Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಭಾವಿ ವ್ಯಕ್ತಿಯಿಂದ ಪತ್ರಕರ್ತ...

ಪ್ರಭಾವಿ ವ್ಯಕ್ತಿಯಿಂದ ಪತ್ರಕರ್ತ ಅಭಿಸಾರ್ ಶರ್ಮಾ ಧ್ವನಿ ಹತ್ತಿಕುವ ಯತ್ನ!

ವಾರ್ತಾಭಾರತಿವಾರ್ತಾಭಾರತಿ3 Aug 2025 8:00 AM IST
share
ಪ್ರಭಾವಿ ವ್ಯಕ್ತಿಯಿಂದ ಪತ್ರಕರ್ತ ಅಭಿಸಾರ್ ಶರ್ಮಾ ಧ್ವನಿ ಹತ್ತಿಕುವ ಯತ್ನ!

ಖ್ಯಾತ ಪತ್ರಕರ್ತ ಅಭಿಸಾರ್ ಶರ್ಮಾ ಅವರು ತಮ್ಮ ಧ್ವನಿ ಹತ್ತಿಕ್ಕುವ ಯತ್ನ ಪ್ರಭಾವಿ ವ್ಯಕ್ತಿಯ ಕಡೆಯಿಂದ ನಡೆಯಿತೆಂದು ಹೇಳಿದ್ದಾರೆ.

ಸ್ವತಂತ್ರ ಪತ್ರಕರ್ತರಾಗಿ ಯೂಟ್ಯೂಬ್ ಚಾನೆಲ್ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಕೊಳಕು ಬಯಲು ಮಾಡುವ, ಸರ್ಕಾರದ ತಪ್ಪು ನಡೆಗಳನ್ನು ಸತತ ಟೀಕಿಸುವ ಅಭಿಸಾರ್ ಶರ್ಮಾ ಹೇಗೆ ತಮ್ಮ ಧ್ವನಿ ಹತ್ತಿಕ್ಕಲು ತಮ್ಮ ವಿರುದ್ಧ ಮುಗಿಬೀಳಲಾಗುತ್ತಿದೆ ಎನ್ನುವುದನ್ನು ವೀಡಿಯೊ ಮೂಲಕ ವಿವರಿಸಿದ್ದಾರೆ.

2023 ರಲ್ಲಿ ಅವರ ಮನೆಯ ಮೇಲೆ ಭಯೋತ್ಪಾದನಾ ನಿಗ್ರಹ ದಳ ರೇಡ್ ಮಾಡಿರುವ ಬಗ್ಗೆ, ಈಚೆಗೆ ಇಡಿ ತಮ್ಮನ್ನು ವಿಚಾರಣೆಗೆ ಕರೆದದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಅದಲ್ಲದೆ, ತಮ್ಮನ್ನು ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿಸಲು ನಡೆಸಿದ್ದಿರಬಹುದಾದಂಥ ಒಂದು ಸಂಚಿನಂಥ ಮೊನ್ನೆಯ ಘಟನೆಯ ಬಗ್ಗೆಯೂ ವಿವರಿಸಿದ್ದಾರೆ.

ಭಯೋತ್ಪಾದನಾ ನಿಗ್ರಹ ದಳ ರೇಡ್ ಮಾಡಿದ್ದಾಗ ಮನೆಯಲ್ಲಿ ತಮ್ಮ ತಾಯಿ ಇದ್ದರು. ಅವರು ತುಂಬ ಹೆದರಿದ್ದರು ಎಂದಿರುವ ಅಭಿಸಾರ್ ಶರ್ಮಾ, ಈ ದೇಶದ ಪ್ರಧಾನಿಗೆ ತಿಳಿದಿದೆಯೇ ಎಂದು ಕೇಳಿದ್ದಾರೆ.

ನನ್ನ ತಾಯಿಯ ಕೈಗಳು 48 ಗಂಟೆಗಳ ಕಾಲ ನಡುಗುತ್ತಿದ್ದವು. ನನ್ನ ತಾಯಿಗೆ ಏನಾದರೂ ಸಂಭವಿಸಿದ್ದರೆ, ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಕಳೆದ ಮೂರು ವಾರಗಳಲ್ಲಿ, ಎರಡು ದೊಡ್ಡ ಘಟನೆಗಳು ತಮ್ಮ ವಿಷಯದಲ್ಲಿ ನಡೆದಿರುವುದರ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಈ ದೇಶದ ಪ್ರಭಾವಿ ವ್ಯಕ್ತಿಯೊಬ್ಬರ ಏಜೆಂಟ್ ಒಬ್ಬರು ತಮ್ಮನ್ನು ಭೇಟಿಯಾಗಿ, ಅವರ ವಿರುದ್ಧ ವರದಿ ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು ಎಂದಿದ್ದಾರೆ.

ಅಲ್ಲದೆ, ಮೂರು ವಾರಗಳ ಹಿಂದೆ, ಈಡಿ ಕರೆ ಮಾಡಿ, ಕಳೆದ 8 ವರ್ಷಗಳ ನನ್ನ ಎಲ್ಲಾ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ದಾಖಲೆಗಳೊಂದಿಗೆ ಹಾಜರಾಗಲು ಹೇಳಿತು ಮತ್ತು 12 ಗಂಟೆಗಳ ಕಾಲ ನನ್ನನ್ನು ಪ್ರಶ್ನಿಸಲಾಯಿತು ಎಂದಿದೆ.

ಅದಕ್ಕಾಗಿ ನಾನು ನನ್ನ ಸಮಯವನ್ನು ವ್ಯರ್ಥ ಮಾಡಬೇಕಾಗಿತ್ತು. 4 ವರ್ಷಗಳ ಹಿಂದೆ ಈಡಿಗೆ ನಾನು ಈಗಾಗಲೇ ಉತ್ತರಿಸಿದ್ದ ಪ್ರಶ್ನೆಗಳಿಗೇ ಮತ್ತೆ ಉತ್ತರಿಸಬೇಕಾಗಿತ್ತು ಎಂದಿದ್ದಾರೆ.

ಇದರ ಹೊರತಾಗಿ, ಅವರ ತಮ್ಮ ವಿಷಯದಲ್ಲಿ ನಡೆದ ಮತ್ತೊಂದು ವಿಚಿತ್ರ ಘಟನೆಯನ್ನು ವಿವರಿಸಿದ್ದಾರೆ.

ಕಳೆದ 20 ವರ್ಷಗಳಿಂದ ಗೊತ್ತಿರುವ ಒಬ್ಬ ವ್ಯಕ್ತಿ ಕರೆ ಮಾಡಿ, ಭೇಟಿಯಾಗಬೇಕಿದೆ ಎಂದರು. ನಿರಂತರವಾಗಿ ಆತ ನನ್ನನ್ನು ಭೇಟಿಯಾಗಲು ಪ್ರಯತ್ನಿಸಿದಾಗ, ಕಡೆಗೊಮ್ಮೆ ಭೇಟಿಯಾದೆ. ರೆಸ್ಟೊರೆಂಟ್ ನಲ್ಲಿ ಭೇಟಿಯಾಗಲು ಹೇಳಿದಾಗ ಆತ ಕ್ಲಬ್ ಒಂದರಲ್ಲಿ ತನ್ನದೆ ಲಾಂಜ್ನಲ್ಲಿ ಭೇಟಿಯಾಗಬೇಕೆಂದ. ಅಲ್ಲಿಗೆ ಹೋಗಿ ಭೇಟಿಯಾದೆ ಎಂದಿದ್ದಾರೆ.

ಭೇಟಿಯಾದಾಗ ಆತ ತಾನೊಂದು ವಿಶೇಷ ಗ್ರೂಪ್ನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ, ಫೋನ್ನಲ್ಲಿಯೆ ಹೇಳಿದ್ದರೆ ನೀವು ಭೇಟಿಯಾಗದೆ ಇರುತ್ತಿದ್ದಿರಿ ಎಂದು ಹೇಳಿರಲಿಲ್ಲ ಎಂದು ಹೇಳಿದ ಎಂದು ಅಭಿಸಾರ್ ವಿವರಿಸಿದ್ದಾರೆ.

ಆತ ತನ್ನ ವಿಸಿಟಿಂಗ್ ಕಾರ್ಡ್ ತೋರಿಸಿದ. ಮತ್ತು ಆ ವಿಸಿಟಿಂಗ್ ಕಾರ್ಡ್‌ನಲ್ಲಿ ಅವನು ಸಂಬಂಧ ಹೊಂದಿದ್ದ ಸಂಸ್ಥೆಯ ಉಲ್ಲೇಖವಿತ್ತು. ಆತ ಈ ದೇಶದ ಐದು ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಿಗಾಗಿ ಕೆಲಸ ಮಾಡುತ್ತಿದ್ದ. ಅವರು ಪ್ರಧಾನಿ ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಿತ ಎಂದಿರುವ ಅಭಿಸಾರ್ ಶರ್ಮಾ, ಇದಕ್ಕಿಂತ ಹೆಚ್ಚು ವಿವರಿಸುವ ಅಗತ್ಯ ಇಲ್ಲ ಎಂದಿದ್ದಾರೆ.

ಆ ಪ್ರಭಾವಿ ವ್ಯಕ್ತಿಯ ಏಜೆಂಟ್, ತಮ್ಮ ಶೋಗಳನ್ನು ನಿಲ್ಲಿಸುವಂತೆ ಕೇಳಿಕೊಂಡ ಎಂದು ಅಭಿಸಾರ್ ಶರ್ಮಾ ಹೇಳಿದ್ದಾರೆ.

ನೀವು ಯಾರ ಕಡೆಯಿಂದ ಬಂದಿದ್ದೀರೊ ಆ ವ್ಯಕ್ತಿಯ ವಿರುದ್ಧ ನನಗೆ ಯಾವುದೇ ಅಜೆಂಡಾ ಇಲ್ಲ. ನಾನು ಪತ್ರಕರ್ತ ಮತ್ತು ಸುದ್ದಿ ಬಂದಾಗ, ನಾನು ಅವರ ವಿರುದ್ಧ ವರದಿ ಮಾಡುತ್ತೇನೆ. ಒಂದು ಅಂತರರಾಷ್ಟ್ರೀಯ ಸಂಸ್ಥೆ ಅವರ ಬಗ್ಗೆ ಏನಾದರೂ ಹೇಳುತ್ತಿದ್ದರೆ, ನಾನು ವರದಿ ಮಾಡುತ್ತೇನೆ. ಅಂತರರಾಷ್ಟ್ರೀಯ ನ್ಯಾಯಾಲಯ ಅವರ ಬಗ್ಗೆ ಏನಾದರೂ ಹೇಳುತ್ತಿದ್ದರೆ, ನಾನು ವರದಿ ಮಾಡುತ್ತೇನೆ. ನಾನು ಅದನ್ನು ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ ಎಂದು ತಾವು ಆ ವ್ಯ್ಕಕ್ತಿಗೆ ಹೇಳಿದೆ ಎಂದು ಅಭಿಸಾರ್ ವಿವರಿಸಿದ್ದಾರೆ.

ಸತ್ಯಗಳಿಲ್ಲದೆ ವರದಿ ಮಾಡಿದ್ದಿದ್ದರೆ, ನೀವು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಿರಿ. ನೀವು ಇಲ್ಲಿಯವರೆಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ನೀವು ಅಂಥ ಯಾವುದನ್ನೂ ಕಂಡಿಲ್ಲ ಎಂತಲೂ ಆತನಿಗೆ ಹೇಳಿದೆ ಎಂದಿದ್ಧಾರೆ.

ಗೋದಿ ಮೀಡಿಯಾ ಬಿಜೆಪಿಗೆ ಸಂಪೂರ್ಣ ತಲೆಬಾಗುತ್ತಿದೆ. ನಾನು ತಲೆಬಾಗುವ ಪತ್ರಕರ್ತನಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದರ ಬಗ್ಗೆಯೂ ಶರ್ಮಾ ಹೇಳಿಕೊಂಡಿದ್ದಾರೆ.

ಈ ಮಾತುಕತೆಗಳು ನಡೆಯುತ್ತಿರುವಾಗ, ಇದ್ದಕ್ಕಿದ್ದಂತೆ ಬಾಗಿಲು ತೆರೆದು ಒಬ್ಬ ವ್ಯಕ್ತಿ ಬಂದ. ಆತನ ಕೈಯಲ್ಲಿ ಕಂದು ಬಣ್ಣದ ಲಕೋಟೆ ಮತ್ತು ಬಹಳಷ್ಟು ಹಣವಿತ್ತು. ತಾನು ಹಲವು ಲಕ್ಷ ರೂಪಾಯಿಗಳನ್ನು ತಂದಿರುವುದಾಗ ಹೇಳಿದ. ಅದನ್ನು ಮೇಜಿನ ಮೇಲೆ ಇಟ್ಟ. ನನ್ನೊಂದಿಗಿದ್ದ ಪರಿಚಿತ ವ್ಯಕ್ತಿ, ಆ ಪ್ರಭಾವಿಯ ಏಜೆಂಟ್‌ನ ಮುಗುಳ್ನಗುತ್ತ ಕೂತಿದ್ದ. ಅವನು ಏನು ಹೇಳಲು ಪ್ರಯತ್ನಿಸುತ್ತಿದ್ದಾನೆಂದು ನನಗೆ ತಿಳಿಯಲಿಲ್ಲ. ಆತ ಸ್ವಲ್ಪ ಕೆಲಸವಿದೆ ಎಂದು ಹೊರಟುಬಿಟ್ಟ ಎಂದು ಅಭಿಸಾರ್ ವಿವರಿಸಿದ್ದಾರೆ.

ಆ ಸಮಯದಲ್ಲಿ ನನಗೆ ಏನಾಯಿತು ಎಂದು ನನಗೆ ತಿಳಿದಿಲ್ಲ, ನನಗೆ ವಿಚಿತ್ರವಾದ ಭಯ, ವಿಚಿತ್ರ ಆತಂಕ ಶುರುವಾಯಿತು. ಏನಾಗಲಿದೆ ಎಂದು ನಾನು ಯೋಚಿಸಿದೆ. ದಾಳಿ ನಡೆಯಲಿದೆಯೇ? ಈಗ ಇದ್ದಕ್ಕಿದ್ದಂತೆ ಯಾರಾದರೂ ಕೋಣೆಗೆ ಬರುತ್ತಾರೆಯೇ? ಏಕೆಂದರೆ ಆ ಕೋಣೆಯೊಳಗೆ ನನ್ನ ಮುಂದೆ ನಗದು ಇತ್ತು. ಲಕ್ಷಾಂತರ ರೂಪಾಯಿ ನಗದು. ಮತ್ತು ಆ ಪ್ರಭಾವಿ ವ್ಯಕ್ತಿಯ ವಿರುದ್ಧ ವರದಿ ಮಾಡುವುದನ್ನು ನಿಲ್ಲಿಸುವಂತೆ ಹೇಳುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಹಣವನ್ನು ಬಿಟ್ಟು ಹೊರಗೆ ಹೋಗಿದ್ದ. ನಾನು ಕೂಡ ಎದ್ದು ಹೊರಗೆ ಹೋದೆ ಎಂದು ವಿವರಿಸಿದ್ದಾರೆ.

ತಮ್ಮ ಮೇಲೆ ಬ್ಲ್ಯಾಕ್ಮೇಲ್ ಆಪಾದನೆ ಹೊರಿಸಬಹುದು, ಇದ್ದಕ್ಕಿದ್ದಂತೆ ಪೊಲೀಸರು ದಾಳಿ ಮಾಡಿ, ಇದು ಲಂಚದ ಹಣ ಎಂದು ಹೇಳಬಹುದು, ಬಂಧಿಸಬಹುದು ಎಂದೆಲ್ಲ ಅನ್ನಿಸಿತು ಎಂದಿದ್ದಾರೆ.

ನಾನು ಇದನ್ನು ನನ್ನ ಹೆಂಡತಿ, ನನ್ನ ಹೆತ್ತವರು ಮತ್ತು ರವೀಶ್ ಜೊತೆ ಹಂಚಿಕೊಂಡೆ. ಬಹುಶಃ ನೀವು ಅದೃಷ್ಟವಂತರು. ಈ ಸಭೆಯ ಉದ್ದೇಶ ನಿಮಗೆ ಲಂಚ ನೀಡುವುದಲ್ಲ, ಈ ಸಭೆಯ ಉದ್ದೇಶ ನಿಮ್ಮನ್ನು ಬಲೆಗೆ ಬೀಳಿಸುವುದು ಎಂದು ರವೀಶ್ ಹೇಳಿದರು ಎಂದು ಅಭಿಸಾರ್ ಶರ್ಮಾ ಹೇಳಿದ್ದಾರೆ.

ಬಹುಶಃ ಒಂದು ತಂಡ ಕಾಯುತ್ತಿರಬಹುದು ಮತ್ತು ನಾನು ಹೊರಬಂದ ಕಾರಣ ಯೋಜನೆ ಕಾರ್ಯರೂಪಕ್ಕೆ ಬರದಿರುವ ಸಾಧ್ಯತೆಯೂ ಇದೆ ಎಂದಿದ್ದಾರೆ.

ನಿಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನ ನಡೆಯುತ್ತಿರುವ ಸಾಧ್ಯತೆಯಿದೆ ಎಂದು ಇತರರು ಕೂಡ ಹೇಳಿದ್ಧಾಗಿ ವೀಡಿಯೊದಲ್ಲಿ ಅವರು ಹೇಳಿಕೊಂಡಿದ್ದಾರೆ.

ಈ ಹಿಂದೆ ಆದಾಯ ತೆರಿಗೆ ಇಲಾಖೆ ತಮ್ಮ ವಿರುದ್ಧ 14 ಕೋಟಿ ತೆರಿಗೆ ವಂಚನೆಗಾಗಿ ಪ್ರಕರಣ ದಾಖಲಿಸಿತ್ತು. ಪ್ರತಿ ಎರಡು ತಿಂಗಳಿಗೊಮ್ಮೆ ಆದಾಯ ತೆರಿಗೆ ಕಚೇರಿಯಲ್ಲಿ ಹಾಜರಾಗಬೇಕಾದ ಸ್ಥಿತಿ ಇತ್ತು ಎಂತಲೂ ಹೇಳಿದ್ದಾರೆ.

ಪ್ರಕರಣ ನ್ಯಾಯಾಲಯಕ್ಕೆ ಹೋಯಿತು ಮತ್ತು ನಾವು ಗೆದ್ದೆವು. ನ್ಯಾಯಾಲಯ ತನ್ನ ತೀರ್ಪಿನಲ್ಲಿ ನನಗೂ ಮತ್ತು ನನ್ನ ಪತ್ನಿಗೂ ಕಿರುಕುಳ ನೀಡಲು ಈ ಎಲ್ಲಾ ಪ್ರಕರಣಗಳನ್ನು ದಾಖಲಿಸಿದ ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿತ್ತು ಎಂಬುದನ್ನು ನೆನಪಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X