ʼಅಧಿಕ EMI, ಏರುತ್ತಿರುವ ಬೆಲೆಗಳುʼ: ಭಾರತದಲ್ಲಿ ಐಫೋನ್ ಖರೀದಿಸುವುದು ಕಠಿಣವಾಗಲಿದೆಯೆ?

ಸಾಂದರ್ಭಿಕ ಚಿತ್ರ | Photo Credit : magnific
ಭಾರತದಲ್ಲಿ ವೇತನ ಬೆಳವಣಿಗೆ ನಿಧಾನಗತಿಯಲ್ಲಿಯೇ ಉಳಿದಿರುವಾಗ ಮತ್ತು ಯುವ ನಿರುದ್ಯೋಗಿಗಳೇ ಹೆಚ್ಚಾಗಿರುವಾಗ ಬೆಲೆಬಾಳುವ ಐಫೋನ್ ಖರೀದಿಸುವುದು ದೊಡ್ಡ ಇಎಂಐ ಹೊರೆಯನ್ನು ತರಬಹುದು.
ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಆ್ಯಪಲ್ ಕಂಪನಿಯ ಹೊಸ ಐಫೋನ್ 18 ಸರಣಿ ಮತ್ತು ಇತರ ಹಾರ್ಡ್ವೇರ್ ಗಳನ್ನು ಅನಾವರಣಗೊಳಿಸಲು ಕೇವಲ ಎರಡು ತಿಂಗಳುಗಳು ಬಾಕಿ ಇರುವಾಗ ಹೊಸ ಸಾಧನಗಳು ತಮ್ಮ ಹಿಂದಿನ ಸಾಧನಗಳಿಗೆ ಹೋಲಿಸಿದರೆ ಎಷ್ಟು ಹೆಚ್ಚು ಬೆಲೆ ಇರಬಹುದು ಎನ್ನುವ ಅಚ್ಚರಿ ಬೆಳೆದಿದೆ.
ಆ್ಯಪಲ್ ಈಗಾಗಲೇ ಐಪ್ಯಾಡ್ಗಳು, ಮ್ಯಾಕ್ಗಳು ಮತ್ತು ಗೃಹೋಪಯೋಗಿ ಸಾಧನಗಳು ಸೇರಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿದೆ. ಕೆಲವೊಂದು ಉತ್ಪನ್ನಗಳ ಬೆಲೆ ಶೇ 18ರಿಂದ ಶೇ 33ರವರೆಗೂ ಹೆಚ್ಚಾಗಿವೆ. AI ಕಂಪನಿಗಳು ಡೇಟಾ ಸೆಂಟರ್ಗಳಿಗಾಗಿ ಹೆಚ್ಚು ಮೆಮೊರಿ ಖರೀದಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ಈ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಐಫೋನ್ ಗಳ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು ಎಂದು ವಿಶ್ಲೇಷಕರು ಮತ್ತು ಉದ್ಯಮದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ನಿರಂತರ ಹಣದುಬ್ಬರದ ನಡುವೆ ಗಜೆಟ್ ಗಳ ಬೆಲೆ ಏರುತ್ತಿರುವುದು ಮತ್ತು ಐಫೋನ್ ಬೆಲೆಗಳಲ್ಲಿ ತೀವ್ರ ಏರಿಕೆಯ ನಿರೀಕ್ಷೆಯಿಂದಾಗಿ ಸ್ಮಾರ್ಟ್ಫೋನ್ ಗಳು ಗ್ರಾಹಕರ ಬಜೆಟ್ ನಿಂದ ದೊಡ್ಡ ಹೊರೆಯನ್ನು ಹೊರಿಸಬಹುದು.
ಭಾರತದಲ್ಲಿ ವೇತನ ಬೆಳವಣಿಗೆ ನಿಧಾನಗತಿಯಲ್ಲಿಯೇ ಉಳಿದಿರುವಾಗ ಮತ್ತು ಯುವ ನಿರುದ್ಯೋಗಿಗಳೇ ಹೆಚ್ಚಾಗಿರುವಾಗ ಬೆಲೆಬಾಳುವ ಐಫೋನ್ ಖರೀದಿಸುವುದು ದೊಡ್ಡ ಇಎಂಐ ಹೊರೆಯನ್ನು ತರಬಹುದು. ಆ್ಯಪಲ್ ಭಾರತೀಯ ಮಾರುಕಟ್ಟೆಗೆ ಆಳವಾದ ಪ್ರವೇಶ ಮಾಡಿರುವಾಗ ಮತ್ತು ವರ್ಷಗಳ ತಾಳ್ಮೆಯ ನಂತರ ಐಫೋನ್ ದೇಶದ ಅತಿ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಸ್ಮಾರ್ಟ್ ಫೋನ್ ಆಗಿ ಮಾರ್ಪಟ್ಟು ಮಾರುಕಟ್ಟೆ ಪಾಲನ್ನು ಗಳಿಸಿರುವ ಸಮಯದಲ್ಲಿ ಈ ಎಲ್ಲಾ ಬೆಳವಣಿಗೆಗಳಾಗಿವೆ.
ಭವಿಷ್ಯದಲ್ಲಿ ಫೋನ್ಗಳ ಬೆಲೆಯ ಬಗ್ಗೆ ಆ್ಯಪಲ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ Counterpoint Research ವರದಿಯ ಪ್ರಕಾರ, ಮುಂಬರುವ ಐಫೋನ್ 18 ಪ್ರೊ ಮ್ಯಾಕ್ಸ್ ನ ವಸ್ತುಗಳ ಬಿಲ್ ಕಳೆದ ವರ್ಷ ಬಿಡುಗಡೆಯಾದ ಐಫೋನ್ 17 ಪ್ರೊ ಮ್ಯಾಕ್ಸ್ ಗೆ ಹೋಲಿಸಿದರೆ 300 ಡಾಲರ್ ಗಳಿಗೆ ಏರಿಕೆಯಾಗಬಹುದು.1 ಟಿಬಿ ಸಂಗ್ರಹದ ಅತ್ಯುನ್ನತ ಮಟ್ಟದ ಐಫೋನ್ ತಯಾರಿಸಲು ವೆಚ್ಚ ಸುಮಾರು 28,717 ರೂ. ರಷ್ಟು ಏರಿಕೆಯಾಗಿರುತ್ತದೆ.
NAND ಮತ್ತು DRAM ಮೆಮೊರಿ ಬೆಲೆಗಳು ಏರುವ ಜೊತೆಗೆ ಆ್ಯಪಲ್ನ ಮುಂದಿನ ತಲೆಮಾರಿನ 2nm ಚಿಪ್ ಮತ್ತು ಅದರ ಅತ್ಯಾಧುನಿಕ ಪ್ಯಾಕೇಜಿಂಗ್ ಉತ್ಪಾದನಾ ವೆಚ್ಚವನ್ನು ಏರಿಸಬಹುದು. ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ನಲ್ಲಿ ಹೊಸ ಕ್ಯಾಮರಾ ತಂತ್ರಜ್ಞಾನ ಪರಿಚಯಿಸಲು ಆ್ಯಪಲ್ ಯೋಜಿಸುತ್ತಿರುವುದರಿಂದ ಕ್ಯಾಮರಾ ವೆಚ್ಚಗಳೂ ಸ್ವಲ್ಪ ಏರುವ ನಿರೀಕ್ಷೆಯಿದೆ.
ಆ್ಯಪಲ್ ಸಾಮಾನ್ಯವಾಗಿ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ತನ್ನ ಉತ್ಪನ್ನಗಳ ಬೆಲೆ ಏರಿಸುತ್ತದೆ. ಹಾಗಿದ್ದರೆ ಏಕೆ ಈಗ ಬೆಲೆ ಏರಿಕೆ ಎಂದು ಅಚ್ಚರಿ ಪಡುತ್ತಿದ್ದಲ್ಲಿ, ಉತ್ತರ AI- ಉತ್ಕರ್ಷದಿಂದಾಗಿ ಗಜೆಟ್ಗಳ ಬೆಲೆ ಏರಿಕೆಯಾಗುತ್ತಿರುವುದು ಆಗಿದೆ. ಹೀಗಾಗಿ ಅಂತಿಮವಾಗಿ ಆ್ಯಪಲ್ನಂತಹ ಕಂಪನಿಗಳು ಹೆಚ್ಚಿನ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಲಾಭದ ಅಂಚನ್ನು ರಕ್ಷಿಸಿಕೊಳ್ಳಬಹುದು. ಹೀಗಾಗಿ ಈಗಾಗಲೇ ಪ್ರೀಮಿಯಂ ಬೆಲೆಯಲ್ಲಿರುವ ಐಫೋನ್ಗಳು ಮೆಮೊರಿ ಕೊರತೆ ಹಿನ್ನೆಲೆಯಲ್ಲಿ ಇನ್ನಷ್ಟು ವೆಚ್ಚ ಏರಿಸಿಕೊಳ್ಳಬಹುದು.
ಆರಂಭದಲ್ಲಿ ಎಐ ಅನ್ನು ಉದ್ಯಮದ ಸಕಾರಾತ್ಮಕ ಬದಲಾವಣೆ ಎಂದು ನೋಡಲಾಗುತ್ತಿದ್ದರೂ, ಇದೀಗ ಜನರ ದೈನಂದಿನ ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರುತ್ತಿದೆ. ಪರಿಸರ ಕಾಳಜಿ, ಶತಕೋಟಿ ಗ್ಯಾಲನ್ಗಳಷ್ಟು ನೀರು ಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಸಾಮಾಜಿಕ ಮಾಧ್ಯಮದಲ್ಲಿ AI-ರಚಿತ ಕಂಟೆಂಟ್ ಹರಡುವಿಕೆ, ಆದಾಯ ಕಡಿಮೆ ಮತ್ತು ಉದ್ಯೋಗ ಕಡಿತದ ಅಪಾಯಗಳು ಎದುರಾಗಿವೆ. ಹಾಗೆಯೇ AI- ಉತ್ಕರ್ಷದಿಂದಾಗಿ ಸ್ಮಾರ್ಟ್ಫೋನ್ಗಳು ಮತ್ತು ಲ್ಯಾಪ್ಟಾಪ್ಗಳಲ್ಲಿ ಬಳಸುವ ಮೆಮೊರಿ ಕೊರತೆಗೆ ಕಾರಣವಾಗಿದೆ. ಮೆಮೊರಿ ಚಿಪ್ ತಯಾರಕರು ಉತ್ಪಾದನೆಯನ್ನು AI ಡೇಟಾ ಕೇಂದ್ರಗಳಿಗೆ ಹೆಚ್ಚು ಲಾಭದಾಯಕ ಹೈ-ಬ್ಯಾಂಡ್ವಿಡ್ತ್ ಮೆಮೊರಿಯ ಕಡೆಗೆ ತಿರುಗಿಸಿದ್ದಾರೆ ಮತ್ತು ಗ್ರಾಹಕದರ್ಜೆಯ DRAMನಿಂದ ದೂರಸರಿಯುತ್ತಿದ್ದಾರೆ. ಹೀಗಾಗಿ RAM ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ.
Counterpoint Research ಪ್ರಕಾರ 2026ರ ಮೊದಲ ಆರು ವಾರಗಳಲ್ಲಿ DRAM ಬೆಲೆಗಳು ಶೇ 50 ಅಥವಾ ಅದಕ್ಕಿಂತ ಹೆಚ್ಚು ಜಿಗಿದರೂ ಅಚ್ಚರಿಯೇನಿಲ್ಲ. ಹೀಗಾಗಿ ಬ್ರ್ಯಾಂಡ್ಗಳು ಕಡಿಮೆ ಮಟ್ಟದ ಮತ್ತು ಬಜೆಟ್ ಸ್ಮಾರ್ಟ್ಫೋನ್ಗಳು ಮತ್ತು ಲ್ಯಾಪ್ಟಾಪ್ಗಳ ಉತ್ಪಾದನೆ ಕಡಿಮೆ ಮಾಡುವ ಹಂತವನ್ನು ತಲುಪಿವೆ. ಹೆಚ್ಚಿನ ಕಂಪನಿಗಳು ತಮ್ಮ ಉತ್ಪಾದನಾ ಆದ್ಯತೆಗಳನ್ನು ಮಧ್ಯಮ ಶ್ರೇಣಿಯ ಮತ್ತು ಉನ್ನತ ಮಟ್ಟದ ಸಾಧನಗಳ ಕಡೆಗೆ ಬದಲಾಯಿಸುತ್ತಿವೆ.
ಮೆಮೊರಿ ಬಿಕ್ಕಟ್ಟು 2028ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಐಫೋನ್ ಖರೀದಿಸಲು ಹೆಚ್ಚು ಸಮಯದಿಂದ ಕಾಯುತ್ತಿದ್ದರೆ ಹೆಚ್ಚು ಕಾಯುವುದು ಅರ್ಥಹೀನವಾದೀತು. ಐಫೋನ್ 18 ಬಿಡುಗಡೆಯಾದ ನಂತರವೂ ಐಫೋನ್ 17ರ ಬೆಲೆ ಹೆಚ್ಚು ಶೀಘ್ರದಲ್ಲಿ ಇಳಿಯದೆ ಇರಬಹುದು. ಅಥವಾ ಐಫೋನ್ 18ರ ಸಂಭವನೀಯ ಬೆಲೆ ಐಫೋನ್ 17ಗಿಂತಲೂ ದುಬಾರಿಯಾಗಬಹುದು.
ಕೃಪೆ: indianexpress.com






