Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪಾರಿವಾಳದ ಹಿಕ್ಕೆಗಳ ಸಮಸ್ಯೆ;...

ಪಾರಿವಾಳದ ಹಿಕ್ಕೆಗಳ ಸಮಸ್ಯೆ; ಬ್ಯಾಡ್ಮಿಂಟನ್ ಆಟಗಾರ್ತಿಯ ಆರೋಗ್ಯ ಕಳವಳ ತಪ್ಪಲ್ಲ

ವಾರ್ತಾಭಾರತಿವಾರ್ತಾಭಾರತಿ14 Jan 2026 7:29 PM IST
share
ಪಾರಿವಾಳದ ಹಿಕ್ಕೆಗಳ ಸಮಸ್ಯೆ; ಬ್ಯಾಡ್ಮಿಂಟನ್ ಆಟಗಾರ್ತಿಯ ಆರೋಗ್ಯ ಕಳವಳ ತಪ್ಪಲ್ಲ

2026ರ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಮೈದಾನದ ಒಳಗೆ ಪಾರಿವಾಳದ ಹಿಕ್ಕೆಗಳು ಇರುವುದು ಗಂಭೀರ ಆರೋಗ್ಯ ಸಮಸ್ಯೆ ತರಲಿದೆ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಮಿಯಾ ಹೇಳಿರುವುದು ವೈರಲ್ ಆಗಿದೆ.

ಡ್ಯಾನಿಷ್ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಮಿಯಾ ಬ್ಲಿಚ್ಫೆಲ್ಡ್‌ಟ್ ಮತ್ತೆ ಭಾರತದ ಪಾರಿವಾಳದ ಸಮಸ್ಯೆಯನ್ನು ಮುನ್ನೆಲೆಗೆ ತಂದಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 2026ರ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಮೈದಾನದ ಒಳಗೆ ಪಾರಿವಾಳದ ಹಿಕ್ಕೆಗಳು ಇರುವುದು ಗಂಭೀರ ಆರೋಗ್ಯ ಸಮಸ್ಯೆ ತರಲಿದೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ಬೇಗನೇ ವೈರಲ್ ಆಗಿದೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ.

ಪಾರಿವಾಳದ ಹಿಕ್ಕೆಗಳು ಸಮಸ್ಯೆ ಏಕೆ?

ಪಾರಿವಾಳದ ಹಿಕ್ಕೆಗಳನ್ನು ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಲಾಗಿದೆ. ಮುಖ್ಯವಾಗಿ ಹೆಚ್ಚು ಓಡಾಟವಿರುವ ಸ್ಥಳಗಳಲ್ಲಿ ಇದು ನೈರ್ಮಲ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಭಾರತದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ‘ಕರುಣೆ’ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ದೇವಾಲಯಗಳು, ಉದ್ಯಾನವನಗಳು ಮತ್ತು ವಸತಿ ಸಂಕೀರ್ಣಗಳ ಬಾಲ್ಕನಿಗಳಲ್ಲಿ ಅವುಗಳಿಗೆ ಆಹಾರ ನೀಡಲಾಗುತ್ತದೆ. ಆದರೆ ಪಾರಿವಾಳಗಳು ಹಾರಾಡುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಬಹುದು ಎಂದು ಪರಿಗಣಿಸಲಾಗಿದೆ.

ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ಪಾರಿವಾಳ

ವೈದ್ಯರ ಪ್ರಕಾರ ಪಾರಿವಾಳದ ಹಿಕ್ಕೆಗಳಲ್ಲಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಪ್ರೋಟೀನ್‌ಗಳು ಇರುವುದರಿಂದ ಇದು ‘ಅತಿಸೂಕ್ಷ್ಮ ನ್ಯುಮೊನೈಟಿಸ್’ ಎನ್ನುವ ಗಂಭೀರ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಹುದು.

ಪಾರಿವಾಳದ ಹಿಕ್ಕೆಗಳಲ್ಲಿ ಕಂಡುಬರುವ ಅತಿ ಅಪಾಯಕಾರಿ ಜೀವಿ ಫಂಗಸ್ ‘ಹಿಸ್ಟೊಪ್ಲಾಸ್ಮ’ ಆಗಿದ್ದು, ಇದು ಹಿಸ್ಟೊಪ್ಲಾಸ್ಮೋಸಿಸ್‌ಗೆ ಕಾರಣವಾಗಬಹುದು ಹಾಗೂ ಶ್ವಾಸಕೋಶಕ್ಕೆ ಹಾನಿ ಉಂಟುಮಾಡುತ್ತದೆ. ಪಾರಿವಾಳದ ಹಿಕ್ಕೆಗಳ ಸುತ್ತ ಪದೇಪದೆ ಓಡಾಡಿದರೆ ಇಂಟರ್ಸ್ಟಿಷಿಯಲ್ ಲಂಗ್ ಡಿಸೀಸ್ (ಐಎಲ್‌ಡಿ)ಗೆ ಕಾರಣವಾಗಿ, ಅಂತಿಮವಾಗಿ ಲಂಗ್ ಫೈಬ್ರೋಸಿಸ್ ಉಂಟಾಗಬಹುದು. ಈ ಹಂತದಲ್ಲಿ ಶ್ವಾಸಕೋಶಗಳು ಗಟ್ಟಿಯಾಗುತ್ತವೆ ಹಾಗೂ ಗೀಚುಗಳು ಮೂಡುತ್ತವೆ. ಆಗ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಆಮ್ಲಜನಕದ ಬೆಂಬಲದ ಅಗತ್ಯ ಬೀಳಬಹುದು. ಮಾರಕವಾಗಿ ಪರಿಣಮಿಸಿದಲ್ಲಿ ಶ್ವಾಸಕೋಶ ಕಸಿಯ ಅಗತ್ಯವೂ ಬರುವ ಸಾಧ್ಯತೆ ಇದೆ.

ಜನರು ಗಮನಿಸಬೇಕಾದ ಚಿಹ್ನೆಗಳು ಯಾವುವು?

ಪದೇಪದೆ ಕೆಮ್ಮು, ಉಸಿರಾಟ ಕಷ್ಟವಾಗುವುದು, ಎದೆ ಬಿಗಿತ ಅಥವಾ ಸುಸ್ತು ಕಾಣಿಸಿಕೊಂಡರೆ ಎಚ್ಚರಿಕೆಯ ಗಂಟೆ ಎಂದುಕೊಳ್ಳಬೇಕು. ಬಹಳ ದೀರ್ಘಕಾಲ ಪಾರಿವಾಳದ ಹಿಕ್ಕೆಗಳ ನಡುವೆ ಇದ್ದಲ್ಲಿ ಜ್ವರ, ತೂಕ ನಷ್ಟ ಮತ್ತು ಶ್ವಾಸಕೋಶಗಳಲ್ಲಿ ಗೀರುಗಳು ಕಂಡುಬರಬಹುದು. ಶಿಲೀಂಧ್ರ ಸೋಂಕು ತೀವ್ರವಾಗಿದ್ದರೆ ಶ್ವಾಸಕೋಶವಿಡೀ ರೋಗದ ಚಿಹ್ನೆಗಳು ಹರಡಿರುತ್ತವೆ. ಆಸ್ತಮಾ ಇರುವವರಿಗೆ ಆಗಾಗ್ಗೆ ವೀಜಿಂಗ್ ಕಾಣಿಸಿಕೊಳ್ಳಬಹುದು. ಪಾರಿವಾಳಗಳು ಇರುವ ಕಡೆ ಅಸಹಜವಾದ ಉಸಿರಾಟದ ತೊಂದರೆ ಕಂಡುಬಂದರೆ ವೈದ್ಯಕೀಯ ಪರೀಕ್ಷೆ ಅಗತ್ಯ.

ರೋಗ ತಪ್ಪಿಸಲು ಏನು ಮಾಡಬಹುದು?

ಬಾಲ್ಕನಿ ಅಥವಾ ಕಿಟಕಿಯನ್ನು ಸ್ವಚ್ಛವಾಗಿಡಬೇಕು. ಬಾಲ್ಕನಿಯ ಸುತ್ತ ಪಾರಿವಾಳಗಳ ಗೂಡುಗಳಿಗೆ ಅವಕಾಶ ಕೊಡಬಾರದು. ಪಾರಿವಾಳದ ಹಿಕ್ಕೆಗಳನ್ನು ಸ್ವಚ್ಛಗೊಳಿಸುವಾಗ ಎನ್95 ಮಾಸ್ಕ್ ಮತ್ತು ಗ್ಲವ್ಸ್ ಧರಿಸಬೇಕು. ಮೊದಲಿಗೆ ಸ್ಥಳಕ್ಕೆ ನೀರು ಹರಿಸಿ ನಂತರ ಸ್ವಚ್ಛಗೊಳಿಸಿದರೆ ಧೂಳು ಹರಡುವುದಿಲ್ಲ. ಪಾರಿವಾಳಗಳು ಓಡಾಡುವ ಸ್ಥಳದ ಬಳಿ ಬಟ್ಟೆಗಳನ್ನು ಒಣಗಿಸಬಾರದು. ಸಾರ್ವಜನಿಕ ಪ್ರದೇಶಗಳಲ್ಲಿ ಪಾರಿವಾಳಗಳು ಹೆಚ್ಚಾಗಿ ಓಡಾಡುತ್ತಿದ್ದರೆ ಅಧಿಕಾರಿಗಳು ಸೋಂಕುರಹಿತಗೊಳಿಸುವ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ಅವಕಾಶ ಕೊಡಬಾರದು.

Tags

Pigeon droppingsHealth concernsBadminton playerSports safetyHygiene issuesPublic healthAthlete welfare
share
ವಾರ್ತಾಭಾರತಿ
ವಾರ್ತಾಭಾರತಿ
Next Story
X