Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅನ್ವಯಿಕ ಶುಲ್ಕ ಪಾವತಿಸದೆ...

ಅನ್ವಯಿಕ ಶುಲ್ಕ ಪಾವತಿಸದೆ ತಪ್ಪಿಸಿಕೊಳ್ಳುತ್ತಿರುವ ಗುತ್ತಿಗೆದಾರರು

ರಾಜ್ಯ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟ

-ಜಿ.ಮಹಾಂತೇಶ್-ಜಿ.ಮಹಾಂತೇಶ್10 Jun 2025 7:57 AM IST
share
ಅನ್ವಯಿಕ ಶುಲ್ಕ ಪಾವತಿಸದೆ ತಪ್ಪಿಸಿಕೊಳ್ಳುತ್ತಿರುವ ಗುತ್ತಿಗೆದಾರರು

ಬೆಂಗಳೂರು : ಸರಕಾರಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ವಂತಿಕೆ ಸೇರಿದಂತೆ ಇನ್ನಿತರ ಅನ್ವಯಿಕ ಶುಲ್ಕಗಳನ್ನು ಕಟಾಯಿಸಿ ಸರಕಾರಕ್ಕೆ ಸಂದಾಯ ಮಾಡುತ್ತಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗುತ್ತಿರುವ ಪ್ರಕರಣಗಳು ಇದೀಗ ಬಹಿರಂಗವಾಗಿವೆ.

ಹಾಗೆಯೇ ಬಹುತೇಕ ಸರಕಾರಿ ಕಾಮಗಾರಿಗಳಲ್ಲಿ ಬಳಸಲಾಗುತ್ತಿರುವ ಉಪ ಖನಿಜವನ್ನು ಖನಿಜ ರವಾನೆ ಪರವಾನಿಗೆ ಪಡೆಯದೇ ಸಾಗಣೆಯಾಗುತ್ತಿದೆ.

ಸರಕಾರಿ ಅಭಿವೃದ್ದಿ ಕಾಮಗಾರಿಗಳಿಗೆ ಸರಬರಾಜು ಮಾಡುವ ಉಪ ಖನಿಜಗಳ ಸಾಗಣೆಗೆ ಆರ್ಡಿಎಂಡಿಪಿ ವಿತರಿಸಲು ಕ್ರಮ ವಹಿಸುವ ಸಂಬಂಧ ಕಲ್ಲು ಗಣಿಗುತ್ತಿಗೆದಾರರ ಸಂಘವು ಸರಕಾರವನ್ನು ಕೋರಿರುವ ಪತ್ರದಲ್ಲಿ ಡಿಎಂಎಫ್ ಸೇರಿದಂತೆ ಇನ್ನಿತರ ಶುಲ್ಕಗಳನ್ನು ಕಟಾಯಿಸಿ ಸರಕಾರಕ್ಕೆ ಸಂದಾಯ ಮಾಡದಿರುವ ಕುರಿತು ಪ್ರಸ್ತಾವಿಸಿದೆ.

ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಆರ್.ಗಿರೀಶ್ ಅವರು 2025ರ ಮೇ 6ರಂದು ವಾಣಿಜ್ಯ, ಕೈಗಾರಿಕೆ ಇಲಾಖೆಯ (ಗಣಿ) ಸರಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಉಪ ಖನಿಜಗಳನ್ನು ಸಾಗಿಸಲು ಸರಕು ಮತ್ತು ಸೇವಾ ತೆರಿಗೆ ಪೋರ್ಟಲ್ ಮೂಲಕ ಸೃಜಿಸಿರುವ ಇ-ವೇ ಬಿಲ್ಲನ್ನು ಖನಿಜ ಸಾಗಣೆ ಪರವಾನಿಗೆಯೊಂದಿಗೆ (ಎಂಡಿಪಿ) ಏಕೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಅನಧಿಕೃತ ಗಣಿಗಾರಿಕೆ ತಡೆಗೆ ಭದ್ರಾ ಪಡೆಯನ್ನು ನಿಯೋಜಿಸಲಾಗುವುದು ಎಂದು ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಇತ್ತಿಚೆಗಷ್ಟೇ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಗಣಿ ಇಲಾಖೆಯ ನಿರ್ದೇಶಕರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

ಈ ಸಂಬಂಧ ಸಚಿವ ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ಸರಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಅವಶ್ಯವಿರುವ ಉಪ ಖನಿಜಗಳನ್ನು ಕಾಮಗಾರಿ ಗುತ್ತಿಗೆದಾರರು ಕಲ್ಲು ಗಣಿ ಗುತ್ತಿಗೆದಾರರು, ಸ್ಟೋನ್ ಕ್ರಷರ್ ಮಾಲಕರುಗಳಿಂದ ಖರೀದಿಸಿ ಬಳಕೆ ಮಾಡಲಾಗುತ್ತಿದೆ. ಈ ರೀತಿ ಉಪ ಖನಿಜ ಗಣಿ ಗುತ್ತಿಗೆದಾರರು ರಾಜಧನ ಹಾಗೂ ಇತರ ಅನ್ವಯಿಕ ಶುಲ್ಕಗಳನ್ನು ಪಾವತಿಸಿ ಖನಿಜ ರವಾನೆ ಪರವಾನಿಗೆ ಪಡೆದು ಸಾಗಣೆ ಮಾಡಬೇಕು.

ಪರವಾನಿಗೆ ಇಲ್ಲದೆಯೇ ಉಪ ಖನಿಜ ಸಾಗಣೆ :

ಸರಕಾರಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಳಕೆಯಾಗುವ ಉಪ ಖನಿಜಗಳ ಪ್ರಮಾಣಕ್ಕೆ ಕಾಮಗಾರಿ ಬಿಲ್‌ಗಳಲ್ಲಿ ಕಾಮಗಾರಿ ನಿರ್ವಹಿಸುವ ಇಲಾಖೆ, ಏಜೆನ್ಸಿ ಅವರು ಕಟಾಯಿಸಿ ಸರಕಾರದ ಲೆಕ್ಕಶೀರ್ಷಿಕೆಗೆ ಪಾವತಿಸಬೇಕು. ಬಹುತೇಕ ಸರಕಾರಿ ಕಾಮಗಾರಿಗಳಲ್ಲಿ ಬಳಸಲಾಗುತ್ತಿರುವ ಉಪ ಖನಿಜವನ್ನು ಖನಿಜ ರವಾನೆ ಪರವಾನಿಗೆ ಪಡೆಯದೇ ಸಾಗಣೆಯಾಗುತ್ತಿದೆ ಎಂಬ ಸಂಗತಿಯ ಕುರಿತು ಪತ್ರದಲ್ಲಿ ಗಣಿ ಇಲಾಖೆ ನಿರ್ದೇಶಕರು ವಿವರಿಸಿರುವುದು ಗೊತ್ತಾಗಿದೆ.

ಸರಕಾರಿ ಕಾಮಗಾರಿ ನಿರ್ವಹಿಸುವ ಇಲಾಖೆ, ಸಂಸ್ಥೆಗಳಿಂದ ಕಾಮಗಾರಿ ಹಂಚಿಕೆ ಪಡೆದ ಗುತ್ತಿಗೆದಾರು ಕಾಮಗಾರಿಗಳಿಗೆ ಅಗತ್ಯವಿರುವ ಉಪ ಖನಿಜಗಳ ಪೂರೈಕೆಗಾಗಿ ಕಾಮಗಾರಿ ಕೈಗೊಳ್ಳುವ ಪ್ರದೇಶಕ್ಕೆ ಹತ್ತಿರವಿರುವ ಉಪ ಖನಿಜ ಗಣಿ ಗುತ್ತಿಗೆ, ಸ್ಟೋನ್ ಕ್ರಷರ್ ಘಟಕಗಳ ವಿವರಗಳ ಮಾಹಿತಿಯನ್ನು ಒದಗಿಸಲು ಸೂಚಿಸಬಹುದು.

ಅಂದಾಜುಪಟ್ಟಿಯಂತೆ ಅಗತ್ಯವಿರುವ ವಿವಿಧ ನಮೂನೆಯ ಕಟ್ಟಡ ಕಲ್ಲಿನ ಉತ್ಪನ್ನಗಳು, ಮರಳು ಇತ್ಯಾದಿಗಳನ್ನು ಉಪಖನಿಜ ಗಣಿ ಗುತ್ತಿಗೆಗಳ, ಸ್ಟೋನ್ ಕ್ರಷರ್‌ಗಳ ಘಟಕ ಖರೀದಿಸುವ ಸಂಬಂಧ ಕಾಮಗಾರಿ ಗುತ್ತಿಗೆದಾರರಿಗೆ ಬೇಡಿಕೆ ಚೀಟಿ ನೀಡಬಹುದು. ಐಎಲ್‌ಎಂಎಸ್ ತಂತ್ರಾಂಶದ ಮೂಲಕ ಲಾಗಿನ್ ಐ ಡಿ ನೀಡಬಹುದು. ಎಷ್ಟು ಪ್ರಮಾಣದ ಉಪ ಖನಿಜಗಳನ್ನು ಖರೀದಿ ಮಾಡಲಾಗುವುದು ಎಂಬ ಮಾಹಿತಿಯನ್ನು ಅಪ್ಲೋಡ್ ಮಾಡಬಹುದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸರಕಾರಕ್ಕೆ ಪಾವತಿಸಬೇಕಾದ ರಾಜಧನ, ಹೆಚ್ಚುವರಿ ಪಾವತಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ವಂತಿಕೆ ಹಾಗೂ ಅನ್ವಯಿಕ ಶುಲ್ಕಗಳನ್ನು ಬಿಲ್ ಮಾಡುವ ಸಂದರ್ಭದಲ್ಲಿ ಕಟಾಯಿಸಬೇಕು. ಇದಕ್ಕೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆ, ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಪತ್ರದಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

ನೋಂದಾಯಿತರಲ್ಲದ ವರ್ತಕರಿಂದ ಸಾವಿರಾರು ಕೋಟಿ ರೂ. ಮೌಲ್ಯದ ಕಬ್ಬಿಣದ ಅದಿರನ್ನು ಬೇನಾಮಿಗಳು ಖರೀದಿಸುತ್ತಿರುವ ದಂಧೆಯು ದೊಡ್ಡ ಪ್ರಮಾಣದಲ್ಲಿದೆ. ಈ ಎಲ್ಲಾ ಮಾಹಿತಿಯೂ ಸ್ಥಳೀಯ ಪೊಲೀಸರಿಗೆ ವಿಳಾಸ ಸಮೇತವೂ ಗೊತ್ತಿದೆ ಎಂದು ಖುದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಬಹಿರಂಗಪಡಿಸಿತ್ತು.

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಈ ದಂಧೆಯನ್ನು ತನಿಖೆ ಮಾಡಲು ಹಾಗೂ ತಾರ್ಕಿಕ ತೀರ್ಮಾನ ತೆಗೆದುಕೊಳ್ಳಲು ಈ ಎಲ್ಲಾ ಪ್ರಕರಣಗಳನ್ನು ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಸರಕಾರದ ಉನ್ನತಾಧಿಕಾರಕ್ಕೆ ಇಲಾಖೆಯು ಕೋರಿರುವುದು ತಿಳಿದು ಬಂದಿದೆ. ಆದರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು.

ಫಾರ್ಮ್ ವ್ಯಾಟ್ 100ರಲ್ಲಿ ಸಲ್ಲಿಸಿದ ರಿರ್ಟನ್ಸ್‌ನಲ್ಲಿ ನೋಂದಾಯಿಸದ ಡೀಲರ್‌ಗಳಿಂದ ಕಬ್ಬಿಣದ ಅದಿರನ್ನು ಖರೀದಿಸಿದ್ದಾರೆ ಎಂಬ ಮಾಹಿತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಖಚಿತಪಡಿಸಿಕೊಂಡಿತ್ತು. ಈ ಸಂಬಂಧ ನೀಡಿದ್ದ ನೋಟಿಸ್‌ಗಳಿಗೆ 23 ಡೀಲರ್‌ಗಳು ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂಬುದನ್ನೂ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಗಮನಕ್ಕೆ ತಂದಿತ್ತು.

ಈ ಕುರಿತು ಹೊಸಪೇಟೆಯಲ್ಲಿ ಪರಿಶೀಲನೆ ನಡೆಸಿದಾಗ ಬೇನಾಮಿ ಹೆಸರಿನಲ್ಲಿ ಹಲವು ದಂಧೆ ನಡೆಯುತ್ತಿರುವುದು ಖಚಿತವಾಗಿದೆ. ಸ್ಥಳೀಯ ಪೊಲೀಸರಿಗೆ ವಿವರ, ವಿಳಾಸ ಹಾಗೂ ಎಲ್ಲಿದ್ದಾರೆ ಎಂಬುದು ಖಚಿತವಾಗಿದೆ. ಇಡೀ ಸಮಸ್ಯೆಯು ದೊಡ್ಡ ಪ್ರಮಾಣದಲ್ಲಿದೆ. ಮತ್ತು ಕೆಲವು ಸಾವಿರ ಕೋಟಿಗಳನ್ನು ಒಳಗೊಂಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತನ್ನ ವರದಿಯಲ್ಲಿ ವಿವರಿಸಿತ್ತು.

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ದಂಧೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಸ್ಥಳೀಯ ಪೊಲೀಸರಿಗೆ ಗೊತ್ತಿದ್ದರೂ ಸಹ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು. ಹೀಗಾಗಿ ಸಂಪೂರ್ಣ ಸಮಸ್ಯೆಯನ್ನು ಸಮರ್ಥ ಮತ್ತು ಸೂಕ್ತ ತನಿಖಾ ಸಂಸ್ಥೆಗೆ ವಹಿಸಿಕೊಡಬೇಕು ಎಂದು ಇಲಾಖೆಯು ಸರಕಾರವನ್ನು ಕೋರಿತ್ತು.

ಸಿಎಜಿ ಆಕ್ಷೇಪಣೆಯಲ್ಲೇನಿತ್ತು?

2006-07ರಿಂದ 2009-10ರ ಅವಧಿಯಲ್ಲಿ 97 ವರ್ತಕರು 508.27 ಕೋಟಿ ರೂ. ಮೌಲ್ಯದ ಕಬ್ಬಿಣದ ಅದಿರನ್ನು ನೋಂದಾಯಿತರಲ್ಲದ ವರ್ತಕರಿಂದ ಖರೀದಿಸಿದ್ದರು. ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗದಲ್ಲೂ ಇಂತಹ ಪ್ರಕರಣಗಳಿದ್ದವು.

ಆದರೂ ಸಂಬಂಧಿತ ವರ್ತಕರು ಇರಲಿಲ್ಲ ಹಾಗೂ ಉಪ ನಿರ್ದೇಶಕರ ಕಚೇರಿಯು ಅವರನ್ನು ಕಂಡು ಹಿಡಿಯಲಿಲ್ಲ. ಈ ಕುರಿತು ಇಲಾಖೆಯು ಹೆಚ್ಚಿನ ಪ್ರಗತಿಯನ್ನು ಸಾಧಿಸಲಿಲ್ಲ. ಗಣಿ ಭೂ ವಿಜ್ಞಾನ ಇಲಾಖೆಯ ಜಾರಿ ವಿಭಾಗವು ದುರ್ಬಲವಾಗಿತ್ತು. ಕಬ್ಬಿಣದ ಅದಿರಿನ ಮಾರಾಟಗಳಲ್ಲಿ ನಿರತವಾಗಿರುವ ನೋಂದಾಯಿತರಲ್ಲದ ವರ್ತಕರನ್ನು ಕಂಡು ಹಿಡಿಯಲಿಲ್ಲ ಹಾಗೂ ಖನಿಜವನ್ನು ಇಲಾಖೆಯ ಅರಿವಿಗೆ ಬಾರದಂತೆ ರವಾನಿಸಲಾಗುತ್ತಿತ್ತು.

ಕಬ್ಬಿಣ ಅದಿರಿನ ವ್ಯವಹಾರದಲ್ಲಿ ನಿರತರಾಗಿರುವ ಎಲ್ಲಾ ವರ್ತಕರನ್ನೂ ನೋಂದಾಯಿಸಲು ಒಂದು ವ್ಯವಸ್ಥೆಯ ಅನುಪಸ್ಥಿತಿ ಹಾಗೂ ವಾಣಿಜ್ಯ ತೆರಿಗೆಗಳ ಇಲಾಖೆಯ ಜೊತೆ ಸಮನ್ವಯತೆಯಲ್ಲಿನ ಸಮಯೋಚಿತ ಕ್ರಮಗಳ ಕೊರತೆಯು 7.09 ಕೋಟಿ (ಮೆಟ್ರಿಕ್ ಟನ್ ಒಂದಕ್ಕೆ 11 ರೂ.ನಂತೆ) ಮೊತ್ತದಷ್ಟು ರಾಜಧನವು ನಷ್ಟ ಉಂಟಾಗುವಲ್ಲಿ ಪರಿಣಿಮಿಸಿತು. ಅಲ್ಲದೇ ಈ ರೀತಿಯಾಗಿ ಅಕ್ರಮವಾಗಿ ಹೊರ ತೆಗೆಯಲಾದ ಕಬ್ಬಿಣ ಅದಿರಿನ ಮೌಲ್ಯವು 508.27 ಕೋಟಿ ರೂ. ಆಗುತ್ತದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

share
-ಜಿ.ಮಹಾಂತೇಶ್
-ಜಿ.ಮಹಾಂತೇಶ್
Next Story
X