Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜನರನ್ನು ದಾರಿತಪ್ಪಿಸುವ ಎಐ ರಚಿತ...

ಜನರನ್ನು ದಾರಿತಪ್ಪಿಸುವ ಎಐ ರಚಿತ ವೀಡಿಯೊಗಳು

ಅಜಿತ್ ಕೆ.ಸಿ.ಅಜಿತ್ ಕೆ.ಸಿ.15 May 2026 10:30 AM IST
share
ಜನರನ್ನು ದಾರಿತಪ್ಪಿಸುವ ಎಐ ರಚಿತ ವೀಡಿಯೊಗಳು

ತಂತ್ರಜ್ಞಾನ ಬೆಳೆದಂತೆ ಚುನಾವಣಾ ಆಯೋಗ ಮತ್ತು ಕಾನೂನುಗಳು ಕೂಡ ಅಷ್ಟೇ ವೇಗವಾಗಿ ಅಪ್ಡೇಟ್ ಆಗಬೇಕಿದೆ. ಕೇವಲ ನೋಟಿಸ್ ನೀಡುವುದರಿಂದ ಈ ಡಿಜಿಟಲ್ ಮಾಯಾಜಾಲವನ್ನು ತಡೆಯಲು ಸಾಧ್ಯವಿಲ್ಲ. ಅಂತಿಮವಾಗಿ, ಮತದಾರರೇ ಜಾಗೃತರಾಗಬೇಕು. ವಾಟ್ಸ್ಆ್ಯಪ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಬರುವ ಪ್ರತಿಯೊಂದು ವೀಡಿಯೊವನ್ನೂ ಕಣ್ಮುಚ್ಚಿ ನಂಬುವ ಮೊದಲು, ಅದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ.

ಪಂಚರಾಜ್ಯ ಚುನಾವಣೆಗಳ ಸಮಯದಲ್ಲಿ ತಪ್ಪುತಪ್ಪಾದ ಎಐ ರಚಿತ ವೀಡಿಯೊಗಳು ನೂರಾರು ಹರಡಿದವು. ಮತ್ತವು ಲೇಬಲಿಂಗ್ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದ್ದವು.

ಜನವರಿಯಿಂದ ಎಪ್ರಿಲ್ವರೆಗೆ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಲೇಬಲ್ ಮಾಡದ ಕನಿಷ್ಠ 19 ಎಐ-ರಚಿತ ದೃಶ್ಯಗಳನ್ನು ‘ದಿ ಕ್ವಿಂಟ್’ ತಂಡ ಪತ್ತೆಹಚ್ಚಿದೆ.

ಆನ್ಲೈನ್ನಲ್ಲಿ ವೇಗವಾಗಿ ಹರಡಿದ್ದ ಆ ಎಐ-ರಚಿತ ವೀಡಿಯೊಗಳಲ್ಲಿ ಸರಿಯಾದ ಲೇಬಲ್ಗಳಿರಲಿಲ್ಲ. ಹೊಸ ನಿಯಮಗಳು ಮತ್ತು ಚುನಾವಣಾ ಆಯೋಗದ ಸಲಹೆಗಳ ಹೊರತಾಗಿಯೂ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಜಕೀಯ ಪಕ್ಷಗಳು ಅಂತಹ ವೀಡಿಯೊಗಳನ್ನು ಹಂಚಿಕೊಂಡವು.

ಜನರನ್ನು ದಾರಿತಪ್ಪಿಸುವ ಮತ್ತು ತಿರುಚಲಾದ ವಿಷಯವನ್ನು ಹಬ್ಬಿಸುವ ಕೆಲಸ ಈ ಮೂಲಕ ಆಯಿತು ಎಂದು ಕ್ವಿಂಟ್ ವರದಿ ಹೇಳುತ್ತದೆ.

ಚುನಾವಣಾ ಆಯೋಗ ಡೀಪ್ಫೇಕ್ಗಳ ದುರುಪಯೋಗದ ವಿರುದ್ಧ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿತ್ತು ಮತ್ತು ಸರಿಯಾದ ಲೇಬಲಿಂಗ್ ಬಗ್ಗೆ ಒತ್ತಿಹೇಳಿತ್ತು.

ಲೇಬಲಿಂಗ್ ಅಂದರೆ ಇದು ಎಐ ರಚಿತ ವೀಡಿಯೊ ನಿಜವಾದ ವೀಡಿಯೊ ಅಲ್ಲ ಎಂದು ವೀಡಿಯೊ ಮೇಲಿನ ಲೇಬಲ್ ಮೂಲಕ ಜನರಿಗೆ ಸ್ಪಷ್ಟನೆ ನೀಡುವುದು. ಆದರೆ ಅದಾವುದರ ಅನುಸರಣೆಯೂ ಸರಿಯಾಗಿ ಆಗಲಿಲ್ಲ ಎಂದು ವಿಶ್ಲೇಷಣೆಗಳು ತಿಳಿಸಿವೆ.

ವರದಿಯ ಪ್ರಕಾರ, ಫೆಬ್ರವರಿಯಲ್ಲಿ, ಅಸ್ಸಾಮಿನ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಕಲ್ಕ್ಯಾಪ್ ಧರಿಸಿದ ಪುರುಷರ ಚಿತ್ರಗಳ ಮೇಲೆ ಗುಂಡು ಹಾರಿಸುವುದನ್ನು ತೋರಿಸುವ ಎಐ-ರಚಿತ ವೀಡಿಯೊವನ್ನು ಹಂಚಿಕೊಂಡಿತು.

ಅದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಅದು ತೀವ್ರ ಟೀಕೆಗೆ ಗುರಿಯಾಯಿತು. ನಂತರ ವೀಡಿಯೊವನ್ನು ಅಳಿಸಲಾಯಿತು.

ಚುನಾವಣಾ ಕಾಲದಲ್ಲಿ ಕೆಸರೆರಚಾಟ ಮತ್ತು ಮತದಾರರನ್ನು ಓಲೈಸಲು ರಾಜಕಾರಣಿಗಳು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಆದರೆ, ಅದಕ್ಕಾಗಿ ಎಐ ಬಳಸುವ ವಿಷಯದಲ್ಲಿ ಆಗುವ ಅಪಾಯದ ಬಗ್ಗೆಯೂ ಪ್ರಶ್ನೆಗಳು ಏಳುವಂತಾಗಿದೆ.

ಬಿಜೆಪಿ ಮಾತ್ರವಲ್ಲ. ಕಾಂಗ್ರೆಸ್ ಪಕ್ಷದ ಅಸ್ಸಾಂ ಘಟಕ ಕೂಡ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ, ಶರ್ಮಾ ನೇತೃತ್ವದ ಸರಕಾರವನ್ನು ಗುರಿಯಾಗಿಸಿ ಎಐ ದೃಶ್ಯಗಳನ್ನು ಬಳಸಿತ್ತು.

ಬಿಜೆಪಿಯಲ್ಲಿ ಪ್ರಧಾನಿ ಮೋದಿಯಂಥ ನಾಯಕರು, ಕಾಂಗ್ರೆಸ್ ನಲ್ಲಿ ಶಶಿ ತರೂರ್ ಅಂಥ ನಾಯಕರು ಎಐ ವಿಷಯವಾಗಿ, ಡೀಪ್ಫೇಕ್ಗಳ ವಿಷಯವಾಗಿ ಎಚ್ಚರಿಸಿದ್ದಿದೆ, ಖಂಡಿಸಿದ್ದಿದೆ. ಆದರೆ, ಅದೇ ಪಕ್ಷದ ಜನರು ತಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಎಐ ಬಳಸಿದ್ದರು.

ಇವೆರಡೇ ಅಲ್ಲ, ಇತರ ಪಕ್ಷಗಳು ಕೂಡ ಎಐ ಕಂಟೆಂಟ್ ಬಳಸಿ, ತಾವೇನೂ ಕಮ್ಮಿಯಿಲ್ಲ ಎಂದು ತೋರಿಸಿವೆ.

ಸಮಸ್ಯೆ ಈಗ ಡೀಪ್ಫೇಕ್ಗಳನ್ನೂ ಮೀರಿ ಮುಂದಕ್ಕೆ ಹೋಗಿದೆ. ಇಲ್ಲಿ ಮತ್ತೊಂದು ಅಪಾಯಕಾರಿ ಅಂಶವೆಂದರೆ ‘ಲಯರ್ಸ್ ಡಿವಿಡೆಂಡ್’.

ಅಂದರೆ, ಸಮಾಜದಲ್ಲಿ ಎಐ ವೀಡಿಯೋಗಳ ಹಾವಳಿ ಹೆಚ್ಚಾದಂತೆ, ರಾಜಕಾರಣಿಗಳು ತಾವು ಆಡಿದ ವಿವಾದಾತ್ಮಕ ಮಾತುಗಳು ಅಥವಾ ನಿಜವಾದ ವೀಡಿಯೊಗಳನ್ನೇ ‘ಇದು ಎಐ ರಚಿತ ಅಥವಾ ಎಡಿಟೆಡ್ ವೀಡಿಯೊ’ ಎಂದು ಸುಲಭವಾಗಿ ತಳ್ಳಿಹಾಕುವ ಅಪಾಯವೂ ಇದೆ. ಯಾವುದು ಅಸಲಿ, ಯಾವುದು ನಕಲಿ ಎಂದು ತಿಳಿಯದ ಅಯೋಮಯ ಸ್ಥಿತಿಗೆ ಮತದಾರರು ತಲುಪುತ್ತಿದ್ದಾರೆ.

ಚುನಾವಣಾ ಆಯೋಗ ಎಐ ದೃಶ್ಯಗಳಿಗಾಗಿ ಮಾರ್ಗಸೂಚಿ ನೀಡಿದ್ದರೂ, ಮೆಟಾದಂತಹ ವೇದಿಕೆಗಳು ಸಮಸ್ಯೆ ಪರಿಹರಿಸಲು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಕ್ವಿಂಟ್ ವರದಿ ಹೇಳುತ್ತದೆ.

ವಿಶೇಷವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಹರಡುವ ಇಂತಹ ವೀಡಿಯೊಗಳನ್ನು ಪತ್ತೆಹಚ್ಚುವಲ್ಲಿ ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್ಗಳು ವಿಫಲವಾಗುತ್ತಿವೆ. ಕನ್ನಡ, ಅಸ್ಸಾಮಿ ಅಥವಾ ಬಂಗಾಳಿ ಭಾಷೆಯ ಆವೇಶಭರಿತ ಸಂಭಾಷಣೆಗಳು ಸೋಷಿಯಲ್ ಮೀಡಿಯಾ ಕಂಪೆನಿಗಳ ಸೆನ್ಸರ್ ಕಣ್ಣಿಗೆ ಬೀಳದೆ ರಾಜಾರೋಷವಾಗಿ ಹರಡುತ್ತಿವೆ. ಇದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ದೊಡ್ಡ ಹೊಡೆತ ನೀಡುತ್ತಿದೆ.

ಜನವರಿ ಮತ್ತು ಎಪ್ರಿಲ್ 2026ರ ನಡುವೆ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನ ರಾಜ್ಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಪ್ರಸಾರವಾದ ಸುಮಾರು 19 ಎಐ-ರಚಿತ ವೀಡಿಯೊಗಳನ್ನು ಗುರುತಿಸಿರುವುದಾಗಿ ವರದಿ ಹೇಳಿದೆ.

ಈ ಯಾವುದೇ ವೀಡಿಯೊಗಳನ್ನು ಪೋಸ್ಟ್ ಮಾಡಿದ ಬಳಕೆದಾರರು ಅಥವಾ ಅವುಗಳನ್ನು ಹೋಸ್ಟ್ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಎಐ-ರಚಿತ ಎಂದು ಲೇಬಲ್ ಮಾಡಿಲ್ಲ. ಈ ಕ್ಲಿಪ್ಗಳ ಪೈಕಿ ಹಲವನ್ನು ಬಿಜೆಪಿ, ಕಾಂಗ್ರೆಸ್, ಡಿಎಂಕೆ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಹಂಚಿಕೊಂಡಿವೆ ಎಂದು ವರದಿ ಹೇಳುತ್ತದೆ. ರಾಜಕೀಯ ನಾಯಕರು ಮತ್ತು ಪಕ್ಷಗಳನ್ನು ಗುರಿಯಾಗಿಸಿಕೊಂಡಿರುವ ವೀಡಿಯೊಗಳು ಇವುಗಳಲ್ಲಿ ಮುಖ್ಯವಾಗಿದ್ದವು.

ಕೆಲವು ಕ್ಲಿಪ್ಗಳು ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಸ್ಕಲ್ಕ್ಯಾಪ್ ಧರಿಸಿರುವುದನ್ನು ತೋರಿಸಿವೆ. ಅಂದರೆ, ಅವರು ಅಸ್ಸಾಮಿನಲ್ಲಿ ಮುಸ್ಲಿಮರನ್ನು ಓಲೈಸುತ್ತಾರೆ ಎಂದು ಸೂಚಿಸಲಾಗಿದೆ. ಅವರನ್ನು ಅಸ್ಸಾಂ ವಿರೋಧಿ ಮತ್ತು ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ.

ಈ ವೀಡಿಯೊಗಳಲ್ಲಿ ಮತ್ತೆ ಮತ್ತೆ ಕಂಡಿರುವುದು ಭಾವನಾತ್ಮಕ, ಆವೇಶಪೂರಿತ ಭಾಷೆ ಮತ್ತು ದೃಶ್ಯಗಳ ಬಳಕೆ.

ರಾಜಕೀಯ ಸಂದೇಶಗಳೊಂದಿಗೆ ಸಾಂಸ್ಕೃತಿಕ ವಿಷಯಗಳ ಪ್ರಸ್ತಾಪದ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆ ವೀಡಿಯೊಗಳಲ್ಲಿ ಎಐ ರಚಿತ ಮತ್ತು ಎಡಿಟ್ ಮಾಡಲಾದ ದೃಶ್ಯಗಳ ಬಳಕೆ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲದಿದ್ದುದನ್ನು ವರದಿ ಹೇಳುತ್ತದೆ.

ಎಐ ಆಧರಿತ ಮತ್ತೊಂದು ವೀಡಿಯೊದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಮಾನದೊಳಗೆ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ತೋರಿಸಲಾಗಿತ್ತು ಮತ್ತು ಅದಕ್ಕೆ, ರಾಹುಲ್ ಗಾಂಧಿ ಭಾರತದ ವಿರುದ್ಧ ಪಿತೂರಿ ನಡೆಸಲು ವಿದೇಶ ಪ್ರವಾಸದಲ್ಲಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿತ್ತು.

ಮದ್ಯದ ಬಾಟಲಿಗಳು, ಪಾನ್ ಪ್ಯಾಕೆಟ್ಗಳಂಥ ಕಸವನ್ನು ತೋರಿಸುವ ಎಐ ಆಧರಿತ ಚಿತ್ರ ಮೋದಿ ರ್ಯಾಲಿ ಬಗ್ಗೆ ಟೀಕಿಸುವ ಉದ್ದೇಶದ್ದಾಗಿತ್ತು. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೋದಿಯವರ ರ್ಯಾಲಿಯ ನಂತರ ಇತರ ರಾಜ್ಯಗಳ ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳವನ್ನು ಕೊಳಕು ಮಾಡಿದ್ದಾರೆ ಎಂದು ಅದರ ಮೂಲಕ ತೋರಿಸಲಾಯಿತು.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮಯದಲ್ಲಿ 2.4 ಲಕ್ಷ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಚುನಾವಣಾ ಆಯೋಗ ಘೋಷಿಸಿದ ನಂತರ, ಭದ್ರತಾ ವಾಹನಗಳ ಬೆಂಗಾವಲು ಪಡೆಗಳನ್ನು ತೋರಿಸುವ ಹಲವಾರು ವೀಡಿಯೊಗಳು ಆನ್ಲೈನ್ನಲ್ಲಿ ಪ್ರಸಾರವಾದವು.

ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಆಡಳಿತಾರೂಢ ಟಿಎಂಸಿ ಭಯಭೀತವಾಗಿದೆ ಎಂದು ಹೇಳಲು ಈ ದೃಶ್ಯಗಳನ್ನು ಬಳಸಿಕೊಂಡಿದ್ದರು ಎಂದು ವರದಿ ಉಲ್ಲೇಖಿಸಿದೆ.

ಎಐ ರಚಿತ ದೃಶ್ಯದಲ್ಲಿ, ಮಮತಾ ಬ್ಯಾನರ್ಜಿ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಅಧಿಕಾರಿಯೊಬ್ಬರ ಬಳಿ ಹೇಳುತ್ತಿರುವುದನ್ನು ತೋರಿಸಲಾಗಿತ್ತು.

ಬಿಜೆಪಿ ಅಸ್ಸಾಮಿನ ಇನ್ಸ್ಟಾಗ್ರಾಮ್ ಪುಟದಲ್ಲಿ ಎಐ-ರಚಿತ ರೀಲ್ ಅನ್ನು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ, ಬಿಜೆಪಿ ಆಡಳಿತದಲ್ಲಿ, ಅಹೋಮ್ ರಾಜಮನೆತನದ 600-700 ವರ್ಷಗಳಷ್ಟು ಹಳೆಯದಾದ ದಿಬ್ಬದ ಸಮಾಧಿ ಸ್ಥಳವಾದ ಚಾರೈಡಿಯೊ ಮೈದಮ್ ಅನ್ನು 2024ರಲ್ಲಿ ಯುನೆಸ್ಕೋ ವಿಶ್ವ ಪರಂಪರೆ ತಾಣವೆಂದು ಗುರುತಿಸಲಾಗಿದೆ ಎಂದು ಹೈಲೈಟ್ ಮಾಡಲಾಗಿದೆ.

ಅದೇ ರೀತಿ, ಕಾಂಗ್ರೆಸ್ ಮತ್ತು ಡಿಎಂಕೆ ಹಂಚಿಕೊಂಡ ಎಐ-ರಚಿತ ವೀಡಿಯೊಗಳು ಚುನಾವಣೆಗೆ ಮುಂಚಿತವಾಗಿ ತಮ್ಮ ಪ್ರಣಾಳಿಕೆಗಳು ಮತ್ತು ಕೆಲಸದ ಬಗ್ಗೆ ಹೇಳಿವೆ.

ಈ ವೀಡಿಯೊಗಳು ತಪ್ಪು ಮಾಹಿತಿ ಹೊಂದಿದ್ದವೋ ಇಲ್ಲವೋ ಎನ್ನುವುದಕ್ಕಿಂತ, ಅವು ಎಐ ರಚಿತವಾಗಿವೆ ಎಂದು ಸ್ಪಷ್ಟವಾಗಿ ಹೇಳಿರಲಿಲ್ಲ ಎಂಬುದನ್ನು ವರದಿ ಪ್ರಸ್ತಾಪಿಸುತ್ತದೆ.

ರಾಜಕೀಯ ಪಕ್ಷಗಳು ಈ ವೀಡಿಯೊಗಳಿಗೆ ಲೇಬಲ್ ಹಾಕದಿರಲು ಒಂದು ಮುಖ್ಯ ಕಾರಣವಿದೆ. ‘ಎಐ ರಚಿತ’ ಎಂಬ ಲೇಬಲ್ ಹಾಕಿದರೆ ಆ ವೀಡಿಯೊ ಹೊಂದಿರುವ ಭಾವನಾತ್ಮಕ ತೀವ್ರತೆ ಮತ್ತು ಪ್ರಭಾವ ಮತದಾರರ ಮೇಲೆ ಕಡಿಮೆಯಾಗುತ್ತದೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಮತ್ತು ಅದನ್ನು ನಿಜವೆಂದು ನಂಬಿಸಲು ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಈ ನಿಯಮಗಳನ್ನು ಗಾಳಿಗೆ ತೂರುತ್ತಿವೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಬಿಜೆಪಿ ಅಸ್ಸಾಮಿನ ಅಧಿಕೃತ ಹ್ಯಾಂಡಲ್ ಹಂಚಿಕೊಂಡ ಮತ್ತೊಂದು ಎಐ-ರಚಿತ ವೀಡಿಯೊ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಗೊಗೊಯಿ ಆರಂಭದಲ್ಲಿ ನಗುತ್ತಿರುವುದನ್ನು ತೋರಿಸುತ್ತದೆ. ನಂತರ ಜನರಿಂದ ಓಡಿಹೋಗುವುದನ್ನು, ಅಂದರೆ ಜನಬೆಂಬಲ ಗಳಿಸದಿರುವುದನ್ನು ತೋರಿಸಲಾಗಿದೆ. ವೀಡಿಯೊ ಕೊನೆಯಲ್ಲಿ, 70 ವರ್ಷಗಳ ನಿರ್ಲಕ್ಷ್ಯ ಎಂಬ ಶೀರ್ಷಿಕೆ ಕಾಣಿಸುತ್ತದೆ.

ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಎಐ ರಚಿತ ಎಂಬ ಲೇಬಲ್ಗಳಿಲ್ಲದೆ ಅವನ್ನು ಹಬ್ಬಿಸಿದರು ಎಂಬುದನ್ನು ವರದಿ ಹೇಳಿದೆ.

ಒಂದು ವೀಡಿಯೊದಲ್ಲಿ, ಪ್ರಧಾನಿ ಮೋದಿ, ಯುಪಿ ಸಿಎಂ ಆದಿತ್ಯನಾಥ್ ಮತ್ತು ಬಿಹಾರದ ಮಾಜಿ ಸಿಎಂ ನಿತೀಶ್ ಕುಮಾರ್ ಅವರು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆರ್ಜೆಡಿಯ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಕಲ್ಪಿತ ಮಾತುಕತೆ ನಡೆಸುವ ದೃಶ್ಯವಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ವಿಶ್ವ ನಾಯಕರು ಕೇರಳ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತೋರಿಸಲಾಗಿತ್ತು.

ಜನವರಿ 2026ರ ಮೊದಲು ಎಐ-ರಚಿತ ಹಲವು ವೀಡಿಯೊಗಳಲ್ಲಿ ಕೋಮು ಪ್ರಚಾರ ಮತ್ತು ಅಕ್ರಮ ವಲಸೆ ವಿಚಾರದ ಬಗ್ಗೆ ಪ್ರಚೋದಿಸುವ ವಿಷಯವಿದ್ದುದನ್ನು ಪತ್ತೆ ಮಾಡಿದ್ದರ ಬಗ್ಗೆಯೂ ವರದಿ ಹೇಳಿದೆ.

ಸಾಮಾನ್ಯವಾಗಿ ಕೋಮುವಾದಿ ದೃಷ್ಟಿಯಿದ್ದ, ಧಾರ್ಮಿಕ ಅಥವಾ ಜನಾಂಗೀಯ ಗುಂಪುಗಳ ನಡುವಿನ ವ್ಯತ್ಯಾಸಗಳನ್ನು ಎತ್ತಿ ತೋರಿಸಿದ ಈ ವೀಡಿಯೊಗಳಲ್ಲಿ ಯಾವುದೂ ಎಐ ರಚಿತ ಎಂಬುದರ ಲೇಬಲ್ ಇರಲಿಲ್ಲ. ಇದು ಸ್ಪಷ್ಟವಾಗಿ ಜನರನ್ನು ದಿಕ್ಕು ತಪ್ಪಿಸಿ ವಂಚಿಸುವ ಉದ್ದೇಶವಿತ್ತೆಂಬುದು ಸ್ಪಷ್ಟ.

2026ರಲ್ಲಿ ಐಟಿ ಮಧ್ಯವರ್ತಿ ನಿಯಮಗಳಿಗೆ ತರಲಾದ ತಿದ್ದುಪಡಿ ಪ್ರಕಾರ, ಕಾನೂನುಬಾಹಿರ ಎಐ-ರಚಿತ ವಿಷಯಗಳನ್ನು ವೇದಿಕೆಗಳು ಬೇಗ ತೆಗೆದುಹಾಕುವುದು ಮುಖ್ಯವಾಗಿತ್ತು. ನ್ಯಾಯಾಲಯದ ಆದೇಶ ಅಥವಾ ಅಧಿಕೃತ ಸರಕಾರಿ ಸೂಚನೆಯನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ಸೋಷಿಯಲ್ ಮೀಡಿಯಾ ವೇದಿಕೆಗಳು ಅಂಥ ವಿಷಯ ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು ಎಂದು ನಿಯಮಗಳು ಹೇಳುತ್ತವೆ. ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂಬ ವಾದ ಈಗಾಗಲೇ ಇದೆ.

ಅದೇನೇ ಇದ್ದರೂ, ಎಐ-ರಚಿತ ವಿಷಯಗಳ ತಪ್ಪು ಹರಡುವಿಕೆಗೆ ಅವಕಾಶವಾದದ್ದು ಮಾತ್ರ ಅಪಾಯಕಾರಿ.

ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ಮೆಟಾ ಹ್ಯಾಂಡಲ್ಗಳಲ್ಲಿ ಹಂಚಿಕೊಳ್ಳುವ ಎಐ ರಚಿತ ವಿಷಯಗಳು ಲೇಬಲ್ ಇಲ್ಲದೆ ಇದ್ದದ್ದು ಚುನಾವಣಾ ಆಯೋಗದ ಗೈಡ್ಲೈನ್ನ ನೇರ ಉಲ್ಲಂಘನೆ ಎಂಬುದು ಸ್ಪಷ್ಟ.

ಮುಂದಾದರೂ ಚುನಾವಣಾ ಆಯೋಗ ಇಂಥದ್ದರ ವಿರುದ್ಧ ಕ್ರಮ ಕೈಗೊಳ್ಳುತ್ತವೆಯೇ ಕಾದು ನೋಡಬೇಕಾಗಿದೆ.

ತಂತ್ರಜ್ಞಾನ ಬೆಳೆದಂತೆ ಚುನಾವಣಾ ಆಯೋಗ ಮತ್ತು ಕಾನೂನುಗಳು ಕೂಡ ಅಷ್ಟೇ ವೇಗವಾಗಿ ಅಪ್ಡೇಟ್ ಆಗಬೇಕಿದೆ. ಕೇವಲ ನೋಟಿಸ್ ನೀಡುವುದರಿಂದ ಈ ಡಿಜಿಟಲ್ ಮಾಯಾಜಾಲವನ್ನು ತಡೆಯಲು ಸಾಧ್ಯವಿಲ್ಲ. ಅಂತಿಮವಾಗಿ, ಮತದಾರರೇ ಜಾಗೃತರಾಗಬೇಕು. ವಾಟ್ಸ್ಆ್ಯಪ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಬರುವ ಪ್ರತಿಯೊಂದು ವೀಡಿಯೊವನ್ನೂ ಕಣ್ಮುಚ್ಚಿ ನಂಬುವ ಮೊದಲು, ಅದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ. ಈ ಡಿಜಿಟಲ್ ಯುಗದಲ್ಲಿ ‘ನೋಡಿದ್ದೆಲ್ಲವೂ ನಿಜವಲ್ಲ’ ಎಂಬ ಎಚ್ಚರವೇ ನಮಗೆ ರಕ್ಷಣೆ.

Tags

AI-generated videos
share
ಅಜಿತ್ ಕೆ.ಸಿ.
ಅಜಿತ್ ಕೆ.ಸಿ.
Next Story
X