Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜನರ ದುಡ್ಡಲ್ಲಿ ' ಹೇರ್ ಕಟ್ '...

ಜನರ ದುಡ್ಡಲ್ಲಿ ' ಹೇರ್ ಕಟ್ ' ಮಾಡಿಸಿಕೊಳ್ಳುವ ಬ್ಯಾಂಕುಗಳು !

ಬ್ಯಾಂಕುಗಳು ರೈಟ್ ಆಫ್ ಮಾಡಿದ 10.57 ಲಕ್ಷ ಕೋಟಿ ಸಾಲದಲ್ಲಿ ಬಡವರದ್ದೆಷ್ಟು ? ; ಜನರಿಗೆ ಕೊಟ್ಟರೆ ಬೊಬ್ಬಿಡುವ ಆಂಕರ್ ಗಳು ಈಗೆಲ್ಲಿದ್ದಾರೆ ?

ಆರ್. ಜೀವಿಆರ್. ಜೀವಿ30 July 2023 7:49 PM IST
share

- ಆರ್. ಜೀವಿ

ನೀವೊಂದು ಪುಟ್ಟ ಮನೆ ಕಟ್ಟಲು ಐದೋ, ಹತ್ತೋ ಲಕ್ಷ ಸಾಲ ತೆಗೊಂಡಿದ್ದರೆ ಅದರ ವಸೂಲಿಗೆ ಬ್ಯಾಂಕುಗಳು ಹೇಗೆ ನಿಮ್ಮ ಬೆನ್ನು ಬೀಳುತ್ತವೆ ಎಂದು ನಿಮಗೆ ಬಹಳ ಚೆನ್ನಾಗೇ ಗೊತ್ತಿರುತ್ತೆ. ಒಬ್ಬ ರೈತ ತೆಗೆದುಕೊಂಡ ಒಂದೆರಡು ಲಕ್ಷದ ಸಾಲದ ಕಂತು ಬಾಕಿಯಾದರೆ ಬ್ಯಾಂಕುಗಳು ಆತನನ್ನು ಹೈರಾಣು ಮಾಡಿಬಿಡುತ್ತವೆ.

ಒಬ್ಬ ಜನಸಾಮಾನ್ಯ ತುರ್ತು ಅಗತ್ಯಕ್ಕಾಗಿ ತೆಗೆದುಕೊಂಡ ಸಣ್ಣ ಸಾಲ ಸಕಾಲಕ್ಕೆ ಮರುಪಾವತಿಯಾಗದಿದ್ದರೆ ಆತನ ಮಾನವನ್ನು ಇಡೀ ಊರೆದುರು ಹರಾಜು ಹಾಕುತ್ತದೆ ನಮ್ಮ ವ್ಯವಸ್ಥೆ. ಆದರೆ ನಮ್ಮ ಬ್ಯಾಂಕುಗಳಲ್ಲಿ ಕೋಟಿಗಟ್ಟಲೆ ಸಾಲ ಪಡೆಯುವ ದೊಡ್ಡ ಬಿಲಿಯನೇರ್, ಮಿಲಿಯನೇರ್ ಗಳು ಏನು ಮಾಡುತ್ತಿದ್ದಾರೆ ಗೊತ್ತಾ ? ಅವರ ಸಾಲಗಳನ್ನು ಬ್ಯಾಂಕುಗಳು ಏನು ಮಾಡುತ್ತಿವೆ ಎಂದು ನಿಮಗೆ ಗೊತ್ತಾ ?

ಅದರ ವಿವರಕ್ಕೆ ಬರುವ ಮೊದಲು ಒಂದಿಷ್ಟು ಪ್ರಾಥಮಿಕ ಮಾಹಿತಿ ಕೊಡ್ತೀವಿ. ದೇಶೋದ್ಧಾರ ಮಾಡಲು ಬಂದಿ​ದ್ದೇವೆ ಎಂದು ಬಿಂಬಿಸಿಕೊಳ್ಳುವ ​ನರೇಂದ್ರ ಮೋದಿ ಅಧಿಕಾರದ 9 ವರ್ಷಗಳಲ್ಲಿ ಈ ದೇಶದ ಸಾಲ 100 ಲಕ್ಷ ಕೋಟಿ ಹೆಚ್ಚಿದೆ. ಮೋದಿ ಅಧಿಕಾರಕ್ಕೆ ಬರುವ ಮೊದಲು 55.8 ಲಕ್ಷ ಕೋಟಿ ಇದ್ದ ದೇಶದ ಸಾಲ ಈಗ 155.​7 ಲಕ್ಷ ಕೋಟಿಯಾಗಿದೆ. ಯಾರಿಗೋಸ್ಕರ ಹೀಗೆ ದೇಶವನ್ನು ಸಾಲದ ಶೂಲಕ್ಕೆ ಏರಿಸಲಾಗಿದೆ ಎಂದು ಚೌಕಿದಾರನನ್ನು ಯಾರೂ ಕೇಳುವುದಿಲ್ಲ.

ಆದರೆ, ನಮ್ಮ ಕಣ್ಣೆದುರು ಬಯಲಾಗುತ್ತಲೇ ಇರುವ ಮತ್ತೊಂದು ​ಕಟು ಸತ್ಯವೂ ಇದೆ. ವರ್ಷ ವರ್ಷವೂ ಬ್ಯಾಂಕ್ಗಳು ರೈಟ್ ಆಫ್ ಮಾಡುವ ಬ್ಯಾಡ್ ಲೋನ್ ಅಥವಾ ಅನುತ್ಪಾದಕ ಸಾಲ ಅಂದರೆ NPA ಮೊತ್ತ ಈ ಸರಕಾರ ಬಂದ ಮೇಲೆ ಒಂದೇ ಸಮನೆ ಜಾಸ್ತಿಯಾಗ್ತಾನೇ ಇದೆ. ಮತ್ತು ಹೀಗೆ ರೈಟ್ ಆಫ್ ಆಗುತ್ತಿರೋ ಭಾರೀ ಮೊತ್ತದ ಸಾಲಗಳೆಲ್ಲವೂ ಈ ಸರ್ಕಾರ ಮತ್ತು ಸಿರಿವಂತರ ನಡುವಿನ ಕೆಟ್ಟ ಸಂಬಂಧದ ದುಷ್ಫಲವೇ ಆಗಿವೆ​ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸತ್ಯ.

ಇದೆಲ್ಲ ಕಣ್ಣೆದುರಿಗೇ ಕಾಣಿಸುತ್ತಿದ್ದರೂ, ಅತ್ಯಂತ ಸಿರಿವಂತರೇ ಅಧಿಕಾರಸ್ಥರ ಜೊತೆಗೇ ಪೋಸು ಕೊಡುತ್ತ ಈ ದೇಶವನ್ನೇ ಕೊಳ್ಳೆ ಹೊಡೆಯುತ್ತಿದ್ದರೂ, ಮನಸೋ ಇಚ್ಛೆ ಸಾಲ ಪಡೆದು ಶೋಕಿ ಮಾಡುತ್ತಿದ್ದರೂ ಬಿಜೆಪಿ ಮಂದಿ, ಅದರ ಅಂಧ ಬೆಂಬಲಿಗ ಪಡೆ​, ಇಲ್ಲಿನ ಚಾನಲ್ ಗಳು ಅದರ ಬಗ್ಗೆ ಮಾತಾಡುವುದೇ ಇಲ್ಲ.​ ಪ್ರಶ್ನೆ ಕೇಳುವುದೇ ಇಲ್ಲ. ಡಿಬೇಟ್, ಚರ್ಚೆ , ಬೊಬ್ಬೆ ಯಾವುದೂ ಇಲ್ಲ.

ಆದರೆ, ಬಡವರಿಗೆ ಶೋಷಿತ ಸಮುದಾಯಕ್ಕೆ ಒಂದಿಷ್ಟು ​ಯೋಜನೆ ಕೊಟ್ಟರೆ ದೇಶವೇ ಮುಳುಗಿತು ಎಂಬಂತೆ ಕಿರುಚಾಡುವುದಕ್ಕೆ ಮಾತ್ರ ಇವರೆಲ್ಲ ಎದ್ದು ಬಿದ್ದು ಬರುತ್ತಾರೆ. ಸರ್ಕಾರದ ತುತ್ತೂರಿಯಾಗಿರುವ ​ಚಾನಲ್ ಗಳು, ಪತ್ರಿಕೆಗಳು, ಅದರ ಐಟಿ ಸೆಲ್ ಪದೇ ಪದೇ ಅದಕ್ಕೆ ದನಿಗೂಡಿಸುತ್ತ ಹಾ ಹೋ ಎನ್ನುತ್ತವೆ.

ಆದರೆ, ಅವರೆಲ್ಲ ಒಮ್ಮೆ ಕಣ್ಣು ಬಿಟ್ಟು ನೋಡಬೇಕಾದ ​ಕಹಿ ಸತ್ಯ ಒಂದಿದೆ. ನಿಜವಾಗಿ ದೇಶ ದಿವಾಳಿಯಾಗುತ್ತಿರೋದು ಎಲ್ಲಿ ಎಂದು ಅರ್ಥ ಮಾಡಿಕೊಳ್ಳಲು ಆ ಸತ್ಯವನ್ನು ಮುಕ್ತ ಮನಸ್ಸಿನಿಂದ ಅವರು ನೋಡಬೇಕಿದೆ. ಮತ್ತು ಆ ಸತ್ಯವನ್ನು ನಮ್ಮ ಮುಂದಿಟ್ಟಿರೋದು ಬೇರೆ ಯಾರೋ ಅಲ್ಲ, ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್.

ಮಾರ್ಚ್ 2023ರ ಕೊನೆಯಲ್ಲಿ ಬ್ಯಾಂಕ್‌ಗಳು 2.09 ಲಕ್ಷ ಕೋಟಿ ರೂ. ​ಸಾಲವನ್ನು ರೈಟ್ ಆಫ್ ಮಾಡಿವೆ. ಕಳೆದ ಮೂರು ವರ್ಷಗಳಲ್ಲಂತೂ ​ಈ ರೈಟ್ ಆಫ್ ಪ್ರಮಾಣ ಹೆಚ್ಚುತ್ತಲೇ ಹೋಗಿದೆ. ಕಳೆದ ಐದು ವರ್ಷಗಳಲ್ಲಿ ಬ್ಯಾಂಕಿಂಗ್ ವಲಯದಿಂದ ಒಟ್ಟು 10.57 ಲಕ್ಷ ಕೋಟಿ​ ರೂಪಾಯಿ ಸಾಲವನ್ನು ರೈಟ್ ಆಫ್ ಮಾಡಲಾಗಿದೆ ಎಂದು ಆರ್‌ಬಿಐ ಹೇಳಿದೆ. ಆರ್ಟಿಐ ಅಡಿ ಇಂಡಿಯನ್ ಎಕ್ಸ್​ ಪ್ರೆಸ್ ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅದು ಈ ವಿವರ ನೀಡಿದೆ.

RBI ಅಂಕಿಅಂಶಗಳ ಪ್ರಕಾರ, 2012-13ರಿಂದ ಬ್ಯಾಂಕ್‌ಗಳು 15​ ಲಕ್ಷದ 31​ಸಾವಿರದ 453 ಕೋಟಿ​ ರೂಪಾಯಿ ಮೊತ್ತವನ್ನು ರೈಟ್ ಆಫ್ ಮಾಡಿವೆ. ನೆನಪಿಡಬೇಕಾಗಿರೋದು ಏನೆಂದರೆ, ಇದರ ನೇರ ಲಾಭವಾಗುತ್ತಿರೋದು​ ಈ ದೇಶದ ಬಡವರಿಗಲ್ಲ, ಎಲ್ಲದರಲ್ಲೂ ತೆರಿಗೆ ಕಟ್ಟುವ ಜನಸಾಮಾನ್ಯರಿಗಲ್ಲ , ನಮಗೆ ಅನ್ನ ನೀಡೋ ರೈತರಿಗಲ್ಲ, ಈ ದೇಶ ಕಟ್ಟುತ್ತಿರುವ ಕಾರ್ಮಿಕರಿಗೂ ಅಲ್ಲ.

ಇದರ ಬಹುತೇಕ ಲಾಭ ಬಾಚಿಕೊಳ್ಳುತ್ತಿರೋದು ಸರ್ಕಾರ​ ನಡೆಸುವ ಮಂದಿಯ ​ಅಕ್ಕಪಕ್ಕದಲ್ಲಿಯೇ ನಿಂತು ಮಿಂಚುವ ಖದೀಮ​ರು.

ಇದರ ಗರಿಷ್ಟ ಲಾಭ ಪಡೀತಿರೋರು ಬ್ಯಾಂಕುಗಳನ್ನು ಮುಳುಗಿಸಲೆಂದೇ ಸಾಲ ಪಡೆಯುವ ಕೋಟ್ಯಧಿಪತಿ​ಗಳು.

ಹೀಗೆ ರೈಟ್ ಆಫ್ ಆಗುವ ಸಾಲದ ಕಥೆ ಏನಾಗುತ್ತದೆ?

ಈ ಸಾಲಗಳು ಮರುಪಾವತಿಯಾಗದ ಸಾಲಗಳಾಗಿ ಬ್ಯಾಂಕ್‌ಗಳ ಪುಸ್ತಕಗಳಲ್ಲಿ ಉಳಿಯುತ್ತವೆ. ಕಳೆದ ಮೂರು ವರ್ಷಗಳಲ್ಲಿ ರೈಟ್ ಆಫ್ ಮಾಡಿದ 5​ಲಕ್ಷದ 86​ಸಾವಿರದ 891 ಕೋಟಿ ರೂ.ಗಳಲ್ಲಿ ಕೇವಲ 1​ ಲಕ್ಷದ ​9​ಸಾವಿರದ 186 ಕೋಟಿ ರೂ.ಗಳನ್ನು ಮಾತ್ರ ಬ್ಯಾಂಕ್‌ಗಳು ​ಕೊನೆಗೆ ವಸೂಲಿ ಮಾಡಿವೆ. ಇದು ಆರ್‌ಟಿಐ ಉತ್ತರದಲ್ಲಿ ಆರ್ಬಿಐ ಕೊಟ್ಟಿರೊ ಮಾಹಿತಿ.

ಮೂರು ವರ್ಷಗಳ ಅವಧಿಯಲ್ಲಿ ರೈಟ್ ಆಫ್ ಆದ ಸಾಲದ ಮೊತ್ತದ ಕೇವಲ ಶೇ.18.60ರಷ್ಟು ಮಾತ್ರ ವಸೂಲಾಗಿದೆ ಎಂಬ ವಿಚಾರವನ್ನು ಆರ್ಬಿಐ ಬಹಿರಂಗಪಡಿಸಿದೆ.

ಈ ಮೂರು ವರ್ಷಗಳಲ್ಲಿ ಬ್ಯಾಂಕ್ಗಳು ರೈಟ್ ಆಫ್ ಮಾಡಿರೋ ಸಾಲ ಯಾವ ಪ್ರಮಾಣದಲ್ಲಿತ್ತು ಅನ್ನೋದನ್ನು ಒಮ್ಮೆ ಗಮನಿಸಿ.

2021ರ ಮಾರ್ಚ್ ​ ಗೆ ರೈಟ್ ಆಫ್ ಆದ ಮೊತ್ತ 2,02,781 ಕೋಟಿ ರೂ. ಇತ್ತು.

2022ರ ಮಾರ್ಚ್ ​ ಗೆ ಅದರ ಪ್ರಮಾಣ 1,74,966 ಕೋಟಿ ರೂ. ಇತ್ತು.

2023ರ ಮಾರ್ಚ್ ​ ಗೆ 2,09,144 ಕೋಟಿ ರೂ.ಗೆ ಏರಿಕೆಯಾಯಿತು.

ರೈಟ್ ಆಫ್ ಆದ ಸಾಲದಲ್ಲಿ ಈ ಮೂರು ವರ್ಷಗಳಲ್ಲಿ ವಸೂಲಾದದ್ದು ಎಷ್ಟು ಎಂದು ನೋಡೋದಾದರೆ,

2021ರಲ್ಲಿ ಬರೀ 30,104 ಕೋಟಿ ರೂ.

2022ರಲ್ಲಿ 33,534 ಕೋಟಿ ರೂ.

2023ರಲ್ಲಿ ವಸೂಲಾದದ್ದು 45,548 ಕೋಟಿ ರೂ.

ಹೀಗಿರುವಾಗ, ರೈಟ್ ಆಫ್ ಆಗಿರೋ ಸಾಲದ ಗತಿ ​ಕೊನೆಗೆ ಎಲ್ಲಿಗೆ ​ತಲುಪುತ್ತದೆ ಎನ್ನೋದನ್ನು​ ಸುಲಭವಾಗಿ ಊಹಿಸಬಹುದು.

ಯಾವುದೇ ಸಾಲದ ಅಸಲು ಅಥವಾ ಬಡ್ಡಿ ಪಾವತಿ 90 ದಿನಗಳವರೆಗೂ ಬಾಕಿಯಾದರೆ ಅದನ್ನು ಅನುತ್ಪಾದಕ ಸಾಲ ಅಥವಾ NPA ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ಗಳು ತಮ್ಮ ಬ್ಯಾಲನ್ಸ್ ಶೀಟ್ ಶುದ್ಧಗೊಳಿಸುವುದಕ್ಕಾಗಿ ಅಂಥ ಬ್ಯಾಡ್ ಲೋನ್​ ಅನ್ನು ರೈಟ್ ಆಫ್ ಮಾಡುವ ನೀತಿ ಬಳಸುತ್ತವೆ. ಸಾಲದ ಖಾತೆಯಿಂದ ಅಂಥ ಬ್ಯಾಡ್ ಲೋನ್ಗಳ ಖಾತೆಯನ್ನು ಪ್ರತ್ಯೇಕ ಮಾಡಲಾಗುತ್ತದೆ.

ರೈಟ್ ಆಫ್ ಮಾಡುವುದರಿಂದ ಬ್ಯಾಂಕಿಗೆ ತೆರಿಗೆ ಮೊತ್ತವೂ ಕಡಿಮೆಯಾಗುತ್ತದೆ.

​ನಿಯಮಗಳ ಪ್ರಕಾರ ರೈಟ್ ಆಫ್ ಆದ ​ಈ ಸಾಲದ ವಸೂಲಾತಿಯೇನೊ ಮುಂದುವರಿಯುತ್ತದೆ.

ಆದರೆ ಅದು ಯಾವ ಮಟ್ಟದಲ್ಲಿದೆ ಎನ್ನೋದಕ್ಕೂ ನಮ್ಮೆದುರು ನಿದರ್ಶನ ಇದೆ.

ಅನೇಕ ದೊಡ್ಡ ಮತ್ತು ಸಣ್ಣ ಬಾಕಿ ಸಾಲಗಳನ್ನು ವರ್ಷಗಳಿಂದ ಬ್ಯಾಂಕ್‌ಗಳು ರೈಟ್ ಆಫ್ ಮಾಡಿದ್ದರೂ, ಅಂಥ ಸಾಲಗಾರರ ಗುರುತನ್ನು ಬ್ಯಾಂಕ್‌ಗಳು ಅಥವಾ RBI ಬಹಿರಂಗಪಡಿಸಿಲ್ಲ.

2023ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 24,061 ಕೋಟಿ ರೂ. ರೈಟ್ ಆಫ್ ಮಾಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ರೈಟ್ ಆಫ್ ಮಾಡಿರೋ ಮೊತ್ತ 16,578 ಕೋಟಿ ರೂ.

ಯೂನಿಯನ್ ಬ್ಯಾಂಕ್ 19,175 ಕೋಟಿ ರೂ.ಮಾಡಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 10,258 ಕೋಟಿ ರೂ. ಮಾಡಿದೆ.

ಬ್ಯಾಂಕ್ ಆಫ್ ಬರೋಡಾ 17,998 ಕೋಟಿ ರೂ. ರೈಟ್ ಆಫ್ ಮಾಡಿದೆ.

ರೈಟ್ ಆಫ್ ಆದ ಸಾಲದ ವಸೂಲಾತಿ ಪ್ರಕ್ರಿಯೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳಬಹುದು. ಏಕೆಂದರೆ ಅಂಥ ಹೆಚ್ಚಿನ ಸಾಲಗಳು ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ಸಾಮಾನ್ಯವಾಗಿ ಬ್ಯಾಂಕ್‌ಗಳಿಗೆ ಮರುಪಾವತಿ ಮಾಡದವರ ಸಾಲಗಳಾಗಿರುತ್ತವೆ.

ರೈಟ್ ಆಫ್‌ ವಿಚಾರದಲ್ಲಿ RBI ಮಾರ್ಗದರ್ಶನ ಏನೆಂದರೆ,

ಅನಿಯಂತ್ರಿತ ಸಾಲದ ಸನ್ನಿವೇಶದಲ್ಲಿ ಬ್ಯಾಂಕ್ಗಳು ತಮ್ಮ ಒಪ್ಪಿತ ನೀತಿಗಳಂತೆ, NPA ರೈಟ್ ಆಫ್ ಮಾಡುವುದೂ ಸೇರಿದಂತೆ ಸಾಲಗಳ ಕಾರ್ಯಸಾಧ್ಯತೆ ಕುರಿತ ವಾಣಿಜ್ಯಿಕ ಮೌಲ್ಯಮಾಪನದ ಅನುಸಾರ ಮತ್ತು RBI ನ ವಿವೇಕಪೂರ್ಣ ಮಾನದಂಡಗಳಿಗೆ ಒಳಪಟ್ಟು ನಿರ್ಧಾರ ತೆಗೆದುಕೊಳ್ಳಬೇಕು.

ಸಾಲ ವಸೂಲಾತಿಗೆ ಸಂಬಂಧಿಸಿದ ನೀತಿಯ ಕುರಿತಂತೆಯೂ, ಬಾಕಿ ವಸೂಲಾತಿ ವಿಧಾನ, ರೈಟ್ ಆಫ್ ಪ್ರಮಾಣ, ರೈಟ್ ಆಫ್ ನಿರ್ಧಾರಕ್ಕೆ ಮೊದಲು ಗಣನೆಗೆ ತೆಗೆದುಕೊಂಡ ಅಂಶಗಳು, ನಿರ್ಧಾರದ ಹಂತಗಳು, ಉನ್ನತ ಅಧಿಕಾರಿಗಳಿಗೆ ವರದಿ ಮತ್ತು ರೈಟ್ ಆಫ್ ಕುರಿತ ಮೇಲ್ವಿಚಾರಣೆ ಅಗತ್ಯವಿರುತ್ತದೆ.

ರೈಟ್ ಆಫ್ ವಿಚಾರದಲ್ಲಿ ಆರ್ಬಿಐನ ಮಾಜಿ ಅಧಿಕಾರಿಗಳೇ ಆತಂಕ ವ್ಯಕ್ತಪಡಿ​ಸಿದ್ದಾರೆ. “ಇದು ಪಾರದರ್ಶಕವಲ್ಲ ಮತ್ತು ಇದು ಯಾವುದೇ ನೀತಿ ಹೊಂದಿಲ್ಲ. ​ಇದರಲ್ಲಿ ತಪ್ಪಾಗುವ ಸಾಧ್ಯತೆ ಇದೆ. ಕ್ರೆಡಿಟ್ ರಿಸ್ಕ್ ನಿರ್ವಹಣಾ ವ್ಯವಸ್ಥೆಯನ್ನೇ ಇದು ನಾಶಪಡಿಸಬಹುದು. ಮತ್ತು ತಪ್ಪು ಮಾಡುತ್ತಲೇ ಹೋಗುವ ಸ್ಥಿತಿಯೂ ಬರಬಹುದು.​ ಸಾಮಾನ್ಯವಾಗಿ ರೈಟ್ ಆಫ್ ಆಗಬೇಕಾದ ಮೊತ್ತ ಬಹಳ ಸಣ್ಣದು ಹಾಗು ಅದೂ ತೀರಾ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಮಾಡಲಾಗುತ್ತದೆ. ಎಷ್ಟು ರೈಟ್ ಆಫ್ ಮಾಡಲಾಗುತ್ತಿದೆ ಎಂಬುದನ್ನು ಘೋಷಿಸಬೇಕು. ಯಾಕೆಂದರೆ ರೈಟ್ ಆಫ್ ಮಾಡುತ್ತಿರೋದು ಜನರ ಹಣ. ಅದೊಂದು ಹಗರಣ.​ ಜನರ ದುಡ್ಡನ್ನು ರೈಟ್ ಆಫ್ ಮಾಡಿ ಅದರ ಮಾಹಿತಿಯನ್ನೂ ಕೊಡ್ತಾ ಇಲ್ಲ. ಇಂಥ ಹಲವು ಆತಂಕಗಳಿವೆ​" ಎಂದು ಆರ್ ಬಿ ಐ ನ ಮಾಜಿ ಹಿರಿಯ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ .

ಇಷ್ಟೆಲ್ಲದರ ಹೊರತಾಗಿಯೂ , ಐದು ವರ್ಷಗಳಲ್ಲಿ 10 ಲಕ್ಷ ಕೋಟಿಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿರೋದು ನೋಡಿದರೆ, ದೇಶದ ಆರ್ಥಿಕ ಆರೋಗ್ಯದ ಬಗ್ಗೆ ಆತಂಕವಾಗುತ್ತದೆ.

ಸಾಲವನ್ನಾಗಲೀ ಬಡ್ಡಿಯನ್ನಾಗಲೀ ತೀರಿಸದ, ಅಥವಾ ಪಡೆದ ಸಾಲವನ್ನು ಐಷಾರಾಮಕ್ಕಾಗಿ ಬಳಸುತ್ತ, ಸರ್ಕಾರದೊಡನೆ ತಮಗಿರೋ ರಾಜಕೀಯ ಸಂಬಂಧಗಳನ್ನು ಬಳಸಿಕೊಂಡು ಜನರ ಹಣವನ್ನು ಲೂಟಿ ಮಾಡುವ ಖದೀಮ ಕೋಟ್ಯಧಿಪತಿಗಳ ದಂಡೇ ​ಈ ದೇಶದಲ್ಲಿದೆ. ಎನ್ಪಿಎಗಳಲ್ಲಿ ಇಂಥವರ ಸಾಲದ ಪ್ರಮಾಣವೇ ಹೆಚ್ಚು. ಹೀಗಾಗಿ ನಮ್ಮ ದೇಶದಲ್ಲಿ ಎನ್ಪಿಎಗಳೆಂದರೆ ಉದ್ಯಮಪತಿಗಳು ಮತ್ತು ಸರ್ಕಾರದ ಜಂಟಿ ದರೋಡೆಯೇ ಆಗಿದೆ.

2014ರಲ್ಲಿ ರಘುರಾಮ್ ರಾಜನ್ ಅವರು ಆರ್ಬಿಐ ಗವರ್ನರ್ ಆಗಿ ಬಂದ ಮೇಲೆ ಬ್ಯಾಂಕ್ ವಂಚಕರ ದೊಡ್ಡ ಪಟ್ಟಿಯನ್ನೇ 2015ರಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದರು. ತಮಾಷೆಯೆಂದರೆ ಆ ಪಟ್ಟಿಯಲ್ಲಿದ್ದ ಮೆಹುಲ್ ಚೋ​ಕ್ಸಿ, ವಿಜಯ್ ಮಲ್ಯ, ನೀರವ್ ಮೋದಿಯವರ ಜೊತೆ ಮೋದಿ ಸರ್ಕಾರ ಬಹಿರಂಗವಾಗಿ ಕಾಣಿಸಿಕೊಳ್ಳುತ್ತ, ಅವರು ದೇಶಕ್ಕೆ ದೊಡ್ಡ ಆರ್ಥಿಕ ಕೊಡುಗೆ ಕೊಟ್ಟವರೆಂದು ಹಾಡಿಹೊಗಳು​ತ್ತಾ ನಿಂತುಬಿಟ್ಟಿತು.​ " ಮೇಹುಲ್ ಭಾಯ್ ... ಅಂತ ಸ್ವತಃ ಪ್ರಧಾನಿಯೇ ಈ ಖದೀಮರನ್ನು ಎಲ್ಲರೆದುರು ಕರೆದರು. ಈ ಖದೀಮರ ಮೇಲೆ ನಿಗಾ ಇಟ್ಟಿದ್ದರೂ ಏನೂ ಮಾಡಲಾರದ ಇಕ್ಕಟ್ಟಿಗೆ ಬ್ಯಾಂಕುಗಳು ಸಿಲುಕಿದವು.

ಈ ಮಲ್ಯ, ಚೋ​ಕ್ಸಿ, ನೀರವ್ ಮೋದಿಗಳಿಂದಲೇ ಬ್ಯಾಂಕ್ಗಳಿಗೆ ಅಂದಾಜು 30 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಪಂಗನಾಮ ಬಿದ್ದಿದೆ. ಅದೆಲ್ಲ ಗೊತ್ತಾಗುವ ಮೊದಲೇ ಮೋದಿ ಸರ್ಕಾರದ ಮೂಗಿನಡಿಯಲ್ಲಿಯೇ​ ಇವರೆಲ್ಲ ಒಬ್ಬೊಬ್ಬರಾಗಿ ದೇಶ ಬಿಟ್ಟು ಹಾರಿಯಾಗಿತ್ತು.

ಇದೇ ಪಟ್ಟಿಯಲ್ಲಿ ಮೋದಿಯವರ ಪರಮಾಪ್ತ ರಾಮ್ದೇವ್ ಒಡೆತನದ ರುಚಿ ಸೋಯಾ, ರೂಯ ಕಂಪನಿಯ ಎಸ್ಸಾರ್ ಸ್ಟೀಲ್ಸ್ ಮೊದಲಾದವು ಇವೆಯಾದರೂ ಮೋದಿ ಸರ್ಕಾರ ಅವುಗಳ ವಿರುದ್ಧ ಏನಾದರೂ ಕ್ರಮ ತೆಗೆದುಕೊಂಡಿದೆಯೆ ಎಂದರೆ ​... ಉಹೂಂ,​... ಇಲ್ಲ. ಬದಲಿಗೆ ಬಿಕ್ಕಟ್ಟಿನಲ್ಲಿರುವ ಕಂಪನಿಗಳು ಎಂದು ಅವುಗಳ ಸಾಲ ರೈಟ್ ಆಫ್ ಮಾಡುವ ತಯಾರಿ ನಡೆಸಿದೆ.

ಇಂಥ ಕಂಪನಿಗಳ ಸಾಲವನ್ನು ಬಹುಪಾಲು ರೈಟ್ ಆಫ್ ಮಾಡಿ, ಇತರ ಕಂಪನಿಗಳು ಅವನ್ನು ಕೊಂಡುಕೊಳ್ಳುವಂತೆ ಮಾಡುವುದೂ ನಡೆಯುತ್ತದೆ ಮೋದಿ ಸರ್ಕಾರದ ಅಡಿಯಲ್ಲಿ. ಅದಕ್ಕೂ ಮತ್ತೆ ಬ್ಯಾಂಕ್ಗಳೇ ​ದೊಡ್ಡ ಮೊತ್ತದ ಸಾಲ ಕೊಡಬೇಕು. ಇದನ್ನು ಬ್ಯಾಂಕ್ ಪರಿಭಾಷೆಯಲ್ಲಿ ಹೇರ್ ಕಟ್ ಸ್ಕೀಮ್ ಎನ್ನಲಾಗುತ್ತದೆ. ಹೀಗೆ ಬ್ಯಾಂಕ್ಗಳು​ ಜನರ ತೆರಿಗೆ ಹಣದಿಂದ ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದರೆ, ಸಾಲಮುಕ್ತವಾದ ಕಂಪನಿಯನ್ನು ಮತ್ತದರ ಹಿಂದಿನ ಮಾಲೀಕರ ಸಂಬಂಧಿಗಳೇ ಕೊಂಡುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಹೀಗೆ ಭ್ರಷ್ಟಾಚಾರ ವಿರೋಧಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಮೋದಿ ಸರ್ಕಾರ ಭ್ರಷ್ಟಾತಿ ಭ್ರಷ್ಟರನ್ನು ಪೋಷಿಸುತ್ತ ವಿಕಟ ನಗೆ ಬೀರುತ್ತಿರೋದು, ಜನರ ಹಣ ಮತ್ತವರು ಕಟ್ಟುವ ತೆರಿಗೆ ಎರಡನ್ನೂ ದೋಚುತ್ತಿರೋದು ಆತಂಕಕಾರಿ. ಇಷ್ಟೆಲ್ಲ ನಡೆಯುತ್ತಿರುವಾಗ, ಬಡವರಿಗೆಂದು, ಅವರು ಬದುಕಿನಲ್ಲಿ ಎರಡು ಹೊತ್ತಿನ ಊಟವನ್ನಾದರೂ ನೆಮ್ಮದಿಯಿಂದ ಮಾಡಲು ಸಾಧ್ಯವಾಗಲಿ ಎಂದು ​ಅನ್ನಭಾಗ್ಯ, ಶಕ್ತಿಯಂತಹ ಯೋಜನೆ​ಗಳನ್ನು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡರೆ ಅದಕ್ಕೂ ಅಡ್ಡಗಾಲು ಹಾಕಲು ಇವರೇ ಪ್ರಯತ್ನಿಸಿದರು ಎನ್ನೋದನ್ನೂ ಜನರು ನೋಡಿದ್ದಾರೆ.

ಬಡವರು ಎರಡು ಹೊತ್ತು ನೆಮ್ಮದಿಯಾಗಿ ಉಣ್ಣುವಂತಾದರೆ​, ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರೆ ದೇಶ ದಿವಾಳಿಯಾಯಿತು ಎನ್ನುವ ಈ ಮಂದಿ, ದೇಶದ ಶ್ರೀಮಂತರ ಜೊತೆ ಕೈಜೋಡಿಸಿ ಮಾಡುತ್ತಿರುವುದು ಏನು ದೇಶಸೇವೆಯೋ ದಿವಾಳಿ ತೆಗೆಯುವ ಕೆಲಸವೊ? ಮೋದಿ ಹೋದಲ್ಲಿ ಬಂದಲ್ಲಿ, ತುತ್ತೂರಿ ಊದುತ್ತ ಹೋಗುವ ಮಾಧ್ಯಮಗಳಿಗೆ ಬೇರೆಯದನ್ನು ಕಾಣುವ, ಗ್ರಹಿಸುವ ಕಣ್ಣು ಕಿವಿಯಂತೂ ಇಲ್ಲ. ಈ ದೇಶದ ಬಡವರ ಬದುಕಿನ ಬಗ್ಗೆ ಈ ಮಾಧ್ಯಮಗಳಿಗೆ ಕಿಂಚಿತ್ ಅರಿವೂ ಇದ್ದಂತಿಲ್ಲ. ಬಡ​ವರು, ರೈತರು, ಕಾರ್ಮಿಕರು ನೆಮ್ಮದಿ ಕಾಣುವುದೂ ಇವರಿಗೆ ಬೇಕಿಲ್ಲ. ಆದರೆ, ಕೊಂಚ ನಾಚಿಕೆಯಾದರೂ ಈ ಮಾಧ್ಯಮಗಳಿಗೆ ಇರಬೇಕಲ್ಲವೆ?

share
ಆರ್. ಜೀವಿ
ಆರ್. ಜೀವಿ
Next Story
X