Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಹುಕೋಟಿ ಅಗ್ರಿಗೋಲ್ಡ್ ವಂಚನೆ ಪ್ರಕರಣ |...

ಬಹುಕೋಟಿ ಅಗ್ರಿಗೋಲ್ಡ್ ವಂಚನೆ ಪ್ರಕರಣ | ಹೂಡಿಕೆದಾರರ ದಾಖಲೆ ಪರಿಶೀಲನೆ ಶುರು; ಯಾವೆಲ್ಲ ದಾಖಲೆಗಳು ಕಡ್ಡಾಯ?

ವಾರ್ತಾಭಾರತಿವಾರ್ತಾಭಾರತಿ29 Oct 2026 9:25 PM IST
share
ಬಹುಕೋಟಿ ಅಗ್ರಿಗೋಲ್ಡ್ ವಂಚನೆ ಪ್ರಕರಣ | ಹೂಡಿಕೆದಾರರ ದಾಖಲೆ ಪರಿಶೀಲನೆ ಶುರು; ಯಾವೆಲ್ಲ ದಾಖಲೆಗಳು ಕಡ್ಡಾಯ?

ಬಹುಕೋಟಿ ರೂಪಾಯಿ ಅಗ್ರಿಗೋಲ್ಡ್ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಂಧ್ರಪ್ರದೇಶ CID ಅಧಿಕಾರಿಗಳು ಉಡುಪಿಯ ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ವಿಶೇಷ ಪರಿಶೀಲನಾ ಕೇಂದ್ರಗಳನ್ನು ತೆರೆದು ಸಂತ್ರಸ್ತರ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೂಡಿಕೆದಾರರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ನಿಗದಿತ ಟೋಕನ್ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರು ಒಂದೇ ಬಾರಿಗೆ ಸ್ಥಳಕ್ಕೆ ಆಗಮಿಸಿದ್ದರಿಂದ ಕಚೇರಿ ಆವರಣದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು.

ವಿಜಯವಾಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಸಂಸ್ಥೆಯು ಕರ್ನಾಟಕದಲ್ಲೇ ಬರೋಬ್ಬರಿ 56 ಶಾಖೆಗಳನ್ನು ತೆರೆದಿತ್ತು. ಸ್ಥಳೀಯ ಸಿಬ್ಬಂದಿ ಹಾಗೂ ಏಜೆಂಟರ ಬೃಹತ್ ಜಾಲವನ್ನು ಬಳಸಿಕೊಂಡು, ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸುವುದು, ಹೆಚ್ಚಿನ ಬಡ್ಡಿ ನೀಡುವುದು ಹಾಗೂ ನಿವೇಶನಗಳನ್ನು ಕೊಡಿಸುವುದಾಗಿ ಆಕರ್ಷಕ ಭರವಸೆಗಳನ್ನು ನೀಡಿ ಜನರನ್ನು ನಂಬಿಸಲಾಗಿತ್ತು.

ಈ ಆಸೆ-ಆಮಿಷಗಳಿಗೆ ಒಳಗಾದ ಕರ್ನಾಟಕದ ಒಟ್ಟು 8,41,616 ಹೂಡಿಕೆದಾರರಿಂದ ಕಂಪೆನಿಯು ಅಂದಾಜು 1,639.63 ಕೋಟಿ ರೂ.ಗೂ ಅಧಿಕ ಹಣವನ್ನು ಸಂಗ್ರಹಿಸಿ, ಕೊನೆಗೆ ಹಿಂತಿರುಗಿಸದೆ ಬೃಹತ್ ವಂಚನೆ ಎಸಗಿದೆ. ಸಂತ್ರಸ್ತರು ತಮ್ಮ ಹಣ ವಾಪಸ್ ಪಡೆಯಲು ಹಾಗೂ ನ್ಯಾಯಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ.

ಹಣ ಸಿಗಲಿದೆ ಎಂಬ ಮಾಹಿತಿ ಬಾಯಿಮಾತಿನಲ್ಲಿ ಹರಡುತ್ತಿದ್ದಂತೆ ನೂರಾರು ಹೂಡಿಕೆದಾರರು ಅಕ್ಟೋಬರ್ 28ರಂದು (ಬುಧವಾರ) ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಆಗಮಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು, ಪರಿಸ್ಥಿತಿ ಹಾಗೂ ಅಸಲಿ ಸಂಗತಿಯನ್ನು ಹೂಡಿಕೆದಾರರಿಗೆ ವಿವರಿಸಿ ತಿಳಿಹೇಳಿದರು. ಬಳಿಕ ಹಲವರು ವಾಪಸ್ ತೆರಳಿದರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ಹಾಗೂ ಉಡುಪಿ ಜಿಲ್ಲೆಯ ಶಿರೂರು, ಬೈಂದೂರು, ಕುಂದಾಪುರ ಮತ್ತು ಕೊಲ್ಲೂರು ಸೇರಿದಂತೆ ದೂರದೂರುಗಳಿಂದ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಮತ್ತು ಮಹಿಳೆಯರು ಆಗಮಿಸಿದ್ದರು.

ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಹೂಡಿಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ ಅಗ್ರಿಗೋಲ್ಡ್ ಹೂಡಿಕೆ ಯೋಜನೆ ಕುಸಿದು ಬಿದ್ದು ದಶಕವೇ ಕಳೆದಿದೆ. ಇದೀಗ ಆಂಧ್ರಪ್ರದೇಶ ಸರಕಾರವು ಕರ್ನಾಟಕ CID ಸಹಯೋಗದೊಂದಿಗೆ ಆರಂಭಿಸಿರುವ ಹೊಸ ದಾಖಲೆ ಪರಿಶೀಲನಾ ಅಭಿಯಾನವು, ತಮ್ಮ ಕಷ್ಟದ ಗಳಿಕೆಯನ್ನು ಕಳೆದುಕೊಂಡು ಕಾಯುತ್ತಿದ್ದ ಸಂತ್ರಸ್ತರ ಮನದಲ್ಲಿ ಹಣ ವಾಪಸ್ ಸಿಗುವ ಹೊಸ ಭರವಸೆಯನ್ನು ಮೂಡಿಸಿದೆ.

ಕರ್ನಾಟಕದಾದ್ಯಂತ ಇರುವ ಹೂಡಿಕೆದಾರರು ಮತ್ತು ಏಜೆಂಟರ ಬಳಿ ಇರುವ ಮೂಲ ಅಗ್ರಿಗೋಲ್ಡ್ ಬಾಂಡ್ ಗಳು ಹಾಗೂ ರಸೀದಿಗಳ ನೈಜತೆಯನ್ನು ಪರಿಶೀಲಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕ್ಲೇಮ್ ಗಳ ಮರುಪರಿಶೀಲನೆಗೆ ಇದು ದಾರಿಮಾಡಿಕೊಡಲಿದೆ. ವರ್ಷಗಳ ಅನಿಶ್ಚಿತತೆ ಮತ್ತು ವಿಳಂಬದ ಬಳಿಕ, ಇದೀಗ ಆರಂಭವಾಗಿರುವ ಈ ಪ್ರಕ್ರಿಯೆಯು ಸಂತ್ರಸ್ತ ಹೂಡಿಕೆದಾರರ ಆರ್ಥಿಕ ಸಂಕಷ್ಟಗಳಿಗೆ ಕೊನೆಗೂ ಸೂಕ್ತ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.

ಆಂಧ್ರಪ್ರದೇಶ ಸರಕಾರ ನೇಮಿಸಿರುವ ಸಚಿವರ ವಿಶೇಷ ಸಮಿತಿಯು ಈ ಪರಿಶೀಲನಾ ಕಾರ್ಯವನ್ನು ಸಮನ್ವಯಗೊಳಿಸುತ್ತಿದೆ. ಆಂಧ್ರಪ್ರದೇಶ CID ಪೊಲೀಸ್ ಮಹಾನಿರ್ದೇಶಕರು (DGP) ಹಾಗೂ ಕರ್ನಾಟಕ CID ಡಿಜಿಪಿ ಪ್ರಣಬ್ ಮೊಹಾಂತಿ ಅವರ ನಡುವೆ ನಡೆದ ಸುದೀರ್ಘ ಚರ್ಚೆಯ ಬಳಿಕ, ಈ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಒಟ್ಟು 9 ವಿಶೇಷ ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಹೂಡಿಕೆದಾರರು ತಮ್ಮ ದೀರ್ಘಕಾಲದ ಕ್ಲೇಮ್ ಗಳನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

►ದಾಖಲೆಗಳ ಪರಿಶೀಲನೆಗೆ ಕೇಂದ್ರಗಳ ಸ್ಥಾಪನೆ

ಬೆಂಗಳೂರಿನಲ್ಲಿ ಹೂಡಿಕೆದಾರರು ಅಕ್ಟೋಬರ್ 27ರಿಂದ ನವೆಂಬರ್ 6ರವರೆಗೆ ಮಹಾರಾಣಿ ಕಾಲೇಜು ಬಳಿಯ ಪ್ಯಾಲೇಸ್ ರಸ್ತೆಯಲ್ಲಿರುವ ಕಾರ್ಲ್ಟನ್ ಹೌಸ್ನ CID (CID) ಡಿಜಿಪಿ ಕಚೇರಿಗೆ ಭೇಟಿ ನೀಡಬಹುದು. ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ರವಿ ಸಿ.ವಿ. ಅವರನ್ನು ಸಂಪರ್ಕ ಅಧಿಕಾರಿಯಾಗಿ ನೇಮಿಸಲಾಗಿದ್ದು, ಅವರನ್ನು 9448530601 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.

ಇದರ ಜೊತೆಗೆ ತುಮಕೂರು, ಮಂಡ್ಯ, ಬಾಗಲಕೋಟೆ, ಉಡುಪಿ, ರಾಯಚೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಮತ್ತು ಹಾಸನ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಗಳಲ್ಲಿ ಪ್ರಾದೇಶಿಕ ಪರಿಶೀಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಕೇಂದ್ರವು ಸುತ್ತಮುತ್ತಲಿನ ಎರಡು ಅಥವಾ ಮೂರು ಜಿಲ್ಲೆಗಳ ಹೂಡಿಕೆದಾರರಿಗೆ ಸೇವೆ ಒದಗಿಸಲಿದೆ.

►ಹೂಡಿಕೆದಾರರು ಯಾವೆಲ್ಲ ದಾಖಲೆಗಳನ್ನು ತರಬೇಕು?

ಹೂಡಿಕೆದಾರರು ಮೂಲ ಅಗ್ರಿಗೋಲ್ಡ್ ಬಾಂಡ್, ಹಣ ಪಾವತಿಸಿದ ರಸೀದಿ ಮತ್ತು ಇತರ ಸಂಬಂಧಿತ ದಾಖಲೆಗಳೊಂದಿಗೆ, ಮೂಲ ಬಾಂಡ್ ನ ಸ್ವಯಂ-ದೃಢೀಕರಿಸಿದ (Self-attested) ಬಣ್ಣದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, PAN ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ತರಬೇಕು. ಏಜೆಂಟರ ಹೆಸರು ಮತ್ತು ಮೊಬೈಲ್ ಸಂಖ್ಯೆ ಲಭ್ಯವಿದ್ದರೆ ಅದನ್ನೂ ನೀಡಬೇಕು.

ಒಂದು ವೇಳೆ ಠೇವಣಿದಾರರು ಮೃತಪಟ್ಟಿದ್ದರೆ, ನಾಮಿನಿಯು ಮರಣ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಠೇವಣಿದಾರ ಹಾಗೂ ನಾಮಿನಿ ಇಬ್ಬರೂ ಮೃತಪಟ್ಟಿದ್ದರೆ, ಇಬ್ಬರ ಮೂಲ ಮರಣ ಪ್ರಮಾಣಪತ್ರಗಳನ್ನು ಪರಿಶೀಲನೆಗಾಗಿ ಸಲ್ಲಿಸುವುದು ಕಡ್ಡಾಯವಾಗಿದೆ.

►ದಾಖಲೆ ಪರಿಶೀಲನೆಯ ವೇಳಾಪಟ್ಟಿ

ಅಧಿಕಾರಿಗಳು ದಾಖಲೆ ಪರಿಶೀಲನೆಗಾಗಿ ಈ ಕೆಳಗಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ:

• ಅಕ್ಟೋಬರ್ 29: ಹೆಬ್ರಿ ತಾಲೂಕಿನ ಹೂಡಿಕೆದಾರರಿಗೆ

• ಅಕ್ಟೋಬರ್ 30: ಮುನಿಯಾಲು ಮತ್ತು ಸುತ್ತಮುತ್ತಲಿನ ಗ್ರಾಮಗಳ ಹೂಡಿಕೆದಾರರಿಗೆ

• ಅಕ್ಟೋಬರ್ 31: ಅಜೆಕಾರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಹೂಡಿಕೆದಾರರಿಗೆ

ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೂಡಿಕೆದಾರರ ದಾಖಲೆಗಳ ಸ್ವೀಕಾರ ಪ್ರಕ್ರಿಯೆಯನ್ನು ಉಡುಪಿಯ ಬನ್ನಂಜೆಯಲ್ಲಿರುವ ಎಸ್ಪಿ ಕಚೇರಿ ನಿರ್ವಹಿಸುತ್ತಿದೆ.

ಉಡುಪಿ ಡಿಎಸ್ಪಿ ಬೆಳ್ಳಿಯಪ್ಪ ಅವರು ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಶೀಘ್ರದಲ್ಲೇ ಮಂಗಳೂರಿನಲ್ಲೂ ದಾಖಲೆಗಳ ಪರಿಶೀಲನೆ ನಡೆಯಲಿದೆ.

►ತಾಲೂಕುವಾರು ವೇಳಾಪಟ್ಟಿಗೆ ಉಡುಪಿ ಎಸ್ಪಿ ಕರೆ

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಪ್ರಕ್ರಿಯೆಯ ಮೊದಲ ದಿನದಂದು ಕೆಲವು ಗೊಂದಲಗಳು ಉಂಟಾಗಿದ್ದವು ಎಂದು ತಿಳಿಸಿದರು.

"ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ತಾಲೂಕುವಾರು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುವುದು. ದಾಖಲೆ ಪರಿಶೀಲನೆಗೆ ಯಾವಾಗ ಬರಬೇಕು ಎಂಬುದನ್ನು ಹೂಡಿಕೆದಾರರಿಗೆ ತಿಳಿಸಲಾಗುವುದು" ಎಂದು ಅವರು ಹೇಳಿದರು.

ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೂಡಿಕೆದಾರರು ಉಡುಪಿ ಎಸ್ಪಿ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಅಂದಾಜು 40,000ದಿಂದ 50,000 ಹೂಡಿಕೆದಾರರು ಇರಬಹುದು ಎಂದು ಅವರು ತಿಳಿಸಿದರು.

►ಹೂಡಿಕೆದಾರರಿಗೆ ಪ್ರಮುಖ ಸೂಚನೆಗಳು

• ಪ್ರತಿದಿನ ಆಗಮಿಸುವ ಮೊದಲ 150 ಹೂಡಿಕೆದಾರರಿಗೆ ಮಾತ್ರ ಟೋಕನ್ ನೀಡಲಾಗುವುದು.

• ಬೆಳಿಗ್ಗೆ 8 ಗಂಟೆಯಿಂದ ಟೋಕನ್ ವಿತರಣೆ ಆರಂಭವಾಗಲಿದೆ.

• ವಿಕಲಚೇತನತೆ, ಅನಾರೋಗ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಹೂಡಿಕೆದಾರರು ಖುದ್ದಾಗಿ ಬರಲು ಸಾಧ್ಯವಾಗದಿದ್ದರೆ, ಅವರ ಪರವಾಗಿ ಏಜೆಂಟ್ ಅಥವಾ ಸಂಬಂಧಿಕರು ಬಾಂಡ್ಗಳನ್ನು ತಂದು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹೂಡಿಕೆದಾರರು 0820-2526444 ಅಥವಾ 9480805400 ಸಂಖ್ಯೆಯನ್ನು ಸಂಪರ್ಕಿಸಬಹುದು.

►ಏನಿದು ಅಗ್ರಿಗೋಲ್ಡ್ ಹಗರಣ?

ಅಗ್ರಿಗೋಲ್ಡ್ ಹಗರಣವು ದಕ್ಷಿಣ ಮತ್ತು ಮಧ್ಯ ಭಾರತದ ಲಕ್ಷಾಂತರ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ ಪ್ರಮುಖ ಹಣಕಾಸು ವಂಚನೆ ಪ್ರಕರಣಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಸುಮಾರು 32 ಲಕ್ಷ ಹೂಡಿಕೆದಾರರಿಂದ ಅಂದಾಜು 6,380 ಕೋಟಿ ರೂ. ಸಂಗ್ರಹಿಸಿತ್ತು ಎಂದು ಆರೋಪಿಸಲಾಗಿದೆ.

ಆಂಧ್ರಪ್ರದೇಶದ ವಿಜಯವಾಡದಲ್ಲಿ 1995ರಲ್ಲಿ ಸಾಮೂಹಿಕ ಹೂಡಿಕೆ ಯೋಜನೆ (CIS) ಮೂಲಕ ಕಾರ್ಯಾಚರಣೆ ಆರಂಭಿಸಿದ ಕಂಪೆನಿಯು, ಹೆಚ್ಚಿನ ಲಾಭ ನೀಡುವುದು ಅಥವಾ ಕಡಿಮೆ ದರದಲ್ಲಿ ಕೃಷಿ ಜಮೀನು ಒದಗಿಸುವುದಾಗಿ ಭರವಸೆ ನೀಡಿ ಜನರನ್ನು ಆಕರ್ಷಿಸಿತ್ತು. ಅವ್ವಾಸ್ ವೆಂಕಟ ರಾಮ ರಾವ್ ಇದರ ಅಧ್ಯಕ್ಷರಾಗಿದ್ದರು. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಏಜೆಂಟರ ವಿಶಾಲ ಜಾಲದ ಮೂಲಕ ಕಂಪೆನಿಯು ಹೂಡಿಕೆ ಸಂಗ್ರಹಿಸಿತ್ತು. ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಥವಾ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI)ಯ ಅಗತ್ಯ ಅನುಮತಿಗಳಿಲ್ಲದೆ ಕಂಪೆನಿಯು ಹೂಡಿಕೆ ಯೋಜನೆ ನಡೆಸುತ್ತಿತ್ತು ಎಂಬ ಆರೋಪವೂ ಇದೆ.

►ಹಣ ಪಾವತಿಯಾಗದೆ ಬೆಳಕಿಗೆ ಬಂದ ವಂಚನೆ

2014ರ ಕೊನೆಯಲ್ಲಿ ಹೂಡಿಕೆದಾರರಿಗೆ ಮೆಚ್ಯೂರಿಟಿ ಹಣ ಪಾವತಿಯಾಗದೆ ಸಮಸ್ಯೆ ಆರಂಭವಾಯಿತು. ಅದೇ ವರ್ಷದ ನವೆಂಬರ್ ನಲ್ಲಿ ವಿಜಯವಾಡದಲ್ಲಿರುವ ಕಂಪೆನಿಯ ಕಚೇರಿಗೆ ಆಗಮಿಸಿದ ಗ್ರಾಹಕರು, ತಾವು ನೀಡಿದ ಚೆಕ್ ಗಳು ಬೌನ್ಸ್ ಆಗುತ್ತಿವೆ ಮತ್ತು ಬಡ್ಡಿಯೂ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು. 2015ರ ಜನವರಿ ವೇಳೆಗೆ ಹಣ ವಾಪಸ್ ಸಿಗದಿರುವುದನ್ನು ವಿರೋಧಿಸಿ ಸಾವಿರಾರು ಹೂಡಿಕೆದಾರರು ಕಚೇರಿಗೆ ಆಗಮಿಸಿದರು. ಅವರಲ್ಲಿ ಕೆಲವರು ಲಕ್ಷಾಂತರ ರೂಪಾಯಿಗಳನ್ನು, ಇನ್ನು ಕೆಲವರು ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು.

ಇದೇ ಸಂದರ್ಭದಲ್ಲಿ ಸಾವಿರಾರು ಏಜೆಂಟರೂ ತಾವು ವಂಚನೆಗೆ ಒಳಗಾಗಿರುವುದಾಗಿ ದೂರಿದರು. ಪ್ರಕರಣದ ವ್ಯಾಪ್ತಿ ದೊಡ್ಡದಾಗಿದ್ದರಿಂದ ಆಂಧ್ರಪ್ರದೇಶ ಪೊಲೀಸರು ತನಿಖೆ ಆರಂಭಿಸಿ, ಕಂಪೆನಿಯ ಪ್ರಮುಖರ ವಿರುದ್ಧ ವಂಚನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿದರು ಹಾಗೂ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿದರು. ಬಳಿಕ ಪ್ರಕರಣವನ್ನು CID ತನಿಖೆಗೆ ವಹಿಸಲಾಯಿತು.

►ಆಸ್ತಿ ಮುಟ್ಟುಗೋಲು ಮತ್ತು ನ್ಯಾಯಾಲಯದ ಮಧ್ಯಪ್ರವೇಶ

ಆಂಧ್ರಪ್ರದೇಶದ ಅಂದಿನ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು, ಕಂಪೆನಿಯು 30 ಲಕ್ಷ ಜನರಿಂದ ಹಣ ಸಂಗ್ರಹಿಸಿ ಏಳು ರಾಜ್ಯಗಳಲ್ಲಿ 16,000 ಎಕರೆ ಭೂಮಿ ಖರೀದಿಸಿದೆ ಮತ್ತು ಬ್ಯಾಂಕ್ಗಳಲ್ಲಿ 500 ಕೋಟಿ ರೂ.ಗೂ ಅಧಿಕ ಹಣ ಠೇವಣಿ ಇರಿಸಿದೆ ಎಂದು ತಿಳಿಸಿದ್ದರು.

ರಾಜ್ಯ ಸರಕಾರವು ಕಂಪೆನಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಸರ್ಕಾರಿ ಆದೇಶ (GO) ಹೊರಡಿಸಿತು. ಬಳಿಕ ಆಸ್ತಿಗಳ ವಿಲೇವಾರಿ ಕುರಿತು ನಿರ್ಧರಿಸಲು ಸಮಿತಿಯೊಂದನ್ನು ರಚಿಸಿ, ಸಂತ್ರಸ್ತರಿಗೆ ಹಣ ಮರಳಿಸುವುದಾಗಿ ಭರವಸೆ ನೀಡಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಹಿನ್ನೆಲೆಯಲ್ಲಿ ಹೈದರಾಬಾದ್ ಹೈಕೋರ್ಟ್(ಇಂದಿನ ತೆಲಂಗಾಣ ಹೈಕೋರ್ಟ್) ಪ್ರಕರಣದತ್ತ ಗಮನ ಹರಿಸಿ, ತನಿಖೆಯ ಪ್ರಗತಿಯ ಕುರಿತು ಮಾಹಿತಿ ನೀಡುವಂತೆ CIDಗೆ ನಿರ್ದೇಶನ ನೀಡಿತು. 2015ರ ಅಕ್ಟೋಬರ್ ನಲ್ಲಿ ಕಂಪೆನಿಯ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಸೂಚಿಸಿತು.

2016ರ ಫೆಬ್ರುವರಿಯಲ್ಲಿ CID ಅಧಿಕಾರಿಗಳು ಕಂಪೆನಿಯ ಅಧ್ಯಕ್ಷ ಎ. ವೆಂಕಟ ರಾಮ ರಾವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ. ವೆಂಕಟ ಶೇಷು ನಾರಾಯಣ ರಾವ್ ಅವರನ್ನು ಬಂಧಿಸಿದರು.

ಹಲವು ವರ್ಷಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳ ನಡುವೆಯೂ ಹೂಡಿಕೆದಾರರ ಹಣ ವಾಪಸಾತಿ ಪ್ರಮುಖ ಪ್ರಶ್ನೆಯಾಗಿ ಉಳಿದಿದೆ. ಭವಿಷ್ಯದ ಆರ್ಥಿಕ ಭದ್ರತೆ, ಜಮೀನು ಅಥವಾ ಉತ್ತಮ ಲಾಭದ ನಿರೀಕ್ಷೆಯಲ್ಲಿ ಉಳಿತಾಯದ ಹಣ ಹೂಡಿಕೆ ಮಾಡಿದ್ದ ಸಾವಿರಾರು ಕುಟುಂಬಗಳು ಈ ಯೋಜನೆಯ ಕುಸಿತದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X