Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮತ್ತೆ ತೆನೆಯಲ್ಲಿ ಅರಳೀತೇ ಕಮಲ?

ಮತ್ತೆ ತೆನೆಯಲ್ಲಿ ಅರಳೀತೇ ಕಮಲ?

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಸಾಧ್ಯತೆಯಿಂದ ಹೆಚ್ಚಿದ ಕದನ ಕುತೂಹಲ

ವಾರ್ತಾಭಾರತಿವಾರ್ತಾಭಾರತಿ8 Sept 2023 10:04 PM IST
share
ಮತ್ತೆ ತೆನೆಯಲ್ಲಿ ಅರಳೀತೇ ಕಮಲ?

ಆ ಪಕ್ಷದ ʼಎʼ ಟೀಂ, ಈ ಪಕ್ಷದ ʼಬಿʼ ಟೀಂ ಎಂದೇ ಪರಸ್ಪರ ಅರಚಿಕೊಳ್ಳುತ್ತಿದ್ದ ಒಂದು ಕಾಲದ ಹಿಂಬಾಗಿಲಿನ ಸಂಬಂಧಿಗಳು, ಬಳಿಕ ವಿಚ್ಛೇದನ ಪಡೆದಿದ್ದರು. ಈಗ ಆ ಇಬ್ಬರೂ ಮತ್ತೆ ಒಂದಾಗುವ ಸುದ್ದಿ ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಒಂದಾಗಲಿವೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿಕೆ ಇಂಬು ನೀಡಿದೆ.

ಉತ್ತರ ಭಾರತದ ಪಕ್ಷ ಎಂದೇ ಹೆಸರಾಗಿದ್ದ ಬಿಜೆಪಿ, ಜೆಡಿಎಸ್ ಪಕ್ಷದ ಸಹಾಯದೊಂದಿಗೆ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿ ಕರ್ನಾಟಕದಲ್ಲಿ 2006ರಲ್ಲಿ ಅಧಿಕಾರಕ್ಕೆ ಬಂತು. ಅಲ್ಲಿಯವರೆಗೆ ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ಅಧಿಕಾರ ಸಿಕ್ಕಿರಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಕಾಲೂರಿದ ಕ್ಷಣವದು. ಜೆಡಿಎಸ್ ನ ಕುಮಾರಸ್ವಾಮಿಯವರ ಜೊತೆ ಕೈಜೋಡಿಸಿದ್ದೇ ತಡ, ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ಕುಸಿಯಿತು. ರೆಸಾರ್ಟ್ ರಾಜಕಾರಣ ಮೇಳೈಸಿತು. ಕೆಲವೇ ದಿನಗಳಲ್ಲಿ ಜೆಡಿಎಸ್ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮೊಟ್ಟಮೊದಲು ಅಧಿಕಾರ ಸಿಗಲು ಹೀಗೆ ಕಾರಣರಾದವರು ಎಚ್ ಡಿ ಕುಮಾರಸ್ವಾಮಿ. ಆದರೆ ವಿಪರ್ಯಾಸ ಅಂದರೆ ಅಲ್ಲಿಂದಲೇ ರಾಜ್ಯದಲ್ಲಿ ಬಿಜೆಪಿ ಸಾಮರ್ಥ್ಯ ಹಾಗು ಸೀಟು ಗಳಿಕೆ ಹೆಚ್ಚುತ್ತಾ ಹೋದರೆ ಜೆಡಿಎಸ್ ಪ್ರಭಾವ ಹಾಗು ಶಾಸಕರ ಸಂಖ್ಯೆ ಇಳಿಯುತ್ತಲೇ ಹೋಯಿತು. ಅದೀಗ ಕೆಲವೇ ಕೆಲವು ಜಿಲ್ಲೆಗಳಿಗೆ ಸೀಮಿತ ಒಂದು ಕುಟುಂಬದ ಪಕ್ಷದಂತಾಗಿಬಿಟ್ಟಿದೆ.

ಝಮೀರ್ ಅಹ್ಮದ್ ಚಾಲಕರಾಗಿದ್ದ ನ್ಯಾಷನಲ್ ಬಸ್:

ಪ್ರಾರಂಭದಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಈ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದರೂ, ಬಳಿಕ ಅವರ ಕೃಪಾಪೋಷಣೆಯಲ್ಲೇ ಸರ್ಕಾರದ ನಾಟಕ ಸೆಟ್ಟೇರಿತ್ತು ಎಂಬ ವದಂತಿಗಳಿಗೆ ಇಂಬುಕೊಟ್ಟರು. ಎಸ್ ಎಂ ಕೃಷ್ಣ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಮುಗಿದ ಬಳಿಕ 2004ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಹಾಗಾಗಿ ಕಾಂಗ್ರಸ್ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಧರಂಸಿಂಗ್ ಮುಖ್ಯಮಂತ್ರಿಯಾದರು. ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ವಾರಕ್ಕೆ, ತಿಂಗಳಿಗೆ ಎಂಬಂತೆ ಪತ್ರದ ಮೇಲೆ ಪತ್ರ ಬರೆಯುತ್ತಾ ಧರಂಸಿಂಗ್ ಅವರಿಗೆ ಪರೋಕ್ಷ ತಾಕೀತು ಮಾಡುತ್ತಾ ಸರ್ಕಾರದ ಕೈಕಟ್ಟಿ ಹಾಕಿದ್ದರು. 2006ರಲ್ಲಿ ಎಲ್ಲವೂ ಒಂದು ಹಂತ ಮೀರಿದ ಮೇಲೆ, ಯುವ ನಾಯಕ ಕುಮಾರಸ್ವಾಮಿ ಬಂಡೆದ್ದು ತಮ್ಮದೇ ಶಾಸಕರ ಗುಂಪು ರಚಿಸಿ ರಾಜಭವನಕ್ಕೆ ಪರೇಡ್ ಹೊರಟರು. ಬಲಾ ಬಲ ಪ್ರದರ್ಶನವಾಯಿತು. ಆಗ ಜೆಡಿಎಸ್ನಲ್ಲಿದ್ದ ಶಾಸಕ ಝಮೀರ್ ಅಹ್ಮದ್ ತಮ್ಮದೇ ಮಾಲಕತ್ವದ ನ್ಯಾಷನಲ್ ಟ್ರಾವೆಲ್ಸ್ ಬಸ್ಸಿನಲ್ಲಿ ಸ್ವತಃ ಚಾಲಕನಾಗಿ ಜೆಡಿಎಸ್ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ದ ದೃಶ್ಯ ಇವತ್ತಿಗೂ ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಕಣ್ಣಿಗೆ ಕಟ್ಟಿದಂತಿದೆ.

ಒಂದು ವಾರದ ಮುಖ್ಯಮಂತ್ರಿಯಾಗಿದ್ದ ಬಿಎಸ್ವೈ

2006ರ ಫೆಬ್ರವರಿ 3ರಂದು ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ, ಬಿ ಎಸ್ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 20 ತಿಂಗಳ ಬಳಿಕ 2007ರ ನವೆಂಬರ್ 12ರಿಂದ ಒಂದು ವಾರಗಳ ಕಾಲ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕರ್ನಾಟಕವನ್ನು ಗುಜರಾತ್ ಮಾದರಿಯಾಗಿ ಮಾಡುತ್ತೇವೆ ಎಂದು ಹೇಳಿದ್ದನ್ನೇ ನೆಪವಾಗಿಸಿದ ಜೆಡಿಎಸ್ ಬಿಜೆಪಿಗೆ ಕೈಕೊಟ್ಟಿತು. ಬಿ ಎಸ್ ಯಡಿಯೂರಪ್ಪ ಕೇವಲ ವಾರದ ಕಾಲ ಮುಖ್ಯಮಂತ್ರಿಯಾದರು. ಅದು ಅವರಿಗೆ ಅನುಕಂಪವಾಗಿ ಬದಲಾಯಿತು. ಬಳಿಕ ರಾಷ್ಟ್ರಪತಿ ಆಡಳಿತ ಬಂತು. 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡು 110 ಸೀಟು ಗೆದ್ದಿತು. ಆದರೆ ಬಹುಮತ ಪಡೆದಿರಲಿಲ್ಲ. ಆಗ ಬಳ್ಳಾರಿಯ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಅಪರೇಷನ್ ಕಮಲದ ಮೂಲಕ ಸ್ವತಂತ್ರ ಬಲದ ಮೇಲೆ ಅಧಿಕಾರದ ರುಚಿ ಅನುಭವಿಸಿತು.

ವಚನಭ್ರಷ್ಟ ಪಟ್ಟ ಪಡೆದುಕೊಂಡ ಜೆಡಿಎಸ್

ಬಿಜೆಪಿಗೆ ಅನುಕಂಪ ಸಿಕ್ಕರೆ, ಜೆಡಿಎಸ್ಗೆ ವಚನ ಭ್ರಷ್ಟ ಪಕ್ಷ ಎಂಬ ಪಟ್ಟ ಸಿಕ್ಕಿತು. 2004ರ ಚುನಾವಣೆಯಲ್ಲಿ 58 ಸ್ಥಾನ ಪಡೆದಿದ್ದ ಜೆಡಿಎಸ್ 2008ರ ಚುನಾವಣೆಯಲ್ಲಿ 28ಕ್ಕೆ ಕುಸಿಯಿತು. ಆ ಬಳಿಕ ಜೆಡಿಎಸ್ ಮೊದಲು ಪಡೆದಿದ್ದ ಸ್ಥಾನಗಳನ್ನು ಪಡೆಯಲೇ ಇಲ್ಲ. ಕಾಲ ಕ್ರಮೇಣ ಪಕ್ಷದ ವರ್ಚಸ್ಸು ಕುಸಿಯುತ್ತಾ ಬಂತು. ಹಲವು ಭದ್ರಕೋಟೆಗಳು ಛಿದ್ರವಾದವು. ಜೆಡಿಎಸ್ ತೊರೆಯುವವರ ಸಂಖ್ಯೆಯೂ ಹೆಚ್ಚಾಯಿತು. ಬಚ್ಚೇಗೌಡ, ಬಸವರಾಜ ಬೊಮ್ಮಾಯಿಯಂತಹ ಘಟಾನುಘಟಿಗಳು ಜೆಡಿಎಸ್ ತೊರೆದು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡು ರಾಜಕೀಯ ನೆಲೆ ಭದ್ರಪಡಿಸಿಕೊಂಡರು. ಕೆಲವರು ಕಾಂಗ್ರೆಸ್ ಕಡೆ ಹೋದರು.

ಸರ್ಕಾರವೊಂದು, ಮುಖ್ಯಮಂತ್ರಿಗಳು ಮೂರು

2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿಎಸ್ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರು. ಆದರೆ ಭೃಷ್ಟಾಚರ ಪ್ರಕರಣದಲ್ಲಿ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ ಬಳಿಕ ಒಂದಿಷ್ಟು ದಿನಗಳ ಕಾಲ ಜೈಲಿನದಲ್ಲಿದ್ದರು. ಡಿ ವಿ ಸದಾನಂದ ಗೌಡರು ಮುಖ್ಯಮಂತ್ರಿಯಾದರು. ಅವರ ಬಳಿಕ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ 5 ವರ್ಷದ ದಡಕ್ಕೆ ಬಿಜೆಪಿ ಸರ್ಕಾರವನ್ನು ಬಹಳ ಪ್ರಯಾಸದಿಂದ ಸೇರಿಸಿದರು.

ಮತ್ತೆ ಅತಂತ್ರ, ಕಾಂಗ್ರೆಸ್ ಜೊತೆ ಜೆಡಿಎಸ್ ಚಡ್ಡಿದೋಸ್ತಿ

2013ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸಿದ್ದರಾಮಯ್ಯ 5 ವರ್ಷ ಪೂರೈಸಿದ ಮುಖ್ಯಮಂತ್ರಿಗಳ ಪಟ್ಟಿಗೆ ಸೇರಿಕೊಂಡರು. 2018ರ ಚುನಾವಣೆಯಲ್ಲಿ ಮತ್ತೆ ಅತಂತ್ರ ಸ್ಥಿತಿ ಬಂತು. ಅವಕಾಶದ ಹೆಬ್ಬಾಗಿಲನ್ನೇ ಕಾದು ಕುಳಿತಿದ್ದ ಜೆಡಿಎಸ್ ಪಕ್ಷವನ್ನು ಅಧಿಕಾರ ಹುಡುಕಿಕೊಂಡು ಬಂತು. ಕಾಂಗ್ರೆಸ್ ಜೆಡಿಎಸ್ ಜೊತೆಗೂಡಿ ಸಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಎರಡನೇ ಬಾರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. 2018ರ ಮೇ 13ರಿಂದ 2019ರ ಜುಲೈ 23ರ ವರೆಗೆ ಮಾತ್ರ ಈ ಸರ್ಕಾರದ ಆಡಳಿತ ನಡೆಯಿತು. ಆಪರೇಷನ್ ಕಮಲದ ಮೂಲಕ 17 ಶಾಸಕರು ಕಾಂಗ್ರೆಸ್ ಜೆಡಿಎಸ್ನಿಂದ ಬಿಜೆಪಿ ತೆಕ್ಕೆಗೆ ಜಾರಿ, ಮುಂಬೈ ಸೇರಿಕೊಂಡರು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂತು.

ಕಾಂಗ್ರೆಸ್ ನಿಂದ ದೂರ, ಬಿಜೆಪಿಗೆ ಹತ್ತಿರ

ಕಾಂಗ್ರೆಸ್ನಿಂದ ದೂರವಾರ ಬಳಿಕ ಅಂತರ ಕಾಯ್ದುಕೊಂಡ ಜೆಡಿಎಸ್ ಬಿಜೆಪಿಯ ಕಡೆಗೆ ಪರೋಕ್ಷವಾಗಿ ವಾಲಿತು. 2023ರ ವಿಧಾನ ಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಪಕ್ಷವೂ ಪ್ರಚಾರದ ನಡುವೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಪ್ರಚಾರ ಮಾಡಿತು. ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ಗೆ ಕಾಂಗ್ರೆಸ್ ಪ್ರಚಾರ ನಿದ್ರಾಭಂಗ ಮಾಡಿತು. ಒಂದು ವೇಳೆ ಅತಂತ್ರ ವಿಧಾನ ಸಭೆ ಸೃಷ್ಟಿಯಾದರೆ ಮತ್ತೆ ಬಿಜೆಪಿ – ಜೆಡಿಎಸ್ ದೋಸ್ತಿ ಮಾಡಬಹುದು ಎಂಬ ಕಾಂಗ್ರೆಸ್ ಪ್ರಚಾರ ಮತದಾರರ ಚಿತ್ತ ಬದಲಿಸಿತು. ಗ್ಯಾರಂಟಿಗಳ ಬಲವೂ ಸೇರಿಕೊಂಡು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಿತು.

ಒಂದಾಗುತ್ತಿರುವ ವಿಚ್ಛೇದಿತರು

ಈಗ ಮತ್ತೆ ಹಳೆ ದೋಸ್ತಿಗಳು ಒಂದಾಗುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ರಾಜಕಾರಣದಲ್ಲಿ ಯಾರಿಗೆ ಯಾರೂ ವಿರೋಧಿಗಳಲ್ಲ ಎಂಬ ಮಾತು ನಿಜವಾಗುತ್ತಿದೆ. ವಿರೋಧಪಕ್ಷದ ನಾಯಕನ ಆಯ್ಕೆಗೆ ಹೆಣಗಾಡುತ್ತಿರುವ ಪಕ್ಷ ಎಂದೇ ಮೂದಲಿಕೆಗೆ ಒಳಗಾಗಿದ್ದ ಬಿಜೆಪಿ, ಕುಮಾರಸ್ವಾಮಿಯವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಹೊರಟಿದೆ ಎಂಬ ಕೆಸರೆರಚಾಟಗಳು ಮುಗಿದು, ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಗೆ ಕೈಜೋಡಿಸುವ ಹಂತಕ್ಕೆ ಬಂದಿದ್ದಾರೆ. ಬಿಜೆಪಿಯ ವಿರುದ್ಧದ ಆರೋಪಗಳನ್ನೆಲ್ಲಾ ಮತ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್ ಮೂಲಕ ಮತದಾರರ ಮನಗೆದ್ದು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಅದನ್ನು ಎದುರಿಸಲು ಪ್ರಾದೇಶಿಕ ಪಕ್ಷ ಜೆಡಿಎಸ್, ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಅನಿವಾರ್ಯವೆನಿಸಿದೆ. ಆಪರೇಷನ್ ಕಮಲದ ಮಾದರಿಯಲ್ಲಿ ಬಿಜೆಪಿಯ ಶಾಸಕರಿಗೆ ಹಸ್ತ ಚಾಚಲು ಹೊರಟಿರುವ ಕಾಂಗ್ರೆಸ್ ನಡೆ ಸದ್ಯ ಕರ್ನಾಟಕ ರಾಜಕಾರಣವನ್ನು ಒಗಟಾಗಿಸಿದೆ. ಬಿಜೆಪಿಯ ʼಮುಂಬೈʼ ವೀರರಿಗೆ ಕೈ ಹಾಕಿದ್ದು, ಬಿಜೆಪಿ ನಿದ್ದೆಗೆಡಿಸಿದಂತೆ ಕಾಣುತ್ತಿದೆ. ಇಸ್ರೋ ಚಂದ್ರಯಾನ -3ರ ಯಶಸ್ಸಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಬಿಜೆಪಿ ನಾಯಕರನ್ನೆಲ್ಲಾ ಬ್ಯಾರಿಕೇಡ್ ಹೊರಗೆ ನಿಲ್ಲಿಸಿ ಟಾಟಾ ಹೇಳಿದ್ದು ನೋಡಿದರೆ, ಸೋತವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ ಎಂದು ಪರೋಕ್ಷವಾಗಿ ಹೇಳಿದಂತಿತ್ತು. ಈ ಎಲ್ಲಾ ಬೆಳವಣಿಗೆಯ ನಡುವೆ ಬಿಎಸ್ವೈ ಖಚಿತ ಪಡಿಸಿರುವ ಲೋಕಸಭೆ ಚುನಾವಣೆಯ ಮೈತ್ರಿ , ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಠಿಣ ಸವಾಲು ಎದುರಾಗಲಿದೆ ಎಂಬ ಸಂದೇಶವನ್ನೂ ರವಾನಿಸಿದೆ.

ಮೈತ್ರಿಯಿಂದ ಲಾಭ ಯಾರಿಗೆ?

ಒಂದು ವೇಳೆ ಅಂದುಕೊಂಡಂತೆ ಜೆಡಿಎಸ್ – ಬಿಜೆಪಿ ಮೈತ್ರಿ ನಡೆದರೆ ಒಂದಿಷ್ಟು ಹೊಸ ಮುಖಗಳಿಗೆ ಲೋಕಸಭೆ ಸೀಟು ಸಿಗುವ ಅವಕಾಶ ತೆರೆಯಲಿದೆ. ಸಾಂಪ್ರದಾಯಿಕ ಬಿಜೆಪಿ ಮತಗಳಿರುವ ಕಡೆ ಬಿಜೆಪಿಯ ಅಭ್ಯರ್ಥಿಗಳಿಗೆ ಮೈತ್ರಿಯ ಸೀಟು ಹಂಚಿಕೆಯಾಗಬಹುದು. ಕೆಲವು ಹಿರಿತಲೆಗಳು ಮೈತ್ರಿಯ ಆಘಾತಕ್ಕೂ ಒಳಗಾಗಬಹುದು. ಈ ಮೈತ್ರಿ ಒಂದರ್ಥದಲ್ಲಿ ಕಾಂಗ್ರೆಸ್ಗೆ ಲಾಭವೂ ಆಗಬಹುದು. ಭಾರತ್ ಜೋಡೋ ಯಾತ್ರೆ ಹಾಗು ವಿಧಾನ ಸಭಾ ಚುನಾವಣಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ಗೆ ಎದುರಾಳಿ ಯಾರು ಎಂಬ ಬಗ್ಗೆ ಸ್ಪಷ್ಟತೆ ಸಿಗಬಹುದು. ಮತದಾರರೂ ಸ್ಪಷ್ಟವಾಗಿ ಮತ ಚಲಾಯಿಸುವ, ಮತ ಒಡೆಯದಿರುವ ಅವಕಾಶವನ್ನೂ ಪಡೆಯಲಿದ್ದಾರೆ.

ಯಾರೆಷ್ಟು ಸೀಟು ಪಡೆದಿದ್ದರು?

2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 79, ಕಾಂಗ್ರೆಸ್ 65, ಜೆಡಿಎಸ್ 58 ಸೀಟು ಪಡೆದಿತ್ತು. 2008ರ ಚುನಾವಣೆಯಲ್ಲಿ ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡು 110 ಸೀಟು ಪಡೆಯಿತು. ಕಾಂಗ್ರೆಸ್ 80ಕ್ಕೆ ತೃಪ್ತಿ ಪಟ್ಟುಕೊಂಡರೆ, ಜೆಡಿಎಸ್ 30 ಸೀಟು ಕಳೆದುಕೊಂಡು 28ಕ್ಕಿಳಿಯಿತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಸೀಟು ಪಡೆದುಕೊಂಡು ಸ್ಪಷ್ಟ ಬಹುಮತ ಪಡೆಯಿತು. ಜೆಡಿಎಸ್ 28ರಿಂದ 40ಕ್ಕೇರಿತು. ಬಿಜೆಪಿ 110ರಿಂದ 40ಕ್ಕೆ ಕುಸಿದು ಹೀನಾಯ ಸೋಲನುಭವಿಸಿತು. 2018ರ ಚುನಾವಣೆಯಲ್ಲಿ ಬಿಜೆಪಿ 40ರಿಂದ 104ಕ್ಕೆ ಜಿಗಿಯಿತು. ಕಾಂಗ್ರೆಸ್ 122ರಿಂದ 80ಕ್ಕೆ ಕುಸಿಯಿತು. ಜೆಡಿಎಸ್ 40 ರಿಂದ 37ಕ್ಕೆ ಅಲ್ಪ ಕುಸಿತ ಕಂಡಿತು. 2023ರಲ್ಲಿ ಕಾಂಗ್ರೆಸ್ 135 ಸೀಟು ಪಡೆದು ಜಯಭೇರಿ ಭಾರಿಸಿತು. ಬಿಜೆಪಿ 104ರಿಂದ 66ಕ್ಕೆ ಇಳಿಯಿತು. ಜೆಡಿಎಸ್ 37ರಿಂದ 19ಕ್ಕೆ ಕುಸಿಯಿತು.

ಲೋಕಸಭಾ ಚುನಾವಣೆಯಲ್ಲಿ 2004ರಲ್ಲಿ ಕರ್ನಾಟದಲ್ಲಿ ಬಿಜೆಪಿ 18 ಸೀಟು ಪಡೆಯಿತು. ಕಾಂಗ್ರೆಸ್ 8, ಜೆಡಿಎಸ್ 2 ಸೀಟು ಪಡೆದವು. 2009ರಲ್ಲಿ ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 3 ಸ್ಥಾನ ಪಡೆದವು. 2014ರಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನ ಪಡೆದವು. 2019ರ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ತಲಾ ಒಂದು ಸ್ಥಾನ ಪಡೆದವು. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X