Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 'ಸರಕಾರಿ ಸಂಸ್ಥೆ'ಗಳನ್ನು ಬದಿಗೊತ್ತಿ...

'ಸರಕಾರಿ ಸಂಸ್ಥೆ'ಗಳನ್ನು ಬದಿಗೊತ್ತಿ ಶಾಸಕರ ಭವನಕ್ಕೆ ದುಬಾರಿ ದರದಲ್ಲಿ ಪೀಠೋಪಕರಣಗಳ ಖರೀದಿ

ಜಿ.ಮಹಾಂತೇಶ್ಜಿ.ಮಹಾಂತೇಶ್4 Nov 2025 8:04 AM IST
share
ಸರಕಾರಿ ಸಂಸ್ಥೆಗಳನ್ನು ಬದಿಗೊತ್ತಿ ಶಾಸಕರ ಭವನಕ್ಕೆ ದುಬಾರಿ ದರದಲ್ಲಿ ಪೀಠೋಪಕರಣಗಳ ಖರೀದಿ

ಬೆಂಗಳೂರು : ಕರ್ನಾಟಕ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದಂತಹ ಸರಕಾರಿ ಅಧೀನ ಸಂಸ್ಥೆಗಳನ್ನು ಬದಿಗೊತ್ತಿರುವ ಕರ್ನಾಟಕ ವಿಧಾನಸಭೆ ಸಚಿವಾಲಯವು, ಶಾಸಕರ ಭವನಕ್ಕೆ ದುಬಾರಿ ದರದಲ್ಲಿ ಉಡುಪಿ ಮೂಲದ ಶ್ರೀರಾಮ್ ಎಂಟರ್ ಪ್ರೈಸ್‌ಸನಿಂದ 5.50 ಕೋಟಿ ರೂ.ವೆಚ್ಚದಲ್ಲಿ ಮಂಚ, ಡೈನಿಂಗ್ ಟೇಬಲ್, ಸೋಫಾ ಸೆಟ್ ಸೇರಿದಂತೆ ಒಟ್ಟಾರೆ 750 ಪೀಠೋಪಕರಣಗಳನ್ನು ಖರೀದಿಸಿದೆ.

ಟೆಂಡರ್ ಮೂಲಕವೇ ಖರೀದಿಸಬೇಕು ಎಂದು ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ಪ್ರಸ್ತಾವ ತಿರಸ್ಕರಿಸಿತ್ತು. ಆದರೂ ಸಹ ವಿಧಾನಸಭೆ ಸಚಿವಾಲಯವು ಆರ್ಥಿಕ ಇಲಾಖೆ ಮೇಲೆ ಒತ್ತಡ ಹೇರಿ 4 (ಜಿ) ವಿನಾಯಿತಿ ಪಡೆದಿರುವುದನ್ನು ‘the-file.in’ಇದೀಗ ಆರ್‌ಟಿಐ ದಾಖಲೆಗಳ ಮೂಲಕ ಹೊರಗೆಡವುತ್ತಿದೆ.

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬಿಜೆಪಿ ಶಾಸಕರು ಆರೋಪಿಸುತ್ತಿರುವ ನಡುವೆಯೇ ಶಾಸಕರ ಭವನಕ್ಕೆ ಮಂಚ ಸೇರಿದಂತೆ ಇನ್ನಿತರ ಪೀಠೋಪಕರಣಗಳನ್ನು ಖಾಸಗಿ ಸಂಸ್ಥೆಯಿಂದ ಖರೀದಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈ ಪ್ರಕರಣವೂ ಸಹ ಪ್ರತಿಪಕ್ಷ ಬಿಜೆಪಿ ಕೈಗೆ ಹೊಸ ಅಸ್ತ್ರವೊಂದನ್ನು ನೀಡಿದಂತಾಗಿದೆ.

ಶಾಸಕರ ಭವನದ ಕೊಠಡಿಗಳಿಗೆ ಈ ಹಿಂದಿನಿಂದಲೂ ಪೀಠೋಪಕರಣ ಖರೀದಿಗೆ ಟೆಂಡರ್ ಆಹ್ವಾನಿಸಲಾಗುತ್ತಿತ್ತು. ಟೆಂಡರ್ ಪ್ರಕ್ರಿಯೆ ಮೂಲಕವೇ ಪೀಠೋಪಕರಣ ಖರೀದಿಸಲಾಗುತ್ತಿತ್ತು. ಆದರೆ ಯು.ಟಿ.ಖಾದರ್ ಅವರು ಸಭಾಧ್ಯಕ್ಷರಾಗಿರುವ ಈ ಅವಧಿಯಲ್ಲಿ 4 ಜಿ ವಿನಾಯಿತಿ ಮೂಲಕ ಖರೀದಿಸಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿದ್ದ ವಿಧಾನಸಭೆ ಸಚಿವಾಲಯ

ಶಾಸಕರ ಭವನದಲ್ಲಿನ ಶಾಸಕರ ಕೊಠಡಿಗಳಿಗೆ ಪೀಠೋಪಕರಣ ಖರೀದಿಸಲು ವಿಧಾನಸಭೆ ಸಚಿವಾಲಯವು 4 (ಜಿ) ವಿನಾಯಿತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಆಕ್ಷೇಪಗಳನ್ನು ಎತ್ತಿತ್ತಲ್ಲದೇ ಪ್ರಶ್ನಾವಳಿಗಳನ್ನು ಕಳಿಸಿತ್ತು.

ಪ್ರಸ್ತಾಪಿತ ಪೀಠೋಪಕರಣಗಳನ್ನು ಉಡುಪಿಯ ಶ್ರೀರಾಮ್ ಎಂಟರ್ ಪ್ರೈಸೆಸ್‌ನಿಂದಲೇ ಖರೀದಿಸಲು ಏಕೆ ಉದ್ದೇಶಿಸಲಾಗಿದೆ, ಈ ಸಂಸ್ಥೆಯನ್ನು ಹೊರತುಪಡಿಸಿ ಪ್ರಸ್ತಾಪಿತ ಪೀಠೋಪಕರಣಗಳನ್ನು ಒದಗಿಸಲು ಇತರ ಯಾವುದೇ ಸಂಸ್ಥೆಗಳು ಲಭ್ಯವಿಲ್ಲವೇ, ಈ ಹಿಂದೆ ಇಂತಹ ಪೀಠೋಪಕರಣಗಳನ್ನು ಹೇಗೆ ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಕೋರಿರುವುದು ಗೊತ್ತಾಗಿದೆ.

ಸರಕಾರದ ಅಧೀನ ಸಂಸ್ಥೆಯಾದ ಕೆಎಸ್‌ಎಫ್‌ಐಸಿಎಲ್‌ನಿಂದ ಪೀಠೋಪಕರಣಗಳನ್ನು ಏಕೆ ಸಂಗ್ರಹಣೆ ಮಾಡಿಕೊಳ್ಳಬಾರದು, ಖಾಸಗಿ ಸಂಸ್ಥೆಯಾಗಿರುವ ಶ್ರೀರಾಮ್ ಎಂಟರ್ ಪ್ರೈಸೆಸ್ ನೀಡಿರುವ ದರಗಳು ಸಮಂಜಸವಾಗಿದೆ ಎಂದು ಹೇಗೆ ದೃಢಪಡಿಸಿಕೊಳ್ಳಲಾಗಿದೆ, ಟೆಂಡರ್ ಪ್ರಕ್ರಿಯೆ, ಸ್ಪರ್ಧಾತ್ಮಕ ದರಗಳಲ್ಲಿ ಮೂಲಕ ಈ ಪೀಠೋಪಕರಣಗಳನ್ನು ಸಂಗ್ರಹಣೆ ಮಾಡಿಕೊಂಡಲ್ಲಿ ಆರ್ಥಿಕ ಹೊರೆಯು ಕಡಿಮೆ ಅಗುವ ಅವಕಾಶಗಳು ಹೆಚ್ಚಾಗಿವೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಮೂಲಕ ಏಕೆ ಸಂಗ್ರಹಣೆ ಮಾಡಿಕೊಳ್ಳಬಾರದು, ಒಂದು ವೇಳೆ ಸಮಯಾವಕಾಶ ಕಡಿಮೆ ಇದ್ದಲ್ಲಿ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಮೂಲಕ ಪೀಠೋಪಕರಣಗಳನ್ನು ಸಂಗ್ರಹಣೆ ಮಾಡಿಕೊಳ್ಳಬಹುದಲ್ಲವೇ ಎಂದು ಆರ್ಥಿಕ ಇಲಾಖೆಯು ಮಾಹಿತಿ ಬಯಸಿತ್ತು.

ವಿಧಾನಸಭೆ ಸಚಿವಾಲಯದ ಸಮರ್ಥನೆ ಏನಿತ್ತು?

ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಪೀಠೋಪಕರಣಗಳ ತಯಾರಿಕೆಯಲ್ಲಿ ಶ್ರೀರಾಮ್ ಎಂಟರ್ ಪ್ರೈಸೆಸ್ ನಿರತವಾಗಿದೆ. ಕೇಂದ್ರ ಸರಕಾರದ ನೌಕಾನೆಲೆ, ಕೈಗಾ ಸಂಸ್ಥೆಗೆ ಸರಬರಾಜು ಮಾಡಿದೆ. ರಾಜ್ಯ ಸರಕಾರದ ಜಿಲ್ಲಾಧಿಕಾರಿಗಳ ಕಚೇರಿ, ಇತರ ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟದ ಪೀಠೋಪಕರಣಗಳನ್ನು ಸರಬರಾಜು ಮಾಡಿದೆ. ಇದನ್ನು ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ತಂಡವು ಖಾತ್ರಿ ಪಡಿಸಿಕೊಂಡಿದೆ ಎಂದು ಸಮರ್ಥನೆ ಒದಗಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಅಲ್ಲದೇ ಈ ಸಂಸ್ಥೆಯು ಸಚಿವಾಲಯಕ್ಕೆ ಅವಶ್ಯವಿರುವ ಪೀಠೋಪಕರಣಗಳನ್ನು ಸರಬರಾಜು ಮಾಡಲು ಆಸಕ್ತಿ ಹೊಂದಿದೆ ಎಂದು ಸಭಾಧ್ಯಕ್ಷರಿಗೆ ಪತ್ರ ಬರೆದಿತ್ತು. ಈ ಕುರಿತು ವರದಿ ಸಲ್ಲಿಸಲು ಸಭಾಧ್ಯಕ್ಷರು ಸೂಚಿಸಿದ್ದರು. ಅದರಂತೆ ವರದಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದೆ.

ದರಪಟ್ಟಿ ಹೇಗಿದೆ?

ತಲಾ 66,003 ರೂ.ನಂತೆ ಒಟ್ಟು 66.00 ಲಕ್ಷ ರೂ.ವೆಚ್ಚದಲ್ಲಿ ಶಾಸಕರಿಗೆ 100 ಟೇಬಲ್, ತಲಾ 32,000 ರೂ.ನಂತೆ ಒಟ್ಟು 32.00 ಲಕ್ಷ ರೂ.ವೆಚ್ಚದಲ್ಲಿ 100 ಎಕ್ಸಿಕ್ಯೂಟಿವ್ ರಿವಾಲ್ಲಿಂಗ್ ಚೇರ್, ತಲಾ 10,800 ರೂ.ನಂತೆ ಒಟ್ಟು21.60 ಲಕ್ಷ ರೂ. ವೆಚ್ಚದಲ್ಲಿ 200 ಸಂಖ್ಯೆಯ ಕಂಪ್ಯೂಟರ್ ಟೇಬಲ್ ಮತ್ತು ತಲಾ 14,400 ರೂ. ನಂತೆ 28.80 ಲಕ್ಷ ರೂ.ವೆಚ್ಚದಲ್ಲಿ ಕಂಪ್ಯೂಟರ್ ಚೇರ್, 1,182 ರೂ.ನಂತೆ ಒಟ್ಟು 11.82 ಲಕ್ಷ ರೂ.ವೆಚ್ಚದಲ್ಲಿ 1,000 ಪ್ಲಾಸ್ಟಿಕ್ ಚೇರ್, 14,000ರೂ.ನಂತೆ ಒಟ್ಟಾರೆ 56.00 ಲಕ್ಷ ರೂ.ವೆಚ್ಚದಲ್ಲಿ 400 ವಿಸಿಟರ್ಸ್ ಚೇರ್, 35,000 ರೂ.ನಂತೆ 10.50 ಲಕ್ಷ ರೂ. ವೆಚ್ಚದಲ್ಲಿ 30 ಡೈನಿಂಗ್ ಟೇಬಲ್, 13,500 ರೂ.ನಂತೆ 16. 20 ಲಕ್ಷ ರೂ. ವೆಚ್ಚದಲ್ಲಿ 120 ಡೈನಿಂಗ್ ಚೇರ್, 40,320 ರೂ.ನಂತೆ 30.24 ಲಕ್ಷ ರೂ.ವೆಚ್ಚದಲ್ಲಿ 75 ಸಿಂಗಲ್ ಮಂಚ, 74, 680 ರೂ. ನಂತೆ 18.67 ಲಕ್ಷ ರೂ.ಗಳಲ್ಲಿ 25 ಡಬಲ್ ಮಂಚ, 88,000 ರೂ.ನಂತೆ 74.80 ಲಕ್ಷ ರೂ.ಗಳಲ್ಲಿ 85 ಸೋಫಾ ಸೆಟ್, 21,600 ರೂ.ನಂತೆ 18.56 ಲಕ್ಷ ರೂ.ಗಳಲ್ಲಿ 85 ಟೀಪಾಯಿ, ಒಂದು ಕೊಠಡಿಗೆ 39,000 ರೂ.ನಂತೆ 78.00 ಲಕ್ಷ ರೂ.ವೆಚ್ಚದಲ್ಲಿ 200 ಸಂಖ್ಯೆಯ ಕಿಟಕಿ , ಬಾಗಿಲು ಪರದೆಗಳನ್ನು ಖರೀದಿಸಿದೆ.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X