40ರ ವಯಸ್ಸಿನಲ್ಲಿ ಚೊಚ್ಚಲ FIFA ವಿಶ್ವಕಪ್ ಪಂದ್ಯ: ಸ್ಪೇನ್ ವಿರುದ್ಧದ ಬಂಡೆ ಕೇಪ್ ವರ್ಡೆಯ ವೊಜಿನ್ಹಾ ಯಾರು?

ವೊಜಿನ್ಹಾ | Photo Credit : AP, PTI
ಆಟಕ್ಕೆ ಮೊದಲು ವೊಜಿನ್ಹಾ ಅವರಿಗೆ Instagram ನಲ್ಲಿ 50,000 ಫಾಲೋವರ್ಗಳ ಸಂಖ್ಯೆ 50,000 ಇದ್ದರೆ, ಆಟದ ನಂತರ 5 ಮಿಲಿಯನ್ ಗೆ ಏರಿದೆ. ಇದೇ ಆಟದಲ್ಲಿ ಕೇಪ್ ವರ್ಡೆ ಮತ್ತು ವೊಜಿನ್ಹಾ ಅವರ ಮಹತ್ವವನ್ನು ತೋರಿಸುತ್ತದೆ.
ಕೇಪ್ ವರ್ಡೆ ಗೋಲ್ ಕೀಪರ್ ವೊಜಿನ್ಹಾ ಫಿಫಾ ವಿಶ್ವಕಪ್ ಗೆ ಪದಾರ್ಪಣೆ ಮಾಡಲು 40 ವರ್ಷ ತೆಗೆದುಕೊಂಡರು. ಇದೀಗ ಯುರೋಪಿಯನ್ ಚಾಂಪಿಯನ್ ಸ್ಪೇನ್ ಅನ್ನು ಗೋಲು ಮಾಡದಂತೆ ತಡೆದು ವಿಶ್ವಾದ್ಯಂತ ಸುದ್ದಿಯಾಗಿದ್ದಾರೆ. ಸ್ಪೇನ್ ತಂಡ 27 ಬಾರಿ ಗೋಲುಗಳನ್ನು ಮಾಡಲು ಯತ್ನಿಸಿದರೂ ವೊಜಿನ್ಹಾ ಅವಕಾಶ ನೀಡಲಿಲ್ಲ. ಬಾರ್ಸಿಲೋನಾದ ಯುವ ಸೂಪರ್ ಸ್ಟಾರ್ ಲ್ಯಾಮಿನ್ ಯಮಲ್ ಅವರ ದ್ವಿತೀಯಾರ್ಧದ ಪ್ರಯತ್ನವೂ ಸಹ ಕೇಪ್ ವರ್ಡೆಯ ರಕ್ಷಣಾ ಗೋಡೆಯನ್ನು ದಾಟಲು ಸಾಧ್ಯವಾಗಲಿಲ್ಲ.
ಆಟಕ್ಕೆ ಮೊದಲು ವೊಜಿನ್ಹಾ ಅವರ ಸಾಮಾಜಿಕ ಜಾಲತಾಣದ ಫಾಲೋವರ್ಗಳ ಸಂಖ್ಯೆ 50,000 ಇದ್ದರೆ, ಆಟದ ನಂತರ ಅದರ ಸಂಖ್ಯೆ 5 ದಶಲಕ್ಷಕ್ಕೆ ಏರಿತು. ಇದೇ ಆಟದಲ್ಲಿ ಕೇಪ್ ವರ್ಡೆ ಮತ್ತು ಅವರ ಮಹತ್ವವನ್ನು ತೋರಿಸುತ್ತದೆ.
ವಿಶ್ವ ರ್ಯಾಂಕಿಂಗ್ ನಲ್ಲಿ 3ನೇ ಸ್ಥಾನದಲ್ಲಿರುವ ಸ್ಪೇನ್ ವಿರುದ್ಧ ರ್ಯಾಂಕಿಂಗ್ ನಲ್ಲಿ 64ನೇ ಸ್ಥಾನದಲ್ಲಿರುವ ಕೇಪ್ ವರ್ಡೆ ಒಂದು ಅಂಕ ಗಳಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪಂದ್ಯದ ಆರಂಭದಿಂದಲೂ ಸ್ಪೇನ್ ನ ಗೋಲು ಗಳಿಕೆಯ ಎಲ್ಲಾ ಹಾದಿಯನ್ನು ಕೇಪ್ ವರ್ಡೆಯ ಡಿಫೆಂಡರ್ಗಳು ಮುಚ್ಚಿದ್ದರು. ಅದರಲ್ಲೂ ತಂಡದ ಗೋಲ್ ಕೀಪರ್ 40 ವರ್ಷದ ವೊಜಿನ್ಹಾ ಬಂಡೆಯಂತೆ ನಿಂತು ಸ್ಪೇನ್ ನ ಹೊಡೆತಗಳನ್ನು ತಡೆದರು. ಅವರು ನಂತರ ಪಂದ್ಯ ಶ್ರೇಷ್ಠರಾಗಿ ಬಹುಮಾನವನ್ನೂ ಪಡೆದರು.
ಒಟ್ಟು ಪಂದ್ಯದಲ್ಲಿ ವೊಜಿನ್ಹಾ ಅವರು 7 ಗೋಲು ಅವಕಾಶ ಸೇರಿದಂತೆ ಒಟ್ಟು 23 ಶಾಟ್ ಗಳನ್ನು ರಕ್ಷಿಸಿ ಕೇಪ್ ವರ್ಡೆಗೆ ಒಂದು ಅಂಕ ಸಿಗುವಂತೆ ಮಾಡಿದ್ದಾರೆ. ಸ್ಪೇನ್ ವಿರುದ್ಧ ತಡೆಗೋಡೆಯಾಗಿ ನಿಂತಿರುವ ಈ ವೊಜಿನ್ಹಾ ಯಾರು? ಕೇಪ್ ವರ್ಡೆ ಫುಟ್ಬಾಲ್ ವಿಶ್ವಕಪ್ ಅಂಗಣಕ್ಕೆ ಪ್ರವೇಶಿಸಿದ ಕತೆಯೂ ರೋಮಾಂಚಕಾರಿ.
ಜಾಗತಿಕವಾಗಿ ಸುದ್ದಿಯಾದ ಕೇಪ್ ವರ್ಡೆ:
ಸೋಮವಾರ ಸ್ಪೇನ್ ವಿರುದ್ಧ ಒಂದು ಅಂಕಗಳಿಗಲು ಸಾಧ್ಯವಾದ ಮೇಲೆ ಕೇಪ್ ವರ್ಡೆ ಎನ್ನುವ ದೇಶ ಜಾಗತಿಕವಾಗಿ ಸುದ್ದಿ ಮಾಡಿದೆ. ಅಧಿಕೃತವಾಗಿ ಕ್ಯಾಬೊ ವರ್ಡೆ ಎಂದು ಕರೆಸಿಕೊಳ್ಳುವ ಕೇಪ್ ವರ್ಡೆ ಪಶ್ಚಿಮ ಆಫ್ರಿಕಾದ ಕರಾವಳಿಯ ಮಧ್ಯ ಅಟ್ಲಾಂಟಿಕ್ ಮಹಾಸಾಗರದ ಒಂದು ದ್ವೀಪಸಮೂಹದ ದೇಶ. ಜನಸಂಖ್ಯೆ ಸುಮಾರು 6 ಲಕ್ಷ. 10 ಜ್ವಾಲಾಮುಖಿ ದ್ವೀಪಗಳನ್ನು ಇದು ಒಳಗೊಂಡಿದೆ. ಪ್ರಾಚೀನ ಕಡಲತೀರಗಳು, ರೋಮಾಂಚಕ ಪೋರ್ಚುಗೀಸ್-ಆಫ್ರಿಕನ್ ಸಂಸ್ಕೃತಿ ಮತ್ತು ವರ್ಷಪೂರ್ತಿ ಬೆಚ್ಚಗಿನ ವಾತಾವರಣಕ್ಕೆ ಹೆಸರಾಗಿರುವ ಈ ದೇಶ ವಿಂಡ್ ಸರ್ಫಿಂಗ್, ವಿಶ್ರಾಂತಿ ಮತ್ತು ಉಷ್ಣವಲಯದ ಪರಿಸರವಿರುವ ಆಕರ್ಷಕ ತಾಣವಾಗಿದೆ. ಅಮೆರಿಕದದ ವೀಸಾ ಬೇಕೆಂದರೆ ನಾಗರಿಕರು $15,000 ವರೆಗಿನ ಬಾಂಡ್ ಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ ಕೇಪ್ ವರ್ಡೆ ಕೂಡ ಒಂದು. ಅಂತಹ ದೇಶ ಇದೀಗ ವಿಶ್ವವನ್ನೇ ನಿಬ್ಬೆರಗಾಗಿಸಿದೆ.
ಯಾರು ಈ ವೊಜಿನ್ಹಾ?
25ನೇ ವಯಸ್ಸಿನಲ್ಲಿ ಆಂಗೋಲನ್ ಕ್ಲಬ್ ಪ್ರೊಗ್ರೆಸೊ ಪರ ಪದಾರ್ಪಣೆ ಮಾಡುವವರೆಗೂ ವೃತ್ತಿಪರ ಮಟ್ಟದಲ್ಲಿ ಅವರ ಫುಟ್ಬಾಲ್ ಆರಂಭವಾಗದ ವೃತ್ತಿಜೀವನದ ಪರಾಕಾಷ್ಠೆಯಾಗಿತ್ತು. ಅಂದಿನಿಂದ ಅವರು ಮೊಲ್ಡೋವಾ, ಸೈಪ್ರಸ್, ಸ್ಲೋವಾಕಿಯ ಮತ್ತು ಪೋರ್ಚುಗಲ್ನಲ್ಲಿ ಆಡಿದ್ದಾರೆ. ಪ್ರಸ್ತುತ ಅವರು ಪೋರ್ಚುಗೀಸ್ ಎರಡನೇ ದರ್ಜೆಯ ಫುಟ್ಬಾಲ್ ಕ್ಲಬ್ ಚೇವ್ಸ್ ಪರ ಆಡುತ್ತಿದ್ದಾರೆ. ವಿಶ್ವಕಪ್ ಗೆ ಆಡುವ ಮೊದಲು ಅವರು ತವರಿನಲ್ಲಿ ಬಾಟುಕೆ ಎಫ್ಸಿ ಮತ್ತು ಸಿಎಸ್ ಮೈಂಡ್ಲೆನ್ಸ್ಗೆ ಆಡುತ್ತಿದ್ದರು.
ಕನಸಿನ ಪಂದ್ಯ ಆಡುವ ಅವಕಾಶ:
ಅವರು ಕೇಪ್ ವರ್ಡೆಯ ರಾಷ್ಟ್ರೀಯ ತಂಡವನ್ನು 2012ರಲ್ಲಿ ಸೇರಿದ್ದರು. ಫುಟ್ಬಾಲ್ ವಿಶ್ವಕಪ್ ನಲ್ಲಿ ಆಡುವ ಕನಸಿನಿಂದಾಗಿ ಅವರು ರಾಷ್ಟ್ರೀಯ ತಂಡವನ್ನು ತೊರೆಯದೆ ನಿವೃತ್ತಿಯಾಗದೆ ಆಟ ಮುಂದುವರಿಸಿದ್ದರು. ಸೋಮವಾರ ಅವರ ಕನಸು ನನಸಾಗಿತ್ತು. ಅಂತಿಮ ವಿಝಲ್ ಹೊಡೆಯುತ್ತಿದ್ದಂತೆ ತಮ್ಮ ನೆಟ್ ಬಳಿ ಕುಸಿದು ಅತ್ತುಬಿಟ್ಟ ವೊಜಿನ್ಹಾ ಅವರ ಕನಸು ನನಸಾಗಿರುವ ಕ್ಷಣಗಳಿಗೆ ಸಾಕ್ಷಿಯಾಯಿತು. ಪಂದ್ಯದುದ್ದಕ್ಕೂ ಅಸಾಧಾರಣ ಸೇವ್ ಗಳನ್ನು ಮಾಡಿದ ವೊಜಿನ್ಹಾ ತಮ್ಮ ಕನಸಿನ ಪಂದ್ಯವನ್ನು ಕನಸಿನಂತೆಯೇ ಆಡಿದ್ದಾರೆ ಎಂದರೆ ತಪ್ಪಾಗದು.






