Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಐತಿಹಾಸಿಕ ಚಿತ್ರಕಲೆಯ ತಾಣ ಮಂಗಳೂರಿನ...

ಐತಿಹಾಸಿಕ ಚಿತ್ರಕಲೆಯ ತಾಣ ಮಂಗಳೂರಿನ ಅಲೋಶಿಯಸ್ ಚಾಪೆಲ್

ವಾರ್ತಾಭಾರತಿವಾರ್ತಾಭಾರತಿ16 Dec 2024 11:50 AM IST
share
ಐತಿಹಾಸಿಕ ಚಿತ್ರಕಲೆಯ ತಾಣ ಮಂಗಳೂರಿನ ಅಲೋಶಿಯಸ್ ಚಾಪೆಲ್

ಮಂಗಳೂರು: ನಗರದ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಮಂಗಳೂರಿನ ಅಲೋಶಿಯಸ್ ಚಾಪೆಲ್ ಪ್ರಪಂಚದಲ್ಲೇ ಅತೀ ಹೆಚ್ಚು ಚಿತ್ರಕಲೆ ಹೊಂದಿರುವ ಪಾರ್ಥನಾ ಮಂದಿರಗಳಲ್ಲಿ 2ನೇ ಸ್ಥಾನದಲ್ಲಿದೆ. 146 ವರ್ಷಗಳ ಇತಿಹಾಸ ಹೊಂದಿರುವ ಅಲೋಶಿಯಸ್ ಚಾಪೆಲ್ ಇಟಲಿಯ ಪ್ರಸಿದ್ಧ ಕಲಾವಿದ ಆ್ಯಂಟೋನಿಯೊ ಮೊಸ್ಕೆನಿ ಖುದ್ದಾಗಿ ರಚಿಸಿ ಪೂರ್ತಿಗೊಳಿಸಿರುವ ಕೊನೆಯ ಸ್ಮಾರಕವಾಗಿದೆ. ಕಲೆ, ಧಾರ್ಮಿಕ ಮತ್ತು ಐತಿಹಾಸಿ ಸ್ಮಾರಕ ಮಾತ್ರವಲ್ಲದೆ, ಆಗಿನ ಚಿತ್ರಕಲೆಯ ಒಂದು ವಿಭಿನ್ನ ಸ್ವರೂಪವನ್ನು ಇದು ಪ್ರತಿಬಿಂಬಿಸುತ್ತದೆ.

ಅಲೋಶಿಯಸ್ ಚಾಪೆಲ್‌ನಲ್ಲಿರುವ ಚಿತ್ರಕಲೆಯು ಮುಖ್ಯವಾಗಿ ಸಂತ ಅಲೋಶಿಯಸ್ ಗೊನ್ಝಾಗ ಮತ್ತು ಯೇಸು ಕ್ರಿಸ್ತನ ಜೀವನ ಚರಿತ್ರೆಯ ಬಗ್ಗೆ ಮಾಹಿತಿಗಳನ್ನು ನೀಡುತ್ತವೆೆ.




ನಗರದ ಲೈಟ್‌ಹೌಸ್ ಹಿಲ್‌ನ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿರುವ ಅಲೋಶಿಯಸ್ ಚಾಪೆಲ್ 1878ರಲ್ಲಿ ನಿರ್ಮಾಣ ಗೊಂಡಿದೆ. 1899ರಲ್ಲಿ ಆ್ಯಂಟೋನಿಯೊ ಮೊಸ್ಕೆನಿ ಇದನ್ನು ಕುಸುರಿ ಕಲೆಗಳಿಂದ ಅಲಂಕರಿಸಿದರು. ಇದರಲ್ಲಿ ಚಿತ್ರಗಳನ್ನು ರಚಿಸಲು ಅವರು ಎರಡೂವರೆ ವರ್ಷಗಳ ಸುದೀರ್ಘ ಅವಧಿಯನ್ನು ತೆಗೆದುಕೊಂಡಿದ್ದರು. ಮಂಗಳೂರಿನ ಚಾಪೆಲ್ ರೋಮ್‌ನ ಸಿಸ್ಟೈನ್ ಚಾಪೆಲ್‌ನ ಪ್ರತಿರೂಪವಾ

ಗಿದ್ದು, ಆಂಟೋನಿಯೊ ಮೊಸ್ಕೆನಿ ಖುದ್ದಾಗಿ ಪ್ರತಿಯೊಂದು ಗೋಡೆಗಳಲ್ಲೂ ಚಿತ್ರಗಳನ್ನು ಬಿಡಿಸಿದ್ದಾರೆ. ಕೊಚ್ಚಿನ್‌ನ ಚರ್ಚ್‌ನ ಚಿತ್ರಕಲೆ ಅವರ ಕೊನೆಯ ಚಿತ್ರಕಲೆಯಾಗಿದ್ದರೂ ಅದು ಪೂರ್ಣಗೊಂಡಿಲ್ಲ ಎನ್ನಲಾಗಿದೆ.

3 ವಿಧಗಳ ಚಿತ್ರಕಲೆ: ಆ್ಯಂಟೋನಿಯೊ ಮೊಸ್ಕೆನಿ ಅಲೋಶಿಯಸ್ ಚಾಪೆಲ್‌ನ್ನು 3 ವಿಧಗಳ ಚಿತ್ರಕಲೆ ಶೈಲಿಯಿಂದ ಅಲಂಕರಿಸಿ ದ್ದಾರೆ. ಫ್ರಾಸ್ಕೊ ಪೇಂಟಿಂಗ್ ವಿಧಾನ ದಲ್ಲಿ ಸುಣ್ಣದ ಗಾರೆಯ ಮೂಲಕ ಗೋಡೆಯನ್ನು ಮುಚ್ಚಿ ಅದು ಒಣಗುವ ಮೊದಲು ಅದರ ಮೇಲೆ ಚಿತ್ರಿಸಲಾಗುತ್ತದೆ. ಇದು ಅತ್ಯಂತ ಕಠಿಣವಾದ ಚಿತ್ರರಚನಾ ಶೈಲಿಯಾಗಿದ್ದು, ಹೆಚ್ಚಾಗಿ ಇದೇ ಶೈಲಿಯನ್ನು ಅನುಕರಿಸಲಾಗಿದೆ.

ಟೆಂಪರಾ ಪೇಂಟಿಂಗ್ ಇನ್ನೊಂದು ವಿಧಾನವಾಗಿದ್ದು, ವರ್ಣದ್ರವ್ಯಗಳನ್ನು ಬಳಸಿ ಚಿತ್ರಿಸಲಾಗುತ್ತದೆ. ಈ ಚಿತ್ರಕಲೆಯು ಅತೀ ವೇಗವಾಗಿ ಒಣಗುತ್ತದೆ ಮತ್ತು ಶಾಶ್ವತವಾಗಿ ಉಳಿಯುತ್ತವೆ.

ಕ್ಯಾನ್ವಸ್ ಪೇಂಟಿಂಗ್ ಮೂರನೆಯ ವಿಧಾನವಾಗಿದ್ದು, ಲಿನಿನ್ ಅಥವಾ ಹತ್ತಿಯಿಂದ ತಯಾರಿಸಿದ ಬಟ್ಟೆಯ ಮೇಲೆ ಚಿತ್ರೀಕರಿಸಲಾಗುತ್ತದೆ. ಈ ವಿಧಾನವನ್ನು ಚಾಪೆಲ್‌ನ ಛಾವಣಿಯಲ್ಲಿ ಚಿತ್ರಗಳನ್ನು ಬಿಡಿಸಲು ಬಳಸಲಾಗಿದೆ.




ನೈಸರ್ಗಿಕ ಬಣ್ಣ ಬಳಕೆ: ಚಾಪೆಲ್‌ನ ಚಿತ್ರಗಳನ್ನು ನೈಸರ್ಗಿಕ ಬಣ್ಣಗಳನ್ನು ಬಳಸಿ ರಚಿಸಲಾಗಿದ್ದು, ಅದಕ್ಕಾಗಿ ಅಗಸೆ ಬೀಜದ (ಲಿನ್ಸೀಡ್) ಎಣ್ಣೆಯೊಂ ದಿಗೆ ಬೆರೆಸಿದ ತೈಲ ವರ್ಣದ್ರವ್ಯವನ್ನು ಬಳಸಲಾಗಿದೆ. ಆ್ಯಂಟೋನಿಯೊ ಮೊಸ್ಕೆನಿ ಮಂಗಳೂರಿನ ಬಗ್ಗೆ ಅಧ್ಯಯನ ಮಾಡಿ ನಂತರ ಇಲ್ಲಿ ದೊರಕುವ ತರಕಾರಿ, ಹೂವುಗಳನ್ನು ಬಳಸಿ ಅದರಿಂದ ಬಣ್ಣವನ್ನು ತಯಾರಿಸಿ ಚಿತ್ರಗಳನ್ನು ರಚಿಸಿದ್ದಾರೆ.

ಪ್ರತಿಯೊಂದು ಚಿತ್ರವನ್ನು ಬೆಳಕು ಮತ್ತು ನೆರಳು ವಿಧಾನವನ್ನು ಬಳಸಿ ರಚಿಸಲಾಗಿದೆ. 2ಡಿ ಮತ್ತು 3ಡಿ ಶೈಯಲ್ಲಿ ಗೋಚರಿಸುವ ಈ ಚಿತ್ರಗಳೇ ಚಾಪೆಲ್‌ನ ಆಕರ್ಷಣೆಯಾಗಿದೆ.

ಚಿತ್ರಕಲೆಗಳ ಸಂರಕ್ಷಣೆ: ಕರಾವಳಿಯಲ್ಲಿ ಅತೀ ಹೆಚ್ಚು ಬಿಸಿ ಮತ್ತು ಮಳೆಯ ತೇವಾಂಶದಿಂದಾಗಿ ಈ ಚಿತ್ರಕಲೆಗಳು ಹಾನಿಯಾಗದಂತೆ ಸಂರಕ್ಷಿಸುವ ಅಗತ್ಯವಿತ್ತು. 1994ರಲ್ಲಿ ಲಕ್ನೊದ ಇಂಟಾಕ್ (IN TACH) ಸಂಸ್ಥೆಯು ಮೊದಲ ಬಾರಿಗೆ ಚಾಪೆಲ್‌ನ ಚಿತ್ರಕಲೆಯ ಸಂರಕ್ಷಣೆ ಕಾರ್ಯ ಮಾಡಿತು. ನಂತರ 2017-18ರಲ್ಲಿ ದಿಲ್ಲಿಯ ಇಂಟಾಕ್ ಐಸಿಐ ಸಂಸ್ಥೆ ಚಾಪೆಲ್‌ನ ಚಿತ್ರಗಳನ್ನು 2 ಕೋ.ರೂ. ವೆಚ್ಚದಲ್ಲಿ ಸುಧಾರಣೆ ಮಾಡುವ ಕಾರ್ಯ ನಿರ್ವಹಿಸಿತು. ಇದರಲ್ಲಿ ಪರಿಗಣಿತ ಪುರಾತತ್ವ ಶಾಸ್ತ್ರಜ್ಞರು ಲೇಝರ್ ಬೀಮ್ ತಂತ್ರಜ್ಞಾನವನ್ನು ಬಳಸಿ ವರ್ಣಚಿತ್ರಗಳನ್ನು ಆವರಿಸಿದ್ದ ಧೂಳನ್ನು ತೆರವುಗೊಳಿಸಿದರು. ಈ ರೀತ ಚಾಪೆಲ್ ಚಿತ್ರಗಳ ಮೇಲಿಂದ ಸುಮಾರು ಒಂದುವರೆ ಟನ್‌ನಷ್ಟು ಧೂಳನ್ನು ತೆಗೆಯಲಾಗಿತ್ತು. ಇದಕ್ಕೆ 14 ತಿಂಗಳ ಕಾಲಾವಧಿ ತಗುಲಿತ್ತು.


ಅಲೋಶಿಯಸ್ ಚಾಪೆಲ್ ದೇಶ ಮಾತ್ರವಲ್ಲದೆ, ವಿದೇಶದಿಂದಲೂ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರು ಹೆಚ್ಚಾಗಿರುತ್ತಾರೆ. ಚಾಪೆಲ್ ಬಗ್ಗೆ ಆನ್‌ಲೈನ್‌ನಲ್ಲಿರುವ ಮಾಹಿತಿಯಿಂದ ಕುತೂಹಲಿಗರು ಚಾಪಲ್ ವೀಕ್ಷಣೆಗಾಗಿ ಬೆಂಗಳೂರು, ಚೆನ್ನೈ, ಮತ್ತು ಕೇರಳದಿಂದ ಹೆಚ್ಚಾಗಿ ಆಗಮಿಸುತ್ತಾರೆ. ಹೊಸದಿಲ್ಲಿ, ಪುಣೆ, ಕೊಲ್ಕತ್ತಾ, ಮುಂಬೈ, ಗೋವಾ, ಗುಜರಾತ್, ನಾಗಲ್ಯಾಂಡ್, ಅಸ್ಸಾಂ ಅಷ್ಟೇ ಅಲ್ಲದೇ, ಯುಕೆ, ಯುಎಸ್‌ಎ, ಜರ್ಮನಿ, ಫ್ರಾನ್ಸ್, ಇಟಲಿಯಿಂದಲೂ ಪ್ರವಾಸಿಗರು ಆಗಮಿಸುತ್ತಿರುತ್ತಾರೆ.

-ವಿನ್ಸೆಂಟ್, ಚಾಪೆಲ್‌ನ ಮಾರ್ಗದರ್ಶಿ


ಮಂಗಳೂರಿನ ಅಲೋಶಿಯಸ್ ಚಾಪೆಲ್ ಭಾರತದಲ್ಲೇ ವಿಶೇಷವಾದ ಮತ್ತು ಪುರಾತನ ಸ್ಮಾರಕವಾಗಿದೆ. ಇದನ್ನು ಸಂರಕ್ಷಿಸುವುದು ಕಷ್ಟಕರ. ಆದರೂ ಈ ಅದ್ಭುತ ಚಿತ್ರಕಲೆಯನ್ನು ಸುರಕ್ಷಿತವಾಗಿಡಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಕೇವಲ ಕಲೆ ಮಾತ್ರ. ಕಲಾವಿದ ರಿಗೆ ಸ್ಫೂರ್ತಿದಾಯಕವಾಗಿದೆ. ಸ್ಥಳೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವುದೇ ಚಾಪೆಲ್ ಚಿತ್ರಗಳ ವಿಶೇಷತೆ.

ರೆ. ಡಾ.ಪ್ರವೀಣ್ ಮಾರ್ಟಿಸ್ , ಕುಲಪತಿ, ಸಂತ ಅಲೋಶಿಯಸ್ ಪರಿಗಣಿತ ವಿವಿ, ಮಂಗಳೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X