ವಿಶ್ವದ ಅತ್ಯುತ್ತಮ ಹುಲಿ ಸಫಾರಿ ತಾಣಗಳು ಯಾವುವು ಗೊತ್ತೆ?

ಸಾಂದರ್ಭಿಕ ಚಿತ್ರ | Image by vladimircech on Magnific
ವಿಶ್ವದ ಶೇ. 70 ಕ್ಕೂ ಹೆಚ್ಚು ಹುಲಿಗಳನ್ನು ಸಹಜ ಅರಣ್ಯ ಪರಿಸರದಲ್ಲಿ ಹೊಂದಿರುವ ಭಾರತವು ಅತ್ಯುತ್ತಮವಾದ ಹುಲಿ ಸಫಾರಿಯ ಅನುಭವವನ್ನು ಕೊಡುತ್ತದೆ.
ಪ್ರತಿ ವರ್ಷ ಜುಲೈ 29ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಹುಲಿ ದಿನವು ವಿಶ್ವಾದ್ಯಂತ ಅತಿ ಅಪರೂಪದ ಪ್ರಭೇದವನ್ನು ಉಳಿಸಿಕೊಳ್ಳುವ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವ ಮಹತ್ವವನ್ನು ತೋರಿಸುತ್ತದೆ. ವಿಶ್ವದ ಶೇ. 70 ಕ್ಕೂ ಹೆಚ್ಚು ಹುಲಿಗಳನ್ನು ಸಹಜ ಅರಣ್ಯ ಪರಿಸರದಲ್ಲಿ ಹೊಂದಿರುವ ಭಾರತವು ವಿಶ್ವದ ಇತರೆಡೆಗಳಿಗೆ ಹೋಲಿಸಿದರೆ ಅತ್ಯುತ್ತಮವಾದ ವನ್ಯಜೀವಿ ಅನುಭವವನ್ನು ನೀಡುತ್ತದೆ. ಹಾಗಿದ್ದರೆ ಭಾರತದಲ್ಲಿ ಹುಲಿಗಳನ್ನು ಕಾಣಬಹುದಾದ ಉತ್ತಮ ಅರಣ್ಯ ಯಾವುದು?
ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ರಾಜಸ್ಥಾನ
ಭಾರತದ ಅತ್ಯಂತ ಪ್ರಸಿದ್ಧ ವನ್ಯಜೀವಿ ತಾಣಗಳಲ್ಲಿ ಒಂದಾಗಿರುವ ರಣಥಂಬೋರ್ ಶತಮಾನಗಳ ಇತಿಹಾಸದೊಂದಿಗೆ ಉತ್ತಮ ಭೂದೃಶ್ಯವನ್ನು ಹೊಂದಿದೆ. ಪ್ರಾಚೀನ ಕೋಟೆಗಳು, ಶಾಂತ ಸರೋವರಗಳು ಮತ್ತು ವಿಸ್ತಾರವಾದ ಒಣ ಎಲೆ ಉದುರುವ ಕಾಡುಗಳು ಜೀಪ್ ಗಳು ಮತ್ತು ಕ್ಯಾಂಟರ್ ಸಫಾರಿಗಳಿಗೆ ಉತ್ತಮ ಹಿನ್ನೆಲೆಯನ್ನು ಸೃಷ್ಟಿಸಿವೆ. ಪ್ರಯಾಣದುದ್ದಕ್ಕೂ ಹುಲಿಗಳು, ಚಿರತೆಗಳು, ಕರಡಿಗಳು, ಸಾಂಬಾರ್ ಜಿಂಕೆಗಳು ಮತ್ತು ವೈವಿಧ್ಯಮಯ ಪಕ್ಷಿ ಪ್ರಭೇದವನ್ನು ಕಾಣಬಹುದು.
ಬಾಂಧವಗಢ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶ
ದಟ್ಟವಾದ ಸಾಲ್ ಮರಗಳ ಕಾಡುಗಳು, ಹುಲ್ಲುಗಾವಲುಗಳು ಮತ್ತು ಕಡಿದಾದ ಬೆಟ್ಟಗಳು ಬಾಂಧವಗಢದ ಅರಣ್ಯ ಪ್ರದೇಶದ ವಿಶೇಷತೆಯಾಗಿದೆ. ಈ ಮೀಸಲು ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿವೆ. ಜೊತೆಗೆ ಚಿರತೆಗಳು, ಜಿಂಕೆಗಳು, ಲಂಗೂರ್ಗಳು ಮತ್ತು ವರ್ಣರಂಜಿತ ಪಕ್ಷಿ ಪ್ರಭೇದಗಳನ್ನು ಒಳಗೊಂಡಿವೆ. ಪ್ರತಿ ಸಫಾರಿಯು ಮಧ್ಯ ಭಾರತದ ಅತ್ಯಂತ ಪ್ರಾಚೀನ ಕಾಡುಗಳ ನಡುವಿನ ಪ್ರಯಾಣವಾಗಿರುತ್ತದೆ.
ಕನ್ಹಾ ನ್ಯಾಷನಲ್ ಪಾರ್ಕ್, ಮಧ್ಯಪ್ರದೇಶ
ರುಡ್ಯಾರ್ಡ್ ಕಿಪ್ಲಿಂಗ್ ನ ‘ದಿ ಜಂಗಲ್ ಬುಕ್’ಗೆ ಸ್ಫೂರ್ತಿಯಾಗಿರುವ ಕನ್ಹಾ ವಿಶಾಲವಾದ ಹುಲ್ಲುಗಾವಲು, ಎತ್ತರದ ಸಾಲ್ ಕಾಡುಗಳು ಮತ್ತು ಶಾಂತಿಯುತ ಬಿದಿರಿನ ತೋಪುಗಳಿಂದ ಪ್ರವಾಸಿಗರನ್ನು ಮೋಡಿ ಮಾಡುತ್ತದೆ. ಹುಲಿಗಳು ಮಾತ್ರವಲ್ಲ, ಬರಸಿಂಘಗಗಳಿಗೂ ಈ ಪ್ರದೇಶ ಪ್ರಸಿದ್ಧವಾಗಿವೆ. ವಿಸ್ತಾರವಾದ ಪರಿಸರ ಮತ್ತು ಕಾಡಿನ ಮೌನ ಭಾರತ ಅತ್ಯಂತ ಪ್ರಶಾಂತ ವನ್ಯಜೀವಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.
ತಡೋಬಾ-ಅಂಧರಿ ಹುಲಿ ಮೀಸಲು ಪ್ರದೇಶ
ತಡೋಬಾ-ಅಂಧರಿ ತೇಗದ ಮರಗಳ ಕಾಡುಗಳು, ಬಿದಿರಿನ ಪೊದೆಗಳು, ತೆರೆದ ಹುಲ್ಲುಗಾವಲುಗಳು ಮತ್ತು ಪ್ರಶಾಂತ ಸರೋವರಗಳ ಜೊತೆಗೆ ತಲ್ಲೀನಗೊಳಿಸುವ ಅರಣ್ಯದ ಅನುಭವವನ್ನು ಕೊಡುತ್ತವೆ. ಈ ಅರಣ್ಯದಲ್ಲಿ ಹುಲಿಗಳು, ಚಿರತೆಗಳು, ಕರಡಿಗಳು, ಕಾಡು ನಾಯಿಗಳು ಮತ್ತು ಹೇರಳವಾದ ಪಕ್ಷಿ ಸಮುದಾಯವನ್ನು ಕಾಣಬಹುದು.
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ
ಹಿಮಾಲಯದ ತಪ್ಪಲಿನ ವಿರುದ್ಧ ಇರುವ ಕಾಡುಗಳು, ನದಿಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳ ವೈವಿಧ್ಯಮಯ ಪರಿಸರವಾಗಿರುವ ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನವಾದ ಜಿಮ್ ಕಾರ್ಬೆಟ್ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇದೆ. ಹುಲಿಗಳು ಇಲ್ಲಿನ ಪ್ರಮುಖ ಅಂಶವಾಗಿದ್ದರೂ, ಆನೆಗಳು, ಘರಿಯಾಲ್ಗಳು, ಮೊಸಳೆಗಳು ಮತ್ತು ನೂರಾರು ಪಕ್ಷಿ ಪ್ರಭೇದಗಳಿಗೆ ಹೆಸರುವಾಸಿಯಾಗಿವೆ.
ಪೆಂಚ್ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶ-ಮಹಾರಾಷ್ಟ್ರ
ರುಡ್ಯಾರ್ಡ್ ಕ್ಲಿಪಿಂಗ್ ಅವರು ಬರೆದ ಕಾಡುಗಳ ಕತೆಗಳಿಗೆ ಪ್ರೇರೇಪಣೆಯಾಗಿವೆ ಎಂದು ನಂಬಲಾಗಿರುವ ‘ಪೆಂಚ್’, ತೇಗದ ಕಾಡುಗಳು, ಸುತ್ತುವರಿದ ಹೊಳೆಗಳು ಮತ್ತು ತೆರೆದ ಹುಲ್ಲುಗಾವಲುಗಳೊಂದಿಗೆ ಭೇಟಿ ನೀಡುವವರನ್ನು ಸ್ವಾಗತಿಸುತ್ತವೆ. ಇಲ್ಲಿ ಹುಲಿಗಳು, ಚಿರತೆಗಳು, ಕಾಡು ನಾಯಿಗಳು, ನರಿಗಳು ಮತ್ತು ಹೇರಳವಾದ ಪಕ್ಷಿ ಸಮುದಾಯವಿದೆ. ಮೊದಲ ಬಾರಿ ಕಾಡಿಗೆ ಕಾಲಿಡುವವರಿಗೆ ಪ್ರಯಾಣಿಸಲು ಉತ್ತಮ ತಾಣವಾಗಿದೆ.
ಕೃಪೆ: hindustantimes.com






