Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ʼಕಾಕ್ರೋಚ್ ಜನತಾ ಪಾರ್ಟಿʼಯನ್ನು...

ʼಕಾಕ್ರೋಚ್ ಜನತಾ ಪಾರ್ಟಿʼಯನ್ನು ಸ್ವಾಗತಿಸಿದ INDIA ಒಕ್ಕೂಟ; ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದೇಕೆ?

ವಾರ್ತಾಭಾರತಿವಾರ್ತಾಭಾರತಿ27 May 2026 7:51 PM IST
share
ʼಕಾಕ್ರೋಚ್ ಜನತಾ ಪಾರ್ಟಿʼಯನ್ನು ಸ್ವಾಗತಿಸಿದ INDIA ಒಕ್ಕೂಟ; ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದೇಕೆ?

ಪಂಜಾಬ್‌ನಿಂದ ಪಶ್ಚಿಮ ಬಂಗಾಳದವರೆಗೆ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದಂತಹ ಪ್ರಮುಖ ವಿರೋಧ ಪಕ್ಷಗಳ ನಾಯಕರು ಕಳೆದ ಒಂದು ವಾರದಿಂದ ‘ಕಾಕ್ರೋಚ್ ಜನತಾ ಪಾರ್ಟಿ’ ಪರವಾಗಿ ಬಹಿರಂಗವಾಗಿಯೇ ಧ್ವನಿ ಎತ್ತಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ಎರಡು ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಈ ರಾಜಕೀಯ ವಿಡಂಬನಾ ಆಂದೋಲನ, ಸದ್ಯ ಇಡೀ ಜಾಲತಾಣದಾದ್ಯಂತ ಹರಡಿಕೊಳ್ಳುತ್ತಿದೆ.

ಆದರೆ, ವಿರೋಧ ಪಕ್ಷಗಳಲ್ಲೇ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ ಮಾತ್ರ ಅಂತರ ಕಾಯ್ದುಕೊಂಡಿದೆ. ನ್ಯಾಯಾಂಗದ ಸ್ವಾಯತ್ತತೆ, ಮಾಧ್ಯಮ ಸ್ವಾತಂತ್ರ್ಯ ಮತ್ತು ಚುನಾವಣಾ ಪಾರದರ್ಶಕತೆಯಂತಹ ‘ಕಾಕ್ರೋಚ್ ಆಂದೋಲನ’ ಎತ್ತಿ ಹಿಡಿಯುತ್ತಿರುವ ಅದೇ ವಿಷಯಗಳನ್ನೇ ಕಾಂಗ್ರೆಸ್‌ ಕೂಡ ವರ್ಷಗಳಿಂದ ಪ್ರಸ್ತಾಪಿಸುತ್ತಾ ಬಂದಿದೆ. ಆದರೆ ಈ ಹೊಸ ಆಂದೋಲನದಿಂದ ತಾನು ಮಾತ್ರ ‘ಅಂತರ’ ಕಾಯ್ದುಕೊಳ್ಳುವ ತಂತ್ರವನ್ನು ಅದು ಅನುಸರಿಸಿದೆ.

scroll.in ಈ ಕುರಿತು ‘ಇಂಡಿಯಾ’ ಒಕ್ಕೂಟದ ವಿವಿಧ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದಾಗ ಒಂದು ಸಂಗತಿ ಸ್ಪಷ್ಟವಾಗಿದೆ. ಈ ಕಾಕ್ರೋಚ್ ಜನತಾ ಪಾರ್ಟಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುತ್ತಿರುವ ಈ ಪರಿ ಅಭೂತಪೂರ್ವ ಬೆಂಬಲವು, ವಿಶೇಷವಾಗಿ ದೇಶದ ಯುವಜನರಲ್ಲಿ ಮೋದಿ ಸರ್ಕಾರದ ವಿರುದ್ಧ ದಿನೇದಿನೇ ಹೆಚ್ಚಾಗುತ್ತಿರುವ ತೀವ್ರ ಅಸಮಾಧಾನ ಮತ್ತು ಆಕ್ರೋಶದ ಸ್ಪಷ್ಟ ಸಂಕೇತ ಎಂದು ಬಹುತೇಕ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ನಾಗರಿಕ ಸಮಾಜದೊಂದಿಗೆ ಕಾಂಗ್ರೆಸ್ ಪರವಾಗಿ ಸಂಪರ್ಕ ಸಾಧಿಸುವ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಮಾತ್ರ ಈ ಆಂದೋಲನವನ್ನು ತೀವ್ರ ಸಂಶಯದಿಂದಲೇ ನೋಡುತ್ತಿದ್ದಾರೆ. ಈ ಅಭಿಯಾನದ ಹಿಂದೆ ನಿಂತಿರುವವರ ಸೈದ್ಧಾಂತಿಕ ಹಿನ್ನೆಲೆ ಏನು ಮತ್ತು ರಾಜಕೀಯ ಕ್ರಿಯಾಶೀಲತೆಗೆ ಅವರ ಬದ್ಧತೆ ಎಷ್ಟರಮಟ್ಟಿಗಿದೆ ಎಂದು ಅವರು ನೇರವಾಗಿಯೇ ಪ್ರಶ್ನಿಸಿದ್ದಾರೆ. ಇತ್ತ ಕಾಂಗ್ರೆಸ್‌ನ ಯುವ ಘಟಕವಂತೂ ಒಂದು ಹೆಜ್ಜೆ ಮುಂದೆ ಹೋಗಿ, "ನಾವೇ ಅಸಲಿ ಕಾಕ್ರೋಚ್ಗಳು! ಯಾಕೆಂದರೆ ನಾವು ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಕುಳಿತು ಕೀಬೋರ್ಡ್ ಜಡಿಯುತ್ತಿಲ್ಲ, ಬದಲಾಗಿ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದೇವೆ" ಎಂದು ಹೇಳಿದೆ.

ವಿರೋಧ ಪಕ್ಷಗಳಲ್ಲೇ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಡುವಿನ ಈ ಭಿನ್ನಮತ, ‘ಇಂಡಿಯಾ’ ಒಕ್ಕೂಟದ ಆಂತರಿಕ ಬಿರುಕುಗಳನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

ʼಸೋಮಾರಿಗಳು ಮತ್ತು ನಿರುದ್ಯೋಗಿಗಳ ಪಾರ್ಟಿʼ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಇತ್ತೀಚೆಗೆ ಆಡಿದ್ದ ಒಂದು ಮಾತು ಇಡೀ ವಿವಾದದ ಕಿಡಿಗೆ ಕಾರಣವಾಯಿತು. ದೇಶದ ನಿರುದ್ಯೋಗಿ ಯುವಕರನ್ನು ಜಿರಳೆಗೆ ಹೋಲಿಸಿದ ಅವರ ಮಾತಿಗೆ ಪ್ರತಿಯಾಗಿ ಹುಟ್ಟಿಕೊಂಡ ವ್ಯಂಗ್ಯಭರಿತ ತಿರುಗೇಟೇ ಈ ‘ಕಾಕ್ರೋಚ್ ಜನತಾ ಪಾರ್ಟಿ’. ಮುಖ್ಯ ನ್ಯಾಯಮೂರ್ತಿಗಳ ಆ ಹೇಳಿಕೆಯನ್ನು ತೀವ್ರವಾಗಿ ಆಕ್ಷೇಪಿಸಿದವರಲ್ಲಿ ಈ ಆಂದೋಲನದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕೂಡ ಒಬ್ಬರು.

ನಂತರದ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು, "ನಾನು ದುರುದ್ದೇಶಪೂರಿತ ವಕೀಲರನ್ನು ಹದ್ದುಬಸ್ತಿನಲ್ಲಿಡಲು ಆ ಮಾತು ಹೇಳಿದ್ದನೇ ಹೊರತು, ದೇಶದ ಯುವಜನರ ವಿರುದ್ಧ ನನಗೇನು ದ್ವೇಷವಿಲ್ಲ," ಎಂದು ಸ್ಪಷ್ಟನೆ ನೀಡಿದ್ದರು.

ದೀಪ್ಕೆ ಅವರು ಭಾರತದ ‘ಸೋಮಾರಿಗಳು ಮತ್ತು ನಿರುದ್ಯೋಗಿಗಳನ್ನು’ ತಲುಪುವ ಉದ್ದೇಶದಿಂದಲೇ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮತ್ತು ಒಂದು ಪ್ರತ್ಯೇಕ ಜಾಲತಾಣವನ್ನು ಆರಂಭಿಸಿ, ತಮ್ಮ ಐದು ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಆನ್‌ಲೈನ್‌ನಲ್ಲಿ ಈ ಅಭಿಯಾನವು ಅತ್ಯಂತ ವೇಗವಾಗಿ ಫಾಲೋವರ್ಸ್ ಗಳಿಸುತ್ತಿದ್ದಂತೆಯೇ, ಇಡೀ ಮಾಧ್ಯಮ ರಂಗದ ಕಣ್ಣು ಇದರ ಮೇಲೆ ಬಿತ್ತು. ಮಹುವಾ ಮೊಯಿತ್ರಾ ಅವರಂತಹ ಪ್ರಮುಖ ವಿರೋಧ ಪಕ್ಷದ ನಾಯಕರು ತಕ್ಷಣವೇ ಇದಕ್ಕೆ ಬೆಂಬಲ ಘೋಷಿಸಿದರು.

ಈ ಕಾಕ್ರೋಚ್ ಜನತಾ ಪಾರ್ಟಿಯ ‘X’ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದ್ದರೂ, ಇನ್‌ಸ್ಟಾಗ್ರಾಮ್‌ನಲ್ಲಿ ಇದರ ಫಾಲೋವರ್ಸ್ ಸಂಖ್ಯೆ ಬಿಜೆಪಿ, ಕಾಂಗ್ರೆಸ್‌ ಅನ್ನೂ ಮೀರಿ ಬೆಳೆದಿದೆ. ಇಷ್ಟೇ ಅಲ್ಲದೆ, ಸರಣಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳ ಹಿನ್ನೆಲೆಯಲ್ಲಿ ದೇಶದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಈ ಪಕ್ಷ ಆರಂಭಿಸಿದ ಆನ್‌ಲೈನ್ ಸಹಿ ಅಭಿಯಾನಕ್ಕೆ ಈಗಾಗಲೇ ಸುಮಾರು ಆರು ಲಕ್ಷ ಜನ ಸಹಿ ಹಾಕಿದ್ದಾರೆ.

ತೆರೆಯ ಹಿಂದಿನ ಸೂತ್ರಧಾರ ಯಾರು?:

ಸಾಮಾಜಿಕ ಮಾಧ್ಯಮಗಳಲ್ಲಿ ಈ ಪರಿ ಸಂಚಲನಕ್ಕೆ ಕಾರಣವಾದ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ 30 ವರ್ಷದ ಅಭಿಜೀತ್ ದೀಪ್ಕೆ. ಮಹಾರಾಷ್ಟ್ರ ಮೂಲದ ರಾಜಕೀಯ ಸಂವಹನ ತಂತ್ರಜ್ಞನಾಗಿರುವ ಈತ ಸದ್ಯ ಅಮೆರಿಕಾದಲ್ಲಿ ವಾಸಿಸುತ್ತಿದ್ದಾನೆ. ಹಿಂದೆ ಆಮ್ ಆದ್ಮಿ ಪಕ್ಷದೊಂದಿಗೆ ಕೆಲಸ ಮಾಡಿದ ಅನುಭವವಿರುವ ದೀಪ್ಕೆ, ಪ್ರಸ್ತುತ ತನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟಿಲ್ಲ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ದೀಪ್ಕೆಯ ಹಳೆಯ ‘ಆಪ್’ ಇತಿಹಾಸವನ್ನು ಕೆದಕುತ್ತಾ, ಈ ಇಡೀ ಆಂದೋಲನದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ

ಇಂಥಾ ಒಂದು ವೇದಿಕೆಯ ಅವಶ್ಯಕತೆ ಇತ್ತೇ?

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಅಭಿಜೀತ್ ದೀಪ್ಕೆ ಈ ಹಿಂದೆ ತಮ್ಮ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದನ್ನು ಹಾಗೂ ಅವರನ್ನು ತಾವು ಈ ಹಿಂದೆ ಭೇಟಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ, ದೀಪ್ಕೆಯವರಂತೆಯೇ ಸಿಂಗ್ ಕೂಡ ತಮ್ಮ ಪಕ್ಷವೇ ‘ಕಾಕ್ರೋಚ್ ಜನತಾ ಪಾರ್ಟಿ’ವನ್ನು ತೆರೆಯ ಮರೆಯಿಂದ ಮುನ್ನಡೆಸುತ್ತಿದೆ ಎಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯಾವುದೇ ನಂಟಿಲ್ಲ ಎಂದು ನಿರಾಕರಿಸಿದ್ದರೂ ದೀಪ್ಕೆ ಅವರ ಈ ಹೊಸ ಪ್ರಯತ್ನವನ್ನು ಸಂಜಯ್ ಸಿಂಗ್ ಮುಕ್ತವಾಗಿ ಸ್ವಾಗತಿಸಿ, ಅಭಿಯಾನಕ್ಕೆ ತಮ್ಮ ಶುಭ ಹಾರೈಕೆಗಳನ್ನೂ ತಿಳಿಸಿದ್ದಾರೆ. ಯುವಜನರು ತಮ್ಮ ಆಕ್ರೋಶವನ್ನು ಹೊರಹಾಕಲು ಇಂತಹದೊಂದು ಪರ್ಯಾಯ ವೇದಿಕೆಯ ಅವಶ್ಯಕತೆಯಿತ್ತು ಎಂದಿರುವ ಅವರು, "ಈ ಕಿಡಿ ಎಂತಹ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂಬುದನ್ನು ನಾವು ಕಾದು ನೋಡಬೇಕಿದೆ" ಎಂದಿದ್ದಾರೆ.

ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧದಿಂದ ಉಂಟಾದ ‘ಆರ್ಥಿಕ ಬಿಕ್ಕಟ್ಟು’ ಮತ್ತು ಮೋದಿ ಸರ್ಕಾರದ ವಿದೇಶಾಂಗ ನೀತಿಯಿಂದಾಗಿ ಅದು ಮತ್ತಷ್ಟು ಉಲ್ಬಣಗೊಂಡಿರುವುದೇ ‘ಕಾಕ್ರೋಚ್ ಜನತಾ ಪಾರ್ಟಿ’ ಜಾಲತಾಣಗಳಲ್ಲಿ ಈ ಪರಿ ಜನಪ್ರಿಯತೆ ಗಳಿಸಲು ಕಾರಣ ಎಂದು ಸಿಂಗ್ ವಾದಿಸಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ಸೃಷ್ಟಿಯಾಗಿರುವ ಹಣದುಬ್ಬರವು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂಬುದು ಅವರು ಹೇಳಿದ್ದಾರೆ.

ಈ ಹಣದುಬ್ಬರಕ್ಕೆ ನರೇಂದ್ರ ಮೋದಿಯೇ ಕಾರಣ ಎಂದು ನೇರವಾಗಿ ದೂಷಿಸಿದ ಸಿಂಗ್, ಅಮೆರಿಕದ ಒತ್ತಡಕ್ಕೆ ಮಣಿದು ಮೋದಿ ಸರ್ಕಾರವು ಇರಾನ್ ಮತ್ತು ರಷ್ಯಾದಿಂದ ತೈಲ ಆಮದನ್ನು ಕಡಿತಗೊಳಿಸಿದೆ ಎಂದು ಆರೋಪಿಸಿದ್ದಾರೆ. "ಕಾಕ್ರೋಚ್ ಜನತಾ ಪಾರ್ಟಿ ಸರ್ಕಾರದ ನೀತಿಗಳ ವಿರುದ್ಧದ ಸಾರ್ವಜನಿಕ ಆಕ್ರೋಶದ ಪ್ರತಿಬಿಂಬವಾಗಿದೆ. ವಿರೋಧ ಪಕ್ಷಗಳು ಇದರಿಂದ ದೂರ ಉಳಿಯುವುದೇ ಲೇಸು. ನಾವು ಅವರ ಹಿಂದೆ ನಿಲ್ಲಲು ಪ್ರಯತ್ನಿಸಿದರೆ, ಅದು ಅವರ ವಿಶ್ವಾಸಾರ್ಹತೆಯನ್ನೇ ಅಪಾಯಕ್ಕೆ ದೂಡಬಹುದು" ಎಂದು ಅವರು ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿರುವ ಸಮಾಜವಾದಿ ಪಕ್ಷದ ನಾಯಕರು ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಹಲವಾರು ಕಾರಣಗಳಿಂದಾಗಿ ದೇಶದ ಯುವಜನರಲ್ಲಿ ತೀವ್ರ ಅಸಮಾಧಾನ ಆವರಿಸಿದೆ" ಎಂದು ಸಮಾಜವಾದಿ ಪಕ್ಷದ ವಕ್ತಾರ ಉದಯವೀರ್ ಸಿಂಗ್ ಹೇಳಿದ್ದಾರೆ. "ಯಾವುದೇ ಒಂದು ವಿಷಯವನ್ನು ರಾಜಕೀಯ ಪಕ್ಷದ ಚೌಕಟ್ಟಿನಿಂದ ಹೊರಗೆ ತಂದು ಚರ್ಚಿಸಿದಾಗ, ಅದಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಬೆಂಬಲ ಸಿಗುತ್ತದೆ. ಅದೇ ವಿಷಯವನ್ನು ಯಾವುದಾದರೂ ರಾಜಕೀಯ ಪಕ್ಷ ಎತ್ತಿಹಿಡಿದರೆ, 'ನೀವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ?' ಎಂಬ ಪ್ರಶ್ನೆ ಎದುರಾಗುತ್ತದೆ. ಆಗ ಇಡೀ ಚರ್ಚೆಯು ಸೈದ್ಧಾಂತಿಕವಾಗಿ ಬದಲಾಗಿ, ಪರ-ವಿರೋಧದ ರೂಪ ಪಡೆದುಕೊಳ್ಳುತ್ತದೆ.

ವಿರೋಧ ಪಕ್ಷಗಳು ಸರ್ಕಾರದ ನೀತಿಗಳನ್ನು ಟೀಕಿಸುವಾಗ, ತಮ್ಮ ಹಳೆಯ ಆಡಳಿತಾವಧಿಯ ದಾಖಲೆಗಳ ಕುರಿತಾದ ಪ್ರಶ್ನೆಗಳನ್ನು ಎದುರಿಸುವುದರ ಜೊತೆಗೆ, ತಾವಾಗಿದ್ದರೆ ಏನು ಮಾಡುತ್ತಿದ್ದೆವು ಎಂಬ ಪರ್ಯಾಯ ನೀತಿ ಹಾಗೂ ಯೋಜನೆಗಳನ್ನು ಜನರ ಮುಂದಿಡಬೇಕಾಗುತ್ತದೆ. ಆದರೆ, ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುವ ಇಂತಹ ಅಭಿಯಾನಗಳಿಗೆ ಅಂತಹ ಯಾವುದೇ ಮುಜುಗರ ಅಥವಾ ನಿರೀಕ್ಷೆಗಳ ಹಂಗಿರುವುದಿಲ್ಲ.

ಮೇ 20 ರಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕಾಕ್ರೋಚ್ ಜನತಾ ಪಾರ್ಟಿಯನ್ನು ಕೇಂದ್ರದ ಆಡಳಿತಾರೂಢ ಪಕ್ಷದ ವಿರುದ್ಧ ನೇರ ಕಣಕ್ಕಿಳಿಸಿದ್ದರು. "ಬಿಜೆಪಿ ವಿರುದ್ಧ ಸಿಜೆಪಿ " ಎಂದು ಅವರು ತಮ್ಮ 'X' ಖಾತೆಯಲ್ಲಿ ಬರೆದುಕೊಂಡಿದ್ದರು.

ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಡೆರೆಕ್ ಒಬ್ರಿಯಾನ್ ಕೂಡ ಯಾದವ್ ಅವರ ಮಾತನ್ನೇ ಧ್ವನಿಸಿದ್ದಾರೆ. ಅವರ ಪ್ರಕಾರ, ಕಾಕ್ರೋಚ್ ಜನತಾ ಪಾರ್ಟಿ ಕೇವಲ ಸಾಮಾಜಿಕ ಮಾಧ್ಯಮಗಳಿಗಷ್ಟೇ ಸೀಮಿತವಾಗದೆ, ಬಿಜೆಪಿಯೇತರ ಪಕ್ಷಗಳನ್ನೆಲ್ಲ ಒಂದೇ ವೇದಿಕೆಗೆ ತರುವ ಸಾಮರ್ಥ್ಯ ಹೊಂದಿದೆ.

"2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ ಶೇ. 37ರಷ್ಟು ಮತಗಳು ಮಾತ್ರ. ಸ್ಪಷ್ಟ ಬಹುಮತಕ್ಕೆ ಅವರಿಗೆ ಇನ್ನೂ 32 ಸ್ಥಾನಗಳ ಕೊರತೆಯಿದೆ. ಹೀಗಿರುವಾಗ ಬಿಜೆಪಿಯನ್ನು ಎದುರಿಸುವ ಯಾವುದೇ ವೇದಿಕೆಯನ್ನಾದರೂ ನಾವು ಸ್ವಾಗತಿಸುತ್ತೇವೆ. ನಮ್ಮದೇ ಸೈದ್ಧಾಂತಿಕ ನಿಲುವು ಹೊಂದಿರುವ ಹಲವು ಪಕ್ಷಗಳು ಈ ಅಭಿಯಾನದ ಜೊತೆ ಕೈಜೋಡಿಸಲಿವೆ," ಎಂದಿದ್ದಾರೆ ಒಬ್ರಿಯಾನ್.

ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದರಲ್ಲಿ ಈ ಸಂಸದರು, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು "ಜಿರಳೆಗಳ (ಕಾಕ್ರೋಚ್ ಜನತಾ ಪಾರ್ಟಿ) ಕುರಿತು ತಮ್ಮ ಒಲವು ಹಾಗೂ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ" ಎಂದು ಹೇಳಿದ್ದಾರೆ.

ಕೇವಲ ‘ಕ್ಷಣಿಕ ಆಕರ್ಷಣೆ’:

ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಈ ಕಾಕ್ರೋಚ್ ಟ್ರೆಂಡ್ ಕುರಿತು ಅಷ್ಟೇನೂ ಸಂತೋಷಗೊಂಡಿಲ್ಲ. ಕಾಂಗ್ರೆಸ್‌ನ ಯುವ ಘಟಕವಾದ ‘ಇಂಡಿಯನ್ ಯೂತ್ ಕಾಂಗ್ರೆಸ್’, ಈ ಜಿರಳೆ ಜನತಾ ಪಕ್ಷದ ಜಾಲತಾಣದ ಮಾದರಿಯಲ್ಲೇ ತನ್ನದೇ ಆದ ಹೊಸ ವೆಬ್‌ಸೈಟ್‌ ಒಂದನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲದೆ, ‘ಇಂಡಿಯನ್ ಯೂತ್ ಕಾಕ್ರೋಚಸ್’ (Indian Youth Cockroaches) ಹೆಸರಿನಲ್ಲಿ ಹೊಸ ‘X’ ಖಾತೆಯನ್ನು ತೆರೆದಿದೆ. "ಅಸಲಿ ಜಿರಳೆಗಳು ಬೀದಿಗೆ ಇಳಿದು ಹೋರಾಡುತ್ತವೆಯೇ ಹೊರತು, ಕೇವಲ ಸೋಶಿಯಲ್ ಮೀಡಿಯಾ ಟೈಮ್‌ಲೈನ್‌ಗಳಲ್ಲಿ ಅಲ್ಲ" ಎಂದು ಅದು ತನ್ನ ಬಯೋದಲ್ಲಿ ಬರೆದುಕೊಳ್ಳುವ ಮೂಲಕ ತಿರುಗೇಟು ನೀಡಿದೆ.

ಕಾಂಗ್ರೆಸ್‌ನ ಪ್ರಮುಖ ಮತ್ತು ಹಿರಿಯ ನಾಯಕರು ಯುವಜನರ ಸಮಸ್ಯೆಗಳ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದರೂ, ಈ ಕಾಕ್ರೋಚ್ ಜನತಾ ಪಕ್ಷಕ್ಕೆ ಬೆಂಬಲ ನೀಡುವುದರಿಂದ ಮಾತ್ರ ಇದುವರೆಗೆ ಅಂತರ ಕಾಯ್ದುಕೊಂಡಿದ್ದಾರೆ.

"ನಾನು ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಯಾವುದೋ ಲಿಂಕ್ ಮೇಲೆ ಕ್ಲಿಕ್ ಮಾಡಿ, ತಾವೂ ರಾಜಕೀಯವಾಗಿ ಸಕ್ರಿಯರಾಗಿದ್ದೇವೆ ಎಂದು ಜನರು ಅಂದುಕೊಳ್ಳುವುದು ಕೇವಲ ಮೂರ್ಖತನ. ಇದು ಆಮ್ ಆದ್ಮಿ ಪಕ್ಷದ ಆರಂಭದ ದಿನಗಳಲ್ಲಿದ್ದಂತೆ ಕೇವಲ ಒಂದು ಕ್ಷಣಿಕ ಆಕರ್ಷಣೆಯಷ್ಟೇ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಜನಸಂಪರ್ಕ ವಿಭಾಗದ ಹೊಸ ರೂಪವಾದ ‘ರಚನಾತ್ಮಕ್ ಕಾಂಗ್ರೆಸ್’ನ ಅಧ್ಯಕ್ಷರಾಗಿರುವ ದೀಕ್ಷಿತ್, ನಾಗರಿಕ ಸಮಾಜದೊಂದಿಗೆ ಒಡನಾಟ ಇಟ್ಟುಕೊಂಡು "ನೆಲದ ಮೇಲಿನ ವಾಸ್ತವ ಹೋರಾಟಗಳೊಂದಿಗೆ ಕಾಂಗ್ರೆಸ್ ಅನ್ನು ಜೋಡಿಸುವ" ಜವಾಬ್ದಾರಿ ಹೊತ್ತಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡ ರೀತಿ ಸೃಜನಾತ್ಮಕವಾಗಿದ್ದರೂ, ಅದು ಕೇವಲ ಸಾಮಾಜಿಕ ಮಾಧ್ಯಮ ಬಳಕೆದಾರರ ಕುತೂಹಲದ ಲಾಭ ಪಡೆಯುತ್ತಿದೆಯಷ್ಟೇ.ಮತ್ತೆಲ್ಲೋ ಜನ ಹಿಂಬಾಲಿಸುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ನೀವು ಹೋಗಿ ಒಂದು ಇನ್‌ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡುತ್ತೀರಿ. ಅದಕ್ಕಿರುವ ಫಾಲೋವರ್ಸ್‌ಗಳ ಸಂಖ್ಯೆಯೇ ನಿಮ್ಮನ್ನು ಆಕರ್ಷಿಸುತ್ತಿರುತ್ತದೆ. ಹಳೆಯ ದಿನಗಳಲ್ಲಿ ಸಿನಿಮಾ ಒಂದು ಗೋಲ್ಡನ್ ಜುಬಿಲಿ ಆಚರಿಸಿತು ಎಂದ ತಕ್ಷಣ ಅದನ್ನು ನೋಡಲು ಜನ ಮುಗಿಬೀಳುತ್ತಿದ್ದರಲ್ಲ, ಇದು ಕೂಡ ಹಾಗೆಯೇ."

ಯುವಜನರು ತಮ್ಮ ಆಕ್ರೋಶವನ್ನು ಹೊರಹಾಕಲು ʼಕಾಕ್ರೋಚ್ ಜನತಾ ಪಾರ್ಟಿʼ ಒಂದು ಅತ್ಯುತ್ತಮ ವೇದಿಕೆ ಎಂದು ಮುಕ್ತವಾಗಿ ಸ್ವಾಗತಿಸಿರುವ ತನ್ನದೇ ಮಿತ್ರಪಕ್ಷಗಳ ನಿಲುವಿಗೆ ತದ್ವಿರುದ್ಧವಾಗಿ, ದೀಕ್ಷಿತ್ ಇದನ್ನು ಒಂದು ಆತಂಕಕಾರಿ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.

Tags

Cockroach Janata PartyindiaCongress
share
ವಾರ್ತಾಭಾರತಿ
ವಾರ್ತಾಭಾರತಿ
Next Story
X