Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಾಗರಿಕರನ್ನೇ ‘ಶತ್ರು’ಗಳಂತೆ ಚಿತ್ರಿಸಿದ...

ನಾಗರಿಕರನ್ನೇ ‘ಶತ್ರು’ಗಳಂತೆ ಚಿತ್ರಿಸಿದ ಬಿಜೆಪಿ; ಗುಂಡಿಕ್ಕುವ ದೃಶ್ಯಗಳ ಪ್ರಚಾರಕ್ಕೆ ತೀವ್ರ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ30 Aug 2026 1:14 PM IST
share
ನಾಗರಿಕರನ್ನೇ ‘ಶತ್ರು’ಗಳಂತೆ ಚಿತ್ರಿಸಿದ ಬಿಜೆಪಿ; ಗುಂಡಿಕ್ಕುವ ದೃಶ್ಯಗಳ ಪ್ರಚಾರಕ್ಕೆ ತೀವ್ರ ಆಕ್ರೋಶ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ‘ಧಿಮಾಗಿ ನಕ್ಸಲ್’ ಎಂಬ ಪದ ಬಳಸಿದ ಬೆನ್ನಲ್ಲೇ, ಬಿಜೆಪಿ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಪದವನ್ನು ಬಳಸಿಕೊಂಡು ಸರಣಿ ಪ್ರಚಾರ ನಡೆಸುತ್ತಿದೆ. ಆದರೆ, ಈ ಪ್ರಚಾರದಲ್ಲಿ ‘ಧಿಮಾಗಿ ನಕ್ಸಲ್’ ಎಂದು ಗುರುತಿಸಲಾದವರನ್ನು ಗುರಿಯಾಗಿಸಿಕೊಂಡಂತೆ ತೋರಿಸುವ ಸಿನಿಮಾಗಳಲ್ಲಿನ ಗುಂಡಿನ ದಾಳಿ ಹಾಗೂ ಯುದ್ಧದ ದೃಶ್ಯಗಳನ್ನು ಬಳಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

‘ಧಿಮಾಗಿ ನಕ್ಸಲ್’ ವಿರುದ್ಧ ‘ಪೂರ್ಣ ಬಲ’?

ಆಗಸ್ಟ್ 27ರಂದು ಕರ್ನಾಟಕ ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ “No slowing down - taking on ‘Dimaagi Naxals’ with full force!” (ನಿಧಾನಗತಿಯಿಲ್ಲ — ‘ಧಿಮಾಗಿ ನಕ್ಸಲ್’ಗಳ ವಿರುದ್ಧ ಪೂರ್ಣ ಬಲದಿಂದ ಹೋರಾಟ!) ಎಂಬ ಬರಹದೊಂದಿಗೆ ವೀಡಿಯೊ ಹಂಚಿಕೊಂಡಿತು.

KGF ಚಿತ್ರದ ಗುಂಡಿನ ದಾಳಿ ದೃಶ್ಯಗಳನ್ನು ಬಳಸಿರುವ ಈ ವೀಡಿಯೊದಲ್ಲಿ ಬಿಜೆಪಿ ವಿವಿಧ ರಾಜ್ಯ ಘಟಕಗಳನ್ನು ಶೂಟರ್‌ಗಳಂತೆ ಹಾಗೂ ‘ಧಿಮಾಗಿ ನಕ್ಸಲ್’ ಎಂದು ಗುರುತಿಸಲಾದ ಪಾತ್ರಗಳನ್ನು ಗುರಿಗಳಂತೆ ಚಿತ್ರಿಸಲಾಗಿದೆ. ಹಲವು ರಾಜ್ಯಗಳ ಬಿಜೆಪಿ ಘಟಕಗಳ ಹೆಸರುಗಳನ್ನು ಈ ಪಾತ್ರಗಳಿಗೆ ಬಳಸಲಾಗಿದೆ.

ರಾಜಕೀಯ ವಿರೋಧಿಗಳನ್ನು ‘ಧಿಮಾಗಿ ನಕ್ಸಲ್’ ಎಂದು ಗುರುತಿಸಿ, ಅವರ ವಿರುದ್ಧ ಗುಂಡಿನ ದಾಳಿಯ ದೃಶ್ಯಗಳನ್ನು ಬಳಸಿರುವುದು ಪಕ್ಷದ ಪ್ರಚಾರದ ಉದ್ದೇಶ ಮತ್ತು ಭಾಷೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ವೀಡಿಯೊವನ್ನು ಉಲ್ಲೇಖಿಸಿ ಯೂಟ್ಯೂಬರ್ ಧ್ರುವ್ ರಾಥಿ ಆಗಸ್ಟ್ 28ರಂದು ಟೀಕಿಸಿದ್ದು, ಇಂತಹ ಪ್ರಚಾರವು ಸಹ ನಾಗರಿಕರ ವಿರುದ್ಧದ ಹಿಂಸೆಯನ್ನು ಸಮರ್ಥಿಸುವ ಸಂದೇಶ ನೀಡುತ್ತದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಘಟಕದಿಂದಲೂ ಯುದ್ಧದ ಭಾಷೆ

ಕರ್ನಾಟಕ ಬಿಜೆಪಿಯ ವೀಡಿಯೊದ ಬೆನ್ನಲ್ಲೇ, ಆಗಸ್ಟ್ 28ರಂದು ಬಿಜೆಪಿ ರಾಷ್ಟ್ರೀಯ ಖಾತೆ “SHALL WE BEbGIN?” (ಶುರು ಮಾಡೋಣವೇ ನಾವು?) ಎಂಬ ಶೀರ್ಷಿಕೆಯೊಂದಿಗೆ ಮತ್ತೊಂದು ವೀಡಿಯೊ ಹಂಚಿಕೊಂಡಿತು.

ಈ ವೀಡಿಯೊದಲ್ಲಿ Spartacus ಸರಣಿಯ ಯುದ್ಧದ ದೃಶ್ಯಗಳನ್ನು ಬಳಸಲಾಗಿದ್ದು, ಬಿಜೆಪಿ ರಾಜ್ಯ ಘಟಕಗಳನ್ನು ಸೈನ್ಯದ ರೀತಿಯಲ್ಲಿ ಚಿತ್ರಿಸಲಾಗಿದೆ. “It shall be us who rip their lies and propaganda apart… Shall we begin?!” (ಅವರ ಸುಳ್ಳು ಮತ್ತು ಅಪಪ್ರಚಾರವನ್ನು ಬಯಲಿಗೆಳೆಯುವುದು ನಾವೇ… ಶುರು ಮಾಡೋಣವೇ?!) ಎಂಬ ಸಂದೇಶವನ್ನೂ ವೀಡಿಯೊ ಒಳಗೊಂಡಿದೆ.

ಎರಡು ದಿನಗಳಲ್ಲಿ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ಖಾತೆಗಳಿಂದ ಹಂಚಿಕೆಯಾದ ಈ ವೀಡಿಯೊಗಳು, ರಾಜಕೀಯ ಪ್ರಚಾರದಲ್ಲಿ ಹಿಂಸಾತ್ಮಕ ಸಿನಿಮಾದ ದೃಶ್ಯಗಳು ಮತ್ತು ಯುದ್ಧದ ಭಾಷೆಯನ್ನು ಬಳಸುತ್ತಿರುವ ಪಕ್ಷದ ಸಾಮಾಜಿಕ ಮಾಧ್ಯಮ ತಂತ್ರದ ಬಗ್ಗೆ ಚರ್ಚೆ ಹುಟ್ಟುಹಾಕಿವೆ.

ಈ ವೀಡಿಯೊಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಹಲವಾರು ಜನರು, ಸರ್ಕಾರವನ್ನು ಪ್ರಶ್ನಿಸುವವರು ಅಥವಾ ರಾಜಕೀಯ ಟೀಕಾಕಾರರನ್ನು ‘ಧಿಮಾಗಿ ನಕ್ಸಲ್’ ಎಂದು ಕರೆದು, ಅವರನ್ನು ಗುಂಡಿಕ್ಕುವ ದೃಶ್ಯಗಳ ಮೂಲಕ ಬಿಂಬಿಸುವುದು ಅಪಾಯಕಾರಿ ಪ್ರಚಾರ ಎಂದು ಟೀಕಿಸಿದ್ದಾರೆ.

ಟೀಕಾಕಾರರ ಪ್ರಕಾರ, ರಾಜಕೀಯ ವಿರೋಧವನ್ನು ಹಿಂಸಾತ್ಮಕ ದೃಶ್ಯಗಳೊಂದಿಗೆ ಜೋಡಿಸುವುದು ಭಿನ್ನಾಭಿಪ್ರಾಯವನ್ನು ‘ಶತ್ರುತ್ವ’ದಂತೆ ಚಿತ್ರಿಸುವ ಸಂದೇಶ ನೀಡುತ್ತದೆ. ಇಂತಹ ಚಿತ್ರಣಗಳು ವಿಶೇಷವಾಗಿ ಯುವಜನರಲ್ಲಿ ಹಿಂಸೆಯನ್ನು ಸಾಮಾನ್ಯಗೊಳಿಸುವ ಅಪಾಯವಿದೆ ಎಂಬ ಆತಂಕವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

ಜಲಿಯನ್ವಾಲಾ ಬಾಗ್‌ನಂತಹ ಹಿಂಸಾತ್ಮಕ ಇತಿಹಾಸವನ್ನು ನೆನಪಿಸುವ ರೀತಿಯಲ್ಲಿ ರಾಜಕೀಯ ಪ್ರಚಾರ ನಡೆಸುತ್ತಿರುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಜನರ ಆಕ್ರೋಶ

ಸೌರವ್ ದಾಸ್ (@SauravDassss, Cockroach Janta Party / CJP ಸಂಬಂಧಿತ) ಅವರು, “ಆಡಳಿತ ಪಕ್ಷವು ದೇಶದ ಯುವಜನರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಸುತ್ತಿದೆ. ಇದು ಅತ್ಯಂತ ಕೆಟ್ಟ ಬೆಳವಣಿಗೆ” ಎಂದು ಟೀಕಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಇದನ್ನು “ಒಂದು ಪೀಳಿಗೆಯ ಸಾಮೂಹಿಕ ಹತ್ಯೆ” ಎಂದು ಬಣ್ಣಿಸಿ, ಸರ್ಕಾರವನ್ನು ಪ್ರಶ್ನಿಸುವ ಯುವಜನರ ವಿರುದ್ಧದ ದ್ವೇಷ ಎಂದು ಆರೋಪಿಸಿದ್ದಾರೆ.

ಎಎಸ್ (@dissent_igrated) ಎಂಬ ಬಳಕೆದಾರರು, “ನಿಮ್ಮ ದೇಶದ ನಾಗರಿಕರನ್ನು ಕೊಲೆ ಮಾಡುವುದಾಗಿ ನೀವು ಬಹಿರಂಗವಾಗಿ ಬೆದರಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.

ತಾರಾ (@Ta_ra_das) ಅವರು, “ಉತ್ತಮ ಶಿಕ್ಷಣ ಸೌಲಭ್ಯಗಳನ್ನು ಕೇಳಿದ್ದಕ್ಕಾಗಿ ನಮ್ಮ ಮಕ್ಕಳನ್ನು ಗುಂಡಿಕ್ಕಿ ಕೊಲ್ಲುವುದಾಗಿ ನಿಜವಾಗಿಯೂ ಬೆದರಿಸುತ್ತಿದ್ದೀರಾ? ದಯವಿಟ್ಟು ಸ್ಪಷ್ಟಪಡಿಸಿ” ಎಂದು ಪ್ರಶ್ನಿಸಿದ್ದಾರೆ.

ಡಾ. ರುಚಿಕಾ ಶರ್ಮಾ (@tishasaroyan) ಅವರು, “ಬಿಜೆಪಿ ಐಟಿ ಸೆಲ್ ಈ ಬಾರಿ ಪಕ್ಷ ಸೋಲುವಂತೆ ನೋಡಿಕೊಳ್ಳುತ್ತಿದೆ!” ಎಂದು ವ್ಯಂಗ್ಯವಾಡಿದ್ದಾರೆ.

ಆರ್ಜೆ (@CPARSJ) ಎಂಬ ಎಕ್ಸ್ ಖಾತೆದಾರರು, ಈ ರೀತಿಯ ಪ್ರಚಾರವು ಯುವಜನರನ್ನು ಹಿಂಸೆಯತ್ತ ಪ್ರೇರೇಪಿಸಬಹುದು ಎಂದು ಟೀಕಿಸಿದ್ದಾರೆ. ವೀಡಿಯೊವನ್ನು ಖಂಡಿಸುವುದರ ಜೊತೆಗೆ, ಅದನ್ನು ಅನುಮೋದಿಸಿದವರನ್ನೂ ಹೊಣೆಗಾರರನ್ನಾಗಿಸಬೇಕು ಎಂದು ಹೇಳಿದ್ದಾರೆ.

ರೈಟ್ ಟು ಜಸ್ಟಿಸ್ (@RightToJusts360) ಖಾತೆಯು ಕೂಡ ವೀಡಿಯೊವನ್ನು ಟೀಕಿಸಿದೆ. ಬೆದರಿಕೆ ಮತ್ತು ಭಯ ಹುಟ್ಟಿಸುವ ಪ್ರಯತ್ನಗಳಿಂದ ಜನರ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಖಾತೆಯು, ಟೀಕಾಕಾರರನ್ನು ‘ಧಿಮಾಗಿ ನಕ್ಸಲ್’ ಎಂದು ಕರೆಯುವುದು ಮತ್ತು ಜಲಿಯನ್ವಾಲಾ ಬಾಗ್‌ನಂತಹ ಘಟನೆಗಳನ್ನು ನೆನಪಿಸುವ ಭಾಷೆ ಬಳಸುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವ ನಾಗರಿಕರನ್ನು ಸಿನಿಮಾದ ಖಳನಾಯಕರಂತೆ ಚಿತ್ರಿಸಿ, ಅವರ ವಿರುದ್ಧ ಗುಂಡಿನ ದಾಳಿ ಅಥವಾ ಯುದ್ಧದ ದೃಶ್ಯಗಳನ್ನು ಬಳಸುವ ಅಗತ್ಯವೇನು? ರಾಜಕೀಯ ಭಿನ್ನಾಭಿಪ್ರಾಯವನ್ನು ‘ನಾವು-ಅವರು’ ಎಂಬ ಸಂಘರ್ಷವಾಗಿ ರೂಪಿಸುವುದರ ಜೊತೆಗೆ, ಹಿಂಸಾತ್ಮಕ ಚಿತ್ರಣವನ್ನು ಪ್ರಚಾರದ ಸಾಧನವಾಗಿ ಬಳಸುವುದು ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವಿವಿಧ ಎಕ್ಸ್ ನಲ್ಲಿ ಜನರು ವ್ಯಕ್ತಪಡಿಸಿದ್ದಾರೆ.

Tags

BJPoutrageshooting scenes
share
ವಾರ್ತಾಭಾರತಿ
ವಾರ್ತಾಭಾರತಿ
Next Story
X