Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬದುಕಿ ನಿತ್ಯವೂ ಸಾಯುತ್ತಿರುವ...

ಬದುಕಿ ನಿತ್ಯವೂ ಸಾಯುತ್ತಿರುವ ಹಿಬಾಕುಶಗಳು

ಸಿದ್ಧವಾಗುತ್ತಿವೆ ಬೆಂಕಿಯಿಂದ ಬಾಣಲೆಗೆ ಬಿದ್ದು ಬೇಯುತ್ತಿರುವವರ ಸಾಕ್ಷ ಕಥೆಗಳು

ವಾರ್ತಾಭಾರತಿವಾರ್ತಾಭಾರತಿ6 Aug 2023 10:16 AM IST
share
ಬದುಕಿ ನಿತ್ಯವೂ ಸಾಯುತ್ತಿರುವ ಹಿಬಾಕುಶಗಳು

- ಆರ್. ಬಿ. ಗುರುಬಸವರಾಜ

ಇಂದು ಆಗಸ್ಟ್ 6. ಇದು ಮಾನವ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. 78 ವರ್ಷಗಳ ಹಿಂದೆ ಇದೇ ದಿನದಂದು ಅಮೆರಿಕವು ಜಪಾನ್ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ (ಲಿಟಲ್ ಬಾಯ್) ಅನ್ನು ಸಿಡಿಸಿತ್ತು. ಮೂರು ದಿನಗಳ ಅಂತರದಲ್ಲಿ ಅಂದರೆ ಆಗಸ್ಟ್ 9ರಂದು, ಜಪಾನ್ನ ನಾಗಸಾಕಿ ನಗರದ ಮೇಲೆ ಮತ್ತೊಂದು ಪರಮಾಣು ಬಾಂಬ್ (ಫ್ಯಾಟ್ ಮ್ಯಾನ್) ಅನ್ನು ಸಿಡಿಸಿತ್ತು. ಈ ಅವಘಡದಲ್ಲಿ ಹಿರೋಷಿಮಾದಲ್ಲಿ ಅಂದಾಜು 1,66,000 ಜನ ಹಾಗೂ ನಾಗಸಾಕಿಯಲ್ಲಿ 80,000 ಜನರು ಸಾವನ್ನಪ್ಪಿದರು. ಪ್ರತೀ ನಗರದಲ್ಲೂ ಸಂಭವಿಸಿದ ಸಾವುನೋವುಗಳ ಪೈಕಿ ಅರ್ಧದಷ್ಟು ಸಾವುಗಳು ಮೊದಲ ದಿನದಂದೇ ಸಂಭವಿಸಿದವು.

ಹಿರೋಷಿಮಾದ ಪ್ರಿಫೆಕ್ಟಿನ ಆಡಳಿತ ಪ್ರಾಂತಕ್ಕೆ ಸಂಬಂಧಿಸಿದ ಆರೋಗ್ಯ ಇಲಾಖೆಯು ಅಂದಾಜು ಮಾಡಿರುವ ಪ್ರಕಾರ, ಸ್ಫೋಟದ ದಿನದಂದು ಸತ್ತ ಜನರ ಪೈಕಿ ಶೇ. 60ರಷ್ಟು ಜನರು ದಿಢೀರನೆ ಎದ್ದ ಜ್ವಾಲೆಯ ಸುಟ್ಟಗಾಯಗಳಿಂದ ಸತ್ತರೆ, ಶೇ. 30ರಷ್ಟು ಜನರು ಕಟ್ಟಡಗಳ ಭಗ್ನಾವಶೇಷಗಳಡಿ ಸಿಲುಕಿ ಸತ್ತರು. ಶೇ. 10ರಷ್ಟು ಜನರು ಇತರ ಕಾರಣಗಳಿಂದ ಸತ್ತರು. ಇದಾದ ಕೆಲ ತಿಂಗಳುಗಳ ಅವಧಿಯಲ್ಲಿ ಸುಟ್ಟಗಾಯಗಳು, ವಿಕಿರಣದ ಕಾಯಿಲೆ ಮತ್ತು ಅಸ್ವಸ್ಥತೆಯ ಪರಿಣಾಮದಿಂದ ಹೆಚ್ಚು ಜನರು ಸತ್ತರು. ಹೀಗೆ ಸತ್ತವರಲ್ಲಿ ಬಹುಪಾಲು ಜನರು ಸೈನಿಕರಾಗಿರದೆ, ಅಮಾಯಕ ನಾಗರಿಕರಾಗಿದ್ದರು ಎಂಬುದೇ ದುರಂತ.

ಸತ್ತವರದ್ದು ಮುಗಿದ ಅಧ್ಯಾಯದ ಕಥೆಯಾದರೆ, ಬದುಕಿ ಉಳಿದವರದ್ದು ಜೀವಂತ ಸಾವಿನ ಕಥೆ. ಬಾಂಬ್ ದಾಳಿಯಾಗಿ ಎಂಟು ದಶಕಗಳು ಕಳೆದರೂ ಇನ್ನೂ ವಿಕಿರಣಗಳ ಪ್ರಭಾವ ಇದೆ ಎನ್ನುವುದಾರೆ ದಾಳಿಯ ಸಮಯದಲ್ಲಿನ ಭೀಕರತೆ ಅರ್ಥವಾಗುತ್ತದೆ. ಅಲ್ಲಿ ಈಗಲೂ ಜನಿಸುವ ಹಸುಕೂಸುಗಳು ಅಂಗವಿಕಲವಾಗುತ್ತಿವೆ ಎಂಬುದು ದುರಂತವಲ್ಲದೇ ಮತ್ತೇನು? ಯಾರೋ ಮಾಡಿದ ತಪ್ಪಿಗೆ ಏನೂ ಅರಿಯದ ಕಂದಮ್ಮಗಳು ಶಿಕ್ಷೆ ಅನುಭವಿಸುವಂತಾದುದು ಯಾವ ನ್ಯಾಯ?

ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬಿದ್ದ ಪರಮಾಣು ಬಾಂಬ್ಗಳಿಂದ ಬದುಕುಳಿದ ಬಲಿಪಶುಗಳೇ ಹಿಬಾಕುಶಗಳು. ಸ್ಫೋಟದ ತಕ್ಷಣದ ಪರಿಣಾಮಗಳಿಂದ ಬದುಕುಳಿದ ಹಿಬಾಕುಶಗಳು ಕೌಟುಂಬಿಕ ಸದಸ್ಯರು ಹಾಗೂ ಸ್ನೇಹಿತರನ್ನು ಕಳೆದುಕೊಂಡು ವಿಕಿರಣದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಿತ್ಯವೂ ನೋವಿನೊಂದಿಗೆ ಬದುಕು ಸವೆಸುತ್ತಿದ್ದಾರೆ. ವಿಕಿರಣದಿಂದ ಉಂಟಾದ ಚರ್ಮ ರೋಗ ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಜಪಾನ್ ಸರಕಾರ ಹಿರೋಷಿಮಾ ಮತ್ತು ನಾಗಸಾಕಿ ಮತ್ತು ವಿಶ್ವಸಂಸ್ಥೆಯ ನಗರಗಳ ಸಹಕಾರದೊಂದಿಗೆ, ಪರಮಾಣು ಬಾಂಬ್ನಿಂದ ಬದುಕುಳಿದವರ ಸಾಕ್ಷ್ಯಗಳನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತಹ ಕೆಲಸ ಮಾಡುತ್ತಿದೆ. ಅದಕ್ಕಾಗಿ ಜಪಾನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಿಬಾಕುಶಗಳ ಜೀವನ ಕುರಿತ ಸಾಕ್ಷಗಳನ್ನು ನಿರ್ಮಿಸುತ್ತಿವೆ. ಈ ಸಾಕ್ಷಗಳನ್ನು ಇಂಗ್ಲಿಷ್, ಚೈನೀಸ್, ಫ್ರೆಂಚ್, ಸ್ಪ್ಯಾನಿಷ್, ರಶ್ಯನ್ ಮತ್ತು ಕೊರಿಯನ್ ಭಾಷೆಗಳಿಗೆ ಅನುವಾದ ಮಾಡುತ್ತಿದೆ.

ಆ ಮೂಲಕ ಜಗತ್ತಿನ ಬಹುತೇಕರಿಗೆ ಹಿಬಾಕುಶಗಳ ಸಂಕಷ್ಟವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದೆ. ದಾಳಿಗೊಳಗಾದ ಹಿರೋಷಿಮಾದ ಡೌನ್ಟೌನ್ ಬೀದಿಗಳು ಈಗ ಬಹುಮಹಡಿ ಕಟ್ಟಡಗಳಿಂದ ತುಂಬಿಕೊಂಡಿದೆ. ಬೆಂಕಿಯ ಜ್ವಾಲೆ ಹಾಗೂ ವಿಕಿರಣಗಳಿಂದ ಕಮರಿ ಹೋಗಿದ್ದ ಉದ್ಯಾನವನವು ಮತ್ತೆ ಹಸಿರಾಗಿದೆ. ಪ್ರತೀ ವರ್ಷ ಆಗಸ್ಟ್ 6ರಂದು ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್ನಲ್ಲಿ ಸಮಾರಂಭವನ್ನು ನಡೆಸಲಾಗುತ್ತದೆ. ದಾಳಿಯಲ್ಲಿ ಮಡಿದವರ ಹಾಗೂ ದಾಳಿಯ ನಂತರ ಹಿಬಾಕುಶಗಳಾಗಿ ಮಡಿದವರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ. ಅಲ್ಲಿ ಮೇಯರ್ ಅವರು ವಾರ್ಷಿಕ ಶಾಂತಿ ಘೋಷಣೆಯನ್ನು ಓದುತ್ತಾರೆ. ಅಂತರ್ರಾಷ್ಟ್ರೀಯ ಶಾಂತಿ ಸಂಸ್ಕೃತಿ ನಗರವಾಗಿ ತನ್ನ ಧ್ಯೇಯವನ್ನು ಪೂರೈಸಲು ನಿರ್ಧರಿಸಿದ ಹಿರೋಷಿಮಾ ಪ್ರಪಂಚವನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ.

ಅಂದು ಸಾವಿನ ದವಡೆಯಿಂದ ಬದುಕಿದ ಹಿಬಾಕುಶಗಳಿಗೆ ಈಗ ವಯಸ್ಸಾಗಿದೆ. ಅದರಲ್ಲಿ ಬಹುತೇಕರು 80 ಆಸುಪಾಸಿನವರು. ರಕ್ತ ಸಂಬಂಧಿಕರಿಂದ ದೂರವಾದ ಇವರೆಲ್ಲರೂ ಒಂದು ರೀತಿಯಲ್ಲಿ ಒಂಟಿ ಜೀವಿಗಳು. ದುಃಖಕರವೆಂದರೆ ಬಾಂಬ್ ಘಟನೆಯ ನಂತರದ ಪರಿಣಾಮಗಳಿಂದಾಗಿ ಕೆಲವರು ಆಸ್ಪತ್ರೆಗಳಿಗೆ ಸೀಮಿತರಾಗಿದ್ದಾರೆ. ಅನೇಕರು ಭಯದಿಂದಲೇ ಬದುಕುತ್ತಾರೆ. ವಿಕಿರಣದ ಪರಿಣಾಮಗಳು ಅವರನ್ನು ಬೆಂಕಿಯಿಂದ ಬಾಣಲೆಯಲ್ಲಿ ಬೇಯುವಂತೆ ಮಾಡಿದೆ. ಇತರರೊಡನೆ ಅವರು ತಮ್ಮ ಜೀವನದ ಕಥೆಯನ್ನು ಹೇಳಿಕೊಳ್ಳುವುದು ನೋವಿನ ಸಂಗತಿಯಾದರೂ, ಮುಂದಿನ ಪೀಳಿಗೆಗೆ ಶಾಂತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಸಲುವಾಗಿ ಅದು ಅನಿವಾರ್ಯವಾಗಿದೆ. ಪರಮಾಣು ಬಾಂಬ್ಗಳು ಹಿರೋಷಿಮಾ ನಗರವನ್ನು ಧ್ವಂಸಗೊಳಿಸಿದ 65 ವರ್ಷಗಳ ನಂತರ, ಅಂದರೆ ಆಗಸ್ಟ್ 6, 2010ರಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರು ಹಿರೋಷಿಮಾ ಶಾಂತಿ ಸ್ಮಾರಕ ಸಮಾರಂಭದಲ್ಲಿ ಭಾಗವಹಿಸಿದ್ದರು.

ಹಿರೋಷಿಮಾದ ಬಾಂಬ್ ದಾಳಿಯಲ್ಲಿ ಮಡಿದ ಎಲ್ಲರಿಗೂ ಗೌರವ ನಮನ ಸಲ್ಲಿಸಿದ ನಂತರ, ‘‘ಬದುಕುಳಿದವರ ಬದುಕಿಗೆ ಹೆಗಲು ನೀಡಲು ಈಗ ಕಾಲ ಕೂಡಿಬಂದಿದೆ. ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಪ್ರಪಂಚದ ಕನಸನ್ನು ನನಸಾಗಿಸುವ ಸಮಯ ಬಂದಿದೆ’’ ಎಂದು ಒತ್ತಿ ಹೇಳಿದರು. ಅದರ ಅನ್ವಯ ಈಗ ಅಲ್ಲಿ ಬದುಕಿ ಉಳಿದ ಹಿಬಾಕುಶಗಳ ಸಾಕ್ಷ್ಯ ಕಥೆಗಳು ನಿರ್ಮಾಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಮರಣ ಹೊಂದಿದ ಹಿಬಾಕುಶಗಳ ಜೀವನಾಧಾರಿತ ಕಥೆಗಳು ದಾಖಲಾಗುತ್ತಿವೆ. ವಿಶ್ವ ಸಮರದ ಪರಿಣಾಮವು ಸಾಮಾನ್ಯ ಜನರನ್ನು ಹೇಗೆ ಹಿಂಸಿಸುತ್ತದೆ ಎಂಬುದಕ್ಕೆ ಹಿಬಾಕುಶಗಳ ಕಥೆಗಳು ಸಾಕ್ಷಿಯಾಗಲಿವೆ.

ಜಗತ್ತಿನ ತುಂಬಾ ಶಾಂತಿಯನ್ನು ಪಸರಿಸುವ ಹರಿಕಾರರಿಗೆ ಈ ಕಥೆಗಳು ಕೈದೀವಿಗೆಯಾಗಲಿವೆ. ಬಾಂಬ್ ದಾಳಿಯಿಂದ ಸಾವನ್ನಪ್ಪಿದ ಸೈನಿಕರು ಹಾಗೂ ನಾಗರಿಕರಿಗೆ ಸ್ಮಾರಕ ಉದ್ಯಾನವನ ನಿರ್ಮಿಸಲಾಗಿದೆ ಮತ್ತು ಪ್ರತೀವರ್ಷ ಇವರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಆದರೆ ಅಂಗವಿಕಲರಾದ ಮುನ್ನೂರು ಸಾವಿರ ಹಿಬಾಕುಶಗಳಿಗೆ ಯಾವುದೇ ಸ್ಮರಣಾರ್ಥ ದಿನವಿಲ್ಲದಿರುವುದು ದುರಂತ ಎನಿಸುತ್ತದೆ. ಬಹುತೇಕ ಹಿಬಾಕುಶಗಳು ತಮ್ಮ ಸಂಕಷ್ಟದ ಜೀವನದ ನಡುವೆಯೂ ಶಾಂತಿಯನ್ನು ಉತ್ತೇಜಿಸುವ ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸೃಷ್ಟಿಸುವ ಹೋರಾಟಗಳಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಬಾಂಬ್ ದಾಳಿಯಿಂದ ಸಾವನ್ನಪ್ಪಿದ ಅಮಾಯಕರಿಗೆ ಹಾಗೂ ನಿತ್ಯವೂ ನರಕಯಾತನೆ ಅನುಭವಿಸಿಯೂ ಮುಂದಿನ ಪೀಳಿಗೆಗೆ ಶಾಂತಿ ಸಂದೇಶ ಸಾರುತ್ತಿರುವ ಹಿಬಾಕುಶಗಳಿಗೆ ಸಾವಿರದ ನಮನಗಳು. ಮನುಕುಲ ಹಾಳು ಮಾಡುವ ಯುದ್ಧ ನಡೆಯುವ ಬದಲು ಶಾಂತಿಯ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟ ನಮ್ಮ ಗಾಂಧಿ ನೆನಪಾದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X