Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಮೋನಿಯಾ: ಭವಿಷ್ಯದ ಇಂಧನವಾದೀತೇ?

ಅಮೋನಿಯಾ: ಭವಿಷ್ಯದ ಇಂಧನವಾದೀತೇ?

ವಾರ್ತಾಭಾರತಿವಾರ್ತಾಭಾರತಿ23 July 2023 11:22 AM IST
share
ಅಮೋನಿಯಾ: ಭವಿಷ್ಯದ ಇಂಧನವಾದೀತೇ?
ಇಂದಿನ ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಸಮಯದಲ್ಲಿ ಮುಕ್ತ ಇಂಧನಗಳ ಬಳಕೆ ಹೆಚ್ಚು ಸೂಕ್ತವೆನಿಸುತ್ತಿದೆ. ಇಂಧನ ಕೋಶಗಳು ಮತ್ತು ಟರ್ಬೈನ್ಗಳಲ್ಲಿ ಹೈಡ್ರೋಜನ್ ಬಳಸುವಂತೆ ಅಮೋನಿಯಾವನ್ನು ಬಳಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಹೈಡ್ರೋಜನ್ಗೆ ಹೋಲಿಕೆ ಮಾಡಿದರೆ ಅಮೋನಿಯಾ ಸಂಗ್ರಹಣೆ ಮತ್ತು ಸಾಗಣೆ ಸುಲಭದ್ದಾಗಿರುವುದರಿಂದ ಅಮೋನಿಯಾದ ಬಳಕೆ ಹೆಚ್ಚು ಪ್ರಸ್ತುತತೆ ಪಡೆಯುತ್ತಿದೆ. ವಿದ್ಯುತ್ ಸ್ಥಾವರಗಳು ಮತ್ತು ಹಡಗು ಇಂಜಿನ್ಗಳಲ್ಲಿ ನೇರವಾಗಿ ಅಮೋನಿಯಾವನ್ನು ದಹಿಸುವ ಪ್ರಯತ್ನಗಳು ಕೂಡಾ ನಡೆಯುತ್ತಿವೆ.

- ಆರ್,ಬಿ ಗುರುಬಸವರಾಜ


ಜಾಗತಿಕವಾಗಿ ಹಸಿರು ಶಕ್ತಿಯ ಭಾಗವಾಗಿ ಅನೇಕ ಅನಿಲಗಳ ಬಳಕೆ ನಡೆಯುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಹೈಡ್ರೋಜನ್ನ್ನು ಹಸಿರು ಶಕ್ತಿಯಾಗಿ ಬಳಸಲಾಗುತ್ತದೆ. ಹೈಡ್ರೋಜನ್ನಂತೆ ಅಮೋನಿಯಾವು ಕೂಡಾ ಶಕ್ತಿಯ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಇತ್ತೀಚಿನ ವರ್ಷಗಳಲ್ಲಿ ಕಂಡುಕೊಳ್ಳಲಾಗಿದೆ. ಜಾಗತಿಕ ಶಕ್ತಿಯ ಪರಿವರ್ತನೆಗಾಗಿ ಹೈಡ್ರೋಜನ್ಗಿಂತ ಅಮೋನಿಯಾವು ಹೆಚ್ಚು ಭರವಸೆ ನೀಡುತ್ತದೆ.

ನಾವು ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುವಾಗ ಅಮೋನಿಯಾ ಒಂದು ರಾಸಾಯನಿಕ ವಸ್ತು ಎಂದಷ್ಟೆ ತಿಳಿದಿದ್ದೆವು. ನಂತರದ ದಿನಗಳಲ್ಲಿ ಅದನ್ನು ಕೃತಕ ಗೊಬ್ಬರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂಬುದನ್ನು ತಿಳಿದುಕೊಂಡೆವು. ಆದರೆ ಪ್ರಸಕ್ತ ದಿನಗಳಲ್ಲಿ ಅದರ ಉಪಯೋಗಗಳು ವಿಪುಲವಾಗಿವೆ ಎಂಬುದನ್ನು ತಿಳಿದಾಗ ಅಚ್ಚರಿಯಾಗುತ್ತದೆ.

ಅಮೋನಿಯಾ ಮೂಲತಃ ಬಣ್ಣರಹಿತ ಅನಿಲವಾಗಿದ್ದು, ವಿಶಿಷ್ಟವಾದ ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಇದು ನೈಸರ್ಗಿಕ ಅನಿಲವಾಗಿದ್ದು, ಗಾಳಿ, ಮಣ್ಣು ಅಥವಾ ನೀರಿನಲ್ಲಿ ಸೇರಿಕೊಂಡಿರುತ್ತದೆ. ಇದು ಸಸ್ಯಗಳು, ಪ್ರಾಣಿಗಳು ಮತ್ತು ಮನುಷ್ಯರಲ್ಲೂ ಇರುತ್ತದೆ. ಇದಲ್ಲದೆ, ಹೈಡ್ರೋಜನ್ ಮತ್ತು ನೈಟ್ರೋಜನ್ ಪ್ರತಿಕ್ರಿಯಿಸಿದಾಗ ಅಜೇನ್ ಎಂದು ಕರೆಯಲ್ಪಡುವ ಅಮೋನಿಯಾ ರೂಪುಗೊಳ್ಳುತ್ತದೆ. ಇದು ನೀರಿನಲ್ಲಿ ಹೆಚ್ಚು ಕರಗುತ್ತದೆ. ಪ್ರಪಂಚದಲ್ಲಿ ಅತೀ ಹೆಚ್ಚು ತಯಾರಾಗುವ ಸಲ್ಫೂರಿಕ್ ಆಮ್ಲದ ನಂತರದ ಸ್ಥಾನವನ್ನು ಅಮೋನಿಯಾ ಪಡೆದಿದೆ.

ಅಮೋನಿಯಾದ ಉಪಯೋಗಗಳ ಬಗ್ಗೆ ಹೇಳುವುದಾದರೆ ಇದು ಅತ್ಯಂತ ಮುಖ್ಯವಾದ ಅಥವಾ ಬಿಲ್ಡಿಂಗ್ ಬ್ಲಾಕ್ ರಾಸಾಯನಿಕವಾಗಿದೆ ಮತ್ತು ಜನರು ಪ್ರತಿದಿನ ಬಳಸುವ ಉತ್ಪನ್ನಗಳ ತಯಾರಿಕೆಯಲ್ಲಿದೆ. ಅಮೋನಿಯಾವನ್ನು ಕೈಗಾರಿಕೆಗಳಲ್ಲಿ, ಕೃಷಿ, ಗೃಹೋಪಯೋಗಿ ಉತ್ಪನ್ನಗಳು, ವಿವಿಧ ಸಂಯುಕ್ತಗಳನ್ನು ತಯಾರಿಸಲು, ಲೋಹ ಸಂಸ್ಕರಣೆ, ಪೆಟ್ರೋಲಿಯಂ ಮುಂತಾದವುಗಳಲ್ಲಿ ಬಳಸಲಾಗುತ್ತದೆ.

ಅಮೋನಿಯಾವನ್ನು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹಲವಾರು ಕಾರ್ಯಗಳನ್ನು ನಿರ್ವಹಿಸಲು ಸ್ಟೆಬಿಲೈಸರ್, ನ್ಯೂಟ್ರಾಲೈಸರ್ ಅಥವಾ ಸಾರಜನಕದ ಮೂಲವಾಗಿ ಇದನ್ನು ಬಳಸಲಾಗುತ್ತದೆ. ಅಮೋನಿಯಾವನ್ನು ತ್ಯಾಜ್ಯನೀರಿನ ಸಂಸ್ಕರಣೆ, ಚರ್ಮ, ರಬ್ಬರ್, ಕಾಗದ, ಆಹಾರ ಮತ್ತು ಪಾನೀಯ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಇದನ್ನು ಕೋಲ್ಡ್ ಸ್ಟೋರೇಜ್ ಅಥವಾ ಶೈತ್ಯೀಕರಣ ವ್ಯವಸ್ಥೆಗಳಲ್ಲಿ ಮತ್ತು ಔಷಧಗಳ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ. ಅಮೋನಿಯಾವನ್ನು ಮುದ್ರಣ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಇದನ್ನು ಹುದುಗುವಿಕೆಯಲ್ಲಿಯೂ ಬಳಸಲಾಗುತ್ತದೆ. ಶೈತ್ಯೀಕರಣದ ಅನಿಲವಾಗಿ ಮತ್ತು ಹವಾನಿಯಂತ್ರಣ ಸಾಧನಗಳಲ್ಲಿ ಬಳಸಿದಾಗ, ಅಮೋನಿಯಾವು ಅದರ ಸುತ್ತಮುತ್ತಲಿನ ಶಾಖವನ್ನು ಗಣನೀಯ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ.

ಅಮೋನಿಯಾವನ್ನು ಮುಖ್ಯವಾಗಿ ಕೃಷಿ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಉತ್ಪತ್ತಿಯಾಗುವ ಎಲ್ಲಾ ಅಮೋನಿಯಾದ ಸುಮಾರು 90 ಪ್ರತಿಶತವನ್ನು ಕೃಷಿಗೆ ಬಳಸಲಾಗುತ್ತದೆ. ಅಮೋನಿಯಾ ಸಾರಜನಕ ಮತ್ತು ಇತರ ಅಂಶಗಳ ಸಮೃದ್ಧ ಮೂಲವಾಗಿ ಕಾರ್ಯನಿರ್ವಹಿಸುವುದರಿಂದ, ಮೂಲಭೂತವಾಗಿ ಆಹಾರ ಉತ್ಪಾದನೆಯನ್ನು ಉಳಿಸಿಕೊಳ್ಳಲು ರಸಗೊಬ್ಬರಗಳಲ್ಲಿ ಬಳಸಲಾಗುತ್ತದೆ. ಅಮೋನಿಯಂ ನೈಟ್ರೇಟ್, ಲವಣಗಳು, ಯೂರಿಯಾ ಮತ್ತು ಇತರ ಸಂಯುಕ್ತಗಳನ್ನು ಒಳಗೊಂಡಿರುವ ದ್ರವ ರಸಗೊಬ್ಬರ ದ್ರಾವಣಗಳ ಉತ್ಪಾದನೆಯಲ್ಲಿ ಇದನ್ನು ಬಳಸಲಾಗುತ್ತದೆ. ಅಮೋನಿಯಾವನ್ನು ಸಾಮಾನ್ಯವಾಗಿ ಕೆಲವು ಹಣ್ಣುಗಳ ಮೇಲೆ ಆ್ಯಂಟಿಫಂಗಲ್ ಏಜೆಂಟ್ ಆಗಿ ಮತ್ತು ಸಂರಕ್ಷಕಗಳಾಗಿ ಬಳಸಲಾಗುತ್ತದೆ.

ಇದಲ್ಲದೆ ಅಮೋನಿಯಾವನ್ನು ಮನೆಯಲ್ಲಿ ಶುದ್ಧಕಾರಕವಾಗಿ ಬಳಸಲಾಗುತ್ತದೆ. ಬಹಳಷ್ಟು ಮನೆಯ ಶುಚಿಗೊಳಿಸುವ ಉತ್ಪನ್ನಗಳಲ್ಲಿ ಅಮೋನಿಯಾ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನೆಲದ ಕಲೆಗಳನ್ನು ತೆಗೆದುಹಾಕಲು ಅಥವಾ ಕನ್ನಡಿಗಳು, ಟಬ್, ಸಿಂಕ್, ಕಿಟಕಿ ಮುಂತಾದವುಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಕೆಲವು ವೇಳೆ ಇದನ್ನು ಆ್ಯಂಟಿಮೈಕ್ರೊಬಿಯಲ್ ಏಜೆಂಟ್ಗಳು ಅಥವಾ ನಂಜುನಿರೋಧಕವಾಗಿ ಬಳಸಲಾಗುತ್ತದೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಅಮೋನಿಯಾವನ್ನು ಇಂಧನವಾಗಿಯೂ ಬಳಸಲಾಗುತ್ತದೆ.

ಇಂದು ಅಮೋನಿಯಾವು ಹೆಚ್ಚಿನ ಕೈಗಾರಿಕೆಗಳಿಗೆ ಪ್ರಮುಖ ಕಚ್ಚಾ ವಸ್ತುವಾಗಿದೆ ಮತ್ತು ಶಕ್ತಿ ಉತ್ಪಾದನೆಗೆ ಸಂಭಾವ್ಯ ಇಂಧನವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಶಕ್ತಿಗಾಗಿ ಅಮೋನಿಯಾದ ಬಳಕೆ ಹೆಚ್ಚುತ್ತಿರುವುದು ಮತ್ತು ಅದರ ಸುಲಭ ಸಾಗಣೆಯ ಗುಣಲಕ್ಷಣಗಳಿಂದ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಅಲ್ಲದೆ ಅಮೋನಿಯಾವು ಹೈಡ್ರೋಜನ್ಗಿಂತ ಹೆಚ್ಚು ದಟ್ಟ ಶಕ್ತಿಯ ರೂಪವಾಗಿರುವುದರಿಂದ ಮುಖ್ಯ ಪ್ರತಿಸ್ಪರ್ಧಿ ಆಗಿದೆ.

ಅಮೋನಿಯಾ ಎಂದ ಕೂಡಲೇ ನಮಗೆಲ್ಲ ನೆನಪಾಗುವುದು ಪ್ರಸಕ್ತ ಅದರ ಬಳಕೆಯ ಮಾದರಿಗಳು. ಪ್ರಸಕ್ತ ಅಮೋನಿಯಾವನ್ನು ರಾಸಾಯನಿಕ ಗೊಬ್ಬರಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಅಮೋನಿಯಾ ಉತ್ಪಾದನೆಯು ಪ್ರಪಂಚದಾದ್ಯಂತ ನಡೆಯುತ್ತದೆ. ಜಾಗತಿಕ ಅಮೋನಿಯಾ ಉತ್ಪಾದನೆಯು ವಿಶ್ವದ ಶಕ್ತಿಯ ಶೇ. 1.8 ಅನ್ನು ಬಳಸುತ್ತದೆ ಮತ್ತು ಜಾಗತಿಕ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಶೇ. 1.8ರಷ್ಟಿದೆ. 2021ರ ಅಂಕಿ ಅಂಶಗಳ ಪ್ರಕಾರ ವಾರ್ಷಿಕವಾಗಿ 235 ಮಿಲಿಯನ್ ಟನ್ ಅಮೋನಿಯಾವನ್ನು ಉತ್ಪಾದಿಸಲಾಗಿದೆ. ಚೀನಾ (ಶೇ. 31.9), ರಶ್ಯ (ಶೇ. 8.7), ಭಾರತ (ಶೇ. 7.5) ಮತ್ತು ಯುನೈಟೆಡ್ ಸ್ಟೇಟ್ಸ್ಗಳಲ್ಲಿ (ಶೇ. 7.1). ಶೇ. 80 ಅಥವಾ ಹೆಚ್ಚಿನ ಪ್ರಮಾಣದ ಅಮೋನಿಯಾವನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಅಮೋನಿಯಾವನ್ನು ಪ್ಲಾಸ್ಟಿಕ್ಗಳು, ಫೈಬರ್ಗಳು, ಸ್ಫೋಟಕಗಳು, ನೈಟ್ರಿಕ್ ಆಮ್ಲ ಮತ್ತು ವರ್ಣಗಳು ಮತ್ತು ಔಷಧಗಳ ಮಧ್ಯವರ್ತಿಗಳ ಉತ್ಪಾದನೆಗೆ ಬಳಸಲಾಗುತ್ತದೆ. ಈ ಉದ್ಯಮವು ಜಾಗತಿಕವಾಗಿ ಶೇ. 1ರಿಂದ 2ರಷ್ಟು ಇಂಗಾಲದ ಡೈ ಆಕ್ಸೈಡ್ನ್ನು ಬಿಡುಗಡೆ ಮಾಡುತ್ತದೆ.

ಇಂದಿನ ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಸಮಯದಲ್ಲಿ ಮುಕ್ತ ಇಂಧನಗಳ ಬಳಕೆ ಹೆಚ್ಚು ಸೂಕ್ತವೆನಿಸುತ್ತಿದೆ. ಇಂಧನ ಕೋಶಗಳು ಮತ್ತು ಟರ್ಬೈನ್ಗಳಲ್ಲಿ ಹೈಡ್ರೋಜನ್ ಬಳಸುವಂತೆ ಅಮೋನಿಯಾವನ್ನು ಬಳಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಹೈಡ್ರೋಜನ್ಗೆ ಹೋಲಿಕೆ ಮಾಡಿದರೆ ಅಮೋನಿಯಾ ಸಂಗ್ರಹಣೆ ಮತ್ತು ಸಾಗಣೆ ಸುಲಭದ್ದಾಗಿರುವುದರಿಂದ ಅಮೋನಿಯಾದ ಬಳಕೆ ಹೆಚ್ಚು ಪ್ರಸ್ತುತತೆ ಪಡೆಯುತ್ತಿದೆ. ವಿದ್ಯುತ್ ಸ್ಥಾವರಗಳು ಮತ್ತು ಹಡಗು ಇಂಜಿನ್ಗಳಲ್ಲಿ ನೇರವಾಗಿ ಅಮೋನಿಯಾವನ್ನು ದಹಿಸುವ ಪ್ರಯತ್ನಗಳು ಕೂಡಾ ನಡೆಯುತ್ತಿವೆ.

ಅಲ್ಲದೆ ಕೆಲ ರಾಸಾಯನಿಕ ಕಂಪೆನಿಗಳು ಹಸಿರು ಅಮೋನಿಯಾವನ್ನು ಅಭಿವೃದ್ಧಿಪಡಿಸುತ್ತಿವೆ, ಇದರಲ್ಲಿ ಪರ್ಯಾಯ ಶಕ್ತಿಯಿಂದ ನಡೆಸಲ್ಪಡುವ ನೀರಿನ ವಿದ್ಯುದ್ವಿಭಜನೆಯಿಂದ ಪಡೆದ ಹೈಡ್ರೋಜನ್ ಹೈಡ್ರೋಕಾರ್ಬನ್-ಆಧಾರಿತ ಹೈಡ್ರೋಜನ್ಗೆ ಬದಲಾಗಿ ಅಮೋನಿಯಾವನ್ನು ಬಳಸಲಾಗುತ್ತಿದೆ. ಸಾಂಪ್ರದಾಯಿಕ ಅಮೋನಿಯಾವನ್ನು ತಯಾರಿಸುವ ಕಾರ್ಬನ್ ಪ್ರಭಾವವನ್ನು ಕಡಿಮೆ ಮಾಡಲು ಅವರು ಕಾರ್ಬನ್ ಕ್ಯಾಪ್ಚರ್ ಮತ್ತು ಶೇಖರಣೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಪ್ರಸಕ್ತ ಉದ್ಯಮವು ಇದನ್ನು ನೀಲಿ ಅಮೋನಿಯಾ ಎಂದು ಉಲ್ಲೇಖಿಸುತ್ತದೆ.

ಅಮೋನಿಯಾ ಉತ್ಪಾದನಾ ತಂತ್ರಜ್ಞಾನ ಸಂಸ್ಥೆಯಾದ ಹಾಲ್ಡೋರ್ ಟೋಪ್ಸೋ ಮತ್ತು ಇತರ ಕಂಪೆನಿಗಳು ಕಳೆದ ಆಗಸ್ಟ್ನಲ್ಲಿ ಸಂಕಲಿಸಿದ ವರದಿಯು ಅಮೋನಿಯಾವು ಉತ್ತಮ ಇಂಧನ ಎಂಬುದನ್ನು ಗುರುತಿಸಿದೆ. ಅಮೋನಿಯಾವು ಇತರ ಅನಿಲಗಳಿಗಿಂತ ಹೆಚ್ಚಿನ ಶಕ್ತಿ ಸಾಂದ್ರತೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಇಷ್ಟೆಲ್ಲಾ ಉಪಯುಕ್ತತೆ ಹೊಂದಿದ ಅಮೋನಿಯಾ ಇಂಧನ ಉದ್ಯಮವನ್ನು ಸ್ಥಾಪಿಸುವುದು ಸುಲಭವಲ್ಲ. ಒಂದು ಅಂದಾಜಿನ ಪ್ರಕಾರ, ಹಸಿರು ಅಮೋನಿಯಾವು ಸಾಂಪ್ರದಾಯಿಕ ಅಮೋನಿಯಾವನ್ನು ತಯಾರಿಸಲು ಎರಡರಿಂದ ನಾಲ್ಕು ಪಟ್ಟು ಹೆಚ್ಚು ವೆಚ್ಚವಾಗುತ್ತದೆ ಮತ್ತು ಅಣುವನ್ನು ಬಳಸಿಕೊಳ್ಳಲು ಬೇಕಾದ ಕೆಲವು ತಂತ್ರಜ್ಞಾನಗಳಾದ ಅಮೋನಿಯಾ ದಹನ ಇಂಜಿನ್ಗಳು ಇನ್ನೂ ಪ್ರಾಯೋಗಿಕವಾಗಿವೆ. ಹಸಿರು ಅಮೋನಿಯಾ ಪ್ರಯತ್ನಕ್ಕೆ ಯೋಗ್ಯವಾಗಿದೆಯೇ ಎಂದು ಸರಕಾರಗಳು ಮತ್ತು ಮಾರುಕಟ್ಟೆ ನಿರ್ಧರಿಸಬೇಕಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮುಂದೊಂದು ದಿನ ಅಮೋನಿಯಾವು ಕೂಡಾ ಭವಿಷ್ಯದ ಇಂಧನವಾಗುವಲ್ಲಿ ಸಂದೇಹವೇ ಇಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X