ಪಾವತಿಸಿದ ಆ್ಯಪ್ ಗಳಿಗಿಂತಲೂ ಉತ್ತಮವಾಗಿರುವ ಉಚಿತ ಗೂಗಲ್ AI ಸಾಧನಗಳ ಬಗ್ಗೆ ಇಲ್ಲಿದೆ ಮಾಹಿತಿ...

Photo Credit : aistudio.google.com
ಪ್ರೀಮಿಯಂ ಎಐ ಸಾಧನಗಳಿಗಾಗಿ ಮಾಸಿಕ ನೂರಾರು ರೂಪಾಯಿಗಳನ್ನು ವೆಚ್ಚ ಮಾಡಬೇಕಾದ ಸಮಯದಲ್ಲಿ ಗೂಗಲ್ ಸಮರ್ಥ ಎಐ ಸಾಧನಗಳನ್ನು ಉಚಿತವಾಗಿ ಬಿಡುಗಡೆ ಮಾಡುವ ಕಾರ್ಯಯೋಜನೆಯನ್ನು ರೂಪಿಸಿದೆ.
ದೈತ್ಯ ತಂತ್ರಜ್ಞಾನ ಸಂಸ್ಥೆಗಳು ಜನರೇಟಿವ್ ಎಐ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರುವ ಹಂತದಲ್ಲಿ ಒಪನ್ಎಐ, ಗೂಗಲ್, ಮೈಕ್ರೋಸಾಫ್ಟ್ ಮತ್ತು ಆಂಥ್ರೋಪಿಕ್ ಗಳು ಹೊಸ ಅತ್ಯಾಧುನಿಕ ಎಐ ಸಾಧನಗಳ ಮೂಲಕ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಆದರೆ ಇವುಗಳಲ್ಲಿ ಬಹುತೇಕ ಸಾಧನಗಳನ್ನು ಸಂಪೂರ್ಣವಾಗಿ ಬಳಸಬೇಕೆಂದರೆ ಹಣ ಪಾವತಿಸಬೇಕಾಗುತ್ತದೆ. ಹೀಗೆ ಪ್ರೀಮಿಯಂ ಎಐ ಸಾಧನಗಳಿಗಾಗಿ ಮಾಸಿಕ ನೂರಾರು ರೂಪಾಯಿಗಳನ್ನು ವೆಚ್ಚ ಮಾಡಬೇಕಾದ ಸಮಯದಲ್ಲಿ ಗೂಗಲ್ ಸಮರ್ಥ ಎಐ ಸಾಧನಗಳನ್ನು ಉಚಿತವಾಗಿ ಬಿಡುಗಡೆ ಮಾಡುವ ಕಾರ್ಯಯೋಜನೆಯನ್ನು ರೂಪಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಗೂಗಲ್ ಇಂತಹ ಅನೇಕ ಎಐ ಸಾಧನಗಳನ್ನು ಬಿಡುಗಡೆಮಾಡಿದೆ. ಗೂಗಲ್ ನ ಸ್ಪರ್ಧಿ ತಂತ್ರಜ್ಞಾನ ಸಂಸ್ಥೆಗಳು ಇವೇ ಟೂಲ್ ಗಳಿಗೆ ಹಣ ಪಾವತಿಸಿದರೆ ಮಾತ್ರ ಸೌಲಭ್ಯ ಒದಗಿಸುತ್ತಿವೆ. ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆ ತರಬಹುದಾದ ಅಂತಹ ಕೆಲವು ಎಐ ಸಾಧನಗಳು ಇಲ್ಲಿವೆ.
NotebookLM
2023ರಲ್ಲಿ ಗೂಗಲ್ ಪರಿಚಯಿಸಿರುವ NotebookLM ಇದೀಗ ಉತ್ತಮ ವೀಡಿಯೋ ವೈಶಿಷ್ಟ್ಯವಾಗಿ ರೂಪುಗೊಂಡಿದೆ. ಈ ಎಐ ಸಾಧನವನ್ನು notebooklm.google.com ಗೆ ಭೇಟಿ ನೀಡಿ ಪ್ರವೇಶಿಸಬಹುದು. ಪ್ರವೇಶಿಸಿದ ತಕ್ಷಣ “ಕ್ರಿಯೇಟ್ ನ್ಯೂ” (ಹೊಸದನ್ನು ರಚಿಸಿ) ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ದಾಖಲೆಗಳು, ಲೇಖನಗಳು, ಪಿಡಿಎಫ್ಗಳು ಇತ್ಯಾದಿಗಳನ್ನು ಅಪ್ಲೋಡ್ ಮಾಡಿ. ಅಪ್ಲೋಡ್ ಮಾಡಿದ ನಂತರ ಇಂಟರ್ಫೇಸ್ ನ ಬಲಭಾಗದಲ್ಲಿರುವ ಒಂದು ಬದಿಯಲ್ಲಿರುವ ‘ಸ್ಟುಡಿಯೊ’ ಟ್ಯಾಬ್ಗೆ ಹೋಗಿ ನೋಡಿ. ಅಲ್ಲಿ ನಿಮಗೆ ‘ವಿಡಿಯೋ ಓವರ್ವ್ಯೂ’ ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ವೀಡಿಯೋ ಸಿದ್ಧವಾಗಿಬಿಡುತ್ತದೆ. ಅದೇ ರೀತಿ ಆಡಿಯೋ, ಇನ್ಫೋಗ್ರಾಫಿಕ್ಸ್, ವರದಿಗಳು, ಕ್ವಿಜ್ ಮೊದಲಾಗಿ ನಿಮಗೆ ಅಗತ್ಯವೆನಿಸಿರುವುದನ್ನು ಸಿದ್ಧಪಡಿಸಬಹುದು. ನೀವು ಜನರೇಟ್ ಮೇಲೆ ಕ್ಲಿಕ್ ಮಾಡುವ ಮೊದಲು ಸೆಟ್ಟಿಂಗ್ ಐಕಾನ್ ಮೇಲೆ ಕ್ಲಿಕ್ ಮಾಡಿ ನಿರ್ದಿಷ್ಟ ಸೂಚನೆಗಳನ್ನು ನೀಡಿ ಔಟ್ಪುಟ್ ಅನ್ನು ಕಸ್ಟಮೈಸ್ ಮಾಡಬಹುದು. ಅಂದರೆ ವಿಷಯಗಳು, ಟೋನ್ ಮತ್ತು ಫೋಕಸ್ ಏರಿಯಗಳ ಬಗ್ಗೆ ಸೂಚನೆ ನೀಡಬಹುದು. ಜನರೇಟ್ ಆದ ಮೇಲೆ ಎಐ ಟೂಲ್ ಅನ್ನು ಬಳಸಿಕೊಂಡು ಡಯಾಗ್ರಾಮ್ಗಳು ಮತ್ತು ಮೂಲ ಮೆಟೀರಿಯಲ್ಗಳಿಂದ ಪಡೆದ ಕೋಟ್ಗಳನ್ನು ಬೆರೆಸುವಂತೆ ಮಾಡಿ ಕಂಟೆಂಟ್ನಿಂದ ವಿವರಣಾತ್ಮಕ ವಿಡಿಯೋಗಳನ್ನು ತಯಾರಿಸಬಹುದು.
ಗೂಗಲ್ ಎಐ ಸ್ಟುಡಿಯೊ ಬಿಲ್ಡ್ (Google AI Studio Build)
ಗೂಗಲ್ ಎಐ ಸ್ಟುಡಿಯೊ ಬಿಲ್ಟ್ ಅನ್ನು https://aistudio.google.com/ ಲಿಂಕ್ ನಿಂದ ಪ್ರವೇಶಿಸಬಹುದು. ಈ ಸಾಧನವು ಇಂಗ್ಲಿಷ್ ನಲ್ಲಿ ವಿವರಿಸಿದ ವಿವರಗಳನ್ನು ಕಾರ್ಯರೂಪಕ್ಕೆ ಬರುವ ವೆಬ್ ಅಪ್ಲಿಕೇಶನ್ಗಳಾಗಿ ಪರಿವರ್ತಿಸುತ್ತದೆ. ಇದನ್ನು ಪ್ರಯತ್ನಿಸಲು ಎಡಬದಿಯಲ್ಲಿರುವ ‘ಬಿಲ್ಡ್ ಎಐ ಆ್ಯಪ್’ ಬಟನ್ ಗೆ ಹೋಗಬೇಕು. ಅದಾದ ನಂತರ ಇಂಗ್ಲಿಷ್ ನಲ್ಲಿ ಪ್ರಾಂಪ್ಟ್ ಬರೆಯಲು ಅದು ಕೇಳುತ್ತದೆ. ನೀವು ಸೃಷ್ಟಿಸಬಯಸಿರುವುದನ್ನು ಬರೆಯಬಹುದಾಗಿದೆ. ಅಂದರೆ, ‘ಹೆಸರು, ಇಮೇಲ್, ಸಂಪರ್ಕ ಮತ್ತು ಆಹಾರ ಆದ್ಯತೆಗಳೊಂದಿಗೆ ಹುಟ್ಟುಹಬ್ಬದ ಪಾರ್ಟಿಗೆ RSVP ಲಿಂಕ್’ ಎಂದು ಟೈಪ್ ಮಾಡಬಹುದು. ಮತ್ತು ಉಪಕರಣವು ರಿಯಾಕ್ಟ್ ಮತ್ತು ಆಂಗ್ಯುಲರ್ ಅಪ್ಲಿಕೇಶನ್ ಗಳನ್ನು ಉತ್ಪಾದಿಸುತ್ತದೆ.
ಗೂಗಲ್ ವರ್ಕ್ಸ್ಪೇಸ್ ಸ್ಟುಡಿಯೊ
ಇದನ್ನು ನೀವು studio.workspace.google.com ಲಿಂಕ್ಗೆ ಹೋಗಿ ಪ್ರವೇಶಿಸಬಹುದು. ಇದು ಬಳಕೆದಾರರಿಗೆ ಸರಳ ಭಾಷೆ ಬಳಸಿ ವರ್ಕ್ ಫ್ಲೋ ಆಟೋಮೇಷನ್ ಏಜೆಂಟ್ಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಪ್ರಯತ್ನಿಸಲು ಇಂಟರ್ಫೇಸ್ ತೆರೆಯಲು ಮುಖಪುಟದಲ್ಲಿ ‘ಕ್ರಿಯೇಟ್ ನ್ಯೂ’ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಕೆಳಭಾಗದಲ್ಲಿರುವ ಟೆಕ್ಸ್ಟ್ ಬಾಕ್ಸ್ಗೆ ಹೋಗಿ ಪ್ರಾಂಪ್ಟ್ ಕೊಡಬಹುದು.
ಪ್ರೆಸೆಂಟೇಶನ್ ಗಳಿಗೆ ಜೆಮಿನಿ ಕ್ಯಾನ್ವಾಸ್
ಜೆಮಿನಿ ಇಂಟರ್ಫೇಸ್ ನಲ್ಲಿ ನಿರ್ಮಿತವಾದ ಎಐ ಟೂಲ್ ಇದಾಗಿದೆ. ಇದನ್ನು https://gemini.google.com/app ಗೆ ಹೋಗಿ ಪ್ರವೇಶಿಸಬಹುದು. ಸರಳವಾಗಿ ಹೇಳುವುದಾದರೆ ಇದು ದಾಖಲೆಗಳನ್ನು ವೃತ್ತಿಪರ ಶ್ರೇಣಿಯ ಪ್ರೆಸೆಂಟೇಶನ್ಗಳಾಗಿ ಪರಿವರ್ತಿಸುತ್ತದೆ. ಇದರಲ್ಲಿ ನೀವು ಮುಂದಿಟ್ಟ ಸ್ಲೈಡ್ಗಳನ್ನು ಪರಿಶೀಲಿಸುತ್ತದೆ ಮತ್ತು ಪ್ರಸ್ತುತವೆನಿಸಿದ ಇಮೇಜ್ಗಳು, ಗ್ರಾಫಿಕ್ಗಳ ಜೊತೆಗೆ ವೃತ್ತಿಪರ ಫಾರ್ಮೇಟಿಂಗ್ ಮಾಡಿ ಮುಂದಿಡುತ್ತದೆ.
ಚಿತ್ರ ರಚಿಸಲು ಇಮ್ಯಾಜಿನ್ 4
ಈ ಟೂಲ್ ಜೆಮಿನಿಯ ಜೊತೆಗೆ ಬರುತ್ತದೆ. ಅದರ ಚಿತ್ರಗಳನ್ನು ರಚಿಸುವ ಆಯ್ಕೆಯಾಗಿರುತ್ತದೆ. ವೃತ್ತಿಪರ-ಗುಣಮಟ್ಟದ ಚಿತ್ರಗಳನ್ನು ರಚಿಸುತ್ತದೆ. ಇದನ್ನು ಪರಿಶೀಲಿಸಲು ನೀವು ಜೆಮಿನಿ https://gemini.google.com/app ತೆರೆಯಬೇಕು. ‘ಕ್ರಿಯೇಟ್ ಇಮೇಜಸ್’ಗೆ ಹೋಗಿ. ನಿಮಗೆ ಯಾವ ರೀತಿಯ ಚಿತ್ರಗಳು ಬೇಕು ಎನ್ನುವ ವಿವರ ತುಂಬಿ.
ಬಹು-ಭಾಷಿಕ ಆಡಿಯೊ ತಯಾರಿಸುವುದು
ಈ ಫೀಚರ್ ಎಐ ಸ್ಟುಡಿಯೊದಲ್ಲಿ ಲಭ್ಯವಿದೆ. ಬಹು ಭಾಷಿಕರು ಸಹಜವಾದ ಸಂಭಾಷಣೆಯಲ್ಲಿ ಸ್ಟುಡಿಯೊ ಗುಣಮಟ್ಟದ ಧ್ವನಿಯನ್ನು ಸೃಷ್ಟಿಸಲು ಅವಕಾಶ ಕೊಡುತ್ತದೆ. ಈ ಫೀಚರ್ಗಾಗಿ ನೀವು https://aistudio.google.com/ಗೆ ಹೋಗಬೇಕು. ಜೆಮಿನಿ ಜೊತೆಗೆ ಪಠ್ಯವನ್ನು ಧ್ವನಿಯಾಗಿ ಪರಿವರ್ತಿಸಬಹುದು. ನಿಮಗೆ ಅಗತ್ಯವಿದ್ದ ಹಾಗೆ ಏಕ ಭಾಷಿಕರು ಅಥವಾ ಹಲವು ಭಾಷಿಕರನ್ನು ಆರಿಸಿಕೊಳ್ಳಬಹುದು. ಪಾಡ್ಕಾಸ್ಟ್ ರೀತಿಯ ಕಾರ್ಯಕ್ರಮವನ್ನೂ ಸಿದ್ಧಪಡಿಸಬಹುದು.
ಈ ಟೂಲ್ಗಳು ಉಚಿತವಾಗಿ ಲಭ್ಯವಿದ್ದರೂ ಬಳಕೆಗೆ ಮಿತಿಯಿದೆ. ವಾಣಿಜ್ಯ ಬಳಕೆಗೆ ವಿವಿಧ ನಿಯಮಗಳಿವೆ.
ಕೃಪೆ: indianexpress.com







