Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಿದ್ದರಾಮಯ್ಯರ ಮೊದಲ ಅವಧಿ,...

ಸಿದ್ದರಾಮಯ್ಯರ ಮೊದಲ ಅವಧಿ, ಕಾಂಗ್ರೆಸ್-ಜೆಡಿಎಸ್ ಆಡಳಿತಾವಧಿಯ ಬರನಿರ್ವಹಣೆ : 5,791.47 ಕೋಟಿ ರೂ. ವೆಚ್ಚದ ಯಾವುದೇ ವಿವರ ಆಡಿಟ್‌ಗೆ ಸಲ್ಲಿಕೆಯಾಗಿಲ್ಲ

ಜಿ. ಮಹಾಂತೇಶ್ಜಿ. ಮಹಾಂತೇಶ್31 Dec 2025 8:30 AM IST
share
ಸಿದ್ದರಾಮಯ್ಯರ ಮೊದಲ ಅವಧಿ, ಕಾಂಗ್ರೆಸ್-ಜೆಡಿಎಸ್ ಆಡಳಿತಾವಧಿಯ ಬರನಿರ್ವಹಣೆ : 5,791.47 ಕೋಟಿ ರೂ. ವೆಚ್ಚದ ಯಾವುದೇ ವಿವರ ಆಡಿಟ್‌ಗೆ ಸಲ್ಲಿಕೆಯಾಗಿಲ್ಲ

ಬೆಂಗಳೂರು, ಡಿ.30: ಸಿದ್ದರಾಮಯ್ಯ ಅವರ ಮೊದಲ ಅವಧಿ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬರ ನಿರ್ವಹಣೆಗಾಗಿ ಮಾಡಿದ್ದ 5,791.47 ಕೋಟಿ ರೂ.ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳೂ ಲೆಕ್ಕಪರಿಶೋಧನೆಗೆ ಸಲ್ಲಿಕೆಯಾಗಿಲ್ಲ. ಹಾಗೆಯೇ ಬರ ವೆಚ್ಚದ ಲೆಕ್ಕಪತ್ರಗಳ ಆಂತರಿಕ ಅಥವಾ ಬಾಹ್ಯ ಲೆಕ್ಕ ಪರಿಶೋಧನೆಗೆ ಸಿದ್ದರಾಮಯ್ಯ ಅವರ ಮೊದಲ ಅವಧಿ ಮತ್ತು ಜೆಡಿಎಸ್ ಪಾಲುದಾರಿಕೆಯ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರವು ಯಾವುದೇ ವ್ಯವಸ್ಥೆಯನ್ನೇ ಮಾಡಿರಲಿಲ್ಲ.

2025ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ವಿಪತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿ ಸಿಎಜಿಯು ಮಂಡಿಸಿದ್ದ ವರದಿಯಲ್ಲಿ ಬರ ನಿರ್ವಹಣೆಗೆ ಮಾಡಿದ್ದ ಖರ್ಚು ವೆಚ್ಚದ ಅಂಕಿ ಅಂಶಗಳನ್ನೂ ದಾಖಲಿಸಿದೆ.

ಈ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ. ಬರಗಾಲದ ವೆಚ್ಚಗಳನ್ನು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ರಾಜ್ಯ ಸರಕಾರವು ಮಾರ್ಗಸೂಚಿ ಮತ್ತು ಬರಗಾಲ ಕೈಪಿಡಿಯನ್ನೂ ಹೊರಡಿಸಿತ್ತು. ಅಲ್ಲದೇ ಬಳಕೆ ಪ್ರಮಾಣ ಪತ್ರಗಳು, ಆಂತರಿಕ ಮತ್ತು ಬಾಹ್ಯ ಲೆಕ್ಕ ಪರಿಶೋಧನೆ ಹೇಗೆ ಮಾಡಬೇಕು ಎಂದು ಸರಕಾರವು ಆದೇಶಿಸಿತ್ತು. ಈ ಆದೇಶದಂತೆ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಸಮ್ಮಿಶ್ರ ಸರಕಾರದಲ್ಲಿ ಬರಗಾಲದ ವೆಚ್ಚಗಳನ್ನು ಲೆಕ್ಕ ಪರಿಶೋಧನೆಯನ್ನೇ ಮಾಡಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.

ಬರಗಾಲದ ವೆಚ್ಚಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಿಎಜಿಗೆ ನೀಡಿರುವ ಮಾಹಿತಿ ಪ್ರಕಾರ 2017-18ರಿಂದ 2019-20ರವರೆಗೆ ರಾಜ್ಯದಲ್ಲಿ ಬರ ನಿರ್ವಹಣೆಗಾಗಿ 5,791.47 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ ಜಿಲ್ಲಾವಾರು ಬಿಡುಗಡೆ ಮಾಡಿದ್ದ ಅಥವಾ ವೆಚ್ಚವನ್ನು ಕಾಯ್ದಿರಿಸಿದ್ದ ವಸ್ತುಗಳ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಸಲ್ಲಿಸಿಲ್ಲ.

ಇದಲ್ಲದೇ ರಾಜ್ಯ ಸರಕಾರ ಮತ್ತು ನೋಡಲ್ ಇಲಾಖೆಯು ಖಾತೆಗಳು ಅಥವಾ ವೆಚ್ಚದ ಘಟನೆವಾರು ಅಂಕಿ ಸಂಖ್ಯೆಗಳ ಮಾಹಿತಿಯನ್ನೂ ನಿರ್ವಹಿಸುವುದಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಹಾಗೆಯೇ ಪರೀಕ್ಷಾ ತನಿಖೆಗೆ ಒಳಗಾದ ಯಾವುದೇ ಜಿಲ್ಲಾಡಳಿತಗಳು ಅಗತ್ಯವಾದ ಬಳಕೆ ಪ್ರಮಾಣ ಪತ್ರಗಳನ್ನು ಘಟನೆವಾರು ಅಥವಾ ಸ್ವೀಕರಿಸಿದ, ಖರ್ಚು ಮಾಡಿದ ಒಟ್ಟು ಮೊತ್ತಕ್ಕೆ ರಾಜ್ಯ ಸರಕಾರ, ನೋಡಲ್ ಇಲಾಖೆಗೆ ಸಲ್ಲಿಸಿಲ್ಲ.

ಬರ ವೆಚ್ಚದ ಲೆಕ್ಕಪತ್ರಗಳ ಆಂತರಿಕ ಅಥವಾ ಬಾಹ್ಯ ಲೆಕ್ಕ ಪರಿಶೋಧನೆಗೆ ರಾಜ್ಯ ಸರಕಾರವು ವ್ಯವಸ್ಥೆಯನ್ನೇ ಮಾಡಲಿಲ್ಲ. ಬರ ಪರಿಹಾರಕ್ಕಾಗಿ ವೆಚ್ಚವನ್ನು ಸಿದ್ಧಪಡಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯ ಸರಕಾರದ ಪ್ರಯತ್ನಗಳು ಅಸಮರ್ಪಕವಾಗಿದ್ದವು. ಹೀಗಾಗಿ ಬರ ನಿರ್ವಹಣೆಯು ಪರಿಣಾಮಕಾರಿಯಾಗಿರಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘ಹೀಗಾಗಿ ಬರ ನಿರ್ವಹಣೆ, ಬರಗಾಲದಲ್ಲಿ ಮಾಡಿದ್ದ ವೆಚ್ಚಗಳು ಮತ್ತು ಹಣಕಾಸು ವಹಿವಾಟುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರಕಾರವು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

2018ರಲ್ಲಿ ರಾಜ್ಯದ 30 ಜಿಲ್ಲೆಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದವು. ಒಟ್ಟು 28,046.95 ಕೋಟಿ ರೂ.ನಷ್ಟವಾಗಿತ್ತು. ಇದರಲ್ಲಿ ಹಿಂಗಾರು ಋತುವಿನಲ್ಲಿ 11,384.47 ಕೋಟಿ ರೂ., ಮುಂಗಾರು ಹಂಗಾಮು ಬೆಳೆ ನಷ್ಟದ ರೂಪದಲ್ಲಿ 16,662 ಕೋಟಿ ರೂ.ನಷ್ಟು ಅಂದಾಜು ನಷ್ಟವಾಗಿತ್ತು. 2019ರಲ್ಲಿ 49 ತಾಲೂಕುಗಳು ಬರಪೀಡಿತವಾಗಿದ್ದವು. ಆದರೆ ಈ ಅವಧಿಯಲ್ಲಿ ಎಷ್ಟು ಮೊತ್ತ ನಷ್ಟವಾಗಿತ್ತು ಎಂಬ ಬಗ್ಗೆ ಸಿಎಜಿ ವರದಿಯಲ್ಲಿ ವಿವರಗಳಿಲ್ಲ.

ರಾಜ್ಯವು ಕಳೆದ 2001ರಿಂದ 2022ರವರೆಗೆ ಒಟ್ಟು 15 ವರ್ಷಗಳ ಕಾಲ ಬರಗಾಲದಿಂದ ಬಾಧಿತವಾಗಿತ್ತು. 2018ರಲ್ಲಿ ತೀವ್ರ ಬರಗಾಲದಿಂದ ಬಾಧಿತವಾಗಿದ್ದರೇ 2019ರಲ್ಲಿ ಬರದ ತೀವ್ರತೆಯು ತುಸು ಕಡಿಮೆಯಾಗಿತ್ತು. ಸಿಎಜಿಯು ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲಬುರಗಿ, ಕೊಡಗು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ಕುರಿತು ತನಿಖೆ ನಡೆಸಿತ್ತು.

2018ರಲ್ಲಿ ಮುಂಗಾರು ಹಂಗಾಮಿನಲ್ಲಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೇ ಹಿಂಗಾರು ಹಂಗಾಮಿನಲ್ಲಿ ಈ ತಾಲೂಕುಗಳ ಸಂಖ್ಯೆಯು 156ಕ್ಕೇರಿತ್ತು. ಹೀಗಾಗಿ ಬರಗಾಲದ ಪರಿಣಾಮವು 2019ರ ಮುಂಗಾರ ಋತುವಿನವರೆಗೂ ಮುಂದುವರಿದಿತ್ತು. ಇದರಲ್ಲಿ ರಾಜ್ಯ ಸರಕಾರವು 49 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. 2013ರಿಂದ 2018ರವರೆಗೆ ಬರಗಾಲದಿಂದ ಕೃಷಿ, ತೋಟಗಾರಿಕೆ ವಲಯದಲ್ಲಿ ಒಟ್ಟಾರೆ 80,015.38 ಕೋಟಿ ರೂ.ನಷ್ಟವಾಗಿತ್ತು.

2013ರಲ್ಲಿ ಕೃಷಿ ವಲಯದಲ್ಲಿ 1,016.99 ಕೋಟಿ ರೂ., ತೋಟಗಾರಿಕೆಗೆ 702.30 ಕೋಟಿ ರೂ. ಸೇರಿ ಒಟ್ಟಾರೆ 1,719.29 ಕೋಟಿ ರೂ. ನಷ್ಟವಾಗಿತ್ತು. 2014ರಲ್ಲಿ ಕೃಷಿ ವಲಯದಲ್ಲಿ 2,706.17 ಕೋಟಿ ರೂ., ತೋಟಗಾರಿಕೆಯಲ್ಲಿ 882.90 ಕೋಟಿ ರೂ. ಸೇರಿ 3,589.07 ಕೋಟಿ ರೂ.ಯಷ್ಟು ನಷ್ಟವಾಗಿತ್ತು. 2015ರಲ್ಲಿ ಕೃಷಿ ವಲಯದಲ್ಲಿ 21,204.51 ಕೋಟಿ, ತೋಟಗಾರಿಕೆ ವಲಯದಲ್ಲಿ 1,164.70 ಕೋಟಿ ರೂ. ಸೇರಿ 22,369.21 ಕೋಟಿ ರೂ. ನಷ್ಟವಾಗಿತ್ತು. 2016ರಲ್ಲಿ ಕೃಷಿ ವಲಯದಲ್ಲಿ 22,533.58 ಕೋಟಿ ರೂ., ತೋಟಗಾರಿಕೆಯಲ್ಲಿ 1,757.28 ಕೋಟಿ ರೂ. ಸೇರಿ 24,290.86 ಕೋಟಿ ರೂ. ನಷ್ಟವಾಗಿದ್ದರೆ 2018ರಲ್ಲಿ ಕೃಷಿ ವಲಯಕ್ಕೆ 26,514.32 ಕೋಟಿ ರೂ., ತೋಟಗಾರಿಕೆಯಲ್ಲಿ 1,532.63 ಕೋಟಿ ಸೇರಿ 28,046.95 ಕೋಟಿ ರೂ.ಯಷ್ಟು ನಷ್ಟವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ನಷ್ಟದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುವುದು ದತ್ತಾಂಶಗಳಿಂದ ಕಂಡು ಬಂದಿದೆ. ರಾಜ್ಯ ಸರಕಾರವು ಅಭಿವೃದ್ಧಿಪಡಿಸಿದ್ದ ಪರಿಹಾರ ಎಂಬ ವಿಶೇಷ ಪೋರ್ಟಲ್‌ನ ಮೂಲಕ ಪರಿಹಾರ ವಿತರಿಸಿತ್ತು. 2018-19ನೇ ಸಾಲಿನಲ್ಲಿ ಬರಪೀಡಿತ ಭೂ ಮಾಲಕರಿಗೆ ಒಟ್ಟಾರೆ 1,625.39 ಕೋಟಿ ರೂ.ಆರ್ಥಿಕ ಪರಿಹಾರ ಪಾವತಿಯಾಗಿತ್ತು.

ಕಳೆದ ಎರಡು ದಶಕಗಳಲ್ಲಿ ರಾಜ್ಯವು ಹೆಚ್ಚಿನ ವರ್ಷಗಳಲ್ಲಿ ಬರ ಪರಿಸ್ಥಿತಿ ಅನುಭವಿಸಿದೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನ, ಮಳೆಯ ಪ್ರಾದೇಶಿಕ ಮತ್ತು ತಾತ್ಕಾಲಿಕ ವ್ಯತ್ಯಾಸದ ಬಗ್ಗೆ ರಾಜ್ಯಕ್ಕೆ ಮಾಹಿತಿ ಇತ್ತು. ಆದರೂ ರಾಜ್ಯ ಸರಕಾರವು ಬರ ನಿರ್ವಹಣೆಗಾಗಿ ಪ್ರದೇಶವಾರು ನಿರ್ದಿಷ್ಟ ಮಾರ್ಗಸೂಚಿಗಳನ್ನೇ ಹೊರತಂದಿರಲಿಲ್ಲ. ಅಲ್ಲದೇ ಮಾರ್ಗಸೂಚಿಗಳನ್ನು ಹೊರತರದಿರಲು ಯಾವುದೇ ಕಾರಣಗಳನ್ನೂ ಸಿಎಜಿಗೆ ಒದಗಿಸಿರಲಿಲ್ಲ.

ಕೊರತೆಯ ಮುನ್ಸೂಚನೆ: ಬರ ಕೈಪಿಡಿ ಪ್ರಕಾರ ರಾಜ್ಯ ಸರಕಾರವು ಬರ ನಿರ್ವಹಣೆಯಲ್ಲಿ ಎಡವಿತ್ತು. ಮತ್ತು ವಾಸ್ತವವನ್ನು ಪ್ರತಿಬಿಂಬಿಸುವ ತೀಕ್ಷ್ಣಮತ್ತು ವಿಶ್ವಾಸಾರ್ಹ ವೀಕ್ಷಣಾ ದತ್ತಾಂಶಗಳ ಕೊರತೆ ಇತ್ತು. ಒಟ್ಟಾರೆ ರಾಜ್ಯದ ಹವಾಮಾನ ಮೇಲ್ವಿಚಾರಣೆ ವ್ಯವಸ್ಥೆಯೇ ನ್ಯೂನತೆಗಳಿಂದ ಕೂಡಿತ್ತು. ಅಲ್ಲದೇ ಬರ ಮೇಲ್ವಿಚಾರಣೆ ಕೋಶವನ್ನು ಸ್ಥಾಪಿಸಿದ್ದರೂ ಸಹ ಉಪಕರಣಗಳ ಕಾರ್ಯಕ್ಷಮತೆಯು ಕಳಪೆಯಿಂದ ಕೂಡಿತ್ತು. ಕಾರ್ಯವಿಧಾನವು ಕೊರತೆಯನ್ನು ಹೊಂದಿತ್ತು ಎಂದು ಸಿಎಜಿ ವರದಿಯಲ್ಲಿ

ವಿಶ್ಲೇಷಿಸಲಾಗಿದೆ.

ಬಿಕ್ಕಟ್ಟು ನಿರ್ವಹಣಾ ಯೋಜನೆಯೇ ಅಸ್ತಿತ್ವದಲ್ಲಿಲ್ಲ

ಬರ ಕೈಪಿಡಿಯ ಪರಿಚ್ಛೇಧ 2.1.1ರ ಪ್ರಕಾರ ಬರ ನಿಗಾ ವ್ಯವಸ್ಥೆಯ ಜತೆಗೆ ಸೂಕ್ಷ್ಮ ಪ್ರದೇಶಗಳ ಬರ ನಿರ್ವಹಣೆಗಾಗಿ ಮಧ್ಯಮ ಮತ್ತು ದೀರ್ಘಕಾಲಿನ ಪ್ರದೇಶ, ನಿರ್ದಿಷ್ಟ ಯೋಜನೆಗಳನ್ನು ಸಿದ್ಧಪಡಿಸಬೇಕಿತ್ತು. ಇದಲ್ಲದೇ ಅಲ್ಪಾವಧಿಯಲ್ಲಿ ಬರವನ್ನು ಎದುರಿಸಲು ಬಿಕ್ಕಟ್ಟು ನಿರ್ವಹಣಾ ಯೋಜನೆಗಳನ್ನು ಎಚ್ಚರಿಕೆಯಿಂದ ರೂಪಿಸಬೇಕಿತ್ತು. ಮಳೆ, ಬಿತ್ತನೆ ಪ್ರಗತಿ, ದೂರ ಸಂವೇದಿಕೆ ಆಧಾರಿತ ಸಸ್ಯ ಸೂಚ್ಯಂಕಗಳು, ಮಣ್ಣಿನ ತೇವಾಂಶ ಆಧರಿತ ಸೂಚ್ಯಂಕಗಳು, ಜಲ ವಿಜ್ಞಾನ ಸೂಚ್ಯಂಕಗಳು ಇವುಗಳನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಬಿಕ್ಕಟ್ಟು ನಿರ್ವಹಣೆ ಯೋಜನೆ ರೂಪಿಸಬೇಕಿತ್ತು. ಆದರೆ ರಾಜ್ಯ ಸರಕಾರವು 2023-24ರವರೆಗೂ ಇಂತಹದ್ದೊಂದು ಬಿಕ್ಕಟ್ಟು ನಿರ್ವಹಣೆ ಯೋಜನೆಯನ್ನೇ ರೂಪಿಸಿರಲಿಲ್ಲ.



share
ಜಿ. ಮಹಾಂತೇಶ್
ಜಿ. ಮಹಾಂತೇಶ್
Next Story
X