2025-26ನೇ ಸಾಲಿನಲ್ಲಿ 13.83 ಲಕ್ಷ ಹೆಕ್ಟೇರ್ನಷ್ಟು ಬೆಳೆ ಹಾನಿ

ಸಾಂದರ್ಭಿಕ ಚಿತ್ರ | Photo credit : AI
ಬೆಂಗಳೂರು : 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 85.91 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಕೃಷಿ ಬೆಳೆ ಬಿತ್ತನೆಯಾಗಿದೆ.
ಹಿಂಗಾರು ಹಂಗಾಮಿನಲ್ಲಿ 19.55 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಮಾಡಲಾಗಿದ್ದು, ನೈರುತ್ಯ ಮಾರುತದಲ್ಲಿ ಹೆಚ್ಚಿನ ಮಳೆ, ಅತಿವೃಷ್ಟಿಯಿಂದಾಗಿ ಒಟ್ಟು 13.83 ಲಕ್ಷ ಹೆಕ್ಟೇರ್ನಷ್ಟು ಕೃಷಿ ಬೆಳೆಗಳು ಹಾನಿಯಾಗಿರುವುದು ತಿಳಿದು ಬಂದಿದೆ.
ಕಲಬುರಗಿ 3.24 ಲಕ್ಷ ಹೆಕ್ಟೇರ್, ವಿಜಯಪುರ 3.15 ಲಕ್ಷ ಹೆಕ್ಟೇರ್, ಬೀದರ್ 1.65 ಲಕ್ಷ ಹೆಕ್ಟೇರ್, ಯಾದಗಿರಿ 1.43 ಲಕ್ಷ ಹೆಕ್ಟೇರ್ ಹಾಗೂ ಗದಗ ಜಿಲ್ಲೆಯಲ್ಲಿ 1.22 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುತ್ತದೆ. ತೊಗರಿ, ಹೆಸರು, ಹತ್ತಿ, ಮುಸುಕಿನ ಜೋಳ ಹಾಗೂ ಸೋಯಾ ಅವರೆ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವುದು ಕಂಡು ಬಂದಿದೆ.
ರಾಜ್ಯದಲ್ಲಿ ಒಟ್ಟು 114.40 ಲಕ್ಷ ಹೆಕ್ಟೇರ್ ಕೃಷಿ ವಿಸ್ತೀರ್ಣದ ಗುರಿ ಹೊಂದಲಾಗಿದ್ದು, 109.46 ಲಕ್ಷ ಹೆಕ್ಟೇರ್ ಮಾತ್ರ ಸಾಧನೆಯಾಗಿದೆ.
ಅಂದರೆ ನಿಗದಿತ ಗುರಿಯಲ್ಲಿ ಶೇ.95.7ರಷ್ಟು ಸಾಧನೆಯಾಗಿದೆ. ಆಹಾರ ಧಾನ್ಯಗಳ ಪೈಕಿ ಏಕದಳ ಬೆಳೆಗಳ ವಿಸ್ತೀರ್ಣ 51.35 ಲಕ್ಷ ಹೆಕ್ಟೇರ್ ಗುರಿಗೆ ಪ್ರತಿಯಾಗಿ 50.05 ಲಕ್ಷ ಹೆಕ್ಟೇರ್ ಸಾಧನೆಯಾಗಿದ್ದು, ಉತ್ಪಾದನೆ ಮಾತ್ರ 125.99 ಲಕ್ಷ ಟನ್ ಗುರಿಯನ್ನು ಮೀರಿ 128.32 ಲಕ್ಷ ಟನ್ ತಲುಪಿದೆ.
ದ್ವಿದಳ ಧಾನ್ಯಗಳ ವಿಸ್ತೀರ್ಣ 33.89 ಲಕ್ಷ ಹೆಕ್ಟೇರ್ ಗುರಿಗೆ 30.50 ಲಕ್ಷ ಹೆಕ್ಟೇರ್ ಸಾಧನೆಯಾಗಿದ್ದು, ಉತ್ಪಾದನೆಯೂ 22.49 ಲಕ್ಷ ಟನ್ ಗುರಿಗೆ ಪ್ರತಿಯಾಗಿ 15.50 ಲಕ್ಷ ಟನ್ಗೆ ಸೀಮಿತವಾಗಿದೆ. ಇದೇ ರೀತಿ ಎಣ್ಣೆಕಾಳುಗಳ ವಿಸ್ತೀರ್ಣ 12.39 ಲಕ್ಷ ಹೆಕ್ಟೇರ್ ಗುರಿಗೆ 8.94 ಲಕ್ಷ ಹೆಕ್ಟೇರ್ ಹಾಗೂ ಉತ್ಪಾದನೆ 12.20 ಲಕ್ಷ ಟನ್ ಗುರಿಗೆ 8.58 ಲಕ್ಷ ಟನ್ ಮಾತ್ರ ದಾಖಲಾಗಿದೆ.
ವಾಣಿಜ್ಯ ಬೆಳೆಗಳ ಪೈಕಿ ಹತ್ತಿಯ ಉತ್ಪಾದನೆ 24.50 ಲಕ್ಷದ ಗುರಿಗೆ ಪ್ರತಿಯಾಗಿ 21.22 ಲಕ್ಷ ಟನ್, ಕಬ್ಬಿನ ಉತ್ಪಾದನೆ 757.58 ಲಕ್ಷದ ಗುರಿಗೆ ಪ್ರತಿಯಾಗಿ 572.63 ಲಕ್ಷ ಟನ್ ಹಾಗೂ ತಂಬಾಕಿನ ಉತ್ಪಾದನೆ 0.62 ಲಕ್ಷದ ಗುರಿಗೆ ಪ್ರತಿಯಾಗಿ 0.27 ಲಕ್ಷ ಟನ್ ದಾಖಲಾಗಿದೆ. ಒಟ್ಟಾರೆ ಏಕದಳ ಧಾನ್ಯಗಳ ಉತ್ಪಾದನೆ ಗುರಿಯನ್ನು ಮೀರಿರುವುದು ಸಮಾಧಾನಕರ ಸಂಗತಿಯಾದರೂ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಹಾಗೂ ವಾಣಿಜ್ಯ ಬೆಳೆಗಳ ಉತ್ಪಾದನೆಯಲ್ಲಿ ನಿರೀಕ್ಷಿತ ಸಾಧನೆ ಕಂಡುಬಂದಿಲ್ಲ.
ಪ್ರಮುಖ ಬೆಳೆಗಳ ಉತ್ಪಾದನಾ ವಿವರ (ಲಕ್ಷ ಟನ್ಗಳಲ್ಲಿ, ಹತ್ತಿ-ಲಕ್ಷ ಬೇಲ್ಗಳಲ್ಲಿ)
ಬೆಳೆಗಳು -ಭಾರತ - ಕರ್ನಾಟಕ
ಅಕ್ಕಿ - 1540.24 - 37.49
ರಾಗಿ - 20.00 - 14.74
ಜೋಳ - 550.93 - 65.48
ತೊಗರಿ - 35.92 - 7.30
ಕಡಲೆ - 125.14 - 3.96
ಹತ್ತಿ - 290.24 - 21.22
ಕಬ್ಬು - 5000.63 - 572.63






