Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ʼಹ್ಯಾಂಟವೈರಸ್ʼನಿಂದ ತಕ್ಷಣಕ್ಕೆ...

ʼಹ್ಯಾಂಟವೈರಸ್ʼನಿಂದ ತಕ್ಷಣಕ್ಕೆ ಭಾರತಕ್ಕೆ ಅಪಾಯವಿಲ್ಲ: ರಾಷ್ಟ್ರೀಯ ವೈರಾಲಜಿ ಸಂಸ್ಥೆ

ವಾರ್ತಾಭಾರತಿವಾರ್ತಾಭಾರತಿ9 May 2026 6:24 PM IST
share
ʼಹ್ಯಾಂಟವೈರಸ್ʼನಿಂದ ತಕ್ಷಣಕ್ಕೆ ಭಾರತಕ್ಕೆ ಅಪಾಯವಿಲ್ಲ: ರಾಷ್ಟ್ರೀಯ ವೈರಾಲಜಿ ಸಂಸ್ಥೆ

ಹ್ಯಾಂಟವರೈರಸ್ ಸೋಂಕುಗಳು ಅಪರೂಪ ಮತ್ತು ಸಾಮಾನ್ಯವಾಗಿ ಮಾನವರಿಂದ ಹರಡುವ ಬದಲು ಇಲಿಗಳ ಸಂಪರ್ಕಕ್ಕೆ ಸಂಬಂಧಿಸಿವೆ.

ಡಚ್ ಹಡಗಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳಿಗೆ ಹ್ಯಾಂಟವೈರಸ್ ಸೋಂಕು ತಗಲಿದೆ ಎಂಬ ಕಳವಳದ ನಡುವೆ ICMRನ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್) ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕ ಡಾ ನವೀನ್ ಕುಮಾರ್ ಅವರು ಹಡಗಿನ ಪ್ರಕರಣಗಳು ಪ್ರತ್ಯೇಕ ಪ್ರಕರಣಗಳಾಗಿ ಕಂಡುಬರುತ್ತಿವೆ ಮತ್ತು ಭಾರತಕ್ಕೆ ತಕ್ಷಣದ ಸಾರ್ವಜನಿಕ ಆರೋಗ್ಯ ಬೆದರಿಕೆ ಇಲ್ಲ, ಪ್ರಸ್ತುತ ಸಮುದಾಯ ಹರಡುವಿಕೆಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ಹ್ಯಾಂಟವೈರಸ್‌ಗಳು ಮುಖ್ಯವಾಗಿ ಸೋಂಕಿತ ಇಲಿಗಳ ಸಂಪರ್ಕದ ಮೂಲಕ ಅಥವಾ ಲಾಲಾರಸ, ಮೂತ್ರ ಮತ್ತು ಮಲದಂತಹ ಅವುಗಳ ಮಲವಿಸರ್ಜನೆಯ ಮೂಲಕ ಮನುಷ್ಯರಿಗೆ ಹರಡುತ್ತವೆ. ಗೋದಾಮುಗಳು, ಹಡಗುಗಳು, ಕೊಟ್ಟಿಗೆಗಳು ಮತ್ತು ಶೇಖರಣಾ ಪ್ರದೇಶಗಳಂತಹ ಮುಚ್ಚಿದ ಅಥವಾ ಲಾಲಾರಸದಿಂದ ಏರೋಸೋಲೈಸ್ಡ್ ವೈರಸ್ ಕಣಗಳನ್ನು ಉಸಿರಾಡುವ ಮೂಲಕ ಜನರು ಸಾಮಾನ್ಯವಾಗಿ ಸೋಂಕಿಗೆ ಒಳಗಾಗುತ್ತದೆ ಎಂದು ಅವರು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹಡಗಿನಲ್ಲಿ ಗುರುತಿಸಲಾದ ಶಂಕಿತ ಸೋಂಕುಗಳ ಒಂದು ಸಣ್ಣ ಗುಂಪಿನಲ್ಲಿ ಇಬ್ಬರು ಭಾರತೀಯ ಪ್ರಯಾಣಿಕರು ಸೇರಿದ್ದಾರೆ ಮತ್ತು ಆರೋಗ್ಯ ಅಧಿಕಾರಿಗಳು ಸಂಪರ್ಕಿತರ ಮೇಲೆ ನಿಗಾ ಇಟ್ಟಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಹ್ಯಾಂಟವರೈರಸ್ ಸೋಂಕುಗಳು ಅಪರೂಪ ಮತ್ತು ಸಾಮಾನ್ಯವಾಗಿ ಮಾನವರಿಂದ ಹರಡುವ ಬದಲು ಇಲಿಗಳ ಸಂಪರ್ಕಕ್ಕೆ ಸಂಬಂಧಿಸಿವೆ. ಕೋವಿಡ್ 19ಕ್ಕಿಂತ ಭಿನ್ನವಾಗಿದ್ದು, ಜನರಲ್ಲಿ ಸುಲಭವಾಗಿ ಹರಡುವುದಿಲ್ಲ ಎಂದು ಕುಮಾರ್ ಹೇಳಿದ್ದಾರೆ.

“ಹ್ಯಾಂಟವೈರಸ್ ಮಾನವನಿಂದ ಮಾನವನಿಗೆ ಹರಡುವಿಕೆ ಅತ್ಯಂತ ಅಪರೂಪ. ಬಹುತೇಕ ಹ್ಯಾಂಟವೈರಸ್ ಪ್ರಕರಣಗಳು ಏಷ್ಯಾ ಮತ್ತು ಯುರೋಪ್‌ನಲ್ಲಿ ವರದಿಯಾಗುತ್ತವೆ. ಮನುಷ್ಯರ ನಡುವೆ ಹರಡುವುದಿಲ್ಲ. ಸೀಮಿತವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಆ್ಯಂಡಿಸ್ ವೈರಸ್‌ನಂತಹ ಕೆಲವು ದಕ್ಷಿಣ ಅಮೆರಿಕದ ತಳಿಗಳು ಮಾತ್ರ ದಾಖಲಿಸಲಾಗಿದೆ” ಎಂದು ಅವರು ವಿವರಿಸಿದ್ದಾರೆ.

ವೈರಸ್ ಹರಡಿರುವುದು ಗಂಭೀರ ಪ್ರಕರಣವಾಗಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯ ಮೌಲ್ಯಮಾಪನದಲ್ಲಿ ಸಾರ್ವಜನಿಕ ಆರೋಗ್ಯ ಅಪಾಯ ಹೆಚ್ಚಿರುವುದಿಲ್ಲ ಎಂದು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯಸಸ್ ಹೇಳಿದ್ದಾರೆ. ಸದ್ಯದ ಇನ್‌ಕ್ಯುಬೇಶನ್ ಅವಧಿ ಪರಿಗಣಿಸಿದಲ್ಲಿ ಇನ್ನಷ್ಟು ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ತಜ್ಞರ ಪ್ರಕಾರ ಹ್ಯಾಂಟವೈರಸ್ ಸೋಂಕುಗಳು ಆರಂಭದಲ್ಲಿ ಇನ್‌ಫ್ಲೂಯೆನ್ಸ, ಡೆಂಗ್ಯೂ ಅಥವಾ ತೀವ್ರ ಉಸಿರಾಟದ ರೋಗವನ್ನು ಹೋಲುತ್ತವೆ. ಆರಂಭಿಕ ರೋಗ ನಿರ್ಣಯ ಬಹಳ ಸವಾಲಿನದ್ದಾಗಿರಬಹುದು. ಶಂಕಿತ ಪ್ರಕರಣಗಳನ್ನು ಗುರುತಿಸಲು ದೇಶವು ಸಾಕಷ್ಟು ಸನ್ನದ್ದತೆ ಮತ್ತು ಪ್ರಯೋಗಾಲಯ ಕಣ್ಗಾವಲು ಸಾಮರ್ಥ್ಯವನ್ನು ಹೊಂದಿದೆ ಎಂದು ನವೀನ್ ಕುಮಾರ್ ಹೇಳಿದ್ದಾರೆ.

“ಭಾರತದ ICMRನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಮತ್ತು ದೇಶಾದ್ಯಂತ 165 ಪ್ರಯೋಗಾಲಯಗಳ ವೈರಲ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯದ ಜಾಲವನ್ನು ಹೊಂದಿದ್ದು. ಹ್ಯಾಂಟವೈರಸ್ ಸೋಂಕನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ಶಂಕಿತ ಪ್ರಕರಣಗಳ ದೃಢೀಕರಣಕ್ಕೆ ಆರ್‌ಟಿ-ಪಿಸಿಆರ್ ಸೌಲಭ್ಯಗಳು ಲಭ್ಯವಿವೆ” ಎಂದು ಅವರು ಹೇಳಿದರು.

ಅವರ ಪ್ರಕಾರ, ಸಾಮಾನ್ಯವಾಗಿ ಸೋಂಕಿನ ಲಕ್ಷಣಗಳು ಒಡ್ಡಿಕೊಂಡ ಒಂದರಿಂದ ಐದು ವಾರಗಳ ನಂತರ ಕಾಣಿಸಿಕೊಳ್ಳುತ್ತವೆ ಮತ್ತು ಆರಂಭದಲ್ಲಿ ಜ್ವರ ರೀತಿಯ ಅನಾರೋಗ್ಯವನ್ನು ಹೋಲುತ್ತವೆ. ಸಾಮಾನ್ಯ ಎಚ್ಚರಿಕೆ ಚಿಹ್ನೆಗಳಲ್ಲಿ ಹಠಾತ್ ಜ್ವರ, ತೀವ್ರ ದೇಹದ ನೋವು, ತಲೆನೋವು, ಆಯಾಸ, ಶೀತ, ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಒಣ ಕೆಮ್ಮು ಸೇರಿವೆ.”

ಗಂಭೀರ ಪ್ರಕರಣಗಳಲ್ಲಿ ರೋಗಿಗಳು ಉಸಿರಾಟದ ಸಮಸ್ಯೆಯನ್ನು ಎದುರಿಸಬಹುದು. ಕಡಿಮೆ ರಕ್ತದೊತ್ತಡ ಅಥವಾ ಕಿಡ್ನಿ ಸಮಸ್ಯೆ ಎದುರಿಸಬಹುದು. “ಪರಿಸರ ಬದಲಾವಣೆಗಳು ಭಾರತ ಸೇರಿದಂತೆ ಜಾಗತಿಕವಾಗಿ ಇಲಿಗಳಿಂದ ಹರಡುವ ರೋಗಗಳ ದೀರ್ಘಕಾಲೀನ ಅಪಾಯವನ್ನು ಹೆಚ್ಚಿಸಬಹುದು. ಹವಾಮಾನ ಬದಲಾವಣೆ, ಪ್ರವಾಹ, ಯೋಜಿತವಲ್ಲದ ನಗರೀಕರಣ, ಕಳಪೆ ತ್ಯಾಜ್ಯ ನಿರ್ವಹಣೆ ಮತ್ತು ಇಲಿಗಳ ಆವಾಸಸ್ಥಾನಗಳಲ್ಲಿ ಹೆಚ್ಚಿದ ಮಾನವ ಅತಿಕ್ರಮಣವು ಇಲಿಗಳಿಂದ ಹರಡುವ ಸೋಂಕುಗಳ ಅಪಾಯ ಹೆಚ್ಚಿಸಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರೀ ಮಳೆ ಮತ್ತು ಪ್ರವಾಹಗಳು ಹೆಚ್ಚಾಗಿ ಮಾನವ ವಾಸಸ್ಥಳಗಳು ಮತ್ತು ಶೇಖರಣಾ ಪ್ರದೇಶಗಳಿಗೆ ಇಲಿಗಳ ಚಲನೆಯನ್ನು ಹೆಚ್ಚಿಸುತ್ತದೆ. ಇದು ಒಡ್ಡಿಕೊಳ್ಳುವ ಅಪಾಯ ಏರುತ್ತದೆ. ಕಳಪೆ ನೈರ್ಮಲ್ಯದಿಂದ ತ್ವರಿತ ನಗರ ಬೆಳವಣಿಗೆಯು ಇಲಿಗಳ ಪ್ರಸರಣ ಮತ್ತಷ್ಟು ಬೆಂಬಲಿಸುತ್ತದೆ. ಆದರೆ ಈಗಿನ ಹಡಗಿನ ಪ್ರಕರಣಗಳು ವ್ಯಾಪಕ ಪ್ರಸರಣವಾಗುವ ಸಾಧ್ಯತೆಯಿಲ್ಲ. ಇಲಿಗಳ ನಿಯಂತ್ರಣ ಮತ್ತು ನೈರ್ಮಲ್ಯ ಕ್ರಮಗಳು ಹ್ಯಾಂಟವೈರಸ್ ವಿರುದ್ಧ ಪ್ರಮುಖ ತಡೆಗಟ್ಟುವ ತಂತ್ರಗಳಾಗಿವೆ ಎಂದು ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X