CBSE ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭ: ಶುಲ್ಕಗಳು, ನಿಯಮಗಳು ಮತ್ತು ಪ್ರಮುಖ ವಿವರ ತಿಳಿದುಕೊಳ್ಳಿ

Photo Credit : PTI
ಈಗಾಗಲೇ ತಮ್ಮ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದಿರುವ ವಿದ್ಯಾರ್ಥಿಗಳು ಪ್ರತಿಗಳಲ್ಲಿ ಗಮನಿಸಿದ ತಪ್ಪುಗಳು ಅಥವಾ ಸಮಸ್ಯೆಗಳಿಗೆ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಬಹುದು.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಯ ಅಂಕಗಳ ಪರಿಶೀಲನೆಗಾಗಿ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಈಗಾಗಲೇ ತಮ್ಮ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದಿರುವ ವಿದ್ಯಾರ್ಥಿಗಳು ಈಗ ಅಧಿಕೃತ CBSE ಫೋರ್ಟಲ್ ಮೂಲಕ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಪೋರ್ಟಲ್ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಅರ್ಜಿಗಳಿಗಾಗಿ ಜೂನ್ 6ರವರೆಗೆ ತೆರೆದಿರುತ್ತದೆ.
ಈಗಾಗಲೇ ತಮ್ಮ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದಿರುವ ವಿದ್ಯಾರ್ಥಿಗಳು ಪ್ರತಿಗಳಲ್ಲಿ ಗಮನಿಸಿದ ತಪ್ಪುಗಳು ಅಥವಾ ಸಮಸ್ಯೆಗಳಿಗೆ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಬಹುದು. ಮೌಲ್ಯಮಾಪನದಿಂದ ತೃಪ್ತಿ ಸಿಗದೆ ಇದ್ದಲ್ಲಿ ಅವರು ನಿರ್ದಿಷ್ಟ ಉತ್ತರಗಳಿಗೆ ಮರುಮೌಲ್ಯಮಾಪನವನ್ನು ಕೇಳಬಹುದಾಗಿದೆ.
ಈ ಸೌಲಭ್ಯವು ತಮ್ಮ ಮೌಲ್ಯಮಾಪನ ಮಾಡಿದ ಉತ್ತರ ಪುಸ್ತಕಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಈಗಾಗಲೇ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆಯು ಸಿಬಿಎಸ್ಇ ಮರುಮೌಲ್ಯಮಾಪನ ಪೋರ್ಟಲ್ ನಲ್ಲಿ ಲಭ್ಯವಿದೆ. ಅಲ್ಲಿ ಅಭ್ಯರ್ಥಿಗಳು ಲಾಗಿನ್ ಆಗಬಹುದು. ಅವರು ಸವಾಲು ಹಾಕಲು ಬಯಸುವ ಪ್ರಶ್ನೆಗಳನ್ನು ಆಯ್ಕೆ ಮಾಡಬಹುದು ಮತ್ತು ನಿಗದಿತ ಶುಲ್ಕವನ್ನು ಪಾವತಿಸಬಹುದು.
ಮರುಮೌಲ್ಯಮಾಪನ ಶುಲ್ಕ?
► 2026 ಫಲಿತಾಂಶ ನಂತರದ ಪ್ರಕ್ರಿಯೆಗೆ ಸಿಬಿಎಸ್ಇ ಶುಲ್ಕ ರಚನೆಯನ್ನು ಪರಿಷ್ಕರಿಸಿದೆ ಮತ್ತು ಈ ಮುಂದಿನಂತಿದೆ:
► ಮೌಲ್ಯಮಾಪನ ಮಾಡಿದ ಉತ್ತರ ಪುಸ್ತಕದ ಸ್ಕ್ಯಾನ್ ಮಾಡಿದ ಪ್ರತಿಯ ಪ್ರತಿ ವಿಷಯಕ್ಕೆ 100 ರೂ. ಶುಲ್ಕ ವಿಧಿಸಲಾಗಿದೆ.
► ಅಂಕಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಶೀಲನೆಗೆ ಪ್ರತಿ ವಿಷಯಕ್ಕೆ 100 ರೂ. ಶುಲ್ಕ ವಿಧಿಸಲಾಗಿದೆ.
► ಮರುಮೌಲ್ಯಮಾಪನ ಶುಲ್ಕವನ್ನು ಪ್ರತಿ ಪ್ರಶ್ನೆಗೆ 25 ರೂ. ಎಂದು ನಿಗದಿಪಡಿಸಲಾಗಿದೆ.
ಈ ವರ್ಷದ ಗಮನಾರ್ಹ ಬದಲಾವಣೆಯೆಂದರೆ ಮರುಪಾವತಿ ನಿಬಂಧನೆಯನ್ನೂ ಪರಿಚಯಿಸಲಾಗಿದೆ.
ಮರು-ಮೌಲ್ಯಮಾಪನದ ನಂತರ ವಿದ್ಯಾರ್ಥಿ ಅಂಕ ಹೆಚ್ಚಾದರೆ, ಸಿಬಿಎಸ್ಇ ಅಂಕಗಳ ಹೆಚ್ಚಳಕ್ಕೆ ಕಾರಣವಾದ ಪ್ರಶ್ನೆಗಳ ಮರುಮೌಲ್ಯಮಾಪನಕ್ಕೆ ಪಾವತಿಸಿದ ಶುಲ್ಕವನ್ನು ಮರುಪಾವತಿಸುತ್ತದೆ.
► ಸ್ಕ್ಯಾನ್ ಮಾಡಿದ ಪ್ರತಿಗಳ ಸಮಸ್ಯೆಗಳ ಪರಿಶೀಲನೆ
ಮೌಲ್ಯಮಾಪನ ಮಾಡಿದ ಉತ್ತರ ಪುಸ್ತಕಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದ ವಿದ್ಯಾರ್ಥಿಗಳು ತಮ್ಮಲ್ಲಿ ಕಂಡುಬರುವ ಸಮಸ್ಯೆಗಳ ಪರಿಹಾರಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅವುಗಳಲ್ಲಿ ಇವು ಸೇರಿವೆ:
* ಕಾಣೆಯಾದ ಪುಟಗಳು
* ಕಾಣೆಯಾದ ಪೂರಕ ಹಾಳೆಗಳು
* ನಕ್ಷೆಗಳು ಅಥವಾ ಗ್ರಾಫ್ಗಳು ಕಾಣೆಯಾಗಿವೆ
* ಮಸುಕಾದ ಅಥವಾ ಓದಲಾಗದ ಪುಟಗಳು
* ತಪ್ಪಾದ ಉತ್ತರ ಪತ್ರಿಕೆಯನ್ನು ಸ್ವೀಕರಿಸಿರುವುದು
* ಭಿನ್ನ ಪ್ರಶ್ನೆಪತ್ರಿಕೆಯ ಸೆಟ್ ಮೌಲ್ಯಮಾಪನವಾಗಿದೆ
► ಗಮನದಲ್ಲಿಡಬೇಕಾದ ಅಂಶಗಳು
* ಒಂದೇ ಅರ್ಜಿಯಲ್ಲಿ ಬಹು ಸಮಸ್ಯೆಗಳು ಮತ್ತು ವಿಷಯಗಳನ್ನು ಸೇರಿಸಬಹುದು
* ವಿದ್ಯಾರ್ಥಿಗಳು ಅಂತಿಮ ಸಲ್ಲಿಕೆಗೆ ಮೊದಲು ವಿಷಯಗಳಾದ್ಯಂತದ ಎಲ್ಲಾ ವಿನಂತಿಗಳನ್ನು ಸೇರಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
* ‘ಪ್ರೀಜ್ ಮಾಡಿ ಮತ್ತು ಪಾವತಿಗೆ ಮುಂದುವರಿಯಿರಿ’ ಬಟನ್ ಕ್ಲಿಕ್ ಮಾಡಿದ ನಂತರ ಅಪ್ಲಿಕೇಶನ್ ವಿವರಗಳು ಲಾಕ್ ಆಗಿಬಿಡುತ್ತವೆ ಮತ್ತು ಮರು ಎಡಿಟ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮುಂದುವರಿಯುವ ಮೊದಲು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಸೂಚಿಸಲಾಗಿದೆ.
* ಆನ್ಲೈನ್ ಮೂಲಕ ಹಣ ಪಾವತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
* ಸಮಸ್ಯೆಗಳ ಪರಿಶೀಲನೆಗಾಗಿ ಕೇವಲ ಒಂದು ಅರ್ಜಿಯನ್ನು ಮಾತ್ರ ಅನುಮತಿಸಲಾಗಿದೆ.
* ಸಲ್ಲಿಕೆಯ ನಂತರ ವಿದ್ಯಾರ್ಥಿಗಳು ಅರ್ಜಿಯನ್ನು ಡೌನ್ಲೋಡ್ ಮಾಡಬಹುದು ಮತ್ತು ಪೋರ್ಟಲ್ ಮೂಲಕ ಅದರ ಸ್ಥಿತಿಯನ್ನು ಪತ್ತೆ ಮಾಡಬಹುದು.
► ಉತ್ತರಗಳ ಮರು ಮೌಲ್ಯಮಾಪನ
ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಒಂದು ಅಥವಾ ಹೆಚ್ಚಿನ ಪ್ರಶ್ನೆಗಳ ಮರುಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅನ್ವಯವಾಗುವಲ್ಲೆಲ್ಲ ಪ್ರಶ್ನೆ ಸಂಖ್ಯೆ ಮತ್ತು ಪುಟ ಸಂಖ್ಯೆ ಸೇರಿದಂತೆ ಸಂಬಂಧಿತ ವಿವರಗಳನ್ನು ಒದಗಿಸಬೇಕಾಗುತ್ತದೆ.






