Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಗ್ನಿವೀರ್ ಯೋಜನೆ : ಮಾಜಿ ಸೇನಾ...

ಅಗ್ನಿವೀರ್ ಯೋಜನೆ : ಮಾಜಿ ಸೇನಾ ಮುಖ್ಯಸ್ಥರ ಪುಸ್ತಕದ ಬಗ್ಗೆ ಸರಕಾರಕ್ಕೆ ಭಯವೇಕೆ ?

ಎಂ.ಎಂ ನರವಣೆ ಅವರ ಪುಸ್ತಕದಲ್ಲಿ ಇರುವ ಕಹಿ ಸತ್ಯವೇನು ? ► ಸೇನೆಯನ್ನು ಕತ್ತಲಲ್ಲಿಟ್ಟು ಯೋಜನೆಗಳನ್ನು ರೂಪಿಸಲಾಗಿತ್ತೇ ?

ಆರ್. ಜೀವಿಆರ್. ಜೀವಿ22 Dec 2023 4:29 PM IST
share
ಅಗ್ನಿವೀರ್ ಯೋಜನೆ : ಮಾಜಿ ಸೇನಾ ಮುಖ್ಯಸ್ಥರ ಪುಸ್ತಕದ ಬಗ್ಗೆ ಸರಕಾರಕ್ಕೆ ಭಯವೇಕೆ ?

ಸತ್ಯವೇನೆಂದು ಹೇಳುವಂತೆ ಒತ್ತಾಯಿಸಿದ ಪ್ರತಿಪಕ್ಷ ಸಂಸದರನ್ನು ದಾಖಲೆ ಸಂಖ್ಯೆಯಲ್ಲಿ ಅಮಾನತು ಮಾಡಲಾಗಿದೆ. ಆದರೆ, ಅದರ ನಡುವೆಯೇ ಮತ್ತೊಂದು ವಿದ್ಯಮಾನ ಸರ್ಕಾರವನ್ನು ಬೆಚ್ಚಿಬೀಳಿಸಿದ ಹಾಗಿದೆ. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎಂ ಎಂ ನರವಣೆ ಅವರು ಬರೆದಿರುವ ಪುಸ್ತಕದಲ್ಲಿ ಸರ್ಕಾರದ ಅಗ್ನಿಪಥ್ ಯೋಜನೆ ಬಗ್ಗೆ ಹಲವು ಕಹಿ ಸತ್ಯಗಳಿವೆ ಎಂಬುದು ಬಹಿರಂಗಗೊಂಡಿದೆ.

ಮುಂದಿನ ತಿಂಗಳು ಪ್ರಕಟವಾಗಬೇಕಿರುವ ಈ ಪುಸ್ತಕದಲ್ಲಿನ ಅಗ್ನಿವೀರ್ ಯೋಜನೆ ವಿಚಾರ ಪ್ರಸ್ತಾಪದ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬಂದಿದ್ದು, ಸರ್ಕಾರ ದಿಗಿಲುಗೊಳ್ಳಲು ಅದು ಕಾರಣವಾದಂತಿದೆ. ಅಗ್ನಿವೀರ್ ವಿಚಾರವಾಗಿ ಸೇನೆಯ ಮಾಜಿ ಮುಖ್ಯಸ್ಥರು ಹೇಳುವ ಕೆಲ ಸತ್ಯಗಳು ಸರ್ಕಾರಕ್ಕೆ ಅಪಥ್ಯವಾಗುವ ಹಿನ್ನೆಲೆಯಲ್ಲಿ, ಈಗ ಆ ಪುಸ್ತಕ ಪ್ರಕಟಣೆಗೆ ಸರ್ಕಾರ ಅನುಮತಿ ಕೊಡುತ್ತದೆಯೆ ಇಲ್ಲವೆ ಎಂಬ ಅನುಮಾನ ಎದ್ದಿದೆ.

ಈ ಪುಸ್ತಕದ ಕುರಿತು ಎರಡು ಮೂರು ದಿನಗಳಿಂದ ಸುದ್ದಿ ಪ್ರಕಟವಾಗುತ್ತಿದ್ದು, ಚರ್ಚೆಗಳೂ ನಡೆಯುತ್ತಿವೆ.ಹೀಗಾಗಿ ಪುಸ್ತಕ ಪ್ರಕಟಿಸಲು ಅವಕಾಶ ನೀಡಿಲ್ಲ ಎಂಬ ಸುದ್ದಿಯೂ ಕೇಳಿಬಂದಿದೆ. ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಹೆಸರಿನ ಪುಸ್ತಕದ ಕವರ್ ಪೇಜ್ ಕೂಡ ಸಿದ್ಧವಾಗಿದೆ.

ಹಾಗಾದರೆ ಈಗ ಪುಸ್ತಕ ಪ್ರಕಟಣೆಗೆ ಸರ್ಕಾರ ಅಡ್ಡಗಾಲು ಹಾಕುತ್ತದೆಯೆ?. ಪುಸ್ತಕ ಪ್ರಕಟಿಸಲು ಅವಕಾಶ ನೀಡಿಲ್ಲ ಎಂದಾದರೆ ಅದು ಮಾಮೂಲಿ ವಿಚಾರವಲ್ಲ.

ಒಂದೆಡೆ ಪ್ರತಿಪಕ್ಷ ಸಂಸದರನ್ನೆಲ್ಲ ಅಮಾನತು ಮಾಡಿ ಸಂಸತ್ತಿನಿಂದ ಹೊರಹಾಕಲಾಗಿದೆ. ಇನ್ನೊಂದೆಡೆ ಭಾರತದ ಸೇನೆಯ ಮಾಜಿ ಮುಖ್ಯಸ್ಥರು ತಮ್ಮ ಪುಸ್ತಕ ಪ್ರಕಟಣೆಗೆ ಅನುಮತಿಗಾಗಿ ಕಾಯಬೇಕಾಗಿದೆ. ಅಗ್ನಿವೀರ್ ಯೋಜನೆ ವಿಚಾರವಾಗಿ ನರವಣೆ ಅವರ ಪುಸ್ತಕದಲ್ಲಿ ಇರುವ ಸತ್ಯವೇನು ಹಾಗಾದರೆ?

2022ರ ಜೂನ್ ನಲ್ಲಿ ಅಗ್ನಿಪಥ್ ಯೋಜನೆ ಜಾರಿಯಾಗಿದೆ. ಈ ಯೋಜನೆಯಡಿ ದೇಶದ ಯುವಜನತೆಯನ್ನು ನಾಲ್ಕು ವರ್ಷಗಳ ಅವಧಿಗಾಗಿ ಸೇನೆಯಲ್ಲಿ ನೇಮಿಸಿಕೊಳ್ಳಲಾಗುತ್ತದೆ. 30 ಸಾವಿರ ರೂ. ಆರಂಭಿಕ ವೇತನ. ನಾಲ್ಕು ವರ್ಷಗಳ ನಂತರ ಶೇ.25ರಷ್ಟು ಸಿಬ್ಬಂದಿಯನ್ನು ಸಾಮಾನ್ಯ ಕೇಡರ್‌ಗೆ ಉಳಿಸಿಕೊಂಡು, ಉಳಿದ ಶೇ.75ರಷ್ಟು ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ.

ಆದರೆ ಈ ಯೋಜನೆ ರೂಪುಗೊಳ್ಳುವಾಗಿನ ಕಥೆಯನ್ನು ನರವಣೆ ತಮ್ಮ ಪುಸ್ತಕದಲ್ಲಿ ಬಿಚ್ಚಿಟ್ಟಿರುವುದು ವರದಿಗಳ ಮೂಲಕ ಬಹಿರಂಗವಾಗಿದೆ.

ಅದರ ಪ್ರಕಾರ, ಹೊಸದಾಗಿ ಸೇರ್ಪಡೆಯಾದವರಿಗೆ ನಿಗದಿಯಾಗಿದ್ದ ಮೊದಲ ವರ್ಷದ ಆರಂಭಿಕ ವೇತನ ತಿಂಗಳಿಗೆ ಕೇವಲ 20 ಸಾವಿರ.

ಅದು ಒಪ್ಪಿಕೊಳ್ಳುವಂಥದ್ದೇ ಆಗಿರಲಿಲ್ಲ ಎಂದು ನರವಣೆ ಬರೆದಿರುವುದಾಗಿ ವರದಿಗಳು ಹೇಳುತ್ತಿವೆ.

ಒಬ್ಬ ತರಬೇತಿ ಪಡೆದ ಸೈನಿಕನನ್ನು, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡುವಂಥ ಸ್ಥಿತಿಗೆ ಮುಂದಾಗುವ ಸೈನಿಕನನ್ನು ಇಷ್ಟು ಕಡಿಮೆ ಸಂಬಳಕ್ಕೆ ದುಡಿಯಲಿ ಎಂದು ನಿರೀಕ್ಷಿಸುವುದು ಹೇಗೆಂಬ ಪ್ರಶ್ನೆ ಎದ್ದಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಸೇನೆ ಇದನ್ನು ತೀವ್ರವಾಗಿ ವಿರೋಧಿಸಿದ ಮೇಲೆ ವೇತನವನ್ನು 30 ಸಾವಿರಕ್ಕೆ ಹೆಚ್ಚಿಸಲಾಯಿತು ಎಂದು ನರವಣೆ ಪುಸ್ತಕದಲ್ಲಿ ಬರೆದಿದ್ಧಾರೆ ಎನ್ನಲಾಗಿದೆ.

ಯೋಜನೆಯಡಿ ಸಿಬ್ಬಂದಿಗೆ ಮೊದಲ ವರ್ಷ 30,000

ಎರಡನೇ ವರ್ಷ 33,000

ಮೂರನೇ ವರ್ಷ 36,500

ಮತ್ತು ನಾಲ್ಕನೇ ವರ್ಷದಲ್ಲಿ 40,000 ರೂ. ಎಂದು ನಿಗದಿಯಾಯಿತು.

ಈ ಯೋಜನೆ ಬಗ್ಗೆ ರಾಷ್ಟ್ರದಾದ್ಯಂತ ಭಾರೀ ಪ್ರತಿಭಟನೆಗಳು ನಡೆದವೆಂಬುದನ್ನೂ ನೋಡಿದ್ದೇವೆ.

ಏಕೆಂದರೆ ಈ ಅಲ್ಪಾವಧಿಯ ಸೇವೆಯ ನಂತರ ತಮ್ಮ ಪಾಡೇನು ಎಂಬುದು ಸೇನೆಗೆ ಸೇರಬಯಸುವ ಯುವಕರ ಮುಂದೆ ದೊಡ್ಡ ಪ್ರಶ್ನೆಯಾಗಿತ್ತು.

ಈ ಯೋಜನೆ ಸೇನಾ ಮುಖ್ಯಸ್ಥರುಗಳಿಗೇ ಅನಿರೀಕ್ಷಿತವಾದುದಾಗಿತ್ತು. ಮೂರೂ ಪಡೆಗಳು ಅಚ್ಚರಿಪಡುವ ಹಾಗಾಯಿತು ಎಂದು ನರವಣೆ ಬರೆದಿದ್ದಾರೆ.

ನೌಕಾಪಡೆ ಮತ್ತು ವಾಯುಪಡೆಗಳಿಗಂತೂ ಸಂಪೂರ್ಣ ಅನಿರೀಕ್ಷಿತವಾದುದಾಗಿತ್ತು ಎಂಬುದನ್ನು ನರವಣೆ ಪ್ರಸ್ತಾಪಿಸಿದ್ದಾರೆ. ಸೇನೆಗೆ ಸೇರಿದವರನ್ನು ಅಲ್ಪಾವಧಿಯಲ್ಲೇ ಕೆಲಸವಿಲ್ಲದವರನ್ನಾಗಿ ಮಾಡುವುದು ಬಹಳ ಯೋಚಿಸಬೇಕಿದ್ದ ವಿಚಾರವಾಗಿತ್ತು. ಅದಕ್ಕಾಗಿ ಶೇ.75ರಷ್ಟು ಸಿಬ್ಬಂದಿಯನ್ನು ಉಳಿಸಿಕೊಳ್ಳಬೇಕು ಎಂಬುದು ಸೇನೆಯ ಒತ್ತಾಯವಾಗಿತ್ತು. ಆದರೆ ಮಿಲಿಟರಿ ವ್ಯವಹಾರಗಳ ಇಲಾಖೆ ಶೇ.50-50 ಎಂಬ ಸೂತ್ರಕ್ಕೆ ಮತ್ತು ಐದು ವರ್ಷಗಳ ಅವಧಿಗೆ ಒಪ್ಪಿತು. ಇದು ಮೊದಲು ಸಲ್ಲಿಸಲಾದ ಮಾದರಿಯಾಗಿತ್ತು.

ಪ್ರಧಾನಿ, ಗೃಹಮಂತ್ರಿ, ರಕ್ಷಣಾ ಮಂತ್ರಿ, ಹಣಕಾಸು ಸಚಿವರು, ಎನ್‌ ಎಸ್‌ ಎ, ಸೇವಾ ಮುಖ್ಯಸ್ಥರನ್ನು ಒಳಗೊಂಡಿದ್ದ ಸಮಿತಿಯೆದುರು

2020ರ ನವೆಂಬರ್ನಲ್ಲಿ ಇದನ್ನು ಇಡಲಾಯಿತು. ಈ ಸಭೆಯಲ್ಲಿಯೇ ಮೊದಲ ಬಾರಿಗೆ ಅಗ್ನಿಪಥ್' ಮತ್ತು ಅಗ್ನಿವೀರ್ ಪದಗಳನ್ನು ಬಳಸಲಾಯಿತು. ಪ್ರತಿ ವರ್ಷ 50,000 ಸೈನಿಕರನ್ನು ನೇಮಿಸಿಕೊಂಡರೆ, ನಿಗದಿತ ಅವಧಿಯ ಬಳಿಕ 25,000 ಸೈನಿಕರು ವಾಪಸ್ ಆಗುತ್ತಾರೆ ಎಂದುಕೊಳ್ಳಲಾಗಿತ್ತು.

ನೇಮಕ ಪ್ರಕ್ರಿಯೆ ಎರಡು ಹಂತದಲ್ಲಿ ನಡೆದರೆ, ಮೂರು ವರ್ಷಗಳ ನಂತರ ಶೇ.50 ಮತ್ತು ಐದು ವರ್ಷಗಳ ನಂತರ .ಶೇ.25 ಎಂಬುದು ಪ್ರಧಾನಿ ಕಚೇರಿಯ ಯೋಚನೆಯಾಗಿತ್ತು. ಆದರೆ ಆರರಿಂದ ಎಂಟು ತಿಂಗಳುಗಳು ಮೂಲಭೂತ ತರಬೇತಿ ಮತ್ತು ನಿಯೋಜನೆಗೇ ಹೋಗುವುದರಿಂದ ಅದು ಪ್ರಾಕ್ಟಿಕಲ್ ಆಗಿರಲಿಲ್ಲ ಎಂದು ನರವಣೆ ಬರೆಯುತ್ತಾರೆ.

ಅಲ್ಲದೆ ಬಿಡುಗಡೆ ಮಾಡಬೇಕಿರುವ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆಗೆ ಮತ್ತೆ ಸುಮಾರು ಆರು ತಿಂಗಳು ಹಿಡಿಯುತ್ತದೆ. ಸ್ವಲ್ಪ ಕಾಲದ ಚರ್ಚೆ ಬಳಿಕ ಅಂತಿಮವಾಗಿ, ನಾಲ್ಕು ವರ್ಷಗಳ ಸೇವೆ, ಒಂದೇ ಹಂತದ ನೇಮಕ ಸೂತ್ರವನ್ನು ಒಪ್ಪಲಾಯಿತು ಎಂದು ನರವಣೆ ಬರೆಯುತ್ತಾರೆ.

ಈಗ, ಸರ್ಕಾರಕ್ಕೆ ತಲೆನೋವಾಗಿರುವುದು ಇದೇ ವಿಚಾರ. ಸೇನೆಗೆ ಧೋಖಾ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಸೇನೆಯ ಮೂರೂ ಪಡೆಗಳಿಗೆ ಇದು ಅಚ್ಚರಿಯ ವಿಷಯವಾಗಿತ್ತು. ಸೇನೆಯನ್ನು ಕತ್ತಲಲ್ಲಿಟ್ಟು ಯೋಜನೆ ರೂಪಿಸಲಾಯಿತು.

ಅತ್ಯಂತ ಕಡಿಮೆ ಸಂಬಳಕ್ಕೆ ಯೋಧರನ್ನು ನೇಮಿಸಿಕೊಳ್ಳುವ ಪ್ರಸ್ತಾಪವಿತ್ತು. ಸೇನೆಯ ಬಗ್ಗೆ ಯೋಧರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಯಾವ ಮಟ್ಟದ್ದು ಎಂಬುದು ಇದರಿಂದ ಅರ್ಥವಾಗುತ್ತದೆ. ಹೇಳುವಾಗ ಮಾತ್ರ ದೇಶಕ್ಕಾಗಿ ಯೋಧರಿಗಾಗಿ ಈ ಸರ್ಕಾರ ಎಷ್ಟೆಲ್ಲ ಚಿಂತೆ ಮಾಡುತ್ತದೆಯಲ್ಲವೆ ಎಂದುಕೊಳ್ಳುವ ಹಾಗಿರುತ್ತದೆ. ಆದರೆ ವಾಸ್ತವವೇ ಬೇರೆ.

ಇಂಥದೊಂದು ನಿರ್ಧಾರ ಎಲ್ಲಿ ರೂಪುಗೊಂಡಿತು ಎಂಬುದೇ ಅರ್ಥವಾಗದ ಹಾಗಿತ್ತು. ಮೂರೂ ಪಡೆಗಳ ವಿರೋಧ ವ್ಯಕ್ತವಾಯಿತು. ಅದೊಂದು ರಾಜಕೀಯ ನಿರ್ಧಾರ ಎಂಬುದು ಸ್ಪಷ್ಟವಿತ್ತು.

ಏನೆಂದು ಯೋಚಿಸಿ ಈ ಯೋಜನೆ ತರಲಾಯಿತು?. ಸರಿಯಾಗಿ ಯೋಚಿಸದೆ ಇದರ ಜಾರಿ ಸರಿಯಲ್ಲ ಎಂದು ತಕರಾರೆತ್ತಿದ ಸೇನಾ ಆಧಿಖಾರಿಗಳನ್ನೆಲ್ಲ ಟಾರ್ಗೆಟ್ ಮಾಡಲಾಯಿತು ಎಂಬುದನ್ನೂ ಕೆಲವರು ಹೇಳಿಕೊಂಡಿದ್ದಾರೆ.

ಹಳ್ಳಿಯ ಯುವಕರ ಪಾಲಿಗೆ ದೊಡ್ಡ ಅನ್ಯಾಯ ಮಾಡುವ ಯೋಜನೆ ಇದಾಗಿತ್ತು.

ರಾಜಕೀಯ ಪ್ರೇರಿತವಾಗಿದ್ದ ಈ ಯೋಜನೆ, ಸರ್ಕಾರ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಉದ್ಯೋಗದ ಭರವಸೆ ಈಡೇರಿಸುವುದಕ್ಕೆ ಮಾಡಿದ ಯೋಜನೆ ಯಾಗಿತ್ತು. ಸೇನಾಪಡೆಯೊಳಗೆ ನಿರುದ್ಯೋಗಿ ಯುವಕರಿಗೆ ಜಾಗ ಕೊಟ್ಟು ಉದ್ಯೋಗದ ಭರವಸೆ ಈಡೇರಿಸಿದೆವೆಂದು ಹೇಳಿಕೊಳ್ಳುವ ಉದ್ದೇಶದ್ದಾಗಿತ್ತು ಎಂದು ಕರ್ನಲ್ ಅಮಿತ್ ಕುಮಾರ್ ಹೇಳಿದ್ದಾರೆ.

ಅವರೇ ಹೇಳುವಂತೆ, ಸರ್ಕಾರದ ಪ್ರಚಾರಕ್ಕೆ ಸೇನೆ ಹೇಗೆ ಬಳಕೆಯಾಗುತ್ತದೆ, ಮಾಧ್ಯಮ ಹೇಗೆ ಸರ್ಕಾರದ ವಕ್ತಾರನ ರೀತಿಯಲ್ಲಿ ಮಾತನಾಡುತ್ತದೆ , ಸರ್ಕಾರದ ವಿರುದ್ಧ ಮಾತನಾಡಿದರೆ ಹೇಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ ಎಂಬುದೆಲ್ಲವೂ ರಹಸ್ಯವಾಗಿಲ್ಲ. ಚೀನಾ ದಾಳಿಗೆ ಸಂಬಂಧಿಸಿದ ವಿಚಾರವೂ ನರವಣೆ ಪುಸ್ತಕದಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗಿದೆ.

ಗಡಿಯಲ್ಲಿ ಚೀನಾ ಸೇನೆ ಬಂದು ಆತಂಕದ ಸ್ಥಿತಿ ತಲೆದೋರಿದಾಗ ರಕ್ಚಣಾ ಸಚಿವರಿಗೆ ನರವಣೆ ಕೇಳಿದ್ದಕ್ಕೆ, ಅದು ಪೂರ್ತಿಯಾಗಿ ಸೇನೆಯ ನಿರ್ಧಾರಕ್ಕೆ ಬಿಟ್ಟ ವಿಚಾರ. ಯಾವುದು ಸರಿ ಕಾಣುತ್ತದೊ ಹಾಗೆ ಮಾಡಿ ಎಂಬ ಮಾತು ಅವರ ಕಡೆಯಿಂದ ಬಂದುದರ ಬಗ್ಗೆ ನರವಣೆ ಬರೆದಿದ್ದಾರೆ. ಅತ್ಯಂತ ವಿವಾದಿತ ಸನ್ನಿವೇಶದಲ್ಲಿ ಇಂಥದೊಂದು ಸ್ವಾತಂತ್ರ್ಯ ನೀಡುವ ಮೂಲಕ ಎಲ್ಲದಕ್ಕೂ ನರವಣೆ ಅವರನ್ನೇ ಹೊಣೆ ಮಾಡುವ ಉದ್ದೇಶವಾಗಿತ್ತೆ?

ನಾವು ಎಲ್ಲದಕ್ಕೂ ಸಿದ್ಧರಿದ್ದೆವು. ಆದರೆ ನಿಜವಾಗಿಯೂ ನಾನು ಯುದ್ಧ ಆರಂಭಿಸಬಹುದಿತ್ತೆ? ಎಂದು ನರವಣೆ ಅವರು ಪುಸ್ತಕದಲ್ಲಿ ಪ್ರಶ್ನೆಯೆತ್ತಿದ್ಧಾರೆ. ಅಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ಯುದ್ಧದ ಕುರಿತ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸೇನಾ ಅಧ್ಯಕ್ಷರಿಗೆ ಬಿಟ್ಟಿದ್ದು ಹೇಗೆ?

ದೇಶದ ನಾಯಕರು ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿತ್ತಲ್ಲವೆ?. ಇಂಥ ವಿಚಾರಗಳಿರುವ ನರವಣೆಯವರ ಪುಸ್ತಕ ಈಗ ಪ್ರಕಟವಾಗುತ್ತದೆಯೆ ಇಲ್ಲವೆ?. ಪ್ರಕಟವಾದರೂ, ಸರ್ಕಾರಕ್ಕೆ ಅಪಥ್ಯವಾಗಬಹುದಾದ ಆ ಎಲ್ಲ ವಿಚಾರಗಳನ್ನು ತೆಗೆದುಹಾಕಲಾಗುತ್ತದೆಯೆ?

ಮಡಿಲ ಮೀಡಿಯಾಗಳು ಈ ಸವಾಲನ್ನು ಎತ್ತುವುದೇ ಇಲ್ಲ. ಪುಸ್ತಕ ಪ್ರಕಟಣೆಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂಬ ವರದಿಗಳಿವೆ.

ಚುನಾವಣೆ ಎದುರಿಗಿರುವಾಗ, ಅಗ್ನಿವೀರ್ ಯೋಜನೆಯ ನಿಜವೇನು ಎಂಬ ಸತ್ಯ ಬಯಲಿಗೆ ಬರಲು ಸರ್ಕಾರ ಬಿಡುತ್ತಿಲ್ಲ. ಜನವರಿಯಲ್ಲಿ ದೇಶದಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತದೆ. ಆ ಬಳಿಕ ನರವಣೆ ಪುಸ್ತಕದಲ್ಲಿ ಏನಿದೆ ಎಂದು ನೋಡುವವರೂ ಇರುವುದಿಲ್ಲ. ಅದರ ಬಗ್ಗೆ ಸುದ್ದಿಯಾದರೂ ಯಾರಿಗೂ ಅದು ಮುಖ್ಯವಾಗುವುದೇ ಇಲ್ಲ.ಮತ್ತೊಂದು ಸತ್ಯ ಹೀಗೆ ಹೂತುಹೋಗಲಿದೆಯೆ?

share
ಆರ್. ಜೀವಿ
ಆರ್. ಜೀವಿ
Next Story
X