Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೋದಿ ಸರಕಾರದಲ್ಲಿ ನಡೆದ ಹಲವು...

ಮೋದಿ ಸರಕಾರದಲ್ಲಿ ನಡೆದ ಹಲವು ಭ್ರಷ್ಟಾಚಾರಗಳ ವರದಿ ನೀಡಿದ ಸಿಎಜಿ

► ಪ್ರತಿ ಕಿಮೀ ಎಕ್ಸ್ ಪ್ರೆಸ್ ವೇ ಗೆ 18 ಕೋಟಿ ರೂ. ಮಂಜೂರು, 250 ಕೋಟಿ ವೆಚ್ಚ ! ► ಆಯುಷ್ಮಾನ್ ಭಾರತ್ ನಲ್ಲಿ ಸತ್ತವರ ಹೆಸರಲ್ಲಿ ಕೋಟ್ಯಂತರ ದುಡ್ಡು ಗುಳುಂ ! ► ವರದಿ ನೀಡಿದ ಅಧಿಕಾರಿಗಳೇ ಎತ್ತಂಗಡಿ

ಆರ್. ಜೀವಿಆರ್. ಜೀವಿ16 Oct 2023 4:26 PM IST
share

ಮಾತಾಡಿದ್ರೆ "ನಾ ಖಾವೂಂಗಾ ನ ಖಾನೇ ದೂಂಗಾ​" ಅಂತ ಡೈಲಾಗ್ !. ಬಾಯಿ ತೆರೆದ್ರೆ " ಉಳಿದವರೆಲ್ಲರೂ ಭ್ರಷ್ಟಾತಿಭ್ರಷ್ಟರು, ನಾವು ಮಾತ್ರ ಪರಿಶುದ್ಧರು" ಅಂತ ಸ್ವಯಂ ಸರ್ಟಿಫಿಕೇಟ್. ಇನ್ನು ಇವರ ಬಾಡಿಗೆ ಭಾಷಣಕೋರರದ್ದಂತೂ ಹೇಳಿ ಪ್ರಯೋಜನವಿಲ್ಲ. ಮೋದೀಜಿ ಎಲ್ಲರ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ. ಯಾರಾದ್ರೂ ಭ್ರಷ್ಟಾಚಾರ ಮಾಡಿದ್ರೆ ಅವರನ್ನು ಸುಮ್ಮನೆ ಬಿಡೋಲ್ಲ ಅಂತ ಹೋದಲ್ಲೆಲ್ಲ ಪ್ರಚಾರವೋ ಪ್ರಚಾರ.

​ಹೀಗೇ ಡೈಲಾಗ್​ ಮೇಲೆ ಡೈಲಾಗ್ ಹೊಡೆದು ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳಿಂದ ಕೂತಿರುವವರ ಸರ್ಕಾರದಲ್ಲಿ ಭ್ರಷ್ಟಾಚಾರ ಬಯಲಿಗೆಳೆದವರಿಗೆ ಮಾತ್ರ ಸುಖವಿಲ್ಲ. ಭ್ರಷ್ಟಾಚಾರ​ ಸಂಪೂರ್ಣ ನಿರ್ಮೂಲನೆ ಮಾಡುತ್ತೇನೆ ಎಂದು ಬಂದವರು ಪರಮ ಭ್ರಷ್ಟರನ್ನೆಲ್ಲ ರಕ್ಷಿಸುತ್ತ,​ ಅವರಿಗೆ ಆಯಕಟ್ಟಿನ ಸ್ಥಾನ ಕೊಡುತ್ತಾ, ಭ್ರಷ್ಟಾಚಾರದ ಬಗ್ಗೆ ಎಚ್ಚರಿಸುವವರನ್ನು ಶಿಕ್ಷಿಸುತ್ತಿರುವುದು ವಿಚಿತ್ರ ಮಾತ್ರವಲ್ಲ, ಆಘಾತಕಾರಿಯಾಗಿದೆ.

ಕೇಂದ್ರ ಸರ್ಕಾರದ ಹಲವು​ ಮಹತ್ವದ ಯೋಜನೆಗಳಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ​ ಕಂಟ್ರೋಲರ್ ಎಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ ಅಂದ್ರೆ ಸಿಎಜಿ ವರದಿ ಬಯಲು ಮಾಡಿತ್ತು.​ ಸುಳ್ಳುಕೋರ ಸೂಲಿಬೆಲೆ ಮಾಡೋ ಭಾಷಣದ ಪ್ರಕಾರ ಪ್ರಧಾನಿ ಮೋದಿ ಮೂಗಿನಡಿಯಲ್ಲಿ ಅಂತಹದೊಂದು ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲ. ಎಲ್ಲಾದರೂ ಯಾರಾದರೂ ಅಂತಹ ಭಂಡ ಧೈರ್ಯ ಮಾಡಿದ್ರೂ ಅವರಿಗೆ ಮೋದಿ ಆಡಳಿತದಲ್ಲಿ ಉಳಿಗಾಲವಿಲ್ಲ.

ಆದರೆ ಇಲ್ಲಿ ಆಗಿರೋದೇ ಬೇರೆ. ​ಭ್ರಷ್ಟಾಚಾರ ನಡೆದಿದೆ ಅಂತ ವರದಿ ಕೊಟ್ಟವರನ್ನೇ ಈಗ ವರ್ಗಾಯಿಸಲಾಗಿದೆ. ಪ್ರಾಮಾಣಿಕರ ಮೇಲೆಯೇ ಮೋದಿ ಸರ್ಕಾರದ ಅಸ್ತ್ರ ಪ್ರಯೋಗವಾಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರದ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದರ ಬಗ್ಗೆ ವರದಿ ಎಚ್ಚರಿಸಿದರೆ, ಭ್ರಷ್ಟರನ್ನು ಶಿಕ್ಷಿಸುವ ಬದಲು ಆ ವರದಿ ಕೊಟ್ಟವರನ್ನು ಶಿಕ್ಷಿಸುತ್ತಿರುವುದು ಮೋದಿ ಸರ್ಕಾರ ​ಅದೆಷ್ಟು ಭ್ರಷ್ಟವಾಗಿದೆ ಎಂಬುದನ್ನೇ ಹೇಳುತ್ತಿದೆ.

ಸಿಎಜಿ ಅಧಿಕಾರಿಗಳ ವರ್ಗಾವಣೆ ವಿಚಾರ ಏನೆಂಬುದನ್ನು ಸ್ವಲ್ಪ ಗಮನಿಸೋಣ. ಸಿಎಜಿ ಕಳೆದ ತಿಂಗಳು ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿತು. ಅದರಲ್ಲಿ ಮೂವರು ಅಧಿಕಾರಿಗಳು, ಪ್ರಮುಖ 12 ಸಿಎಜಿ ವರದಿಗಳಲ್ಲಿ ಎರಡರ ಉಸ್ತುವಾರಿ ವಹಿಸಿದವರಾಗಿದ್ಧಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿನ ಭ್ರಷ್ಟಾಚಾರ ಬಯಲಿ​ಗೆಳೆದ 12 ಪ್ರಮುಖ ಲೆಕ್ಕಪರಿಶೋಧನಾ ವರದಿಗಳಲ್ಲಿ ಆ ಎರಡು ವರದಿಗಳು, ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ಕಾರಣವಾಗಿದ್ದವು.

ಕೇಂದ್ರ ಸರ್ಕಾರದ ಹಲವಾರು ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಬಹಿರಂಗಪಡಿಸಿದ ಈ ವರದಿಗಳು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡನೆಯಾದಾಗ ಕೋಲಾಹಲವೇ ಎದ್ದಿತ್ತು. ಆಗಸ್ಟ್ 11ರಂದು ಅಧಿವೇಶನ ಕೊನೆಗೊಂಡಿತು. ಅದಾಗಿ ಸರಿಯಾಗಿ ಒಂದು ತಿಂಗಳಿಗೆ, ಸೆಪ್ಟೆಂಬರ್ 12ರಂದು ಸಿಎಜಿ ಅಧಿಕಾರಿಗಳ ವರ್ಗಾವಣೆ ಆಗಿದೆ. ಅದರೊಂದಿಗೆ, ಸಿಎಜಿ ವರದಿ ಹೇಳಿದ್ದ ಸತ್ಯಕ್ಕೆ, ​"ನಾನೂ ತಿನ್ನುವುದಿಲ್ಲ, ಬೇರೆಯವರನ್ನೂ ತಿನ್ನಲು ಬಿಡುವುದಿಲ್ಲ​" ಎಂ​ದು ಭಾಷಣ ಬಿಗಿಯುವವರ ರಿಯಾಕ್ಷನ್ ಎಷ್ಟು ಭಯಾನಕ ಎಂಬುದು ಗೊತ್ತಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು ದ್ವಾರಕಾ ಎಕ್ಸ್ಪ್ರೆಸ್ ವೇ ಯೋಜನೆ ಮತ್ತು ಆಯುಷ್ಮಾನ್ ಭಾರತ್‌ ಯೋಜನೆಗಳಲ್ಲಿನ​ ಭಾರೀ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಲೆಕ್ಕಪರಿಶೋಧನಾ ವರದಿಗಳ ತಯಾರಿಕೆಯಲ್ಲಿ ಪಾತ್ರ ವಹಿಸಿದ್ದರು. ಭಾರತ್ ಮಾಲಾ ಪರಿಯೋಜನಾ ಹಂತ-1ರಲ್ಲಿ​ ದಿಲ್ಲಿಯ ದ್ವಾರಕಾ ಎಕ್ಸ್ಪ್ರೆಸ್ ವೇ ನಿರ್ಮಾಣವಾಗಿತ್ತು.

ದ್ವಾರಕಾ ಎಕ್ಸ್ಪ್ರೆಸ್ ವೇ ನಿರ್ಮಾಣ ವೆಚ್ಚ 2017ರಲ್ಲಿ ಸರ್ಕಾರ ಮಂಜೂರು ಮಾಡಿದ್ದ ಮೊತ್ತದ 14 ಪಟ್ಟು ಹೆಚ್ಚಾಗಿರುವುದನ್ನು ಸಿಎಜಿ ವರದಿ ಬಯಲು ಮಾಡಿತ್ತು. ಅದರ ನಿರ್ಮಾಣಕ್ಕೆ ​ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದಿಸಿದ್ದ ವೆಚ್ಚ ಪ್ರತಿ ಕಿಮೀ ಗೆ ​18.20 ಕೋಟಿ ರೂ.

ಆದರೆ ಬಳಿಕ ಮಾಡಲಾದ ವೆಚ್ಚ ​250.77 ಕೋಟಿ ರೂ. ​ಎಲ್ಲಿಯ 18 ಕೋಟಿ ? ಎಲ್ಲಿಯ 250 ಕೋಟಿ ?. ದಿಲ್ಲಿ ವಡೋದರಾ ಎಕ್ಸ್ ಪ್ರೆಸ್ ವೇ ಗೆ 32,839 ಕೋಟಿ ರೂ. ಹೆಚ್ಚುವರಿ ವೆಚ್ಚ ತೋರಿಸಿದ್ದನ್ನು ಸಿಎಜಿ ವರದಿ ಬಹಿರಂಗಪಡಿಸಿತ್ತು.

ಇನ್ನು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸತ್ತವರ ಹೆಸರಿನಲ್ಲಿಯೂ ದುಡ್ಡು ಹೊಡೆಯಲಾಗಿತ್ತು. ಸಿಎಜಿ ವರದಿ ಕಂಡುಕೊಂಡಂತೆ, ವಿಮೆ ಸೆಟ್ಲ್ಮೆಂಟ್ ಕ್ಲೈಮ್ಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿತ್ತು. 2 ಲಕ್ಷ 25 ಸಾವಿರ ಪ್ರಕರಣಗಳಲ್ಲಿ, ಸರ್ಜರಿ ನಡೆದ ದಿನಾಂಕ ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕಕ್ಕಿಂತ ನಂತರದ್ದಾಗಿದ್ದುದು ಗಮನಕ್ಕೆ ಬಂದಿತ್ತು. 300 ಕೋಟಿ ರೂ. ಕ್ಲೈಮ್ ಮಾಡಲಾದ ಇಂಥ 1 ಲಕ್ಷ 79 ಸಾವಿರಕ್ಕೂ ಹೆಚ್ಚು ಕೇಸ್ಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿದ್ದವು.

ಡೇಟಾಬೇಸ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ತೋರಿಸಲಾಗಿದ್ದವರ ಹೆಸರಿನಲ್ಲಿಯೂ ಲಕ್ಷಾಂತರ ರೂ. ವಿಮೆ ಕ್ಲೈಮ್ ಮಾಡಲಾಗಿದ್ದುದನ್ನು ವರದಿ ತೋರಿಸಿತ್ತು. ​ಸಿಎಜಿ ಇನ್ನೂ ಹತ್ತು ವರದಿಗಳಲ್ಲಿ ಮೋದಿ ಸರಕಾರದ ವಿವಿಧ ಸಚಿವಾಲಯಗಳಲ್ಲಿ ನಡೆದಿರುವ ಅಕ್ರಮವನ್ನು ಬಯಲಿಗೆಳೆದಿದೆ. ಐದು ದಕ್ಷಿಣದ ರಾಜ್ಯಗಳ 41 ಟೋಲ್ ಪ್ಲಾಜಾಗಳ ಪೈಕಿ ಐದರಲ್ಲಿ 132.05 ಕೋಟಿ ರೂಪಾಯಿಗಳನ್ನು ಪ್ರಯಾಣಿಕರಿಂದ ಟೋಲ್ ಪ್ಲಾಜಾ ನಿಯಮಗಳ ವಿರುದ್ಧ ವಸೂಲಿ ಮಾಡಿದ್ದನ್ನು ಒಂದು ವರದಿ ಹೇಳಿತ್ತು.

2021-22 ರಲ್ಲಿ ರೈಲ್ವೆ ಸಚಿವಾಲಯ 1,937 ಪ್ರಕರಣಗಳಲ್ಲಿ ಮಂಜೂರಾಗದ 23,885.47 ಕೋಟಿ ರೂಪಾಯಿ ವೆಚ್ಚ ಮಾಡಿದೆ. 2020-21 ರಲ್ಲಿ ರೈಲ್ವೆ ಸಚಿವಾಲಯ ಇದೇ ರೀತಿ 8,127.97 ಕೋಟಿ ರೂಪಾಯಿ ಖರ್ಚು ಮಾಡಿದೆ. ನಾಗರೀಕ ವಿಮಾನ ಯಾನ ಸಚಿವಾಲಯ, ಎಂ ಎಸ್ ಎಂ ಇ ಸಚಿವಾಲಯ ಸಹಿತ ವಿವಿಧ ಸಚಿವಾಲಯಗಳು ಹಾಗು ಸರಕಾರಿ ಸಂಸ್ಥೆಗಳಲ್ಲಿ ನಡೆದಿರುವ ಭಾರೀ ಅಕ್ರಮವನ್ನು ಸಿಎಜಿ ವರದಿಗಳು ಹೇಳಿವೆ.

ಯುಪಿಎ ಸರ್ಕಾರದ ಪತನಕ್ಕೆ ದೊಡ್ಡ ಕೊಡುಗೆ ನೀಡಿದ್ದೇ ಈ ಸಿಎಜಿ ವರದಿಗಳು. 2ಜಿ ತರಂಗ ವಿತರಣೆ ಹಾಗು ಕಲ್ಲಿದ್ದಲು ಹಗರಣ ನಡೆದಿದೆ ಎಂದು ಅಂದಿನ ಸಿಎಜಿ ಕೊಟ್ಟಿದ್ದ ವರದಿಯನ್ನೇ ಬಿಜೆಪಿ ದೇಶಾದ್ಯಂತ ಪ್ರಚಾರ ಮಾಡಿತು. ಯುಪಿಎ ಭಾರೀ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿತು.

ಈಗ ಮೋದಿ ಸರಕಾರದ ಕಡುಭ್ರಷ್ಟತೆಯ ಬಗ್ಗೆ ಬಯಲು ಮಾಡಿದ ​ ದಕ್ಷ ಅಧಿಕಾರಿಗಳಿಗೆ​ ಮೋದಿ ಸರಕಾರ ಪುರಸ್ಕಾರ ನೀಡಬೇಕಿತ್ತು. ಆದರೆ ಅವರಿಗೆ ಈಗ ವರ್ಗಾವಣೆ ಶಿಕ್ಷೆಯಾಗಿದೆ. ಇದರ ಬಗ್ಗೆ ಇಂಡಿಯಾ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭ್ರಷ್ಟಾಚಾರ ಬಯಲಿಗೆಳೆದಿರುವ ಸಿಎಜಿ ಅಧಿಕಾರಿಗಳನ್ನು ಸರ್ಕಾರ ಬೆದರಿಸುತ್ತಿದೆ ಮತ್ತು ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆದ ಕಾರಣಕ್ಕಾಗಿಯೇ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಅಧಿಕಾರಿಗಳ ವರ್ಗಾವಣೆ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿದೆ.

ಅಧಿಕಾರಿಗಳ ವರ್ಗಾವಣೆ ಕುರಿತು ಎಕ್ಸ್ನಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಯಾರಾದರೂ ಅವ್ಯವಹಾರ ಬಯಲು ಮಾಡಿದರೆ ಅವರನ್ನು ಬೆದರಿಸಲಾಗುತ್ತಿದೆ ಮತ್ತು ಅವರನ್ನು ತೆಗೆದುಹಾಕಲಾಗುತ್ತದೆ. ಇದು ಮೋದಿ ಸರ್ಕಾರದ ರೀತಿಯಾಗಿದೆ ಎಂದು ಆರೋಪಿಸಿದ್ದಾರೆ.

ಮೋದಿ ಸರ್ಕಾರ ಮಾಫಿಯಾ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರಿ ಯೋಜನೆಗಳಲ್ಲಿನ ದೊಡ್ಡ ಹಗರಣಗಳನ್ನು ಬಹಿರಂಗಪಡಿಸಿದ ಮೂವರು ಅಧಿಕಾರಿಗಳು ಇತ್ತೀಚಿನ ಬಲಿಪಶುಗಳು ಎಂದು ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ. ಸಿಎಜಿ ವರದಿ ಮೂಲಸೌಕರ್ಯ ಯೋಜನೆ ಮತ್ತು ಸಾಮಾಜಿಕ ಯೋಜನೆಗಳಲ್ಲಿ ಹಗರಣಗಳನ್ನು ಬಯಲುಗೊಳಿಸಿದೆ. ಇದು ದ್ವಾರಕಾ ಎಕ್ಸ್ಪ್ರೆಸ್‌ ವೇಯಲ್ಲಿ ಟೆಂಡರ್ ಅಕ್ರಮಗಳನ್ನು ಬಯಲಿಗೆಳೆದಿದೆ. ದೋಷಪೂರಿತ ಬಿಡ್ಡಿಂಗ್‌ಗಳು ಮತ್ತು ಭಾರತ್ ಮಾಲಾ ಯೋಜನೆಯ ವೆಚ್ಚ ಅಧಿಕವಾದುದನ್ನು ಬಯಲುಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯ ಆಡಿಟ್ ವರದಿ, ಸತ್ತ ರೋಗಿಗಳ ಹೆಸರಿನಲ್ಲಿ ಲಕ್ಷಾಂತರ ಹಣ ಬಿಡುಗಡೆಯಾಗಿರುವುದನ್ನು ತೋರಿಸಿದೆ ಮತ್ತು ಕನಿಷ್ಠ 7.5 ಲಕ್ಷ ಫಲಾನುಭವಿಗಳು ಒಂದೇ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿದ್ದರು ಎಂಬುದನ್ನು ವರದಿ ಬಹಿರಂಗಪಡಿಸಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಸಿಎಜಿ ವರದಿ ಬಗ್ಗೆ ಮೋದಿ ಸರ್ಕಾರದ ಮೌನದ ಬಗ್ಗೆಯೂ ಈ ಹಿಂದೆ ಕಾಂಗ್ರೆಸ್ ಪ್ರಶ್ನಿಸಿತ್ತು.

ಭಾರತ್ ಮಾಲಾ ಯೋಜನೆ​ಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿಚಾರವಾಗಿ ಇನ್ನಾದರೂ ಮೌನ ಮುರಿಯುವಿರಾ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀ​ನೇತ್ ಮೋದಿಯವರನ್ನು ಪ್ರಶ್ನಿಸಿದ್ದರು.

ಎಕ್ಸ್ಪ್ರೆಸ್ ವೇ ನಿರ್ಮಾಣ ವೆಚ್ಚ 14 ಪಟ್ಟು ಹೆಚ್ಚಿಸಲಾಗಿದೆ. ಈ ವೆಚ್ಚದಲ್ಲಿ ಮಂಗಳಯಾನವನ್ನೇ ನಡೆಸಬಹುದಿ​ತ್ತು ಎಂದು ವ್ಯಂಗ್ಯವಾಡಿದ್ದರು.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಗರಣಗಳ ತನಿಖೆಗೆ ಆದೇ​ಶಿಸುವಂತೆ ಒತ್ತಾಯಿಸಿದ್ದರು. ಸಿಎಜಿ ವರದಿ ಅಕ್ರಮ ಬಯಲಿಗೆಳೆದಿದ್ದರೂ ಈ ಬಗೆಗಿನ ನಿಮ್ಮ ಮೌನವನ್ನು ಅಕ್ರಮದಲ್ಲಿ ಶಾಮೀಲಾಗಿದ್ದೀರಿ ಎಂದು ವ್ಯಾಖ್ಯಾನಿಸಬಹುದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಆದರೆ, ಮೋದಿ ಸರ್ಕಾರ ಮಾತ್ರ ವರದಿ ಬಯಲಿಗೆಳೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದರ ಬದಲು, ವರದಿ ಕೊಟ್ಟವರನ್ನೇ ​ಎತ್ತಂಗಡಿ ಮಾಡಿದೆ.

ನ್ಯೂಯಾರ್ಕ್ ಟೈಮ್ಸ್ನ ವರದಿಯೊಂದ​ರ ಕೆಲವು ಸಾಲುಗಳನ್ನು ನೆಪವಾಗಿ ಇಟ್ಟುಕೊಂಡು ನ್ಯೂಸ್ ಕ್ಲಿಕ್ ಮೇಲೆ ದಾಳಿ ಮಾಡುವವರು ತಮ್ಮದೇ ಸರ್ಕಾರದಲ್ಲಿನ​ ಭಾರೀ ಭ್ರಷ್ಟಾಚಾರದ ಬಗ್ಗೆ ಸಿಎಜಿ ವರದಿ ಕೊಟ್ಟರೆ ಯಾಕೆ ಅದನ್ನು ಗಂಭೀರವಾಗಿ ಪರಿಗಣಿಸಿ, ಭ್ರಷ್ಟರನ್ನು ಶಿಕ್ಷಿಸುತ್ತಿಲ್ಲ?. ​"ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ​" ಎಂಬ ಮೋದಿ ಮಾತನ್ನು ಭ್ರಷ್ಟಾಚಾರದ ವಿಚಾರದಲ್ಲಿ ​" ನಾನೂ ಹೇಳುವುದಿಲ್ಲ, ಹೇಳುವುದಕ್ಕೂ ಬಿಡುವುದಿಲ್ಲ​" ಎಂದು ಬದಲಿಸಿ ಅರ್ಥ ಮಾಡಿಕೊಳ್ಳಬೇಕಾಗಿದೆಯೆ ಎಂಬ ಅನುಮಾನ ಮೂಡುತ್ತದೆ.

share
ಆರ್. ಜೀವಿ
ಆರ್. ಜೀವಿ
Next Story
X