Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾಧ್ಯಮಗಳ ಸಂಭ್ರಮದಾಚೆಗೆ: ರಾಜತಾಂತ್ರಿಕ...

ಮಾಧ್ಯಮಗಳ ಸಂಭ್ರಮದಾಚೆಗೆ: ರಾಜತಾಂತ್ರಿಕ ಸೇತುವೆಗಳು ಮತ್ತು ಭವಿಷ್ಯದ ರೂಪುರೇಷೆಗಳ ಕುರಿತಾದ BRICS ವರದಿಗಾರಿಕೆ!

ಆಯೇಷಾ ಖಾನಮ್ಆಯೇಷಾ ಖಾನಮ್13 Sept 2026 11:18 PM IST
share
ಮಾಧ್ಯಮಗಳ ಸಂಭ್ರಮದಾಚೆಗೆ: ರಾಜತಾಂತ್ರಿಕ ಸೇತುವೆಗಳು ಮತ್ತು ಭವಿಷ್ಯದ ರೂಪುರೇಷೆಗಳ ಕುರಿತಾದ BRICS ವರದಿಗಾರಿಕೆ!

ಬ್ರೆಝಿಲ್‌ ನ ರಾಜಧಾನಿ ಬ್ರೆಸಿಲಿಯಾದಲ್ಲಿರುವ ಇಟಮಾರಾಟಿ ಅರಮನೆಯಲ್ಲಿ 11ನೇ ಬ್ರಿಕ್ಸ್‌ ಶೃಂಗಸಭೆ ನಡೆದಿತ್ತು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ನಾಯಕರನ್ನು ಒಗ್ಗೂಡಿಸುವ ಈ ವೇದಿಕೆಯನ್ನು ಬ್ರೆಝಿಲ್ ಎರಡನೇ ಬಾರಿಗೆ ಆಯೋಜಿಸಿತ್ತು. ಹೀಗಾಗಿ ಶೃಂಗಸಭೆಯ ಕಾರ್ಯಸೂಚಿಯತ್ತ ಎಲ್ಲರ ಗಮನವೂ ನೆಟ್ಟಿತ್ತು.

‘ಆವಿಷ್ಕಾರದಿಂದ ಕೂಡಿದ ಭವಿಷ್ಯಕ್ಕಾಗಿ ಆರ್ಥಿಕ ಬೆಳವಣಿಗೆ’ ಎಂಬುದು ಆ ಶೃಂಗಸಭೆಯ ಧ್ಯೇಯವಾಗಿತ್ತು. ಭಾರತದ ಸಾರ್ವಜನಿಕ ಪ್ರಸಾರ ಸಂಸ್ಥೆ ‘ಡಿಡಿ ನ್ಯೂಸ್‌’ (DD News) ಅನ್ನು ಪ್ರತಿನಿಧಿಸಿ ಇಂತಹ ಬೃಹತ್ ಬಹುಪಕ್ಷೀಯ ವೇದಿಕೆಯ ವರದಿಗಾರಿಕೆಯನ್ನು ಕೈಗೊಂಡಿದ್ದು ನನಗೆ ಅದೇ ಮೊದಲ ಬಾರಿ.

ಭಾರತದ ಹಿತದೃಷ್ಟಿಯಿಂದ ಯಾವ ವಿಷಯಗಳನ್ನು ಪ್ರಮುಖವಾಗಿ ವರದಿ ಮಾಡಬೇಕು ಎಂಬ ಬಗ್ಗೆ ನಮಗೆ ಮಾಹಿತಿ ನೀಡಲಾಗಿತ್ತು. ಸದಸ್ಯ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಬ್ರಿಕ್ಸ್‌ ಆರಂಭಿಸಿದ್ದ ಜಾಗತಿಕ ಹಣಕಾಸು ಸಂಸ್ಥೆಯಾದ ‘ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌’ (NDB) ಪೂರ್ಣ ಪ್ರಮಾಣದ ಬ್ಯಾಂಕ್‌ ಆಗಿ ಕಾರ್ಯನಿರ್ವಹಿಸಲಿದೆ ಮತ್ತು ಅದರ ಪ್ರಧಾನ ಕಚೇರಿ ಶಾಂಘೈನಲ್ಲಿ ಇರಲಿದೆ ಎಂಬುದು ತಿಳಿದಿತ್ತು.

ಆದರೆ, ಈ ಬೆಳವಣಿಗೆಯಲ್ಲಿ ನನಗೆ ಅತ್ಯಂತ ಮಹತ್ವದ್ದಾಗಿ ಕಂಡ ಸಂಗತಿ ಬೇರೆಯೇ ಆಗಿತ್ತು. ಈ ಬ್ಯಾಂಕ್‌ ನ ನೇತೃತ್ವವನ್ನು ಒಬ್ಬ ಭಾರತೀಯ ವಹಿಸಿಕೊಳ್ಳಲಿದ್ದರು.

ಭಾರತದ ಕೆ.ವಿ. ಕಾಮತ್ ಅವರು ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ ನ ಮೊದಲ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇನ್ಫೋಸಿಸ್ ಮತ್ತು ಐಸಿಐಸಿ‌ಐ ಬ್ಯಾಂಕ್‌ ನ ಮಾಜಿ ಅಧ್ಯಕ್ಷರಾಗಿದ್ದ ಕಾಮತ್ ಅವರು, ಎನ್‌ಡಿಬಿ ಪೂರ್ಣ ಪ್ರಮಾಣದ ಸಂಸ್ಥೆಯಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು. ಹೀಗಾಗಿ, ಅವರನ್ನು ಭೇಟಿಯಾಗಿ ವಿಶೇಷ ಸಂದರ್ಶನ ಪಡೆಯುವುದು ನನ್ನ ಮುಖ್ಯ ಗುರಿಯಾಗಿತ್ತು.

ಶೃಂಗಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಗಳು, ಪ್ರಸ್ತುತಿಗಳು ಮತ್ತು ವಿವಿಧ ಕಾರ್ಯಕ್ರಮಗಳಿಗಾಗಿ ಹಲವು ಬೃಹತ್ ಸಭಾಂಗಣಗಳನ್ನು ಬಳಸಲಾಗುತ್ತಿತ್ತು. ಅಂಥ ಸ್ಥಳದಲ್ಲಿ ಕೆ.ವಿ. ಕಾಮತ್ ಅವರನ್ನು ಹುಡುಕುವುದು ಸವಾಲಿನ ಕೆಲಸವಾಗಿತ್ತು. ಅವರನ್ನು ಹುಡುಕುವ ಪ್ರಯತ್ನದಲ್ಲಿ ನಮಗೆ ವರದಿ ಮಾಡಲು ನಿಯೋಜಿಸಲಾಗಿದ್ದ ಇತರ ಅಧಿವೇಶನಗಳನ್ನು ತಪ್ಪಿಸಿಕೊಳ್ಳುವ ಅಪಾಯವೂ ಇತ್ತು.

ಕೊನೆಗೆ ಆ ಪ್ರಯತ್ನವನ್ನು ಕೈಬಿಟ್ಟು ಪಕ್ಕದ ಸಭಾಂಗಣದಲ್ಲಿ ನಡೆಯುತ್ತಿದ್ದ ಮತ್ತೊಂದು ಸಭೆಗೆ ತೆರಳಲು ಸಿದ್ಧರಾಗುತ್ತಿದ್ದಾಗ, ಕೆ.ವಿ. ಕಾಮತ್ ಅವರು ಪಕ್ಕದ ನಿರ್ಗಮನ ದ್ವಾರದಿಂದ ಹೊರಬಂದರು. ಅವರೊಂದಿಗೆ ಸಂಪರ್ಕ ಸಾಧಿಸಿ, ಸಂಕ್ಷಿಪ್ತ ಸಂದರ್ಶನಕ್ಕೆ ಒಪ್ಪಿಸುವುದಕ್ಕೆ ಕೆಲವೇ ಕ್ಷಣಗಳು ಬೇಕಾದವು.

ಬೆಂಗಳೂರು ಮತ್ತು ಇನ್ಫೋಸಿಸ್‌ ನ ಪ್ರಸ್ತಾಪವು ಅವರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ನೆರವಾಯಿತು. ಅತ್ಯಂತ ಬಿಡುವಿಲ್ಲದ ಮತ್ತು ಎಲ್ಲರೂ ಭೇಟಿಯಾಗಲು ಬಯಸುತ್ತಿದ್ದ ಆ ವ್ಯಕ್ತಿ, ತಮ್ಮ ಸಮಯವನ್ನು ಮೀಸಲಿಟ್ಟು, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ ನ ಮೊದಲ ಅಧ್ಯಕ್ಷರಾಗಿ ತಮ್ಮ ಹೊಸ ಜವಾಬ್ದಾರಿಯ ಕುರಿತು ನಮ್ಮೊಂದಿಗೆ ಮಾತನಾಡಲು ಸಿದ್ಧರಾದರು.

ಈಗ ಭಾರತದ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿರುವ 18ನೇ ಬ್ರಿಕ್ಸ್‌ ಶೃಂಗಸಭೆಯನ್ನು ವೀಕ್ಷಿಸುತ್ತಿರುವಾಗ, ಆ ವಿಶೇಷ ಕ್ಷಣದ ನೆನಪುಗಳು ನನ್ನ ಮನದಲ್ಲಿ ಮತ್ತೆ ಮೂಡಿದವು.

ಭಾರತಕ್ಕೆ ಬ್ರಿಕ್ಸ್‌ ಏಕೆ ಮುಖ್ಯ?

ಭಾರತಕ್ಕೆ ಬ್ರಿಕ್ಸ್‌ ಏಕೆ ಮುಖ್ಯ ಎಂಬುದಕ್ಕೆ ಈ ಘಟನೆಯಲ್ಲೇ ಒಂದು ಉತ್ತರ ಸಿಗುತ್ತದೆ—ಜಾಗತಿಕ ಹಣಕಾಸು ಸಂಸ್ಥೆಯೊಂದರ ಉನ್ನತ ನಾಯಕತ್ವದ ಸ್ಥಾನದಲ್ಲಿ ಒಬ್ಬ ಭಾರತೀಯರ ಉಪಸ್ಥಿತಿ.

‘ಗ್ಲೋಬಲ್ ಸೌತ್‌’ನ ಧ್ವನಿಯಾಗಿ ಭಾರತ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಕೆ.ವಿ. ಕಾಮತ್ ಅವರಂತಹ ಭಾರತೀಯರು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಮುಖ ಸ್ಥಾನಗಳನ್ನು ವಹಿಸುವುದು ನಿರ್ಣಾಯಕವಾಗುತ್ತದೆ.

ಎನ್‌ಡಿಬಿ ಬ್ರಿಕ್ಸ್‌ ನ ಸಾಧಾರಣ ಸಾಧನೆಯಲ್ಲ. ಸದಸ್ಯ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಗೆ ಹಣಕಾಸಿನ ನೆರವು ನೀಡುವುದು ಹಾಗೂ ಅವುಗಳ ನಡುವಿನ ಸಹಕಾರವನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶ. ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರಕ್ಕೆ ಪರ್ಯಾಯ ಮಾರ್ಗಗಳನ್ನು ರೂಪಿಸುವ ಪ್ರಯತ್ನವಾಗಿ ಇದು ಮಹತ್ವ ಪಡೆದುಕೊಂಡಿದೆ.

ಆದರೆ ಬ್ರಿಕ್ಸ್‌ ಕುರಿತು ಮಾತನಾಡುವಾಗ ಮಾಧ್ಯಮಗಳು ಹೆಚ್ಚಾಗಿ ರಾಷ್ಟ್ರಗಳ ನಡುವಿನ ಅಧಿಕಾರದ ಆಟದತ್ತ ಗಮನ ಹರಿಸುತ್ತವೆ. ಭಾರತೀಯ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ‘ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌’ ಕಾರ್ಯಸೂಚಿಯೊಂದಿಗೆ ಬ್ರಿಕ್ಸ್‌ ನ ಬೆಳವಣಿಗೆಗಳನ್ನು ಜೋಡಿಸುವ ಪ್ರವೃತ್ತಿಯೂ ಕಾಣಿಸುತ್ತದೆ. ಭೌಗೋಳಿಕ ರಾಜಕೀಯ, ಅಮೆರಿಕೇತರ ಮತ್ತು ಯುರೋಪೇತರ ಜಾಗತಿಕ ವ್ಯವಸ್ಥೆಯಂತಹ ಪರಿಕಲ್ಪನೆಗಳು ಚರ್ಚೆಯ ಕೇಂದ್ರವಾಗುತ್ತವೆ.

ಆದರೆ ಒತ್ತಿಹೇಳಬೇಕಾದ ಮತ್ತೊಂದು ಅಂಶವಿದೆ. ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಲ್ಲಿರುವ ಅಭಿವೃದ್ಧಿಯ ಸಾಧ್ಯತೆಗಳು, ಸಂಪನ್ಮೂಲಗಳು ಮತ್ತು ಪ್ರಭಾವ ಬೀರುವ ಸಾಮರ್ಥ್ಯವನ್ನು ಬಳಸಿಕೊಂಡು ಈ ವೇದಿಕೆಯನ್ನು ಜಾಗತಿಕ ಅಂತರ್ಗತ ಬೆಳವಣಿಗೆಯ ಶಾಶ್ವತ ಕೇಂದ್ರವನ್ನಾಗಿ ರೂಪಿಸಬಹುದೇ ಎಂಬ ಪ್ರಶ್ನೆ ಹೆಚ್ಚು ಮುಖ್ಯ.

ಭಾರತದ ಬೃಹತ್ ಸಂಪನ್ಮೂಲಗಳು, ತಂತ್ರಜ್ಞಾನ ಮತ್ತು ಅಪ್ರತಿಮ ಮಾನವಶಕ್ತಿಯನ್ನು ಈ ಪ್ರಯತ್ನದ ಕೇಂದ್ರದಲ್ಲಿ ಇರಿಸಬಹುದು. ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸುವ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಬೆಳೆಸಬಹುದು. ದಕ್ಷಿಣ ಆಫ್ರಿಕಾ ಮತ್ತು ಬ್ರೆಝಿಲ್‌ ನಲ್ಲಿನ ಅಭಿವೃದ್ಧಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಬಳಸಿಕೊಳ್ಳಬಹುದು.

ಚೀನಾ ತನ್ನ ರಾಜಕೀಯ ಗಡಿಗಳಾಚೆಗೂ ತನ್ನ ಸಾಮರ್ಥ್ಯವನ್ನು ಬಳಸಿಕೊಂಡು ವೆಚ್ಚ-ಪರಿಣಾಮಕಾರಿ ಗ್ರಾಹಕ ತಂತ್ರಜ್ಞಾನ, ಕೈಗೆಟುಕುವ ಆರೋಗ್ಯ ತಂತ್ರಜ್ಞಾನ ಮತ್ತು ಶುದ್ಧ ಇಂಧನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬಹುದು.

ರಷ್ಯಾ ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನದಲ್ಲಿ ತನ್ನ ಪರಿಣತಿಯನ್ನು ಬಳಸಿಕೊಂಡು ಸದಸ್ಯ ರಾಷ್ಟ್ರಗಳಿಗೆ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ನೆರವಾಗಬಹುದು. ಭೌಗೋಳಿಕ-ರಾಜಕೀಯ ಭದ್ರತೆಯ ಸಂದರ್ಭದಲ್ಲಿ ಸ್ವಾವಲಂಬನೆಯನ್ನು ಗುರಿಯಾಗಿಟ್ಟುಕೊಂಡು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿಯೂ ಸಹಕಾರ ನೀಡಬಹುದು.

ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳು ಸದಸ್ಯ ರಾಷ್ಟ್ರಗಳಲ್ಲಿರುವ ಈ ಎಲ್ಲ ಸಾಮರ್ಥ್ಯಗಳ ಪ್ರಯೋಜನ ಪಡೆಯುವಂತಾಗಬಹುದು.

ವ್ಯಾಪಾರ–ವಾಣಿಜ್ಯಕ್ಕಷ್ಟೇ ಸೀಮಿತವಾಗದಿರಲಿ

ಬ್ರಿಕ್ಸ್‌ ನ ಈ ಪ್ರಯತ್ನಗಳನ್ನು ಸಾಮಾನ್ಯವಾಗಿ ದೇಶಗಳ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಅದರ ದುರದೃಷ್ಟಕರ ಪರಿಣಾಮವಾಗಿ, ಪಕ್ಷಪಾತದ ನಾಯಕತ್ವದ ಆರೋಪಗಳು ಮತ್ತು ರಾಜಕೀಯ ಲಾಭಕ್ಕಾಗಿ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಬೆಳವಣಿಗೆಗೆ ಒಲವು ತೋರಲಾಗುತ್ತಿದೆ ಎಂಬ ಟೀಕೆಗಳೂ ಕೇಳಿಬರುತ್ತವೆ.

ಪರಸ್ಪರ ವ್ಯಾಪಾರ ಮತ್ತು ವಾಣಿಜ್ಯವು ನಿರ್ದಿಷ್ಟ ವ್ಯವಹಾರ ವಲಯವನ್ನು ಹೇಗೆ ಶ್ರೀಮಂತಗೊಳಿಸುತ್ತಿದೆ ಮತ್ತು ಅದನ್ನೇ ಭಾರತದ ಬೆಳವಣಿಗೆ ಎಂದು ಹೇಗೆ ಬಿಂಬಿಸಲಾಗುತ್ತಿದೆ ಎಂಬ ಬಗ್ಗೆ ವಿಶ್ಲೇಷಕರು ಸುದ್ದಿ ವಾಹಿನಿಗಳಲ್ಲಿ ಚರ್ಚಿಸುತ್ತಾರೆ.

ಸಾಮಾನ್ಯ ಜನರಿಗೆ ಮಾತ್ರ ಇವೆಲ್ಲವೂ ರಾಜತಾಂತ್ರಿಕತೆ ಮತ್ತು ನಾಯಕರ ದೃಢವಾದ ಹ್ಯಾಂಡ್‌ಶೇಕ್‌ ಗಳ ಫೋಟೊ-ಆಪ್‌ ಗಳಂತೆ ಕಾಣಬಹುದು.

ಬ್ರಿಕ್ಸ್‌ ನ 11 ಸದಸ್ಯ ರಾಷ್ಟ್ರಗಳು ಜಾಗತಿಕ ಆರ್ಥಿಕತೆಯಲ್ಲಿ ಶೇ. 28ಕ್ಕಿಂತ ಹೆಚ್ಚಿನ ಪಾಲು ಹೊಂದಿದ್ದರೂ, ಭಾರತದಲ್ಲಿ ಜಿಡಿಪಿ ದತ್ತಾಂಶದ ಕುರಿತ ಚರ್ಚೆಯೇ ಕೆಲವೊಮ್ಮೆ ರಾಜಕೀಯ ಸಾಧನವಾಗಿ ಮಾರ್ಪಟ್ಟು ವಾಸ್ತವ ಸಂಗತಿಗಳನ್ನು ಮರೆಮಾಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ನಾಯಕತ್ವವು ಬ್ರಿಕ್ಸ್‌ ನ ಕಾರ್ಯಸೂಚಿಯನ್ನು ಬಳಸಿಕೊಂಡು ನಿರುದ್ಯೋಗ, ಆರ್ಥಿಕ ಬೆಳವಣಿಗೆ, ಬಡತನ ನಿರ್ಮೂಲನೆ, ಶಿಕ್ಷಣ ಸುಧಾರಣೆ ಮತ್ತು ಕಾರ್ಮಿಕರ ವೇತನದಂತಹ ಮೂಲಭೂತ ಸಮಸ್ಯೆಗಳ ಕುರಿತು ವಿಮರ್ಶಕರಿಗೆ ಉತ್ತರಿಸಬೇಕಾಗುತ್ತದೆ.

BRICS ಅಥವಾ G20ನಂತಹ ಶೃಂಗಸಭೆಗಳಿಂದ ತಮಗೆ ಆಗುವ ನೇರ ಲಾಭಗಳ ಕುರಿತು ಮಾಧ್ಯಮ ವರದಿಗಳನ್ನು ಗಮನಿಸಲು ಸಾಮಾನ್ಯ ನಾಗರಿಕರು ಹೆಚ್ಚಿನ ಆಸಕ್ತಿ ತೋರದಿರಬಹುದು. ಆದರೆ ಇಂತಹ ಬಹುಪಕ್ಷೀಯ ವೇದಿಕೆಗಳನ್ನು ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮತ್ತು ಭೌಗೋಳಿಕ-ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು ಎಂಬುದು ನಾಯಕತ್ವಕ್ಕೆ ಚೆನ್ನಾಗಿ ತಿಳಿದಿದೆ.

ಹೀಗಾಗಿ, ಬ್ರಿಕ್ಸ್‌ ಗುಂಪು ಪ್ರತಿ ವಾರ್ಷಿಕ ಶೃಂಗಸಭೆಯಲ್ಲೂ ತಾವು ಯಾವುದಕ್ಕಾಗಿ ಶ್ರಮಿಸುತ್ತಿದ್ದೇವೆ ಎಂಬುದನ್ನು ಸರಳವಾಗಿ ವಿವರಿಸುವ, ಪದೇಪದೇ ಉಲ್ಲೇಖಿಸಬಹುದಾದ ಕಾರ್ಯಸೂಚಿಯನ್ನು ಮುಂದಿಡುವುದು ಅಗತ್ಯ.

ಜನರ ಬದುಕಿಗೆ ತಲುಪಬೇಕಾದ ಬ್ರಿಕ್ಸ್‌

ಪ್ರಾದೇಶಿಕ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಅತ್ಯಗತ್ಯ. ಉದ್ಯೋಗನಿರತ ಯುವಜನತೆ, ಸುಸಜ್ಜಿತ ಶಿಕ್ಷಣ ವ್ಯವಸ್ಥೆ ಮತ್ತು ಎಲ್ಲರಿಗೂ ಸಮಾನ ಅವಕಾಶಗಳು ದೊರೆತರೆ, ‘ಗ್ಲೋಬಲ್ ಸೌತ್‌’ನ ಧ್ವನಿಯಾಗಿ ಭಾರತದ ಪಾತ್ರವು ನಿರ್ವಿವಾದ ವಾಸ್ತವವಾಗಬಹುದು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ‘ಗ್ಲೋಬಲ್ ಸೌತ್‌’ನ ಉದಯೋನ್ಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಭಾರತವನ್ನು ತನ್ನ ಬೃಹತ್ ಜನಸಂಖ್ಯೆ ಮತ್ತು ಡಿಜಿಟಲ್ ಸಾಮರ್ಥ್ಯದ ಮೂಲಕ ಜಾಗತಿಕ ಶಕ್ತಿಯಾಗಿ ಬಿಂಬಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.

ಆದರೆ ಈ ಸ್ಥಾನ ಮತ್ತಷ್ಟು ಅರ್ಥಪೂರ್ಣವಾಗಬೇಕಾದರೆ ಭಾರತದ ಆರ್ಥಿಕ ವಾಸ್ತವತೆ ಮತ್ತು ನಾಗರಿಕರ ಸಾಮಾಜಿಕ-ಆರ್ಥಿಕ ವಾಸ್ತವತೆಗಳ ನಡುವಿನ ಅಂತರ ಕಡಿಮೆಯಾಗಬೇಕು. ಎರಡರ ನಡುವೆ ಸಮತೋಲನ ಮೂಡಬೇಕು.

ಬ್ರಿಕ್ಸ್‌ ನಂತಹ ಶೃಂಗಸಭೆಗಳಿಗೆ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಸಿಗುತ್ತದೆ. ಅಪಾರ ಸಂಪನ್ಮೂಲಗಳನ್ನು ಬಳಸಿ ವ್ಯಾಪಕವಾಗಿ ವರದಿ ಮಾಡಲಾಗುತ್ತದೆ. ಆದರೆ ಇಲ್ಲೊಂದು ಪ್ರಮುಖ ಕೊಂಡಿ ಕಾಣೆಯಾಗುತ್ತದೆ—ಶೃಂಗಸಭೆ ಮುಗಿದ ನಂತರ ಅದರ ಕಾರ್ಯಸೂಚಿಯನ್ನೇ ಮರೆತುಬಿಡಲಾಗುತ್ತದೆ.

ಮುಂದಿನ ಶೃಂಗಸಭೆ ಮತ್ತೊಂದು ದೇಶ ಅಥವಾ ನಗರದಲ್ಲಿ ಆರಂಭವಾದಾಗ ಮಾತ್ರ ಬ್ರಿಕ್ಸ್‌ ಮತ್ತೆ ಸುದ್ದಿಯ ಕೇಂದ್ರಕ್ಕೆ ಬರುತ್ತದೆ.

ಆದರೆ ಅಂತರ್ಗತ ಮತ್ತು ಸಮಗ್ರ ಬೆಳವಣಿಗೆ ಕುರಿತು ಗಣ್ಯರು ಮಂಡಿಸುವ ಪ್ರಮುಖ ವಿಷಯಗಳು ಹಾಗೂ ಕಾರ್ಯಸೂಚಿಗಳ ಮೇಲೆ ಮಾಧ್ಯಮಗಳು ವರ್ಷವಿಡೀ ತೀವ್ರ ನಿಗಾ ವಹಿಸಬೇಕು.

ಈ ಕಾರ್ಯಸೂಚಿ ಮತ್ತು ರಾಜತಾಂತ್ರಿಕ ಒಪ್ಪಂದಗಳು ವೈದ್ಯರು, ಇಂಜಿನಿಯರ್‌ ಗಳು, ಬಾಣಸಿಗರು, ಕಾರ್ಮಿಕರು, ಶಿಕ್ಷಕರು ಮತ್ತು ವಿಜ್ಞಾನಿಗಳಿಗೆ ಸದಸ್ಯ ರಾಷ್ಟ್ರಗಳ ನಡುವೆ ಅವಕಾಶಗಳನ್ನು ಸುಲಭವಾಗಿ ಪಡೆಯಲು ಹೇಗೆ ನೆರವಾಗುತ್ತಿವೆ ಎಂಬುದನ್ನು ಮಾಧ್ಯಮಗಳು ವರದಿ ಮಾಡಬೇಕು.

ಅದೇ ರೀತಿ, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ ನ ಹಣವನ್ನು ಕೇವಲ ಗಣ್ಯ ಮತ್ತು ‘ಶಕ್ತಿಶಾಲಿ’ ಕಾರ್ಪೊರೇಟ್ ಸಂಸ್ಥೆಗಳು ಬಂದರು ಹಾಗೂ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಬಳಸಿಕೊಳ್ಳುವುದಷ್ಟೇ ಅಲ್ಲದೆ, ಶಾಲೆಗಳ ಉನ್ನತೀಕರಣ, ರಸ್ತೆ ಜಾಲದ ನಿರ್ಮಾಣ, ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೂ ಸಮಾನವಾಗಿ ಬಳಸುವಂತಾಗಬೇಕು.

ಆಗ ಮಾತ್ರ ನಾಯಕರ ಉದ್ದೇಶಗಳು ಅರ್ಥಪೂರ್ಣವಾಗುತ್ತವೆ.

34 ಸಾವಿರ ಕಿ.ಮೀ. ಕೇಬಲ್‌ ನ ಕನಸು

ಬ್ರೆಝಿಲ್‌ ನಲ್ಲಿ ನಡೆದ 2019ರ ಬ್ರಿಕ್ಸ್‌ ಶೃಂಗಸಭೆಯ ಮತ್ತೊಂದು ಪ್ರಮುಖ ಮತ್ತು ಆಸಕ್ತಿದಾಯಕ ಅಂಶವೆಂದರೆ ‘ಬ್ರೆಸಿಲಿಯಾ ಘೋಷಣೆ’.

ಸದಸ್ಯ ರಾಷ್ಟ್ರಗಳ ನಡುವೆ ನೇರ ದೂರಸಂಪರ್ಕ ಸಂಪರ್ಕ ಕಲ್ಪಿಸಲು 34,000 ಕಿ.ಮೀ. ಉದ್ದದ ಅತಿ ವೇಗದ ಫೈಬರ್ ಆಪ್ಟಿಕ್ ಸಮುದ್ರದೊಳಗಿನ ಕೇಬಲ್ ವ್ಯವಸ್ಥೆ ನಿರ್ಮಿಸುವ ಯೋಜನೆಯನ್ನು ಘೋಷಣೆಯಲ್ಲಿ ಚರ್ಚಿಸಿ ಸೇರಿಸಲಾಗಿತ್ತು.

ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಸಂಪರ್ಕಿಸುವ 34,000 ಕಿ.ಮೀ. ಉದ್ದದ ಕೇಬಲ್ ಅನ್ನು ಸಮುದ್ರದ ಅಡಿಯಲ್ಲಿ ನಿರ್ಮಿಸಬಹುದು ಎಂಬುದನ್ನು ಕೇಳಿದಾಗ, ನನಗೆ ಅದನ್ನು ನಂಬುವುದೇ ಅಸಾಧ್ಯವೆನಿಸಿತ್ತು.

ಆದರೆ ಈ ಯೋಜನೆಯ ಇತ್ತೀಚಿನ ಸ್ಥಿತಿ ಏನು?

ಅದು ಇನ್ನೂ ಕೇವಲ ಕಾಗದದ ಮೇಲಿನ ಯೋಜನೆಯಾಗಿಯೇ, ಅಂದರೆ ಬ್ಲೂಪ್ರಿಂಟ್ ಹಂತದಲ್ಲೇ ಉಳಿದಿದೆ.

ಒಂದು ವೇಳೆ ಆ ಯೋಜನೆ ಎಂದಾದರೂ ಸಾಕಾರಗೊಂಡರೆ, ಬ್ರಿಕ್ಸ್‌ ನ ಕಾರ್ಯಸೂಚಿ ಮತ್ತು ಹೊಸದಿಲ್ಲಿಯಲ್ಲಿ ನಡೆಯಲಿರುವ 2026ರ ಬ್ರಿಕ್ಸ್‌ ಶೃಂಗಸಭೆಯ ಧ್ಯೇಯವಾಕ್ಯವಾದ ‘ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ’ (Building for Resilience, Innovation, Cooperation and Sustainability) ಕೇವಲ ಬ್ರೆಝಿಲ್ ಅಥವಾ ಹೊಸದಿಲ್ಲಿಯ ಶೃಂಗಸಭೆಗಳ ವರದಿಯ ನೆನಪಾಗಿ ಉಳಿಯದೆ, ನನಸಾದ ಕನಸಾಗಬಹುದು.

ಆಗ ಬ್ರಿಕ್ಸ್‌ ನ ರಾಜತಾಂತ್ರಿಕ ಸೇತುವೆಗಳು ಕೇವಲ ನಾಯಕರ ಹ್ಯಾಂಡ್‌ ಶೇಕ್‌ಗಳಿಗೆ ಸೀಮಿತವಾಗದೆ, ಸಾಮಾನ್ಯ ಜನರ ಬದುಕು, ಅವಕಾಶಗಳು ಮತ್ತು ಅಭಿವೃದ್ಧಿಯನ್ನು ಸಂಪರ್ಕಿಸುವ ನೈಜ ಸೇತುವೆಗಳಾಗಲಿವೆ.

— ಆಯೇಷಾ ಖಾನಮ್

ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ

Tags

BRICSMedia
share
ಆಯೇಷಾ ಖಾನಮ್
ಆಯೇಷಾ ಖಾನಮ್
Next Story
X