ಯುರೋಪ್ಗೆ ಪ್ರಯಾಣಿಸುವ ಭಾರತೀಯ ಪ್ರಜೆಗಳಿಗೆ ವೀಸಾ ಮುಕ್ತ ವಿಮಾನ ನಿಲ್ದಾಣ ಭೇಟಿಗೆ ಅವಕಾಶ ನೀಡಿದ ಫ್ರಾನ್ಸ್

ಸಾಂದರ್ಭಿಕ ಚಿತ್ರ | Photo Credit : freepik
ಯುರೋಪ್ಗೆ ಹೋಗುವಾಗ ಫ್ರಾನ್ಸ್ ಮೂಲಕ ಹಾದು ಹೋಗುವ ಭಾರತೀಯರು ಇನ್ನು ಮುಂದೆ ಫ್ರಾನ್ಸ್ ವಿಮಾನ ನಿಲ್ದಾಣದ ವೀಸಾ ಪಡೆಯುವ ಅಗತ್ಯವಿಲ್ಲ. ಫೆಬ್ರವರಿಯಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಮಾಡಿದ ಘೋಷಣೆಗೆ ಅನುಗುಣವಾಗಿ ಫ್ರಾನ್ಸ್ ಭಾರತೀಯ ಪ್ರಜೆಗಳಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ.
ಯುರೋಪ್ಗೆ ಹೋಗಿ ಫ್ರಾನ್ಸ್ ಮೂಲಕ ಹಾದು ಹೋಗುವ ಭಾರತೀಯರು ಇನ್ನು ಮುಂದೆ ವಿಮಾನ ನಿಲ್ದಾಣ ವೀಸಾ ಪಡೆಯುವ ಅಗತ್ಯವಿಲ್ಲ. ಫೆಬ್ರವರಿಯಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಘೋಷಣೆಗೆ ಅನುಗುಣವಾಗಿ ಫ್ರಾನ್ಸ್ ಭಾರತೀಯ ಪ್ರಜೆಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಜಾರಿಗೆ ತಂದಿದೆ. ಭಾರತದಲ್ಲಿನ ಫ್ರೆಂಚ್ ರಾಯಭಾರ ಕಚೇರಿಯ ಹೇಳಿಕೆಯ ಪ್ರಕಾರ ಈ ಕ್ರಮವು ಎಪ್ರಿಲ್ 10ರಿಂದ ಕಾರ್ಯರೂಪಕ್ಕೆ ಬರಲಿದೆ.
“ಸಾಮಾನ್ಯ ಪಾಸ್ಪೋರ್ಟ್ ಹೊಂದಿರುವ ಭಾರತೀಯ ಪ್ರಜೆಗಳು ಫ್ರೆಂಚ್ ಭೂಪ್ರದೇಶದಲ್ಲಿರುವ ವಿಮಾನ ನಿಲ್ದಾಣಗಳ ಅಂತರರಾಷ್ಟ್ರೀಯ ವಲಯದ ಮೂಲಕ ಹಾದು ಹೋಗುವಾಗ ವಿಮಾನ ನಿಲ್ದಾಣ ಸಾರಿಗೆ ವೀಸಾವನ್ನು ಹೊಂದಿರಬೇಕಾಗಿಲ್ಲ” ಎಂದು ಕಚೇರಿ ಹೇಳಿಕೆ ನೀಡಿದೆ. ಮತ್ತೊಂದು ಅಂತರರಾಷ್ಟ್ರೀಯ ತಾಣಕ್ಕೆ ಹೋಗುವ ಮಾರ್ಗದಲ್ಲಿ ಫ್ರೆಂಚ್ ವಿಮಾನ ನಿಲ್ದಾಣಗಳಲ್ಲಿ ಉಳಿಯುವ ಪ್ರಯಾಣಿಕರಿಗೆ ಈ ಕ್ರಮ ಅನ್ವಯಿಸುತ್ತದೆ.
ವಿದೇಶಾಂಗ ಸಚಿವಾಲಯ ವಕ್ತಾರ ರಣ್ಧೀರ್ ಜೈಸ್ವಾಲ್ ಘೋಷಣೆಯನ್ನು ಸ್ವಾಗತಿಸಿದ್ದಾರೆ. “ಈ ನಿರ್ಧಾರವು ಭಾರತ ಮತ್ತು ಫ್ರಾನ್ಸ್ ನಡುವಿನ ಶಾಶ್ವರತ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಅಧ್ಯಕ್ಷ ಮ್ಯಾಕ್ರನ್ ಅವರ ಇತ್ತೀಚೆಗಿನ ಭೇಟಿಯ ಸಮಯದಲ್ಲಿ ವಿಶೇಷ ಜಾಗತಿಕ ಕಾರ್ಯಸೂಚಿ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲಾಗಿದೆ ಮತ್ತು ಜನರ ಸುಗಮ ಚಲನೆ ಮತ್ತು ಜನರಿಂದ ಜನರಿಗೆ ಸಂಬಂಧಗಳನ್ನು ಮತ್ತಷ್ಟು ಸುಗಮಗೊಳಿಸುತ್ತದೆ” ಎಂದು ಅವರು ಹೇಳಿದರು.
ಈ ನಿರ್ಧಾರವು ಅನೇಕ ಭಾರತೀಯ ಪ್ರಯಾಣಿಕರಿಗೆ ನೆರವಾಗಲಿದೆ. ವಿಶೇಷವಾಗಿ ಪ್ಯಾರಿಸ್ನಂತಹ ಪ್ರಮುಖ ಫ್ರೆಂಚ್ ವಿಮಾನ ನಿಲ್ದಾಣಗಳ ಮೂಲಕ ಯುರೋಪ್, ಉತ್ತರ ಅಮೆರಿಕ ಮತ್ತು ಇತರ ದೇಶಗಳಿಗೆ ಪ್ರಯಾಣಿಸುವವರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಫೆಬ್ರವರಿ 17ರಿಂದ 19ರವರೆಗೆ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂತಹ ಕ್ರಮವನ್ನು ಅಳವಡಿಸಿಕೊಳ್ಳುವ ಘೋಷಣೆಗೆ ನಿರ್ಧರಿಸಲಾಗಿತ್ತು. ಆರು ತಿಂಗಳ ಪ್ರಾಯೋಗಿಕ ಅವಧಿಯ ನಂತರ ಪರಿಶೀಲಿಸಲಾಗುವ ಈ ಕ್ರಮವನ್ನು ಎರಡೂ ಕಡೆಯವರೂ ಸ್ವಾಗತಿಸಿದ್ದಾರೆ ಎಂದು ಭಾರತ-ಫ್ರಾನ್ಸ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ ಎರಡೂ ದೇಶಗಳು 2030ರ ವೇಳೆಗೆ ಫ್ರಾನ್ಸ್ ದೇಶಕ್ಕೆ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಗುರಿ ಹೊಂದಿವೆ. ಪ್ರಸ್ತುತ ಫ್ರಾನ್ಸ್ಗೆ ವಿದ್ಯಾಭ್ಯಾಸಕ್ಕಾಗಿ ಹೋಗುವ ಭಾರತೀಯರ ಸಂಖ್ಯೆ .ಸುಮಾರು 10,000ದಿಂದ 30,000ಕ್ಕೆ ಏರಿದೆ.






