Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕನ್ನಡದ ಬಾನಿಗೆ ಬೂಕರ್ ಗೌರವ

ಕನ್ನಡದ ಬಾನಿಗೆ ಬೂಕರ್ ಗೌರವ

ವಾರ್ತಾಭಾರತಿವಾರ್ತಾಭಾರತಿ22 May 2025 12:58 PM IST
share
ಕನ್ನಡದ ಬಾನಿಗೆ ಬೂಕರ್ ಗೌರವ
ಬಾನು ಮುಷ್ತಾಕ್ ಅವರ ಇದುವರೆಗೆ ಪ್ರಕಟಿತ ಕಥೆಗಳ ಪೈಕಿ ಆಯ್ದ 12 ಕಥೆಗಳ ಸಂಕಲನವಾದ ‘ಹಾರ್ಟ್ ಲ್ಯಾಂಪ್’ ಕೃತಿಯು ಇಂಟರ್‌ನ್ಯಾಷನಲ್ ಬೂಕರ್ ಪ್ರೈಸ್‌ನ ಸ್ಪರ್ಧೆಯಲ್ಲಿ ಎರಡನೇ ಹಂತದ ಗೆಲುವನ್ನು ಪಡೆದಾಗ ಎರಡನೇ ಪರಿಷ್ಕೃತ ಸಮಗ್ರ ಕಥಾ ಸಂಕಲನ ‘ಹಸೀನಾ ಮತ್ತು ಇತರ ಕಥೆಗಳು’ ಪ್ರಕಟವಾಗುವ ಸಂದರ್ಭದಲ್ಲಿ ಲೇಖಕಿಯ ಬರಹದ ಆಯ್ದ ಭಾಗ

ನಿಮಗೆ ಅರ್ಪಣೆ

ನನ್ನ ಸಾಹಿತ್ಯದ ಪಯಣದಲ್ಲಿ, ನಾನು ಕ್ರಮಿಸಿದ ಹಾದಿಯ ಹೊರಳು ದಿಕ್ಕಿನಲ್ಲಿ ನಾನು ನಿಂತಿದ್ದೇನೆ. ಬದುಕಿನ ಅನಿರೀಕ್ಷಿತ ತಿರುವುಗಳು ಮತ್ತು ರೋಮಾಂಚಕಾರಿ ಪಲ್ಲಟಗಳು ಎದುರಾಗುತ್ತಿವೆ. ವಿವಾದಗಳಿಲ್ಲ ಆತ್ಮ ನಿರೀಕ್ಷೆ ಇದೆ. ಅಪಾರ ಸವಾಲುಗಳಿದ್ದವು ಈ ಕ್ಷಣದಲ್ಲಿ ಅದೆಷ್ಟೋ ಸಂತೋಷಗಳು ಮತ್ತು ಸಂಭ್ರಮಗಳು ಅಚಾನಕವಾಗಿ ನನ್ನದಾಗಿವೆ. ... ಅಲ್ಲಲ್ಲ! ನಿಜ ಹೇಳಬೇಕೆಂದರೆ ನಮ್ಮದಾಗಿವೆ. ಕನ್ನಡ ಭಾಷೆಯ ಕಿರೀಟಕ್ಕೆ ಗರಿಮೆಯೊಂದು ಮೂಡಿದೆ. ಜಾಗತಿಕ ಸಾಹಿತ್ಯ ಲೋಕದ ರಂಗಮಂಟಪದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡವು ಅಪಾರ ಘನತೆ ಮತ್ತು ಹೆಮ್ಮೆಯಿಂದ ಸೂಕ್ತ ಸ್ಥಾನದಲ್ಲಿ ವಿರಾಜಮಾನವಾಗಿದೆ. ಹೌದು... ನಾನು 2025ರ ಬೂಕರ್ ಪ್ರಶಸ್ತಿಗೆ ನನ್ನ ಕಥಾ ಸಂಕಲನವು ಲಾಂಗ್ ಲಿಸ್ಟ್‌ಗೆ ಆಯ್ಕೆ ಆಗಿರುವ ಬಗ್ಗೆ ಮಾತಾಡುತ್ತಿದ್ದೇನೆ. ನನ್ನ ಇದುವರೆಗೆ ಪ್ರಕಟಿತ ಕಥೆಗಳ ಪೈಕಿ ಆಯ್ದ 12 ಕಥೆಗಳ ಸಂಕಲನವಾದ ‘ಹಾರ್ಟ್ ಲ್ಯಾಂಪ್’ ಕೃತಿಯು ಇಂಟರ್‌ನ್ಯಾಷನಲ್ ಬೂಕರ್ ಪ್ರೈಸ್‌ನ ಸ್ಪರ್ಧೆಯಲ್ಲಿ ಎರಡನೇ ಹಂತದ ಗೆಲುವನ್ನು ಪಡೆದಿದೆ.

ಕನ್ನಡವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಸೂಕ್ತ ಮನ್ನಣೆಯನ್ನು ಪಡೆದಿದ್ದು, ಹಾಲಿ ತನ್ನ ಅಸ್ಮಿತೆಯ ಮಲ್ಲಿಗೆ ಸುಗಂಧವನ್ನು ಇನ್ನಷ್ಟು ಪಸರಿಸುತ್ತಿರುವ ಈ ಅಪೂರ್ವ ಸಂದರ್ಭವನ್ನು ಕನ್ನಡಿಗರೆಲ್ಲರೂ ಕೂಡ ಏಕೋಭಾವದಿಂದ ಕೈಜೋಡಿಸಿ ಸಂಭ್ರಮಿಸುತ್ತಿರುವುದನ್ನು ನೋಡುವುದೇ ನನ್ನ ಕಣ್ಣುಗಳಿಗೆ ಹಬ್ಬವಾಗಿದೆ. ಎದೆ ತುಂಬಿ ಬಂದು ಕಣ್ಣಾಲಿಗಳು ಆರ್ದ್ರವಾಗಿವೆ. ಇದುವರೆಗೆ ಅಂದರೆ ನನ್ನ ಬದುಕಿನುದ್ದಕ್ಕೂ ಕನ್ನಡ ಸಾಂಸ್ಕೃತಿಕ ಲೋಕವು ನನಗೆ ನೀಡಿದ ಒಳನೋಟಗಳು, ಕ್ಷಮತೆ, ವೈಚಾರಿಕ ಅರಿವು ಮತ್ತು ಒಳಗೊಳ್ಳುವಿಕೆಯು ನನ್ನ ಸೃಜನಶೀಲ ಅಭಿವ್ಯಕ್ತಿಗೆ ಪಕ್ವತೆಯನ್ನು ಮತ್ತು ಮೆರುಗನ್ನು ನೀಡಿದೆ. ಕನ್ನಡದ ಸಾಹಿತ್ಯ ಲೋಕವು ನನ್ನ ಸಾಹಿತ್ಯದ ಅಭಿವ್ಯಕ್ತಿಗೆ ನೀಡಿದ ಪ್ರೋತ್ಸಾಹವು ಕೂಡ ನನ್ನಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿತು. ನನ್ನ ಬರವಣಿಗೆಗೆ ದಿಕ್ಕು ದೆಸೆಯನ್ನು ನೀಡಿದ ಮತ್ತು ನನ್ನ ಆಲೋಚನೆಯ ಗಡಿಗಳನ್ನು ವಿಸ್ತರಿಸಿದ ಪಿ. ಲಂಕೇಶ್ ಮತ್ತು ಬರಗೂರು ರಾಮಚಂದ್ರಪ್ಪನವರನ್ನು ನಾನು ಅಭಿಮಾನ ಪೂರ್ವಕವಾಗಿ ವಂದಿಸದಿದ್ದಲ್ಲಿ, ಅಪಚಾರವಾಗುತ್ತದೆ. ನನ್ನ ಪ್ರತಿಭೆ ಮತ್ತು ಸಾಹಿತ್ಯಾಸಕ್ತಿಯನ್ನು ಗುರುತಿಸಿ ಬೆಳಕಿಗೆ ಬರಲು ಪಿ.ಲಂಕೇಶ್ ನನಗೆ ಅಪಾರ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಪತ್ರಿಕಾ ವರದಿಗಳ ಜೊತೆಯಲ್ಲಿ ಸೃಜನಶೀಲ ಕೃತಿಗಳ ಬರವಣಿಗೆಯಲ್ಲಿತೊಡಗುವಂತೆ ನನ್ನ ಮನಸ್ಸನ್ನು ಉದ್ದೀಪನೆಗೊಳಿಸಿದರು. ಬರಗೂರು ರಾಮಚಂದ್ರಪ್ಪನವರ ಹೆಸರಿನಲ್ಲಿ ಇರುವ ‘ಗುರು’ ಎಂಬ ವಿಶೇಷಣಕ್ಕೆ ತಕ್ಕಂತೆ ಬರಗೂರುರವರು ಅವಶ್ಯಕ ಸೈದ್ಧಾಂತಿಕ ಸ್ಪಷ್ಟತೆಯನ್ನು ನನಗೆ ಒದಗಿಸಿ ಕೊಟ್ಟರು. ಅವರ ಮತ್ತು ಕಾಳೇಗೌಡ ನಾಗವಾರ, ರಂಜಾನ್ ದರ್ಗಾ, ಚಂಪಾ, ಚೆನ್ನಣ್ಣ ವಾಲಿಕಾರ ಮತ್ತು ಅಲ್ಲಮಪ್ರಭು ಬೆಟ್ಟದೂರ ಮೊದಲಾದವರ ನೇತೃತ್ವದ ಬಂಡಾಯ ಸಾಹಿತ್ಯ ಸಂಘಟನೆಯು ಕ್ರಾಂತಿಯ ಕಿಡಿಗಳನ್ನು ನೆಲಕ್ಕೆ ಚೆಲ್ಲಿ, ಅವುಗಳು ಬಿರಿದಂತೆ ಸಿಡಿದಂತೆ ನಮ್ಮ ಶಕ್ತ್ಯಾನುಸಾರ ಆಯ್ದು ಉಡಿಯಲ್ಲಿ ಕಟ್ಟಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸಿದರು. ಕರ್ನಾಟಕದ ಉದ್ದಗಲಕ್ಕೂ ಈ ಬಂಡಾಯದ ಗರಿಕೆಗಳು ಇಂದಿಗೂ ಜನಪರ ಧ್ವನಿಗಳನ್ನು ಮತ್ತು ಜೀವಪರ ಮೌಲ್ಯಗಳನ್ನು ಉಳಿಸಿಕೊಂಡಿದ್ದು ಸಮಾಜದ ತುರ್ತಿಗೆ ಓಗೊಡುತ್ತಾ ಆರೋಗ್ಯಕರ ಸಮಾಜ ನಿರ್ಮಾಣದತ್ತ ತುಡಿಯುತ್ತಿದ್ದಾರೆ.

ಈ ಹಿಂದೆ ನನ್ನ ಐದು ಕಥಾ ಸಂಕಲನಗಳಿಂದ ಕೂಡಿದ ಸಮಗ್ರ ಗ್ರಂಥವಾದ ‘ಹಸೀನಾ ಮತ್ತು ಇತರ ಕಥೆಗಳು’ 2013ರಲ್ಲಿ ಪ್ರಕಟವಾಗಿತ್ತು. ನಂತರ ನನ್ನ ಇನ್ನೊಂದು ಕಥಾ ಸಂಕಲನ ‘ಹೆಣ್ಣು ಹದ್ದಿನ ಸ್ವಯಂವರ’ 2023ರ ವರ್ಷದಲ್ಲಿ ಪ್ರಕಟವಾಯಿತು. ನನ್ನ ಕೃತಿಗಳನ್ನು ಖರೀದಿಸಿ ಓದಿ, ನನ್ನ ಆಲೋಚನೆಗಳನ್ನು ಗ್ರಹಿಸಿ ನನಗೆ ಅಪಾರ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಿರುವ ನನ್ನ ಎಲ್ಲಾ ಓದುಗ ಮಿತ್ರರಿಗೂ ಮನದಾಳದ ಧನ್ಯವಾದಗಳು.

ಬಸವ ಬಿರಾದಾರ್ ನನ್ನ ಆರ್ಟಿಕಲ್-14 ಎಂಬ ಮ್ಯಾಗಝಿನ್‌ಗೆ ಸಂದರ್ಶನ ಮಾಡಲು 2022ನೇ ವರ್ಷದಲ್ಲಿ ಹಾಸನಕ್ಕೆ ನಮ್ಮ ಮನೆಗೆ ಬಂದರು. ಅವರು ಸುದೀರ್ಘವಾದ ಸಂದರ್ಶನವನ್ನು ಮಾಡಿದ ನಂತರ, ‘‘ನನ್ನ ಕಥೆಗಳನ್ನು ನೀವು ಇಂಗ್ಲಿಷ್‌ಗೆ ಅನುವಾದ ಮಾಡಲು ಸಾಧ್ಯವೇ?’’ ಎಂದು ಕೇಳಿದೆ. ‘‘ನಾನು ಸದ್ಯಕ್ಕೆ ಬೇರೆ ಯಾವುದೋ ಕೆಲಸವನ್ನು ಕೈಗೆತ್ತಿಕೊಂಡಿದ್ದೇನೆ. ಈ ಹಿಂದೆ ನನ್ನ ಸಹೋದ್ಯೋಗಿಯಾಗಿದ್ದ ದೀಪಾ ಭಾಸ್ತಿ ಎಂಬವರು ಚಂದದ ಅನುವಾದ ಮಾಡುತ್ತಾರೆ’’ ಎಂದು ಅವರ ಫೋನ್ ನಂಬರನ್ನು ಕೊಟ್ಟರು. ನಂತರದ್ದು ಇತಿಹಾಸ. ದೀಪಾ ಭಾಸ್ತಿ ನಮ್ಮ ಪಕ್ಕದ ಕೊಡಗು ಜಿಲ್ಲೆಯ ಮಡಿಕೇರಿಯವರು ಎಂಬುದು ಕೂಡ ನನಗೆ ಅನುಕೂಲವಾಯಿತು. ಅನುವಾದದ ಸಕಲ ಆಯಾಮಗಳು ಆಕೆಗೆ ತೃಪ್ತಿ ಕೊಡುವವರೆಗೂ ನೆಮ್ಮದಿಯಿಂದ ಇರದ ದೀಪಾ, ಕಥೆಗಳಲ್ಲಿ ನಾನು ಬಳಸಿದ ನುಡಿಗಟ್ಟುಗಳು, ಒಗಟು ಮತ್ತು ದಖನಿ ಉರ್ದು ಹಾಗೂ ಅರೇಬಿಕ್ ಭಾಷೆಯ ಅನೇಕ ಪದಗಳನ್ನು ಗುರುತು ಹಾಕಿಕೊಂಡು ಹಲವಾರು ಸಲ ನನ್ನೊಡನೆ ಮುಖತಃ ಭೇಟಿಯಾದರು ಮತ್ತು ಕಥೆಗಳ ಅಂತರಂಗವನ್ನು ಹಿಡಿಯಲು ಸಫಲರಾದರು. ಬೂಕರ್ ಪ್ರಶಸ್ತಿಗೆ ಆಯ್ಕೆ ಆಗಿರುವ ‘ಹಾರ್ಟ್ ಲ್ಯಾಂಪ್’ ಕೃತಿಯಲ್ಲಿ ಸೇರ್ಪಡೆಯಾಗಿರುವ 12 ಕಥೆಗಳು ಕೆಳಕಂಡಂತಿವೆ. ಶಾಯಿಸ್ತ ಮಹಲ್‌ನ ಕಲ್ಲು ಚಪ್ಪಡಿಗಳು, ಬೆಂಕಿ ಮಳೆ, ಕರಿನಾಗರಗಳು, ಹೃದಯದ ತೀರ್ಪು, ಕೆಂಪು ಲುಂಗಿ, ಎದೆಯ ಹಣತೆ, ಹೈಹೀಲ್ಡ್ ಶೂ, ಮೆಲುದನಿಗಳು, ಸ್ವರ್ಗವೆಂದರೆ, ಕಫನ್, ಅರಬಿ ಮೇಷ್ಟ್ರು, ಒಮ್ಮೆ ಹೆಣ್ಣಾಗು ಪ್ರಭುವೇ. ಆ ಪೈಕಿ ‘ಕೆಂಪು ಲುಂಗಿ’ ಕಥೆಯ ಇಂಗ್ಲಿಷ್ ಅನುವಾದವು ಪ್ರತಿಷ್ಠಿತ ‘ದ ಪ್ಯಾರಿಸ್ ರಿವ್ಯೆ’ನ ಜೂನ್ 2024ರ ಸಂಚಿಕೆಯಲ್ಲಿ ಪ್ರಕಟವಾಗಿದೆ ಮತ್ತು ‘ಒಮ್ಮೆ ಹೆಣ್ಣಾಗು ಪ್ರಭುವೇ’ ಕಥೆಯ ಇಂಗ್ಲಿಷ್ ಅನುವಾದವು ‘ದ ಬ್ಯಾಪ್ಟರ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ದೀಪಾರ ಮನಸೂರೆಗೊಳ್ಳುವ ಅನುವಾದ ಶೈಲಿಯು ಬೂಕರ್ ಪ್ರಶಸ್ತಿಯ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದು ವಿದಿತವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಎರಡನೆಯ ಪರಿಷ್ಕೃತ ಸಮಗ್ರ ಕಥಾ ಸಂಕಲನವು ಸಹೃದಯರಾದ ನಿಮ್ಮ ಸಮ್ಮುಖದಲ್ಲಿ! ... ಮತ್ತು ....ನಿಮಗೆ ಅರ್ಪಣೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X