ಯುಟ್ಯೂಬ್ನಿಂದ ಮಕ್ಕಳಿಗೆ ಹಾನಿ ಪ್ರಕರಣವನ್ನು ಇತ್ಯರ್ಥಮಾಡಿಕೊಂಡ Google

Photo : google , youtube logo
ಸಾಮಾಜಿಕ ಮಾಧ್ಯಮಗಳ ಕಂಪನಿಗಳು ಚಟವನ್ನು ಪ್ರೇರೇಪಿಸುತ್ತಿವೆ ಎಂದು ಹೇಳುವ 3,300 ಕ್ಕೂ ಹೆಚ್ಚು ಮೊಕದ್ದಮೆಗಳು ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.
ಗೂಗಲ್ನ ಯೂಟ್ಯೂಬ್ ಸಾಮಾಜಿಕ ಮಾಧ್ಯಮ ಸೈಟ್ಗಳ ವಿನ್ಯಾಸದಿಂದಾಗಿ ತನ್ನ ಮಾನಸಿಕ ಆರೋಗ್ಯಕ್ಕೆ ಹಾನಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದ ವಿರುದ್ಧ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಪ್ರಾಪ್ತ ವಯಸ್ಕರು ಹಾಕಿದ ಪ್ರಕರಣದ ಎರಡನೇ ವಿಚಾರಣೆಗೆ ಮೊದಲೇ ಕಂಪನಿ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದೆ ಎಂದು ವಾದಿಯ ವಕೀಲರು ತಿಳಿಸಿದ್ದಾರೆ. ಆದರೆ ಯಾವ ವಿಷಯದಲ್ಲಿ ರಾಜಿಯಾಗಿದೆ ಎನ್ನುವ ಮೊಕದ್ದಮೆಯ ಇತ್ಯರ್ಥದ ನಿಯಮಗಳನ್ನು ಗೌಪ್ಯವಾಗಿರಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.
ಗೂಗಲ್ ವಕ್ತಾರ ಜೋಸ್ ಕ್ಯಾಸ್ಟನೆಡಾ ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ ಮೊಕದ್ದಮೆಯನ್ನು ಸೌಹಾರ್ದಯುತವಾಗಿ ಪರಿಹಾರಿಸಲಾಗಿದೆ. “ವಯೋಸಹಜವಾದ ಉತ್ಪನ್ನಗಳು ಮತ್ತು ಪೋಷಕರ ನಿಯಂತ್ರಣಗಳನ್ನು ನಿರ್ಮಿಸುವತ್ತ ಮತ್ತು ಆ ಭರವಸೆ ಉಳಿಸಿಕೊಳ್ಳುವತ್ತ ನಮ್ಮ ಗಮನ ಉಳಿದಿದೆ” ಎಂದು ಅವರು ಹೇಳಿದ್ದಾರೆ.
R.K.C. ಎಂದು ಕರೆಯಲಾಗಿರುವ ವಾದಿಯು ಹೂಡಿದ ಮೊಕದ್ದಮೆಯಲ್ಲಿ ಮೆಟಾದ ಇನ್ಸ್ಟಾಗ್ರಾಂ, ಸ್ನ್ಯಾಪ್ ಇಂಕ್ನ ಸ್ನ್ಯಾಪ್ ಚಾಟ್ ಮತ್ತು ಬೈಟ್ಡ್ಯಾನ್ಸ್ನ ಟಿಕ್ ಟಾಕ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ತಮಗೆ ಹಾನಿಯುಂಟು ಮಾಡಿದೆ ಎಂದು ಹೇಳುವ ಮೊಕದ್ದಮೆಯ ಎರಡನೇ ವಿಚಾರಣೆಗೆ ಸಿದ್ಧವಾಗುತ್ತಿರುವ ಹಂತದಲ್ಲಿ ಈ ಇತ್ಯರ್ಥ ಬಂದಿದೆ. ಮೆಟಾ, ಸ್ನ್ಯಾಪ್ ಮತ್ತು ಟಿಕ್ ಟಾಕ್ ವಿರುದ್ಧ ವಿಚಾರಣೆ ಜುಲೈನಲ್ಲಿ ನಡೆಯಲಿದೆ.
ಸಾಮಾಜಿಕ ಮಾಧ್ಯಮಗಳ ಕಂಪನಿಗಳು ಚಟವನ್ನು ಪ್ರೇರೇಪಿಸುತ್ತಿವೆ ಎಂದು ಹೇಳುವ ವೈಯಕ್ತಿಕ, ಶಾಲಾ ಜಿಲ್ಲೆಗಳು, ಪಾಲಿಕೆಗಳು ಮತ್ತು ರಾಜ್ಯಗಳು ಹೂಡಿರುವ 3,300 ಕ್ಕೂ ಹೆಚ್ಚು ಮೊಕದ್ದಮೆಗಳು ಕ್ಯಾಲಿಫೋರ್ನಿಯ ರಾಜ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.
ಮಾರ್ಚ್ನಲ್ಲಿ ಕೊನೆಗೊಂಡ ಮೊದಲ ವಿಚಾರಣೆಯು ಗೂಗಲ್ನ ಯುಟ್ಯೂಬ್ ಮತ್ತು ಮೆಟಾದ ಇನ್ಸ್ಟಾಗ್ರಾಂನ ಗಮನ ಸೆಳೆಯುವ ವಿನ್ಯಾಸದಿಂದಾಗಿ ತಾನು ಚಿಕ್ಕ ವಯಸ್ಸಿನಲ್ಲೇ ಅದರ ವ್ಯಸನಿಯಾಗಿದ್ದೇನೆ ಎಂದು ಹೇಳಿದ ಮಹಿಳೆಯ ಪ್ರಕರಣವಾಗಿತ್ತು. ಕಂಪನಿಗಳ ನಿರ್ಲಕ್ಷ್ಯವನ್ನು ಗುರುತಿಸಿದ ನ್ಯಾಯಾಧೀಶರು ಮೆಟಾಗೆ 4.2 ದಶಲಕ್ಷ ಡಾಲರ್ ಪರಿಹಾರ ಪಾವತಿಸಲು ಮತ್ತು ಗೂಗಲ್ಗೆ 1.8 ದಶಲಕ್ಷ ಡಾಲರ್ ಪಾವತಿಸಲು ಆದೇಶಿಸಿದ್ದರು. ಇದೇ ತಿಂಗಳ ಆರಂಭದಲ್ಲಿ ತೀರ್ಪನ್ನು ರದ್ದುಗೊಳಿಸುವಂತೆ ಕಂಪನಿಗಳು ಇಟ್ಟಿರುವ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.






