ವಂಚನೆಯನ್ನು ಆರಂಭದಲ್ಲೇ ಗುರುತಿಸಿ; ಆನ್ಲೈನ್ ಸಂಬಂಧದಲ್ಲಿ ಜಾಗರೂಕತೆ ವಹಿಸಿ!

photo credit: gemini
ಸಂತ್ರಸ್ತರ ಮೇಲೆ ಸೂಕ್ಷ್ಮ ಮಾಹಿತಿ ಅಥವಾ ಹಣ ಕಳುಹಿಸುವಂತೆ ಒತ್ತಡ ಹೇರಲಾಗುತ್ತದೆ. ಎಚ್ಚರವಾಗಿರುವುದೇ ಶೋಷಣೆಯಿಂದ ತಪ್ಪಿಸಿಕೊಳ್ಳುವ ಉತ್ತಮ ಉಪಾಯ!
ಇತ್ತೀಚೆಗೆ ಐಸಿಐಸಿಐ ಬ್ಯಾಂಕ್ ತಮ್ಮ ಗ್ರಾಹಕರಿಗೆ ಆನ್ಲೈನ್ ಸಂಬಂಧಗಳ ಬಗ್ಗೆ ಎಚ್ಚರಿಸಿದೆ. ಆನ್ಲೈನ್ ಸಂಬಂಧಗಳಿಂದ ಹಣ ದೋಚುವುದು ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ. ಸಂಸ್ಥೆಯ ಇಮೇಲ್ ನಲ್ಲಿ ಇರುವ ವಿವರಗಳೇನು?
ಆನ್ಲೈನ್ ಸಂಬಂಧಗಳು ಪ್ರಶಂಸೆ ಮತ್ತು ಮೆಚ್ಚುಗೆಗಳಿಂದ ಆರಂಭವಾಗುತ್ತದೆ. ಆದರೆ ಬಹುತೇಕರಿಗೆ ಅದು ಹಣಕಾಸು ಮತ್ತು ಭಾವಾತ್ಮಕ ವಂಚನೆಗಳ ಮೂಲಕ ಕೊನೆಗೊಳ್ಳುತ್ತಿದೆ. ಆನ್ಲೈನ್ ಉದ್ದಕ್ಕೂ ವಂಚನೆಯ ಜಾಲವೇ ಹರಡಿದೆ. ಆರಂಭದಲ್ಲಿ ಬಹಳ ಜಾಣತನದಿಂದ ವಿಶ್ವಾಸವನ್ನು ಬೆಳೆಸಲಾಗುತ್ತದೆ. ಭಾವನಾತ್ಮಕ ಸಂಬಂಧ ಬೆಸೆಯಲಾಗುತ್ತದೆ. ನಂತರ ಸಂತ್ರಸ್ತರ ಮೇಲೆ ಸೂಕ್ಷ್ಮ ಮಾಹಿತಿ ಅಥವಾ ಹಣ ಕಳುಹಿಸುವಂತೆ ಒತ್ತಡ ಹೇರಲಾಗುತ್ತದೆ. ಎಚ್ಚರವಾಗಿರುವುದೇ ಶೋಷಣೆಯಿಂದ ತಪ್ಪಿಸಿಕೊಳ್ಳುವ ಉತ್ತಮ ಉಪಾಯ!
ಆರಂಭದಲ್ಲಿಯೇ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸಿ!
►ಮಾತನಾಡಿದ ಕೆಲವೇ ದಿನಗಳಲ್ಲಿ ಭಾವನಾತ್ಮಕವಾಗಿ ಒಲಿಸಿಕೊಂಡು ಪ್ರೀತಿಯ ಮಾತನಾಡುವವರು ಮತ್ತು ಪರಿಚಯ ವಿಧಿಲಿಖಿತವೆಂದು ಹೇಳುವುದು ಮತ್ತು ಆತ್ಮಸಂಗಾತಿ ಎಂದು ಮೆಚ್ಚುಗೆ ವ್ಯಕ್ತಪಡಿಸುವವರ ಬಗ್ಗೆ ಎಚ್ಚರವಿರಲಿ.
►ವೀಡಿಯೊ ಕಾಲ್ ಮಾಡಲು ಇಷ್ಟಪಡದವರು ಮತ್ತು ಭೇಟಿಯಾಗಲು ಹಿಂಜರಿಯುವವರ ಬಗ್ಗೆ ಜಾಗರೂಕತೆ ವಹಿಸಿ.
►ಎಂದಿಗೂ ಯಾರಿಗೂ ಹಣ ಕಳುಹಿಸಬೇಡಿ. ಕ್ರಿಪ್ಟೊ ಅಥವಾ ಉಡುಗೊರೆ ಕಾರ್ಡ್ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಕೊಡಬೇಡಿ.
►ನಾಟಕೀಯ ಕತೆಗಳನ್ನು ಹೇಳಿದರೆ ಎಚ್ಚರವಹಿಸಿ. ತುರ್ತು ವೈದ್ಯಕೀಯ ಅಗತ್ಯ, ಹಿಂದಿನ ಸಂಬಂಧದಿಂದ ನೋವನ್ನು ವಿವರಿಸುವುದು, ಪ್ರಯಾಣ ಮಾಡುವಾಗ ಸಿಕ್ಕಿಹಾಕಿಕೊಂಡಿರುವುದು, ಕಸ್ಟಮ್ ಸಮಸ್ಯೆ ಅಥವಾ ಹೂಡಿಕೆ ಅವಕಾಶಗಳ ಬಗ್ಗೆ ಗ್ಯಾರಂಟಿ ಕೊಡುವುದು ಇತ್ಯಾದಿ.
ಆನ್ಲೈನ್ ಬಳಕೆಯಲ್ಲಿ ಸ್ವಯಂರಕ್ಷಣೆ ಮುಖ್ಯ:
► ಪ್ರೊಫೈಲ್ ಫೋಟೋಗಳನ್ನು ಕದಿಯಲಾಗಿದೆಯೇ ಎಂದು ಗಮನಿಸಲು ರಿವರ್ಸ್ ಇಮೇಜ್ ಸರ್ಚ್ ಬಳಸಿ ಪರಿಶೀಲಿಸಿ.
► ವೈಯಕ್ತಿಕ ಮಾಹಿತಿ ಕಳುಹಿಸಬೇಡಿ. ಬಹಳ ಆತ್ಮೀಯವೆನಿಸಿದ ಮಾಹಿತಿ ಅಥವಾ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳದಂತೆ ಜಾಗರೂಕತೆವಹಿಸಿ.
► ಅನುಮಾನಾಸ್ಪದ ಆ್ಯಪ್ ಗಳನ್ನು ಡೌನ್ಲೋಡ್ ಮಾಡಬೇಡಿ. ಅಥವಾ ಟ್ರೇಡಿಂಗ್, ಕ್ರಿಪ್ಟೊ ಅಥವಾ ಹೂಡಿಕೆ ವೇದಿಕೆಗಳಿಗೆ ಸಂಬಂಧಿಸಿದ ಪರಿಶೀಲಿಸದೆ ಇರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
ವಂಚನೆ ಕಂಡುಬಂದರೆ ವರದಿ ಮಾಡಲೇಬೇಕು
► ಹಣ ಕೇಳುವುದು, ತುರ್ತಾಗಿ ಮಾಡುವಂತೆ ಹೇಳುವುದು ಅಥವಾ ರಹಸ್ಯ ಕಾಪಾಡಲು ಹೇಳಿದರೆ ವಂಚನೆ ಎಂದು ಖಚಿತವಾಗಲಿದೆ.
► ಆನ್ಲೈನ್ ವಂಚನೆಯನ್ನು ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ cybercrime.gov.in ಇಲ್ಲಿಗೆ ವರದಿ ಮಾಡಿ. ಅಗತ್ಯವಿದ್ದರೆ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ಅಥವಾ ಐಸಿಐಸಿಐ ಬ್ಯಾಂಕ್ ಗ್ರಾಹಕರಾಗಿದ್ದರೆ ಬ್ಯಾಂಕ್ನ ಸಹಾಯವಾಣಿ 1800 2662ಗೆ ಕರೆ ಮಾಡಿ.
ನೀವು ದುರುದ್ದೇಶಪೂರಿತ/ಫಿಶಿಂಗ್/ಅನುಮಾನಾಸ್ಪದ ಇ-ಮೇಲ್ಗಳು ಅಥವಾ ಕರೆಗಳನ್ನು ಸ್ವೀಕರಿಸಿದ್ದರೆ, ದಯವಿಟ್ಟು ಸಂಚಾರ್ ಸಾಥಿಗೆ sancharsaathi.gov.in ಇಲ್ಲಿ ವರದಿ ಮಾಡಬಹುದು ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಾಗಿದ್ದರೆ antiphishing@icicibank.com ಗೆ ವರದಿ ಮಾಡಬಹುದು.







