ಉರಿಯೂತ ವಿರೋಧಿ ಆಹಾರ ಕ್ರಮದಿಂದ 18 ಕೆಜಿ ತೂಕ ಇಳಿಸಿದ ನಟ ಆಮಿರ್ ಖಾನ್!

(Picture Credit: X)
ಉರಿಯೂತ ವಿರೋಧಿ ಆಹಾರವೆಂದರೆ ನಿರ್ದಿಷ್ಟ ಆಹಾರವನ್ನು ಸೇವಿಸುವುದಲ್ಲ. ಬದಲಾಗಿ ಉರಿಯೂತ ತರುವಂತಹ ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸದೆ ಇರುವುದು.
ಆಮಿರ್ ಖಾನ್ ಖಾನ್ ತೂಕ ಇಳಿಸಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, 18 ಕಿಲೋಗ್ರಾಂ ತೂಕ ಇಳಿಸಿದ್ದಾಗಿ ಹೇಳಿದ್ದಾರೆ. ಅವರ ಉರಿಯೂತ ವಿರೋಧಿ (anti-inflammatory) ಆಹಾರ ಕ್ರಮವೇ ತೂಕ ಇಳಿಕೆಗೆ ಮುಖ್ಯ ಕಾರಣವಾಗಿದೆ. ಪದೇಪದೇ ಬರುವ ತಲೆನೋವಿಗೆ ಪರಿಹಾರವಾಗಿ ಈ ಆಹಾರ ಕ್ರಮವನ್ನು ಅವರು ಅಳವಡಿಸಿಕೊಂಡಿದ್ದರು. ಈ ಆಹಾರ ಕ್ರಮದಿಂದ ತಲೆನೋವಿನ ಸಮಸ್ಯೆಯೂ ಪರಿಹಾರವಾಗಿದೆ ಮತ್ತು ಅನಗತ್ಯ ತೂಕವೂ ಇಳಿದಿದೆ.
ಏನಿದು ಉರಿಯೂತ ವಿರೋಧಿ ಆಹಾರ ಕ್ರಮ?
ಉರಿಯೂತ ವಿರೋಧಿ ಆಹಾರವೆಂದರೆ ನಿರ್ದಿಷ್ಟ ಆಹಾರವನ್ನು ಸೇವಿಸುವುದಲ್ಲ. ಬದಲಾಗಿ ಉರಿಯೂತ ಉಂಟುಮಾಡುವ ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸದೆ ಇರುವುದು. ಅಂದರೆ ಪ್ಯಾಕೆಟ್ ಆಗಿ ಬರುವ ಬ್ರೆಡ್, ಸೆರೆಲ್ ಮತ್ತು ಪಾಸ್ತಾಗಳಂತಹ ವಸ್ತುಗಳನ್ನು ತೊರೆಯುವುದು. ಮುಖ್ಯವಾಗಿ ಸ್ವೀಟ್ನರ್ಗಳು (ಸಕ್ಕರೆ ಅಂಶ) ಸೇರಿಸಿರುವ ಯಾವುದೇ ಆಹಾರವನ್ನು ಬಿಟ್ಟುಬಿಡಬೇಕು ಎಂದು ಹಾರ್ವರ್ಡ್ ಆರೋಗ್ಯ ಅಧ್ಯಯನ ಹೇಳುತ್ತದೆ.
ಉರಿಯೂತ ವಿರೋಧಿ ಆಹಾರ ಕ್ರಮ ಹೇಗೆ ಕೆಲಸ ಮಾಡುತ್ತದೆ?
ತಜ್ಞರ ಪ್ರಕಾರ, ಉರಿಯೂತ ವಿರೋಧಿ ಆಹಾರ ಕ್ರಮ ದೇಹದಲ್ಲಿರುವ ದೀರ್ಘಕಾಲದ ಉರಿಯೂತವನ್ನು ಶಮನಗೊಳಿಸುತ್ತದೆ. ಇದರಲ್ಲಿ ಹಣ್ಣುಗಳು ಮತ್ತು ತರಕಾರಿಗಳು, ಇಡೀ ಧಾನ್ಯಗಳು, ಲೀನ್ ಪ್ರೊಟೀನ್ (ಕಡಿಮೆ ಕೊಬ್ಬುಳ್ಳ ಆಹಾರಗಳು) ಹಾಗೂ ಆರೋಗ್ಯಕರ ಕೊಬ್ಬುಗಳು (ಒಮೆಗಾ–3) ಸೇರಿರುತ್ತವೆ. ಸಂಸ್ಕರಿತ ಆಹಾರಗಳು, ಸಕ್ಕರೆ, ರಿಫೈನ್ಡ್ ಕೊಬ್ಬುಗಳು ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಇದರಲ್ಲಿ ಸೇವಿಸುವಂತಿಲ್ಲ. ಸಂಧಿವಾತ ಹಾಗೂ ಹೃದಯ ರೋಗಗಳ ನಿಯಂತ್ರಣಕ್ಕೆ ಅನುಸರಿಸುವ ಮೆಡಿಟರೇನಿಯನ್ ಆಹಾರ ಕ್ರಮದಂತೆಯೇ ಇದು ಇರುತ್ತದೆ.
ಉರಿಯೂತ ವಿರೋಧಿ ಆಹಾರ ಕ್ರಮ ಮತ್ತು ತೂಕ ಇಳಿಕೆ
ಉರಿಯೂತದಿಂದ ಚಯಾಪಚಯ ಕ್ರಿಯೆ ಕುಂಠಿತವಾಗಬಹುದು. ಇದರಿಂದ ಮುಖ್ಯವಾಗಿ ಹೊಟ್ಟೆ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ. ಉರಿಯೂತ ಕಡಿಮೆಯಾದಾಗ ಇನ್ಸುಲಿನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದಲ್ಲಿನ ಕೊಬ್ಬು ಪರಿಣಾಮಕಾರಿಯಾಗಿ ಕರಗುತ್ತದೆ. ಆಹಾರದಲ್ಲಿ ಪೌಷ್ಠಿಕಾಂಶಗಳು ಸಮೃದ್ಧವಾಗಿರುವುದರಿಂದ ಅತಿಯಾಗಿ ತಿನ್ನುವ ಅಗತ್ಯವಿರುವುದಿಲ್ಲ. ನಿರಂತರವಾಗಿ ಆಹಾರ ಕ್ರಮವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಕಾಲಕ್ರಮೇಣ ಉತ್ತಮ ಫಲಿತಾಂಶ ದೊರೆಯುತ್ತದೆ.
ಮೈಗ್ರೇನ್ ಕಡಿಮೆ ಮಾಡಲು ಹೇಗೆ ಸಹಕಾರಿಯಾಗುತ್ತದೆ?
ಮೈಗ್ರೇನ್ ನೋವಿಗೆ ಸಾಮಾನ್ಯ ಪ್ರಚೋದಕವಾಗಿರುವ ದೇಹ ಮತ್ತು ಮೆದುಳಿನ ಉರಿಯೂತವನ್ನು ಈ ಆಹಾರ ಕ್ರಮ ಶಮನಗೊಳಿಸುತ್ತದೆ. ಒಮೆಗಾ–3 ಕೊಬ್ಬುಗಳು (ವಾಲ್ನಟ್, ಫ್ಲ್ಯಾಕ್ಸ್, ಮೀನು) ಮತ್ತು ಆಂಟಿ ಆಕ್ಸಿಡೆಂಟ್ಗಳು ಸಿಜಿಆರ್ಪಿ (Calcitonin Gene-Related Peptide) ಮತ್ತು ನರಮಂಡಲದ ಉರಿಯೂತವನ್ನು ಕಡಿಮೆಗೊಳಿಸುತ್ತವೆ. ಉರಿಯೂತ ವಿರೋಧಿ ಆಹಾರ ಕ್ರಮದಲ್ಲಿ ಪ್ರೊಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳ ಪ್ರಮಾಣ ಹೆಚ್ಚಿರುತ್ತದೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸ್ಥಿರವಾಗಿಡುತ್ತದೆ ಮತ್ತು ಮೈಗ್ರೇನ್ ಹೆಚ್ಚಾಗುವುದನ್ನು ತಡೆಯುತ್ತದೆ.
ಉರಿಯೂತ ವಿರೋಧಿ ಆಹಾರ ಕರುಳಿಗೆ ಹೇಗೆ ಸಹಕಾರಿ?
ಹಣ್ಣುಗಳು, ತರಕಾರಿಗಳು, ಕಡಲೆಗಳು, ಬೀಜಗಳು, ಇಡೀ ಧಾನ್ಯಗಳು ಮತ್ತು ಕೊಬ್ಬುಳ್ಳ ಮೀನುಗಳು ಉರಿಯೂತ ಕಡಿಮೆ ಮಾಡುವ ಆಂಟಿ ಆಕ್ಸಿಡೆಂಟ್ಗಳು ಹಾಗೂ ಒಮೆಗಾ–3 ಕೊಬ್ಬುಗಳನ್ನು ಒದಗಿಸುತ್ತವೆ. ಇವು ಉರಿಯೂತವನ್ನು ಕಡಿಮೆ ಮಾಡಿ ಆರೋಗ್ಯಕರ ರಕ್ತನಾಳಗಳಿಗೆ ಬೆಂಬಲ ನೀಡುತ್ತವೆ. ಇದರ ಪರಿಣಾಮವಾಗಿ ಮೆದುಳಿಗೆ ರಕ್ತ ಹರಿವಿನಲ್ಲಿ ಸುಧಾರಣೆ ಕಂಡುಬರುತ್ತದೆ ಮತ್ತು ನರದ ಉರಿ ಕಡಿಮೆಯಾಗುತ್ತದೆ.
ಸಂಸ್ಕರಿತ ಆಹಾರ, ಸಕ್ಕರೆ, ಕರಿದ ವಸ್ತುಗಳು, ಮದ್ಯಪಾನ ಹಾಗೂ ಕೃತಕ ಅಡಿಟಿವ್ಗಳ ಸೇವನೆಯನ್ನು ಕಡಿಮೆ ಮಾಡಿದರೆ ಉರಿಯೂತ ಶಮನಗೊಳ್ಳುತ್ತದೆ. ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತವಾಗಿ ಸಮತೋಲಿತ ಆಹಾರ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸ್ಥಿರವಾಗಿರುತ್ತದೆ. ಇದರಿಂದ ಮೈಗ್ರೇನ್ ಶಮನಕ್ಕೆ ಸಹಕಾರಿಯಾಗುತ್ತದೆ.
ಉರಿಯೂತ ವಿರೋಧಿ ಆಹಾರ ಕ್ರಮ
ಯಾವುದೇ ಆಹಾರ ಕ್ರಮವನ್ನು ಆರೋಗ್ಯ ತಜ್ಞರ ಸಲಹೆಯೊಂದಿಗೆ ಆರಂಭಿಸುವುದು ಸೂಕ್ತ. ಇಲ್ಲಿ ಕೆಲವು ಉರಿಯೂತ ವಿರೋಧಿ ಆಹಾರದ ವಿವರಗಳಿವೆ.







