Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜರ್ಮನ್ ಪ್ರಜೆ ಎಂಬ ಆರೋಪದ ನಡುವೆ ಭಾರತೀಯ...

ಜರ್ಮನ್ ಪ್ರಜೆ ಎಂಬ ಆರೋಪದ ನಡುವೆ ಭಾರತೀಯ ಪಾಸ್‌ಪೋರ್ಟ್ ಪ್ರದರ್ಶಿಸಿ ತಿರುಗೇಟು ನೀಡಿದ ಧ್ರುವ್ ರಾಠಿ

ವಿದೇಶಿ ಪ್ರಜೆ ಎಂದು ಶಂಕಿಸಿ MHAಗೆ ಪತ್ರ ಬರೆದಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ವಾರ್ತಾಭಾರತಿವಾರ್ತಾಭಾರತಿ11 Oct 2026 7:24 PM IST
share
ಜರ್ಮನ್ ಪ್ರಜೆ ಎಂಬ ಆರೋಪದ ನಡುವೆ ಭಾರತೀಯ ಪಾಸ್‌ಪೋರ್ಟ್ ಪ್ರದರ್ಶಿಸಿ ತಿರುಗೇಟು ನೀಡಿದ ಧ್ರುವ್ ರಾಠಿ

ಯೂಟ್ಯೂಬರ್ ಧ್ರುವ್ ರಾಠಿ ಅವರ ಸುತ್ತ ಆರಂಭವಾಗಿರುವ ಪೌರತ್ವ ಮತ್ತು ಬಂಧನದ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು 'ಜರ್ಮನ್ ಶೆಫರ್ಡ್' ಎಂದು ಕರೆಯುತ್ತಾ, ವಿದೇಶಿ ನೆಲದಲ್ಲಿ ಕುಳಿತು ಭಾರತದ ವಿರುದ್ಧ ಮಾತನಾಡುತ್ತಾರೆ ಎಂದು ಟ್ರೋಲ್ ಮಾಡಲಾಗುತ್ತಿತ್ತು.

ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಮತ್ತು ದಿಲ್ಲಿಯಲ್ಲಿ ಅವರ ದಿಗ್ಬಂಧನದ ನಂತರ ಈ ವಿವಾದ ಮತ್ತೊಂದು ಮಜಲಿಗೆ ತಲುಪಿದೆ. ಧ್ರುವ್ ರಾಠಿ ವಿದೇಶಿ ಪ್ರಜೆ, ಅವರು ಭಾರತದ ಆಂತರಿಕ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ ಎಂದು ವಾದಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ವತಃ ರಾಠಿ ತಮ್ಮ ಭಾರತೀಯ ಪಾಸ್‌ಪೋರ್ಟ್ ಬಿಡುಗಡೆ ಮಾಡಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಮುಂದಾಗಿದ್ದಾರೆ.

​ವಿವಾದದ ಕಿಡಿ ಹೊತ್ತಿಕೊಂಡಿದ್ದು ಬೆಂಗಳೂರಿನಲ್ಲಿ ನಡೆದ 'ಸ್ಪೆಷಲ್ ಇಂಟೆನ್ಸಿವ್ ರಿವಿಷನ್' ಕುರಿತಾದ ಸಾರ್ವಜನಿಕ ಪ್ರತಿಭಟನೆಯಿಂದ. ಈ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಅವರೊಂದಿಗೆ ಧ್ರುವ್ ರಾಠಿ ಕೂಡ ಭಾಗವಹಿಸಿ, ಚುನಾವಣಾ ಆಯೋಗದ ಪಾರದರ್ಶಕತೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು.

ಈ ಸಮಾವೇಶ ಮುಗಿಯುತ್ತಿದ್ದಂತೆ ಬೆಂಗಳೂರಿನ ನಿವೃತ್ತ ಪೊಲೀಸ್ ಕಮಿಷನರ್ ಹಾಗೂ ಬಿಜೆಪಿ ನಾಯಕ ಭಾಸ್ಕರ್ ರಾವ್ ಕೇಂದ್ರ ಗೃಹ ಕಾರ್ಯದರ್ಶಿಗೆ ಸುದೀರ್ಘ ಪತ್ರ ಬರೆದಿದ್ದರು. ಧ್ರುವ್ ರಾಠಿ ಪ್ರಸ್ತುತ ಜರ್ಮನ್ ಪೌರತ್ವ ಹೊಂದಿರುವ ವಿದೇಶಿ ಪ್ರಜೆ ಎಂದು ನಂಬಲಾಗಿದೆ, ಹಾಗಾಗಿ ಅವರು ಭಾರತದ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ವಿದೇಶಿಯರ ಕಾಯ್ದೆ 1946 ಮತ್ತು ವೀಸಾ ನಿಯಮಗಳ ಅಡಿಯಲ್ಲಿ ಅವರ ಪೌರತ್ವ ಮತ್ತು ವೀಸಾ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಭಾಸ್ಕರ್ ರಾವ್ ಸಾರ್ವಜನಿಕವಾಗಿ ಒತ್ತಾಯಿಸಿದ್ದರು.

​ಈ ಪತ್ರದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ್ ರಾಠಿ ಭಾರತದ ಪೌರತ್ವ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತು.

ದಿಲ್ಲಿಯಲ್ಲಿ ಜಂತರ್ ಮಂತರ್ ಚಲೋ ಪ್ರತಿಭಟನೆಗೆ ಸಂಬಂಧಿಸಿದಂತೆ ಅಕ್ಟೋಬರ್ 10ರಂದು ಬೆಳಿಗ್ಗೆ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಾಗ, ಮಾಧ್ಯಮಗಳ ಒಂದು ವರ್ಗ ಹಾಗೂ ಬಲಪಂಥೀಯ ಖಾತೆಗಳು ಇದೇ ವಾದವನ್ನು ಮುಂದಿಟ್ಟವು.

ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿ ದೇಶದ ಆಂತರಿಕ ವಿಚಾರದಲ್ಲಿ ತಲೆಹಾಕಿದ್ದಕ್ಕಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಂಧನವನ್ನು ಸಮರ್ಥಿಸಿಕೊಳ್ಳಲಾಯಿತು.

​ಸುಮಾರು 23 ಗಂಟೆಗಳ ದಿಗ್ಬಂಧನದ ನಂತರ ಬಿಡುಗಡೆಯಾದ ಧ್ರುವ್ ರಾಠಿ, ವಿಡಿಯೋ ಮೂಲಕ ನೇರವಾಗಿ ತಮ್ಮ ಅಸಲಿ ಭಾರತೀಯ ಪಾಸ್‌ಪೋರ್ಟ್ ಅನ್ನು ಕ್ಯಾಮೆರಾ ಎದುರು ಪ್ರದರ್ಶಿಸಿದರು.

ನಾನು ಹುಟ್ಟಿನಿಂದಲೂ ಭಾರತೀಯ ಪ್ರಜೆ, ಎಂದಿಗೂ ಭಾರತೀಯನಾಗಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಸಾಮಾನ್ಯ ಪ್ರಜೆಗೆ ಸಂವಿಧಾನ ನೀಡುವ ಹಕ್ಕುಗಳು ನನಗೂ ಇವೆ ಎಂದು ಸಾರಿದ ಅವರು, ತಮ್ಮ ಬಂಧನವನ್ನು ಸಮರ್ಥಿಸಿಕೊಳ್ಳಲು ಈ ಸುಳ್ಳು ಕಥೆಯನ್ನು ಹೆಣೆಯಲಾಗಿದೆ ಎಂದು ಆರೋಪಿಸಿದರು.

​ಅಷ್ಟೇ ಅಲ್ಲದೆ, ಫ್ಯಾಕ್ಟ್-ಚೆಕಿಂಗ್ ತಾಣ ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಧ್ರುವ್ ರಾಠಿ ಅವರ ಭಾರತೀಯ ಪಾಸ್‌ಪೋರ್ಟ್ ನ ಕೆಲವು ವಿವರಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡರು.

ಹರಿಯಾಣದ ರೋಹ್ತಕ್‌ ನಲ್ಲಿ ಜನಿಸಿದ ರಾಠಿ ಅವರ ಭಾರತೀಯ ಪಾಸ್‌ಪೋರ್ಟ್ ಪುಟವನ್ನು ಟ್ಯಾಗ್ ಮಾಡಿದ ಝುಬೇರ್, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ನೇರವಾಗಿ ಪ್ರಶ್ನಿಸಿದರು.

"ಇಲ್ಲಿದೆ ಅವರ ಪಾಸ್‌ಪೋರ್ಟ್ ವಿವರಗಳು, ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ನೀವು ಧ್ರುವ್ ರಾಠಿ ಅವರಲ್ಲಿ ಕ್ಷಮೆಯಾಚಿಸುತ್ತೀರಾ?" ಎಂದು ಝುಬೇರ್ ಸವಾಲು ಹಾಕಿದರು.

ಇನ್ನು ಕೆಲವರು ಧ್ರುವ್ ತಮ್ಮ ವಿಡಿಯೋದಲ್ಲಿ ಕೇವಲ ಪಾಸ್ಪೋರ್ಟ್ ನ ಮುಂಭಾಗ ತೋರಿಸಿದನ್ನು ಬೊಟ್ಟು ಮಾಡಿದರು. ಇದು ಅವರ ತಂದೆಯ ಪಾಸ್‌ಪೋರ್ಟ್ ಇರಬಹುದು ಎಂದು ಮತ್ತಷ್ಟು ಅನುಮಾನ ವ್ಯಕ್ತಪಡಿಸಿದಾಗ, ಬಿಜೆಪಿ ಅಧಿಕೃತವಾಗಿ ದೃಢೀಕರಿಸುವವರೆಗೆ ಇಂಥವರು ತಮ್ಮ ಸ್ವಂತ ಕುಟುಂಬದ ಮಾತಿಗೂ ಸಂಶಯ ಪಡುತ್ತಾರೆ ಎಂದು ಝುಬೇರ್ ತಿರುಗೇಟು ನೀಡಿದರು.

​ಧ್ರುವ್ ರಾಠಿ ತಮ್ಮನ್ನು ವಶಕ್ಕೆ ಪಡೆದ ರೀತಿಗೆ ಸಂಬಂಧಿಸಿದಂತೆಯೂ ಗಂಭೀರ ಆರೋಪಗಳನ್ನು ದಾಖಲಿಸಿದ್ದಾರೆ. ಅಕ್ಟೋಬರ್ 10ರಂದು ಬೆಳಿಗ್ಗೆ 7 ಗಂಟೆಗೆ ಯಾವುದೇ ಅಧಿಕೃತ ಸಮವಸ್ತ್ರ ಧರಿಸದ ಸುಮಾರು ಇಪ್ಪತ್ತು ಮಂದಿ ಬಲವಂತವಾಗಿ ಮನೆಗೆ ನುಗ್ಗಿದರು ಎಂದಿದ್ದಾರೆ.

ವಾರೆಂಟ್ ಅಥವಾ ಗುರುತಿನ ಚೀಟಿ ತೋರಿಸದೆ ತಮ್ಮನ್ನು ಬೆಡ್‌ರೂಂನಿಂದ ಎಳೆದೊಯ್ದರು ಎಂದು ವಿವರಿಸಿದ್ದಾರೆ. ಪಾದರಕ್ಷೆ ಧರಿಸಲೂ ಅವಕಾಶ ನೀಡದೆ ಕರೆದೊಯ್ದ ಈ ಪ್ರಕ್ರಿಯೆ ಕಾನೂನುಬದ್ಧ ಬಂಧನವಲ್ಲ, ಬದಲಿಗೆ ಅಪಹರಣ ಎಂದು ಅವರು ಕರೆದಿದ್ದಾರೆ. ತಮಗೂ ಮತ್ತು ಕುಟುಂಬಸ್ಥರಿಗೂ ಫೋನ್ ಸಂಪರ್ಕ ನೀಡದೆ, ವಕೀಲರ ಭೇಟಿಗೂ ಅವಕಾಶ ಕಲ್ಪಿಸದೆ ಸುಮಾರು ಇಪ್ಪತ್ತೆರಡು ಗಂಟೆಗಳ ಕಾಲ ಕೂಡಿಹಾಕಲಾಗಿತ್ತು ಎಂಬುದು ಅವರ ವಾದ.

​ಪ್ರಜಾಪ್ರಭುತ್ವದ ಸುಧಾರಣೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಉತ್ತರದಾಯಿತ್ವಕ್ಕಾಗಿ ಧ್ವನಿ ಎತ್ತುವ ವ್ಯಕ್ತಿಯನ್ನು ದೇಶದ್ರೋಹಿ ಅಥವಾ ವಿದೇಶಿ ಪ್ರಜೆ ಎಂದು ಬಿಂಬಿಸುವ ರಾಜಕೀಯ ವಾತಾವರಣ ನಿರ್ಮಾಣವಾಗಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ.

ಟ್ರೋಲ್‌ ಗಳ ಜರ್ಮನ್ ಶೆಫರ್ಡ್ ಹೀಯಾಳಿಕೆಯಿಂದ ಶುರುವಾಗಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯ ಅಧಿಕೃತ ದೂರಿನವರೆಗೆ ಬೆಳೆದ ಈ ಪೌರತ್ವ ವಿವಾದ, ಕೊನೆಗೆ ಪಾಸ್‌ಪೋರ್ಟ್ ದಾಖಲೆ ಪ್ರದರ್ಶನದ ಮೂಲಕ ಒಂದು ಹಂತಕ್ಕೆ ಬಂದು ನಿಂತಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಪರ-ವಿರೋಧ ಚರ್ಚೆಗಳು ಮಾತ್ರ ತಣ್ಣಗಾಗಿಲ್ಲ.

Tags

Dhruv RatheeGerman citizenship
share
ವಾರ್ತಾಭಾರತಿ
ವಾರ್ತಾಭಾರತಿ
Next Story
X