Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಲ್ಲಿಯವರೆಗೆ ಕರ್ನಾಟಕ ಸಿಎಂ ಆಗಿ ಅಧಿಕಾರ...

ಇಲ್ಲಿಯವರೆಗೆ ಕರ್ನಾಟಕ ಸಿಎಂ ಆಗಿ ಅಧಿಕಾರ ನಡೆಸಿದವರು ಯಾರೆಲ್ಲ?

ವಾರ್ತಾಭಾರತಿವಾರ್ತಾಭಾರತಿ3 Jun 2026 9:07 PM IST
share
ಇಲ್ಲಿಯವರೆಗೆ ಕರ್ನಾಟಕ ಸಿಎಂ ಆಗಿ ಅಧಿಕಾರ ನಡೆಸಿದವರು ಯಾರೆಲ್ಲ?

ಅತಿ ಹೆಚ್ಚು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಾಯಕರು ಯಾರು? 'ಅಲ್ಪಾವಧಿ' ಮುಖ್ಯಮಂತ್ರಿಗಳು ಯಾರು?

ಇಲ್ಲಿದೆ ಸಂಪೂರ್ಣ ವಿವರ...

ಕರ್ನಾಟಕ ರಾಜಕಾರಣದಲ್ಲಿ ಇತ್ತೀಚೆಗೆ ನಡೆದ ನಾಯಕತ್ವ ಬದಲಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಪುಟಗಳನ್ನು ಮರಳಿ ತೆರೆಯುವಂತೆ ಮಾಡಿದೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು 2026ರ ಇಂದಿನ ಜೂನ್ ತಿಂಗಳವರೆಗೆ ಕರ್ನಾಟಕದ ಮುಖ್ಯಮಂತ್ರಿ ಗಾದಿ ಹಲವು ಐತಿಹಾಸಿಕ ಮೈಲಿಗಲ್ಲುಗಳು, ತಂತ್ರ-ಪ್ರತಿತಂತ್ರಗಳು, ಸುದೀರ್ಘ ಆಡಳಿತದ ದಾಖಲೆಗಳು ಹಾಗೂ ಕೇವಲ ದಿನಗಳ ಲೆಕ್ಕದ ಅಲ್ಪಾವಧಿ ಸರ್ಕಾರಗಳಿಗೆ ಸಾಕ್ಷಿಯಾಗಿದೆ.

1. ಏಕೀಕರಣ ಪೂರ್ವ ಮೈಸೂರು ರಾಜ್ಯದ 'ತ್ರಿಮೂರ್ತಿಗಳು' (1947 - 1956)

ನವೆಂಬರ್ 1, 1956 ರಂದು ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ 'ವಿಶಾಲ ಮೈಸೂರು ರಾಜ್ಯ' (ಇಂದಿನ ಕರ್ನಾಟಕ) ಅಸ್ತಿತ್ವಕ್ಕೆ ಬರುವ ಮುನ್ನ, ಹಳೇ ಮೈಸೂರು ಪ್ರಾಂತ್ಯದಲ್ಲಿ ಮೂವರು ಪ್ರಮುಖ ನಾಯಕರು ರಾಜ್ಯದಲ್ಲಿ ಸಿಎಂ ಆಗಿ ಅಧಿಕಾರ ನಡೆಸಿದ್ದರು.

ಕೆ. ಚೆಂಗಲರಾಯ ರೆಡ್ಡಿ (1947-1952): ಸ್ವಾತಂತ್ರ್ಯೋತ್ತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ .ರೆಡ್ಡಿ. 1947ರ ಅಕ್ಟೋಬರ್ 25ರಂದು ಅಧಿಕಾರ ವಹಿಸಿಕೊಂಡ ಇವರು 1952ರ ಮಾರ್ಚ್ 30ರ ವರೆಗೆ, ಅಂದರೆ ಸುಮಾರು 4 ವರ್ಷ 5 ತಿಂಗಳುಗಳ ಕಾಲ ಸುದೀರ್ಘ ಹಾಗೂ ಸ್ಥಿರ ಆಡಳಿತವನ್ನು ನೀಡುವ ಮೂಲಕ ಹೊಸ ರಾಜ್ಯದ ಆಡಳಿತ ಯಂತ್ರಕ್ಕೆ ಗಟ್ಟಿ ತಳಪಾಯ ಹಾಕಿದರು.

ಕೆಂಗಲ್ ಹನುಮಂತಯ್ಯ (1952-1956): 1952ರ ಮಾರ್ಚ್ 30ರಂದು ಸಿಎಂ ಆದ ಇವರು ದೂರದೃಷ್ಟಿಯ ನಾಯಕರಾಗಿದ್ದರು. ಇವರ ಆಡಳಿತಾವಧಿಯ ಅತ್ಯಂತ ಪ್ರಮುಖ ಹೆಗ್ಗುರುತು ಎಂದರೆ ಬೆಂಗಳೂರಿನ ಭವ್ಯ 'ವಿಧಾನಸೌಧ'ದ ನಿರ್ಮಾಣ. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಇದನ್ನು ನಿರ್ಮಿಸಲಾಗಿತ್ತು .

ಕಡಿದಾಳ್ ಮಂಜಪ್ಪ (1956): ಕೆಂಗಲ್ ಹನುಮಂತಯ್ಯನವರ ರಾಜೀನಾಮೆಯ ನಂತರ ಕಡಿದಾಳ್ ಮಂಜಪ್ಪನವರು ಕೇವಲ 73 ದಿನಗಳ ಕಾಲ (1956ರ ಆಗಸ್ಟ್ 19 ರಿಂದ ಅಕ್ಟೋಬರ್ 31ರ ವರೆಗೆ) ಮುಖ್ಯಮಂತ್ರಿಯಾಗಿದ್ದರು. ಜಮೀನ್ದಾರಿ ಪದ್ಧತಿ ನಿರ್ಮೂಲನೆ ಮತ್ತು 'ಉಳುವವನಿಗೆ ಭೂಮಿ' ತತ್ವದ ಮೂಲಕ ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸಿದ ಅವರು, ಗೇಣಿ ಕಾಯ್ದೆಯನ್ನು ಜಾರಿಗೆ ತಂದರು. ಅವರ ದೂರದರ್ಶಿತ್ವದ ಹೆಜ್ಜೆಯಾಗಿ ಇನಾಮ್‌ ಕಾಯ್ದೆಯೂ ಅನುಷ್ಠಾನಗೊಂಡಿತು.

2. ಅತಿ ಹೆಚ್ಚು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಾಯಕರು

ಕರ್ನಾಟಕದ ರಾಜಕೀಯ ಇತಿಹಾಸವು ಸ್ಥಿರತೆಯ ಜೊತೆಗೆ ತೀವ್ರ ಅಸ್ಥಿರತೆಗೂ ಹೆಸರಾಗಿದೆ. ಪಕ್ಷದೊಳಗಿನ ಭಿನ್ನಮತ ಅಥವಾ ಮೈತ್ರಿ ಸರ್ಕಾರಗಳ ಕಚ್ಚಾಟದಿಂದಾಗಿ ಕೆಲವು ನಾಯಕರು ಪದೇ ಪದೇ ಮುಖ್ಯಮಂತ್ರಿ ಪೀಠ ಏರಬೇಕಾಯಿತು.

ಬಿ. ಎಸ್. ಯಡಿಯೂರಪ್ಪ (4 ಬಾರಿ): ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ನಾಯಕ ಬಿ.ಎಸ್. ಯಡಿಯೂರಪ್ಪ (2007, 2008, 2018, ಮತ್ತು 2019). ಆದರೆ, ವಿಪರ್ಯಾಸವೆಂದರೆ ಈ ನಾಲ್ಕರಲ್ಲಿ ಎರಡು ಬಾರಿ ಅವರು ಬಹುಮತದ ಕೊರತೆಯಿಂದಾಗಿ ವಾರದ ಒಳಗೇ ರಾಜೀನಾಮೆ ನೀಡಬೇಕಾಯಿತು. 2008 ಮತ್ತು 2019ರ ಅವಧಿಯಲ್ಲಿ ಮಾತ್ರ ಅವರು ದೀರ್ಘಕಾಲ ಆಡಳಿತ ನಡೆಸಿದರು.

ರಾಮಕೃಷ್ಣ ಹೆಗಡೆ (3 ಬಾರಿ): 1983ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ (ಜನತಾ ಪಾರ್ಟಿ) ಸರ್ಕಾರವನ್ನು ರಚಿಸಿದ ಕೀರ್ತಿ ರಾಮಕೃಷ್ಣ ಹೆಗಡೆಯವರದ್ದು. ಇವರು 1983 ರಿಂದ 1988ರ ನಡುವಿನ ಐದು ವರ್ಷಗಳಲ್ಲೇ ವಿಭಿನ್ನ ರಾಜಕೀಯ ವಿದ್ಯಮಾನಗಳ ಕಾರಣದಿಂದಾಗಿ ಸತತ 3 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ತಲಾ 2 ಬಾರಿ ಸಿಎಂ ಆದವರು: ರಾಜ್ಯದ ಪ್ರಭಾವಿ ನಾಯಕರಾದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಡಿ. ದೇವರಾಜ ಅರಸು, ಎಚ್. ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ವಿಭಿನ್ನ ಕಾಲಘಟ್ಟಗಳಲ್ಲಿ ತಲಾ ಎರಡು ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

3. 'ಐದು ವರ್ಷ'ಗಳ ಪೂರ್ಣಾವಧಿ ಪೂರೈಸಿದವರು

ಕರ್ನಾಟಕದ ಸಿಎಂ ಗಾದಿ ಎಷ್ಟು ರೋಚಕವೋ ಅಷ್ಟೇ ಮುಳ್ಳಿನ ಹಾಸಿಗೆ ಕೂಡ ಹೌದು. 1956ರ ನಂತರ ಅಧಿಕಾರಕ್ಕೆ ಬಂದ ಬಹುತೇಕ ಮುಖ್ಯಮಂತ್ರಿಗಳು ತಮ್ಮ 5 ವರ್ಷಗಳ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವೇ ಆಗಿಲ್ಲ. ಆದರೆ ಈ 'ಅಪೂರ್ಣಾವಧಿ ಶಾಪ'ವನ್ನು ಮುರಿದು ಇತಿಹಾಸ ನಿರ್ಮಿಸಿದ ಮೂವರು ನಾಯಕರೆಂದರೆ‌ ಎಸ್. ನಿಜಲಿಂಗಪ್ಪ, ದೇವರಾಜ ಅರಸು ಮತ್ತು ಸಿದ್ದರಾಮಯ್ಯ.

ಎಸ್. ನಿಜಲಿಂಗಪ್ಪ: ಎರಡನೇ ಅವಧಿಯಲ್ಲಿ (21/06/1962- 28/05/1968) ನಿಜಲಿಂಗಪ್ಪ ಅವರು ಪೂರ್ಣವಧಿ ಪೂರೈಸಿದ್ದರು.

ಡಿ. ದೇವರಾಜ ಅರಸು (1972 - 1977): ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲ್ಪಡುವ ದೇವರಾಜ ಅರಸು ಅವರು 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರ ವರೆಗೆ ತಮ್ಮ ಮೊದಲ ಅವಧಿಯಲ್ಲಿ ಸತತ 5 ವರ್ಷಗಳಿಗೂ ಹೆಚ್ಚು ಕಾಲ (ಒಟ್ಟು 5 ವರ್ಷ 286 ದಿನಗಳು) ಅತ್ಯಂತ ಯಶಸ್ವಿಯಾಗಿ ಆಡಳಿತ ಪೂರ್ಣಗೊಳಿಸಿದರು. ಇವರ ಅವಧಿಯಲ್ಲಿ ಜಾರಿಗೆ ಬಂದ 'ಭೂಸುಧಾರಣಾ ಕಾಯ್ದೆ' ಮತ್ತು ʼಉಳುವವನೇ ಭೂಮಿಯ ಒಡೆಯ ನೀತಿʼ ಇಂದಿಗೂ ಇತಿಹಾಸ.

ಸಿದ್ದರಾಮಯ್ಯ (2013 - 2018): ಆಧುನಿಕ ಕರ್ನಾಟಕದ ಇತಿಹಾಸದಲ್ಲಿ 40 ವರ್ಷಗಳ ನಂತರ 5 ವರ್ಷಗಳ ಪೂರ್ಣಾವಧಿಯನ್ನು ಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರದ್ದು. ಅವರು 2013ರ ಮೇ 13ರಿಂದ 2018ರ ಮೇ 15ರ ವರೆಗೆ ಸತತ 5 ವರ್ಷ ಆಡಳಿತ ನಡೆಸಿದರು. ಇತ್ತೀಚೆಗೆ ಅವರ ಎರಡನೇ ಅವಧಿಯಲ್ಲಿ (2023 ಮೇ 20 ರಿಂದ 2026 ಮೇ 28) ನಾಯಕತ್ವ ಬದಲಾವಣೆಗಾಗಿ ಅವರು ರಾಜೀನಾಮೆ ನೀಡಿದರು. ತಮ್ಮ ಎರಡು ಅವಧಿಗಳನ್ನು ಸೇರಿಸಿ ಒಟ್ಟು 8 ವರ್ಷ ಸಿಎಂ ಆಗಿ ಸೇವೆ ಸಲ್ಲಿಸಿದ ಅತಿ ಸುದೀರ್ಘ ಇತಿಹಾಸ ಇವರ ಹೆಸರಲ್ಲಿದೆ.

4. ಕನಿಷ್ಠ ಅವಧಿಯ 'ಅಲ್ಪಾವಧಿ' ಮುಖ್ಯಮಂತ್ರಿಗಳು

ರಾಜಕೀಯ ತಂತ್ರಗಾರಿಕೆ, ಸಂಖ್ಯೆಗಳ ಆಟ ಮತ್ತು ಹೈಕಮಾಂಡ್ ನಿರ್ಧಾರಗಳಿಂದಾಗಿ ಕೇವಲ ಕೆಲವು ದಿನ ಅಥವಾ ತಿಂಗಳುಗಳ ಕಾಲ ಮಾತ್ರ ಸಿಎಂ ಕುರ್ಚಿಯಲ್ಲಿ ಕುಳಿತ ನಾಯಕರ ಪಟ್ಟಿಯೂ ದೊಡ್ಡದಿದೆ.

ಬಿ. ಎಸ್. ಯಡಿಯೂರಪ್ಪ (2018): ಮೇ 17, 2018 ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಇವರು, ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಕೇವಲ 6 ದಿನಗಳ ಒಳಗೆ (ಮೇ 23) ರಾಜೀನಾಮೆ ನೀಡಬೇಕಾಯಿತು. ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಅವಧಿಯ ಸರ್ಕಾರ.

ಬಿ. ಎಸ್. ಯಡಿಯೂರಪ್ಪ (2007): ಅದಕ್ಕೂ ಮುನ್ನ, ಜೆಡಿಎಸ್-ಬಿಜೆಪಿ ಮೈತ್ರಿ ಮುರಿದುಬಿದ್ದ ಸಂದರ್ಭದಲ್ಲಿ 2007 ನವೆಂಬರ್ 12 ರಂದು ಸಿಎಂ ಆದ ಇವರು ಕೇವಲ 7 ದಿನಗಳಲ್ಲಿ ಅಧಿಕಾರ ಕಳೆದುಕೊಂಡರು.

ಎಸ್. ಆರ್. ಕಂಠಿ (1962): ಎಸ್.ಆರ್. ಕಂಠಿ ಅವರು 1962ರ ಮಾರ್ಚ್ 14ರಿಂದ ಜೂನ್ 20ರ ವರೆಗೆ ಕೇವಲ 98 ದಿನಗಳ ಕಾಲ ಸಿಎಂ ಸ್ಥಾನದಲ್ಲಿದ್ದರು.

ಎಸ್. ಆರ್. ಬೊಮ್ಮಾಯಿ (1988-1989): ಜನತಾದಳ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬೊಮ್ಮಾಯಿಯವರ ಸರ್ಕಾರವನ್ನು ಕೇಂದ್ರ ಸರ್ಕಾರವು ಆರ್ಟಿಕಲ್ 356 ಬಳಸಿ ವಜಾಗೊಳಿಸಿತು. ಬೊಮ್ಮಾಯಿ ಕೇವಲ 251 ದಿನಗಳು ಮಾತ್ರ ಆಡಳಿತ ನಡೆಸಿದ್ದರು. ಇವರು ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ 'ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ' ಮೊಕದ್ದಮೆಯು ಭಾರತದ ಸಾಂವಿಧಾನಿಕ ಇತಿಹಾಸದಲ್ಲೇ ಅತ್ಯಂತ ಪ್ರಮುಖ ತೀರ್ಪಿಗೆ ಕಾರಣವಾಯಿತು.

5. ಕರ್ನಾಟಕ ಕಂಡ 'ರಾಷ್ಟ್ರಪತಿ ಆಳ್ವಿಕೆ'ಯ ಕರಾಳ ದಿನಗಳು

ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದಿದ್ದಾಗ ಅಥವಾ ಸಮ್ಮಿಶ್ರ ಸರ್ಕಾರಗಳು ಪತನಗೊಂಡಾಗ ಹೀಗೆ ಒಟ್ಟು 6 ಬಾರಿ ಕೇಂದ್ರ ಸರ್ಕಾರವು ರಾಜ್ಯಪಾಲರ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದೆ.

ಮೊದಲ ಬಾರಿ (1971-1972): ವೀರೇಂದ್ರ ಪಾಟೀಲ್ ಅವರ ನೇತೃತ್ವದ ಕಾಂಗ್ರೆಸ್ (ಒ) ಸರ್ಕಾರ ಪತನಗೊಂಡಾಗ ರಾಜ್ಯದಲ್ಲಿ ಮೊದಲ ಬಾರಿಗೆ ಸುಮಾರು ಒಂದು ವರ್ಷ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ತದನಂತರ ದೇವರಾಜ ಅರಸು ಸರಕಾರ ಪತನದ ವೇಳೆ (1977), ಬೊಮ್ಮಾಯಿ ಸರ್ಕಾರದ ವಜಾ ವೇಳೆ (1989), ಮತ್ತು ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ (1990) ರಾಜ್ಯವು ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿತ್ತು.

ಕುಮಾರಸ್ವಾಮಿ ಅವರು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದಾಗ ಮತ್ತು ನಂತರ ಬಿ.ಎಸ್. ಯಡಿಯೂರಪ್ಪನವರು 7 ದಿನಕ್ಕೆ ರಾಜೀನಾಮೆ ನೀಡಿದಾಗ 2007ರ ಅಕ್ಟೋಬರ್‌ನಿಂದ 2008ರ ಮೇ ವರೆಗೆ ಎರಡು ಹಂತಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

► ಇಲ್ಲಿವರೆಗೆ ಮುಖ್ಯಮಂತ್ರಿ ಆದವರು, ಅವರ ಅಧಿಕಾರವಧಿ

- ಕೆ. ಚೆಂಗಲರಾಯ ರೆಡ್ಡಿ (25/10/1947 - 30/03/1952)

- ಕೆಂಗಲ್ ಹನುಮಂತಯ್ಯ (30/03/1952 - 19/08/1956)

- ಕಡಿದಾಳ್ ಮಂಜಪ್ಪ (19/08/1956 - 31/10/1956)

- ಎಸ್. ನಿಜಲಿಂಗಪ್ಪ (01/11/1956 - 16/05/1958)

- ಬಿ. ಡಿ. ಜತ್ತಿ (16/05/1958 - 09/03/1962)

- ಎಸ್. ಆರ್. ಕಂಠಿ (14/03/1962 - 20/06/1962)

- ಎಸ್. ನಿಜಲಿಂಗಪ್ಪ (21/06/1962 - 28/05/1968)

- ವೀರೇಂದ್ರ ಪಾಟೀಲ್ (29/05/1968 - 18/03/1971)

- ರಾಷ್ಟ್ರಪತಿ ಆಳ್ವಿಕೆ (19/03/1971 - 20/03/1972)

- ಡಿ. ದೇವರಾಜ ಅರಸು (20/03/1972 - 31/12/1977)

- ರಾಷ್ಟ್ರಪತಿ ಆಳ್ವಿಕೆ (31/12/1977 - 28/02/1978)

- ಡಿ. ದೇವರಾಜ ಅರಸು (28/02/1978 - 07/01/1980)

- ಆರ್. ಗುಂಡೂರಾವ್ (12/01/1980 - 06/01/1983)

- ರಾಮಕೃಷ್ಣ ಹೆಗಡೆ (10/01/1983 - 29/12/1984)

- ರಾಮಕೃಷ್ಣ ಹೆಗಡೆ (08/03/1985 - 13/02/1986)

- ರಾಮಕೃಷ್ಣ ಹೆಗಡೆ (16/02/1986 - 10/08/1988)

- ಎಸ್. ಆರ್. ಬೊಮ್ಮಾಯಿ (13/08/1988 - 21/04/1989)

- ರಾಷ್ಟ್ರಪತಿ ಆಳ್ವಿಕೆ (21/04/1989 - 30/11/1989)

- ವೀರೇಂದ್ರ ಪಾಟೀಲ್ (30/11/1989 - 10/10/1990)

- ರಾಷ್ಟ್ರಪತಿ ಆಳ್ವಿಕೆ (10/10/1990 - 17/10/1990)

- ಎಸ್. ಬಂಗಾರಪ್ಪ (17/10/1990 - 19/11/1992)

- ವೀರಪ್ಪ ಮೊಯ್ಲಿ (19/11/1992 - 11/12/1994)

- ಎಚ್. ಡಿ. ದೇವೇಗೌಡ (11/12/1994 - 31/05/1996)

- ಜೆ. ಎಚ್. ಪಟೇಲ್ (31/05/1996 - 07/10/1999)

- ಎಸ್. ಎಂ. ಕೃಷ್ಣ (11/10/1999 - 28/05/2004)

- ಧರಂ ಸಿಂಗ್ (28/05/2004 - 02/02/2006)

- ಎಚ್. ಡಿ. ಕುಮಾರಸ್ವಾಮಿ (03/02/2006 - 08/10/2007)

- ರಾಷ್ಟ್ರಪತಿ ಆಳ್ವಿಕೆ (08/10/2007 - 12/11/2007)

- ಬಿ. ಎಸ್. ಯಡಿಯೂರಪ್ಪ (12/11/2007 - 19/11/2007)

- ರಾಷ್ಟ್ರಪತಿ ಆಳ್ವಿಕೆ (20/11/2007 - 29/05/2008)

- ಬಿ. ಎಸ್. ಯಡಿಯೂರಪ್ಪ (30/05/2008 - 04/08/2011)

- ಡಿ. ವಿ. ಸದಾನಂದ ಗೌಡ (05/08/2011 - 11/07/2012)

- ಜಗದೀಶ್ ಶೆಟ್ಟರ್ (12/07/2012 - 12/05/2013)

- ಸಿದ್ದರಾಮಯ್ಯ (13/05/2013 - 15/05/2018)

- ಬಿ. ಎಸ್. ಯಡಿಯೂರಪ್ಪ (17/05/2018 - 23/05/2018)

- ಎಚ್. ಡಿ. ಕುಮಾರಸ್ವಾಮಿ (23/05/2018 - 23/07/2019)

- ಬಿ. ಎಸ್. ಯಡಿಯೂರಪ್ಪ (26/07/2019 - 28/07/2021)

- ಬಸವರಾಜ ಬೊಮ್ಮಾಯಿ (28/07/2021 - 13/05/2023)

- ಸಿದ್ದರಾಮಯ್ಯ (20/05/2023 - 28/05/2026)

- ಡಿ.ಕೆ. ಶಿವಕುಮಾರ್ (03/06/2026- )

Tags

Chief MinisterKarnatakaDK Shivakumar
share
ವಾರ್ತಾಭಾರತಿ
ವಾರ್ತಾಭಾರತಿ
Next Story
X