ಭಾರಿ ಹ್ಯಾಕ್ ದೃಢಪಡಿಸಿದ ಬೈನಾನ್ಸ್ ಕ್ರಿಪ್ಟೊ ಎಕ್ಸ್ ಚೇಂಜ್; 2.5 ಶತಕೋಟಿ ಡಾಲರ್ ಗೂ ಮೀರಿದ ಹಣ ಫ್ರೀಝ್!

Photo Credit : binance.com
ಬ್ಲಾಕ್ ಚೈನ್ ವಿಶ್ಲೇಷಣಾ ಕಂಪೆನಿ ಚೈನಾಲಿಸಿಸ್ ಪ್ರಕಾರ, ಕಳ್ಳತನದ ಸಮಯದಲ್ಲಿ ಕದ್ದ ಮೊತ್ತದ ಪ್ರಸ್ತುತ ಅಂದಾಜು ಸುಮಾರು 5.912 ಶತಕೋಟಿ ಡಾಲರ್ ಆಗಿದೆ. ಅಂದರೆ, ಈವರೆಗಿನ ಸೈಬರ್ ದಾಳಿಗಳಲ್ಲಿ ಕದಿಯಲಾದ ಅತಿದೊಡ್ಡ ಮೊತ್ತಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು!
ಕ್ರಿಪ್ಟೊಕರೆನ್ಸಿ ಪ್ಲಾಟ್ ಫಾರ್ಮ್ ಬೈನಾನ್ಸ್ ಗುರುವಾರ ದೊಡ್ಡ ಹ್ಯಾಕ್ಗೆ ಬಲಿಯಾಗಿದೆ ಮತ್ತು ಬೃಹತ್ ಕಳ್ಳತನವನ್ನು ತಡೆಗಟ್ಟುವ ಪ್ರಯತ್ನದಲ್ಲಿ 2.5 ಶತಕೋಟಿ ಡಾಲರ್ ಗೂ ಹೆಚ್ಚಿನ ಹಣವನ್ನು ತಡೆಹಿಡಿಯಲಾಗಿದೆ ಎಂದು ಸೂಚಿಸಿದೆ. ದೈನಂದಿನ ವ್ಯಾಪಾರದ ಪ್ರಮಾಣದಲ್ಲಿ ವಿಶ್ವದ ಅತಿದೊಡ್ಡ ಕ್ರಿಪ್ಟೊ ವಿನಿಮಯ ಕೇಂದ್ರವಾಗಿರುವ ಕಂಪೆನಿಯು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ, “ಬಳಕೆದಾರರ ಹಣ ಸಂಪೂರ್ಣ ಸುರಕ್ಷಿತವಾಗಿದೆ” ಎಂಬ ಸಂದೇಶವನ್ನು ಹಾಕಿದೆ. ಜೊತೆಗೆ, “ಎಲ್ಲಾ ನಷ್ಟಗಳನ್ನು ಸರಿದೂಗಿಸಲಾಗುವುದು” ಎಂದೂ ಹೇಳಿಕೊಂಡಿದೆ.
ಹ್ಯಾಕ್ ಮೂಲಕ ನಡೆದ ಕಳ್ಳತನದ ವ್ಯಾಪ್ತಿ ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ, ಬ್ಲಾಕ್ ಚೈನ್ ವಿಶ್ಲೇಷಣಾ ಕಂಪೆನಿ ಚೈನಾಲಿಸಿಸ್ ಪ್ರಕಾರ, “ಕಳ್ಳತನದ ಸಮಯದಲ್ಲಿ ಕದ್ದ ಮೊತ್ತದ ಪ್ರಸ್ತುತ ಅಂದಾಜು ಸುಮಾರು 5.912 ಶತಕೋಟಿ ಡಾಲರ್ ಆಗಿದೆ. ಅಂದರೆ, ಈವರೆಗಿನ ಸೈಬರ್ ದಾಳಿಗಳಲ್ಲಿ ಕದಿಯಲಾದ ಅತಿದೊಡ್ಡ ಮೊತ್ತಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು!”
ಉತ್ತರ ಕೊರಿಯಾದೊಂದಿಗೆ ಸಂಯೋಜಿತವಾಗಿರುವ ಹ್ಯಾಕರ್ ಗಳು ಕದ್ದಿದ್ದಾರೆ ಎನ್ನಲಾಗಿರುವ 2025ರ ಫೆಬ್ರುವರಿಯಲ್ಲಿ ಬೈಬಿಟ್ ಪ್ಲಾಟ್ ಫಾರ್ಮ್ ನಿಂದ ಕಳವಾಗಿದ್ದ 1.5 ಶತಕೋಟಿ ಡಾಲರ್ ಈವರೆಗಿನ ಅತಿದೊಡ್ಡ ಕದ್ದ ಮೊತ್ತವಾಗಿದೆ.
ಗುರುವಾರ ಕ್ರಿಪ್ಟೊಕರೆನ್ಸಿ ಪ್ಲಾಟ್ ಫಾರ್ಮ್ ಬೈನಾನ್ಸ್ ದೊಡ್ಡ ಹ್ಯಾಕ್ ಗೆ ಬಲಿಯಾಗಿದೆ ಮತ್ತು ಬೃಹತ್ ಕಳ್ಳತನವನ್ನು ತಡೆಗಟ್ಟುವ ಪ್ರಯತ್ನದಲ್ಲಿ 2.5 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಹಣವನ್ನು ತಡೆಹಿಡಿಯಲಾಗಿದೆ ಎಂದು ಕಂಪೆನಿ ಹೇಳಿದೆ. ದೈನಂದಿನ ವ್ಯಾಪಾರದ ಪ್ರಮಾಣದಲ್ಲಿ ವಿಶ್ವದ ಅತಿದೊಡ್ಡ ಕ್ರಿಪ್ಟೊ ವಿನಿಮಯ ಕೇಂದ್ರವಾಗಿರುವ ಕಂಪೆನಿಯು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಿದೆ. “ಬಳಕೆದಾರರ ನಿಧಿಗಳು ಸಂಪೂರ್ಣ ಸುರಕ್ಷಿತವಾಗಿವೆ” ಎಂದು ಒಂದು ಪೋಸ್ಟ್ ನಲ್ಲಿ ಹೇಳಿದರೆ, ಮತ್ತೊಂದು ಪೋಸ್ಟ್ ನಲ್ಲಿ “ಎಲ್ಲಾ ನಷ್ಟಗಳನ್ನು ಸರಿದೂಗಿಸಲಾಗುತ್ತದೆ” ಎಂದು ಹೇಳಿದೆ.
ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 6 ಗಂಟೆಗೆ, “ನಮ್ಮ ತಂಡವು ಭದ್ರತಾ ಪರಿಶೀಲನೆ ನಡೆಸುತ್ತಿರುವಾಗ ಎಲ್ಲಾ ಠೇವಣಿಗಳು ಮತ್ತು ಹಿಂಪಡೆಯುವಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ಬೈನಾನ್ಸ್ ಹೇಳಿದೆ.
“ನಮ್ಮ ತಂಡಗಳು ಕಾನೂನು ಜಾರಿ ಸಂಸ್ಥೆಗಳು, ವಿತರಕರು, ಬ್ಲಾಕ್ ಚೈನ್ ಗುಪ್ತಚರ ಸಂಸ್ಥೆಗಳು ಮತ್ತು ಉದ್ಯಮ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಹೆಚ್ಚುವರಿ ಸ್ವತ್ತುಗಳನ್ನು ಪತ್ತೆಹಚ್ಚಿ ಫ್ರೀಝ್ ಮಾಡಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅಂಕಿ-ಅಂಶಗಳು ಏರಿಕೆಯಾಗಬಹುದು” ಎಂದು ಕಂಪೆನಿ ಹೇಳಿದೆ.
ಬೈನಾನ್ಸ್ ನ ಮಾಜಿ ಮುಖ್ಯಸ್ಥ ಚಾಂಗ್ ಪೆಂಗ್ ಝಾವೊ ಹೇಳಿರುವ ಪ್ರಕಾರ, “ಬೈನಾನ್ಸ್ ಹ್ಯಾಕ್ ಆಗಿರುವಂತೆ ಕಾಣಿಸುತ್ತದೆ. ಒಟ್ಟು ನಷ್ಟವು 1 ಶತಕೋಟಿ ಡಾಲರ್ ಮೀರಿರಬಹುದು.” ಚಾಂಗ್ಪೆಂಗ್ ಇದೀಗ ಬೈನಾನ್ಸ್ ಸಮೂಹವನ್ನು ನಡೆಸುತ್ತಿಲ್ಲ; ಷೇರುದಾರರಾಗಿ ಉಳಿದಿದ್ದಾರೆ.
USDT ಎಂದು ಕರೆಯಲಾಗುವ ಕ್ರಿಪ್ಟೊಕರೆನ್ಸಿಯನ್ನು ನೀಡುವ ಕಂಪೆನಿಯಾದ ಟೆಥರ್ ನ ಸಿಇಒ ಪಾವೊಲೊ ಅರ್ಡೊಯಿನೊ, ತಮ್ಮ ಸಂಸ್ಥೆಯು “ಸಂಭಾವ್ಯ ಬೈನಾನ್ಸ್ ವಿನಿಮಯ ಕೇಂದ್ರದ ಹ್ಯಾಕ್ಗೆ ಸಂಬಂಧಿಸಿ ಸುಮಾರು 1.6 ಶತಕೋಟಿ ಡಾಲರ್ ಅನ್ನು ತಡೆಹಿಡಿದಿದೆ” ಎಂದು ಹೇಳಿದರು.
‘ಸರ್ಕಲ್’ನ ಮುಖ್ಯಸ್ಥರಾಗಿರುವ ಜೆರೆಮಿ ಅಲ್ಲೈರ್, ತಮ್ಮ ಕಂಪೆನಿಯು USDCಯಲ್ಲಿ 800 ದಶಲಕ್ಷ ಡಾಲರ್ ಗೂ ಮೀರಿದ ಹಣವನ್ನು ತಡೆಹಿಡಿದಿದೆ ಎಂದು ಹೇಳಿದ್ದಾರೆ. USDT ಮತ್ತು USDC ಎರಡೂ ಸ್ಟೇಬಲ್ಕಾಯಿನ್ ಡಿಜಿಟಲ್ ಕರೆನ್ಸಿಗಳಾಗಿದ್ದು, ಅವುಗಳ ಮೌಲ್ಯವು ಅಮೆರಿಕನ್ ಡಾಲರ್ ಗೆ ಸಂಬಂಧಿಸಿದೆ.
ಅಮೆರಿಕದ ನ್ಯಾಯ ಇಲಾಖೆ ಮತ್ತು FBI ಬೈನಾನ್ಸ್ ಗೆ ಸಂಬಂಧಿಸಿದ ಹ್ಯಾಕ್ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿಲ್ಲ. ಸುದ್ದಿಯ ಹಿನ್ನೆಲೆಯಲ್ಲಿ ಸ್ಟೇಬಲ್ಕಾಯಿನ್ಗಳನ್ನು ಹೊರತುಪಡಿಸಿದ ಕ್ರಿಪ್ಟೊಕರೆನ್ಸಿಗಳ ಬೆಲೆಗಳು ಕುಸಿದಿವೆ. ಬಿಟ್ ಕಾಯಿನ್ ಸುಮಾರು ಶೇ. 5ರಷ್ಟು, ಎಥೆರಿಯಮ್ ಸುಮಾರು ಶೇ. 6ರಷ್ಟು ಮತ್ತು ಬೈನಾನ್ಸ್ ನ ಸ್ಥಳೀಯ BNB ಸುಮಾರು ಶೇ. 10ರಷ್ಟು ಕುಸಿದಿವೆ.
ಕೃತಕ ಬುದ್ಧಿಮತ್ತೆ (AI) ಮಾದರಿಗಳ ಸಾಮರ್ಥ್ಯಗಳು ನಿರಂತರವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಪ್ಟೊಗ್ರಫಿ ಮತ್ತು ಐಟಿ ಭದ್ರತಾ ಪ್ರೋಟೋಕಾಲ್ಗಳಲ್ಲಿನ ದೌರ್ಬಲ್ಯಗಳಿಗೆ ಕಾರಣವಾಗಬಹುದು ಎಂದು ಅನೇಕ ವೀಕ್ಷಕರು ಕಳವಳ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಬೈನಾನ್ಸ್ ಮೇಲೆ ಸೈಬರ್ ದಾಳಿ ನಡೆದಿದೆ.






