Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಚಂದ್ರನ ಅಭಿಯಾನಗಳ ಹಿಂದೆ...

ಚಂದ್ರನ ಅಭಿಯಾನಗಳ ಹಿಂದೆ...

ಆಮಿತಾಭ್ ಸಿನ್ಹಾಆಮಿತಾಭ್ ಸಿನ್ಹಾ25 Aug 2023 4:25 PM IST
share
ಚಂದ್ರನ ಅಭಿಯಾನಗಳ ಹಿಂದೆ...
ಚಂದ್ರಯಾನ-೩ ಅಭಿಯಾನವು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಸಾರ್ವತ್ರಿಕವಾಗಿ ಚಂದ್ರ ಅಭಿಯಾನಗಳ ಕುರಿತು ಬಹಳಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ನಿಮಗೆ ಗೊತ್ತಿಲ್ಲದಿರಬಹುದಾದ ಕೆಲವು ವಿಷಯಗಳು ಇಲ್ಲಿವೆ.....

ಚಂದ್ರಯಾನ-೧ ಚಂದ್ರನ ಮೇಲೆ ತನ್ನ ಕುರುಹು ಬಿಡುವುದನ್ನು

ಖಚಿತಪಡಿಸಿದ್ದು ಡಾ. ಕಲಾಂ

೨೦೦೮ರಲ್ಲಿ ಭಾರತದ ಮೊದಲ ಚಂದ್ರ ಅಭಿಯಾನ ಚಂದ್ರಯಾನ-೧ ಕೇವಲ ಒಂದು ಆರ್ಬಿಟರ್ ಅಥವಾ ಕಕ್ಷೆಗಾಮಿಯಾಗಿತ್ತು. ಬಿಡಿಭಾಗಗಳು ಜೋಡಣೆಗೊಳ್ಳುತ್ತಿದ್ದಾಗ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿದ್ದರು. ಇಸ್ರೋದ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಅವರ ಪ್ರಕಾರ, ಚಂದ್ರಯಾನ-೧ ಚಂದ್ರನ ಬಳಿಗೆ ತೆರಳಿತ್ತು ಎನ್ನುವುದನ್ನು ತೋರಿಸಲು ಯಾವ ಸಾಕ್ಷ್ಯಾಧಾರವಿರಲಿದೆ ಎಂದು ಕಲಾಂ ವಿಜ್ಞಾನಿಗಳನ್ನು ಪ್ರಶ್ನಿಸಿದ್ದರು.

ಅದು ಚಂದ್ರನ ಮೇಲ್ಮೈನ ಚಿತ್ರಗಳನ್ನು ಹೊಂದಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದಾಗ ಅದಷ್ಟೇ ಸಾಕಾಗುವುದಿಲ್ಲ ಎಂದು ಕಲಾಂ ಪ್ರತಿಕ್ರಿಯಿಸಿದ್ದರು. ಚಂದ್ರನ ಮೇಲೆ ಬೀಳಿಸಬಹುದಾದ ಸಾಧನವೊಂದನ್ನು ಚಂದ್ರಯಾನ-೧ ಒಯ್ಯಬೇಕು ಎಂದು ಅವರು ಸೂಚಿಸಿದ್ದರು.

ಕಲಾಂ ಸಲಹೆಯನ್ನು ಸ್ವೀಕರಿಸಿದ ಇಸ್ರೋ ನೂತನ ಸಾಧನಕ್ಕೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸ ಬದಲಾವಣೆಗಳನ್ನು ಮಾಡಿತ್ತು. ಈ ಮೂನ್ ಇಂಪ್ಯಾಕ್ಟ್ ಪ್ರೋಬ್ ಚಂದ್ರನ ಮೇಲ್ಮೈಯನ್ನು ಅಪ್ಪಳಿಸಿತ್ತು ಮತ್ತು ಚಂದ್ರನ ಮೇಲಿನ ಮೊದಲ ಭಾರತೀಯ ವಸ್ತುವಾಯಿತು.

ಚಂದ್ರಯಾನ-೨ ಲ್ಯಾಂಡರ್

ರಶ್ಯದಿಂದ ಬರಬೇಕಿತ್ತು

ರಶ್ಯದ ಲೂನಾ-೨೫ ಗಗನಗೌಕೆ ಶನಿವಾರ ಚಂದ್ರನ ಮೇಲ್ಮೈ ಮೇಲೆ ಪತನಗೊಂಡಿದೆ. ಇದೇ ಲ್ಯಾಂಡರ್‌ನ ಹಿಂದಿನ ಆವೃತ್ತಿಯು ಭಾರತದ ಚಂದ್ರಯಾನ-೨ ಗಗನನೌಕೆಯಲ್ಲಿ ಹೋಗಬೇಕಿತ್ತು, ಆದರೆ ಅದು ಸಂಭವಿಸಿರಲಿಲ್ಲ.

ಲ್ಯಾಂಡರ್ ಮತ್ತು ರೋವರ್ ಹೊಂದಿದ್ದ ಚಂದ್ರಯಾನ-೨ ಅನ್ನು ೨೦೧೧-೧೨ರಲ್ಲಿ ಕೈಗೊಳ್ಳಲು ಮೊದಲು ಯೋಜಿಸಲಾಗಿತ್ತು. ಆ ಸಮಯದಲ್ಲಿ ಭಾರತವು ತನ್ನದೇ ಆದ ಲ್ಯಾಂಡರ್ ಮತ್ತು ರೋವರ್ ಅನ್ನು ಅಭಿವೃದ್ಧಿಗೊಳಿಸಿರಲಿಲ್ಲ. ಮೂಲ ಚಂದ್ರಯಾನ-೨ ಗಗನನೌಕೆಯು ರಶ್ಯದೊಂದಿಗಿನ ಜಂಟಿ ಅಭಿಯಾನವಾಗಬೇಕಿತ್ತು. ಭಾರತವು ರಾಕೆಟ್ ಮತ್ತು ಆರ್ಬಿಟರ್ ಒದಗಿಸಬೇಕಿತ್ತು ಹಾಗೂ ಲ್ಯಾಂಡರ್ ಮತ್ತು ರೋವರ್ ರಶ್ಯದಿಂದ ಬರಬೇಕಿದ್ದವು.

ಚಂದ್ರಯಾನ-೨ಕ್ಕಾಗಿ ರಶ್ಯ ಅಭಿವೃದ್ಧಿಗೊಳಿಸುತ್ತಿದ್ದ ಲ್ಯಾಂಡರ್ ಮತ್ತು ರೋವರ್ ಮಾದರಿಯು ಭಿನ್ನ ಕಾರ್ಯಾಚರಣೆಯಲ್ಲಿ ಸಮಸ್ಯೆಗಳನ್ನು ತೋರಿಸಿತ್ತು ಮತ್ತು ಇದು ರಶ್ಯದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮಾಸ್ ವಿನ್ಯಾಸ ಬದಲಾವಣೆಗಳನ್ನು ಮಾಡುವುದನ್ನು ಅನಿವಾರ್ಯವಾಗಿಸಿತ್ತು. ಆದರೆ ನೂತನ ವಿನ್ಯಾಸವು ದೊಡ್ಡ ಗಾತ್ರದ್ದಾಗಿದ್ದು, ಭಾರತೀಯ ರಾಕೆಟ್‌ನಲ್ಲಿ ಅಳವಡಿಸಲು ಸಾಧ್ಯವಿರಲಿಲ್ಲ.

ರಶ್ಯ ಅಂತಿಮವಾಗಿ ಈ ಸಹಭಾಗಿತ್ವದಿಂದ ಹಿಂದೆ ಸರಿದಿತ್ತು ಹಾಗೂ ಲ್ಯಾಂಡರ್ ಮತ್ತು ರೋವರ್‌ನ್ನು ಸ್ಥಳೀಯವಾಗಿ ಅಭಿವೃದ್ಧಿಗೊಳಿಸಲು ಇಸ್ರೋ ಮುಂದಾಗಿತ್ತು. ಇದಕ್ಕೆ ಸಮಯಾವಕಾಶ ಅಗತ್ಯವಾಗಿತ್ತು, ಹೀಗಾಗಿ ೨೦೧೯ರಲ್ಲಷ್ಟೇ ಚಂದ್ರಯಾನ-೨ರ ಉಡಾವಣೆ ಸಾಧ್ಯವಾಗಿತ್ತು.

ಭಾರತದ ಮುಂದಿನ ಚಂದ್ರ ಅಭಿಯಾನ

ಚಂದ್ರಯಾನ ಆಗಿರುವುದಿಲ್ಲ

ಚಂದ್ರ ಅಭಿಯಾನಗಳ ಸಂಪೂರ್ಣ ಸರಣಿಯನ್ನು ಯೋಜಿಸಿರುವ ಕೆಲವು ರಾಷ್ಟ್ರಗಳಿಗಿಂತ ಭಿನ್ನವಾಗಿ ಭಾರತವು ಈವರೆಗೂ ಚಂದ್ರಯಾನ-೩ರ ಅನುಸರಣಾ ಅಭಿಯಾನಗಳನ್ನು ಪ್ರಕಟಿಸಿಲ್ಲ. ನಿಸ್ಸಂಶಯವಾಗಿ ಚಂದ್ರಯಾನ-೪, ೫, ೬ ಅಥವಾ ಹೆಚ್ಚು ಇರಲಿವೆಯಾದರೂ ಇವುಗಳಿಗೂ ಮುನ್ನ ಭಾರತವು ಜಪಾನ್ ಸಹಭಾಗಿತ್ವದೊಂದಿಗೆ ಇನ್ನೊಂದು ಚಂದ್ರ ಅಭಿಯಾನವನ್ನು ಕೈಗೊಳ್ಳಲಿದೆ. ಅದನ್ನು ‘ಲುಪೆಕ್ಸ್’ ಎಂದು ಕರೆಯಲಾಗುವುದು. ಇದು ೨೦೨೪-೨೫ರ ವೇಳೆಗೆ ಉಡಾವಣೆಗೊಳ್ಳುವ ಸಾಧ್ಯತೆಯಿದೆ.

ಉಕ್ರೇನ್ ಯುದ್ಧದಿಂದಾಗಿ ಯುರೋಪ್ ರಶ್ಯದ ಲೂನಾ-೨೫ರಿಂದ ಹಿಂದೆ ಸರಿದಿತ್ತು

ಲೂನಾ-೨೫ಕ್ಕೆ ಮಾತ್ರವಲ್ಲ, ಈ ದಶಕದ ಉತ್ತರಾರ್ಧದಲ್ಲಿ ಯೋಜಿಸಲಾಗಿರುವ ಲೂನಾ-೨೬ ಮತ್ತು ಲೂನಾ-೨೭ ಅಭಿಯಾನಗಳಿಗೂ ಐರೋಪ್ಯ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ)ಯು ರಶ್ಯದ ರಾಸ್‌ಕಾಸ್ಮಾಸ್‌ನ ಪ್ರಮುಖ ಪಾಲುದಾರನಾಗಿತ್ತು. ಇಎಸ್‌ಎ ಲೂನಾ-೨೫ರಲ್ಲಿ ನ್ಯಾವಿಗೇಷನ್ ಕ್ಯಾಮರಾ ಮತ್ತು ಆಪ್ಟಿಕಲ್ ನ್ಯಾವಿಗೇಷನ್ ಸಿಸ್ಟಮ್‌ನ್ನು ಸ್ಥಾಪಿಸಲಿತ್ತು. ಲೂನಾ-೨೬ ಮತ್ತು ಲೂನಾ-೨೭ರಲ್ಲಿ ಹೆಚ್ಚಿನ ರೊಬೋಟ್ ಉಪಕರಣಗಳ ಅಳವಡಿಕೆಯನ್ನು ಅದು ಯೋಜಿಸಿತ್ತು. ರಶ್ಯದ ಮಂಗಳ ಅಭಿಯಾನಕ್ಕಾಗಿಯೂ ಇದೇ ರೀತಿಯ ಸಹಕಾರವನ್ನು ಇಎಸ್‌ಎ ನೀಡಲಿತ್ತು.

ಆದರೆ ಕಳೆದ ವರ್ಷ ರಶ್ಯಪಡೆಗಳಿಂದ ಉಕ್ರೇನ್ ಆಕ್ರಮಣದ ಬಳಿಕ ಎಪ್ರಿಲ್‌ನಲ್ಲಿ ಈ ಎಲ್ಲ ಸಹಯೋಗವನ್ನು ಇಎಸ್‌ಎ ಸ್ಥಗಿತಗೊಳಿಸಿತ್ತು. ಈ ಕಾರ್ಯಾಚರಣೆಗಳ ಮೂಲಕ ಯುರೋಪ್ ಹೊಂದಿದ್ದ ವೈಜ್ಞಾನಿಕ ಮತ್ತು ತಾಂತ್ರಿಕ ಗುರಿಗಳನ್ನು ಈಗ ನಾಸಾದ ಸಹಭಾಗಿತ್ವದೊಂದಿಗೆ ಸಾಧಿಸಲಾಗುತ್ತಿದೆ.

ಜಪಾನ್, ಇಸ್ರೇಲ್ ಲ್ಯಾಂಡಿಂಗ್ ಪ್ರಯತ್ನಗಳು ಖಾಸಗಿಯಾಗಿದ್ದವು

ಕಳೆದ ದಶಕದಲ್ಲಿ ಚೀನಾ, ಇಸ್ರೇಲ್, ಭಾರತ, ಜಪಾನ್ ಮತ್ತು ಚೀನಾ ಈ ಐದು ದೇಶಗಳು ಚಂದ್ರನ ಮೇಲೆ ಇಳಿಯಲು ಪ್ರಯತ್ನಿಸಿದ್ದು, ಈ ಪೈಕಿ ಚೀನಾ ಮಾತ್ರ ಯಶಸ್ವಿಯಾಗಿತ್ತು. ಇಸ್ರೇಲ್ ಮತ್ತು ಜಪಾನಿನ ಚಂದ್ರ ಅಭಿಯಾನಗಳಾದ ಬೆರೆಶೀಟ್ ಮತ್ತು ಹಕುಟೊ-ಆರ್ ಅನ್ನು ಖಾಸಗಿ ಕಂಪೆನಿಗಳು ಕೈಗೊಂಡಿದ್ದವು. ಇವು ಈವರೆಗೆ ಚಂದ್ರನ ಮೇಲಿಳಿಯಲು ಖಾಸಗಿ ಬಾಹ್ಯಾಕಾಶ ಸಂಸ್ಥೆಗಳ ಏಕೈಕ ಪ್ರಯತ್ನಗಳಾಗಿ ಉಳಿದುಕೊಂಡಿವೆ.

ಈ ತಿಂಗಳ ಅಂತ್ಯದಲ್ಲಿ ತನ್ನ ಮೊದಲ ಮೂನ್ ಲ್ಯಾಂಡಿಂಗ್ ಅಭಿಯಾನಕ್ಕಾಗಿ ಜಪಾನಿನ ಬಾಹ್ಯಾಕಾಶ ಸಂಸ್ಥೆ ಜೆಎಎಕ್ಸ್‌ಎ ಸಜ್ಜಾಗುತ್ತಿದೆ. ಅದನ್ನು ‘ಸ್ಲಿಮ್ ’ಅಥವಾ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್ ಎಂದು ಹೆಸರಿಸಲಾಗಿದೆ.

ಕೃಪೆ: theindianexpress.com

share
ಆಮಿತಾಭ್ ಸಿನ್ಹಾ
ಆಮಿತಾಭ್ ಸಿನ್ಹಾ
Next Story
X