Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬುದ್ಧನತ್ತ ಅಂಬೇಡ್ಕರ್ ಅವರ ಮಹಾಪಯಣ

ಬುದ್ಧನತ್ತ ಅಂಬೇಡ್ಕರ್ ಅವರ ಮಹಾಪಯಣ

ಇಂದು ಅಂಬೇಡ್ಕರ್ ಬೌದ್ಧಧರ್ಮ ಸ್ವೀಕಾರ ದಿನ

ಡಾ.ಎಸ್. ನರೇಂದ್ರಕುಮಾರ್ಡಾ.ಎಸ್. ನರೇಂದ್ರಕುಮಾರ್14 Oct 2023 10:42 AM IST
share
ಬುದ್ಧನತ್ತ ಅಂಬೇಡ್ಕರ್ ಅವರ ಮಹಾಪಯಣ
ಚರಿತ್ರೆಯುದ್ದಕ್ಕೂ ಧರ್ಮವು ತನ್ನ ಪ್ರಭಾವವನ್ನು ಬೀರುತ್ತಲೇ ಬಂದಿರುವುದನ್ನು ಗುರುತಿಸಿದ ಅಂಬೇಡ್ಕರ್, ಮನುಷ್ಯನಿಗೆ ಧರ್ಮದ ಅಗತ್ಯವಿದೆ ಆದರೆ ಆ ಧರ್ಮ ಮಾನವತೆಯ ಮೌಲ್ಯಗಳನ್ನು ಒಳಗೊಂಡಿರಬೇಕು ಎಂಬ ಸ್ಪಷ್ಟತೆಯೊಡನೆ 1935 ಅಕ್ಟೋಬರ್ 13ರಂದು ‘‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ’’ ಎಂದು ಘೋಷಿಸಿದರು. ಆನಂತರ ಬೌದ್ಧಧರ್ಮ ಅವರ ಆಯ್ಕೆಯಾಯಿತು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧಧರ್ಮದತ್ತ ಪಯಣಿಸಿ ಅರವತ್ತೇಳು ವರ್ಷ. ಅಂಬೇಡ್ಕರ್ ಅವರಿಗೆ ಇದು ಕೇವಲ ಧಾರ್ಮಿಕ ವಿಮೋಚನೆಯಾಗಿರದೆ ದಮನಿತರ ಅಷ್ಟೇ ಏಕೆ ಮಾನವ ಸಮುದಾಯದ ಸಾಮಾಜಿಕ-ಸಾಂಸ್ಕೃತಿಕ ವಿಮೋಚನೆಯಾಗಿತ್ತು.

ಧರ್ಮ ಇರುವುದು ಮಾನವನ ಕಲ್ಯಾಣಕ್ಕಾಗಿ, ಸಮಾಜದ ಸಂರಕ್ಷಣೆಗಾಗಿ ಎಂದು ಪ್ರಬಲವಾಗಿ ಪ್ರತಿಪಾದಿಸುವ ಅಂಬೇಡ್ಕರ್ ಅವರು ಧರ್ಮ ಅಥವಾ ಧರ್ಮಾಧಾರಿತವಾದ ಶಾಸ್ತ್ರಗ್ರಂಥಗಳು ಹೇಳಿವೆ ಎಂಬ ಕಾರಣಕ್ಕಾಗಿ ಚಾತುರ್ವರ್ಣ, ಜಾತಿಪದ್ಧತಿ, ಅಸ್ಪಶ್ಯತೆ, ಲಿಂಗತಾರತಮ್ಯದಂತಹ ಅಸಮಾನತೆಗಳನ್ನು ಆಚರಿಸುವುದನ್ನು ತೀವ್ರವಾಗಿ ವಿರೋಧಿಸಿದರು. ಇಂಥವುಗಳಿಂದ ಮನುಷ್ಯ ಮಾನವತೆಯನ್ನು ಕೊಂದುಕೊಂಡು ಸಹಮಾನವರನ್ನು ಶೋಷಿಸುವುದು ನೀಚತನ ಎಂದು ಹೇಳಿದರು.

ತಾವು ಹುಟ್ಟಿದ ಜಾತಿಯ ಕಾರಣ ಆಗುತ್ತಿದ್ದ ಹಿಂಸೆಗಳನ್ನು ಸ್ವತಃ ಅನುಭವಿಸಿದ್ದ ಅಂಬೇಡ್ಕರ್ ಸಮುದಾಯಗಳು ಎದುರಿಸುವ ಅಸಂಖ್ಯಾತ ದೌರ್ಜನ್ಯಗಳನ್ನು ಇನ್ನಿಲ್ಲವಾಗಿಸಲು ಹೋರಾಟಗಳನ್ನು ಹಮ್ಮಿಕೊಂಡರು. ಅಸ್ಪಶ್ಯರೆಂದು ಕುಡಿಯಲು ನೀರನ್ನು ಸಹ ಕೊಡದ ಅಮಾನವೀಯತೆ ಹೋಗಲಾಡಿಸಲು ಮಹಾಡ್‌ನಲ್ಲಿ ಚೌಡರ್‌ಕೆರೆ ಹೋರಾಟವನ್ನು (1927) ನಡೆಸಿ ಯಶಸ್ವಿಯೂ ಆದರು. ಆದರೆ ಸಂಪ್ರದಾಯವಾದಿಗಳು ಮೈಲಿಗೆಯಾಯಿತೆಂದು ‘ಪವಿತ್ರೀಕರಣ’ಗೊಳಿಸಿದರು. ಮನುಷ್ಯನ ಇಂತಹ ನಡವಳಿಕೆಗೆ ಕಾರಣವನ್ನು ಗುರುತಿಸಿದ ಅಂಬೇಡ್ಕರ್ ಮಹಾಡ್‌ನಲ್ಲಿ ಮತ್ತೊಂದು ಸಮಾವೇಶವನ್ನು ಸಂಘಟಿಸಿ ಸಾರ್ವಜನಿಕವಾಗಿ ಮನುಧರ್ಮಶಾಸ್ತ್ರವನ್ನು (1927) ಸುಟ್ಟರು.

ಧಾರ್ಮಿಕ ಕೇಂದ್ರಗಳಾಗಿರುವ ದೇವಾಲಯಗಳಲ್ಲೇ ಅಸಮಾನತೆಯೊಂದಿಗೆ ಕೆಲವು ಜಾತಿ ಸಮುದಾಯಗಳಿಗೆ ಪ್ರವೇಶ ನಿರಾಕರಿಸುವ ಮನೋಭಾವವನ್ನು ಖಂಡಿಸಿ ನಾಸಿಕ್‌ನಲ್ಲಿ ಕಾಳರಾಮ ದೇವಾಲಯ ಪ್ರವೇಶ ಚಳವಳಿ (1930) ಹಮ್ಮಿಕೊಂಡರು. ಆದರೆ ಸಂಪ್ರದಾಯವಾದಿಗಳು ನಿರಾಕರಿಸಿದರು. ಈ ಚಳವಳಿಯನ್ನು ಅರ್ಧಕ್ಕೆ ಹಿಂದೆಗೆದುಕೊಂಡ ಅಂಬೇಡ್ಕರ್ ದಮನಿತ ಸಮುದಾಯಗಳು ದೇವಾಲಯ ಪ್ರವೇಶಕ್ಕಿಂತ ತಮ್ಮ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಕೆಲವರು ದೇವರ ಕಣ್ಣಿನಲ್ಲಿ ಎಲ್ಲರೂ ಸಮಾನರು ಎಂದಾಗ ‘‘ನನಗೆ ದೇವರ ಕಣ್ಣಿನಲ್ಲಿ ಎಲ್ಲರೂ ಸಮಾನರು ಎಂಬುದು ಮುಖ್ಯವಲ್ಲ. ಮನುಷ್ಯರ ಕಣ್ಣಿನಲ್ಲಿ ಎಲ್ಲರೂ ಸಮಾನರು ಎಂಬುದೇ ಮುಖ್ಯ’’ ಎಂದರು.

ಚರಿತ್ರೆಯುದ್ದಕ್ಕೂ ಧರ್ಮವು ತನ್ನ ಪ್ರಭಾವವನ್ನು ಬೀರುತ್ತಲೇ ಬಂದಿರುವುದನ್ನು ಗುರುತಿಸಿದ ಅಂಬೇಡ್ಕರ್, ಮನುಷ್ಯನಿಗೆ ಧರ್ಮದ ಅಗತ್ಯವಿದೆ ಆದರೆ ಆ ಧರ್ಮ ಮಾನವತೆಯ ಮೌಲ್ಯಗಳನ್ನು ಒಳಗೊಂಡಿರಬೇಕು ಎಂಬ ಸ್ಪಷ್ಟತೆಯೊಡನೆ 1935 ಅಕ್ಟೋಬರ್ 13ರಂದು ‘‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ’’ ಎಂದು ಘೋಷಿಸಿದರು. ಆನಂತರ ಬೌದ್ಧಧರ್ಮ ಅವರ ಆಯ್ಕೆಯಾಯಿತು. ಬುದ್ಧನನ್ನು ತಮ್ಮ ಗುರುವೆಂದು ಕರೆದರು.

ಭಾರತದ ನೆಲದಲ್ಲಿ ಹುಟ್ಟಿದ ಬುದ್ಧನ ಬೋಧನೆಗಳು ಪ್ರಜ್ಞೆ, ಕಾರುಣ್ಯ, ಸಮತೆ ತತ್ವಗಳ ಮೂಲಕ ಜಗತ್ತನ್ನು ಪಸರಿಸಿದ ಬಗೆ ವಿಸ್ಮಯವೆನಿಸಿತು. ಅದು ಲೌಕಿಕ ಸಮಸ್ಯೆಗಳಿಗೆ ಮಿಡಿವ ಬಗೆ, ವೈಜ್ಞಾನಿಕ ಚಿಂತನೆಗಳೊಂದಿಗೆ ಲೋಕದ ಸಂಕಟಗಳಿಗೆ ಹಾತೊರೆಯುವಿಕೆ, ‘‘ನಿನಗೆ ನೀನೇ ಬೆಳಕು, ಪ್ರಶ್ನಿಸದೆ, ನಿನಗೆ ಮನವರಿಕೆಯಾಗದೆ ಏನನ್ನೂ ಒಪ್ಪಬೇಡ’’ ಎಂಬ ವೈಚಾರಿಕ ಖಚಿತತೆ, ಮನಸ್ಸನ್ನು ಒಳಿತಿನತ್ತ ಕೊಂಡೊಯ್ಯುವ ಧ್ಯಾನಮಾರ್ಗ, ಇಂತಹವುಗಳಿಂದ ಬೌದ್ಧಧರ್ಮ ಅಂಬೇಡ್ಕರ್ ಅವರಿಗೆ ದಿವ್ಯಬೆಳಕಾಗಿ ಕಂಡಿತು.

ಅಂಬೇಡ್ಕರ್ ಅವರ ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’, ‘ಹಿಂದೂಧರ್ಮದ ತತ್ವಜ್ಞಾನ’, ‘ಬುದ್ಧ ಅಥವಾ ಕಾರ್ಲ್‌ಮಾರ್ಕ್ಸ್’ ‘ಬುದ್ಧ ಮತ್ತು ಆತನ ದಮ್ಮ’ ಬರಹಗಳು ಬೌದ್ಧ ಧರ್ಮ ಅರಿಯಲು ನೆರವಾಗುತ್ತವೆ.

ಬುದ್ಧನ ಹಲವಾರು ಚಿಂತನೆಗಳು ಭಾರತದ ಸಂವಿಧಾನದಲ್ಲಿಯೂ ಅಡಕವಾಗಿವೆ. ಪ್ರಜಾಪ್ರಭುತ್ವದ ಆಶಯಗಳನ್ನು ಬುದ್ಧನಿಂದ ಸ್ವೀಕರಿಸಿದ್ದೇನೆ ಎನ್ನುವ ಅಂಬೇಡ್ಕರ್ ತಾವು ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನ ಸಮಿತಿಯಲ್ಲಿ ಇದ್ದಾಗ ಬೌದ್ಧತತ್ವ ಸಾರುವ ಅಶೋಕನ ದಮ್ಮಚಕ್ರ ರಾಷ್ಟ್ರಧ್ವಜದಲ್ಲಿ ಹಾಗೂ ನಾಲ್ಕುತಲೆಯ ಸಿಂಹ ರಾಷ್ಟ್ರಲಾಂಛನವಾಗಲು ಕಾರಣರಾದರು. ಮುಂಬೈ ಹಾಗೂ ಔರಂಗಾಬಾದ್‌ನಲ್ಲಿ ತಾವು ಸ್ಥಾಪಿಸಿದ ಕಾಲೇಜುಗಳಿಗೆ ಸಿದ್ಧಾರ್ಥ, ಮಿಲಿಂದರ ಹೆಸರಿಟ್ಟರು. ಕಾಲೇಜಿನ ಆವರಣಕ್ಕೆ ನಾಗಸೇನ ಕ್ಯಾಂಪಸ್ ಎಂದು ಕರೆದರು. ಆನಂತರ ಭಾರತೀಯ ಬೌದ್ಧ ಸಮಾಜ ಎಂಬ ಸಂಘ ಆರಂಭಿಸಿದರು. ನೇಪಾಳ, ಶ್ರೀಲಂಕಾ ದೇಶಗಳಲ್ಲಿ ನಡೆದ ಬೌದ್ಧ ಸಮ್ಮೇಳನಗಳಲ್ಲಿ ಭಾಗವಹಿಸಿದರು. ವಿಶೇಷವೆಂದರೆ ಮೈಸೂರಿನ ರಾಜವಂಶಸ್ಥ 10ನೇ ಜಯಚಾಮರಾಜ ಒಡೆಯರ್ ಅವರಿಂದ ಬೆಂಗಳೂರಿನಲ್ಲಿ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸಲು 1954ರಲ್ಲಿ ಐದು ಎಕರೆ ಭೂಮಿಯನ್ನು ದಾನವಾಗಿ ಪಡೆದರು.

ಒಂದು ಕಾಲಕ್ಕೆ ಪ್ರಮುಖ ಬೌದ್ಧಕೇಂದ್ರವಾಗಿದ್ದ ನಾಗಪುರದಲ್ಲಿ ಅಶೋಕ ವಿಜಯದಶಮಿ ದಿನದಂದು ಬೌದ್ಧಧರ್ಮ ಸ್ವೀಕರಿಸಿದರು. ಈ ಕಾರಣಗಳಿಗಾಗಿ ಆಧುನಿಕ ಬೋಧಿಸತ್ವರೆಂದು ಗೌರವಿಸಲ್ಪಡುತ್ತಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರ ದಮ್ಮದೀಕ್ಷೆಯು ಇಂದಿಗೂ ಜನಸಮುದಾಯಗಳಲ್ಲಿ ಪ್ರಭಾವ ಬೀರುತ್ತ ಸಂಚಲನ ಮೂಡಿಸುತ್ತಿರುವ ಮಹಾಪಯಣವಾಗಿದೆ.

share
ಡಾ.ಎಸ್. ನರೇಂದ್ರಕುಮಾರ್
ಡಾ.ಎಸ್. ನರೇಂದ್ರಕುಮಾರ್
Next Story
X