ಸಸ್ಯಗಳು ‘ಉಸಿರಾಡುವುದನ್ನು’ ನೋಡುವ ಸಾಧನ ಕಂಡು ಹಿಡಿದ ಸಂಶೋಧಕರು!

Photo Credit ; X \ @BrianRoemmele , ಸಾಂದರ್ಭಿಕ ಚಿತ್ರ (freepik)
ನೀರಿನ ಕೊರತೆಯು ಕೃಷಿ ಇಳುವರಿಯಲ್ಲಿ ದೊಡ್ಡ ಸಮಸ್ಯೆಯಾಗಿರುವ ಸಂದರ್ಭದಲ್ಲಿ ಈಗಿನ ಜ್ಞಾನ ಬಹಳ ಮುಖ್ಯವಾಗಿದೆ. ನೀರಿನ ಬಳಕೆ ಅತ್ಯುತ್ತಮವಾಗಿಸುವ ಬೆಳೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ.
ಶತಮಾನಗಳಿಂದ ಸಸ್ಯಗಳು ಸ್ಟೊಮಾಟಾ ಎಂದು ಕರೆಯಲಾಗುವ ಸಣ್ಣ ಎಲೆ ರಂಧ್ರಗಳ ಮೂಲಕ ‘ಉಸಿರಾಡುತ್ತವೆ’ ಎಂದು ವಿಜ್ಞಾನಿಗಳಿಗೆ ತಿಳಿದಿದೆ. ಇದು ದ್ಯುತಿ ಸಂಶ್ಲೇಷಣೆಗಾಗಿ ನೀರಿನ ಆವಿಯ ನಷ್ಟದೊಂದಿಗೆ ಕಾರ್ಬನ್ ಡೈ ಆಕ್ಸೈಡ್ ಸೇವನೆಯನ್ನು ಸಮತೋಲನಗೊಳಿಸುತ್ತದೆ ಎಂದೂ ತಿಳಿದಿದೆ. ಆದರೆ, ಇದೀಗ ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಸಸ್ಯಗಳು ‘ಉಸಿರಾಡುವುದನ್ನು’ ನೋಡುವ ಸಾಧನವನ್ನು ಸೃಷ್ಟಿಸಿದ್ದಾರೆ. ನಿಯಂತ್ರಿತ ಪರಿಸ್ಥಿತಿಯಲ್ಲಿ ನೈಜ ಸಮಯದಲ್ಲಿ ಸಸ್ಯಗಳು ಉಸಿರಾಡುವುದನ್ನು ವೀಕ್ಷಿಸಲು ಈ ಸಾಧನ ಅವಕಾಶ ಕೊಡುತ್ತದೆ.
ಹೊಸ ಸಾಧನದ ಮೂಲಕ ಸಂಶೋಧನೆ
‘ಸ್ಟೊಮಾಟಾ ಇನ್ ಸೈಟ್’ ಎನ್ನುವ ಸಾಧನ ಸ್ಟೊಮಾಟ ಎಂದು ಕರೆಯಲಾಗುವ ಎಲೆಗಳ ಮೇಲಿನ ಸೂಕ್ಷ್ಮ ರಂಧ್ರಗಳು ಹೇಗೆ ಇಂಗಾಲದ ಡೈಆಕ್ಸೈಡ್, ಆಮ್ಲಜನಕ ಮತ್ತು ನೀರಿನ ಆವಿಯನ್ನು ನಿರ್ವಹಿಸುತ್ತದೆ ಎಂದು ಬಹಿರಂಗಪಡಿಸಿದೆ. ವಿಸರ್ಜನೆ (transpiration) ಮೂಲಕ ನೀರಿನ ನಷ್ಟದ ಮೂಲಕ ದ್ಯುತಿ ಸಂಶ್ಲೇಷಣೆಗೆ (photosynthesis) ಅನಿಲ ಸೇವನೆಯನ್ನು ಸಮತೋಲನಗೊಳಿಸಲು ಈ ಸಣ್ಣ ಬಾಯಿ ತೆರೆದು ಮುಚ್ಚಿಕೊಳ್ಳುತ್ತದೆ. ಆ ಮೂಲಕ ಸಸ್ಯಗಳು ಶಾಖ, ಬರ ಮತ್ತು ಇತರ ಒತ್ತಡಗಳನ್ನು ನಿಬಾಯಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದನ್ನು ಸಾಧನ ವಿವರಿಸುತ್ತದೆ.
ವಿಡಿಯೋವನ್ನು ಬಿಡುಗಡೆ ಮಾಡಿದ ತಂಡ
ಈ ಪ್ರಮುಖ ತಂತ್ರಜ್ಞಾನವು ನಿಖರವಾದ ಅನಿಲ-ವಿನಿಮಯ ಮಾಪನ ವ್ಯವಸ್ಥೆಯಾಗಿರುವ ಹೈ-ರೆಸೊಲ್ಯುಷನ್ ಕನ್ಫೊಕಲ್ ಮೈಕ್ರೋಸ್ಕೋಪ್ ಮತ್ತು ಚಿತ್ರದ ವಿಶ್ಲೇಷಣೆಗಾಗಿ ಅತ್ಯಾಧುನಿಕ ಮಿಷಿನ್-ಲರ್ನಿಂಗ್ ಸಾಫ್ಟ್ವೇರ್ ಅನ್ನು ಸಂಯೋಜಿಸಿದೆ. ಪ್ರಯೋಗದಲ್ಲಿ ತಾಪಮಾನ, ಆರ್ದ್ರತೆ, ಬೆಳಕು, ಕಾರ್ಬನ್ ಡೈಆಕ್ಸೈಡ್ ಮಟ್ಟಗಳು ಮತ್ತು ನೀರಿನ ಲಭ್ಯತೆಯನ್ನು ನಿಖರವಾಗಿ ನಿಯಂತ್ರಿಸುವ ಅಂಗೈಗಾತ್ರದ ಕೋಣೆಯ ಒಳಗೆ ಸಣ್ಣ ಎಲೆಗಳ ಭಾಗಗಳನ್ನು ಇರಿಸುವುದನ್ನು ಒಳಗೊಂಡಿದೆ.
ತಂಡವು ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುವುದು ಮತ್ತು ಆಮ್ಲಜನಕ ಮತ್ತು ನೀರಿನ ಆವಿ ಬಿಡುಗಡೆ ಮಾಡುವುದರಿಂದ ಅನಿಲಗಳ ಕ್ರಿಯಾತ್ಮಕ ಚಲನೆಯನ್ನು ಸೆರೆಹಿಡಿಯುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅತ್ಯಾಧುನಿಕ ಇಮೇಜಿಂಗ್ ಮತ್ತು ಸೆನ್ಸರ್ಗಳನ್ನು ಬಳಸಿಕೊಂಡು ಸಂಶೋಧಕರು, ಸ್ಟೊಮಾಟಾ ಬೆಳಕು, ಆರ್ದ್ರತೆ ಮತ್ತು ತಾಪಮಾನಕ್ಕೆ ಪ್ರತಿಕ್ರಿಯಿಸುವಾಗಿನ ಸೂಕ್ಷ್ಮ ಸೆಲ್ಯುಲರ್ (ಜೀವಕೋಶೀಯ) ಬದಲಾವಣೆಗಳನ್ನು ಪತ್ತೆ ಮಾಡಿದ್ದಾರೆ. ಈ ಸಂಶೋಧನೆಯಿಂದ ಸಸ್ಯ ಹೊಂದಾಣಿಕೆ ಮಾಡಿಕೊಳ್ಳುವುದು, ನೀರಿನ ನಿಯಂತ್ರಣ ಮತ್ತು ಆಂತರಿಕ ಸಮತೋಲನದ ಬಗ್ಗೆ ಒಳನೋಟಗಳನ್ನು ಪಡೆಯಲಾಗಿದೆ.
ಈ ಸಂಶೋಧನೆ ಏಕೆ ಮುಖ್ಯವಾಗಿದೆ?
ಸಸ್ಯದ ಜೈವಿಕ ಕಾರ್ಯವನ್ನು ಅರ್ಥಮಾಡಿಕೊಳ್ಳುವಾಗಿನ ಈ ಪ್ರಗತಿಯಿಂದಾಗಿ ಬೆಳೆಯ ಸಂತಾನೋತ್ಪತ್ತಿ ತಂತ್ರಗಳಲ್ಲಿ ಕ್ರಾಂತಿಯನ್ನು ತರಬಹುದಾಗಿದೆ. ಸ್ಟೊಮಾಟಾದ ವರ್ತನೆಯ ಕುರಿತಂತೆ ಒಳನೋಟಗಳನ್ನು ಗಳಿಸಿರುವುದು ಮತ್ತು ತೆರೆಯುವಾಗ ಮತ್ತು ಮುಚ್ಚುವಾಗಿನ ರಾಸಾಯನಿಕ ಸಂಕೇತಗಳ ವಿವರ ದೊರೆತಿರುವುದರಿಂದ ವಿಜ್ಞಾನಿಗಳು ಸುಧಾರಿತ ನೀರಿನ ಬಳಕೆಯ ಕಾರ್ಯಕ್ಷಮತೆಗೆ ಸಂಬಂಧಿಸಿದ ಪ್ರಮುಖ ಅನುವಂಶಿಕ ಲಕ್ಷಣಗಳನ್ನು ಗುರುತಿಸಬಹುದಾಗಿದೆ.
ನೀರಿನ ಕೊರತೆಯು ಕೃಷಿ ಇಳುವರಿಯಲ್ಲಿ ದೊಡ್ಡ ಸಮಸ್ಯೆಯಾಗಿರುವ ಸಂದರ್ಭದಲ್ಲಿ ಈ ಜ್ಞಾನ ಬಹಳ ಮುಖ್ಯವಾಗಿದೆ. ನೀರಿನ ಬಳಕೆ ಅತ್ಯುತ್ತಮವಾಗಿಸುವ ಬೆಳೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಆ ಮೂಲಕ ಹೆಚ್ಚುತ್ತಿರುವ ತಾಪಮಾನ ಮತ್ತು ಬರಗಾಲದ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಬಹುದು.
ಕೃಪೆ: ndtv.com







