GST ದರ ಕಡಿತದಿಂದ ದ್ವಿಚಕ್ರ ಮತ್ತು ಗ್ರಾಹಕ ಸಾಲಗಳಿಗೆ ಹೆಚ್ಚಿದ ಬೇಡಿಕೆ

ಸಾಂದರ್ಭಿಕ ಚಿತ್ರ (AI)
ಗ್ರಾಹಕ ಸಾಲಗಳು ಹೊರತುಪಡಿಸಿ ಜನರು ದ್ವಿಚಕ್ರ ವಾಹನಗಳಿಗೆ ಹೆಚ್ಚು ಸಾಲಗಳನ್ನು ಪಡೆದಿದ್ದಾರೆ. ಆದರೆ ಸಾಲ ಮರುಪಾವತಿಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಕಡಿತಗೊಳಿಸಿದ ನಂತರ ಜನರು ಗ್ರಾಹಕ ವಸ್ತುಗಳ ಖರೀದಿಗೆ ಹೆಚ್ಚು ಸಾಲ ಮಾಡುತ್ತಿದ್ದಾರೆ ಎಂದು ಕ್ರೆಡಿಟ್ ಬ್ಯೂರೋ ಕಂಪನಿಯಾದ ಟ್ರಾನ್ಸ್ಯೂನಿಯನ್ ಸಿಬಿಲ್ ವಿವರಗಳು ತೋರಿಸಿರುವ ದತ್ತಾಂಶಗಳಿಂದ ತಿಳಿದುಬಂದಿದೆ. ಮುಖ್ಯವಾಗಿ ದಸರಾ ಮತ್ತು ದೀಪಾವಳಿ ಸಮಯದಲ್ಲಿ ಗ್ರಾಹಕ ಬಾಳಿಕೆಯ ಸಾಲಗಳಿಗೆ (ಕನ್ಸ್ಯೂಮರ್ ಡ್ಯೂರೇಬಲ್ ಲೋನ್) ಬೇಡಿಕೆ ಹೆಚ್ಚಾಗಿತ್ತು.
2025ರ ಕೊನೆಯ ಕೆಲವು ತಿಂಗಳುಗಳನ್ನು ಮೂರು ಅವಧಿಯಲ್ಲಿ ವಿಭಜಿಸಿ ನೋಡಿದಲ್ಲಿ, ಜಿಎಸ್ಟಿ ಕಡಿತಗೊಳಿಸಿರುವುದನ್ನು ಘೋಷಿಸಿದ, ಸೆಪ್ಟೆಂಬರ್ 22ರಂದು ಅದನ್ನು ಅನುಷ್ಠಾನಕ್ಕೆ ತರುವ ಮೊದಲಿನ ಸಮಯ ಮತ್ತು ಅನುಷ್ಠಾನದ ನಂತರದ 10 ದಿನಗಳ ದಸರಾ ಮತ್ತು ದೀಪಾವಳಿ ಹಬ್ಬಗಳ ಪೂರ್ವ ಅವಧಿಯನ್ನು ಹೋಲಿಸಿದರೆ, ಹಬ್ಬದ ಪೂರ್ವದ 20 ದಿನಗಳಲ್ಲಿ ಕನ್ಸ್ಯೂಮರ್ ಡ್ಯೂರೇಬಲ್ ಲೋನ್ ಗಳಿಗೆ ಒಂದೂವರೆ ಪಟ್ಟು ಹೆಚ್ಚು ಬೇಡಿಕೆ ಇತ್ತು.
ಗ್ರಾಹಕ ಸಂವೇದನೆಯಲ್ಲಿ ಸುಧಾರಣೆ ಮತ್ತು ಸಾಲದ ಬೇಡಿಕೆಯಲ್ಲಿ ಸಕಾರಾತ್ಮಕ ಪರಿಣಾಮ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಟ್ರಾನ್ಸ್ಯೂನಿಯನ್ ಸಿಬಿಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭವೇಶ್ ಜೈನ್ ಹೇಳಿದ್ದಾರೆ.
ಸಾಲ ಮರುಪಾವತಿಯಲ್ಲಿ ವಿಳಂಬ
ಗ್ರಾಹಕ ಸಾಲಗಳನ್ನು ಹೊರತುಪಡಿಸಿ ಜನರು ದ್ವಿಚಕ್ರ ವಾಹನಗಳಿಗೆ ಹೆಚ್ಚು ಸಾಲಗಳನ್ನು ಪಡೆದಿದ್ದಾರೆ. ದ್ವಿಚಕ್ರ ವಾಹನಗಳ ಖರೀದಿ ಹೆಚ್ಚಾಗಿರುವುದು ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಸುಧಾರಣೆಯಾಗಿರುವುದಕ್ಕೆ ಸಂಬಂಧಿಸಿದೆ.
ಆದರೆ ದ್ವಿಚಕ್ರ ವಾಹನದ ವಿಭಾಗದಲ್ಲಿ ಪಾವತಿ ಒತ್ತಡಗಳು ಮತ್ತು ಪಾವತಿಸದೆ ಇರುವ ಪ್ರಮಾಣ ಅತ್ಯಧಿಕ ಇರುವುದು ಮುಂದುವರಿದಿದೆ. ಈ ವಿಭಾಗದಲ್ಲಿ ಸಾಲ ಮರುಪಾವತಿಯಲ್ಲಿ ವಿಳಂಬದ ಪ್ರಮಾಣ ಹೆಚ್ಚಿದೆ. 2024-25ರ ಅಂತ್ಯದ ಶೇ 3.1ಕ್ಕೆ ಹೋಲಿಸಿದಲ್ಲಿ 2025-26 ಅಂತ್ಯದಲ್ಲಿ ಶೇ 3.7ರಷ್ಟು ಕೆಟ್ಟ ಸಾಲಗಳ ಪ್ರಮಾಣ ಹೆಚ್ಚಾಗಿದೆ.
ಅದೇ ಸಂದರ್ಭದಲ್ಲಿ ಸಮಯಕ್ಕೆ ಸರಿಯಾದ ಪಾವತಿಯು 290 ಮೂಲಾಂಶಗಳಷ್ಟು ಕುಸಿದು ಶೇ 86.8ರಷ್ಟಕ್ಕೆ ತಲುಪಿದೆ.
ಕೃಪೆ: indianexpress.com







