ನಕಲಿ IFS ಜ್ಯೋತಿ ಮಿಶ್ರಾ | IFS ಆಗಿದ್ದೇನೆ ಎಂದ ಪೊಲೀಸ್ ಅಧಿಕಾರಿಯ ಮಗಳ ಅವಾಂತರ ಬಯಲು
ಯು ಪಿ ಎಸ್ ಸಿ ಪರೀಕ್ಷೆ ಪಾಸ್ ಆಗಿಯೇ ಇರಲಿಲ್ಲ ; ಸ್ವತಃ ಹೆಣೆದ ಸುಳ್ಳಿನ ಜಾಲದಲ್ಲಿ ಸಿಕ್ಕಿಬಿದ್ದ ಜ್ಯೋತಿ

PC : indiatoday.in
ಪೂಜಾ ಖೇಡ್ಕರ್, ಅಭಿಷೇಕ್ ಸಿಂಗ್ ಈ ಇಬ್ಬರು ಐಎಎಸ್ ಗಳ ಅವಾಂತರಗಳು, ಆಮೇಲೆ ಅವರ ಮೇಲೆ ಬಂದ ಅಕ್ರಮಗಳ ಆರೋಪಗಳು ಚರ್ಚೆಯಲ್ಲಿರುವಾಗಲೇ ಇನ್ನೊಂದು ಹೆಸರು ಸುದ್ದಿಯಾಗಿದೆ. ಅದು ಜ್ಯೋತಿ ಮಿಶ್ರಾ ಎಂಬ ಹೆಸರು.
ಆದರೆ ಈ ಜ್ಯೋತಿ ಮಿಶ್ರಾ ಅವರದ್ದು ಮಾತ್ರ ಸಿನಿಮಾ ಒಂದನ್ನೇ ಮಾಡಿ ಬಿಡಬಹುದಾದಷ್ಟು ರೋಚಕ ಅಷ್ಟೇ ಚಿಂತಾಜನಕ. ಮೊದಲು, ಜ್ಯೋತಿ ಮಿಶ್ರಾ ಎಂಬಾಕೆ SC ಖೋಟಾದಡಿ ಅಕ್ರಮವಾಗಿ UPSCಯ ಪರೀಕ್ಷೆಯಲ್ಲಿ ನೇಮಕಾತಿ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಪೋಸ್ಟ್ ಗಳು ವೈರಲ್ ಆದವು. India Today ಈ ಬಗ್ಗೆ ವರದಿ ಮಾಡಿತ್ತು.
ಆದರೆ India Todayಯ ವರದಿಯ ನಂತರ ಹೊರ ಬಂದ ಮಾಹಿತಿ ಇದಕ್ಕಿಂತಲೂ ಆಶ್ಚರ್ಯಕರ. ಅದು ನಕಲಿ ಸರ್ಟಿಫಿಕೇಟ್ ಗಿಂತಲೂ ದೊಡ್ಡದು. ಜ್ಯೋತಿ ಯು ಪಿ ಎಸ್ ಸಿ ಪರೀಕ್ಷೆ ಪಾಸ್ ಆಗಿಯೇ ಇರಲಿಲ್ಲ. ಮನೆಯವರಲ್ಲಿ ಅವರು ಹೇಳಿದ ಸುಳ್ಳು ಎಲ್ಲಡೆ ನಿಜ ಎಂಬಂತೆ ಹರಡಿ ಹೋಗಿತ್ತು.
2021ರ UPSC ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಾಗ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಒಂದು ಟ್ವೀಟ್ ಮಾಡಿತ್ತು.. ಅದರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುರೇಶ್ ಮಿಶ್ರಾ ಅವರ ಮಗಳು ಜ್ಯೋತಿ ಮಿಶ್ರಾ ಅವರು 432ನೇ ರ್ಯಾಂಕ್
ಪಡೆದಿದ್ದಾರೆ ಎಂದು ಪ್ರಕಟಿಸಲಾಗಿತ್ತು.
ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿಯ ಮಗಳು ಕಠಿಣ ಪರಿಶ್ರಮದಿಂದ ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆ ಪಾಸಾಗಿದ್ದಾಳೆ, ಅದರಲ್ಲೂ ಆಕೆಗೆ ಪ್ರತಿಷ್ಠಿತ ಭಾರತೀಯ ವಿದೇಶಾಂಗ ಸೇವೆ ಅಂದ್ರೆ ಐ ಎಫ್ ಎಸ್ ಹುದ್ದೆ ಸಿಕ್ಕಿದೆ ಎಂದು ಎಂದು ಯುಪಿಯ ಪ್ರಾದೇಶಿಕ ಮಾಧ್ಯಮಗಳಲ್ಲಿ ಅಂದು ವರದಿಯಾಗಿತ್ತು. ಜ್ಯೋತಿ ಮಿಶ್ರಾ ಅವರ ಕುಟುಂಬದ ಸಂಭ್ರಮಕ್ಕೆ ಪಾರವೇ ಇರಲಿಲ್ಲ ; ಸಂಬಂಧಿಕರಲ್ಲಿ ಈ ಶುಭ ಸುದ್ದಿಯನ್ನು ಹಂಚಿಕೊಂಡರು. ಜ್ಯೋತಿ ಎಲ್ಲೆಡೆ ಸುದ್ದಿಯಾದರು.
ಐ ಎಫ್ ಎಸ್ ನ ಪ್ರಾಥಮಿಕ ತರಬೇತಿಗಾಗಿ ತಾನು ಮಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರೀ ನಾಶನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಗೆ ಸೇರುತ್ತಿರುವುದಾಗಿ ಜ್ಯೋತಿ ಕುಟುಂಬಕ್ಕೆ ತಿಳಿಸಿದರು. ಐಎಫ್ ಎಸ್ ನಲ್ಲಿ ತನಗೆ ಸ್ಪೇನ್ ದೇಶದಲ್ಲಿ ಉದ್ಯೋಗ ಸಿಕ್ಕಿದೆ ಎಂದೂ ಜ್ಯೋತಿ ಎಲ್ಲರಲ್ಲಿ ಹೇಳಿದ್ದರು.
ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತ ಸತ್ಯ ಬೆಳಿಕೆಗೆ ಬಂದಿದೆ. ಅಂದ ಹಾಗೆ, ಜ್ಯೋತಿ ಮಿಶ್ರಾ ಮಸೂರಿಯ ಐಎಎಸ್ ತರಬೇತಿ ಅಕಾಡೆಮಿಗೂ ಹೋಗಿರಲಿಲ್ಲ, ಆಮೇಲೆ ಸ್ಪೇನ್ ಗೂ ಹೋಗಲೇ ಇಲ್ಲ! ಏಕೆಂದರೆ ಜ್ಯೋತಿ ಮಿಶ್ರಾ ಐ.ಎಫ್.ಎಸ್ ಅಧಿಕಾರಿಯಾಗಿರಲೇ ಇಲ್ಲ, ಅಷ್ಟೇ ಅಲ್ಲ ಅವರು UPSC ಪರೀಕ್ಷೆಯಲ್ಲಿ ಆಯ್ಕೆ ಆಗಿರಲೂ ಇಲ್ಲ. ಇದನ್ನು ಸ್ವತಃ ಜ್ಯೋತಿ ಮಿಶ್ರ India Today ಗೆ ತಿಳಿಸಿದ್ದಾರೆ.
ಹಾಗಾದರೆ ಈ ಯುಪಿಎಸ್ಸಿ ಆಯ್ಕೆ, ಐ ಎಫ್ ಎಸ್ ಹುದ್ದೆ, ಸ್ಪೇನ್ ನಲ್ಲಿ ನೇಮಕಾತಿ ಇತ್ಯಾದಿ ಸುಳ್ಳು ಸುದ್ದಿ ಹರಡಿದ್ದು ಹೇಗೆ?ಈ ಸುಳ್ಳನ್ನು ಶುರು ಮಾಡಿದ್ದು ಸ್ವತಃ ಜ್ಯೋತಿ ಮಿಶ್ರಾ.
ಸ್ವತಃ ಹೆಣೆದ ಸುಳ್ಳಿನ ಜಾಲದಲ್ಲಿ ಆಕೆ ಸಿಕ್ಕಿಬಿದ್ದರು. ಮೊದಲು, ಒಂದು ಸುಳ್ಳನ್ನು ಹೇಳಿದರು... ಅದನ್ನು ಮರೆಮಾಚಲು ಇನ್ನೊಂದು ಸುಳ್ಳು... ಅದನ್ನನುಸರಿಸಿ ಸುಳ್ಳಿನ ಸರಣಿಯನ್ನೇ ಹೆಣೆಯುವ ಅನಿವಾರ್ಯತೆಗೆ ಸಿಲುಕಿ ಬಿಟ್ಟರು ಜ್ಯೋತಿ ಮಿಶ್ರಾ. ಮೊದಲು ಜ್ಯೋತಿ ತನ್ನ ಅಧ್ಯಯನ, ಕೋಚಿಂಗ್ ಗಾಗಿ ತಂದೆಯಲ್ಲಿ ಹಣ ಕೇಳಿದರು. ತಂದೆ ಜ್ಯೋತಿಯ ಮದುವೆಗಾಗಿ ಕೂಡಿಟ್ಟಿದ್ದ ಹಣವನ್ನು ಆಕೆಯ ಕೋಚಿಂಗ್ ಗೆ ನೀಡಿದರು. 2020ರಲ್ಲಿ ಅವರು ಪರೀಕ್ಷೆಗೆ ಹಾಜರಾದರೂ, ಅದರಲ್ಲಿ ಅವರು ತೇರ್ಗಡೆಗೊಳ್ಳುವಲ್ಲಿ ವಿಫಲರಾದರು. ಅವರು ಪುನಃ 2021ರಲ್ಲಿ ಪರೀಕ್ಷೆಯನ್ನು ಬರೆದರೂ, ಅದರಲ್ಲೂ ಅವರು ವಿಫಲವಾದರು.
ಆದರೆ ಆ ವರ್ಷ , ಜ್ಯೋತಿ ಅವರ ತಂಗಿ ಆರತಿ UPSCಯ ಫಲಿತಾಂಶವನ್ನು ನೋಡಿದ್ದಾಗ ಅದರಲ್ಲಿ ಜ್ಯೋತಿ ಎಂಬ ಒಂದು ಹೆಸರನ್ನು ಕಂಡು ಸಹೋದರಿಯಲ್ಲಿ ಫಲಿತಾಂಶದ ಕುರಿತು ಪ್ರಶ್ನಿಸಿದ್ದರು. ಜ್ಯೋತಿ ತಾನು ಆಯ್ಕೆಯಾಗಿಲ್ಲ ಎಂದು ಬಹಿರಂಗ ಪಡಿಸಲು ಹೆದರಿ, ಹೌದು, ಅದು ನನ್ನದೇ ಹೆಸರು ಎಂದು ಬಿಟ್ಟರು.
या तो मैडम का ये वीडियो AI से बनाया गया है जिसमे मैम खुद को ज्योति मिश्रा कह रही हैं
— खुरपेंच (@khurpenchh) July 15, 2024
या फिर UPSC 2021 के रिजल्ट में गलती से " SC " प्रिंट हो गया है उसमे बहुत रैंक 432 है
या उप्र पुलिस का बैनर बनाने वाले ने ग्राफिक डिजानऱ ने गलती से ज्योति मिश्रा लिख दिया है उसमे भी रैंक 432 है… pic.twitter.com/Q0FDv1Yly9
ಅಲ್ಲೇ ಜ್ಯೋತಿ ಸುಳ್ಳಿನ ಸುಲಿಗೆ ಸಿಲುಕಿ ಬಿಟ್ಟರು. ಅವರು ಯುಪಿಎಸ್ಸಿ ಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಮನೆಯವರಿಂದ ಕುಟುಂಬದ ಎಲ್ಲ ಸದಸ್ಯರಿಗೆ ವಿಷಯ ಹರಡಿತು. ಮಾಧ್ಯಮಗಳಲ್ಲೂ ಬಂತು. ಸ್ವತಃ ಯುಪಿ ಪೊಲೀಸರೇ ನಮ್ಮವರೊಬ್ಬರ ಮಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಹೆಮ್ಮೆಯಿಂದ ಟ್ವೀಟ್ ಮಾಡಿದರು. ಅವರಿಗೆ ಹಲವು ಕಾರ್ಯಕ್ರಮಗಳಲ್ಲೂ ಸನ್ಮಾನಿಸಲಾಯಿತು.
ಅಲ್ಲಿಗೆ ನಾನು ಪಾಸಾಗಿಲ್ಲ ಎಂದು ಹೇಳುವ ಧೈರ್ಯ ಜ್ಯೋತಿಗೆ ಇಲ್ಲವಾಯಿತು. ಹಾಗಾಗಿ, ಅವರು ಸ್ಪೇನ್ ಮತ್ತು ಐ.ಎಫ್.ಎಸ್ ನ ಸುಳ್ಳು ಕಥೆಗಳನ್ನು ಹೆಣೆಯಲು ಪ್ರಾರಂಭಿಸಿದರು. ಜ್ಯೋತಿಗೆ ಸ್ಪ್ಯಾನಿಷ್ ಭಾಷೆ ಮಾತನಾಡಲು ಬರುತಿತ್ತು. ಹಾಗಾಗಿ ಸ್ಪೇನ್ ನಲ್ಲೇ ನೇಮಕಾತಿ ಆಗಿದೆ ಎಂದು ಬಿಟ್ಟರು. ಇನ್ನು ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯುವ ಉದ್ದೇಶದಿಂದ ಐ ಎಫ್ ಎಸ್ ಗೆ ಆಯ್ಕೆಯಾಗಿದ್ದೇನೆ ಎಂದರು ಜ್ಯೋತಿ. ಭಾರತದಲ್ಲಿ ಯಾವುದೇ ಉದ್ಯೋಗ ಮಾಡಿದರೂ ಸಿಕ್ಕಿ ಬೀಳುವ ಭಯ ಜ್ಯೋತಿಗಿತ್ತು.
यूपी पुलिस परिवार की ओर से सिविल सेवा परीक्षा 2021 में ज्योति मिश्रा,(D/O सुरेश नारायण मिश्र,एस.आई. कमिश्नरेट लखनऊ) को 432 रैंक,आदित्य वर्मा,(S/O संजय कुमार, पुलिस अधीक्षक नगर मिर्ज़ापुर)को 200 रैंक एवं चित्रांशु गौतम पुलिस उपाधीक्षक को 630 रैंक हेतु हार्दिक बधाई एवं शुभकामनाएँ। pic.twitter.com/XgOXSH99Wr
— UP POLICE (@Uppolice) May 31, 2022
ಜ್ಯೋತಿ ಸ್ಪೇನ್ ಹೋಗುವ ಕುರಿತು ಮಾತನಾಡುತ್ತಿರುವಾಗ ಅವರ ಪಾಸ್ಪೋರ್ಟ್ ಕೂಡ ಇರಲಿಲ್ಲ. ಜ್ಯೋತಿ ಈಗ ದೆಹಲಿಯ ಒಂದು ಅರೆ ಸರಕಾರಿ ಕಂಪೆನಿಯಲ್ಲಿ ನೌಕರಿ ಮಾಡುತ್ತಿದ್ದಾಳೆ; ತನ್ನ ಸಂಬಳದಿಂದ ತಮ್ಮ ಖರ್ಚನ್ನು ನಿಭಾಯಿಸುತ್ತಿದ್ದಾರೆ. ಸಿಕ್ಕಿಬೀಳುವ ಹೆದರಿಕೆಯಿಂದ ಆಕೆ ಕಳೆದ ಒಂದೂವರೆ ವರ್ಷದಲ್ಲಿ ಕೇವಲ ಒಂದು ಬಾರಿ ಮನೆಗೆ ಹೋಗಿದ್ದಾರೆ.
ಜ್ಯೋತಿಯ ತಂದೆ ಸ್ವತಃ ಪೊಲೀಸ್ ಅಧಿಕಾರಿ. ಆದರೆ ಮಗಳ ಮೇಲೆ ಪೂರ್ಣ ಭರವಸೆ ಇಟ್ಟಿದ್ದರಿಂದ ಅವರು ಆಕೆಯ ಮೇಲೆ ಸಂಶಯ ಪಡಲಿಲ್ಲ. ಆಕೆ ಹೇಳಿದ್ದನ್ನು ವಿಚಾರಿಸಿ ನೋಡುವ ಗೋಜಿಗೇ ಹೋಗಲಿಲ್ಲ. ಜ್ಯೋತಿ ತಂದೆಗೆ ಕೇವಲ ಕಾಲ್ ಮಾಡಿ ಮಾತಾಡುತ್ತಿದ್ದಳು. ಯಾವತ್ತೂ ಆಕೆ ತಂದೆಗೆ ವಿಡಿಯೋ ಕಾಲ್ ಮಾಡಲಿಲ್ಲ. ತನ್ನ ಹುದ್ದೆಯ ಕುರಿತು ಏನನ್ನೂ ಹೇಳಲಿಲ್ಲ. ಈಗ ಆಕೆಯ ತಂದೆ ಮಗಳ ಸುಳ್ಳಿನಿಂದ ಭಾರಿ ನಿರಾಶೆಯಾಗಿದೆ ಮತ್ತು ಆಘಾತವಾಗಿದೆ ಎಂದು ಹೇಳಿದ್ದಾರೆ.







