Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಸ್ರೇಲ್ ಮೇಲೆ ಹಮಾಸ್ ದಾಳಿ...

ಇಸ್ರೇಲ್ ಮೇಲೆ ಹಮಾಸ್ ದಾಳಿ ಅನಿರೀಕ್ಷಿತವೂ ಅಲ್ಲ, ಅಚ್ಚರಿಯೂ ಅಲ್ಲ, ಅದು ಪ್ರತಿರೋಧ: ಸೋಮದೀಪ್ ಸೇನ್

► ನೀರಿಗೂ ಅಂಗಲಾಚುವ ಸ್ಥಿತಿಯನ್ನು ಫೆಲೆಸ್ತೀನಿಯರಿಗೆ ತಂದಿಟ್ಟ ಇಸ್ರೇಲ್ ! ► ಇಸ್ರೇಲ್ ನ ಅಗಾಧ ಸಾಮರ್ಥ್ಯ, ಭಾರೀ ಜಾಗತಿಕ ಪ್ರಭಾವದೆದುರು ಫೆಲೆಸ್ತೀನ್ ನ ಬಲವೇನು ?

ಆರ್. ಜೀವಿಆರ್. ಜೀವಿ16 Oct 2023 3:29 PM IST
share

ಇದ್ದಕ್ಕಿದ್ದಂತೆ​ ಫೆಲೆಸ್ತೀನ್ ನ ಹಮಾಸ್, ಇಸ್ರೇಲ್ ಮೇಲೆ ದಾಳಿ ಆರಂಭಿಸುವುದರೊಂದಿಗೆ, ಮತ್ತೊಮ್ಮೆ ಸಂಘರ್ಷ ತೀವ್ರಗೊಂಡಿದೆ. ​ಫೆಲೆಸ್ತೀನ್ ಮೇಲೆ ಇಸ್ರೇಲ್ ಯುದ್ಧ ಘೋಷಿಸುವುದರೊಂದಿಗೆ​ ಅಲ್ಲಿ ಗಂಭೀರ ಪರಿಸ್ಥಿತಿ ಏರ್ಪಟ್ಟಿದೆ. ಈ ನಡುವೆ,​ ಹಮಾಸ್ ದಾಳಿ ಯೋಜನೆ ಬಗ್ಗೆ ಇಸ್ರೇಲ್ ಗುಪ್ತದಳ ​ಸುಳಿವು ಪಡೆಯುವಲ್ಲಿ ವಿಫಲವಾದದ್ದೇ ಇಂಥ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಟ್ಟಿತೆ ಎಂಬ ಅನುಮಾನಗಳೂ ಎದ್ದಿವೆ.​ ಇಸ್ರೇಲ್ ನ ಬೆಂಜಮಿನ್ ನೆತನ್ಯಾಹು ಸರಕಾರದ ವಿರುದ್ಧ ಈಗಾಗಲೇ ಆ ದೇಶದ ಜನರಲ್ಲಿ ವ್ಯಾಪಕ ಅಸಮಾಧಾನವಿದೆ. ಭ್ರಷ್ಟಾಚಾರ ಸಹಿತ ಹಲವು ಗಂಭೀರ ಆರೋಪಗಳನ್ನು ನೆತನ್ಯಾಹು ಸರಕಾರ ಎದುರಿಸುತ್ತಿದೆ. ಈಗ ಗಂಭೀರ ಬೇಹು ವೈಫಲ್ಯವೂ ಅದರ ಜೊತೆ ಸೇರಿಕೊಂಡಿದೆ.

ಇತ್ತೀಚಿನ ವರದಿಗಳ ಪ್ರಕಾರ, ಎರಡೂ ಕಡೆಗಳ ದಾಳಿ-ಪ್ರತಿದಾಳಿಯಲ್ಲಿ ಈಗಾಗಲೇ ಸತ್ತವರ ಸಂಖ್ಯೆ ಸಾವಿರ ದಾಟಿದೆ. ಸತ್ತವರಲ್ಲಿ 600 ಮಂದಿ ಇಸ್ರೇಲಿಗಳಾದರೆ, ​ಇಸ್ರೇಲ್ ನೀಡಿರುವ ತಿರುಗೇಟಿಗೆ ಗಾಜಾ ಪಟ್ಟಿಯಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಇಸ್ರೇಲ್ ದಾಳಿಯಲ್ಲಿ ಗಾಯಾಳುಗಳಾಗಿರುವವರ ಸಂಖ್ಯೆ 2 ಸಾವಿರ ದಾಟಿದೆ ಎಂಬ ವರದಿ​ಗಳೂ ಇವೆ.

ಗಾಜಾಪಟ್ಟಿಯಲ್ಲಿ ಹತ್ಯೆಯಾದವರು ಬಂಡುಕೋರರು ಎಂದು ಇಸ್ರೇಲ್ ಅಧಿಕಾ​ರಿಗಳು ಹೇಳಿರುವ ವರದಿಗಳಿವೆ. ಶನಿವಾರ ನಸುಕಿನಲ್ಲಿ ಗಾಜಾ ಪಟ್ಟಿಯಿಂದ​ ಇಸ್ರೇಲ್ ಮೇಲೆ ಹಮಾಸ್ ದಿಢೀರ್ ದಾಳಿ ನಡೆಸಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಪ್ರತಿದಾಳಿ ನಡೆಸಿತು. ಇನ್ನೊಂದೆಡೆ,​ ಇಸ್ರೇಲ್ ನ ನೂರಾರು ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವುದಾಗಿ ತಿಳಿದುಬಂದಿದೆ. ಒತ್ತೆಯಾಳುಗಳಲ್ಲಿ ಇಸ್ರೇಲ್ನ ಹಿರಿಯ ಅಧಿಕಾರಿಗಳು, ಕೆಲವು ಸೈನಿಕರು ಮತ್ತು ನಾಗರಿಕರು ಸೇರಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರನ್ನೂ ​ಹಮಾಸ್ ಒತ್ತೆಯಾಳುಗಳನ್ನಾಗಿಸಿ ಗಾಜಾ ಕಡೆಗೆ ಒಯ್ದಿ​ದೆ ಎಂದು ಹೇಳಲಾಗಿದೆ.

ಒತ್ತೆಯಾಳುಗಳಲ್ಲಿ ಅಮೆರಿಕನ್ನರೂ ಸೇರಿರುವುದಾಗಿ ಇಸ್ರೇಲ್ ರಾಯಭಾರಿ ಹೇಳಿರುವುದು ವರದಿಯಾಗಿದೆ. ಸುಮಾರು 100 ಸೈನಿಕರು ಮತ್ತು ನಾಗರಿಕರನ್ನು ಹಮಾಸ್ ಅಪಹರಿಸಿದೆ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ​ "ಹಮಾಸ್ ಮನೆಗಳಿಗೆ ನುಗ್ಗಿ, ನಾಗರಿಕರನ್ನು ಕಗ್ಗೊಲೆ ಮಾಡಿದ್ದು, ನೂರಾರು ಬಂಡುಕೋರರು ಆಕ್ರಮಿಸಿರುವುದಾಗಿ​" ಸೇನಾ ವಕ್ತಾರರು ಹೇಳಿದ್ದಾರೆ. ಇಸ್ರೇಲ್ ಜೈಲುಗಳಲ್ಲಿರುವ ​​ಫೆಲೆಸ್ತೀನ್ ಕೈದಿಗಳ ಬಿಡುಗಡೆಗೆ ಒತ್ತಡ ಹೇರಲು ಹಮಾಸ್ ​ ಇಸ್ರೇಲಿ ಒತ್ತೆಯಾಳುಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ದಶಕಗಳಷ್ಟು ಹಳೆಯ ಈ ಸಂಘರ್ಷ, ಮೊನ್ನೆ ​ಫೆಲೆಸ್ತೀನಿ ಹೋರಾಟಗಾರರು ಭೂ, ಜಲ ಮತ್ತು ವಾಯು ಮಾರ್ಗದ ಮೂಲಕ ದೊಡ್ಡ ಪ್ರಮಾಣದಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸುವುದರೊಂದಿಗೆ ತೀವ್ರ ಉಲ್ಬಣಗೊಂಡಂತಾಗಿದ್ದು, ​ಇತ್ತೀಚಿನ ದಶಕಗಳಲ್ಲೇ ಕಂಡಿರದ ಮಟ್ಟಿನ​ ಸಾವುನೋವುಗಳಿಗೆ ಕಾರಣವಾಗಿದೆ.

ಈಚಿನ ವರ್ಷಗಳಲ್ಲಿಯೇ ಇಷ್ಟೊಂದು ಭೀಕರ ಸಂಘರ್ಷ ​ಇಸ್ರೇಲ್ ಹಾಗು ಫೆಲೆಸ್ತೀನ್ ಮಧ್ಯೆ ಉಂಟಾಗಿರಲಿಲ್ಲ. ಇಸ್ರೇಲ್ ಮೇಲೆ 5000 ರಾಕೆಟ್ಗಳನ್ನು ಉಡಾಯಿಸಲಾಗಿದೆ ಎಂದು ಗಾಜಾ ಪಟ್ಟಿ ಮೇಲೆ ನಿಯಂತ್ರಣ​ವಿರುವ ಹಮಾಸ್ ಹೇಳಿಕೊಂಡಿದೆ. ಈ ದಾಳಿಗೆ ಹಮಾಸ್ ಗುಂಪು ಆಪರೇಷನ್ ​'ಅಲ್-ಅಕ್ಸಾ ಫ್ಲಡ್​' ಎಂದು ಹೆಸರಿಟ್ಟಿದೆ. ವೆಸ್ಟ್ ಬ್ಯಾಂಕ್ನಲ್ಲಿನ ಪ್ರತಿರೋಧಿ ಹೋರಾಟಗಾರರಲ್ಲದೆ, ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಯುದ್ಧದಲ್ಲಿ ಕೈಜೋಡಿಸಬೇಕೆಂದು ಅದು ಕರೆ ನೀಡಿದೆ.

ಬಂಧಿತ ಇಸ್ರೇಲಿಗಳ ಚಿತ್ರಗಳನ್ನು, ಗಾಜಾ ಬಳಿಯ ಇಸ್ರೇಲಿ ಪಟ್ಟಣದ ಬೀದಿಗಳಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಿತ್ರಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಇಸ್ರೇಲ್ಗೆ ಇದು ಅನಿರೀಕ್ಷಿತ ದಾಳಿಯಾಗಿತ್ತು​ ಎಂದು ವರದಿಗಳು ಹೇಳುತ್ತಿವೆ. ಬಳಿಕ ಅದರ ಸೇನಾ ಚಟುವಟಿಕೆಗಳು ಬಿರುಸುಗೊಂಡವು. ಕೆರಳಿದ ಇಸ್ರೇಲ್ ಯುದ್ಧ ಘೋಷಣೆ ಮಾಡಿಯೇಬಿಟ್ಟಿತು.

ತನ್ನ ಪ್ರತಿದಾಳಿಯನ್ನು ಇಸ್ರೇಲ್ ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್ ಎಂದು ಕರೆದಿದೆ. ಗಾಜಾ ಪಟ್ಟಿಯಲ್ಲಿ ಹಲವೆಡೆ ಗುರಿ ಮಾಡಿ ಅದು ದಾಳಿ ನಡೆಸಿದೆ. ಇಸ್ರೇಲ್ ಮೇಲಿನ ದಾಳಿಗೆ ಹಮಾಸ್ ಬಂಡುಕೋರರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಪ್ರತಿಕ್ರಿಯಿಸಿದ ಅವರು, ​ಇದೊಂದು ಕಪ್ಪು ದಿನ ಎಂದಿದ್ದಾರಲ್ಲದೆ, ಇಸ್ರೇಲ್ ನಾಗರಿಕರ ಮೇಲಿನ ಈ ದಾಳಿಗೆ ಸೇಡು ತೀರಿಸಿಕೊಳ್ಳುವುದಾಗಿಯೂ, ಹಮಾಸ್ ಪಾಲಿಗೆ ಅತ್ಯಂತ ಕಹಿಯಾದ ಕೊನೆಯನ್ನು ಹಾಡಲು ತನ್ನೆಲ್ಲ ಬಲವನ್ನು ಇಸ್ರೇಲ್ ಬಳಸಲಿದೆ ಎಂದೂ ಹೇಳಿದ್ದಾರೆ.

ಹಮಾಸ್ ಅಡಗುದಾಣಗಳನ್ನು ನಾಶಗೊಳಿಸುವುದಾಗಿ ಎಚ್ಚರಿಕೆ ನೀಡಿರುವ ಇಸ್ರೇಲ್ ಪ್ರಧಾನಿ, ಅಡಗುದಾಣಗಳ ಸಮೀಪದ ಪ್ರದೇಶಗಳಲ್ಲಿ ನೆಲೆಸಿರುವ ಎಲ್ಲ ಗಾಜಾ ಜನರೂ ಅಲ್ಲಿಂದ ಹೊರಹೋಗುವಂತೆ ಕೇಳಿಕೊಂಡಿದ್ದಾರೆ. ​"ಹಮಾಸ್ನ ದುಷ್ಟ ಮುಖವನ್ನು ಕಂಡೆವು. ಮಹಿಳೆಯರು, ಮಕ್ಕಳು ಮತ್ತು ವೃದ್ಧರೆಂದು ನೋಡದೆ ಹಮಾಸ್ ದಾಳಿ ನಡೆಸಿತು. ತನ್ನ ಘೋರ ತಪ್ಪು ಅದಕ್ಕೆ ಬಹು ಬೇಗನೆ ಅರಿವಾಗಲಿದೆ​" ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿರುವುದು ವರದಿಯಾಗಿದೆ.

ಈ ನಡುವೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ ಕರೆ​ದಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಇಸ್ರೇಲ್‌ಗೆ ಅಚಲ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ನೆರವನ್ನು ಘೋಷಿಸಿದ್ದಾರೆ. ಬ್ರಿಟನ್ ಕೂಡ ಜತೆಗಿರುವುದಾಗಿ ಇಸ್ರೇಲ್ಗೆ ಭರವಸೆ ಕೊಟ್ಟಿದೆ.​ ಭಾರತ ಸರಕಾರವೂ ಇಸ್ರೇಲ್ ಗೆ ಬೆಂಬಲ ಘೋಷಿಸಿದೆ. ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಅಮೆರಿಕ ಮಾತ್ರವಲ್ಲದೆ, ಹಲವಾರು ದೇಶಗಳು ಖಂಡಿಸಿವೆ.

ಹಿಂಸಾಚಾರ ನಿಲ್ಲಿಸಿ, ಕೂಡಲೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ರಷ್ಯಾ, ಬ್ರಿಟನ್, ಜರ್ಮನಿ, ಸ್ಪೇನ್, ಉಕ್ರೇನ್, ಟರ್ಕಿ ಮೊದಲಾದ ದೇಶಗಳು ಆಗ್ರಹಿಸಿವೆ. ಆದರೆ, ಇರಾನ್ ಮಾತ್ರ ಹಮಾಸ್ ಬಂಡುಕೋರರನ್ನು ಬೆಂಬಲಿಸಿದೆ. ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವ ​ಫೆಲೆಸ್ತೀನಿ ಯೋಧರ ಕಾರ್ಯ ಶ್ಲಾಘನೀಯ ಎಂದು ಇರಾನ್ ನಾಯಕ ಅಲಿ ​ಖಾಮಿನೈ ಯವರ ಸಲಹೆಗಾರ ಹೇಳಿರುವುದಾಗಿ ವರದಿಯಾಗಿದೆ.

ಇಸ್ರೇಲ್ ಕೂಡ, ಈ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದೇ ಆರೋಪಿಸಿದೆ. ಈ ನಡುವೆ,​ ಫೆಲೆಸ್ತೀನ್ ಕುರಿತ ಇಸ್ರೇಲ್ ನೀತಿಯ ಬಗ್ಗೆ ಆ ದೇಶದ ನಾಯಕರಲ್ಲಿಯೇ ಭಿನ್ನಮತವಿರುವುದೂ ರಹಸ್ಯವಾಗಿಲ್ಲ.​ಫೆಲೆಸ್ತೀನಿಯನ್ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡರೆ ಇಸ್ರೇಲ್ ಮೇಲೆ ಈಗಿನ ಹಮಾಸ್ ದಾಳಿಯಂಥ ಘಟನೆಗಳು ನಡೆಯುವುದರ ಬಗ್ಗೆ ತಮ್ಮ ಪಕ್ಷ ಮೊದಲಿಂದಲೂ ಮತ್ತೆ ಮತ್ತೆ ಎಚ್ಚರಿಸುತ್ತಲೇ ಬಂದಿದೆ ಎಂದು ಇಸ್ರೇಲಿ ನಾಯಕರೊಬ್ಬರು ಹೇಳಿರುವುದನ್ನು ಅಲ್ ಜಜೀರಾ ವರದಿ ಮಾಡಿದೆ.

ಇಸ್ರೇಲ್ನ ಅಮಾಯಕ ನಾಗರಿಕರ ಮೇಲಿನ ಯಾವುದೇ ದಾಳಿಯನ್ನು ನಾವು ಖಂಡಿಸುತ್ತೇವೆ ಮತ್ತು ವಿರೋಧಿಸುತ್ತೇವೆ. ಆದರೆ ಅದೇ ರೀತಿ ಇಸ್ರೇಲಿ ಸರ್ಕಾರ ​ಫೆಲೆಸ್ತೀನೀ ನಾಗರಿಕರ ಮೇಲೆ ದಾಳಿ ಮಾಡುವುದರ ಬಗ್ಗೆಯೂ ನಮ್ಮ ವಿರೋಧವಿದೆ ಎಂದು ಎಡಪಂಥೀಯ ಹದಶ್ ಒಕ್ಕೂಟದ ಓಫರ್ ಕ್ಯಾಸಿಫ್ ಹೇಳಿದ್ದಾರೆ.

ಇಸ್ರೇಲಿ ಸರ್ಕಾರ ಫ್ಯಾಶಿಸ್ಟ್ ಸರ್ಕಾರವಾಗಿದ್ದು, ​ಫೆಲೆಸ್ತೀನಿಯನ್ನರ ವಿರುದ್ಧ ಹತ್ಯಾಕಾಂಡಗಳನ್ನು ಬೆಂಬಲಿಸುವ, ಉತ್ತೇಜಿಸುವ ಕೆಲಸ ಮಾಡುತ್ತಿದೆ. ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ ಎಂಬುದು ಅವರ​ ಗಂಭೀರ ಆರೋಪವಾಗಿದೆ. ಹಮಾಸ್ ಎಂಬುದು ​ಫೆಲೆಸ್ತೇನಿ ​ಹೋರಾಟಗಾರರ ಸಂಘಟನೆ. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯ ಮೇಲಿನ ಇಸ್ರೇಲಿ ಆಕ್ರಮಣದ ವಿರುದ್ಧ ​ಫೆಲೆಸ್ತೇನಿಯನ್ನರ ಚಳವಳಿ ಶುರುವಾದ ನಂತರ ಅದು 1987ರಲ್ಲಿ ಹುಟ್ಟಿಕೊಂಡಿತು.ಗಾಜಾವನ್ನು ವಶಪಡಿಸಿಕೊಂಡ 38 ವರ್ಷಗಳ ನಂತರ ಇಸ್ರೇಲಿ ಪಡೆಗಳು ಗಾಜಾದಿಂದ ಹಿಂದೆ ಸರಿದ ಬಳಿಕ ಹಮಾಸ್ ಚುನಾವಣೆಯಲ್ಲಿ ಗೆದ್ದಿತು. ಅದು ಸರ್ಕಾರವನ್ನು ರಚಿಸಿದರೂ, ಇಸ್ರೇಲ್ ಮತ್ತು ​ಫೆಲೆಸ್ತೀನ್ ನಡುವಿನ ಹಿಂದಿನ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿತು, ಇದರ ಪರಿಣಾಮವಾಗಿ ಇಸ್ರೇಲ್ನೊಡನೆ ಸಂಘರ್ಷ ಸ್ಥಿತಿ ಮುಂದುವರಿಯಿತು.

2007ರಲ್ಲಿ ಗಾಜಾ ಕದನದ ನಂತರ ಹಮಾಸ್ ಗಾಜಾದ ಮೇಲೆ ಹಿಡಿತ ಸಾಧಿಸಿತು, ಆದರೆ ಇಸ್ರೇಲ್ ಮತ್ತು ಈಜಿಪ್ಟ್​ ಅದರ ಮೇಲೆ ಆರ್ಥಿಕ ದಿಗ್ಬಂಧನವನ್ನು ವಿಧಿಸಿದವು. ಇಸ್ರೇಲ್, ಅಮೆರಿಕ, ಯುರೋಪಿಯನ್ ಒಕ್ಕೂಟ, ಬ್ರಿಟನ್, ಕೆನಡಾ, ಜಪಾನ್ ಮತ್ತಿತರ ಪ್ರಮುಖ ದೇಶಗಳು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ. ಇಸ್ರೇಲ್-​ಫೆಲೆಸ್ತೀನ್ ನಡುವಿನ ಸಂಘರ್ಷ ದಶಕಗಳ ಕಾಲದ ದೀರ್ಘ ಇತಿಹಾಸವನ್ನೇ ಹೊಂದಿದೆ.

ಒಂದನೇ ಮಹಾಯುದ್ಧದಲ್ಲಿ ​ಉಸ್ಮಾನಿಯಾ ಸಾಮ್ರಾಜ್ಯದ ಸೋಲಿನ ಬಳಿಕ ​ಫೆಲೆಸ್ತೀನ್‌ ನಿಯಂತ್ರಣ ಬ್ರಿಟನ್‌ ಪಾಲಾಯಿತು. ಅಲ್ಲಿ ಆಗ ಯಹೂದಿಗಳು​ ತೀರಾ ಅಲ್ಪಸಂಖ್ಯಾತರಾಗಿದ್ದರು. ಅರಬ್ಬರು ಬಹುಸಂಖ್ಯಾತರಾಗಿದ್ದರು.​ ​ಫೆಲೆಸ್ತೀನ್‌ನಲ್ಲಿ ಯಹೂದಿಗಳಿಗೆ ಒಂದು ನೆಲೆ ಕಟ್ಟಿಕೊಡಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಿ, ಆ ಹೊಣೆಗಾರಿಕೆಯನ್ನು ಬ್ರಿಟನ್‌ಗೆ ವಹಿಸಿತ್ತು. ಆಗ ಯಹೂದಿ ಹಾಗೂ ಅರಬ್ಬರ ನಡುವೆ ಸಂಘರ್ಷ ಆರಂಭವಾಯಿತು. ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಹೋರಾಟವೂ ತೀವ್ರವಾಯಿತು.

ಈ ಮಧ್ಯೆ, ​ಫೆಲೆಸ್ತೀನ್ ನಲ್ಲಿ ತಮ್ಮದೊಂದು ದೇಶ ಸ್ಥಾಪನೆಯಾಗುತ್ತದೆ ಎಂಬ ಕಾರಣದಿಂದಾಗಿ 1920ರಿಂದ 1940ರ ನಡುವಣ ಅವಧಿಯಲ್ಲಿ ವಿಶ್ವದ ವಿವಿಧೆಡೆಯಲ್ಲಿದ್ದ ಯಹೂದಿಗಳು ​ಫೆಲೆಸ್ತೀನ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದರು. ಜರ್ಮನಿಯ​ಲ್ಲಿ ಹಿಟ್ಲರ್ ನ ಜನಾಂಗೀಯ ನರಮೇಧದಿಂದ ಕಂಗೆಟ್ಟಿದ್ದ ಯಹೂದಿಗಳು ಯುರೋಪ್‌ ತೊರೆದು ಹೊಸ ದೇಶಕ್ಕಾಗಿ ಒತ್ತಾಯಿಸಿದರು.​1800​ ರಿಂದ 1931 ರ​ ನಡುವೆ 13 ದಶಕಗಳ ಅವಧಿಯಲ್ಲಿ​ ಯಹೂದಿಗಳಿಗೆ ಸಿಕ್ಕಿದ ಜಾಗತಿಕ ರಾಜಕೀಯ ಬೆಂಬಲದಿಂದಾಗಿ ಫೆಲೆಸ್ತೀನ್‌ನ ಮುಸ್ಲಿಮರ ಸಂಖ್ಯೆಯಲ್ಲಿ ಕೇವಲ 3 ಪಟ್ಟು ಹಾಗೂ ಕ್ರೈಸ್ತರ ಸಂಖ್ಯೆಯಲ್ಲಿ 4 ಪಟ್ಟು ವೃದ್ಧಿಯಾಗಿದ್ದರೆ ಯಹೂದಿಗಳ ಸಂಖ್ಯೆಯಲ್ಲಿ 25 ಪಟ್ಟು ವೃದ್ಧಿಯಾಗಿತ್ತು.

​ಫೆಲೆಸ್ತೀನ್ ಅನ್ನು ಯಹೂದಿ ಹಾಗೂ ಅರಬ್‌ ರಾಜ್ಯಗಳಾಗಿ ವಿಭಜಿಸಲು ವಿಶ್ವಸಂಸ್ಥೆ 1947ರಲ್ಲಿ ನಿರ್ಣಯಿಸಿತು. ಜೆರುಸಲೇಂ ಅಂತಾರಾಷ್ಟ್ರೀಯ ನಿಯಂತ್ರಣಕ್ಕೆ ಒಳಪಟ್ಟಿತು. ಅದಕ್ಕೆ ಯಹೂದಿಗಳು ಒಪ್ಪಿದರಾದರೂ, ​ ಆದರೆ ಅರಬ​ರು ತಮ್ಮ ಜನಸಂಖ್ಯೆಯ ಅನುಪಾತಕ್ಕನುಸಾರ ತಮಗೆ ಹೆಚ್ಚಿನ ಭೂಭಾಗ ನೀಡಬೇಕೆಂದು ಆಗ್ರಹಿಸಿ ಈ ಪ್ರಸ್ತಾವವನ್ನು ತಿರಸ್ಕರಿಸಿದ​ರು. ಅವರು ಇಂದಿಗೂ​ ಇದನ್ನು ಒಪ್ಪಿಕೊಳ್ಳದ ಕಾರಣ ಸಂಘರ್ಷ ಮುಂದುವರಿದಿದೆ.

ಸಂಘರ್ಷಕ್ಕೆ ಪರಿಹಾರ ಹುಡುಕಲು ವಿಫಲರಾದ ಬ್ರಿಟನ್ ಹಿಂದೆ ಸರಿದಾಗ, ಯಹೂದಿಗಳು ಇಸ್ರೇಲ್‌ ಸ್ಥಾಪನೆ ಘೋಷಣೆ ಮಾಡಿದರು. ​ಫೆಲೆಸ್ತೀನಿಯರು ಅದಕ್ಕೆ ಆಕ್ಷೇಪ ಎತ್ತಿದರು. ಈ ಬೆಳವಣಿಗೆ ​ದೊಡ್ಡ ಯುದ್ಧಕ್ಕೆ ಕಾರಣವಾಯಿತು. ಅರಬ್‌ ದೇಶಗಳು ಇಸ್ರೇಲ್‌ ವಿರುದ್ಧ ನಿಂತವು. ಇಸ್ರೇಲ್‌ನಿಂದ ಅರಬ್ಬರನ್ನು ಹೊರಹಾಕಲಾಯಿತು.

ಅದಾದ ಬಳಿಕ ಇಸ್ರೇಲ್‌-​ಫೆಲೆಸ್ತೀನ್‌ ನಡುವೆ ಹಲವು ಬಾರಿ ಸಂಘರ್ಷಗಳು ನಡೆದಿವೆ. ​ಭಾರೀ ಸಾವು ನೋವುಗಳು ಸಂಭವಿಸಿವೆ. ಹಮಾಸ್ ಸಂಘಟನೆ ಸ್ಥಾಪನೆ ಬಳಿಕ​ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇಸ್ರೇಲ್ ಎಂಬ ನೂತನ ದೇಶದ ಸ್ಥಾಪನೆಯ ಮೂಲಕ ಜಗತ್ತಿನ 150ಕ್ಕೂ ಹೆಚ್ಚಿನ ದೇಶಗಳಲ್ಲಿ ತೀರಾ ಅಭದ್ರ ಸ್ಥಿತಿಯಲ್ಲಿದ್ದ ಲಕ್ಷಾಂತರ ಯಹೂದಿಗಳಿಗೆ ಭದ್ರ ನೆಲೆ ದೊರೆಯಿತು ಎಂಬುದು ನಿಜಕ್ಕೂ ಒಂದು ನೆಮ್ಮದಿಯ ವಿಚಾರ. ಆದರೆ ಈ ಬೆಳವಣಿಗೆಯ ಇನ್ನೊಂದುಮುಖ ಭಾರೀ ಭಯಾನಕವಾಗಿದೆ. ಒಂದು ಪಂಗಡಕ್ಕೆ ಭದ್ರ ನೆಲೆ ಒದಗಿಸುವ ಈ ಪ್ರಕ್ರಿಯೆಯ ಹಿಂದೆ ಅಡಗಿದ್ದ ನೀಚ ಸಂಚುಗಳು ಆಧುನಿಕ ಜಗತ್ತಿನ ಅತಿದೊಡ್ಡ ಪ್ರಮಾಣದ ನಿರಾಶ್ರಿತ ಬಿಕ್ಕಟ್ಟಿಗೆ ಜನ್ಮ ನೀಡಿದೆ.​ ಆ ಬಿಕ್ಕಟ್ಟು ಇಂದಿಗೂ ಮುಂದುವರಿದಿದೆ.

2000ದಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಎರಡೂ ರಾಷ್ಟ್ರಗಳ ಪ್ರಧಾನಿಗಳ ನಡುವೆ ಸಂಧಾನ ಸಭೆ ಏರ್ಪಡಿಸಿದ್ದರು. ಆದರೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತೇ ಹೊರತು ಪರಿಹಾರ ಸಿಗಲಿಲ್ಲ. ಇದು ಈಗ ಮತ್ತೊಂದು ಯುದ್ಧಕ್ಕೆ ಎಡೆ ಮಾಡಿಕೊಟ್ಟಿದೆ.​ ‘ಫೆಲೆಸ್ತೀನ್ ಸರಕಾರ’ ಎಂಬುದು ಜಗತ್ತಿನ ಕಣ್ಣಿಗೆ ಮಣ್ಣೆರಚಲು ನಿರ್ಮಿಸಲಾಗಿರುವ ಒಂದು ಅಣಕ ಸಂಸ್ಥೆಯೇ ಹೊರತು ಅದು ಒಂದು ಪೂರ್ಣ ಪ್ರಮಾಣದ ಸರಕಾರವೇ ಅಲ್ಲ. ಜಗತ್ತಿನ 138 ದೇಶಗಳು ಫೆಲೆಸ್ತೀನ್ ಸರಕಾರಕ್ಕೆ ಅಧಿಕೃತ ಮಾನ್ಯತೆ ನೀಡಿವೆ. ಆದರೆ ಇಸ್ರೇಲ್ ಸರಕಾರಕ್ಕಿರುವ ಸಾಮರ್ಥ್ಯ ಮತ್ತು ಅಧಿಕಾರಗಳಿಗೆ ಹೋಲಿಸಿದರೆ ಫೆಲೆಸ್ತೀನ್ ಸರಕಾರದ ಸಾಮರ್ಥ್ಯ ಮತ್ತು ಅಧಿಕಾರಗಳು ಒಂದು ನಗರ ಪಾಲಿಕೆಯಷ್ಟೂ ಇಲ್ಲ. ಹೆಚ್ಚೆಂದರೆ ಅದನ್ನು, ಬಲಿಷ್ಠ ಕೇಂದ್ರ ಸರಕಾರವೊಂದರ ಕಪಿ ಮುಷ್ಟಿಯಲ್ಲಿರುವ ಸ್ಥಳೀಯ ಆಡಳಿತ ಪ್ರಾಧಿಕಾರ ಎಂದು ಕರೆಯಬಹುದು. ಮುಖ್ಯವಾಗಿ ಭೂಸೇನೆ, ವಾಯು ಸೇನೆ, ನೌಕಾಪಡೆ ಮುಂತಾದ ಯಾವುದೇ ಬಗೆಯ ಸೇನೆಯನ್ನು ಇಟ್ಟುಕೊಳ್ಳುವ ಅಧಿಕಾರ ಫೆಲೆಸ್ತೀನ್ ಸರಕಾರಕ್ಕಿಲ್ಲ! ಕ್ರೂರ ತಮಾಷೆ ಏನೆಂದರೆ ಫೆಲೆಸ್ತೀನ್ ಸರಕಾರಕ್ಕೆ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಮತ್ತು ಜಲ ಸರಬರಾಜು ವ್ಯವಸ್ಥೆಯ ಮೇಲೂ ನಿಯಂತ್ರಣವಿಲ್ಲ.

​ಆದರೆ ಇಸ್ರೇಲ್ ಸರಕಾರ ಇವತ್ತು ವಿಶ್ವದಲ್ಲೇ ಅತ್ಯಂತ ಪ್ರಭಾವಿ ಸರಕಾರಗಳಲ್ಲಿ ಅತ್ಯಂತ ಮುಖವಾದುದು. ಇಸ್ರೇಲ್ ಬಳಿ ತಾಂತ್ರಿಕವಾಗಿ ಜಗತ್ತಿನಲ್ಲೇ ಅತ್ಯಂತ ಮುಂದುವರಿದ ತಂತ್ರಜ್ಞಾನ, ಆಯುಧ ಮತ್ತು ಸಲಕರಣೆಗಳಿಂದ ಸಜ್ಜಿತವಾದ 5 ಲಕ್ಷಕ್ಕೂ ಹೆಚ್ಚಿನ ಯೋಧರು ಇರುವ ಬಲಿಷ್ಠ ಭೂಸೇನೆ ಇದೆ. ಇಸ್ರೇಲ್ ಪೂರ್ಣಪ್ರಮಾಣದ ಅಣ್ವಸ್ತ್ರ ಸಜ್ಜಿತ ದೇಶವಾಗಿದೆ. ಅದರ ಬಳಿ ಸುಮಾರು 400 ಅಣು ಬಾಂಬ್ ಸಜ್ಜಿತ ಕ್ಷಿಪಣಿಗಳಿವೆ. ಇಸ್ರೇಲ್ ಬಳಿ ಸಾಟಿಯೇ ಇಲ್ಲದಂತಹ ಅಜೇಯ ವಾಯುಸೇನೆ ಇದೆ. 1967ರಲ್ಲೇ ಇಸ್ರೇಲ್ ವಾಯುಸೇನೆ ಎಷ್ಟು ಬಲಿಷ್ಠವಾಗಿತ್ತೆಂದರೆ ಅದರ ಮುಂದೆ ಎಲ್ಲ ನೆರೆದೇಶಗಳ ಒಟ್ಟು ವಾಯುಸೇನಾ ಸಾಮರ್ಥ್ಯವು ನಿರರ್ಥಕವಾಗಿ ಬಿಟ್ಟಿತ್ತು. ಇದೀಗ 54 ವರ್ಷಗಳ ಬಳಿಕ ಅದು ಎಷ್ಟು ಬಲಾಢ್ಯವಾಗಿರಬಹುದೆಂಬುದನ್ನು ಯಾರಾದರೂ ಊಹಿಸಬಹುದು. ಇಸ್ರೇಲ್ ಬಳಿ 60ಕ್ಕೂ ಹೆಚ್ಚು ಸರ್ವ ಸಜ್ಜಿತ ಯುದ್ಧನೌಕೆಗಳು, 20,000ಕ್ಕೂ ಹೆಚ್ಚು ನೌಕಾ ಯೋಧರು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತ ನೌಕಾಪಡೆ ಇದೆ. ಇಸ್ರೇಲಿನ ವಾರ್ಷಿಕ ಮಿಲಿಟರಿ ಬಜೆಟ್ 20.5 ಶತಕೋಟಿ ಡಾಲರ್ ನಷ್ಟಿದೆ. ಸಾಲದ್ದಕ್ಕೆ ಪ್ರತಿವರ್ಷ ಅಮೆರಿಕದಿಂದ ಭಾರೀ ಮೊತ್ತದ ಮಿಲಿಟರಿ ಸಹಾಯಧನವೂ ಇಸ್ರೇಲ್‌ಗೆ ಸಿಗುತ್ತದೆ ಈವರೆಗೆ ಅಧಿಕೃತವಾಗಿ ಇಸ್ರೇಲ್‌ಗೆ ಅಮೆರಿಕ ನೀಡಿರುವ ಮಿಲಿಟರಿ ಸಹಾಯಧನ 146 ಶತಕೋಟಿ ಡಾಲರ್ ನಷ್ಟಾಗುತ್ತದೆ. ಅನಧಿಕೃತ ನೆರವಿನ ಮೊತ್ತ ಬೇರೆಯೇ ಇದೆ.

ಹಾಗಾಗಿ ಇಸ್ರೇಲ್ ಹಾಗು ಫೆಲೆಸ್ತೀನ್ ಎಂಬ ಎರಡು ದೇಶಗಳ ನಡುವೆ ಯುದ್ಧ ನಡೀತಾ ಇದೆ ಎಂದು ಬಣ್ಣಿಸೋದು ಬಹಳ ಸುಲಭ. ಆದರೆ ಇಸ್ರೇಲ್ ನ ಅಗಾಧ ಸಾಮರ್ಥ್ಯ ಹಾಗು ಅದಕ್ಕಿರುವ ಜಾಗತಿಕ ರಾಜಕೀಯ ಬೆಂಬಲದೆದುರು ಫೆಲೆಸ್ತೀನ್ ನ ಶಕ್ತಿ ಏನೇನೋ ಅಲ್ಲ. ಫೆಲೆಸ್ತೀನಿಯರಲ್ಲಿರುವ ಎಂದೂ ಸೋಲೊಪ್ಪಿಕೊಳ್ಳದ ಸ್ಥೈರ್ಯ ಮಾತ್ರ ಅವರನ್ನು ಈವರೆಗೆ ಮುನ್ನಡೆಸಿದೆ. ಈ ಮಧ್ಯೆ, ಹಮಾಸ್ ​ ಇಸ್ರೇಲ್ನ ದಕ್ಷಿಣ ಭಾಗದಿಂದ ಒಳನುಸುಳಿರುವುದು ಗುಪ್ತದಳದ​ ಭಾರೀ ವೈಫಲ್ಯ ಎಂದು ಪರಿಣಿತರು ಹೇಳುತ್ತಿದ್ದಾರೆ​.

ಈ ದಾಳಿಗಾಗಿ ಹಮಾಸ್ ಬಹುಕಾಲದಿಂದ ಯೋಜನೆ ರೂಪಿಸಿತ್ತು. ಆದರೆ ಇರಾನ್ನ ಅಣ್ವಸ್ತ್ರ ಯೋಜನೆಯನ್ನು ವಿಫಲಗೊಳಿಸುವಲ್ಲಿ ಮಗ್ನವಾಗಿದ್ದ ಇಸ್ರೇಲ್, ತನ್ನದೇ ನೆಲದ ಮೇಲೆ ಎರಗಲಿರುವ ಅಪಾಯದ ಬಗ್ಗೆ ಮೈಮರೆತಿತ್ತು ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

​ಆದರೆ ಅಂತರ್ ರಾಷ್ಟ್ರೀಯ ವ್ಯವಹಾರಗಳ ತಜ್ಞರು ಇದನ್ನು ಒಪ್ಪುತ್ತಿಲ್ಲ. ಇಸ್ರೇಲ್ ನ ನಿರಂತರ ದೌರ್ಜನ್ಯಗಳಿಂದಾಗಿ ಕಂಗೆಟ್ಟಿದ್ದ ಫೆಲೆಸ್ತೀನಿಗಳ ಪ್ರತಿರೋಧ ಹೋರಾಟವಿದು, ಬೇರೇನಲ್ಲ, ಇದು ಅನಿರೀಕ್ಷಿತ ಅಲ್ಲವೇ ಅಲ್ಲ ಎನ್ನುತ್ತಾರೆ ಇಸ್ರೇಲ್ ಫೆಲೆಸ್ತೀನ್ ಸಂಘರ್ಷವನ್ನು ವರ್ಷಗಳಿಂದ ಅಧ್ಯಯನ ಮಾಡುತ್ತಿರುವವರು.

ರಾಸ್ ಕೀಲ್ ವಿಶ್ವವಿದ್ಯಾಲಯದ ಇಂಟರ್ ನ್ಯಾಷನಲ್ ಡೆವಲಪಮೆಂಟ್ ಸ್ಟಡೀಸ್ ನ ಅಸೋಸಿಯೇಟ್ ಪ್ರೊಫೆಸರ್ ಸೋಮದೀಪ್ ಸೇನ್ ಅವರು ಅಲ್ ಜಝೀರಾದಲ್ಲಿ ಬರೆದಿರುವ ಲೇಖನದಲ್ಲಿ " ಈ ಕಾರ್ಯಾಚರಣೆಯಲ್ಲಿ ಯಾವುದೂ ತೀರಾ ಅನಿರೀಕ್ಷಿತವೇನಿಲ್ಲ. ಇದು ಅಪ್ರಚೋದಿತ ದಾಳಿಯೂ ಅಲ್ಲ. ಇದು ಕೇವಲ ಇಸ್ರೇಲಿ ಸುರಕ್ಷತಾ ವ್ಯವಸ್ಥೆಯ ಲೋಪದಿಂದ ಆಗಿರುವ ದಾಳಿಯೂ ಅಲ್ಲ. ಇದು ಇಸ್ರೇಲಿ ಆಕ್ರಮಣದ ಆಡಳಿತವನ್ನು ಹಾಗು ಅಕ್ರಮ ಸ್ವಾಧೀನವನ್ನು ದಶಕಗಳಿಂದ ಎದುರಿಸುತ್ತಾ ಬಂದಿರುವ ಫೆಲೆಸ್ತೀನಿಯರಿಂದ ತೀರಾ ನಿರೀಕ್ಷಿತ ಕ್ರಮ" ಎಂದಿದ್ದಾರೆ.

"ಅಂತರ್ ರಾಷ್ಟ್ರೀಯ ಕಾನೂನು ಯಾವುದೇ ಮಿಲಿಟರಿ ಅಕ್ರಮ, ಅದೆಷ್ಟೇ ತಾತ್ಕಾಲಿಕವಾಗಿದ್ದರೂ ಅದಕ್ಕೆ ಅವಕಾಶ ನೀಡುವುದಿಲ್ಲ. ವಿಶ್ವಸಂಸ್ಥೆಯ ಮಹಾಸಭೆಯ 37/43 ನಿರ್ಣಯದಂತೆ ಸ್ವಾತಂತ್ರ್ಯ ಹಾಗು ಅಕ್ರಮ ಹಿಡಿತದಿಂದ ಮುಕ್ತವಾಗಲು ಜನರು ಶಸ್ತ್ರಾಸ್ತ್ರ ಹೋರಾಟ ಸಹಿತ ಎಲ್ಲ ಲಭ್ಯ ಅವಕಾಶಗಳನ್ನು ಬಳಸಿಕೊಳ್ಳಬಹುದು " ಎಂದೇ ಹೇಳುತ್ತದೆ. ಅಂದ್ರೆ " ಆಪರೇಷನ್ ಅಲ್ ಅಕ್ಸ ಫ್ಲಡ್ ಇಸ್ರೇಲಿ ಆಕ್ರಮಣ ಹಾಗು ಅಕ್ರಮ ಹಿಡಿತದ ವಿರುದ್ಧದ ಫೆಲೆಸ್ತೀನಿಯರ ಶಸ್ತ್ರಾಸ್ತ್ರ ಸಹಿತ ಪ್ರತಿರೋಧವಾಗಿದೆ. ಫೆಲೆಸ್ತೀನಿಯರು ಈ ಹೋರಾಟಕ್ಕೆ ಬಳಸುತ್ತಿರುವ ಶೈಲಿಯೂ ಅನಿರೀಕ್ಷಿತವಲ್ಲ. ಏಕೆಂದರೆ ಅವರ ತೀರಾ ಸೀಮಿತ ಸೌಲಭ್ಯಗಳೊಂದಿಗೆ ಅವರು ಹೋರಾಟಕ್ಕೆ ಇಳಿದಿರುವುದು ವಿಶ್ವದ ಅತ್ಯಂತ ಆಧುನಿಕ ಹಾಗು ಅತಿ ಹೆಚ್ಚು ಹಣಕಾಸು ಶಕ್ತಿ ಯಿಂದ ಸಜ್ಜುಗೊಂಡ ಅತ್ಯಂತ ಬಲಿಷ್ಠ ಸೇನಾ ಶಕ್ತಿಯ ವಿರುದ್ಧ.

"ಇಸ್ರೇಲಿ ಆಕ್ರಮಣ ಹಾಗು ನಿರ್ಬಂಧಗಳಿಂದಾಗಿ ಫೆಲೆಸ್ತೀನಿಯರು ಕಂಗೆಟ್ಟು ಹೋಗಿದ್ದಾರೆ. ಅವರಿಗೆ ಓಡಾಟಕ್ಕೆ ಮುಕ್ತ ಅವಕಾಶವಿಲ್ಲ. ಅವರ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದೆ. ಅಲ್ಲಿ 60% ನಿರುದ್ಯೋಗ ತಾಂಡವವಾಡುತ್ತಿದೆ. ಎಲ್ಲಿವರೆಗೆಂದರೆ ಫೆಲೆಸ್ತೀನಿಯರಿಗೆ ಸಿಗುವ ಆಹಾರದ ಸರಬರಾಜನ್ನೂ ಇಸ್ರೇಲ್ ನಿಯಂತ್ರಿಸುತ್ತಿದೆ. ಫೆಲೆಸ್ತೀನಿಯರಿಗೆ ಇಷ್ಟು ಕ್ಯಾಲರಿಗಿಂತ ಹೆಚ್ಚು ಆಹಾರ ಸಿಗಬಾರದು ಎಂದು ನಿರ್ಬಂಧಿಸಿತ್ತು ಇಸ್ರೇಲ್ ಅಂದ್ರೆ ಪರಿಸ್ಥಿತಿ ಅದೆಷ್ಟು ಭಯಾನಕ ಇರಬಹುದು ಎಂದು ನೀವೇ ಊಹಿಸಿ. ಇವತ್ತು ವರ್ಲ್ಡ್ ಫುಡ್ ಪ್ರೋಗ್ರಾಮ್ ಪ್ರಕಾರ ಫೆಲೆಸ್ತೀನಿಯರಲ್ಲಿ ದೊಡ್ಡ ಪ್ರಮಾಣದ ಜನರಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ. ಗಾಜಾದಲ್ಲಿರುವ 90% ಜನರಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಸಿಗುತ್ತಿಲ್ಲ. ವಿದ್ಯುತ್, ತೈಲ, ನೀರು ಸರಬರಾಜು, ವೈದ್ಯಕೀಯ ಸೌಲಭ್ಯ ಸಹಿತ ಪ್ರತಿಯೊಂದು ಸೌಲಭ್ಯಕ್ಕೂ ಅಂಗಲಾಚುವಂತಹ ಪರಿಸ್ಥಿತಿಯನ್ನು ಫೆಲೆಸ್ತೀನಿಯರಿಗೆ ತಂದಿಟ್ಟಿದೆ ಇಸ್ರೇಲ್. ಇದೆಲ್ಲ ಸಾಲದ್ದಕ್ಕೆ ಆಗಾಗ ಇಸ್ರೇಲ್ ನಡೆಸುವ ಮಿಲಟರಿ ದಾಳಿಗಳನ್ನು ಫೆಲೆಸ್ತೀನಿಯರು ಎದುರಿಸಬೇಕು. ಹಮಾಸ್ ಹೋರಾಟಗಾರರು ಮಾತ್ರ ನಮ್ಮ ಗುರಿ ಎಂದು ಮಾತಲ್ಲಿ ಹೇಳುವ ಇಸ್ರೇಲ್ ದಾಳಿ ಮಾಡುವಾಗ ಮನೆಗಳು, ಆಸ್ಪತ್ರೆಗಳು, ಶಾಲೆಗಳು ಯಾವುದನ್ನೂ ಬಿಡದೆ ಆಕ್ರಮಣ ನಡೆಸುತ್ತವೆ. ಈಗ ಇಸ್ರೇಲ್ ಮೇಲೆ ದಾಳಿ ಮಾಡಿದ್ದಕ್ಕೆ ಇಸ್ಲಾಮಿನ ಮೂರನೇ ಅತ್ಯಂತ ಪವಿತ್ರ ಸ್ಥಳ ಅಲ್ ಅಕ್ಸ ಮಸೀದಿಗೆ ಇಸ್ರೇಲ್ ಅಗೌರವ ತೋರಿದ್ದು ಹಾಗು ಫೆಲೆಸ್ತೀನಿಗಳ ಮೇಲೆ ದೌರ್ಜನ್ಯ ಎಸಗಿದ್ದು ಎಂದು ಹಮಾಸ್ ಕಾರಣ ನೀಡಿದೆ. ಆದರೆ ಈಗ ನಡೆದಿರುವ ದಾಳಿಯ ಪ್ರಮಾಣ ನೋಡಿದರೆ ಇದಕ್ಕೆ ಬಹಳ ಕಾಲದಿಂದಲೇ ತಯಾರಿ ನಡೆಸಲಾಗುತ್ತಿತ್ತು ಎಂಬಂತೆ ಕಾಣುತ್ತದೆ. ದಶಕಗಳಲ್ಲೇ ದೊಡ್ಡ ಈ ಫೆಲೆಸ್ತೀನಿ ದಾಳಿಯ ಹಿಂದಿರುವುದು ಫೆಲೆಸ್ತೀನಿಯರು ಎದುರಿಸುತ್ತಲೇ ಬಂದಿರುವ ದೌರ್ಜನ್ಯ ಹಾಗು ಸಂಕಷ್ಟ. ಅದಕ್ಕೆ ಪ್ರತಿರೋಧದ ರೂಪದಲ್ಲಿ ಇಂತಹದೊಂದು ಅನಿವಾರ್ಯ ದಾಳಿ ಇಸ್ರೇಲ್ ಮೇಲೆ ನಡೆದಿದೆ. ಇದು ಸ್ವಾತಂತ್ರ್ಯಕ್ಕಾಗಿ ಫೆಲೆಸ್ತೀನಿಯನ್ನರ ಹೋರಾಟದ ಭಾವವಾಗಿದೆ. ಇದು ಗಾಝದಿಂದಲೇ ನಡೆದಿರುವುದು ಇದಕ್ಕೆ ಇನ್ನಷ್ಟು ಮಹತ್ವ ನೀಡುತ್ತದೆ.

ಇವಿಷ್ಟು ಸೋಮದೀಪ್ ಸೇನ್ ಅವರ ಲೇಖನದ ಸಾರಾಂಶ.

ಗಾಜಾದಲ್ಲಿ ಏನೇ ನಡೆದರೂ ಇಸ್ರೇಲ್ಗೆ ಗೊತ್ತಾಗುತ್ತದೆ ಎಂಬುದು, ಹಮಾಸ್ ಗುಂಪಿನ ಈ ದಿಢೀರ್ ದಾಳಿಯಿಂದ ಸುಳ್ಳಾಗಿದೆ ಎಂದೇ ಹೇಳಲಾಗುತ್ತಿದೆ. ​ಇಸ್ರೇಲ್ -​ ಪ್ಯಾಲೆಸ್ತೀನ್ ಯುದ್ಧ ಭಾರತದಲ್ಲಿಯೂ ಆತಂಕವನ್ನು ಉಂಟು ಮಾಡಿದೆ. ಇಸ್ರೇಲ್ನಲ್ಲಿ 18 ಸಾವಿರ ಭಾರತೀಯರಿದ್ದು, ಸಾವಿರಾರು ವಿದ್ಯಾರ್ಥಿಗಳೂ ಇದ್ದಾರೆ. ಆದರೆ, ಯಾರಿಗೂ ತೊಂದರೆಯಾಗಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.

share
ಆರ್. ಜೀವಿ
ಆರ್. ಜೀವಿ
Next Story
X