ಕ್ಯಾಬ್ ಗ್ರಾಹಕರಿಗೆ ಬಿಗ್ ರಿಲೀಫ್; ಇನ್ನು ಮುಂದೆ ಬುಕಿಂಗ್ ವೇಳೆ ಮುಂಗಡ ಟಿಪ್ಸ್ ಕೇಳುವಂತಿಲ್ಲ!

ಸಾಂದರ್ಭಿಕ ಚಿತ್ರ(AI)
ಕ್ಯಾಬ್ ಬುಕ್ ಮಾಡುವ ಸಂದರ್ಭದಲ್ಲಿ ಅಗ್ರಿಗೇಟರ್ಸ್ ಕಂಪನಿಗಳು ತಮ್ಮ ಅಪ್ಲಿಕೇಶನ್ಗಳ ಮೂಲಕ “ಮುಂಗಡ ಟಿಪ್’, “ಆಡ್-ಆನ್ ಆಯ್ಕೆ ಮಾಡಿ” ಮತ್ತು “ತ್ವರಿತ ಸವಾರಿ ದೃಢೀಕರಣದ ನಿಮ್ಮ ಅವಕಾಶಗಳನ್ನು ಸುಧಾರಿಸಿ’ ಮೊದಲಾದ ಸಂದೇಶಗಳನ್ನು ಪ್ರದರ್ಶಿಸುವ ಕುರಿತು ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಓಲಾ, ಉಬರ್, ರ್ಯಾಪಿಡೋ ಅಥವಾ ಇತರ ಸಾರಿಗೆ ಅಗ್ರಿಗೇಟರ್ಸ್ ಕಂಪನಿಗಳು ತಮ್ಮ ಅಪ್ಲಿಕೇಶನ್ಗಳ ಮೂಲಕ ಕ್ಯಾಬ್ಗಳನ್ನು ಬುಕ್ ಮಾಡುವ ಮೊದಲು ಪ್ರಯಾಣಿಕರು ಟಿಪ್ ಪಾವತಿಸಲು ಕೇಳುತ್ತಿದ್ದವು. ಇದೀಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಗ್ರಿಗೇಟರ್ಸ್ಗಳಿಗೆ ತಮ್ಮ ಅಪ್ಲಿಕೇಶನ್ಗಳಿಂದ ಪ್ರಿ-ರೈಡ್ ಟಿಪ್ಪಿಂಗ್ ಪ್ರಾಂಪ್ಟ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದು ಹಾಕಲು ನಿರ್ದೇಶಿಸಿದೆ. ಕ್ಯಾಬ್ ಅನ್ನು ವೇಗವಾಗಿ ಪಡೆಯುವುದು ಅಥವಾ ಸವಾರಿ ಪಡೆಯುವ ಸಾಧ್ಯತೆಗಳನ್ನು ಸುಧಾರಿಸುವ ಭರವಸೆಯಲ್ಲಿ ಪ್ರಯಾಣಿಕರು ಹೆಚ್ಚುವರಿ ಪಾವತಿ ಮಾಡುವುದನ್ನು ಪ್ರೋತ್ಸಾಹಿಸಲಾಗುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ಕ್ಯಾಬ್ ಬುಕ್ ಮಾಡುವ ಸಂದರ್ಭದಲ್ಲಿ “ಮುಂಗಡ ಟಿಪ್’, “ಆಡ್-ಆನ್ ಆಯ್ಕೆ ಮಾಡಿ” ಮತ್ತು “ತ್ವರಿತ ಸವಾರಿ ದೃಢೀಕರಣದ ನಿಮ್ಮ ಅವಕಾಶಗಳನ್ನು ಸುಧಾರಿಸಿ’ ಮೊದಲಾದ ಸಂದೇಶಗಳನ್ನು ಪ್ರದರ್ಶಿಸುವ ಸವಾರಿ ಅಗ್ರಿಗೇಟರ್ಸ್ ಪ್ಲಾಟ್ಫಾರ್ಮ್ಗಳ ಕುರಿತ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಟಿಪ್ ನೀಡುವುದರಿಂದ ತಮಗೆ ಬೇಗನೇ ಸವಾರಿ ಸಿಗಲು ಪ್ರಭಾವ ಬೀರಬಹುದು ಮತ್ತು ಚಾಲಕ ಬೇಗನೇ ಸವಾರಿಯನ್ನು ಸ್ವೀಕರಿಸುತ್ತಾನೆ ಎನ್ನುವ ಭಾವನೆಯನ್ನು ಪ್ರಯಾಣಿಕರಲ್ಲಿ ನೀಡಬಹುದು ಎಂಬ ಕಾರಣದಿಂದ ಈ ಪ್ರಾಂಪ್ಟ್ಗಳ ಬಗ್ಗೆ ಕಳವಳ ವ್ಯಕ್ತವಾಗಿತ್ತು.
ಮೋಟಾರ್ ವೆಹಿಕಲ್ ಅಗ್ರಿಗೇಟರ್ ಮಾರ್ಗಸೂಚಿಗಳು 2025 ಅನ್ನು ಅನುಸರಿಸಿದ ಈ ಪ್ರಾಪ್ಟ್ಗಳ ಫೀಚರ್ ಅನ್ನು ತಕ್ಷಣವೇ ತೆಗೆದು ಹಾಕಲು ತಮ್ಮ ಮೊಬೈಲ್ ಅಪ್ಲಿಕೇಶನ್ಗಳನ್ನು ಪರಿಶೀಲಿಸುವಂತೆ ಸರ್ಕಾರವು ಎಲ್ಲಾ ಮೋಟಾರ್ ವೆಹಿಕಲ್ ಅಗ್ರಿಗೇಟರ್ಸ್ ಕಂಪನಿಗಳಿಗೆ ತಿಳಿಸಿದೆ.
ನಿರ್ದೇಶನದ ಅಡಿಯಲ್ಲಿ ಹೆಚ್ಚುವರಿ ಹಣವನ್ನು ಪಾವತಿಸುವುದರಿಂದ ಸೇವೆಯ ಲಭ್ಯತೆ ಅಥವಾ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎನ್ನುವ ಸೂಚನೆಯನ್ನು ಅಪ್ಲಿಕೇಶನ್ಗಳು ತೋರಿಸುವಂತಿಲ್ಲ. ಸವಾರಿ ಪೂರ್ಣಗೊಳ್ಳುವ ಮೊದಲು ಟಿಪ್ ಪ್ರಾಂಪ್ಟ್, ಸಂದೇಶ, ಆಡ್ ಆನ್ ಅಥವಾ ಪಾವತಿ ಆಯ್ಕೆಯನ್ನು ಪ್ರದರ್ಶಿಸಲು ಅವಕಾಶವಿಲ್ಲ. ಈ ನಿರ್ದೇಶನಗಳಲ್ಲಿ ಚಾಲಕನು ಸವಾರಿ ಸ್ವೀಕರಿಸುತ್ತಾನೆಯೇ, ಬುಕಿಂಗ್ ಅನ್ನು ಎಷ್ಟು ಬೇಗನೆ ದೃಢೀಕರಿಸಲಾಗಿದೆ, ಯಾವ ಚಾಲಕನನ್ನು ನಿಗದಿಪಡಿಸಲಾಗಿದೆ ಅಥವಾ ಪ್ರಯಾಣಿಕರು ಎಷ್ಟು ಸಮಯ ಕಾಯಬೇಕು ಮೊದಲಾದವು ಒಳಗೊಂಡಿದೆ.
ಸರಳವಾಗಿ ಹೇಳುವುದಾದರೆ ಕ್ಯಾಬ್ ಬುಕ್ ಮಾಡುವ ಪ್ರಯಾಣಿಕರು ಹೆಚ್ಚುವರಿ ಮೊತ್ತ ಪಾವತಿಸುವುದರಿಂದ ಸವಾರಿ ಪಡೆಯುವ ಸಾಧ್ಯತೆಗಳನ್ನು ಸುಧಾರಿಸಬಹುದು ಎಂದು ಭಾವಿಸುವಂತೆ ಮಾಡಬಾರದು. ಸರ್ಕಾರವು ಅಗ್ರಿಗೇಟರ್ಸ್ಗಳಿಗೆ ವಿಳಂಬವಿಲ್ಲದೆ ಅಗತ್ಯ ಬದಲಾವಣೆಗಳನ್ನು ಮಾಡಲು ಮತ್ತು ಅವರ ಅಪ್ಲಿಕೇಶನ್ಗಳು 2025ರ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ನಿರ್ದೇಶಿಸಿದೆ.
ನೀವು ಚಾಲಕರಿಗೆ ಟಿಪ್ ನೀಡಬಹುದೆ?
ಹೌದು. ಸರ್ಕಾರವು ಟಿಪ್ ನೀಡುವುದನ್ನು ನಿಷೇಧಿಸಿಲ್ಲ. ಮೋಟಾರ್ ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು, 2025ರ ಷರತ್ತು 14.15 ಅಡಿಯಲ್ಲಿ ಪ್ರಯಾಣಿಕರು ಸ್ವಯಂಪ್ರೇರಣೆಯಿಂದ ಚಾಲಕರಿಗೆ ಟಿಪ್ ನೀಡಬಹುದು. ಆದರೆ ಪ್ರಯಾಣ ಪೂರ್ಣಗೊಂಡ ಮೇಲೆಯೇ ಆಯ್ಕೆಯನ್ನು ನೀಡಬಹುದು. ಸಂಪೂರ್ಣ ಟಿಪ್ ಚಾಲಕನಿಗೇ ಹೋಗಬೇಕು. ಅಗ್ರಿಗೇಟರ್ಸ್ ಅದರಿಂದ ಯಾವುದೇ ಮೊತ್ತ ಕಡಿತ ಮಾಡುವಂತಿಲ್ಲ.
ಅಂದರೆ ಪ್ರಯಾಣಿಕರು ಸವಾರಿ ನಂತರ ಚಾಲಕನಿಗೆ ಬಹುಮಾನ ನೀಡಲು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಕ್ಯಾಬ್ ಪಡೆಯುವ ಸಾಧ್ಯತೆ ಸುಧಾರಿಸುವ ಮಾರ್ಗವಾಗಿ ಸವಾರಿಯ ಮೊದಲು ಟಿಪ್ ಅನ್ನು ಪ್ರಸ್ತುತಪಡಿಸುವಂತಿಲ್ಲ.
ಸರ್ಕಾರ ಈಗ ಕ್ರಮ ಕೈಗೊಳ್ಳಲು ಕಾರಣವೇನು?
ಅಗ್ರಿಗೇಟರ್ಸ್ ಕಂಪನಿಗಳು ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಬುಕಿಂಗ್ ಪ್ರಕ್ರಿಯೆ ಸಂದರ್ಭದಲ್ಲಿ ಸವಾರಿಪೂರ್ವ ಸಂದೇಶಗಳನ್ನು ಹಾಕುವುದು ಮತ್ತು ಟಿಪ್ಪಿಂಗ್ ಆಯ್ಕೆ ನೀಡುವ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಈ ಅಭ್ಯಾಸವನ್ನು ತೊರೆಯುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವೂ ಇದಕ್ಕೆ ಮೊದಲು ನಿರ್ದೇಶನ ನೀಡಿತ್ತು.






