Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆರ್ಥಿಕ ವಲಯ : ಮಿಶ್ರ ಪರಿಣಾಮಗಳು!

ಆರ್ಥಿಕ ವಲಯ : ಮಿಶ್ರ ಪರಿಣಾಮಗಳು!

ಟಿ. ಆರ್. ಭಟ್ಟಿ. ಆರ್. ಭಟ್1 Jan 2026 3:40 PM IST
share
ಆರ್ಥಿಕ ವಲಯ : ಮಿಶ್ರ ಪರಿಣಾಮಗಳು!
2025 ಹಿನ್ನೋಟ - 2026 ಮುನ್ನೋಟ

ಹೋದ ದಶಕದ ಅನುಭವದ ಹಿನ್ನೆಲೆಯಲ್ಲಿ ದೇಶದ ಮುಂದೆ ಇರುವ ಆರ್ಥಿಕ ಸವಾಲುಗಳನ್ನು ಎದುರಿಸುವಲ್ಲಿ ೨೦೨೬ರ ಬಜೆಟು ಅರ್ಥಪೂರ್ಣವಾದ ಕಾರ್ಯಪ್ರಣಾಳಿಯನ್ನು ರೂಪಿಸಿ ಈ ಸರಕಾರದ ಉಳಿದ ಕಾಲಾವಧಿಯಲ್ಲಿ ದೇಶದ ಆರ್ಥಿಕತೆ ಮತ್ತಷ್ಟು ಭದ್ರವಾಗುವಂತೆ ಮಾಡಲು ಸಾಧ್ಯವಿದೆ, ಮೂಲಭೂತ ಪ್ರಶ್ನೆ ಎಂದರೆ ಇಂದಿನ ನಾಯಕರಿಗೆ ಆ ದೂರದೃಷ್ಟಿ ಮತ್ತು ಇಚ್ಛಾಶಕ್ತಿ ಇದೆಯೇ?

2024ರ ಲೋಕಸಭಾ ಚುನಾವಣೆಯ ಬಳಿಕ ಮತ್ತೆ ಅಧಿಕಾರಕ್ಕೆ ಏರಿದ ನರೇಂದ್ರ ಮೋದಿ ಸರಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳಿದ್ದವು. ಹೊಸ ಸರಕಾರವು ತನ್ನ ಮೊದಲ ಪೂರ್ಣಾವಧಿ ಬಜೆಟನ್ನು 2025 ಫೆಬ್ರವರಿಯಲ್ಲಿ ಮಂಡಿಸುವ ಸಂದರ್ಭದಲ್ಲಿ, ಈಗಾಗಲೇ ಘೋಷಿಸಿದ 2047ರಲ್ಲಿ ವಿಕಸಿತ ಭಾರತದ ಗುರಿ ತಲಪಲು ಸರಕಾರವು ಯಾವ ತಂತ್ರವನ್ನು ಹೂಡಲಿದೆ ಎಂಬುದರ ಬಗ್ಗೆ ಚರ್ಚೆಗಳೂ ನಡೆಯುತ್ತಿದ್ದವು. ವಿಕಸಿತ ಭಾರತದತ್ತ ಪಯಣಿಸಲು ನಿರ್ದಿಷ್ಟವಾಗಿ ಕೃಷಿ, ಎಂಎಸ್ ಎಂಇ, ಹೂಡಿಕೆ ಮತ್ತು ರಫ್ತುಗಳು ಅಗತ್ಯವಾದ ನಾಲ್ಕು ‘ಇಂಜಿನ್’ ಗಳೆಂದು ಸರಕಾರವು ಬಜೆಟ್ನಲ್ಲಿ ಘೋಷಿಸಿತ್ತು. ಅವುಗಳತ್ತ ಗಮನ ಹರಿಸುವ ಮೊದಲು ಇತ್ತೀಚೆಗಿನ ವರ್ಷಗಳಲ್ಲಿ ಆದ ಆರ್ಥಿಕ ಬದಲಾವಣೆಗಳತ್ತ ಒಂದು ಪಕ್ಷಿನೋಟವನ್ನು ಬೀರುವುದು ಇಲ್ಲಿ ಸೂಕ್ತವಾಗುತ್ತದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ಭಾರತದ ಅರ್ಥವ್ಯವಸ್ಥೆಯು ಇತ್ತೀಚೆಗಿನ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಪ್ರಗತಿಯನ್ನು ಸಾಧಿಸಿದೆ. ಇಂಗ್ಲೆಂಡ್ ಮತ್ತು ಜಪಾನ್ ಅನ್ನು ಹಿಂದೆ ಹಾಕಿ ಜಗತ್ತಿನಲ್ಲಿ ಭಾರತವು ನಾಲ್ಕನೆಯ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ.2027ಕ್ಕೆ ಜರ್ಮನಿಯನ್ನು ಹಿಂದಿಕ್ಕಿ ಮೂರನೆಯ ಸ್ಥಾನಕ್ಕೆ ಏರಬಹುದೆಂದು ಅಂದಾಜಿಸಲಾಗಿದೆ.ಆಂತರಿಕವಾಗಿ, ಅರ್ಥವ್ಯವಸ್ಥೆಯು ಸ್ಥಿರವಾಗಿದೆ.

ನಷ್ಟ ಮತ್ತು ಕೆಟ್ಟ ಸಾಲಗಳ ಹೊರೆಯಿಂದ ಬಳಲಿದ್ದ ಬ್ಯಾಂಕುಗಳು ಬಹಳಷ್ಟು ಚೇತರಿಸಿಕೊಂಡಿವೆ. ವಿದೇಶೀ ವ್ಯಾಪಾರದಲ್ಲಿ ಹೆಚ್ಚಳವಾಗುತ್ತಿದ್ದು ವಿದೇಶೀ ವಿನಿಮಯದ ದಾಸ್ತಾನು ತೃಪ್ತಿಕರವಾಗಿದೆ. ಶೇರುಮಾರುಕಟ್ಟೆಗಳಲ್ಲಿನ ಹೂಡಿಕೆದಾರರು ತಾವು ಹೂಡಿದ ಹಣದ ಮೇಲೆ ಉತ್ತಮ ಪ್ರತಿಫಲವನ್ನು ಪಡೆಯುತ್ತಿದ್ದಾರೆ.

ಆರ್ಥಿಕತೆಯಲ್ಲಿ ಇತ್ತೀಚೆಗೆ ಆದ ಬದಲಾವಣೆಗಳು

2025ನೇ ಸಾಲಿನಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಒಂದು ದೇಶ, ಒಂದು ತೆರಿಗೆ ಘೋಷಣೆಯೊಂದಿಗೆ ಹಿಂದೆ ಬಳಕೆಯಲ್ಲಿದ್ದ ಹಲವು ಹಂತದ ಪರೋಕ್ಷ ತೆರಿಗೆಗಳನ್ನು ಸರಳಗೊಳಿಸಿ ಸರಕು ಮತ್ತು ಸೇವೆಗಳಿಗೆ ದೇಶದಾದ್ಯಂತ ಅನ್ವಯವಾಗುವಂತೆ ಏಕರೂಪದ ತೆರಿಗೆ ಪದ್ಧತಿಯನ್ನು 2017ರಲ್ಲಿ ಜಾರಿಗೊಳಿಸಿದ್ದು ಒಂದು ಮಹತ್ವಪೂರ್ಣ ಕ್ರಮವಾಗಿತ್ತು.

ಆದರೆ ಅದರ ಅನುಷ್ಠಾನ ಮತ್ತು ತೆರಿಗೆಯ ದರದಲ್ಲಿ ಇದ್ದ ಹಲವಾರು ತೊಡಕುಗಳಿಂದಾಗಿ ಅನೇಕ ರಂಗಗಳು ಕಷ್ಟಕ್ಕೆ ಈಡಾದವು; ತೆರಿಗೆಯ ಹೊರೆಯಿಂದ ಸಾವಿರಾರು ಕಿರು ಮತ್ತು ಸಣ್ಣ ಉದ್ದಿಮೆಗಳು ನಷ್ಟವನ್ನು ಅನುಭವಿಸಿ ಬೀಗ ಜಡಿದವು.

ಈ ಅನುಭವದಿಂದ ಎಚ್ಚೆತ್ತ ಸರಕಾರವು 2025ರಲ್ಲಿ ಜಿಎಸ್ಟಿ ಕಾನೂನನ್ನು ಮತ್ತು ತೆರಿಗೆಯ ದರಗಳನ್ನು ಸರಳಗೊಳಿಸಿತು. ಅನೇಕ ಉತ್ಪನ್ನ ಮತ್ತು ಸೇವೆಗಳ ಮೇಲೆ ತೆರಿಗೆಯನ್ನು ಕಡಿಮೆ ಮಾಡಲಾಯಿತು. ಇದು ಸ್ವಾಗತಾರ್ಹ ನಿರ್ಧಾರ. ಇದರ ಜೊತೆಗೆ ಎಂಎಸ್ಎಂಇಗಳಿಗೆ ಉತ್ತೇಜನ ನೀಡಲು ಸುಲಭದಲ್ಲಿ ಬ್ಯಾಂಕುಗಳಿಂದ ಸಾಲ ಸಿಗಲು ಅಗತ್ಯವಾದ ಸಾಲ ಭದ್ರತಾ ಯೋಜನೆಗಳಿಗೆ ಹಿಂದಿನ ಮಿತಿಯಾದ ರೂ. 5 ಕೋಟಿ ಯನ್ನು ರೂ. 10 ಕೋಟಿಗೆ ಏರಿಸಲಾಗಿದೆ; ನವೋದ್ಯಮಗಳ ಸಾಲದ ಮಿತಿಯನ್ನು ರೂ. 10 ಕೋಟಿಯಿಂದ ರೂ. 20 ಕೋಟಿಗೆ ಏರಿಸಲಾಗಿದೆ, ರಫ್ತು ಕೇಂದ್ರಿತ ಎಂಎಸ್ಎಂಇಗಳಿಗೆ ಸಾಲದ ಮಿತಿಯನ್ನು ರೂ. 20 ಕೋಟಿಗೆ ಹೆಚ್ಚಿಸಲಾಗಿದೆ. ಡಿಜಿಟೈಸೇಶನ್ ಮತ್ತು ಎಐ ಗಳ ಉಪಯೋಗವು ಆರ್ಥಿಕತೆಯ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗಲಿದೆ-

ಸರಕಾರಿ ಸೇವೆಗಳು ಸುಲಭದಲ್ಲಿ ಕೈಗೆಟಕಲಿವೆ ಮಾತ್ರವಲ್ಲ ಎಐ ಬಳಸಿ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿದಾಗ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಲಿವೆ. ಇದರಿಂದ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಈ ವರ್ಷದ ಇನ್ನೆರಡು ಬೆಳವಣಿಗೆಗಳೂ ಉಲ್ಲೇಖನೀಯ. ಉದ್ಯಮಿಗಳ ಬೇಡಿಕೆಯಂತೆ ಕಾರ್ಮಿಕ ಶಾಸನಗಳನ್ನು ಸರಳಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ. ಇದು ಹೊಸ ಉದ್ದಿಮೆಗಳ ಸ್ಥಾಪನೆಗೆ ಮತ್ತು ನಷ್ಟ ಅನುಭವಿಸುತ್ತಿರುವ ಉದ್ದಿಮೆಗಳನ್ನು ಮುಚ್ಚಲು ಉತ್ತೇಜನ ನೀಡಬಹುದೆಂದು ಹೇಳಲಾಗಿದೆ. ಕಾರ್ಮಿಕರಿಗೆ ಹೆಚ್ಚಿನ ಸಾಮಾಜಿಕ ಭದ್ರತೆಯನ್ನು ಒದಗಿಸಲಿದೆ ಎಂದೂ ಹೇಳಲಾಗಿದೆ.

ಆದರೆ ಈ ಕಾರ್ಮಿಕ ಸಂಹಿತೆ ಉದ್ಯೋಗಿಗಳಿಗೆ ಮಾರಕವಾಗಲಿದೆ ಎಂಬ ಆರೋಪವೂ ಇದೆ. ಮತ್ತೊಂದು ಬೆಳವಣಿಗೆಯಲ್ಲಿ ವಿಮಾರಂಗದಲ್ಲಿ 100% ರಷ್ಟು ವಿದೇಶೀ ಬಂಡವಾಳ ಹೂಡಿಕೆಗೆ ಮಾಡಿಕೊಟ್ಟ ಅವಕಾಶದಿಂದ ವಿಮಾ ಸೌಲಭ್ಯವು ಇನ್ನೂ ಹೆಚ್ಚು ಜನರಿಗೆ ಮತ್ತು ಪ್ರದೇಶಗಳಿಗೆ ವಿಸ್ತರಿಸಲು ಉತ್ತೇಜನ ನೀಡಬಹುದು ಎಂದು ಸರಕಾರವು ಹೇಳಿದೆ.

ಮಿಶ್ರ ಪರಿಣಾಮಗಳು

ಸರಕಾರದ ದೃಷ್ಟಿಯಿಂದ ಈ ಬದಲಾವಣೆಗಳು ಆರ್ಥಿಕತೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬಹುದಾದರೂ ವಾಸ್ತವದ ಕಡೆ ಒಂದು ನೋಟವನ್ನು ಹಾಯಿಸುವುದು ಅತೀ ಅಗತ್ಯ.

ಜಿಎಸ್ಟಿ ಕಾನೂನನ್ನು ಈಗ ಸರಳಗೊಳಿಸಿದರೂ ಹೋದ ಕೆಲವು ವರ್ಷಗಳಲ್ಲಿ ಮುಚ್ಚಿದ ಸಣ್ಣ ಉದ್ದಿಮೆಗಳು, ನಷ್ಟವಾದ ಬಂಡವಾಳ, ತೀರಿಸಲಾಗದ ಬ್ಯಾಂಕು ಸಾಲಗಳು, ಸಂಭವಿಸಿದ ಉದ್ಯೋಗ ನಷ್ಟ- ಇವುಗಳಿಂದಾದ ಹಾನಿಗಳನ್ನು ಮರೆಯಲು ಸಾಧ್ಯವಿಲ್ಲ. ಸಾವಿರಾರು ಯುವ ಉದ್ದಿಮೆದಾರರು ತಾವು ಹಾಕಿದ ಬಂಡವಾಳವನ್ನು ಕಳಕೊಂಡುದು ಮಾತ್ರವಲ್ಲದೆ, ಬ್ಯಾಂಕು ಸಾಲ ತೀರಿಸಲೂ ಆಗದ ಪರಿಸ್ಥಿತಿಯಲ್ಲಿ ಅವರ ಆತ್ಮಸ್ಥೈರ್ಯಕ್ಕೆ ಬಿದ್ದ ಏಟಿಗೆ ಎಲ್ಲಿದೆ ಪರಿಹಾರ?

ಹೊಸ ಕಾರ್ಮಿಕ ಸಂಹಿತೆಗಳಲ್ಲಿ ಅಡಕವಾಗಿರುವ ಕೆಲವು ಅಂಶಗಳ ಬಗ್ಗೆ ಬಹುತೇಕ ಕೇಂದ್ರ ಕಾರ್ಮಿಕ ಸಂಘಗಳು ಆಕ್ಷೇಪವನ್ನು ಸಲ್ಲಿಸಿವೆ ಮಾತ್ರವಲ್ಲ ಸಾಮೂಹಿಕ ಪ್ರತಿಭಟನೆಗಳಿಗೆ ಮುಂದಾಗಿವೆ. ಹಿಂದೆ ವಾಡಿಕೆಯಲ್ಲಿದ್ದ, ಸರಕಾರದ ಸಂಬಂಧಪಟ್ಟ ಸಚಿವಾಲಯಗಳು, ಉದ್ಯಮಿಗಳ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳನ್ನೊಳಗೊಂಡ ತ್ರಿಪಕ್ಷೀಯ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನರೇಂದ್ರ ಮೋದಿ ಸರಕಾರವು ಹೋದ 11 ವರ್ಷಗಳಲ್ಲಿ ಒಮ್ಮೆಯೂ ಕರೆದಿಲ್ಲ ಎಂಬುದು ಕಾರ್ಮಿಕರ ಹಿತರಕ್ಷಣೆಯ ಬಗ್ಗೆ ಸರಕಾರವು ಎಷ್ಟು ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ವಿಮಾ ರಂಗದಲ್ಲಿ ವಿದೇಶಿ ಹೂಡಿಕೆದಾರರ ಅನಿರ್ಬಂಧಿತ ಪ್ರವೇಶದ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ಈಗಾಗಲೇ ವಿಮಾ ಕಂಪೆನಿಗಳ ವ್ಯವಹಾರದ ಬಗ್ಗೆ ಕಟು ಟೀಕೆಗಳು ಮಾಧ್ಯಮದಲ್ಲಿ ಕೇಳಿ ಬರುತ್ತಿವೆ. ಆರೋಗ್ಯ ವಿಮಾ ಕಂಪೆನಿಗಳು ಪ್ರೀಮಿಯಂ ಅನ್ನು ನಿರಂತರ ಹೆಚ್ಚಿಸಿವೆ.

ಜೊತೆಗೆ ಪಾಲಿಸಿದಾರರು ಆಸ್ಪತ್ರೆಯ/ಚಿಕಿತ್ಸೆಯ ವೆಚ್ಚದ ‘ಕ್ಲೇಮು’ ಸಲ್ಲಿಸಿದಾಗ ವಿಮಾ ಕಂಪೆನಿಗಳು ಕೊಡುವ ಪ್ರತಿಕ್ರಿಯೆಗಳು ಶೋಚನೀಯವಾಗಿದೆ. ಇನ್ನು ಲಾಭದಾಯಕತೆಯೇ ಗುರಿಯಾಗಿರುವ ವಿದೇಶಿ ಬಂಡವಾಳದಾರರ ಪ್ರವೇಶವಾದಾಗ ಪಾಲಿಸಿದಾರರ ಗತಿ ಏನಾಗಬಹುದು? ಉದ್ಯೋಗ ಸೃಷ್ಟಿಯ ಬಗ್ಗೆಯೂ ಕೇಂದ್ರ ಸರಕಾರದ ದೂರಗಾಮೀ ತಂತ್ರಗಳೇನೂ ಸ್ಪಷ್ಟವಾಗಿಲ್ಲ.

20 ವರ್ಷಗಳ ಹಿಂದೆ ಕನಿಷ್ಠ ವೇತನ ಮತ್ತು ವಾರ್ಷಿಕವಾಗಿ ಇಂತಿಷ್ಟು ದಿನಗಳ ಉದ್ಯೋಗ ಖಾತರಿ ಯೋಜನೆಯಾದ ನರೆಗಾ ಕಾನೂನನ್ನು ಬದಲಾಯಿಸಿ ಹೊಸ ಜಿ ರಾಮ್ ಜಿ ಕಾನೂನನ್ನು ಸರಕಾರವು ಜಾರಿಗೊಳಿಸಿದೆ.

ಇದರಿಂದ ಈ ತನಕ ಉದ್ಯೋಗ ಖಾತರಿ ಯೋಜನೆಯಲ್ಲಿ ನೋಂದಾಯಿಸಿದವರಿಗೆ ಸಿಗಲಿದ್ದ ಸಂಪಾದನೆಯ ದಾರಿಯನ್ನು ಮುಚ್ಚಿ ದಂತಾಗಿದೆ. ದೇಶದಲ್ಲಿ 80 ಕೋಟಿ ನಾಗರಿಕರಿಗೆ ಊಟಕ್ಕೆ ಅಗತ್ಯವಾದ ಉಚಿತ ಧಾನ್ಯ ಯೋಜನೆಯು ಇನ್ನೂ ಮುಂದುವರಿಯುತ್ತಾ ಇದೆ. ಒಟ್ಟಿನಲ್ಲಿ 2025 ದೇಶದ ಆರ್ಥಿಕತೆಗೆ ಮಿಶ್ರಫಲ ನೀಡಿದೆ ಎನ್ನಬೇಕಾಗುತ್ತದೆ. ದೇಶದ ಮುಂದಿದ್ದ ಸವಾಲುಗಳನ್ನು ಎದುರಿಸಲು ಸರಕಾರವು ಕೈಗೊಂಡ ದೀರ್ಘಾವಧಿಯ ತಂತ್ರಗಾರಿಕೆ ಯಾವುದೆಂದು ಕೇಳಿದರೆ ಸ್ಪಷ್ಟ ಉತ್ತರ ಸಿಗುವುದು ಕಷ್ಟ. ಹಾಗಿದ್ದರೆ ಸದ್ಯ ಆಗಬೇಕಾದ ಸುಧಾರಣೆಗಳು ಯಾವುವು?

2026ರಲ್ಲಿ ನೀಡಬೇಕಾದ ಆದ್ಯತೆಗಳು

ಆರ್ಥಿಕತೆಯನ್ನು ಹೆಚ್ಚು ಚಲನಶೀಲವನ್ನಾಗಿ ಮಾಡಲು ಬಂಡವಾಳ ಹೂಡುವಿಕೆಗೆ ಇನ್ನಷ್ಟು ಉತ್ತೇಜನದ ತುರ್ತು ಇಂದು ದೇಶದ ಮುಂದಿದೆ. ಖಾಸಗಿ ರಂಗದ ಕಂಪೆನಿಗಳು ಅನೇಕ ರೀತಿಯ ಉತ್ತೇಜನದ ಹೊರತಾಗಿಯೂ ಹೊಸ ಹೂಡಿಕೆಯನ್ನು ನಿರೀಕ್ಷಿತ ಮಟ್ಟದಲ್ಲಿ ಮಾಡುತ್ತಿಲ್ಲ. ಹೀಗಾಗಿ ಸರಕಾರವೇ ಹೆಚ್ಚು ಬಂಡವಾಳವನ್ನು ಹೂಡಬೇಕಾಗುತ್ತದೆ.

ಉದಾಹರಣೆಗಾಗಿ, ರೈಲು ಸಂಪರ್ಕಗಳ ಸುಧಾರಣೆ, ದಕ್ಷತೆ, ಪ್ರಯಾಣಿಕರ ಸುರಕ್ಷತೆಗಳ ಬಗ್ಗೆ ಹೆಚ್ಚು ಗಮನ ಅಗತ್ಯ. ಹೊಸ ಉದ್ದಿಮೆಗಳ ಆರಂಭಕ್ಕೆ ಅನುಕೂಲವಾಗುವಂತೆ ಎಲ್ಲ ಸೌಕರ್ಯಗಳಿರುವ ಮತ್ತಷ್ಟು ಕೈಗಾರಿಕಾ ವಲಯಗಳನ್ನು ಸ್ಥಾಪಿಸಬೇಕು. ಅದರಲ್ಲಿಯೂ ಆರ್ಥಿಕವಾಗಿ ಹಿಂದುಳಿದಿರುವ ಉತ್ತರ ಭಾರತದ ಅನೇಕ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಇದು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು ಮಾತ್ರವಲ್ಲ ಕಾರ್ಮಿಕರ ವಲಸೆಯನ್ನು ಕಡಿಮೆ ಮಾಡಬಲ್ಲದು.

ಸರಕಾರದ ಅನೇಕ ವಿಭಾಗಗಳಲ್ಲಿ ಮತ್ತು ಸರಕಾರದ ಅಧೀನ ಸಂಸ್ಥೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಉದ್ಯೋಗಗಳನ್ನು ಭರ್ತಿ ಮಾಡಲು ಸರಕಾರವು ಮುಂದೆ ಬರಬೇಕು. ಹೆಚ್ಚು ಉದ್ಯೋಗ ಸೃಷ್ಟಿಯಾದಂತೆ ಆದಾಯವೂ ಹೆಚ್ಚಿ ಬೇಡಿಕಯು ವೃದ್ಧಿಸುತ್ತದೆ. ಅದು ಉತ್ಪಾದನೆಗೆ ಪ್ರೇರಣೆ ನೀಡುತ್ತದೆ. ಹೊಸ ಹೂಡಿಕೆಗಳಿಗೆ ಸಂಪನ್ಮೂಲಗಳು ಅಗತ್ಯ. ಕನಿಷ್ಠಮಿತಿಯಿಂದ ಹೆಚ್ಚಿನ ವ್ಯಕ್ತಿಗತ ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಮೂಲಕ ಸಾಕಷ್ಟು ಸಂಪನ್ಮೂಲವನ್ನು ಸರಕಾರವು ಸೇರಿಸಿಕೊಳ್ಳಬಹುದು ಎಂದು ತಜ್ಞರ ಅಭಿಮತ. ಇದರ ಜೊತೆಗೆ ಬಡತನ ರೇಖೆಯಿಂದ ಕೆಳಗಿರುವ ಜನತೆಗೆ ಕನಿಷ್ಠ ಆಯವನ್ನು ನಿರ್ದಿಷ್ಠ ಅವಧಿಯ ತನಕ ಸರಕಾರವು ಖಾತರಿ ಪಡಿಸಬೇಕು. ಇವೆರಡು ಕ್ರಮಗಳಿಂದ ಇಂದು ಸಂಪತ್ತಿನ ವಿತರಣೆ ಯಲ್ಲಿರುವ ತೀವ್ರ ಅಸಮಾನತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲೂ ಸಾಧ್ಯವಿದೆ. ರಫ್ತು ಆಧಾರಿತ ಕೇತ್ರಗಳಿಗೆ ಇನ್ನೂ ಉತ್ತೇಜನ ನೀಡಿ ನಮ್ಮ ವಿದೇಶ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯ ಇಂದಿದೆ. ಅಮೆರಿಕದ ಸುಂಕದ ನೀತಿಯ ಹೊರತಾಗಿಯೂ ಬೇರೆ ದೇಶಗಳ ಜೊತೆ ವಾಣಿಜ್ಯ ಒಪ್ಪಂದಗಳ ಮೂಲಕ ನಮ್ಮ ದೇಶದ ಉತ್ಪನ್ನ ಮತ್ತು ಸೇವೆಗಳಿಗೆ ಮಾರುಕಟ್ಟೆ ಹೆಚ್ಚುವಂತೆ ಮಾಡಬಹುದು. ಕೃಷಿಯಲ್ಲಿ ಇನ್ನೂ ಅನಿಶ್ಚಿತತೆ ಇರುವುದರಿಂದ ರೈತರ ದೀರ್ಘಕಾಲೀನ ಬೇಡಿಕೆಯಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಮತ್ತು ಉತ್ಪಾದಕತೆಯನ್ನು ವೃದ್ಧಿಸಲು ಉತ್ತೇಜನವನ್ನು ನೀಡಬೇಕು. ರೈತ ಚಳವಳಿಯ ನಾಯಕರೊಂದಿಗೆ ಮುಕ್ತ ಸಮಾಲೋಚನೆ ಮಾಡಿ ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಅವರನ್ನು ಪ್ರೋತ್ಸಾಹಿಸಬೇಕು.

ಹೋದ ದಶಕದ ಅನುಭವದ ಹಿನ್ನೆಲೆಯಲ್ಲಿ ದೇಶದ ಮುಂದೆ ಇರುವ ಆರ್ಥಿಕ ಸವಾಲುಗಳನ್ನು ಎದುರಿಸುವಲ್ಲಿ 2026ರ ಬಜೆಟು ಅರ್ಥಪೂರ್ಣವಾದ ಕಾರ್ಯಪ್ರಣಾಳಿಯನ್ನು ರೂಪಿಸಿ ಈ ಸರಕಾರದ ಉಳಿದ ಕಾಲಾವಧಿಯಲ್ಲಿ ದೇಶದ ಆರ್ಥಿಕತೆ ಮತ್ತಷ್ಟು ಭದ್ರವಾಗುವಂತೆ ಮಾಡಲು ಸಾಧ್ಯವಿದೆ, ಮೂಲಭೂತ ಪ್ರಶ್ನೆ ಎಂದರೆ ಇಂದಿನ ನಾಯಕರಿಗೆ ಆ ದೂರದೃಷ್ಟಿ ಮತ್ತು ಇಚ್ಛಾಶಕ್ತಿ ಇದೆಯೇ?

share
ಟಿ. ಆರ್. ಭಟ್
ಟಿ. ಆರ್. ಭಟ್
Next Story
X