ಡಿಜಿಟಲ್ ಲಂಚ: ಹೆತ್ತವರು ಮಕ್ಕಳಿಂದ ಕಸಿದುಕೊಳ್ಳುತ್ತಿರುವುದೇನು?

credit: gemini
ತಮ್ಮ ಕೆಲಸ ಸುಗಮಗೊಳಿಸಲು ಮಕ್ಕಳಿಗೆ ಪರದೆ ವೀಕ್ಷಿಸಲು ಅನುವು ಮಾಡಿಕೊಡುವುದು ಅಲ್ಪಾವಧಿಯ ಶಾಂತಿ ದೊರೆತರೂ, ದೀರ್ಘಾವಧಿಯಲ್ಲಿ ಆರೋಗ್ಯ ವೆಚ್ಚಗಳಿಗೆ ಕಾರಣವಾಗಲಿದೆ.
ಮೆದುಳು ಮತ್ತು ದೇಹ ಇನ್ನೂ ಪಕ್ವವಾಗಿರದ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ಪರದೆ ವೀಕ್ಷಣೆಗೆ ಅವಕಾಶ ಕೊಡುವ ಹೆತ್ತವರು ತಮ್ಮ ಬಳಲಿಕೆ ಮತ್ತು ಅನುಕೂಲತೆಯುನ್ನಷ್ಟೇ ಗಮನಿಸುತ್ತಿದ್ದಾರೆ. ಇಂತಹ ಪಾಲನೆಯು ಬಹಳ ಅಪಾಯಕಾರಿ. ಹೀಗೆ ತಮ್ಮ ಕೆಲಸ ಸುಗಮಗೊಳಿಸಲು ಮಕ್ಕಳಿಗೆ ಪರದೆ ವೀಕ್ಷಿಸಲು ಅನುವು ಮಾಡಿಕೊಡುವುದು ಅಲ್ಪಾವಧಿಯ ಶಾಂತಿ ದೊರೆತರೂ, ದೀರ್ಘಾವಧಿಯಲ್ಲಿ ಆರೋಗ್ಯ ವೆಚ್ಚಗಳಿಗೆ ಕಾರಣವಾಗಲಿದೆ.
► ಪರದೆ ನೋಡಿ ಮಕ್ಕಳು ಶಾಂತರಾಗುವುದು ಆರೋಗ್ಯಕರವೆ?
ಕ್ಷಣಿಕ ಶಾಂತಿಗಾಗಿ ಪರದೆಯನ್ನು ತೋರಿಸುವ ಹೆತ್ತವರ ಅಭ್ಯಾಸದ ಮತ್ತೊಂದು ಮುಖವನ್ನು ಮಕ್ಕಳ ಚಿಕಿತ್ಸಾಲಯಗಳು ನೋಡುತ್ತಿವೆ. ಈ ಶಾಂತಿಯಿಂದಾಗಿ ಬಂದ ರೋಗ ಚಿಹ್ನೆಗಳು ಸ್ಪಷ್ಟ: ರಾತ್ರಿಯಿಡೀ ಮಲಗದ ಮಕ್ಕಳು, ಊಹಿಸಿರುವುದಕ್ಕಿಂತ ತಡವಾಗಿ ಮಾತನಾಡಲು ಪ್ರಾರಂಭಿಸಿದ ಮಕ್ಕಳು, ಗಮನ ಕೇಂದ್ರೀಕರಿಸಲು ಕಷ್ಟಪಡುವ ಮಕ್ಕಳು, ಕಿರಿಕಿರಿ ಅನುಭವಿಸುವ ಮಕ್ಕಳು, ಆತಂಕದ ನಡವಳಿಕೆ ತೋರಿಸುವವರು, ಚಯಾಪಚಯ ಸಮಸ್ಯೆ ಹೊಂದಿರುವವರು ಹಾಗೂ ದೃಷ್ಟಿ ಸಮಸ್ಯೆಯ ಆರಂಭಿಕ ಹಂತದಲ್ಲಿರುವವರು!
ಆದರೆ ಈ ಸಮಸ್ಯೆಗಳು ಹೆತ್ತವರಿಗೆ ಹೆಚ್ಚು ದೊಡ್ಡದು ಎಂದು ಅನಿಸದೆ ಇರಬಹುದು. ಆದರೆ ಪದೇಪದೆ ಇಂತಹ ಸಮಸ್ಯೆಗಳನ್ನು ನೋಡುತ್ತಿರುವ ವೈದ್ಯರು ಚಿಂತೆ ವ್ಯಕ್ತಪಡಿಸುತ್ತಿದ್ದಾರೆ. ಮೊದಲ ಎರಡು ವರ್ಷಗಳ ಹಸುಗೂಸಿನ ಜೀವನ ಮೌನವಾಗಿ ರೂಪುಗೊಳ್ಳುತ್ತದೆ. ಮಕ್ಕಳ ಮೆದುಳು ಅತಿ ವೇಗದಲ್ಲಿ ಬೆಳೆಯುತ್ತದೆ. ಕಲಿಕೆ, ಭಾವನಾತ್ಮಕ ನಿಯಂತ್ರಣ, ವರ್ತನೆ ಮತ್ತು ದೀರ್ಘಕಾಲೀನ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ನರವ್ಯೂಹದ ಸಂಪರ್ಕಗಳನ್ನು ರೂಪಿಸುತ್ತದೆ. ಹೀಗಾಗಿ ಮೊಬೈಲ್ ಪರದೆ ತೋರಿಸುವುದು ದೊಡ್ಡ ಪರಿಣಾಮ ಬೀರುತ್ತದೆ.
► ವೈದ್ಯರು ವರ್ಸಸ್ ಆಧುನಿಕ ಪೋಷಕರು
ಆಧುನಿಕ ಪಾಲನೆಯ ಕ್ರಮ ಉದ್ದೇಶಪೂರ್ವಕವಾಗಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅಡ್ಡಿಪಡಿಸುತ್ತಿದೆ ಎಂದು ಬಹುತೇಕ ಮಕ್ಕಳ ವೈದ್ಯರು ಅಭಿಪ್ರಾಯಪಡುತ್ತಾರೆ. “ಚಿಕ್ಕ ವಯಸ್ಸಿನಲ್ಲಿ ಮೊಬೈಲ್ ಪರದೆಯ ಕಡೆಗೆ ಅತಿಯಾಗಿ ಗಮನ ಹೊಂದಿರುವ ಮಕ್ಕಳ ಭಾಷಾ ಕಲಿಯುವ ಸಾಮರ್ಥ್ಯ ಕುಂದುತ್ತದೆ. ಗಮನ ಅವಧಿ ಕಡಿಮೆಯಾಗುತ್ತದೆ ಮತ್ತು ಸಾಮಾಜಿಕ ಸಂವಹನವೂ ಕುಸಿಯುತ್ತದೆ. ಅಸಮಂಜಸ ನಿದ್ರೆ, ಭಾವನಾತ್ಮಕವಾಗಿ ಆರೋಗ್ಯಕರ ಪ್ರತಿಸ್ಪಂದನೆ ಇಲ್ಲದಿರುವುದು ಮತ್ತು ಮೆದುಳಿನ ಪಕ್ವತೆಗೆ ಅಡ್ಡಿಯಾಗುವುದು ಕಂಡುಬರುತ್ತದೆ” ಎನ್ನುತ್ತಾರೆ ದಿಲ್ಲಿಯ ಸ್ತ್ರೀರೋಗತಜ್ಞೆ, ಮಕ್ಕಳ ತಜ್ಞೆ ಡಾ ಸೋಜ್ನಾ ಸೇಥಿ.
ಮೊಬೈಲ್ ಪರದೆಗಳು ಪೋಷಕರಿಗೆ ಬಹಳ ಸರಳವಾಗಿ ಮಕ್ಕಳನ್ನು ನಿರ್ವಹಿಸಲು ನೆರವಾಗುತ್ತಿವೆ. ಹೆಚ್ಚು ನಾಟಕವಿಲ್ಲ, ಶಾಂತಿ ಇರುತ್ತದೆ. ಮಕ್ಕಳು ಮೌನವಾಗಿ ಆಹಾರ ಸೇವಿಸುತ್ತಾರೆ. ಕಾರುಗಳಲ್ಲಿ ಹೋಗುವಾಗ ಅಳುವುದಿಲ್ಲ. ಬೇಗನೇ ನಿದ್ರೆ ಹೋಗುತ್ತಾರೆ. ಹೀಗಾಗಿ ಪೋಷಕರು ತಮ್ಮ ಕೆಲಸಗಳಲ್ಲಿ ತೊಡಗಲು ಸಾಧ್ಯವಾಗುತ್ತಿದೆ. ಆರಂಭದಲ್ಲಿ ಸ್ವಲ್ಪ ಸಮಯಕ್ಕೆ ತೋರಿಸಲಾಗುತ್ತಿದ್ದ ಮೊಬೈಲ್ ಪರದೆಗಳು ನಂತರ ಅನಿಯಂತ್ರಿತವಾಗಿ ಬಳಕೆಯಾಗಿ ಬದಲಾಗಿದೆ. ಸ್ಕ್ರೀನ್ ತೋರಿಸುವುದರಿಂದ ಕೆಲಸವಾಗುತ್ತಿರುವ ಕಾರಣ ಹೆತ್ತವರು ಹೆಚ್ಚು ಆಲೋಚಿಸುವುದಿಲ್ಲ.
► ಪೋಷಕರು ಮಕ್ಕಳಿಗೆ ಮೊಬೈಲ್ ಲಂಚ ನೀಡುವುದೇಕೆ?
“ಶೇ 85ರಿಂದ 90ರಷ್ಟು ಪೋಷಕರು ಹೇಳುವ ಪ್ರಕಾರ, ಮಹಿಳೆಯರೇ ಮಗುವಿನ ಪಾಲನೆಯ ಹೊಣೆ ಹೊತ್ತಿರುತ್ತಾರೆ. ವೃತ್ತಿಪರ ಹೊರೆ, ಮನೆಕೆಲಸದ ನಡುವೆ ಮಕ್ಕಳ ಕಡೆಗೆ ಗಮನಕೊಡುವುದು ಕಷ್ಟವಾಗುತ್ತದೆ. ಹೀಗಾಗಿ ಮಕ್ಕಳಿಗೆ ಮೊಬೈಲ್ ಲಂಚ ತೋರಿಸುವುದು ಸುಲಭವಾಗುತ್ತದೆ” ಎನ್ನುತ್ತಾರೆ ಮುಂಬೈನ ಮನಶ್ಶಾಸ್ತ್ರಜ್ಞೆ ರಿಧಿ ದೋಶಿ ಪಟೇಲ್.
ನಟಿ ಪ್ರಿಯಾಂಕಾ ಚೋಪ್ರ ಮತ್ತು ಗಾಯಕ ನಿಕ್ ಜೋನ್ಸ್ ಅವರು ತಮ್ಮ ವೃತ್ತಿಯ ಜೊತೆಗೆ ಮಕ್ಕಳನ್ನು ಗಮನಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರೆ ಅವರ ಉತ್ತರ, “ಅಜ್ಜಿ-ತಾತ” ಎನ್ನುವುದಾಗಿತ್ತು. ಆದರೆ ಇತ್ತೀಚೆಗೆ ಅಜ್ಜಿ-ತಾತಂದಿರ ಜೊತೆಗೆ ನೆಲೆಸುವವರು ಅತಿ ಕಡಿಮೆ. ಹೀಗಾಗಿ ಅನುಕೂಲಕ್ಕೆ ಮೊಬೈಲ್ ಪರದೆ ಸುಲಭದ ಹಾದಿಯಾಗುತ್ತಿದೆ.
► ಡಿಜಿಟಲ್ ಪಾಲನೆ ಸಮಸ್ಯೆಗೆ ಪರಿಹಾರವೇನು?
ವೈದ್ಯರು ಹೇಳುವ ಪ್ರಕಾರ ಯುವ ಮೆದುಳಿಗೆ ನಿತ್ಯವೂ ಸಂವಹನ ಅತಿ ಅಗತ್ಯವಾಗಿರುತ್ತದೆ. ಮಾತನಾಡುವುದು, ಹಾಡುವುದು, ಓದುವುದು ಮತ್ತು ಆಡುವುದು ಮಗುವಿನ ಭಾಷೆ, ಗಮನ ಮತ್ತು ಭಾವನಾತ್ಮಕ ಭದ್ರತೆಗೆ ಮುಖ್ಯವಾಗಿರುತ್ತದೆ. ಆದರೆ ಸ್ಮಾರ್ಟ್ಫೋನ್ನಿಂದ ಇವೆಲ್ಲವನ್ನೂ ಹೊರಗುತ್ತಿಗೆ ಪಡೆಯುವುದು ಮಕ್ಕಳ ಭಾವನಾತ್ಮಕ ಸಂವಹನದ ಮೇಲೆ ಬರೆ ಎಳೆದಂತಾಗುತ್ತದೆ.
ಹಸುಗೂಸುಗಳಿಗೆ ಪ್ರತಿ ಬಾರಿಯೂ ಮನೋರಂಜನೆಯ ಅಗತ್ಯವಿರುವುದಿಲ್ಲ. ಅವರಿಗೆ ತಡೆಯಿಲ್ಲದ ನಿದ್ರೆ ಬೇಕು. ದೇಹದಲ್ಲಿ ಚಲನೆ ಹೆಚ್ಚಿರಬೇಕು. ಭಾವನಾತ್ಮಕವಾಗಿ ಹಿರಿಯರ ಜೊತೆಗೆ ಸಂವಹನ ಬೇಕಿದೆ. ಶಾಂತ ಪರದೆಯ ಸಮಯ ಅಂತಿಮವಾಗಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಕಾರಣವಾಗಲಿದೆ.
“ಮನೆ ಕೆಲಸ ಮಾಡುವುದು, ಅಡುಗೆ ಮಾಡುವುದು, ಉದ್ಯಾನವನದಲ್ಲಿ ಕೆಲಸ ಮಾಡುವುದು, ಸಂಗೀತ ಕೇಳುವುದು ಮತ್ತು ಇತರ ವಯಸ್ಸಿಗೆ ಸೂಕ್ತವಾಗಿರುವ ಪಾತ್ರವನ್ನು ಮಕ್ಕಳ ಜೊತೆಜೊತೆಗೆ ನಿರ್ವಹಿಸಬಹುದು. ಮಕ್ಕಳ ಜೊತೆಗೆ ಆಹಾರ, ಸ್ಥಳಗಳು ಮತ್ತು ಪ್ರಕೃತಿಯ ಬಗ್ಗೆ ಮಾತನಾಡುವುದರಿಂದ ಭಾಷೆ, ಭಾವನಾತ್ಮಕ ಸಂವಹನ, ಚಲನೆಯ ಕೌಶಲ್ಯಗಳು, ಗಮನ ಮತ್ತು ಸಹಿಷ್ಣುತೆ ಬೆಳೆಯುತ್ತದೆ” ಎನ್ನುತ್ತಾರೆ ವೈದ್ಯರು.
ಅಜ್ಜಿ-ತಾತಂದಿರ ನೆರವು ಸಿಗದೆ ಇರುವ ಕುಟುಂಬಗಳು ಕೆಲಸದ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ಪರಸ್ಪರ ನೆರವು ನೀಡುವ ಮೂಲಕ ಮಗುವಿನ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ಅನುಕೂಲ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಮಕ್ಕಳು ಮೊಬೈಲ್ ನೋಡುವ ಅಭ್ಯಾಸ ಮಾಡಿಕೊಂಡಿದ್ದರೆ, ನಿಧಾನವಾಗಿ ಅದನ್ನು ಕಡಿಮೆ ಮಾಡುತ್ತಾ ಬಿಡಿಸಿಬಿಡಬೇಕು. ಪರದೆಗಳನ್ನು ಭಾವನಾತ್ಮಕವಾಗಿ ಬದಲಿಯಾಗಿ ಬಳಸುವುದು ಮಗುವಿನ ಆರೋಗ್ಯಕ್ಕೆ ಹಾನಿಕರವಾಗಿದೆ.
ಕೃಪೆ: ಇಂಡಿಯಾ ಟುಡೆ







