚೆಯಾಗಬೇಕಿದೆ.

18ನೇ ಶತಮಾನದಲ್ಲೇ ಯುರೋಪಿನ ವಸಾಹತುಶಾಹಿ ಶಕ್ತಿಗಳಿಗೆ ಸವಾಲೊಡ್ಡಲು ವಿಜ್ಞಾನ, ಹೊಸ ಆವಿಷ್ಕಾರ ಮತ್ತು ಸ್ವದೇಶಿ ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಟಿಪ್ಪು ಸುಲ್ತಾನ್, ಕೇವಲ ರಣರಂಗದ ವೀರನಾಗಿ ಮಾತ್ರವಲ್ಲದೆ ತಾಂತ್ರಿಕ ದೂರದೃಷ್ಟಿಯ ಆಡಳಿತಗಾರನಾಗಿಯೂ ವಿಶ್ವ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ.

Tags

TipuSultanMysoreHistoryHistoryOfMysoreTigerOfMysoreTipuSultanLegacy
share
ವಾರ್ತಾಭಾರತಿ
ವಾರ್ತಾಭಾರತಿ
Next Story
X