ನಿತ್ಯವೂ ಮಧ್ಯಾಹ್ನ ನಿದ್ರೆ ಮಾಡುವ ಅಭ್ಯಾಸವೆ? ಉತ್ತಮ ನಿದ್ರೆಗೆ ಸಲಹೆಗಳು...

ಸಾಂದರ್ಭಿಕ ಚಿತ್ರ | Photo Credit : freepik
ನಿದ್ರೆ ಪ್ರಯೋಜನಕಾರಿಯಾಗಿ ಇರಬಹುದು ಅಥವಾ ಅಡ್ಡಿಪಡಿಸುವಂತೆಯೂ ಇರಬಹುದು. ವಿಶೇಷವಾಗಿ ರಾತ್ರಿಯ ನಿದ್ರೆಗೆ ಮಧ್ಯಾಹ್ನದ ನಿದ್ರೆ ಅಡ್ಡಿಯಾಗಲು ಆರಂಭಿಸಿದರೆ ಅಪಾಯಕಾರಿ.
ಸಾಮಾನ್ಯವಾಗಿ ಮದ್ಯಾಹ್ನದ ಭೋಜನದ ನಂತರ ಸಣ್ಣ ನಿದ್ರೆ ಮಾಡುವ ಅಭ್ಯಾಸ ಬಹಳಷ್ಟು ಮಂದಿಗೆ ಇದೆ. ವಿಶೇಷವಾಗಿ ಭೂರಿ ಭೋಜನ ಮಾಡಿದರೆ ನಿದ್ರೆ ತನ್ನಿಂತಾನಾಗೇ ಎಳೆದು ಬರುತ್ತದೆ. ಆದರೆ ಮಧ್ಯಾಹ್ನದ ನಿದ್ರೆ ನೈಸರ್ಗಿಕ ಪ್ರತಿಕ್ರಿಯೆಯೇ ಅಥವಾ ದೇಹದ ಅಡ್ಡಪರಿಣಾಮವೆ?
ಚೆನ್ನೈನ ಕಾವೇರಿ ಆಸ್ಪತ್ರೆಯ ನರವಿಜ್ಞಾನಿ ಡಾ ಚಕ್ಕೇರ ಪ್ರಿಯಾಂಕಾ ಅವರ ಪ್ರಕಾರ ಮಧ್ಯಾಹ್ನದ ನಿದ್ರೆ ಮತ್ತು ನಮ್ಮ ಆರೋಗ್ಯಕ್ಕೆ ಇರುವ ಸಂಬಂಧವಿದೆ ಮತ್ತು ಹಗಲಿನ ನಿದ್ರೆ ಅಲಗಿನ ಕತ್ತಿಯಾಗಿರಬಹುದು! “ನಿದ್ರೆ ಪ್ರಯೋಜನಕಾರಿಯಾಗಿ ಇರಬಹುದು ಅಥವಾ ಅಡ್ಡಿಪಡಿಸುವಂತೆಯೂ ಇರಬಹುದು. ವಿಶೇಷವಾಗಿ ರಾತ್ರಿಯ ನಿದ್ರೆಗೆ ಮಧ್ಯಾಹ್ನದ ನಿದ್ರೆ ಅಡ್ಡಿಯಾಗಲು ಆರಂಭಿಸಿದರೆ ಕಷ್ಟ. ನಿದ್ರಾಹೀನತೆಯಂತಹ ಸಮಸ್ಯೆಯ ಸೂಚಕವಾಗಬಹುದು ಮತ್ತು ರಾತ್ರಿ ಮಲಗಲು ಕಷ್ಟವಾಗಬಹುದು.”
ಅಂದರೆ, ಮಧ್ಯಾಹ್ನದ ನಿದ್ರೆ ನಿಮ್ಮ ಪರವಾಗಿ ಕೆಲಸ ಮಾಡಲು ಸರಿಯಾದ ಸಮತೋಲನ ಕಂಡು ಹಿಡಿಯಬೇಕು. ಇಲ್ಲದೆ ಇದ್ದರೆ ರಾತ್ರಿಯ ನಿದ್ರೆಗೆ ಅಪಾಯ ತರಬಹುದು.
ಆರೋಗ್ಯಕ್ಕೆ ಉತ್ತಮವಾದ ಮಧ್ಯಾಹ್ನದ ನಿದ್ರೆ ಯಾವುದು?
ಮಧ್ಯಾಹ್ನದ ನಿದ್ರೆಯು ದೇಹದ ನಿದ್ರೆಯ ಚಕ್ರವನ್ನು ಅಸಮತೋಲನಗೊಳಿಸುತ್ತದೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು. “ಸುಮಾರು 20 ರಿಂದ 30 ನಿಮಿಷಗಳ ಕಾಲ ನಡೆಯುವ ಸಣ್ಣ ನಿದ್ರೆಯು ಜನರಲ್ಲಿ ಗಮನ, ಜಾಗರೂಕತೆ ಮತ್ತು ಅರಿವಿನ ಕಾರ್ಯಕ್ಷಮತೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ” ಎನ್ನುತ್ತಾರೆ ವೈದ್ಯರು.
ವೈದ್ಯರು ಗಮನಿಸಿರುವ ಪ್ರಕಾರ, ಮಧ್ಯಾಹ್ನ ಮತ್ತು ಸಂಜೆ ತಡವಾಗಿ ನಿದ್ರೆ ಮಾಡಿದರೆ ಕಷ್ಟ. ಮಧ್ಯಾಹ್ನ ತಡವಾಗಿ ಅಥವಾ ಸಂಜೆಯ ಸಮಯ ನಿದ್ರೆ ಮಾಡಬಾರದು. ಹಾಗೆ ಮಾಡಿದರೆ ರಾತ್ರಿ ನಿದ್ರೆ ಬರುವುದಿಲ್ಲ. ನಿದ್ರೆಯ ಸಮಯದಲ್ಲಿ ಅನಿಯಮಿತತೆ ನಿದ್ರೆಯ ಒತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗಿ ರಾತ್ರಿ ನಿದ್ರೆಗೆ ಸಮಸ್ಯೆ ತರುತ್ತದೆ. ರಾತ್ರಿ ನಿದ್ರೆ ತಡವಾದರೆ ಬೆಳಿಗ್ಗೆ ಹಚ್ಚು ದಣಿದಿರುತ್ತೀರಿ. ಬೆಳಗಿನ ಜಾವ ಹೆಚ್ಚು ನಿದ್ರೆಯ ಅಗತ್ಯವಿರುತ್ತದೆ. ಇದೊಂದು ವಿಷಚಕ್ರವಾಗಿ ಬಿಡುತ್ತದೆ!
ಮಧ್ಯಾಹ್ನದ ನಿದ್ರೆ ಅಪಾಯಕ್ಕೆ ತಿರುಗುವ ಚಿಹ್ನೆ
* ರಾತ್ರಿ ಸಮಯದಲ್ಲಿ ನಿದ್ರೆಗೆ ಜಾರಲು ಕಷ್ಟವಾಗುವುದು.
* ಹಗಲಿನ ವೇಳೆ ನಿದ್ರೆಯಲ್ಲಿ ಗೊರಕೆ ಹೊಡೆಯುವುದು
* ರಾತ್ರಿ ಅನಿಯಮಿತ ನಿದ್ರೆಯಿಂದ ಹೆಚ್ಚು ನಿದ್ರೆಯ ಅವಲಂಬನೆ
* ಹಗಲು ಹೆಚ್ಚು ನಿದ್ರೆ ಮಾಡುವುದರಿಂದ ನಿದ್ರಾ ಉಸಿರುಗಟ್ಟುವಿಕೆ ಕಂಡುಬರಬಹುದು, ದೀರ್ಘಕಾಲದ ನಿದ್ರಾಹೀನತೆಗೆ ಕಾರಣವಾಗಬಹುದು.
ರಾತ್ರಿ ಉತ್ತಮ ನಿದ್ರೆಗೆ ಸಲಹೆಗಳು
ರಾತ್ರಿ ಸಮಯ ನಿದ್ರೆಗೆ ಮಧ್ಯಾಹ್ನದ ನಿದ್ರೆ ದೊಡ್ಡ ಅಪಾಯ ತರಬಹುದು. ಆದರೆ ಮಧ್ಯಾಹ್ನ ಸಮತೋಲಿತ ನಿದ್ರೆ ಮಾಡುವುದರಿಂದ ಅಂತಹ ಅಪಾಯವನ್ನು ತಪ್ಪಿಸಬಹುದು. ಮಧ್ಯಾಹ್ನ ಒಂದೇ ಸಮಯದಲ್ಲಿ ಮಲಗಿ ಒಂದೇ ಸಮಯಕ್ಕೆ ಏಳುವುದು. ಸಾಮಾನ್ಯವಾಗಿ ನಿದ್ರೆಯನ್ನು 3 ಗಂಟೆಗೆ ನಿಲ್ಲಿಸಿ ಅತಿ ಕಡಿಮೆ ಸಮಯ ನಿದ್ರೆ ಮಾಡುವುದು. ರಾತ್ರಿ ನಿದ್ರೆಗೆ ಸಮಸ್ಯೆಯಾಗದಂತೆ ಸ್ಕ್ರೀನ್ ವೀಕ್ಷಣೆ ಕಡಿಮೆಗೊಳಿಸುವುದು ಮತ್ತು ನಿತ್ಯವೂ 7 ರಿಂದ 9 ಗಂಟೆ ನಿದ್ರೆ ಮಾಡುವುದು. ಹೀಗೆ ಕಡಿಮೆ ನಿದ್ರೆ ಹಾನಿಕರವಲ್ಲ. ಬದಲಾಗಿ ಶಕ್ತಿಯನ್ನು ಮರಳಿ ಪಡೆಯಲು ನೆರವಾಗಲಿದೆ.
ಸೂಚನೆ: ಲೇಖನವನ್ನು ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದ್ದು, ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ವೈದ್ಯರ ಸಲಹೆಯನ್ನು ಅನುಸರಿಸಿ.







