Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾವೇರಿ ವಿವಾದ : ಕೇಂದ್ರ ಸಚಿವೆ ಶೋಭಾ...

ಕಾವೇರಿ ವಿವಾದ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಂಡ ಹೇಳಿಕೆ

ಆರ್. ಜೀವಿಆರ್. ಜೀವಿ13 Oct 2023 3:05 PM IST
share
ಕಾವೇರಿ ವಿವಾದ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಂಡ ಹೇಳಿಕೆ
► ಉಕ್ರೇನ್ ಯುದ್ಧ ನಿಲ್ಲಿಸಬಲ್ಲವರಿಗೆ ಕಾವೇರಿ ವಿವಾದ ಬಗೆಹರಿಸಲು ಆಗಲ್ವ ? ► 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಇದೇನಾ ಮೋದಿ ಉಡುಗೊರೆ ?

"ಮೋದಿ ಕೇವಲ ತಮಿಳುನಾಡು, ಕರ್ನಾಟಕಕ್ಕೆ ಪ್ರಧಾನಿ ಅಲ್ಲ, ಬೇರೆ ರಾಜ್ಯಗಳ ಜಲ ವಿವಾದ ಕೂಡ ಪ್ರಧಾನಿಗಳು ಬಗೆಹರಿಸಬೇಕಿದೆʼʼ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ಧಾರೆ. ಅವರ ಮಾತಿನ ಧಾಟಿ ಹಾಗು ಇಲ್ಲಿ ಮೋದೀಜಿ ಬಗ್ಗೆ ಬಿಜೆಪಿ ಪಡೆ ಮಾಡೋ ಪ್ರಚಾರ ನೋಡಿದರೆ ಇದು ಪ್ರಧಾನಿ ಮೋದಿಗೆ ಅವರು ಮಾಡಿರುವ ದೊಡ್ಡ ಅವಮಾನ.

ಬಿಜೆಪಿಯವರ ಪ್ರಕಾರ, ಅವರ ಮಡಿಲ ಮಾಧ್ಯಮಗಳ ಪ್ರಕಾರ ಪ್ರಧಾನಿ ಮೋದಿ ಅಂದರೆ ವಿಶ್ವಗುರು. ವಿಶ್ವಮಿತ್ರ. ಭಾರತ ಬಿಡಿ, ಇಡೀ ಜಗತ್ತಿನಲ್ಲೇ ಈಗ ಮೋದೀಜಿ ಅವರದ್ದೇ ಹವಾ. ಅಮೇರಿಕ, ಚೀನಾ, ರಷ್ಯಾ ಸಹಿತ ಜಗತ್ತಿನ ಅತ್ಯಂತ ಪವರ್ ಫುಲ್ ದೇಶಗಳಿರುವ ಇಡೀ ಜಿ20 ಶೃಂಗಸಭೆ ಈ ಬಾರಿ ಯಶಸ್ಸಾಗಿದ್ದೇ ಮೋದಿ ಅವರಿಂದಾಗಿ. ಮೋದಿ ಅವರ ಜೊತೆ ಒಂದು ಫೋಟೋಗಾಗಿ ಜೋ ಬೈಡನ್, ಪುಟಿನ್ ರಂತಹ ಜಾಗತಿಕ ನಾಯಕರು ಸರದಿ ಸಾಲಲ್ಲಿ ಬಂದು ನಿಲ್ತಾರೆ. ಅಂತರ್ ರಾಷ್ಟ್ರೀಯ ಶೃಂಗ ಸಭೆಗಳಲ್ಲಿ ಮೋದಿನೇ ಬಾಸ್ ಅಂತ ಬಣ್ಣಿಸ್ತವೆ ಮಡಿಲ ಮಾಧ್ಯಮಗಳು.

ಎಲ್ಲೀವರೆಗೆಂದರೆ ರಷ್ಯಾ - ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಿ ಎಂದು ಮೋದೀಜಿಗೆ ವಿದೇಶಿ ನಾಯಕರು ದುಂಬಾಲು ಬಿದ್ದಿದ್ದಾರೆ. ಮೋದೀಜಿ ಆ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದೇ ವ್ಯಾಪಕ ಪ್ರಚಾರ ನಡೆದಿತ್ತು.

ಅಷ್ಟೇ ಏಕೆ ? ಬಿಜೆಪಿ ಹಾಗು ಸಂಘ ಪರಿವಾರದ ಸೋಷಿಯಲ್ ಮೀಡಿಯಾ ವೀರರ ಪ್ರಕಾರ ಭಾರತಕ್ಕೆ ಅಂತರ್ ರಾಷ್ಟ್ರೀಯ ವೇದಿಕೆಗಳಲ್ಲಿ, ವಿದೇಶಗಳಲ್ಲಿ ಗೌರವ ಬಂದಿದ್ದೇ ಮೋದೀಜಿ ಅವರು ಪ್ರಧಾನಿ ಆದ ಬಳಿಕ. ಅದಕ್ಕೆ ಮೊದಲು ವಿದೇಶಗಳಲ್ಲಿ ಭಾರತಕ್ಕೆ ಯಾವುದೇ ಮರ್ಯಾದೆನೇ ಇರಲಿಲ್ವಂತೆ. ಮೋದೀಜಿ ಬಂದ ಮೇಲೆ ವಿದೇಶಗಳಲ್ಲಿ ಭಾರತ ಅಂದ್ರೆ ಏನು ಅಂತ ಗೊತ್ತಾಯ್ತು, ಅವರು ಹೋದ ಕೂಡಲೇ ವಿದೇಶಿ ನಾಯಕರು ಎದ್ದು ಕೈಕುಲುಕುತ್ತಾರೆ, ಅವರನ್ನು ಹಿಡಿದು ಆಲಂಗಿಸ್ತಾರೆ, ಅವರಲ್ಲಿ ಅತ್ಯಂತ ಆಪ್ತವಾಗಿ ಮಾತಾಡ್ತಾರೆ, ಅವರನ್ನು ಇನ್ನಿಲ್ಲದಂತೆ ಪ್ರಶಂಸಿಸ್ತಾರೆ ಇತ್ಯಾದಿ ಇತ್ಯಾದಿ ಇತ್ಯಾದಿ.

ಬಿಜೆಪಿ ಪ್ರಕಾರವೇ ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಇಷ್ಟೊಂದು ಪವರ್ ಫುಲ್ ಆಗಿರುವ ಮೋದೀಜಿ ಮನಸ್ಸು ಮಾಡಿದ್ರೆ, ಅವರಿಗೆ ತಮಿಳು ನಾಡು ಹಾಗು ಕರ್ನಾಟಕ ನಡುವಿನ ಕಾವೇರಿ ನೀರಿನ ವಿವಾದ ಪರಿಹರಿಸಲು ಎಷ್ಟು ಹೊತ್ತು ಬೇಕು ?.

ಜೋ ಬೈಡನ್ ಜೊತೆ, ಪುಟಿನ್ ಜೊತೆ, ಅರಬ್ ದೊರೆಗಳ ಜೊತೆ ಆಗಾಗ ಭೇಟಿಯಾಗುವ, ಮಾತಾಡುವ ಮೋದಿಜೀಗೆ, ಜಾಗತಿಕ ನಾಯಕರನ್ನೇ ಕರೆದು ಮಾತಾಡಿ ಜಗತ್ತಿನ ಅತ್ಯಂತ ಕ್ಲಿಷ್ಟ ರಾಜತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಮೋದಿಜೀಗೆ ಒಮ್ಮೆ ಸಿದ್ದರಾಮಯ್ಯ ಹಾಗು ಸ್ಟಾಲಿನ್ ರನ್ನು ಕರೆಸಿ ಕೂತು ಮಾತಾಡಲು ಆಗೋದಿಲ್ವ ?. ಅಥವಾ ಅವರಿಗೆ ಆ ರೀತಿ ಕರೆದು ಮಾತಾಡಿ ಆ ಸಮಸ್ಯೆ ಬಗೆಹರಿಸೋದು ಇಷ್ಟ ಇಲ್ವಾ ?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬೆನ್ನಿಗೇ ರಾಜ್ಯ ಸರಕಾರಕ್ಕೆ ಅಕ್ಕಿ ಮಾರಾಟ ಮಾಡದಂತೆ ಮೋದಿ ಸರಕಾರ ನಿರ್ಬಂಧ ವಿಧಿಸಿತು. ಖಾಸಗಿಯವರಿಗೆ ಬೇಕಾದರೂ ಮಾರಿ ಆದರೆ ರಾಜ್ಯ ಸರಕಾರಗಳಿಗೆ ಕೊಡಬೇಡಿ ಎಂದಿತು. ಬಡವರ ತಟ್ಟೆಗೆ ಅನ್ನ ಹಾಕುವ ಯೋಜನೆಗೆ ಈ ಮೂಲಕ ಕಲ್ಲು ಹಾಕಲಾಯಿತು. ಆಗಲೂ ಶೋಭಾ ಕರಂದ್ಲಾಜೆ ಹಾಗು ರಾಜ್ಯದ ಇತರ ಬಿಜೆಪಿ ಸಂಸದರು, ಕೇಂದ್ರ ಸಚಿವರು ರಾಜ್ಯದ ಪರ ವಹಿಸಿ ಮಾತಾಡಲಿಲ್ಲ. ಮೋದೀಜಿನೇ ಸರಿ ಅಂತ ವಾದಿಸಿದ್ರು. ರಾಜ್ಯದ ಜನರಿಗೆ ಅಕ್ಕಿ ಸಿಗದೇ ಇರುವಂತೆ ನೋಡಿಕೊಂಡರು. ಶೋಭಾ ಕರಾಂದ್ಲಜೆಯವರು ಹೇಳಿದ ಹಾಗೆ ಮೋದಿಜಿ ಕೇವಲ ಕರ್ನಾಟಕ ಹಾಗು ತಮಿಳು ನಾಡುಗಳಿಗೆ ಪ್ರಧಾನಿಯಲ್ಲ. ಸರಿ. ಆದರೆ ಕರ್ನಾಟಕ ಹಾಗು ತಮಿಳು ನಾಡಿಗೂ ಮೋದೀಜಿ ಅವರೇ ಪ್ರಧಾನಿ ಅಲ್ವಾ ? ಅದನ್ನು ಶೋಭಾ ಕರಂದ್ಲಾಜೆ ಅವರು ಮರೆತು ಬಿಟ್ರಾ ?

ಮೋದೀಜಿ ಇವತ್ತು ಪ್ರಧಾನಿಯಾಗಿ ಬೈಡನ್, ಪುಟಿನ್, ಝೀ ಜಿನ್ ಪಿಂಗ್ ಮುಂತಾದವರನ್ನು ಭೇಟಿಯಾಗಲು ಅಮೆರಿಕಕ್ಕೆ, ಚೀನಾಕ್ಕೆ, ರಷ್ಯಾಕ್ಕೆ ಹೋಗುವಲ್ಲಿ ಕರ್ನಾಟಕದ, ಕನ್ನಡಿಗರ ಬಹುದೊಡ್ಡ ಪಾತ್ರವಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಅಧಿಕಾರದಲ್ಲಿದ್ದರೂ ಆ ಎರಡೂ ಪಕ್ಷಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಕನ್ನಡಿಗರು 28 ರಲ್ಲಿ 25 ಕಡೆ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.

ಇವತ್ತು ಮೋದೀಜಿ ಪ್ರಧಾನಿ ಪಟ್ಟದಲ್ಲಿ ವಿರಾಜಮಾನರಾಗಿ, ಶೋಭಾ ಕರಂದ್ಲಾಜೆ ಅವರು ಅವರ ಸರಕಾರದಲ್ಲಿ ಸಚಿವೆಯಾಗಿ, ಮೋದೀಜಿ ವಿಶ್ವಗುರು ಅಂತ ಪ್ರಚಾರ ಪಡೀತಾ ಇದ್ದಾರೆ ಅಂದ್ರೆ ಅದಕ್ಕೆ ದೊಡ್ಡ ಕೊಡುಗೆ ನೀಡಿದವರು ಕನ್ನಡಿಗರು ಹಾಗು ಅವರು ಗೆಲ್ಲಿಸಿ ಕಳಿಸಿದ 25 ಸಂಸದರು. ಇದನ್ನು ಶೋಭಾ ಕರಂದ್ಲಾಜೆ ಮರೆತು ಬಿಟ್ರಾ ?.

ನಾಡು ನುಡಿ ನೆಲ ಜಲದ ವಿಚಾರ ಬಂದಾಗ ಸಚಿವರು, ಸಂಸದರು, ಶಾಸಕರು ಕ್ಷಣಮಾತ್ರವೂ ತಡಮಾಡದೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಬಿಸಾಡಿ ಹೋಗಿ ಹೋರಾಟಗಾರರೊಂದಿಗೆ ಸೇರಿಕೊಳ್ಳುವ ಕಾಲವೊಂದಿತ್ತು. ಈಗ ಆ ಕಾಲ ಹೋಗಿದೆ. ಈಗ ಅದೇ ಕನ್ನಡಿಗರ ಓಟಿನಿಂದ ಗೆದ್ದು ಸಂಸದರಾಗಿ, ಸಚಿವರಾಗಿ ಮೆರೆಯುತ್ತಿರುವವರು " ನಮಗೇನು ಇದೇ ಎರಡು ರಾಜ್ಯ ಇರೋದಲ್ಲ, ಬೇರೆ ರಾಜ್ಯಗಳನ್ನೂ ನೋಡ್ಬೇಕು" ಅಂತ ತಮ್ಮನ್ನು ಗೆಲ್ಲಿಸಿ ಕಳಿಸಿದ ಜನರೆದುರೇ ಭಂಡತನ ತೋರಿಸೋ ಕಾಲವಿದು.

ಯಾಕಂದ್ರೆ ಈ ಭಂಡ ರಾಜಕಾರಣಿಗಳಿಗೆ ನಮ್ ಜನರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ನಾವು ಏನೇ ಹೇಳಿದ್ರೂ ಜನ ನಂಬ್ತಾರೆ, ನಾವು ಆಗಾಗ ಹಿಂದೂ, ಮುಸ್ಲಿಂ, ಪಾಕಿಸ್ತಾನ, ಜಿಹಾದ್, ಇಟಲಿ, ಅಂತ ಹೇಳ್ತಾ ಇದ್ರೆ ಸಾಕು. ಜನರ ಬೇರೇನೂ ಕೆಲಸ ನಾವು ಮಾಡದಿದ್ದರೂ ಜನ ನಮ್ಮನ್ನು ಕೇಳೋದಿಲ್ಲ, ಚುನಾವಣೆ ಬಂದಾಗ ಮತ್ತೆ ನಮಗೇ ಓಟು ಹಾಕ್ತಾರೆ ಎಂಬ ಅತಿ ಆತ್ಮ ವಿಶ್ವಾಸ ಇವರಿಂದ ಈ ಮಾತಾಡಿಸುತ್ತಿದೆ.

ಬಿಜೆಪಿ ಹೇಳಿದಂತೆ ಕಾಂಗ್ರೆಸ್ ಸರಕಾರ ಕಾವೇರಿ ವಿಚಾರದಲ್ಲಿ ವಿಫಲವಾಗಿದೆ ಎಂದೇ ಇಟ್ಟುಕೊಳ್ಳೋಣ. ಈಗ ಕರ್ನಾಟಕದ 25 ಬಿಜೆಪಿ ಸಂಸದರು ಒಟ್ಟಾಗಿ ಉಳಿದ ಮೂರು ಸಂಸದರನ್ನೂ ಕರೆದುಕೊಂಡು ಒಟ್ಟು 28 ಸಂಸದರು ಹೋಗಿ ಪ್ರಧಾನಿ ಮೋದಿ ಎದುರು ಕೂತು " ಮಾನ್ಯ ಪ್ರಧಾನಿಗಳೇ, ನಮ್ಮ ರಾಜ್ಯದಿಂದ ಇನ್ನು ಕಾವೇರಿ ನೀರು ಬಿಟ್ಟರೆ ನಮ್ಮ ರಾಜ್ಯದ ಜನರು ಕುಡಿಯುವ ನೀರಿಗೂ ತತ್ವಾರ ಎದುರಿಸಬೇಕಾಗುತ್ತೆ. ನಮಗೇ ನೀರಿನ ಕೊರತೆ ಇರುವಾಗ ಅವರಿಗೆ ನೀರು ಬಿಡಿ ಅಂತ ಹೇಳೋದು ಅನ್ಯಾಯ. ನೀವು ಕೂಡ್ಲೇ ಸ್ಟಾಲಿನ್ ಅವರನ್ನು ಕರೆದು ಮಾತಾಡಿ. ಈ ಸಮಸ್ಯೆ ಬಗೆಹರಿಸಿ ಕೊಡಿ " ಎಂದು ವಿನಂತಿಸಿದರೆ ಪ್ರಧಾನಿ ಆ ವಿನಂತಿಯನ್ನು ತಿರಸ್ಕರಿಸುತ್ತಾರಾ ? " ಇಲ್ಲ, ಇಲ್ಲ. ಅದೆಲ್ಲ ಆಗೋದಿಲ್ಲ " ಅಂತ ಎಂದಾದರೂ ಹೇಳ್ತಾರಾ ಪ್ರಧಾನಿ ಮೋದಿ.

ಯಾಕೆ ರಾಜ್ಯದ 25 ಬಿಜೆಪಿ ಸಂಸದರು ಅದನ್ನು ಮಾಡುತ್ತಿಲ್ಲ. ಅವರಿಗೆ ಇದನ್ನು ಮಾಡಲು ಮನಸ್ಸಿಲ್ಲವೇ ? ಅಥವಾ ಮೋದೀಜಿ ಎದುರು ಹೋಗಿ ಇಷ್ಟನ್ನು ಹೇಳಲೂ ಅವರಿಗೆ ಧೈರ್ಯವಿಲ್ಲವೇ ?. ಹೋಗಲಿ, ಶೋಭಾ ಕರಂದ್ಲಾಜೆ ಹೇಳಿದ ಹಾಗೆ ಮೋದೀಜಿ ಕರ್ನಾಟಕ ತಮಿಳುನಾಡಿಗೆ ಮಾತ್ರ ಪ್ರಧಾನಿಯಲ್ಲ.

ಆದರೆ ಅವರು ಪ್ರಧಾನಿಯಾಗಿ ಬೇರೆ ಯಾವ ರಾಜ್ಯಕ್ಕೆ ನ್ಯಾಯ ಒದಗಿಸಿದ್ದಾರೆ ? ಮಣಿಪುರ ಈ ದೇಶದ ರಾಜ್ಯ ಅಲ್ವಾ ? ಅಲ್ಲಿ ನಾಲ್ಕು ತಿಂಗಳಿಂದ ಹಿಂಸಾಚಾರ ನಡೀತಾ ಇದೆ. ಅದನ್ನಾದರೂ ಮೋದೀಜಿ ನಿಲ್ಲಿಸಿದ್ರಾ ? ಅಲ್ಲಿಗೆ ಒಮ್ಮೆಯಾದ್ರೂ ಭೇಟಿ ಕೊಟ್ರಾ ? ಕೇವಲ ಒಮ್ಮೆ ಅಲ್ಲಿಗೆ ಹೋಗಿ ಅಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ದಿನ ದೂಡುತ್ತಿರುವವರನ್ನು, ತಮ್ಮವರನ್ನು ಕಳಕೊಂಡು ದುಃಖಿಸುತ್ತಿರುವವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ರಾ ?.

ಇಬ್ಬರು ಮಹಿಳೆಯರನ್ನು ಸಂಪೂರ್ಣ ನಗ್ನವಾಗಿಸಿ ಮೆರವಣಿಗೆ ಮಾಡಿದ ವೀಡಿಯೊ ಬಂದ ಬೆನ್ನಿಗೇ ಇಬ್ಬರು ವಿದ್ಯಾರ್ಥಿಗಳನ್ನು ಕೊಂದು ಹಾಕಿರುವ ಹೃದಯ ವಿದ್ರಾವಕ ಫೋಟೋ ಬಂದಿದೆ ಅಲ್ಲಿಂದ. ಯೋಧರು, ಬಿಜೆಪಿ ಶಾಸಕರ ಮೇಲೆಯೇ ಕೊಲೆ, ಮಾರಣಾಂತಿಕ ಹಲ್ಲೆ ನಡೆದಿದೆ ಅಲ್ಲಿ. ಇದೆಲ್ಲ ಪ್ರಧಾನಿ ಮೋದೀಜಿ ಗಮನ ಹರಿಸಬೇಕಾದ ವಿಷಯ ಅಲ್ವಾ ? ಇಷ್ಟೆಲ್ಲಾ ಸರಣಿ ದುರಂತಗಳು ಅಲ್ಲಿ ನಡೀತಾನೇ ಇದ್ರೂ, ಅಲ್ಲಿ ಬಿಜೆಪಿ ಸರಕಾರವೇ ಇದ್ರೂ ಯಾಕೆ ಇನ್ನೂ ಅಲ್ಲಿನ ಸಿಎಂ ಬದಲಾವಣೆ ಆಗಿಲ್ಲ ? ಆ ಮುಖ್ಯಮಂತ್ರಿ ಕೇವಲ ಮೂವತ್ತು ಲಕ್ಷ ಜನಸಂಖ್ಯೆಯಿರುವ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲೂ ನಾಲಾಯಕ್ ಎಂದು ಪ್ರಧಾನಿ ಮೋದಿಗೆ ಗೊತ್ತಾಗಲು ಇನ್ನೆಷ್ಟು ತಿಂಗಳು ಬೇಕು ?

ಈ ಬಗ್ಗೆ ಶೋಭಾ ಕರಂದ್ಲಾಜೆ ಏನು ಹೇಳ್ತಾರೆ ? ಮಣಿಪುರಕ್ಕೆ ಮಾತ್ರ ಮೋದಿ ಪ್ರಧಾನಿ ಅಲ್ಲ ಅಂತಾರಾ ?. ಇವತ್ತು ಈ ದೇಶದ ಅತ್ಯಂತ ಪವರ್ ಫುಲ್ ರಾಜಕಾರಣಿ ಪ್ರಧಾನಿ ಮೋದಿ. ಈ ದೇಶದ ಅತ್ಯಂತ ಪವರ್ ಫುಲ್ ಪಕ್ಷ ಬಿಜೆಪಿ. ಇಡೀ ದೇಶದ ಅಧಿಕಾರಶಾಹಿ, ಸಂಪನ್ಮೂಲಗಳು, ಸಂಸ್ಥೆಗಳು, ಮಾಧ್ಯಮಗಳು ಎಲ್ಲವೂ ಅವರ ಕೈಯಲ್ಲಿವೆ. ಮೋದೀಜಿ ಮನಸ್ಸು ಮಾಡಿದರೆ ಭಾರತದಲ್ಲಿ ಆಗದೇ ಇರೋದು ಯಾವುದೂ ಇಲ್ಲ. ಅವರು ಹೇಳಿದರೆ ಅದನ್ನು ಮಾಡದೇ ಇರೋರು ಯಾರೂ ಇಲ್ಲ.

ಆಕ್ಸಿಜನ್, ಆಸ್ಪತ್ರೆ ಬೆಡ್ ಇಲ್ಲದೆ ಜನ ಸಾಯ್ತಾ ಇರುವಾಗ ನೀವು ಬಾಲ್ಕನಿಗೆ ಬಂದು ತಟ್ಟೆ ಹೊಡೀರಿ, ಮೊಬೈಲ್ ಟಾರ್ಚ್ ತೋರಿಸಿ ಅಂತ ಮೋದಿಜಿ ಹೇಳಿದಾಗ ಅದನ್ನು ಚಾಚೂ ತಪ್ಪದೆ ಪಾಲಿಸಿದ ದೇಶ ನಮ್ಮದು. ಹಾಗಾದರೆ ಮೋದಿಜಿಗೆ ಅದೆಷ್ಟು ಪ್ರಭಾವ, ಪವರ್ ಇದೆ ಅಂತ ನೀವೇ ಊಹಿಸಿ. ಅವರು ಪ್ರಾಮಾಣಿಕವಾಗಿ ಮನಸ್ಸು ಮಾಡಿದರೆ ಅರ್ಧ ಗಂಟೆಯಲ್ಲಿ ಕಾವೇರಿ ಸಮಸ್ಯೆ ಬಗೆಹರಿಸೋದು , ಕನಿಷ್ಠ ಈಗ ಅದಕ್ಕೊಂದು ತಾತ್ಕಾಲಿಕ ಪರಿಹಾರ ಕಂಡುಕೊಳ್ಳೋದು ಅಸಾಧ್ಯನಾ ? ಆದರೆ ಯಾಕೆ ಅದು ಆಗುತ್ತಿಲ್ಲ ?.

ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ವಿಫಲವಾಗಿವೆ. ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ. ಅದರದ್ದು ಭಂಡತನ. ನಾವೇನು ಮಾಡೋದಿಲ್ಲ, ಏನು ಬೇಕಾದರೂ ಮಾಡ್ಕೊಳ್ಳಿ, ನೀವೇ ನೋಡ್ಕೊಳ್ಳಿ ಅನ್ನೋ ಧೋರಣೆ. ಅದೇ ಧೋರಣೆ ಈಗ ಶೋಭಾ ಕರಂದ್ಲಾಜೆ ಬಾಯಲ್ಲಿ ಈ ಮಾತು ಹೇಳಿಸಿದೆ. ಕನ್ನಡಿಗರು ಮುಂದಿನ ಚುನಾವಣೆಯಲ್ಲಿ ಅವರಿಂದ ಈ ಉಡಾಫೆ ಬಗ್ಗೆ ಉತ್ತರ ಕೇಳಬೇಕಾಗಿದೆ.

share
ಆರ್. ಜೀವಿ
ಆರ್. ಜೀವಿ
Next Story
X